Wednesday, December 1, 2010ರೋಟರಿ ಶಾಲೆಯಲ್ಲಿ ಜಿಟಲ್ ಕ್ಲಾಸ್ ರೂಂ'' ವ್ಯವಸ್ಥೆ
ಚಿಕ್ಕನಾಯಕನಹಳ್ಳಿ,ಡಿ.01: ರೋಟರಿ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಶಾಲೆಯ ಆಡಳಿತ ಮಂಡಳ ಅಧ್ಕಕ್ಷ ಎಸ್.ಎ.ನಭಿ ತಿಳಿಸಿದ್ದಾರೆ.
ಪಟ್ಟಣದ ರೋಟರಿ ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವಲ್ಲಿ ನಮ್ಮ ಶಾಲೆ ಮುಂಚೂಣಿಯಲ್ಲಿದ್ದು ನಮ್ಮ ಶಾಲೆಯ ಆಯ್ದ ತರಗತಿಯ ಮಕ್ಕಳು ಇನ್ನು ಮುಂದೆ ಪವರ್ ಪಾಯಿಂಟ್ ಶಿಕ್ಷಣವನ್ನು ಪಡೆಯಲಿದ್ದಾರೆ.
ಈ ವ್ಯವಸ್ಥೆಯನ್ನು 3.60 ಲಕ್ಷರೂಗಳ ಅಂದಾಜಿನಲ್ಲಿ ಜಾರಿಗೆ ತರಲಾಗುತ್ತಿದೆ, ಅನಿಮೇಷಿಯನ್ ತಂತ್ರಜ್ಞಾನದ ಮೂಲಕ ಪಾಠ ಭೋದಿಸುವ ವ್ಯವಸ್ಥೆ ಇದಾಗಿದ್ದು ಈಗಾಗಲೇ ಈ ಬಗ್ಗೆ ತರಬೇತಿಯನ್ನು ನಮ್ಮ ಶಾಲೆಯ ಮುಖೋಪಾಧ್ಯಾಯರು ಪಡೆದಿದ್ದಾರೆ ಎಂದರು.
ಪ್ರತಿಬಾ ಕಾರಂಜಿ, ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ಸಮಾವೇಶದಲ್ಲಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿರುವ ನಮ್ಮ ಮಕ್ಕಳು, ಶಿಕ್ಷಣ ಇಲಾಖೆ ಏರ್ಪಡಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪಧರ್ೆಯಲ್ಲಿ ನಮ್ಮ ಶಾಲೆ ಮುಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿಯ ಕಾರ್ಯದಶರ್ಿ ಡಾ.ಸಿ.ಎಂ.ಸುರೇಶ್, ಸದಸ್ಯರಾದ ಎಂ.ವಿ.ನಾಗರಾಜ್ರಾವ್, ಮರುಳಾರಾದ್ಯ, ಎಂ.ಎಲ್.ಮಲ್ಲಿಕಾಜರ್ುನಯ್ಯ, ಮುಖ್ಯೋಪಾಧ್ಯಾಯಿನಿ ಸೌಮ್ಯ, ಗಣಿತ ಶಿಕ್ಷಕ ಪಾಂಡು ಹಾಜರಿದ್ದರು.
ಮಕ್ಮಲ್ ಟೋಪಿ ನಾಟಕ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಡಿ.01: ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಲಿಯವರಿಂದ ನಡೆಯುವ ಮಕ್ಮಲ್ ಟೋಪಿ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಇದೇ 5ರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್, ಸಾಹಿತಿ ಆರ್.ಬಸವರಾಜು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಮತ್ತು ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷೆ ಅಹಲ್ಯಾ ಸಾಂಬಮೂತರ್ಿರವರಿಗೆ ಸನ್ಮಾನಿಸಲಾಗುವುದು.
ಅನರ್ಹ ಪಡಿತರ ಚೀಟಿ ಹೊಂದಿರುವವರಿಗೆ ಅಂತಿಮ ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.01: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಮತ್ತು ಅನರ್ಹ ಪಡಿತರ ಚೀಟಿ ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಪಡಿತರ ಚೀಟಿ ಹೊಂದಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬಹುದೆಂದು ನ್ಯಾಯಾಲಯ ಆದೇಶಿಸಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಎರಡು ಪಡಿತರ ಚೀಟಿಗಳನ್ನು ಹೊಂದಿರುವವರು ಹಾಗೂ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರೆ ಈ ವಿಷಯ ಪ್ರಕಟಗೊಂಡ ಎರಡು ವಾರಗಳ ಒಳಗಾಗಿ ಸಂಬಂದಿಸಿದ ತಾಲೂಕು ಅಥವಾ ಉಪನೀದರ್ೇಶಕರ ಕಛೇರಿಗೆ ಹಿಂದಿರುಗಿಸಬೇಕು ತಪ್ಪಿದಲ್ಲಿ ಇದೇ ಅಂತಿಮ ಗಡುವಾಗಿದ್ದು ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಬೋಗಸ್ ಪಡಿತರ ಚೀಟಿ ಹೊಂದಿರುವುದು ಸಾಬೀತಾದಲ್ಲಿ ಅಂತಹ ವ್ಯಕ್ತಿಗೆ ಅಗತ್ಯ ವಸ್ತುಗಳ ಕಾಯ್ದೆಯನ್ವಯ 7 ವರ್ಷಗಳ ತನಕ ಸೆರವಾಸ ವಿಧಿಸಲಾಗುವುದು ಈ ವಿಷಯಕ್ಕೆ ಸಂಬಂದಿಸಿದಂತೆ ಗ್ರಾಹಕರ ಸಹಾಯವಾಣಿ 1800-425-9339ಕ್ಕೆ ದೂರು ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.