Friday, July 23, 2010



ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಿಸದ ಉತ್ಪನ್ನಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜು.22: ಸಮಗ್ರ ಶಿಶು ಅಭಿವೃದ್ದಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಉಪವಿಭಾಗ ಮಟ್ಟದ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವು ಇದೇ ಜುಲೈ 23ರಿಂದ 25ರವರಗೆ ನಡೆಯಲಿದೆ.
ಮೇಳದ ಉದ್ಘಾಟನ ಸಮಾರಂಭವು ಜುಲೈ 23ರ ಶುಕ್ರವಾರ ಮಧ್ಯಾಹ್ನ 12-30ಕ್ಕೆ ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಆವರಣದ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಜಿ.ಪಂ.ಸದಸ್ಯರಾದ ಜಯಮ್ಮದಾನಪ್ಪ, ರಘುನಾಥ್ ಹೆಚ್.ಬಿ.ಹೊನ್ನಯ್ಯ, ಸುಶೀಲಸುರೇಂದ್ರಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ಲಿಂಗದೇವರು, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ ಆಗಮಿಸಲಿದ್ದು ವಿಶೇಷ ಆಹ್ವಾನಿತರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿದರ್ೇಶಕ ಹೆಚ್.ಕೆ.ದಾಸಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ ಡಾ.ವಿ.ವೇದಮೂತರ್ಿ ಉಪಸ್ಥಿತರಿರುವರು.
ಜಾತ್ರೆಯ ಪ್ರಯುಕ್ತ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.22: ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಉಯ್ಯಾಲೋತ್ಸವದ ಅಂಗವಾಗಿ 10ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಮಿತ್ರ ಕಲಾ ಸಂಘದ ವತಿಯಿಂದ ಇದೇ 24ರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ನಾಟಕದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು ಹುಳಿಯಾರು ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಂ.ಇ ಸಹಾಯಕ ಎಂ.ಎಸ್.ಚಂದ್ರಪ್ಪ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಸದಸ್ಯರಾದ ಗಾಯಿತ್ರಿದೇವಿ ಪುಟ್ಟಣ್ಣ, ಸಿ.ಪಿ.ಮಹೇಶ್, ಬಾಬುಸಾಹೇಬ್, ತಹಶೀಲ್ದಾರ್ ಟಿ.ಸಿ.ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿರುವರು.
ಐ.ಟಿ.ಐ.ಪರೀಕ್ಷೆಯಲ್ಲಿ ಅವ್ಯವಹಾರಕ್ಕೆ ಆಸ್ಪದವಿಲ್ಲ: ಎ.ಬಿ.ವಿ.ಪಿ
ಚಿಕ್ಕನಾಯಕನಹಳ್ಳಿ,ಜು.22: ಐ.ಟಿ.ಐ ಪರೀಕ್ಷೆಯಲ್ಲಿ ನಡೆಯುತ್ತಿರುವ ಪ್ರಶ್ನ ಪತ್ರಿಕೆ ಡೀಲ್ಗಳನ್ನು ತಡೆಯುವುದಕ್ಕೆ ಅಭಾವಿಪ ಸಂಘಟನೆ ಸಜ್ಜಾಗಿದ್ದು ನಕಲಿ ನಡೆದರೆ ಆ ಸ್ಥಳಗಳಿಗೆ ಪೋಲಿಸರ ಸಹಾಯದೊಂದಿಗೆ ಅಭಾವಿಪ ಕಾರ್ಯಕರ್ತರು ದಾಳಿ ಮಾಡಲಿದ್ದಾರೆ ಎಂದು ಅಭಾವಿಪ ನಗರ ಕಾರ್ಯದಶರ್ಿ ಚೇತನ್ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐ.ಟಿ.ಐ ನಡೆಸುವ ಸಂಸ್ಥೆಗಳೇ ವಿದ್ಯಾಥರ್ಿಗಳಿಂದ ಹಣ ವಸೂಲಿ ಮಾಡಿ ಪ್ರಶ್ನೆಪತ್ರಿಕೆ ನೀಡುತ್ತಿವೆ ಎಂಬ ಮಾಹಿತಿ ಅಭಾವಿಪ ಘಟಕಕ್ಕೆ ಬಂದಿದ್ದು ಯಾವುದೇ ವಿದ್ಯಾಥರ್ಿಗಳು ಸಂಸ್ಥೆಗಳಿಗೆ ಹಣ ನೀಡದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯಲು ತಿಳಿಸಿದರೆ. ಈ ಸ್ಕ್ಯಾಂಡಲ್ನಲ್ಲಿ ಯಾವುದೇ ಸಂಸ್ಥೆಗಳು ಕೈಜೋಡಿಸಿದ್ದರೆ ಅಂತಹ ಸಂಸ್ಥೆಗಳ ಅನುಮತಿಯನ್ನು ರದ್ದುಗೊಳಿಸುವಂತೆ ಸಕರ್ಾರಕ್ಕೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಶತಾಯುಷಿ ಮುದ್ದಪ್ಪ ನಿಧನ
ಚಿಕ್ಕನಾಯಕನಹಳ್ಳಿ,ಜು.22: ಪಟ್ಟಣದ ಹಿರಿಯ ನಾಗರಿಕ, ಕುರುಬ ಸಮಾಜದ ಧಾಮರ್ಿಕ ವಿಧಿವಿಧಾನಗಳ ಅನುಭವಿ, ಶತಾಯುಷಿ ಮಠದ ಮುಂದಲ ಮುದ್ದಪ್ಪ ನಿಧನರಾಗಿದ್ದಾರೆ.
ಪಟ್ಟಣದ ವಿವಿಧ ಧಾಮರ್ಿಕ ಕೆಲಸ ಕಾರ್ಯಗಳಲ್ಲಿ ಮುಂಚುಣಿಯಲಿದ್ದ ಮುದ್ದಪ್ಪನವರಿಗೆ ನೂರ ಒಂದು ವರ್ಷಗಳ ತುಂಬು ಜೀವನ ನಡೆಸುತ್ತಿದ್ದರು. ಶ್ರೀ ರೇಣುಕ ಜಯಂತಿ ಮಹೋತ್ಸವವದ ವಿಶ್ವಸ್ಥ ಮಂಡಳಿಯ ಪ್ರಮುಖರಾಗಿದ್ದರು.
ಮೃತರು ಪತ್ನಿ, ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಹಾಗೂ ಬಂಧುಭಾಂದವರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು, ಪುರಸಭಾ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ದೊರೆಮುದ್ದಯ್ಯ, ಸಿ.ಪಿ.ಮಹೇಶ್,ಸುಮಿತ್ರ ಕಣ್ಣಯ್ಯ, ಮಾಜಿ ಪುರಸಭಾ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಭೈರವ ಮಿನರಲ್ಸ್ನ ಸಿ.ಡಿ.ಸುರೇಶ್ ಸೇರಿದಂತೆ ಹಲವರು ಆಗಮಿಸಿದ್ದರು.