Monday, May 6, 2013


ಚಿ.ನಾ.ಹಳ್ಳಿ ಮತದಾನ: ಎರೆಕಟ್ಟೆ ಅತಿಹೆಚ್ಚು, ಮರನಡುಪಾಳ್ಯ ಅತಿಕಡಿಮೆ
ಚಿಕ್ಕನಾಯಕನಹಳ್ಳಿ,ಮೇ.6: ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 1,98,398 ಮತದಾರರಲ್ಲಿ 1,60,041 ಮತದಾರರು ತಮ್ಮ ಹಕ್ಕುಚಲಾಯಿಸಿದ್ದಾರೆ. ಇದರಲ್ಲಿ ಪುರಷರು 81,880 ಮಹಿಳಾ ಮತದಾರರು78,161 ಪಾಲ್ಗೊಂಡಿದ್ದರು. ಇ.ಡಿ.ಸಿ.ಸೇರಿದಂತೆ ಒಟ್ಟು ಶೇ.81,13 ಮತಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಕಂದಿಕೆರೆ ಹೋಬಳಿಯ ಎರೆಕಟ್ಟೆಯಲ್ಲಿ ಶೇ.93.23ರಷ್ಟು ಮತಚಲಾವಣೆಗೊಂಡಿದ್ದರೆ, ಅತಿ ಕಡಿಮೆ ಹುಳಿಯಾರು ಹೋಬಳಿಯ ಮರೆನಡು ಪಾಳ್ಯದಲ್ಲಿ 62.61 ಮತಗಳು ಚಲಾವಣೆಗೊಂಡಿದೆ.
ಚಿ.ನಾ.ಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 17,568 ಮತದಾರರಿದ್ದು 13,157 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ, ಹುಳಿಯಾರಿನಲ್ಲಿ 10,774ಮತದಾರರಲ್ಲಿ 8,115 ಮತ ಚಲಾವಣೆಗೊಂಡಿದೆ.
ಬೆಟ್ಟಿಂಗ್ ಭರಾಟೆ: ಕ್ಷೇತ್ರದಾದ್ಯಂತ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದ್ದು, ಮೊದಲ ಸ್ಥಾನಕ್ಕೆ ಜೆ.ಡಿ.ಎಸ್.ಕೆ.ಜೆ.ಪಿ, ಬಿ.ಜೆ.ಪಿ. ಈ ಮೂರು ಪಕ್ಷಗಳಲ್ಲಿ  ಯಾರೆಂಬುದಕ್ಕೆ ಲಕ್ಷ ರೂಗಳಿಗೂ ಅಧಿಕ ಹಣವನ್ನು ಕಟ್ಟುತ್ತಿದ್ದರೆ, ಕೆ.ಜೆ.ಪಿ. ಮತ್ತು ಬಿ.ಜೆ.ಪಿ. ವಲಯದಲ್ಲೂ ಹೆಚ್ಚು ಕುತೂಹಲವನ್ನು ಇಟ್ಟುಕೊಂಡಿರುವ ಅಭಿಮಾನಿಗಳು ಹಣವನ್ನು ಕಟ್ಟುತ್ತಿದ್ದಾರೆ. ಇದು ಒಂದು ರೀತಿ ಥ್ರಿಲ್ ಕೊಡುವ ಸಂಗತಿ ಕೆಲವರಿಗೆ ಅನ್ನಿಸಿದರೆ, ಇನ್ನೂ ಕೆಲವರಿಗೆ ಇದು ಜೂಜಿಗೆ ಸರುಕಾಗಿದೆ, ಈ ದಂಧೆಗೆ ಲಕ್ಷಾಂತರ ಹಣವನ್ನು ವ್ಯಯಿಸುತ್ತಿರುವುದು ತಾಲೂಕಿನಾದ್ಯಂತ ನಡೆಯುತ್ತಿದೆ. 

ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವು

 ಚಿಕ್ಕನಾಯಕನಹಳ್ಳಿ, ತಾಲೂಕಿನ ಚಿಕ್ಕರಾಂಪುರ ಗ್ರಾಮದ ಹೊಲದಲ್ಲಿ ಮೇಯುತ್ತಿದ್ದ ಹಸುವಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರಿಗೆ ತೀವ್ರತರದ ಪೆಟ್ಟಾಗಿ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಹಲವು ಭಾಗಗಳಲ್ಲಿ ಸೋನೆ ಮಳೆಯಾಗಿದ್ದು ಗುಡ್ಡಪ್ರದೇಶವಾದ  ಕಂದಿಕೆರೆ ಹೋಬಳಿಯ ಚಿಕ್ಕರಾಂಪುದಲ್ಲಿ ಮಧ್ಯಾಹ್ನ ಎರಡು ಘಂಟೆ ಸುಮಾರಿನಲ್ಲಿ ಅದೇ ಗ್ರಾಮದ ಲೆಂಕಪ್ಪ ಹೋಲದಲ್ಲಿ ಹಸು ಮೇಯಿಸುತ್ತಿದ್ದು  ಸಂದರ್ಭದಲ್ಲಿ ಗುಡುಗು ಸಹಿತ ಹೊಡೆದ ಸಿಡಿಲಿಗೆ ಹಸು ಸ್ಥಳದಲ್ಲೇ ಸಾವನ್ನಪ್ಪಿದೆ, ಅಲ್ಲದೆ ಅಲ್ಲಿಯೇ ಇದ್ದ ಲೆಂಕಪ್ಪ(50), ಪ್ರದೀಪ್(10), ತಿಮ್ಮದಾಸಯ್ಯ(55) ರವರಿಗೆ ತೀವ್ರತರವಾದ ಆಘಾತವಾಗಿದ್ದು, ಮೆಂಟಲ್ ಶಾಕ್ ಆಗಿದೆ ಎನ್ನಲಾಗಿದೆ, ಈ ಮೂವರಿಗೆ ಚಿ.ನಾ.ಹಳ್ಳಿಯ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಆಸ್ಪತ್ರೆಗೆ ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಕುಟುಂಬವರ್ಗ ಪರಿಹಾರಕ್ಕಾಗಿ ಆಗ್ರಹಿಸಿತು.
ಚಿಕ್ಕನಾಯಕನಹಳ್ಳಿ, ವಿಧಾನ ಸಭಾ ಚುನಾವಣೆಯಲ್ಲಿ ಶೇ.77ರಷ್ಟು ಮತದಾನವಾಗಿದೆ, ಒಂದೆರಡು ಕಡೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಬಹುತೇಕ ಎಲ್ಲಾ ಕಡೆ ಶಾಂತವಾಗಿದೆ.
ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ಒಂದು ಲಕ್ಷದ ತೊಂಭತ್ತೆಂಟು ಸಾವಿರದ ಮೂರು ನೂರ ನಲವತ್ತೊಂಭತ್ತು ಮತದಾರರಿದ್ದು ಇದರಲ್ಲಿ ಒಂದು ಲಕ್ಷದ ಒಂದು ನೂರ ಮೂವತ್ತೊಂದು ಪುರಷರು, ತೊಂಭತ್ತೆಂಟು ಸಾವಿರದ ಇನ್ನೂರ ಹದಿನೆಂಟು ಮಹಿಳಾ ಮತದಾರಿದ್ದಾರೆ.
ಬೆಳಗ್ಗೆ 7ಗಂಟೆಯಿಂದ 10ಗಂಟೆಯವರೆಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ವಿರಳವಾಗಿತ್ತು. 10ಗಂಟೆ ನಂತರ ಮತದಾರರು ಮತಗಟ್ಟೆಗೆ ಬರಲಾರಂಭಿಸಿದರು 12ರವೇಳೆಗೆ ಮತದಾನ ಚುರುಕುಗೊಂಡು 1.30ರ ಸುಮಾರಿನಲ್ಲಿ ಜನ ಓಟು ಹಾಕಲು ಉದ್ದನೆಯ ಸಾಲುಗಳಲ್ಲಿ ನಿಂತಿರುವುದು ಕಾಣಬರುತ್ತಿತ್ತು. ಸುಮಾರು 2ಗಂಟೆಯ ವೇಳೆಯಲ್ಲಿ ಸುರಿದ ಗುಡುಗು ಸಹಿತ ಮಳೆಯಿಂದಾಗಿ ಮತದಾನ ಮಂದಗತಿ ಕಂಡುಕೊಂಡಿತು. ಮೂರರ ನಂತರ ಬಿರುಸಿನ ಮತದಾನ ನಡೆಯಿತು.
ನವಿಲೆ, ಗೋಡೆಕೆರೆ, ಭರಣಾಪುರ, ಶೆಟ್ಟೀಕೆರೆಯ ಮತಕೇಂದ್ರದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೆ, ಜೆ.ಸಿ.ಪುರದ ಮತಕೇಂದ್ರದಲ್ಲಿ ಭೂತ್ ಏಜೆಂಟ್ ಒಬ್ಬರು ಪಕ್ಷದ ಪರವಾಗಿ ಸಂಜ್ಞೆ ನೀಡಿದನೆಂಬ ಕಾರಣಕ್ಕೆ ಕೆಲವು ನಿಮಿಷ ಗೊಂದಲವಾಯಿತೆನ್ನಲಾಗಿದೆ.