Wednesday, May 25, 2016


 ತಾ.ಪಂ  ಸದಸ್ಯರು ಕೇಳಿದ ಪ್ರಶ್ನೆಗಳಿಗೆ ತಬ್ಬಿಬ್ಬಾದ ಅಧಿಕಾರಿಗಳು
ಒಂದು ಗಂಟೆ ತಡವಾಗಿ ಆರಂಭವಾದ ಸಭೆ.
ಸಭೆ ಪ್ರಾರಂಭಿಸಲು ಸದಸ್ಯರ ಒತ್ತಾಯ, ಅಧ್ಯಕ್ಷರು ಮಾತ್ರ   ಉಪಾಧ್ಯಕ್ಷರನ್ನು ಕಾದು ಕುಳಿತರು.
ಸಂಚಾರಿ ಪಶು ಆಸ್ಪತ್ರೆಯನ್ನು ಮುಚ್ಚಲು ಅನುಮತಿ ಕೇಳಿದ ಅಧಿಕಾರಿ,  ಮುಚ್ಚದಂತೆ ತಾಕೀತು ಮಾಡಿದ ಸದಸ್ಯರು.
ಚಿಕ್ಕನಾಯಕನಹಳ್ಳಿ,ಮೇ.25 : ತಾಲ್ಲೂಕಿನ ತಾ.ಪಂ, ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ಭವಿಸಿರುವ ಸಮಸ್ಯೆಗಳು ಯಾವುವು ಅದಕ್ಕೆ ಇಲಾಖೆ ಏನು ಪರಿಹಾರ ಕಂಡುಕೊಂಡಿದೆ, ಇಲಾಖೆಗಳಲ್ಲಿ ಯಾವ ಯಾವ ಕಾರ್ಯಕ್ರಮಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಖಚರ್ಾಗಿರುವ ಹಣದ ದಾಖಲೆ, ಅಂಕಿ-ಅಂಶದ ಸಮಗ್ರ ವರದಿಯನ್ನು ನೀಡಿ ಎಂಬ ತಾ.ಪಂ.ಸದಸ್ಯ ಸಿಂಗದಹಳ್ಳಿರಾಜ್ಕುಮಾರ್ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಲಾಗದೆ ತಡಬಡಾಯಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಹೊನ್ನಮ್ಮಶೇಷಯ್ಯರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ, ನಿಮ್ಮ ಇಲಾಖೆಗಳಲ್ಲಿ ಎಷ್ಟು ಜನ ನೌಕರರಿದ್ದಾರೆ ಅವರು ಸರಿಯಾಗಿ ಕೆಲಸಕ್ಕೆ ಆಗಮಿಸುತ್ತಾರೆಯೇ?, ಇಲಾಖೆಗಳಲ್ಲಿ ಮಂಜೂರಾರಿಗಿರುವ ಕಾಮಗಾರಿಗಳು ಎಷ್ಟು ಪೂರ್ಣಗೊಂಡಿದೆ, ಅದಕ್ಕೆ ವೆಚ್ಚವಾಗಿರುವ ಹಣ ಎಷ್ಟು, ಉಳಿದಿರುವ ಹಣಕ್ಕೆ ದಾಖಲೆ ಎಲ್ಲಿ, ಇಲಾಖೆಗೆ ಒಳಪಡುವ ಯೋಜನೆಗಳ ಮಾಹಿತಿ ಯಾರ್ಯಾರಿಗೆ ತಲುಪಿದೆ ಅದಕ್ಕೆ ಕೈಗೊಂಡಿರುವ ಕ್ರಮಗಳೇನು, ಸಕರ್ಾರದ ಯೋಜನೆಗಳು ಫಲಾನುಭವಿಗೆ ತಲುಪಿದಿಯೇ, ತಲುಪದಿರಲು ಕಾರಣವೇನು ಈ ರೀತಿಯ ಅನೇಕ ಪ್ರಶ್ನೆಗಳು ಅಧಿಕಾರಿಗಳನ್ನು ಬೆವರಿಳಿಸುವಂತೆ ಮಾಡಿತು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ರಾಜ್ಕುಮಾರ್ ಸಮಸ್ಯೆಗಳ ಬಗ್ಗೆ  ಒಂದೊಂದಾಗಿ ಪ್ರಶ್ನೆಗಳನ್ನು ಸಭೆಯ ಮುಂದಿಡುತ್ತಾ ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಲಾಗದೆ ಅಧಿಕಾರಿಗಳು ತಬ್ಬಿಬ್ಬಾಗಿ,  ಗೊತ್ತಿಲ್ಲ, ತಲುಪಿಸುತ್ತೇನೆ ಎಂಬ ಉತ್ತರಗಳನ್ನು ನೀಡಿದರು. ಮುಂದಿನ ಸಭೆಯಲ್ಲಿ ಇದೇ ರೀತಿ ಹಾರಿಕೆ ಉತ್ತರಗಳು ಮರುಕಳಿಸುವಂತಿಲ್ಲ ಎಂದು ಸದಸ್ಯ ಸಿಂಗದಹಳ್ಳಿರಾಜ್ಕುಮಾರ್ ಎಚ್ಚರಿಸಿದರು.
ಮೀನುಗಾರಿಕೆ ಇಲಾಖೆಯ ಕಛೇರಿ ಬೀಗ ಹಾಕಿಯೇ ಇರುತ್ತದೆ, ಯಾವಾಗ ಕಛೇರಿ ತೆರೆದಿರುತ್ತದೆ, ಅಧಿಕಾರಿಯಾದ ನಿಮ್ಮ ಬರುವಿಕೆ ಏನು ಎಂದು ಕೇಳಿದ ಪ್ರಶ್ನೆಗೆ. ಉತ್ತರಿಸಿದ ಅಧಿಕಾರಿ ಎರಡು ತಾಲ್ಲೂಕಿಗೆ ಇನ್ಛಾಜರ್್ ಆಗಿರುವುದರಿಂದ ಸಮಸ್ಯೆ ಉದ್ಬವಿಸಿದೆ,  ಸೋಮವಾರ ತಾಲ್ಲೂಕಿನಲ್ಲಿ ಸಂತೆ ಇರುವುದರಿಂದ ಹಾಗೂ ಎರಡು ದಿನಕ್ಕೊಮ್ಮ ಹಾಜರಿರುತ್ತೇನೆ ಎಂದರು. ಸಾರ್ವಜನಿಕರು ಅಧಿಕಾರಿಗಳನ್ನು ಕಾಯುತ್ತಿರುತ್ತಾರೆ, ತಾಲ್ಲೂಕಿನಲ್ಲಿ ನಿಮ್ಮ ಹಾಜರಿ ಯಾವ ಯಾವ ದಿನವಿರುತ್ತದೆ ಎಂಬುದನ್ನು ತಿಳಿಸುವಂತೆ ಅಧಿಕಾರಿಗೆ ತಿಳಿಸಿದರು.
ತಾ.ಪಂ.ಸದಸ್ಯೆ ಚೇತನಗಂಗಾಧರ್ ಮಾತನಾಡಿ, ಸಭೆಗೆ ತಾಲ್ಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಗಮಿಸುತ್ತಿಲ್ಲ, ಅವರ ಸಹಾಯಕರೇ ಆಗಮಿಸುತ್ತಾರೆ, ಅಧಿಕಾರಿ ಹಾಜರಾಗದಿರುವ ಬಗ್ಗೆ ಕೇಳಿದರೆ ಮೀಟಿಂಗ್ ಇದೆ ತುಮಕೂರಿಗೆ ತೆರಳಿದ್ದಾರೆ ಎಂಬ ಉತ್ತರವನ್ನು ಪದೇ ಪದೇ ನೀಡುತ್ತಲೇ ಇರುತ್ತಾರೆ, ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ ಆಗಮಿಸಿರುವ ಸದಸ್ಯರಿಗೆ ಉತ್ತರವೇ ಗೊತ್ತಿರುವುದಿಲ್ಲ ಎಂದು ಆರೋಪಿಸಿದರು.
ತಾ.ಪಂ.ಸದಸ್ಯೆ ಶೈಲಾಶಶಿಧರ್ ಮಾತನಾಡಿ, ಸಭೆಗೆ ಅಧಿಕಾರಿಗಳೇ ಆಗಮಿಸಬೇಕು, ಅಧಿಕಾರಿಗಳು ಅವರ ಸಹಾಯಕರನ್ನು ಕಳುಹಿಸುವುದಾದರೆ ಸರಿಯಾದ ದಾಖಲೆ ಇಟ್ಟುಕೊಂಡಿರಬೇಕು ಹಾಗೂ ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿರುವಂತಹವರನ್ನು ಮಾತ್ರ ಕಳುಹಿಸಬೇಕು ಎಂದು ತಾಕೀತು ಮಾಡಿದರಲ್ಲದೆ, ಪ್ರತಿ ಇಲಾಖೆಯವರು  ಸಾರ್ವಜನಿಕರ ಸಮಸ್ಯೆಯ ಬಗ್ಗೆ  ಕೇಳುವ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂಬ ಸಬೂಬು ಹೇಳದಂತೆ ವರದಿ ಸಿದ್ದಪಡಿಸಿರಬೇಕು ಎಂದು ಆಗ್ರಹಿಸಿದರು.
ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ ಮಾತನಾಡಿ, ಪಟ್ಟಣದ ಆಸ್ಪತ್ರೆಯಲ್ಲಿ 108 ತುತರ್ು ವಾಹನ ಕರೆ ಮಾಡಿದರೆ ಅದರ ವ್ಯವಸ್ಥೆಯೇ ಸರಿಯಾಗಿ ಇರುವುದಿಲ್ಲ ಎಂದರು.
ಆಸ್ಪತ್ರೆಯಲ್ಲಿ ನಡೆದ ಹೃದಯ ತಪಾಸಣೆ ಶಿಬಿರದ ಪ್ರಚಾರ ಸರಿಯಾಗಿ ನಡೆದಿಲ್ಲ, ತಪಾಸಣೆ ಎಷ್ಟು ಜನರಿಗೆ ನಡೆದಿದೆ ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡುತ್ತಿಲ್ಲ ಎಂದು ಸದಸ್ಯ ರಾಜ್ಕುಮಾರ್ ಹೇಳಿದರು.
ದಸೂಡಿ ಭಾಗದಲ್ಲಿ ಶಾಲಾ ಶಿಕ್ಷಕರ ಸಮಸ್ಯೆ ಹೆಚ್ಚಾಗಿದೆ ಅಲ್ಲಿಗೆ ತುತರ್ಾಗಿ ಶಿಕ್ಷಕರನ್ನು ನಿಯೋಜಿಸಿ ಆ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಎಂದು ಸದಸ್ಯ ಪ್ರಸನ್ನಕುಮಾರ್ ಹೇಳಿದರು.
ತಾಲ್ಲೂಕಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಕಳೆದ ಬಾರಿಗಿಂತ ಈ ಬಾರಿ ಕಡಿಮೆಯಾಗಿದೆ ಅದಕ್ಕಾಗಿ ಹೆಚ್ಚಿನ ಪರಿಹಾರ ಬೋಧನೆ ನಡೆಸುವಂತೆ ಬಿಇಓರವರಿಗೆ ತಿಳಿಸಿದರು.
ಬಿಇಓ ಕೃಷ್ಣಮೂತರ್ಿ ಮಾತನಾಡಿ, ದಸೂಡಿ, ತಾರೀಕಟ್ಟೆ, ಯರೇಕಟ್ಟೆ, ಬೋಜಿಹಳ್ಳಿ, ಅಣೆಕಟ್ಟೆ, ಓಟಿಕೆರೆ ಈ ಭಾಗದ ಆರು ಶಾಲೆಗಳಲ್ಲಿ ಶಿಕ್ಷಕರಿಲ್ಲ ಅದಕ್ಕಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದ ಅವರು,  ತಾಲ್ಲೂಕಿನಲ್ಲಿ ಆರ್.ಟಿ.ಇ ಅಡಿಯಲ್ಲಿ 19ಶಾಲೆಗಳಲ್ಲಿ ಖಾಲಿ ಇರುವ 163 ಮಕ್ಕಳ ಸೀಟ್ಗಳನ್ನು ತುಂಬಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ತಾಲ್ಲೂಕಿನಲ್ಲಿನ ನಿರಂತರ ಜ್ಯೋತಿ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಮಾಹಿತಿ ನೀಡಿ, ತಿಮ್ಮನಹಳ್ಳಿ ಭಾಗದಲ್ಲಿ ವಿದ್ಯುತ್ ಶಾಕ್ನಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರವೇನಾದರೂ ಬಂದಿದೆಯೇ ಹಾಗೂ ತಾಲ್ಲೂಕಿನ ಗ್ರಾಮೀಣ ಮಟ್ಟದ ಲೈನ್ಮೆನ್ಗಳು ಯೂನಿಫಾರಂ ಹಾಕದೇ ಇದ್ದಾರೆ ಇದರಿಂದ ಸಾರ್ವಜನಿಕರಿಗೆ ಲೈನ್ಮೆನ್ಗಳು ಯಾರೆಂಬುದು ಸರಿಯಾಗಿ ತಿಳಿಯುತ್ತಿಲ್ಲ ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಲೈನ್ಗಳಿಂದ ತೊಂದರೆಯಾಗುತ್ತಿರುವ ಭಾಗಗಳಲ್ಲಿ ಸರಿಯಾದ ಕ್ರಮಕೈಗೊಳ್ಳಿ, ಮುರಿದು ಬೀಳುತ್ತಿರುವ ವಿದ್ಯುತ್ ಕಂಬಗಳನ್ನು ಬದಲಿಸುವಂತೆ ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಬೆಸ್ಕಾಂ ಅಧಿಕಾರಿ ರಾಜಶೇಖರ್ರವರಿಗೆ ಸೂಚಿಸಿದರು. ಹೊಸಹಟಟಿ, ಕೆಂಪರಾಯನಹಟ್ಟಿ ಭಾಗಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುವ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ವಿದ್ಯುತ್ ಇಲ್ಲದ ತಾಲ್ಲೂಕಿನ ಬಡವಾಣೆಗಳಿಗೆ ವಿದ್ಯುತ್ ನೀಡುವ ಸೌಲಭ್ಯ ಹಾಗೂ ತಾಲ್ಲೂಕಿನಲ್ಲಿ ಎಷ್ಟು ಜನ ಲೈನ್ಮೆನ್ಗಳು ಯಾವ ಯಾವ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ಎಸ್.ಸಿ, ಎಸ್.ಟಿ ಜನಾಂಗದವರನ್ನು ಅಂತರಜಾತಿ ವಿವಾಹವಾಗಿರುವವರು  ಎಷ್ಟು ಜನವಿದ್ದಾರೆ, ಅಸ್ಪೃಷ್ಯತಾ ನಿವಾರಣಾ ಕಾರ್ಯಕ್ರಮಗಳನ್ನು ನಡೆಸಿದ ಹಾಗೂ ಅದಕ್ಕೆ ವೆಚ್ಚವಾದ, ಉಳಿದ ಹಣದ ಬಗ್ಗೆ ಅಂಕಿ-ಅಂಶದ ವರದಿ ಹಾಗೂ ಹುಳಿಯಾರಿನಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ವರದಿಯ ಬಗ್ಗೆ ನೀಡುವಂತೆ ಸದಸ್ಯರು ತಿಳಿಸಿದರು. 
ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂತರ್ಿ, ಸದಸ್ಯರುಗಳಾದ ಮಧು, ಕೇಶವಮೂತರ್ಿ, ಪ್ರಸನ್ನ, ಜಯಮ್ಮ, ಚೇತನಗಂಗಾಧರ್, ಹೆಚ್.ಎನ್.ಕುಮಾರ್, ಯತೀಶ್, ಕಲ್ಯಾಣಿಬಾಯಿ, ಆರ್.ಕಲಾವತಿ, ಇಂದ್ರಕುಮಾರಿ, ಜಯಮ್ಮ, ಚಂದ್ರಶೇಖರ್, ಚಂದ್ರಕಲಾ, ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್-1
ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಸಂಚಾರಿ ಪಶುಆಸ್ಪತ್ರೆಯ ಸಂಚಾರಿ ಘಟಕವನ್ನು ಸ್ಥಗಿಸಗೊಳಿಸಲು ತಾಲ್ಲೂಕು ಪಂಚಾಯ್ತಿ ಸಭೆ ಅನುಮೋದಿಸಬೇಕು ಎಂದು ಸಹಾಯಕ ಪಶುವೈದ್ಯಾಧಿಕಾರಯೇ ಮನವಿ ಸಲ್ಲಿಸಿದ ಅಪರೂಪದ ಘಟನೆ ನಡೆಯಿತು.
ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆ ಇದೆ. ಒಬ್ಬೊಬ್ಬ ಪಶುವೈದ್ಯರು ನಾಲ್ಕು ಪಶು ಆಸ್ಪತ್ರೆಯನ್ನು ನೋಡಿಕೊಳ್ಳುವ ಸ್ಥಿತಿ ಇದೆ. ಆದ್ದರಿಂದ ಸಂಚಾರಿ ಘಟಕವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದರು. ಸಿಟ್ಟಿಗೆದ್ದ ಸದಸ್ಯರು ಗ್ರಾಮಾಂತರ ಕುರಿಗಾಹಿ ಹಾಗೂ ಪಶುಸಾಗಣೆದಾರಿಗೆ ವರದಾನವಾಗಿರುವ ಯೋಜನೆಯನ್ನು ರದ್ದುಪಡಿಸಲು ಕೇಳುತ್ತೀರಲ್ಲ, ಕಾರ್ಯಬಾರ ಸರಿದೂಗಿಸಿಕೊಂಡು ಯೋಜನೆ ಮುಂದುವರೆಸಿ ಎಂದರು.

ಬಾಕ್ಸ್-2
ತಾಲ್ಲೂಕು ಪಂಚಾಯಿತಿ ಸಭೆ 11ಗಂಟೆಗೆ ನಿಗಧಿಯಾಗಿತ್ತು ಆದರೆ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ 12ಗಂಟೆಯಾದರೂ ಬಾರದಿದ್ದಕ್ಕೆ ಅಧ್ಯಕ್ಷರು,  ಉಪಾಧ್ಯಕ್ಷರನ್ನು ಕಾದು ಕುಳಿತರು, ಸದಸ್ಯರು ಕೋರಂ ಇದೆಯಲ್ಲಾ, ಸದಸ್ಯರೆಲ್ಲಾ ಒಂದು ಗಂಟೆಯಿಂದ ಕಾಯುತ್ತಿದ್ದೇವೆ  ಸಭೆ ಪ್ರಾರಂಭಿಸಿ ಎಂದಿದಕ್ಕೆ,  ಅಧ್ಯಕ್ಷರು ಮಾತ್ರ ಸಭೆಯನ್ನು ಪ್ರಾರಂಭಿಸಿದೆ, ಉಪಾಧ್ಯಕ್ಷರು ಬರಲಿ ಪ್ರಾರಂಭಿಸೋಣ ಎನ್ನುತ್ತಾ, ಉಪಾಧ್ಯಕ್ಷರಿಗೆ  ದೂರವಾಣಿ ಕರೆ ಮಾಡಿದ ನಂತರ ಉಪಾಧ್ಯಕ್ಷರು ಸಭೆಗೆ ಹಾಜರಾದರು. ಆಗ ಸಭೆ ಪ್ರಾರಂಭವಾಯಿತು.