Wednesday, October 27, 2010

ಮಲ್ಲಿಗೆರೆಯಲ್ಲಿ ಒಂದು ಲಕ್ಷರೂಗಳ ಚಿನ್ನಾಭರಣ ಕಳವು
ಚಿಕ್ಕನಾಯಕನಹಳ್ಳಿ,ಅ.27: ತಾಲೂಕಿನ ಮಲ್ಲಿಗೆರೆ ಗ್ರಾಮದ ಪ್ರಕಾಶ್ ಎಂಬುವರ ಮನೆಯಲ್ಲಿ ಒಂದು ಲಕ್ಷರೂಗಳ ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ನಡೆದಿದೆ.
ಮಲ್ಲಿಗೆರೆ ವಾಸಿ ಪ್ರಕಶ್ ಬಿನ್ ಹುಚ್ಚಪ್ಪ ಎಂಬುವರು ಮನೆಗೆ ಬೀಗ ಹಾಕಿ, ನೆಂಟರ ಮನೆಗೆ ಹಬ್ಬಕ್ಕೆಂದು ಹೋದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದ್ದು ಪ್ರಕಾಶ್ ಮನೆಯ ಬೀಗ ಹೊಡೆದಿರುವ ದುಷ್ಕಮರ್ಿಗಳು ಮನೆಯಲ್ಲಿದ್ದ ಚಿನ್ನದ ಸರ, ಉಂಗುರ ಸೇರಿದಂತೆ ಬೆಳ್ಳಿಯ ದೇವರ ಮೂತರ್ಿಗಳನ್ನು ಸಹ ಕದ್ದೊಯ್ದಿದ್ದಾರೆ. ಹಂದನೆಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪತ್ತೆಕಾರ್ಯದಲ್ಲಿ ನಿರತವಾಗಿದ್ದವು.