Wednesday, October 24, 2012




ತಾಲೂಕು ಹಾಗೂ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಗಳ ದಿನಾಂಕಗಳ ನಿಗಧಿ
ಚಿಕ್ಕನಾಯಕನಹಳ್ಳಿ,ಅ.24 : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ 5ನೇ ಸಮ್ಮೇಳನವನ್ನು ಹಂದನಕೆರೆ ಹೋಬಳಿಯಲ್ಲಿ ನಡೆಸಲು ಹಾಗೂ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲೂ ಹೋಬಳಿ ಮಟ್ಟದ ಸಮ್ಮೇಳನ ನಡೆಸಲು ಸಮಿತಿ ತೀಮರ್ಾನಿಸಿದೆ ಎಂದು  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಸಮ್ಮೇಳನವನ್ನು ಹಂದನಕೆರೆಯಲ್ಲಿ ಮುಂದಿನ ಡಿಸೆಂಬರ್ 29 ರಂದು ಹಾಗೂ ನಗರ ಕೇಂದ್ರಿತ ಹೋಬಳಿ ಘಟಕ ಸಮ್ಮೇಳನವನ್ನು ಕೇದಿಗೆಹಳ್ಳಿ ಪಾಳ್ಯದಲ್ಲಿ ನವಂಬರ್ 24ರಂದು, ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆಯಲ್ಲಿ ಕಡೆ ಕಾತರ್ಿಕದ ಮುಂದಿನ ಶನಿವಾರದಂದು, ಹುಳಿಯಾರಿನ ಬೋರನಕಣಿವೆಯಲ್ಲಿ ನವಂಬರ್ 30ರಂದು, ಕಂದಿಕೆರೆಯಲ್ಲಿ ಡಿಸೆಂಬರ್ 8ರಂದು ಸಮ್ಮೇಳನಗಳನ್ನು ನಡೆಸಲಾಗುವುದು ಎಂದ ಅವರು, ಸಮ್ಮೇಳನದ ದಿನಾಂಕವನ್ನು ಈಗ ನಿಗಿಧಿ ಮಾಡಿದ್ದು ತಾಲ್ಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಸಮ್ಮೇಳನಾಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು  ಎಂದರು.
ಸಮ್ಮೇಳನಕ್ಕಾಗಿ ಈಗಾಗಲೇ ಉಪ ಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದಲ್ಲಿ ತಾಲೂಕಿನ  ಪ್ರಸ್ತುತ ಸಮಸ್ಯೆಗಳ ಬಗ್ಗೆ ಚಚರ್ಿಸಲಾಗುವುದು ಎಂದರಲ್ಲದೆ, ಸಮ್ಮೇಳನಗಳಲ್ಲಿ  ಯಾವುದೇ ರಾಜಕೀಯ ಸೇರಿಸದಂತೆ ಮನವಿ ಮಾಡಿದ ಅವರು ಸಮ್ಮೇಳನದಲ್ಲಿ ಮೂರು ಗೋಷ್ಠಿಗಳನ್ನು ಏರ್ಪಡಿಸಲಾಗುವುದು ಹಾಗೂ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ 6 ಜನ ಗಣ್ಯರಿಗೆ ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಮ್ಮೇಳನ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಾ.ಚಿ.ರಾಜಕುಮಾರ್, ಕನ್ನಡ ಸಾಹಿತ್ಯ ಪರಿಷತ್ನ ಸದಸ್ಯರಾದ ಬೆಳಗುಲಿ ಶಶಿಭೂಷಣ್, ಹುಳಿಯಾರ್ ಷಬ್ಬೀರ್, ನಂದೀಶ್ಬಟ್ಲೇರಿ, ರವಿಕುಮಾರ್, ಎಸ್.ಬಿ.ಕುಮಾರ್ ಉಪಸ್ಥಿತರಿದ್ದರು.