Wednesday, March 28, 2012


ಕಾಂಗ್ರೆಸ್ ಪಕ್ಷದ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಮಾ.28 : ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆ ಏರ್ಪಡಿಸುವ ಬಗ್ಗೆ ಕ್ಷೇತ್ರದ ವಿಧಾನಸಭಾ ವ್ಯಾಪ್ತಿಯ ಸಮಸ್ತ ಕಾಂಗ್ರೆಸ್ ಮುಖಂಡರುಗಳ ಮತ್ತು ಕಾರ್ಯಕರ್ತರುಗಳ ಪೂರ್ವಭಾವಿ ಸಭೆಯನ್ನು ಇದೇ 29ರ ಗುರವಾರ ಸಂಜೆ 4ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದೆ ಎಂದು ಚಿನಾಹಳ್ಳಿ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏಪ್ರಿಲ್ 10ರ ಮಂಗಳವಾರ ಸಂಜೆ 4ಗಂಟೆಗೆ ನಡೆಯಲಿರುವ ಚಿನಾಹಳ್ಳಿ ವಿಧಾನಸಭಾ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಹಿರಂಗ ಸಭೆಯಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಮತ್ತು ಇತರ ನಾಯಕರುಗಳು, ಭಾಗವಹಿಸಲಿರುವ ಸಭೆಯ ರೂಪು ರೇಷೆಗಳನ್ನು ಚಚರ್ಿಸಿ ನಿರ್ಧರಿಸಲಾಗುವುದು. ಈ ಸಭೆಯು ಅಚ್ಚುಕಟ್ಟಾಗಿ ರೂಪಿಸಲು ಕಾರ್ಯಕರ್ತರು ಮತ್ತು ಮುಖಂಡರುಗಳು ಈ ಪೂರ್ವಭಾವಿ ಸಭೆಯಲ್ಲಿ  ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದ್ದಾರೆ.

ವಿದ್ಯುತ್ ವ್ಯತ್ಯಯ
ಚಿಕ್ಕನಾಯಕಹಳ್ಳಿ,ಮಾ.28 : ತಾಲ್ಲೂಕಿನ ಉಪವಿಭಾಗದ ತಿಮ್ಮನಹಳ್ಳಿ 110/11 ಕೆ.ವಿ ಉಪಕೇಂದ್ರದಲ್ಲಿ ಮತ್ತು ಹಂದನಕೆರೆ 110/11 ಕೆ.ವಿ ಉಪಕೇಂದ್ರದಲ್ಲಿ ಇದೇ ಮಾಚರ್್ 30 ಮತ್ತು 31ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 6ಗಂಟೆಯವರೆಗೆ ತುತರ್ು ನಿರ್ವಹಣಾ ಕಾರ್ಯವಿರುವುದರಿಂದ, ಈ ಎರಡೂ ಉಪಕೇಂದ್ರಗಳಿಂದ ಪೂರಕವಾಗುತ್ತಿರುವ 11.ಕೆ.ವಿ ಮಾರ್ಗಗಳಿಗೆ ಬೆಳಗ್ಗೆ 10ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವಾಗಿದ್ದು ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಬೆವಿಕಂ. ಸಹಾಯಕ ಕಾರ್ಯನಿವರ್ಾಹಕ ಇಂಜನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Thursday, March 22, 2012


ನೀರಿಗಾಗಿ ಹಾಹಾಕಾರ: ಖಾಲಿ ಕೊಡ ಹಿಡಿದ ಜನತೆಯ ಪರದಾಟ 
  • ನೀರು ಬಿಡಲು ಆಗ್ರಹಿಸಿ ಗ್ರಾ.ಮ ಪಂಚಾಯಿತಿಗೆ ಬೀಗ ಜಡಿದ ಗ್ರಾಮಸ್ಥರು. 
  • ಅಧಿಕಾರಸ್ಥರಿಗೆ ಧಿಕ್ಕಾರ ಕೂಗಿದ ಮಹಿಳೆಯರು  
  • ಖಾಲಿ ಕೊಡ ಹಿಡಿದು 2ನೇ ದಿನವೂ ಗ್ರಾ.ಪಂ. ಕಾಯರ್ಾಲಯಕ್ಕೆ ಬೀಗ. 
  • ಅಕ್ಕಪಕ್ಕದ ತೋಟಗಳಲ್ಲಿ ನೀರಿಗಾಗಿ ಕಾಡಿಬೇಡಿ ನಿತ್ಯ ಕರ್ಮಗಳನ್ನು ಪೂರೈಸಿಕೊಳ್ಳುತ್ತಿರುವ     ಜನರು .

ಚಿಕ್ಕನಾಯಕನಹಳ್ಳಿ,ಮಾ.22 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ, ಇದೇ ಸಮಯದಲ್ಲಿ ಬೇಸಿಗೆಗಾಲ ಶುರುವಾಗಿ ಹಲವು ದಿನಗಳು ಕಳೆದಿವೆ, ಈ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ, ಜನರು ನೀರಿಗಾಗಿ  ಅಕ್ಕಪಕ್ಕದ ತೋಟಗಳಲ್ಲಿ ಕಾಡಿಬೇಡಿ ತಮ್ಮ ದಿನನಿತ್ಯ ಕರ್ಮಗಳನ್ನು ಪೂರೈಸುವಲ್ಲಿ ನಿರತರಾಗಿರುವುದು ಸಾಮಾನ್ಯ ದೃಷ್ಯವಾಗಿದೆ, ಆದರೆ ಇದರಿಂದ ರೋಸಿಹೋಗಿರುವ  ದುಗಡಿಹಳ್ಳಿ ಗ್ರಾಮದ ಜನ ಅಂತಿಮ ಪ್ರಯತ್ನವಾಗಿ  ಗ್ರಾ.ಪಂ.ಕಾಯರ್ಾಲಯಕ್ಕೆ ಬೀಗ ಜಡಿಯುವ ಮೂಲಕ ತಮ್ಮ ರೋಷವನ್ನು ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ದುಗಡಿಹಳ್ಳಿ, ಸಿದ್ದರಾಮನಗರ ಗ್ರಾಮಗಳಲ್ಲಿ ಕಳೆದ 6ತಿಂಗಳಿನಿಂದಲೂ ನೀರಿಗಾಗಿ ಪರದಾಡುತ್ತಿದ್ದರು, ಈ ಬಗ್ಗೆ ಅಧಿಕಾರದಲ್ಲಿರುವ ಎಲ್ಲ ವರ್ಗದ ಜನರ ಬಳಿಯೂ ಗೋಳು ಹೇಳಿಕೊಂಡರು ಕುಡಿಯಲು ನೀರು ಸಿಗದಿರುವುದರಿಂದ  ಸಿಟ್ಟಿಗೆದ್ದ ಜನರು ಮಾ.21ರಂದು   ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ್ದಾರೆ, ಮೊದಲನೆ ದಿನ ಗ್ರಾಮ ಪಂಚಾಯಿತಿ ಕಾಯರ್ಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದಕ್ಕೆ ಗ್ರಾ.ಪಂ.ಅಧ್ಯಕ್ಷರಾದ ಲಕ್ಷ್ಮೀದೇವಮ್ಮ  ಪ್ರತಿಕ್ರಿಯಿಸಿ ನಾಳೆ ಟ್ಯಾಂಕರ್ ಮೂಲಕ ನೀರನ್ನು ತರಿಸುವುದಾಗಿ ಭರವಸೆ ನೀಡಿದರು, ಈ ಭರವಸೆಗೆ ಒಪ್ಪಿಕೊಂಡ ಗ್ರಾಮಸ್ಥರು ಗ್ರಾ.ಪಂ. ಕಾಯರ್ಾಲಯಕ್ಕೆ ಹಾಕಿದ್ದ ಬೀಗ ತೆಗೆದು ಅಲ್ಲಿನ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅನವು ಮಾಡಿಕೊಟ್ಟರು, ಮರು ದಿನ ಅಂದರೆ ಮಾ.22ರಂದು  1ಗಂಟೆಯಾದರೂ ನೀರು ಬಾರದಿರುವದನ್ನು ಮನಗಂಡು  ಗ್ರಾಮಸ್ಥರು ಮತ್ತೆ ಗ್ರಾ.ಪಂ.ಕಾಯರ್ಾಲಯದ ಮುಂದೆ ಖಾಲಿ ಕೊಡ ಪ್ರದಶರ್ಿಸಿ ಬೀಗ ಜಡಿದು ಪ್ರತಿಭಟಿಸಿದರು.
ಹೊಸದಾಗಿ ಬೋರ್ ಕೊರೆಸಿದ್ದು ಅದಕ್ಕೆ ಮೋಟಾರ್ ಅಳವಡಿಸಿಲ್ಲ,  ಗ್ರಾಮದ ಜನತೆಗೆ ನೀರು ಬಿಡಬೇಕಾದ ನೌಕರ ಅಪಘಾತಕ್ಕೀಡಾಗಿ  ಆಸ್ಪತ್ರೆ ಸೇರಿದ್ದಾನೆ,  ಇವೆಲ್ಲಾ ಕಾರಣಗಳಿಂದ  ಸುಮಾರು ಆರು ತಿಂಗಳಿನಿಂದಲೂ ಸರಿಯಾಗಿ ನೀರಿನ ಸರಬರಾಜು ಇಲ್ಲದೆ ಗ್ರಾಮದ ಜನರು ಅಕ್ಕಪಕ್ಕದಲ್ಲಿನ ತೋಟಗಳಿಗೆ ಹೋಗಿ ತೋಟದ ಮಾಲೀಕರಲ್ಲಿ ವಿನಂತಿಸಿಕೊಂಡು ನೀರನ್ನು ತಂದು ತಮ್ಮ ದಿನನಿತ್ಯ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಿರುವುದಾಗಿ  ಆ ಭಾಗದ ಗ್ರಾಮಸ್ಥ ಲೋಕೇಶ್  ಪತ್ರಿಕೆಯ ಬಳಿ ಹೇಳಿಕೊಂಡಿದ್ದಾರೆ. ಈ ಕೂಡಲೇ ಗ್ರಾಮಕ್ಕೆ ನೀರು ಬಿಡಲು ಪಯರ್ಾಯ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ನಮಗೆ ನೀರು ಸಿಗುವವರೆಗೆ ಗ್ರಾ.ಪಂ.ಗೆ ಬೀಗ ಜಡಿಯುವುದು ಖಂಡಿತವೆಂದು ಆ ಭಾಗದ ಜನರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿ.ಲೋಕೇಶ್ ಬಿಲ್ಲೇಮನೆ, ನಿಜಗುಣಮೂತರ್ಿ, ನಂದೀಶ್, ಷಡಾಕ್ಷರಿ ಸೇರಿಂದತೆ ಮಹಾಲಿಂಗೇಶ್ವರ ಯುವಕ ಸಂಘದ ಸದಸ್ಯರು, ಮಹಿಳಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.


Tuesday, March 13, 2012




ಜಿಲ್ಲೆಯಲ್ಲಿ ಉತ್ತಮ ಪ್ರಗತಿಯ ಪ್ರಥಮ ಸಂಘವನ್ನಾಗಿಸಲು ಶ್ರಮಿಸುವೆ
ಚಿಕ್ಕನಾಯಕನಹಳ್ಳಿ,ಮಾ.13: ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗಿಂತ ನಂದಿನಿ ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘವನ್ನು ಜಿಲ್ಲೆಯಲ್ಲೇ ಉತ್ತಮ ಪ್ರಗತಿಯ ಪ್ರಥಮ ಪತ್ತಿನ ಸಹಕಾರ ಸಂಘ ಮಾಡಲು ಸಂಘದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಾಲ್ಲೂಕು ಹಾಲು ಉತ್ಪಾದಕರುಗಳ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ನಂದಿನಿ ಹಾಲು ಉತ್ಪಾಕರುಗಳ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ 2012ನೇ ಸಾಲಿನ  ಚುನಾವಣೆಯಲ್ಲಿ 3ನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹಳೆಮನೆ ಶಿವನಂಜಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀನರಸಿಂಹಯ್ಯರವರಿಗೆ ನಿದರ್ೇಶಕರುಗಳು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಳೆಮನೆ ಶಿವನಂಜಪ್ಪ ಸಂಘದ ಅಭಿವೃದ್ದಿಗಾಗಿ ನಿಷ್ಠೆಯಿಂದ  ಕಾರ್ಯನಿರ್ವಹಿಸಲಿದ್ದು, ಟೀಕೆಗಳಿಗೆ ಕಿವಿಗೊಡದೆ ಅಭಿವೃದ್ದಿ ಕಡೆಗೆ ಕೊಂಡೊಯ್ಯುಲು ಶ್ರಮಿಸುತ್ತೇನೆ, ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕೆಂದು ಕೋರಿದರು. ನಂದಿನಿ ಪತ್ತಿನ ಸಹಕಾರ ಸಂಘದಲ್ಲಿ ಜಾತಿ, ಭೇದ ಮಾಡದೆ, ಒಂದೇ ರೀತಿಯ ವ್ಯವಸ್ಥೆ ಇರುವುದು ಎಂದು ತಿಳಿಸಿದರು.
3ನೇ ಬಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಲಕ್ಷ್ಮೀನರಸಿಂಹಯ್ಯ ಮಾತನಾಡಿ ವಿಸ್ತರಣಾಧಿಕಾರಿಗಳಿಗೂ, ಸಂಘದ ಸದಸ್ಯರಿಗೂ, ಖಾತೆದಾರರಿಗೂ  ಉತ್ತಮವಾದ ಸಂಬಂಧ ಇರಬೇಕು ಆಗ ಸಂಘದಲ್ಲಿ ಅಭಿವೃದ್ದಿ ಕಾಣುತ್ತದೆ ಎಂದರು.
ಸಮಾರಂಭದಲ್ಲಿ ನಿದರ್ೇಶಕ ಸಿದ್ದರಾಮಯ್ಯ, ವಿಸ್ತರಣಾಧಿಕಾರಿ ಯರಗುಂಟಪ್ಪ ಉಪಸ್ಥಿತರಿದ್ದರು.
ಬರ ನಿರ್ವಹಣಾ ಕೋಶದ ಸಹಾಯವಾಣಿ
ಚಿಕ್ಕನಾಯಕನಹಳ್ಳಿ,ಮಾ.13: ತಹಶೀಲ್ದಾರ್ ಕಛೇರಿಯಲ್ಲಿ ಬರಪರಿಹಾರ ನಿರ್ವಹಣಾ ಕೋಶವನ್ನು ತೆರೆಯಲಾಗಿದ್ದು, ಇಲ್ಲಿ ಕುಡಿಯುವ ನೀರು, ಮೇವಿನ ಕೊರತೆ ಹಾಗೂ ಇತರೆ ಉದ್ಯೋಗ ಸೃಜನ ಕಾಮಗಾರಿಗಳ ದೂರುಗಳು ಹಾಗೂ ಸಲಹೆಗಳನ್ನು ಸ್ವೀಕರಿಸಲು ಈ ಕೋಶವನ್ನು ತೆರೆಯಲಾಗಿದೆ.
ಬರ ಪರಿಹಾರ ನಿರ್ವಹಣಾ ವಿಷಯವಾಗಿ ಹೆಚ್ಚಿನ ಮಾಹಿತಿಗಾಗಿ ಈ ಕೋಶದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು  ಸಾರ್ವಜನಿಕರು 08133-267242 ಈ ಸಂಖ್ಯೆಯನ್ನು ಸಂರ್ಪಕಿಸಲು ಕೋರಲಾಗಿದೆ.
ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ಪಟ್ಟಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಿ ಪ್ರೌಢಶಾಲೆಗಳ ಗ್ರೇಡ್-2 ಸಹ ಶಿಕ್ಷಕರ ತಾತ್ಕಾಲಿಕ ಹೆಚ್ಚುವರಿ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಸದರಿ ಪಟ್ಟಿಯ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಮರ್ಥನೀಯ ಪೂರಕ ದಾಖಲೆಗಳೊಂದಿಗೆ ದಿ.15.03.12ರೊಳಗೆ ಕಛೇರಿಗೆ ಮುದ್ದಾಂ ಸಲ್ಲಿಸಿ ಸ್ವೀಕೃತಿ ಪಡೆಯಲು ಬಿ.ಇ.ಓ. ಸಾ.ಚಿ.ನಾಗೇಶ್ ಕೋರಿದ್ದಾರೆ.



Saturday, March 10, 2012


ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಮಾ.10 : ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್, ತಾತಯ್ಯನವರ 52ನೇ ವರ್ಷದ ಉರುಸ್ ಕಾರ್ಯಕ್ರಮವನ್ನು ಇದೇ 12ರಿಂದ 14ರವರೆಗೆ ನಡೆಯಲಿದೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ತಿಳಿಸಿದೆ.
ಉರುಸ್ ಕಾರ್ಯಕ್ರಮವು 12ರ ಸೋಮವಾರದಂದು ರಾತ್ರಿ 8.30ಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ 
 ತಾತಯ್ಯನವರ ಉತ್ಸವ ನಡೆಯಲಿದೆ, 13ರ ಮಂಗಳವಾರ ಸಂಜೆ 7.30ಕ್ಕೆ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಮುಜ್ತಾಬಾ ನಾಜಾನ್ ಪಾಟರ್ಿ ಆಫ್ ಮುಂಬಯಿ ಮತ್ತು ನೂರಿ ಸಭಾ ಪಾಟರ್ಿ ಆಫ್ ನಾಗಪುರುರವರಿಂದ ಜಿದ್ದಾಜಿದ್ದಿನ ಖವ್ವಾಲಿ ನಡೆಯಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನೆರವೇರಿಸಲಿದ್ದು ಗೋರಿಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷ ಆನಂದರವಿ ಮತ್ತಿತರರು ಉಪಸ್ಥಿತರಿರುವರು.
14ರ ಬುಧವಾರ ಸಂಜೆ 7.30ಕ್ಕೆ ನಗೆಹಬ್ಬ, ಸಂಗೀತ ರಸಸಂಜೆಯನ್ನು ಖ್ಯಾತ ಹಾಸ್ಯಗಾರರಾದ ರಿಚಡರ್್ ಲೂಯಿಸ್ ಹಾಗೂ ಮೈಸೂರ್ ಆನಂದ್ ತಂಡದವರಿಂದ ನಡೆಯಲಿದ್ದು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ಕೆ.ರಾಜು ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ಖ್ಯಾತ ಚಲನಚಿತ್ರ ನಟ ದುನಿಯಾ ವಿಜಯ್ ಹಾಗೂ ನಟಿ ಪೂಜಾಗಾಂಧಿರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಉಪಸ್ಥಿತರಿರುವರು.

ತಾತಯ್ಯನವರ ಉತ್ಸವಕ್ಕೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ
                                            
ಚಿಕ್ಕನಾಯಕನಹಳ್ಳಿ,ಮಾ.10 : ತಾತಯ್ಯನವರ ಉತ್ಸವಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಬಂದು ಬಸ್ತ್ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ತಿಳಿಸಿದರು.
ತಾತಯ್ಯನವರ ಉರುಸ್ ಉತ್ಸವ ಆರಂಭವಾಗುವ ಹಿನ್ನೆಲೆಯಲ್ಲಿ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಕರೆದಿದ್ದ ಹಿಂದು ಮುಸ್ಲಿಂ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲಿನಿಂದಲೂ ನೆಡಯುತ್ತಿರುವ ಈ ಉರುಸ್ ಕಾರ್ಯಕ್ರಮಕ್ಕೆ ಎಲ್ಲಾ ಹಿಂದು ಮುಸ್ಲಿಂರು ಒಟ್ಟಾಗಿ ಸೇರಿ ಉರುಸ್ನ್ನು ಯಶಸ್ವಿಯಾಗಿ ನಡೆಸಲು ಕರೆ ನೀಡಿದರು.
ಪುರಸಭಾ ಸದಸ್ಯ ಬಾಬುಸಾಹೇಬ್ ಮಾತನಾಡಿ ಈ ಬಾರಿ ತಾತಯ್ಯನವರ ಉರುಸ್ಗೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದು ಅದಕ್ಕಾಗಿ ಹೆಚ್ಚು ಮಹಿಳಾ ಪೋಲಿಸ್ ಸಿಬ್ಬಂದಿಯನ್ನು ನೇಮಿಸಲು ಸಲಹೆ ನೀಡಿದರು.
ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಉರುಸ್ ಸಮಯದಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಶಾಂತಿ ಸಭೆಯಲ್ಲಿ ಪಿ.ಎಸ್.ಐ ಕೆ.ಪ್ರಭಾಕರ್, ಪ್ರೊಪೆಷನರಿ ಪಿ.ಎಸ್.ಐ ನಾಗರಾಜುಮೇಕ, ಪೋಲಿಸ್ ಗುಪ್ತಮಾಹಿತಿ ಸಿಬ್ಬಂದಿ ಆರ್.ದಯಾನಂದ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಕಾಂಗ್ರೆಸ್ ಪಕ್ಷದ ವಿಧಾನಸಭಾ ವೀಕ್ಷಕರಾದ ಕ್ಯಾಪ್ಟನ್ ಸೋಮಶೇಖರ್,  ಗೋರಿ ಕಮಿಟಿಯ ಟಿ.ರಾಮಯ್ಯ, ಘನ್ನಿಸಾಬ್, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ, ದಲಿತ ಮುಖಂಡ ಮಲ್ಲಿಕಾಜರ್ುನ್,  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,  ನಾಮಿನಿ ಸದಸ್ಯ ಎಂ.ಎಸ್.ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ
                                             
ಚಿಕ್ಕನಾಯಕನಹಳ್ಳಿ,ಮಾ.10 : ಕಾಲಕ್ಕೆ ತಕ್ಕಂತೆ ಜೀವನ ಶೈಲಿ ಬದಲಾಗುತ್ತಿದೆ ಅದರಂತೆ ಮಹಿಳೆಯರು, ಎಲ್ಲಾ ಕ್ಷೇತ್ರದಲ್ಲೂ ಭಾಗಿಯಾಗಿದ್ದಾರೆ ಆದರೂ ಅವರಿಗೆ ಜೀವನ ಸುಧಾರಣೆಯಲ್ಲಿ ಒತ್ತಡ ಹೆಚ್ಚಿರುತ್ತದೆ ಈ ಬಗ್ಗೆ ಮಹಿಳೆಯರಿಗೆ ಗಮನ ಹರಿಸಿ ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಡುವುದೇ ಮಹಿಳಾ ದಿನಾಚರಣಾ ಕಾರ್ಯಕ್ರಮದ ಉದ್ದೇಶ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿಶು ಅಭಿವೃದ್ದಿ ಯೋಜನಾ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದ ಅವರು ಮಹಿಳೆಯರು ಪುರುಷರಿಗಿಂತ ಮುಂದೆ ಇರುವುದನ್ನು ಇಂದು ನಾವು ಕಾಣುತ್ತಿದ್ದೇವೆ, ಸಕರ್ಾರವು ಇಂದು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುತ್ತಿದೆ ಇದರ ಜೊತೆಗೆ ತಮ್ಮ ಶ್ರಮವನ್ನು ಹೆಚ್ಚಿನದಾಗಿ ಬಳಸಿಕೊಂಡರೆ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ದಾರಿ ಕಾಣಲು ಸಾಧ್ಯ ಎಂದರು.
ನ್ಯಾಯಾಧೀರಾದ ಕೆ.ನಿರ್ಮಲ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಎರಡು ಕಣ್ಣುಗಳಿದ್ದಂತೆ, ಸಮಾಜದಲ್ಲಿ ಪುರುಷರು ಎಷ್ಟು ಮುಖ್ಯವೋ ಅಷ್ಟೇ ಮಹಿಳೆಯರು ಮುಖ್ಯ, ದೇಶದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನಮಾನವಿದೆ, ಹಿಂದಿನ ಕಾಲದಿಂದಲೂ ಹೆಣ್ಣನ್ನೇ ದೇವತೆ, ಆದಿಶಕ್ತಿ, ಮಾತೆಯರು ಎಂಬ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ, ಇಂದು ಮಹಿಳೆಯರಿಗೆ ಸಕರ್ಾರವು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿರುವುದು ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಸಮಾಜದ ಸೇವೆಯನ್ನು ಮಾಡುವಲ್ಲಿ ಸಹಕಾರಿಯಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ 1808ರಲ್ಲಿ ಇಗ್ಲೆಂಡ್ ದೇಶದಲ್ಲಿ ಮಾಚರ್್ 8ರಂದು ಕಾಮರ್ಿಕರು ನಡೆಸಿದ ಹೋರಾಟದ ಫಲವಾಗಿ ಮಹಿಳಾ ದಿನಾಚರಣೆ ಜಾರಿಗೆ ಬಂತು ಇದರಿಂದ ಮಹಿಳೆಯರಿಗೆ ಸಮಾನ ಅವಕಾಶಗಳು ಲಭಿಸಲು ಫಲಕಾರಿಯಾಯಿತು, ನಮ್ಮ ರಾಜ್ಯದಲ್ಲಿ 1975ರಿಂದ ಮಾಚರ್್ 8ರಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸ್ತ್ರೀಯರಿಗೆ ಸಮಾನ ಅವಕಾಶ ಸಿಗುತ್ತಿರಲಿಲ್ಲ, ಸ್ತ್ರೀಯರ ಅಭಿವೃದ್ದಿಗೆ ಅನೇಕ ಕಾನೂನುಗಳು ಜಾರಿಯಾಗಿದ್ದು ಅದರಲ್ಲಿ ವರದಕ್ಷಿಣೆ ನಿಷೇದ ಕಾಯಿದೆ, ಕೌಟುಂಬಿಕ ದೌರ್ಜನ್ಯ ಕಾಯಿದೆ, ಆಸ್ತಿಯ ಹಕ್ಕು, ವಿವಾಹ ಹಕ್ಕು   ಮಹಿಳೆಯರ ಏಳಿಗೆಗಾಗಿ ಕಾನೂನುಗಳು ರೂಪಿತವಾಗಿದ್ದು ಸಮಾಜದಲ್ಲಿ ಮಹಿಳೆಯರು ಮುಂದೆ ಬರಲು ಈ ಕಾಯಿದೆಗಳು ಸಹಕಾರಿಯಾಗಿವೆ ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ ಸ್ವಾಗತಿಸಿದರೆ, ವಕೀಲರ ಸಂಘದ ಕಾರ್ಯದಶರ್ಿ ರಾಜಶೇಖರ್ ವಂದಿಸಿದರು.

Thursday, March 8, 2012


ವಿಕಲಚೇತನರಿಗೆ ಕೃತಕ ಅಂಗ ಜೋಡಣೆ  ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ
ಚಿಕ್ಕನಾಯಕನಹಳ್ಳಿ,ಮಾ.06 : ಜನರು ಆಕಸ್ಮಿಕವಾಗಿ  ಅಥವ ಅಪಘಾತಗಳಿಂದ ಅವಘಡಕ್ಕೊಳಗದ ಸಂದರ್ಭದಲ್ಲಿ ಅವರಿಗೆ ಕೃತಕ ದೇಹದ ಭಾಗಗಳನ್ನು ನೀಡಿದರೆ, ಅವರು ತಮಗೆ ತಾವೇ ಆತ್ಮಸ್ಥೈರ್ಯ ಕಂಡುಕೊಳ್ಳುವುದರ ಮೂಲಕ ತಮ್ಮ ಜೀವನ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ಉದ್ಘಾಟಿಸಿ  ಮಾತನಾಡಿದ ಅವರು,  ಅಪಘಾತಕ್ಕೊಳಗಾದ ವ್ಯಕ್ತಿಯು ಆ ಸಂದರ್ಭದಲ್ಲಿ ತನ್ನಲ್ಲಿರುವ ನಂಬಿಕೆ,  ಶಕ್ತಿಯನ್ನು ಕಳೆದುಕೊಂಡು ಮೂಲೆಗುಂಪಾಗುತ್ತಾನೆ, ಈ ಸಮಯದಲ್ಲಿ ಅವರಿಗೆ ದೇಹಕ್ಕೆ ಕೃತಕ ಭಾಗಗಳನ್ನು ನೀಡಿ ಆತ್ಮಸ್ಥೈರ್ಯ ತುಂಬಿದರೆ ಅವರು ಜೀವಿಸಲು ಸಹಕಾರಿಯಾಗುವುದು ಎಂದ ಅವರು, ಇಂತಹ ಕಾರ್ಯವನ್ನು ಇನ್ನರ್ವೀಲ್ ಕ್ಲಬ್ ಮಾಡುತ್ತಿರುವುದು ಸಂತೋಷಕರ ಮತ್ತು ಅಂಗವಿಕಲರಿಗೆ ಸಕರ್ಾರ ಹೆಚ್ಚಿನ ರೀತಿಯಲ್ಲಿ ನೆರವಾಗಬೇಕು ಹಾಗೂ ಅವರಿಗೆ ಶಾಶ್ವತ ಪರಿಹಾರ ನೀಡಬೇಕೆಂದರು.
ಇನ್ನರ್ವೀಲ್ ಕ್ಲಬ್ ಜಿಲ್ಲಾ ವೈಸ್ ಛೇರಮನ್ ಮೀನಾ ಅಂಬ್ಲಿ ಮಾತನಾಡಿ ಕೃತಕ ಕಾಲು ಜೋಡಣಾ ಶಿಬಿರವನ್ನು ಕ್ಲಬ್ ಹಲವು ವರ್ಷಗಳಿಂದ  ಹಮ್ಮಿಕೊಂಡು ಬರುತ್ತಿರುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಇನ್ನರ್ವೀಲ್ ಸಂಸ್ಥೆ ಹಮ್ಮಿಕೊಂಡಿರುವ ಕೃತಕ ಕಾಲು ಜೋಡಣಾ ಶಿಬಿರವನ್ನು ಬಡ ಜನರು ಸದುಪಯೋಗ ಪಡೆದುಕೊಳ್ಳಬೇಕು, ಅಲ್ಲದೆ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಯಲ್ಲೂ ಹಮ್ಮಿಕೊಂಡ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್,  ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ, ತಾ.ಪಂ.ಸದಸ್ಯರಾದ ಚೇತನಗಂಗಾಧರ್, ಲತಾ, ಟೌನ್ ಬ್ಯಾಂಕ್ ಅದ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾದ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಕವಿತಾಚನ್ನಬಸವಯ್ಯ, ಮಹಾವೀರ್ಜೈನ್ನ ಡಾ.ಮುರುಳಿ,  ವೈದ್ಯಾಧಿಕಾರಿ ಡಾ.ಶಿವಕುಮಾರ್, ಸಿ.ಡಿ.ಪಿ.ಓ ಅನೀಸ್ಖೈಸರ್ ಸೇರಿದಂತೆ ಮುಂತಾದವರಿದ್ದರು.
ಸಮಾರಂಭದಲ್ಲಿ ಇನ್ನರ್ವೀಲ್ ಕ್ಲಬ್ಮ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ವೀಣಾಶಂಕರ್ ಸ್ವಾಗತಿಸಿ, ಭವಾನಿಜಯರಾಂ ನಿರೂಪಿಸಿದರು.
                                         
ಹೇಗೆ ನಡೆದುಕೊಳ್ಳಬೇಕೆಂಬದನ್ನು ಅರಿತರೆ ಜಗಳ ಇಲ್ಲವಾಗುತ್ತದೆ
                                         
ಚಿಕ್ಕನಾಯಕನಹಳ್ಳಿ,ಮಾ.06 : ಜಗಳಮಾಡಿಕೊಂಡು ಜೀವನದಲ್ಲಿ ಅಶಾಂತಿ ಉಂಟುಮಾಡಿಕೊಳ್ಳುತ್ತಾ  ನ್ಯಾಯಾಲಯಗಳಿಗೆ ಆಗಮಿಸಿ ಸುಮ್ಮನೆ ತಮ್ಮ ಸಮಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಶಾಂತಿಯುತವಾಗಿ ಜೀವನ ನಡೆಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಪರಿವರ್ತನೆ ಮಾಡಿ  ಎಂದು ನ್ಯಾಯಾಧೀಶರಾದ ನಿರ್ಮಲ ಹೇಳಿದರು.
ಪಟ್ಟಣದ ಡಿ.ವಿ.ಪಿ ಶಾಲೆಯ ಆವರಣದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಂತಿಯುತ ಜೀವನ ನಡೆಸಲು  ವಿದ್ಯಾವಂತರೇ ಆಗಬೇಕೆಂದೇನಿಲ್ಲ, ಯಾರೇ ಆಗಲಿ ನಾವು ಎಲ್ಲಿ, ಯಾವಾಗ, ಯಾವ ರೀತಿ ನಡೆದುಕೊಳ್ಳಬೇಕೆಂಬುದೇನು ಅರಿತವನಿಗೆ ಮುಂದೇನಾಗಬಹುದು ಎಂಬ ಗ್ರಹಿಸುವಿಕೆ ಮುಖ್ಯ ಎಂದ ಅವರು, ಇದರಿಂದಲೇ ಅರ್ಧ ಸಮಸ್ಯೆಗಳು ತಪ್ಪುತ್ತವೆ ಎಂದರು,  ಮಕ್ಕಳು ತಮ್ಮ  ವ್ತಕ್ತಿತ್ವ ವಿಕಾಸನ ಮಾಡಿಕೊಳ್ಳಬೇಕು ಅದಕ್ಕೆ ಪೋಷಕರು ಸಹಕರಿಸಬೇಕು ಮತ್ತು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ನ್ಯಾಯಾಧೀಶರಾದ ಎ.ಜಿ.ಶಿಲ್ಪ ಮಾತನಾಡಿ  ನಾವು ಮಾಡಿದ ರೀತಿಯೇ ಸರಿ ಎಂಬ  ಯೋಚನೆಗಳು ಮಕ್ಕಳಲ್ಲಿ ಹಲವು ಕೃತ್ಯಗಳನ್ನು ಎಸಗುತ್ತಾರೆ ಆ  ಆಲೋಚನೆಯಲ್ಲಿ ತಪ್ಪುಗಳನ್ನು ಮಾಡುತ್ತಾರೆ ಆ ಮೂಲಕ ಅವರು ಬಾಲಪರಾಧಿಗಳಾಗುತ್ತಾರೆ ಇದರ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು  ಎಂದ ಅವರು ಬಾಲಪರಾಧಿಗಳಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳಿವೆ ಅಲ್ಲಿ ಅವರ ತಪ್ಪುಗಳನ್ನು ವಿಶೇಷವಾಗಿ ಚಚರ್ಿಸಿ ಸೂಕ್ತ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ  ಡಿ.ವಿ.ಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿದರು. ಸಮಾರಂಭದಲ್ಲಿ  ನಿವೃತ್ತ ಉಪನ್ಯಾಸಕ ಜಿ.ತಿಮ್ಮಯ್ಯ, ಶಿಕ್ಷಕ ನಾಗರಾಜು ಉಪಸ್ಥಿತರಿದ್ದರು

ಚಿಕ್ಕನಾಯಕನಹಳ್ಳಿ,ಮಾ08 : ತಾಲ್ಲೂಕು ಬೋರನಕಣಿವೆಯ ಸೇವಾ ಚೇತನದಲ್ಲಿ ಮಾ.14 ಮತ್ತು 15ರಂದು ವಿಶೇಷ ಘಟಕ ಮತ್ತು ಗಿರಿಜನ ಯೋಜನೆಯಡಿ ಯುವ ಕವಿಗಳಿಗೆ ಕಾವ್ಯ ಕಮ್ಮಟ ಏರ್ಪಡಿಸಲಾಗಿದೆ.
ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಬೋರನಕಣಿವೆ ಸೇವಾ ಚೇತನಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಈ ಕಾವ್ಯ ಕಮ್ಮಟದ ಉದ್ಘಾಟನಾ ಸಮಾರಂಭ ಮಾ.14ರ ಬೆಳಗ್ಗೆ 11ಕ್ಕೆ ಜರುಗಲಿದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಡಾ.ಮನುಬಳಿಗಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಕವಿ ಹೆಚ್.ಗೋವಿಂದಯ್ಯ ಮುಖ್ಯ ಅತಿಥಿಗಳಾಗಿ ಕೈಗಾರಿಕೋದ್ಯಮಿ ಬಿ.ಎ.ಚಿದಂಬರಯ್ಯ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ವಿಶೇಷ ಆಹ್ವಾನಿತರಾಗಿ ಆಗಮಿಸುವರು. ಮದ್ಯಾಹ್ನ 2.30 ಗಂಟೆಗೆ ಕವಿ, ಪ್ರೊ.ಕೆ.ಬಿ.ಸಿದ್ದಯ್ಯ ಅವರೊಂದಿಗೆ ಸಂವಾದ ಸಂಜೆ 6ಕ್ಕೆ ಬಿಳಿಗೆರೆ ಕೃಷ್ಣಮೂತರ್ಿ ಅವರಿಂದ ತತ್ವಪದಗಳ ಗಾಯನ ಜರುಗಲಿದೆ, ಮಾ.15ರಂದು ಮದ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಬ ಜರುಗಲಿದ್ದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪದ ಅದ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕ ಕಾ.ತ.ಚಿಕ್ಕಣ್ಣ ಸಮಾರೋಪ ಭಾಷಣ ಮಾಡಲಿದ್ದಾರೆ, ರುದ್ರಪ್ಪ ಅನಗವಾಡಿ ಎಸ್.ಆರ್.ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆ

                                    
ಚಿಕ್ಕನಾಯಕನಹಳ್ಳಿ,ಮಾ.08 : ಸಂಸತ್ತಿಗೂ ಹಾಗೂ ವಿದಾನಸಭೆಗೆ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಡಬೇಕೆಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಸಕರ್ಾರವನ್ನು ಒತ್ತಾಯಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನ ಮಹಿಳಾ ಸಂಘದ ವತಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ ಪ್ರಪಂಚದಲ್ಲಿ ಶೇ.50ರಷ್ಟು ಮಹಿಳೆಯರು ಇರುವುದರಿಂದ ಸಕರ್ಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು, ಮಹಿಳೆಯರಿಗೆ ಸಮಾಜದಲ್ಲಿ ಸಕರ್ಾರಿ ಕೆಲಸ ಕುಟುಂಬ ಪಾಲನೆಯಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಾಳೆ, ಮಹಿಳೆಯರು ಹಾಗೂ ಶಿಕ್ಷಿತರಾದರೆ ಮಾತ್ರ ಸಮಾಜ ಜಾಗೃತರಾಗಲು ಸಾಧ್ಯ, ಆ ಸಂದರ್ಭದಲ್ಲಿ ಅವರಿಗೆ ಅವಕಾಶಗಳು ತಾವಾಗೇ ಬರುತ್ತವೆ, ಸಕರ್ಾರ ಮಹಿಳೆಯರ ಬಗ್ಗೆ ಕಾನೂನುಗಳಿದ್ದರೂ ಸಮಾಜದಲ್ಲಿ ವರದಕ್ಷಿಣೆ ಕಿರುಕುಳ ಲೈಂಗಿಕ, ದೌರ್ಜನ್ಯಗಳು ನಡೆಯುತ್ತಲೇ ಇದೆ, ಇದರ ಬಗ್ಗೆ ಮಹಿಳೆಯರೆಲರಿಗೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು, ಮಹಿಳಾ ದಿನಾಚರಣೆಯಂದು ಸಕರ್ಾರ ರಜಾ ಘೋಷಿಸುವಂತೆ ಒತ್ತಾಯಿಸಿದರು. 
ಪುರಸಭಾಧ್ಯಕ್ಷ ದೊರೆಮುದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ರಾತ್ರಿ ನಿಭರ್ೀತಿಯಿಂದ ಸಂಚರಿಸಿದಾಗ ದೇಶ ರಾಮ ರಾಜ್ಯವಾಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಗಾಂಧೀಜಿಯವರ ಕನಸು ಕಂಡಿದ್ದರು, ಮಹಿಳೆಯರು ಸಕರ್ಾರ ನೀಡುವ ಸವಲತ್ತುಗಳೂ ಸರಿಯಾಗಿ ಉಪಯೋಗಿಸಿಕೊಂಡು ಆಥರ್ಿಕವಾಗಿ ಮುಂದೆ ಬರಬೇಕು, ಸ್ತ್ರೀಯರ ಮೇಲಿನ ದೌರ್ಜನ್ಯ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿನ ದೌರ್ಜನ್ಯಗಳನ್ನು ತಡೆಯುವುದು ಸಮಾಜದ ಎಲ್ಲಾ ನಾಗರೀಕರ ಕರ್ತವ್ಯ ಎಂದರು.
ಸಮಾರಂಭಕ್ಕೂ ಮುನ್ನ ಆಂಜನೇಯಸ್ವಾಮಿ ದೇವಸ್ಥಾನದಿಂದ ಕನ್ನಡ ಸಂಘದವರೆಗೆ ಮೆರವಣಿಗೆ ನಡೆಸಲಾಯಿತು. ನೆಹರು ಸರ್ಕಲ್ನಲ್ಲಿ ಮಾನವ ಸರಪಳಿ ನಿಮರ್ಿಸಿ, ಜನರಲ್ಲಿ ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಸಸದಸ್ಯರಾದ ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿ, ಪುರಸಭಾ ಸದಸ್ಯರಾದ ರೇಣುಕಗುರುಮೂತರ್ಿ, ರುಕ್ಮಿಣಮ್ಮ, ಶಿವಣ್ಣ, ಕವತಾಚನ್ನಬಸವಯ್ಯ, ಸುಮಿತ್ರಕಣ್ಣಯ್ಯ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಮುಂತಾದವರಿದ್ದರು.