Saturday, May 24, 2014

ಲಂಚ ಕೊಡಲು ನಿರಾಕರಿಸಿದ್ದಕ್ಕೆ ಕಳೆಪೆ ಕಾಮಗಾರಿ ಎಂದು ವರದಿ ನೀಡಿರುವ ಅಧಿಕಾರಿಯ ವರ್ತನೆಯ ವಿರುದ್ದ ಆಕ್ರೋಶ.
 ಚಿಕ್ಕನಾಯಕನಹಳ್ಳಿ,ಮೇ.24 : 2013-14ನೇ ಸಾಲಿನ ತಾಲ್ಲೂಕಿನ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿನ ಎನ್.ಆರ್.ಇ.ಜಿ. ಯೋಜನೆಯ ಕಡತ ಮತ್ತು ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಕೇಳಿದ ಹಣ ನೀಡದೆ ಇದ್ದುದರಿಂದ ಯೋಜನೆಯಲ್ಲಿ ಜೆ.ಸಿ.ಬಿ ಬಳಕೆ, ಕಳಪೆ ಕಾಮಗಾರಿ, ಹಳೆಯ ಕಾಮಗಾರಿಗಳ ಮೂಲಕ ಕೆಲಸ ನಿರ್ವಹಿಸಲಾಗಿದೆ ಎಂದು ಸಕರ್ಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ ಎಂದು ತಾ.ಪಂ..ಸದಸ್ಯ ಎ.ಬಿ.ರಮೇಶ್ಕುಮಾರ್ ಆರೋಪಿಸಿದರು.
  ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಎಂ.ಜಿ.ಎನ್.ಆರ್.ಜಿ. ಕಾಮಗಾರಿಗಳ ತನಿಖೆಗೆಂದು ಬಂದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಮಂಜುನಾಥ್ ಪಾಟೀಲ್ ಎಂಬುವರು ತನಿಖೆಗೆ ಬಂದಾಗ ಉತ್ತಮವಾದ ವರದಿ ನೀಡಲು ಐವತ್ತು ಸಾವಿರ ರೂ ಲಂಚ ಕೇಳಿದರು, ಲಂಚವನ್ನು ಕೊಡಲು ನಿರಾಕರಿಸಿದ್ದಕ್ಕೆ ಆ ಅಧಿಕಾರಿ ಸಕರ್ಾರಕ್ಕೆ ತಪ್ಪು ವರದಿ ನೀಡಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.
ಇದೇ ಕಾಮಗಾರಿಯ  ಬಗ್ಗೆ ಫೆಬ್ರವರಿ 23ರಂದು ನಿವೃತ್ತ ಚೀಪ್ ಇಂಜನಿಯರ್ ಸುಲ್ತಾನ್ ಷರೀಪ್ ಆಗಮಿಸಿ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟ ಉತ್ತಮವಾಗಿದೆ ಎಂದು ಸಕರ್ಾರಕ್ಕೆ ವರದಿ ನೀಡಿದ್ದಾರೆ, ಆದರೆ  ನಂತರ ಬಂದ ಅಂದರೆ ಫೆಬ್ರವರಿ 25 ಮತ್ತು 26ರಂದು ಜಿಲ್ಲಾ ಸಾಮಾಜಿಕ ಲೆಕ್ಕ ಪರಿಶೋದನಾ ಸಂಯೋಜಕ ಆರ್.ಮಂಜುನಾಥ್ ಪಾಟೀಲ್ ನೇತೃತ್ವದ ತಂಡ ಶೆಟ್ಟೀಕೆರೆ ಗ್ರಾ.ಪಂ. ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಬಂದು ಮಾಡಿದ ತನಿಖೆಯ ವರದಿಯಲ್ಲಿ  ಕಾಮಗಾರಿಗಳು ಕಳಪೆ ಮತ್ತು ಹಳೆಯದಾಗಿವೆ ಅಲ್ಲದೆ ಕಾಂಪೌಂಡ್ ನಿಮರ್ಾಣಕ್ಕೆ ಜೆ.ಸಿ.ಬಿ ಬಳಕೆ ಮಾಡಿ ಕೆಲಸ ನಿರ್ವಹಿಸಲಾಗಿದೆ ಎಂದು ವರದಿ ಸಲ್ಲಿಸಿ 21,45,181ರೂಗಳನ್ನು ವಸೂಲಿ ಮಾಡಿ ಸಕರ್ಾರಕ್ಕೆ ಜಮಾ ಮಾಡಲು ತಿಳಿಸಿದ್ದಾರೆ ಆದರೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ಕಟ್ಟಿರುವ ಶಾಲಾ ರಕ್ಷಣಾ ಗೋಡೆ, ತಡೆ ಗೋಡೆ ಸೇತುವೆ ಕಾಮಗಾರಿ ಇವುಗಳಿಗೆ ಯಾವುದೇ ಜೆ.ಸಿ.ಬಿ ಬಳಸದೆ ಕೂಲಿ ಕಾಮರ್ಿಕರಿಂದ ಕೆಲಸ ನಿರ್ವಹಿಸಲಾಗಿದೆ ಎಂದರಲ್ಲದೆ ನಿಮರ್ಿಸಿರುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿದೆ ಎಂದಿದ್ದಾರೆ.
ಸಕರ್ಾರಕ್ಕೆ ವರದಿ ಸಲ್ಲಿಸಿರುವ ವರದಿಯ ಪುಟ ಸಂಖ್ಯೆ 37ರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾದ ಕಾಮಗಾರಿಗಳಲ್ಲಿ ಒಂದು ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಕಾಮಗಾರಿಗಳು ಉತ್ತಮವಾಗಿ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದ್ದು ಒಂದೇ ವರದಿಯಲ್ಲಿ ಅದೇ ಕಾಮಗಾರಿಗಳನ್ನು ಕಳಪೆ/ಹಳಯದು ಎಂದು ಒಂದು ಕಡೆ ತಿಳಿಸಿ, ಮತ್ತದೇ  ಕಾಮಗಾರಿಗಳನ್ನು ಉತ್ತಮ ಎಂದು ತಿಳಿಸಿರುವುದರಿಂದ ಇವರು ವರದಿಯ ಸತ್ಯಾ ಸತ್ಯತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದರಲ್ಲದೆ, ಅವರ ಅರ್ಹತೆ, ಅನುಭವದ ಬಗ್ಗೆಯೂ ಅನುಮಾನಗಳು ಹುಟ್ಟುತ್ತವೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಸಕರ್ಾರಕ್ಕೆ ವರದಿ ಸಲ್ಲಿಸಿರುವಂತೆ ಕೂಲಿ ಕಾಮರ್ಿಕರಿಗೆ ಕೆಲಸ ನೀಡದೆ ಕಾಮಗಾರಿಯ ಬುನಾದಿಯನ್ನು ಗುತ್ತಿಗೆದಾರರಿಂದ ಮತ್ತು ಜೆ.ಸಿ.ಬಿ ಯಂತ್ರೋಪಕರಣಗಳಿಂದ ಅನುಷ್ಠಾನ ಮಾಡಲಾಗಿದೆ ಎಂದು ವರದಿ ಸಲ್ಲಿಸಿದ್ದು ಈ ಬಗ್ಗೆ ಸ್ಥಳೀಯ ಕೂಲಿ ಕಾಮರ್ಿಕರನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲಿ ಎಂದು ಸವಾಲೆಸೆದರು.
ಶೆಟ್ಟಿಕೆರೆ ಗ್ರಾ.ಪಂ.ಅಧ್ಯಕ್ಷೆ ದಾಕ್ಷಾಯಿಣಿ ರಮೇಶ್ ಮಾತನಾಡಿ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಒಂದು ಕಡೆ ಕಳಪೆ ಎಂದು ಮತ್ತೊಂದು ಕಡೆ ಉತ್ತಮ ಎಂದು ಸಕರ್ಾರಕ್ಕೆ ವರದಿ ನೀಡಿರುವುದು  ಅಧಿಕಾರಿಗಳ ಸತ್ಯಕ್ಕೆ ದೂರವಾದ ವರದಿ ಎಂದಿರುವ ಅವರು,  ಕೆಲಸ ನಿರ್ವಹಿಸಿರುವ ಕಾಮಗಾರಿಗಳಿಗೆ ನಾಮಪಲಕ ಹಾಕಿದ್ದರೂ ಹಾಕಿಲ್ಲ ಎಂದು, ಜೆಸಿಬಿ ಬಳಸಲು ಅವಕಾಶವೆ ಇಲ್ಲದಿರುವಾಗ ಜೆಸಿಬಿ ಬಳಸಿದ್ದಾರೆಂದು ವರದಿ ನೀಡಿದ್ದಾರೆ, ಈ ರೀತಿ ಬೇಜವಬ್ದಾರಿ ವರದಿ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತಿರುವ, ಸಕರ್ಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿರುವ ಅನೇಕ ಗ್ರಾಮ ಪಂಚಾಯ್ತಿಗಳಿಗೆ ಮುಂದೆ ಕೆಲಸಗಳನ್ನೇ ಮಾಡಬಾರದು ಎಂಬ ನಿಧರ್ಾರಕ್ಕೆ ಬರಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಶೆಟ್ಟಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಜಿ.ಎಂ.ನಾಗರಾಜು ಮಾತನಾಡಿ ಶೆಟ್ಟಿಕೆರೆ ಗ್ರಾ.ಪಂ.ನಲ್ಲಿ ಮಾಡಲಾಗಿರುವ ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಹಾಕಿರುವ ಬಗ್ಗೆ ಅವರ ವರದಿಯಲ್ಲೇ ಅನೇಕ ಪೋಟೋಗಳು ಸಾಕ್ಷಿ ಇದ್ದರೂ ನಾಮಫಲಕ ಹಾಕದೆ ಯೋಜನೆಯ ಕಾಯ್ದೆ ಉಲ್ಲಂಘಿಸಿದ್ದಾರೆಂದು ವರದಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.