Monday, November 14, 2011




.ನಾನು ಎಂಬ ಅಹಂಕಾರ ಬಿಟ್ಟಾಗಲೇ ಜೀವನ ಸಾಮರಸ್ಯದಿಂದ ಕೂಡಿರುವುದು  ಸಿ.ಬಿ.ಎಸ್ 
ಚಿಕ್ಕನಾಯಕನಹಳ್ಳಿ,ನ.14: ಕನಕದಾಸರ ನುಡಿಮುತ್ತಿನಂತೆ ನಾನು ಎಂಬ ಅಹಂಕಾರ ಬಿಟ್ಟು ನಾವು ಎಂಬ ಭಾವನೆ ಬೆಳಸಿಕೊಂಡಾಗ ಮಾತ್ರ ಸಮಾಜದಲ್ಲಿ ಜೀವಿಸುವವರು ಸಾಮರಸ್ಯ ಜೀವನ ನಡೆಸಲು ಸಾಧ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಕನಕ ಯುವಕ ಸಂಘದ ವತಿಯಿಂದ ನಡೆದ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು  ಮಹಾನ್ ವ್ಯಕ್ತಿಗಳ ಜಯಂತ್ಯೋತ್ಸವನ್ನು ನಾವುಗಳು  ಆಚರಿಸದರೆ ಸಾಲದು ಅವರ ಆದರ್ಶ, ಮಾರ್ಗದರ್ಶನ ಅರಿತು ಎಲ್ಲಾ ಸಮಾಜದವರು ಒಂದಾಗಿ ಬಾಳಬೇಕು ಆಗಲೇ ಜೀವನವು ಉತ್ತಮವಾಗಿರುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಡಾ.ಡಿ.ಎನ್.ಯೋಗಿಶ್ ಕನಕದಾಸರು ಕವಿ, ಕಲಿಯೂ, ಸಂತರೂ, ಕೀರ್ತನಾಕಾರರೂ ಹಾಗೂ ಯೋಧ ಪುರುಷರಾಗಿದ್ದರು ಅವರು ಯಾವ ಮತಕ್ಕೂ ಅಂಟಿಕೊಳ್ಳದ ಮಧ್ಯಕಾಲದ ಕನ್ನಡ ಸಾಹಿತ್ಯ ಲೋಕದ ಮೇರುಕವಿಯಾಗಿದ್ದರು. ಶೂದ್ರ ಪಂಗಡದಲ್ಲಿ ಜನಿಸಿದ್ದರೂ ಸಾಮಾಜಿಕ ಪ್ರತಿರೋಧ ಮೆಟ್ಟಿ ನಿಂತರು, 12ನೇ ಶತಮಾನದ ವಚನಕಾರರು ವಚನ ಸಾಹಿತ್ಯವನ್ನು ಆಯ್ಕೆಮಾಡಿಕೊಂಡರೆ ದಾಸರು  ಭಕ್ತಿ, ಸಂಗೀತ, ಸಾಹಿತ್ಯವನ್ನು ಕೀರ್ತನೆಗಳ ಮೂಲಕ ಜಗತ್ತಿಗೆ ಸಾರಿ ಭಕ್ತಕನಕದಾಸರಾದರು.  ಗುರು ಧೀಕ್ಷೆ ದೊರೆಯದ ಕನಕರು ಸರಳವಾದ ಭಕ್ತಿಶರಣಾಗತಿ ಮಾರ್ಗ ಅನುಸರಿಸಿದ ಅವರ ಕಿರ್ತನೆಗಳಲ್ಲಿ, ಶರಣಾಗತಿ ಧರ್ಮ ಅಡಗಿದ್ದು ಕೀರ್ತನೆಗಳು ಸರಳ ಜನಪದ ಶೈಲಿಯಲ್ಲಿವೆ ಎಂದರು.
ಸನ್ಮಾನ ಸ್ವೀಕರಿಸಿ ಸಾಹಿತಿ ಅಬ್ದುಲ್  ಹಮೀದ್ ಮಾತನಾಡಿ ದಾಸರ ಬಗ್ಗೆ ದಂತ ಕಥೆಗಳಿವೆ, ಇವರ ಬಗ್ಗೆ ಸರಿಯಾದ ಮಾಹಿತಿ ನೀಡುವವರಿಲ್ಲ, ದಾಸ ಸಾಹಿತ್ಯದಲ್ಲಿ ಮಾನವ ಕುಲ ಒಂದೇ ಎಂದು ಸಾರಿದವರು ಕನಕರು. ಅವರ ಕೀರ್ತನೆಗಳನ್ನು ಇತರ ಭಾಷೆಗಳಿಗೆ ಅನುವಾದಿಸಲು ಸಾಹಿತ್ಯಾ ಪ್ರೋತ್ಸಾಹಕರು ಸಹಕರಿಸಬೇಕು ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ 16ನೇ ಶತಮಾನದ ಮಧ್ಯಭಾಗದಲ್ಲೇ ಸಮಾಜದ ಬದಲಾವಣೆಗೆ ಪ್ರಯತ್ನಿಸಿದವರು ಕನಕದಾಸರು, ಇವರ ಜಯಂತ್ಯೋತ್ಸವವನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಮುಂತಾದವರು ಮಾತನಾಡಿದರು.
ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದೊಂದಿಗೆ ವೀರಗಾಸೆ, ಡೊಳ್ಳುಕುಣಿತ, ಪಾಳೆಗಾರರ, ಕನಕದಾಸರ, ಸಂಗೊಳ್ಳಿರಾಯಣ್ಣರ ಛದ್ಮವೇಷಗಳ ಹಾಗೂ   ಜಾನಪದ ಕಲಾ ತಂಡಗಳೊಂದಿಗೆ ತಾಲ್ಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ವಿವಿಧ ಸಂಘಗಳ ಸದಸ್ಯರು, ಸಾರ್ವಜನಿಕರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯರುಗಳಾದ ಲೋಹಿತಾಬಾಯಿ, ಜಾನಮ್ಮರಾಮಚಂದ್ರಯ್ಯ, ಪಂಚಾಕ್ಷರಯ್ಯ, ಎನ್.ಜಿ.ಮಂಜುಳ,  ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ಕೆ.ಪ್ರಭಾಕರ್, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಭಾಜಪ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಮುಂತಾದವರಿದ್ದರು.
ಸಮಾರಂಭದಲ್ಲಿ ಬರಸಿಡ್ಲಹಳ್ಳಿ ಪ್ರೌಡಶಾಲಾ ಮಕ್ಕಳು ರೈತಗೀತೆ ಹಾಡಿದರು. ಸುಮುಖ ಮಹಿಳಾ ತಂಡ ಪ್ರಾಥರ್ಿಸಿ,  ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರೆ, ಬಸವರಾಜು ನಿರೂಪಿಸಿ, ಸುರೇಶ್ ವಂದಿಸಿದರು.