Thursday, August 28, 2014

ಗೌರಿ ದೇವಿಗೆ ಬಾಗಿನ ಅಪರ್ಿಸಿದ ಮಹಿಳೆಯರು
ಚಿಕ್ಕನಾಯಕನಹಳ್ಳಿ  :  ಪಟ್ಟಣದ ಹೊಸಬೀದಿಯಲ್ಲಿರುವ ವೀರಭದ್ರಸ್ವಾಮಿ   ದೇವಾಲಯದಲ್ಲಿ ಗೌರಿ ಹಬ್ಬದ ಪ್ರಯುಕ್ತ ಗೌರಮ್ಮನವರನ್ನು ಕುಳ್ಳಿರಿಸಿ ಪೂಜಿಸಲಾಯಿತು.

ಇಲ್ಲಿನ ಎಲ್ಲಾ ಹೆಣ್ಣುಮಕ್ಕಳು ದೊಡ್ಡಗೌರಮ್ಮನವರನ್ನು ಭಕ್ತಿ ಭಾವದಿಂದ ಪೂಜಿಸುತ್ತಾರೆ, ಗೌರಿ ಹಬ್ಬದಂದು ಎಲ್ಲಾ ಮಹಿಳೆಯರು ಬೆಳಗಿನ ಜಾವದಿಂದಲೇ ದೇವಿಯ ಪೂಜೆಗಾಗಿ ಸಿದ್ದರಾಗಿ ಉಪವಾಸವಿದ್ದು ನಂತರ ಗೌರಮ್ಮನವರನ್ನು ಕುಳ್ಳಿರಿಸಿರುವಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ, 
ಗೌರಿ ಹಬ್ಬದಂದು ಕುಳ್ಳಿರಿಸುವ ದೇವಿಯನ್ನ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುವುದು, ಅದೇ ರೀತಿ ಒಂಬತ್ತು ದಿನಗಳ ಕಾಲ  ಪೂಜೆ ಸಲ್ಲಿಸಲಾಗುವುದು ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆರೆಯಲ್ಲಿ ವಿಸಜರ್ಿಸಲಾಗುವುದು.
ಸುಮಾರು 400ವರ್ಷಗಳಿಂದಲೂ ದೇಶದ ಗೌರಮ್ಮನೆಂಬುದಾಗಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿದ್ದು ಇದೇ ಸಂಪ್ರದಾಯದ ಆಚರಣೆಯನ್ನು ನಾವೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.
ದೇವಿಗೆ ಪೂಜೆ ಸಲ್ಲಿಸಿದ ಭಕ್ತರು ಮಾತನಾಡಿ ಪಾಳೇಗಾರರ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವುದನ್ನು ನಾವು ಚಿಕ್ಕಮಕ್ಕಳಿಂದ ನೋಡಿ ಕಲಿತು ಅದೇ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ, ಪ್ರತಿ ಗೌರಿ ಹಬ್ಬದಂದು ಇಲ್ಲಿ ಹೆಣ್ಣುಮಕ್ಕಳು ಗೌರಮ್ಮನವರನ್ನು ಪೂಜಿಸುತ್ತಾರೆ, ದೇವಿ ಗೌರಮ್ಮನವರಿಗೆ ಹೆಚ್ಚು ಜನರು ಬಂದು ಪೂಜೆ ಸಲ್ಲಿಸುತ್ತಾರೆ, ಹೊಸ ಬಾಗಿನ ಅಪರ್ಿಸುವವರು ವಿಶೇಷ ರೀತಿಯಲ್ಲಿ ದೇವರಿಗೆ ಬಾಗಿನ ಅಪರ್ಿಸುತ್ತಾರೆ, ಕಜರ್ಿಕಾಯಿ, ಚಕ್ಕಲಿ, ಕೋಡಬಳೆಯನ್ನು ಹಾಗೂ ಹರಿಶಿನ ದಾರ, ಗೌರಿ ಎಲೆ, ಅರಿಶಿನ ಕುಂಕುಮ , ಕೋಸುಂಬರಿ, ಹಣ್ಣು ಹಂಪಲು ನೀಡಿ ಬಾಗಿನ ಅಪರ್ಿಸುತ್ತಾರೆ.
 ಬಾಗಿನ ಅಪರ್ಿಸಲು ಬಂದ ಮುತೈದೆಯರಿಗೆ ಹರಿಶಿನ ಕುಂಕುಮ ನೀಡಿ ಪರಸ್ಪರ ಶುಭಾಷಯ ಕೋರುತ್ತೇವೆ. ನಂತರ ಗೌರಮ್ಮನವರಲ್ಲಿ ನಮ್ಮ ಮುತೈದೆ ಭಾಗ್ಯ ಚೆನ್ನಾಗಿರಲಿ ಎಂದು ದೇವರಲ್ಲಿ ಕೋರುತ್ತೇವೆ ಎಂದು ತಿಳಿಸಿದರು.

ವೀಶೇಷ : ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಲ್ಲಿ ದೇಶದ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲೆಡೆ ದೊಡ್ಡಗಾತ್ರದ ಗಣೇಶನ ಪಕ್ಕದಲ್ಲಿ ಪುಟ್ಟ ಗೌರಮ್ಮನನ್ನು ಪ್ರತಿಷ್ಠಾಪಿಸಲಾಗುತ್ತದೆ ಆದರೆ ಇಲ್ಲಿ ಮಾತ್ರ ಗೌರಮ್ಮನೇ ಗಾತ್ರದಲ್ಲಿ ದೊಡ್ಡವಳು, ಅವಳ ಪಕ್ಕದಲ್ಲಿ ಗಣಪ ಪುಟ್ಟ ಕೂಸಿನಂತೆ ಕಾಣುತ್ತಾನೆ.
ಶ್ರಾವಣ ಮಾಸದಲ್ಲಿ ತವರು ಮನೆಯಿಂದ ತರುವ ಬಾಗಿನವನ್ನು ಹೆಣ್ಣು ಮಕ್ಕಳು ಗೌರಿ ಬಾಗಿನದ ದಿನದವರೆಗೆ ಬಿಚ್ಚುವುದಿಲ್ಲ, ತವರಿನಿಂದ ಬಂದ ಬಾಗಿನವನ್ನು ರುದ್ರನ ಗುಡಿಗೆ ತರುತ್ತಾರೆ, ಸೀರೆ, ಕುಪ್ಪಸ, ಬಳೆ, ಅರಿಶಿನ,ಕುಂಕುಮ ಐದು ಬಗೆಯ ಧಾನ್ಯಗಳನ್ನು ದೇಶದ ಗೌರಮ್ಮನಿಗೆ ಅಪರ್ಿಸುತ್ತಾರೆ, ನಂತರ ಒಬ್ಬರಿಗೊಬ್ಬರು ಮಡಿಲು ತುಂಬಿ ಪರಸ್ಪರ ಶುಭ ಕೋರುತ್ತಾರೆ.