Monday, April 26, 2010

'ಸುಡುಗಾಡು ಸಿದ್ದ'ರಿಂದ ಗ್ರಾ. ಪಂ.ಚುನಾವಣಾ ಬಹಿಷ್ಕಾರ......?!

(ಚಿಗುರು ಕೊಟಿಗೆಮನೆ)

ಚಿಕ್ಕನಾಯಕನಹಳ್ಳಿ,ಏ.26: ತಾಲೂಕಿನ ನೂರಕ್ಕೂ ಹೆಚ್ಚಿನ ಸುಡಗಾಡು ಸಿದ್ದರ ಕುಟುಂಬಗಳು ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿವೆ.

ಕಳೆದ ಇಪ್ಪತ್ತು ವರ್ಷಗಳಿಂದ ನಾವು ಸಕರ್ಾರಕ್ಕೆ ನಿವೇಶನ ಕೊಡುವಂತೆ ಕೋರಿ ಸಲ್ಲಿಸಿದ ಮನವಿಗೆ ಪುರಸ್ಕಾರ ಸಿಕ್ಕಿಲ್ಲ ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿರ್ಲಕ್ಷ ವಹಿಸಿವೆ, ನಮ್ಮ ಬೇಡಿಕೆ ಪೂರೈಸದ ಜನರಿಗೆ ನಾವೇಕೆ ಓಟು ಹಾಕಬೇಕು ಎಂಬ ನಿಲುವನ್ನು ವ್ಯಕ್ತ ಪಡಿಸುವ ಈ ಜನರು, ಕಳೆದ ಇಪ್ಪತ್ತು ವರ್ಷಗಳಿಂದ ಸಕರ್ಾರಿ ಜಮೀನಿನಲ್ಲೇ ಗುಡಿಸಲುಗಳನ್ನು ಹಾಕಿಕೊಂಡಿದ್ದು, ಈ ಸ್ಥಳಗಳನ್ನೇ ನಮಗೆ ಮಂಜೂರ ಮಾಡಿಕೊಡುವಂತೆ ಕೋರಿ ರಾಜ್ಯಪಾಲರಿಂದ ಹಿಡಿದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ವರೆಗೆ ಎಲ್ಲರಿಗೂ ಅಜರ್ಿ ಕೊಟ್ಟರೂ ನಮ್ಮ ಕೆಲಸವಾಗಿಲ್ಲ ಎಂದು ದೂರಿದ್ದಾರೆ.

ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಬೆಣ್ಣೆಯಂತಹ ಮಾತುಗಳನ್ನು ಹಾಡಿಕೊಂಡು ನಮ್ಮ ಬಳಿ ಬರುವ ಅಭ್ಯಾಥರ್ಿಗಳಿಗೆ ಈ ಭಾರಿ ನಾವು ಎಷ್ಟು ಮುಖ್ಯರು ಎಂಬುದನ್ನು ತೋರಿಸುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.

ತಾಲೂಕಿನ ಕಾತ್ರಿಕೆಹಾಳ್, ಸಿಂಗದಹಳ್ಳಿ, ಕೇದಿಗೆಹಳ್ಳಿ ಪಾಳ್ಯದ ಗುಂಡು ತೋಪು ಹಾಗೂ ಹೊಯ್ಸಲಕಟ್ಟೆಗಳಲ್ಲಿ ವಾಸಿಸುವ ಈ ಜನಾಂಗದವರು ಕಳೆದ 20 ವರ್ಷಗಳಿಂದ ಒಂದೇ ಕಡೆ ನೆಲೆಸಿದ್ದು ಸ್ಥಳೀಯ ತೋಟಗಳಲ್ಲಿ ಹಾಗೂ ಹೋಲಗಳಲ್ಲಿ ಕೃಷಿ ಕಾಮರ್ಿಕರ ಕೆಲಸವನ್ನು ಮಾಡುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಈ ಜನರು, ನಾವು ಕಳೆದ 20 ವರ್ಷಗಳಿಂದ ನಿಗಧಿತ ಸ್ಥಳದಲ್ಲಿ ವಾಸಿಸುತ್ತಿದ್ದೇವೆ ಎಂಬುದಕ್ಕೆ ವಾಸಸ್ಥಳ ಧೃಡೀಕರಣ ಪತ್ರವನ್ನು ಇದೇ ಸ್ಥಳೀಯ ಸಂಸ್ಥೆಗಳು ನೀಡಿವೆ. ಆದರೆ ಉಚಿತ ನಿವೇಶನವನ್ನು ಮಾತ್ರ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಕಳೆದ 15 ವರ್ಷಗಳಿಂದ ಅಲೆದಾಟವನ್ನು ಆರಂಭಿಸಿದ್ದು, ನೂರಾರು ಬಾರಿ ಅಜರ್ಿ ಸಲ್ಲಿಸಿದ್ದೇವೆ, ಅಜರ್ಿ ಸಲ್ಲಿಸಿದ್ದಕ್ಕೆ ದಾಖಲೆಗಳನ್ನು ಇಟ್ಟು ಕೊಂಡಿದ್ದೇವೆ ಎನ್ನುವ ಗೌರಮ್ಮ, ಜೋಪಡಿಗಳಲ್ಲಿ ವಾಸ ಮಾಡುವ ನಾವು ನಿದ್ರೆಯಲ್ಲೂ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಮಲಗಬೇಕಾದ ಸಂದರ್ಭಗಳೂ ಉಂಟು, ಕಾರಣ ನಾವು ಜೀವಿಸುವುದು ಹಾವು, ಜೇಳು, ಮಂಡ್ರಗಪ್ಪೆಗಳು ವಾಸ ಮಾಡುವ ಜಾಗದಲ್ಲಿ, ಅವು ನಮ್ಮ ಪ್ರಾಣಕ್ಕೆ ಯಾವಾಗ ಬೇಕಾದರೂ ಸಂಚಕಾರ ತರಬಲ್ಲವು ಎನ್ನುವ ಸಿಂಗದಹಳ್ಳಿ ಮಾರಯ್ಯ, ಈ ಬಾರಿ ಜೋರಾದ ಗಾಳಿಯೊಂದಿಗೆ ಮಳೆ ಬಂದಂತಹ ಸಂದರ್ಭದಲ್ಲಂತೂ ಜೀವವೇ ಬಾಯಿಗೆ ಬಂದಂತಾಯಿತು ಎನ್ನುವ ಮೂಲಕ ಭಾವೋದ್ವೇಗಕ್ಕೆ ಒಳಗಾಗುತ್ತಾರೆ.

ಹೆಂಚು, ಶೀಟುಗಳಿರುವ ಮನೆಗಳೇ ಈ ಮಳೆಯಲ್ಲಿ ಅಧ್ವಾನವಾಗಿ ಹೋಗಿರುವಾಗ, ನಮ್ಮ ಗುಡಿಸಲುಗಳ ಸ್ಥಿತಿ ಹೇಗಾಗಿರಬೇಕೆಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುವ ಕಾತ್ರಿಕೆಹಾಳ್ನ ಶಂಕ್ರಯ್ಯ, ನಮಗೆ ನಿವೇಶನ ನೀಡಿ, ಆಶ್ರಯ ಮನೆಯಲ್ಲಿ ಅವಕಾಶ ಕಲ್ಪಿಸಿ ಎಂದು ಹಲವು ಸಲ ಅಲವತ್ತುಕೊಂಡರೂ ನಮ್ಮ ಬಗ್ಗೆ ಕರುಣೆ ತೋರದ ಜನಪ್ರತಿನಿಧಿಗಳಿಗೆ ನಾವೇಕೆ ಓಟು ಹಾಕಬೇಕು, ನಮ್ಮ ಕಷ್ಠಕ್ಕೆ ಯಾರು ಸ್ಪಂಧಿಸುತ್ತಾರೆ, ನಮ್ಮ ಬೇಡಿಕೆಗಳನ್ನು ಯಾರು ಈಡೇರಿಸಿಯೇ ತೀರುತ್ತೇವೆಂದು ನಮ್ಮ ಬಳಿಗೆ ಬರುವವರೆಗೆ ನಾವು ಚುನಾವಣೆಗಳಲ್ಲಿ ಭಾಗವಹಿಸಬಾರದೆಂಬ ನಿಧರ್ಾರಕ್ಕೆ ಬಂದಿದ್ದೇವೆ ಎಂದು ಕಾತ್ರಿಕೆಹಾಳ್ನ ಅಂಬಿಕಾ ಹೇಳುತ್ತಾರೆ.

ನಾವು ಅಧಿಕೃತವಾಗಿ ಸಕರ್ಾರಿ ಕಛೇರಿಗೆ 1995ರಿಂದಲೂ ಅಜರ್ಿ ಸಲ್ಲಿಸುತ್ತಲೇ ಬಂದಿದ್ದೇವೆ ಎಂದು ದಾಖಲೆ ಸಮೇತ ತೋರಿಸುವ ಇವರು, ಕಳೆದ ಡಿಸೆಂಬರ್ 14 ರಂದು ಪಟ್ಟಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯಪಾಲರಿಗೂ ಮನವಿ ಪತ್ರವನ್ನು ನೀಡಿದ್ದು, ಈ ಸಂಬಂಧ ರಾಜ್ಯಪಾಲರು ಸಹ ಸಕರಾತ್ಮಕವಾಗಿ ಸ್ಪಂದಿಸಿ ಜಿಲ್ಲಾಧಿಕಾರಿಗಳಿಗೆ ಡಿ.17 ರಂದೇ ಪತ್ರ ಬರೆದಿದ್ದಾರೆ ಆದರೂ ಸಹ ಪ್ರಯೋಜನವಾಗಿಲ್ಲ ಎನ್ನುವ ಗುಂಡುತೋಪಿನ ವೆಂಕಟೇಶ್, ರಾಜ್ಯಪಾಲರಿಗೆ ಅಜರ್ಿ ಕೊಟ್ಟ ನಂತರ ನಮಗೆ ನಾವೀಗಿರುವ ಸ್ಥಳದಿಂದ ಎತ್ತಂಗಡಿ ಮಾಡುವಂತೆ ತಹಶೀಲ್ದಾರ್ ನೋಟೀಸ್ ನೀಡಿದ್ದಾರೆ ಎಂದು ಮಮ್ಮಲಮರುಗುವ ವೆಂಕಟೇಶ್, ನಾವು ಈ ದೇಶದ ಪ್ರಜೆಯೇ ಅಲ್ಲವೇ, ನಮಗೆ ಇಲ್ಲಿ ವಾಸಿಸುವ ಹಕ್ಕೇ ಇಲ್ಲವೆ, ನಾವೇನು ಯಾರದೊ ಖಾಸಗಿ ಸ್ವತ್ತಿನಲ್ಲಿ ವಾಸ ಮಾಡುತ್ತಿಲ್ಲ ಎಂದು ಕಣ್ಣಂಚಲಿ ನೀರು ತುಂಬಿಕೊಂಡು ಮಾತನಾಡುವ ವೆಂಕಟೇಶ್, ಈ ಜಾಗ ಗುಂಡಿಗೊಟರುಗಳಿಂದ ಕೂಡಿದ್ದ ಸ್ಥಳ, ಇಲ್ಲಿ ಹಂದಿ-ನಾಯಿ ಮತ್ತಿತರ ಪ್ರಾಣಿಗಳು ವಾಸಿಸುತ್ತಿದ್ದವು, ಅವುಗಳನ್ನೇಲ್ಲಾ ಓಡಿಸಿ ಈಗ ನಾವು ವಾಸಿಸುತ್ತಿದ್ದೇವೆ, ಆ ಪ್ರಾಣಿಗಳು ವಾಸಿಸುತ್ತಿದ್ದಾಗ ಅಧಿಕಾರಿಗಳಿಗೆ ಈ ಜಾಗ ಸಕರ್ಾರಿ ಜಮೀನು ಅನ್ನಿಸರಲಿಲ್ಲವೆ, ಯಾವಾಗ ನಾವು ಇಲ್ಲಿ ಗುಡಿಸಲು ಹಾಕಿಕೊಂಡವೊ ಹಾಗೂ ಈ ಜಾಗದಲ್ಲಿ ನಮಗೂ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ ಎಂದು ಅಧಿಕಾರಿಗಳನ್ನು ಮನವಿ ಮಾಡಿಕೊಂಡೆವೊ, ಆಗ ಈ ಅಧಿಕಾರಿಗಳಿಗೆ ಇದು ಸಕರ್ಾರಿ ಜಾಗ ಎಂಬ ಸುಳಿವು ಸಿಕ್ಕಿತೇ ಎನ್ನುವ ವೆಂಕಟೇಶ್, ಈ ಸವರ್ೇ ನಂಬರಿನಲ್ಲಿರುವ ಜಾಗದಲ್ಲಿ ಬೇರೆ ಜನಕ್ಕೆ ಹಕ್ಕು ಪತ್ರಗಳನ್ನು ಕೊಡಲು ಸಾಧ್ಯವಾಗಿದೆ, ನಾವು ಕೇಳಿದರೆ ಕೊಡಲು ಇಲ್ಲದ ಕಾನೂನುಗಳನ್ನು ಹೇಳುವ ಈ ಅಧಿಕಾರಿಗಳು ನಮ್ಮಂತಹ ಬಡವರು ಇಲ್ಲಿ ವಾಸ ಮಾಡಲು, ಬದುಕು ಕಟ್ಟಿಕೊಳ್ಳಲು ಅವಕಾಶವಿಲ್ಲವೆ ಎಂದು ಮುಗ್ದವಾಗಿ ಪ್ರಶ್ನಿಸುತ್ತಾರೆ. ಇವರ ಪ್ರಶ್ನೆಗೆ ಉತ್ತರ ಕೊಡಬೇಕಾದ ಜನ ಚುನಾವಣೆಯಲ್ಲಿ ತಮ್ಮ 'ನೆಲೆಯನ್ನು' ಕಂಡುಕೊಳ್ಳಲು ಬ್ಯೂಸಿಯಾಗಿದ್ದಾರೆಯೇ..........?
ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಏ.26: ಲಿಂಗಾಯಿತ ಉಪಜಾತಿಗಳಾದ ಸಾದರ ಪಂಗಡಗಳನ್ನು ಹಿಂದುಳಿದ 2ಎ ಪ್ರಮಾಣ ಪತ್ರ ಕೊಟ್ಟಿರುವುದು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರ ಮೊಟಕುಗೊಳಿಸಿರುವುದನ್ನು ವಿರೋಧಿಸಿ ತುಮಕೂರಿನಲ್ಲಿ ಇದೇ 28ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಹಿಂದಾ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣಾ ಹಿನ್ನೆಲೆಯಲ್ಲಿ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದುಳಿದ 2ಎ ಪ್ರಮಾಣ ಪತ್ರ ಕೊಡುವ ಮೂಲಕ ಮೀಸಲಾತಿ ಖೋಟಾವನ್ನು ದುರುಪಯೋಗ ಪಡಿಸಕೊಳ್ಳಲಾಗುತ್ತಿದೆ ಎಂದಿರುವ ಅವರು, ಅದೇ ರೀತಿ ಜಾತಿವಾರು ಜನಗಣತಿಯಂತಹ ಮಹತ್ವದ ಕೆಲಸವನ್ನು ಕೈಗೆತ್ತಿಕೊಳ್ಳಲು ಇಚ್ಚಾಶಕ್ತಿಯನ್ನು ತೋರಿಸುವಲ್ಲಿ ಹಿಂದೇಟು ಹಾಕುತ್ತಿರುವ ಬಿ.ಜೆ.ಪಿ.ಸಕರ್ಾರ, ಈಗ ಹಿಂದುಳಿದ ಆಯೋಗದ ಅಧಿಕಾರವನ್ನು ಮೊಟಕು ಗೊಳಿಸುವ ಆದೇಶವನ್ನು ಹೊರಡಿಸುವ ಮೂಲಕ ಹಿಂದುಳಿದ ವರ್ಗಗಳ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ, ಈ ಎಲ್ಲಾ ಅಂಶವನ್ನು ಖಂಡಿಸಿ ಹಾಗೂ ಸಕರ್ಾರಕ್ಕೆ ತನ್ನ ತಪ್ಪನ್ನು ಅರಿವು ಮಾಡಿಕೊಡುವ ಸಲುವಾಗಿ ಇದೇ 28ರ ಬುಧವಾರ ಬೆಳಿಗ್ಗೆ 11ಕ್ಕೆ ಪ್ರತಿಭಟನಾ ಮೆರವಣಿಗೆಯು ತುಮಕೂರಿನ ಟೌನ್ಹಾಲ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಛೇರಿ ತಲುಪಲಿದ್ದು ಅಲ್ಲಿ ಧರಣಿ ನಡೆಸಲಾಗುವುದು ಆದ್ದರಿಂದ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಿ.ಲಿಂ.ರವಿಕುಮಾರ್ ಕೋರಿದ್ದಾರೆ.