Friday, June 3, 2016



ಸಾಲ್ಕಟ್ಟೆ ತಾಂಡ್ಯಕ್ಕೆ ಕಂದಾಯಾಧಿಕಾರಿಗಳ ತಂಡ ಭೇಟಿ.
ಅಧಿಕಾರಿಗಳೊಂದಿಗೆ ತಮ್ಮ ಅಳಲು ತೋಡಿಕೊಂಡ ಬಹಿಷ್ಕಾರಕ್ಕೆ ಒಳಗಾದ ಕುಟುಂಬ
ಅಧಿಕಾರಿಗಳೊಂದಿಗೆ ಗ್ರಾಮದ ಮುಖಂಡ ಪತ್ಯೇಕ ಹೇಳಿಕೆ.
ಹೌದು, ದೇವಸ್ಥಾನದ ಖಚರ್ು ಕೊಡುವವರೆಗೆ ಅವರೊಂದಿಗೆ ನಮ್ಮದು ಇದೇ ಸ್ಥಿತಿ.
ನಮ್ಮ ಸಂಘದವರೇ ಏನು ಮಾಡಲಾಗಿಲ್ಲ, ಯಾರು ಬಂದರೂ ಏನು ನಮ್ಮನ್ನೇನು ಮಾಡಲಾಗದು:  ಗ್ರಾಮದ ಮುಖಂಡನ ಹೇಳಿಕೆ.
ಚಿಕ್ಕನಾಯಕನಹಳ್ಳಿ,ಜೂ.03 : ಸಾಲ್ಕಟ್ಟೆ ತಾಂಡ್ಯದಲ್ಲಿ ಶಂಕರನಾಯ್ಕ ಮತ್ತು ಮೂತರ್ಿನಾಯ್ಕ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಕುರಿತು ಪರಿಶೀಲನೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ  ಕಂದಾಯಾಧಿಕಾರಿಗೆ, ಗ್ರಾಮಸ್ಥರು ಹೇಳಿಕೆ ನೀಡಿ ಆ ಎರಡೂ ಕುಟುಂಬಗಳು ದೇವಸ್ಥಾನ ಕಟ್ಟಲು ಹಣ ನೀಡದೇ ಇರುವುದರಿಂದ ಅವರನ್ನು ದೂರ ಇಟ್ಟಿರುವುದಾಗಿ ತಿಳಿಸಿದ್ದಾರೆ.  
ತಾಲ್ಲೂಕಿನ ಸಾಲ್ಕಟ್ಟೆ ಲಂಬಾಣಿ ತಾಂಡ್ಯದಲ್ಲಿ ಎರಡು ಕುಟುಂಬಗಳಿಗೆ ಕಳೆದ ಐದು ವರ್ಷಗಳಿಂದ ಬಹಿಷ್ಕಾರ ಹಾಕಿರುವ ಕುರಿತು ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಕಂದಾಯಾಧಿಕಾರಿ ವಿ.ಕೃಷ್ಣಪ್ಪ ಹಾಗೂ ಗ್ರಾಮಲೆಕ್ಕಾಧಿಕಾರಿ ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅವರು ತಾಂಡ್ಯದ ಮುಖಂಡರೊಂದಿಗೆ ಹಾಗೂ   ಬಹಿಷ್ಕಾರಕ್ಕೆ ಒಳಗಾಗಿರುವ ಎರಡು ಕುಟುಂಬದವರೊಂದಿಗೆ  ಮಾತನಾಡಿದ್ದು, ಈರ್ವರ ವರದಿಯನ್ನು ತಹಶೀಲ್ದಾರ್ಗೆ ಸಲ್ಲಿಸಲಿದ್ದೇವೆ ಎಂದು ಆರ್.ಐ.ಕೃಷ್ಣಪ್ಪ ತಿಳಿಸಿದರು.  
ಅಧಿಕಾರಿಗಳ ತಂಡದೊಂದಿಗೆ ಮಾತನಾಡಿದ ಬಹಿಷ್ಕಾರಕ್ಕೆ ಒಳಗಾಗಿರುವ ಶಂಕರ್ನಾಯ್ಕ್, ಗ್ರಾಮದಲ್ಲಿ ನಮಗೆ ಬಹಿಷ್ಕಾರ ಹಾಕಿರುವುದರಿಂದ ನಮ್ಮ ಮನೆಗೆ ಕೆಲಸಕ್ಕೆ ಬರುವ ಜನರಿಗೂ ದಂಡ ವಿಧಿಸಿದ್ದಾರೆ, ನಮ್ಮ ಕುಟುಂಬದವರು ತೀರಿ ಹೋದಾಗ ಗ್ರಾಮದ ಯಾರೊಬ್ಬರೂ ನೆರವಿಗೆ ಬಾರದೇ ಕುಟುಂಬದವರೇ ಎಲ್ಲಾ ಕಾರ್ಯ ಮುಗಿಸಿದ್ದೇವೆ,  ಸಣ್ಣ ಗಲಾಟೆಯಲ್ಲಿ ಶುರುವಾದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡರೂ ಕರಿಯಾನಾಯ್ಕ, ಗೋಪ್ಯಾನಾಯ್ಕ, ಗುಂಡಾನಾಯ್ಕ, ಕೃಷ್ಣನಾಯ್ಕ ಎಂಬುವವರೇ ದೇವರ ಹೆಸರಿನಲ್ಲಿ ದಂಡ ವಿಧಿಸಿ ಹಣ ಕೊಟ್ಟರೆ ಗ್ರಾಮದ ಕೆಲಸಗಳಿಗೆ ಸೇರಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಎಂದರು.
ಬಹಿಷ್ಕಾರಕ್ಕೆ ಒಳಗಾಗಿರುವ ನಾಗರತ್ನಮ್ಮ ಮಾತನಾಡಿ, ಕೂಲಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಕುಟುಂಬ ನಮ್ಮದು, ನಮ್ಮ ಮನೆಗೆ ಗ್ರಾಮದ ಸಣ್ಣ ಮಕ್ಕಳು ಬರುವಂತಿಲ್ಲ, ಹಿರಿಯರೂ ಬರುವಂತಿಲ್ಲ ಬಂದರೆ ಅವರಿಗೂ ದಂಡ ವಿಧಿಸುತ್ತಾರೆ, ಅಂಗಡಿಗೆ ಹೋದರೆ ಅಲ್ಲಿಯೂ ನಮಗೆ ಬರಬೇಡಿ ನಿಮ್ಮಿಂದ ನಮಗೂ ದಂಡ ವಿಧಿಸುತ್ತಾರೆ, ಮನೆಯಲ್ಲಿ ಮಕ್ಕಳಿಗೆ ಮದುವೆ ಮಾಡಬೇಕು ಬಹಿಷ್ಕಾರ ಹಾಕಿರುವುದರಿಂದ ನಮ್ಮ ಮನೆಗೆ ಯಾರೇ ಬಂದರೂ ಅವರಿಗೆ ಇಲ್ಲಸಲ್ಲದನ್ನು ಹೇಳಿ ವಾಪಾಸ್ ಕಳುಹಿಸುತ್ತಿದ್ದಾರೆ,  ನಮಗೆ ನ್ಯಾಯ ದೊರಕಿಸಿಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  
ದೇವಸ್ಥಾನಕ್ಕೆ ಹಣ ಕೊಡುವವರಿಗೂ ಆ ಕುಟುಂಬಗಳಿಗೆ ಇದೇ ಸ್ಥಿತಿ: ಗ್ರಾಮದ ಮುಖಂಡ  ಗೋಪ್ಯಾನಾಯ್ಕ ಮಾತನಾಡಿ, ಈರ್ವರಿಗೆ ನಾವು ಬಹಿಷ್ಕಾರ ಹಾಕಿಲ್ಲ, ಗ್ರಾಮದ ದೇವಸ್ಥಾನಕ್ಕೆ ಹಣ ಕೇಳಿದೆವು ಅವರು ಕೊಟ್ಟಿಲ್ಲ, ದೇವಸ್ಥಾನಕ್ಕೆ ಹಣ ನೀಡದಿದ್ದ ಮೇಲೆ ಅವರು ನಮ್ಮೊಂದಿಗೆ ಮಾತನಾಡಿ ಏನಾಗಬೇಕಾಗಿದೆ, ಅವರೊಂದಿಗೆ ಒಕ್ಕುಬಳಕೆ ಮಾಡಿಕೊಂಡು ಎನಾಗಬೇಕಿದೆ ಎಂದು ಠೇಕರಿಸಿ ಮಾತನಾಡಿದರಲ್ಲದೆ,  ತಾಲ್ಲೂಕು ಬಂಜಾರ ಸಂಘದ ಅಧ್ಯಕ್ಷ ರಘುನಾಥ್ ಬಂದು ಸಭೆ ಮಾಡಿದರೂ ಏನೂ ಮಾಡಲಿಕ್ಕೆ ಆಗಲಿಲ್ಲ ಎಂದರು. 

ಕಸಾಪ ವತಿಯಿಂದ ಪರಿಸರ ದಿನಾಚಾರಣೆ
ಚಿಕ್ಕನಾಯಕನಹಳ್ಳಿ,ಜೂ.03: ತಾ.ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಶ್ವ ಪರಿಸರ ದಿನಾಚಾರಣೆ, ಪ್ರತಿಭಾ ಪುರಸ್ಕಾರ ಮತ್ತು ಕಸಾಪ ಮುನ್ನೋಟ-ಒಂದು ಅನುಸಂಧಾನ ಕ.ಸಾ.ಪ.ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಚೈತನ್ಯ ಪೂರಣ ಕಾರ್ಯಕ್ರಮವನ್ನು ಜೂನ್ 5ರ ಭಾನುವಾರ ಏರ್ಪಡಿಸಲಾಗಿದೆ.
ಪಟ್ಟಣದ ಜಗಜೀವನರರಾಂ ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಜಿ.ಕಸಾಪ ಅಧ್ಯಕ್ಷ ಬಾ.ಹ.ರಮಾಕುಮಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರರಾವ್ ಪರಿಸರ ದಿನದ ಆಶಯ ಬಗ್ಗೆ ಮಾತನಾಡಲಿದ್ದಾರೆ. ಸಾಹಿತಿ ಬಿಳಿಗೆರೆ ಕೃಷ್ಣಮೂತರ್ಿ ಕಸಾಪ ನೂತನ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ತಾರಕೇಶ್ವರ, ವಲಯ ಅರಣ್ಯ ಅಧಿಕಾರಿ ಲಕ್ಷ್ಮೀನಾರಾಯಣ ಉಪಸ್ಥಿತರಿರುವರು. ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. 
ಇದೇ ಸಂದರ್ಭದಲ್ಲಿ ಎಸ್.ಎಸ್ಎಲ್.ಸಿಯಲ್ಲಿ ಕನ್ನಡದಲ್ಲಿ ಪ್ರತಿಶತ ನೂರು ಅಂಕ ಪಡೆದ ತಾಲ್ಲೂಕಿನ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಮಧ್ಯಾಹ್ನ ಹೋಬಳಿ ಮಟ್ಟದ ಸಮಿತಿಗಳ ಅಧ್ಯಕ್ಷರಿಂದ ಕನ್ನಡದ ಸವಾಲು ಮತ್ತು ಸಾಧ್ಯತೆಗಳ ಮಂಡನೆಯ ಅಧಿವೇಶನ ನಡೆಯಲಿದೆ.


ನಿವೃತ್ತ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ಅಸ್ಥಿತ್ವಕ್ಕೆ
ಚಿಕ್ಕನಾಯಕನಹಳ್ಳಿ,ಜೂ.03 : ತಾಲ್ಲೂಕು ಸಕರ್ಾರಿ ನಿವೃತ್ತ ನೌಕರರ ಸಂಘದ 2016ರಿಂದ 2020ರವರೆಗೆ ನೂತನ ಕಾರ್ಯಕಾರಿ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.
ಗೌರವಾಧ್ಯಕ್ಷರಾಗಿ ಸಿ.ರಾಮಯ್ಯ, ಅಧ್ಯಕ್ಷರಾಗಿ ಸಿ.ಡಿ.ರುದ್ರಮುನಿ, ಉಪಾಧ್ಯಕ್ಷರಾಗಿ ಎನ್.ಬಿ.ನಂಜುಂಡಯ್ಯ, ಕೆ.ರಂಗನಾಥ್, ಸಿ.ಎಲ್.ಜಯಮ್ಮ, ಪ್ರಧಾನ ಕಾರ್ಯದಶರ್ಿ ರಾಜಪ್ಪ, ಸಹ ಕಾರ್ಯದಶರ್ಿ ವಿಶ್ವನಾಥ್, ಖಜಾಂಚಿ ಬಟ್ಲೇರಿ ಶಂಕರಪ್ಪ, ಲೆಕ್ಕ ಪರಿಶೋಧಕರಾಗಿ ಅನಂತಯ್ಯ, ಸಾಂಸ್ಕೃತಿಕ ಕಾರ್ಯದಶರ್ಿ ಆರ್.ಆಂಜನೇಯ, ಸಂಘಟನಾ ಕಾರ್ಯದಶರ್ಿ ರಾಜಶೇಖರಯ್ಯ ಎಂ.ವಿ., ಹಿರಿಯ ಸಲಹೆಗಾರರು ಜಿ.ಪುಟ್ಟಯ್ಯ, ರಾಮಕೃಷ್ಣಯ್ಯ, ವಿಶ್ವೇಶ್ವರಯ್ಯ ಸಿ.ಕೆ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಮಂಡಳಿಯ ನಿದರ್ೇಶಕರುಗಳಾಗಿ ಮಹಲಿಂಗಯ್ಯ(ಸವರ್ೆ), ವೆಂಕಟಮ್ಮ, ಹನುಮಂತಯ್ಯ, ಅಡವಪ್ಪ, ಗಂಗಾಧರಯ್ಯ, ಕೆ.ಹೆಚ್.ರಾಮಯ್ಯ, ಕೆ.ಸಿ.ಬಸವಯ್ಯ, ಎಸ್.ಆರ್.ನರಸಿಂಹಯ್ಯ, ಶ್ರೀನಿವಾಸಶ್ರೇಷ್ಠಿ, ಎಸ್.ಆರ್.ಶಾಂತಪ್ಪ, ಶಿವಣ್ಣ, ವಿಶ್ವೇಶ್ವರಯ್ಯ ಆಯ್ಕೆಯಾಗಿದ್ದಾರೆ.