Friday, April 26, 2013


ಸಿ.ಗುರುಮೂತರ್ಿ ಕೊಟಿಗೆಮನೆ.
ಬಿಸಿಲಿನ ಧಗೆಯಲ್ಲಿ ಅಭ್ಯಥರ್ಿಗಳಿಂದ ಚುನಾವಣಾ ಕಾವುಚಿಕ್ಕನಾಯಕನಹಳ್ಳಿ,ಏ.26: ಜಾತಿ ಮತ್ತು ವ್ಯಕ್ತಿ ಆಧಾರಿತವಾಗಿರುವ ಇಲ್ಲಿನ ವಿಧಾನ ಸಭಾ ಚುನಾವಣೆಯ ಕಾವು ಬಿಸಲಿನ ಧಗೆಯ ಜೊತೆ ಪೈಪೋಟಿಗಿಳಿದಿದೆ. ಕುಡಿಯುವ ನೀರಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಕಿ.ಲೋ.ಮೀಟರ್ ಗಟ್ಟಲೆ ಬಿಂದಿಗೆ ಹಿಡಿದು ಓಡಾಡುತ್ತಿದ್ದರೆ, ಇವರ ಹಿಂದೆ ರಾಜಕಾರಣಿಗಳು ಜಾತಿಯ ಲೇಬಲ್ ಹಿಡಿದುಕೊಂಡು ಅಲೆದಾಡುತ್ತಿದ್ದಾರೆ.
'ಜಾತಿ'ಕಾರಣವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಮುಂದಾಗಿರುವ ಉರಿಯಾಳುಗಳು ತಮ್ಮ ಮತಬ್ಯಾಂಕ್ಗಳನ್ನು ಹೆಚ್ಚಿಸಿಕೊಳ್ಳಲು ಪ್ರಬಲ ಕೋಮಿನ ಪ್ರಭಾವಿ ನಾಯಕರುಗಳನ್ನು ಕ್ಷೇತ್ರಕ್ಕೆ ಕರೆಸಿ ಅವರ ಮೂಲಕ ತಮ್ಮ ಗೆಲುವಿನ ಕನಸುಕಾಣುತ್ತಿದ್ದಾರೆ. ಆ ಪ್ರಭಾವಿ ನಾಯಕರುಗಳು ಅಷ್ಟೇ ನಮ್ಮ ಶಕ್ತಿಯನ್ನು ರಾಜ್ಯದ ಜನತೆಗೆ ತೋರಿಸಬೇಕೆಂದರೆ ನಮ್ಮನ್ನು ಆಶೀರ್ವದಿಸಿ, ಎಂದು ಹಿಗ್ಗೂಸಿಗ್ಗಿಲ್ಲದೆ, ನೇರವಾಗಿ 'ಜಾತಿ' ರಾಜಕೀಯದ ಮಾತನಾಡುತ್ತಿದ್ದರೆ, ಸಣ್ಣಪುಟ್ಟ ಜಾತಿಯವರು ನಮ್ಮಗ್ಯಾರು ಗತಿ ಎಂಬಂತೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರೆ, ಇವರನ್ನು ಹಿಡಿದುಕೊಳ್ಳಲು ದುಡ್ಡು ಹೆಂಡದ ರುಚಿ ತೋರಿಸಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಹವಣಿಸುತ್ತಿದ್ದಾರೆ. ಇಲ್ಲಿಗೆ ಬಂದಿದೆ ಪ್ರಜಾ(ಜಾತಿ)ಪ್ರಭುತ್ವದ ಸ್ಥಿತಿ.
ಕ್ಷೇತ್ರದಲ್ಲಿನ ಜನರ ಬದುಕು ದುಸ್ತರವಾಗಿ ಜೀವನ ನಡೆಸಲು ಫ್ಯಾಕ್ಟ್ರಿಗಳನ್ನು ಹುಡುಕಿಕೊಂಡು ಅಕ್ಷರಸ್ಥ ವರ್ಗ ನಗರದ ಕಡೆಗೆ ಹೊರಟರೆ, ಕಾಫಿ ತೋಟಗಳಲ್ಲಿ ಜೀತ ಮಾಡಲು ಇನ್ನೊಂದು ವರ್ಗ ಹೋಗಿದೆ, ಒಳ್ಳೆಯ ಕೋಸರ್್ಗಳಿಲ್ಲದೆ ತಮ್ಮ ಮಕ್ಕಳ ಬಗ್ಗೆ ಚಿಂತಿಸುತ್ತಾ ಮಗದೊಂದು ವರ್ಗ ಪಟ್ಟಣ ಸೇರಿದ್ದಾರೆ. ಈಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿವೆ. ಇನ್ನೂ ಇಲ್ಲಿ ನೆಲೆಸಿರುವ ಜನರಿಗೆ ನೀರಿನ ಸಮಸ್ಯೆ, ರಸ್ತೆ, ವಿದ್ಯುತ್ ಸೇರಿದಂತೆ ಒಳ್ಳೆಯ ಆದಾಯ ಕೊಡುವ ಹಾಗೂ ನಿರಂತರ ಕೆಲಸ ಸಿಗುವಂತಹ ಕೆಲಸದ ಸಮಸ್ಯೆ ಅಪಾರವಾಗಿದ್ದರೂ ಈ ಬಗ್ಗೆ ಎಳ್ಳೆಷ್ಟು ಕಾಳಜಿಯಿಲ್ಲದ ನಾಯಕರುಗಳು, ನಮ್ಮನ್ನು ಗೆಲ್ಲಿಸಿದರೆ ಮಾತ್ರ ನಿಮ್ಮ ಸೇವೆಗೆ ನಾವು ಸಿದ್ದ ಎಂದು ಬೊಗಳೆ ಬಿಡುತ್ತಿದ್ದಾರೆ. 
ಕಣದಲ್ಲಿರುವ 11 ಅಭ್ಯಥರ್ಿಗಳ ಪೈಕಿ, ಕೆ.ಜೆ.ಪಿ.ಯ ಜೆ.ಸಿ.ಮಾಧುಸ್ವಾಮಿ, ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್, ರೈತ ಸಂಘದ ಕೆಂಕೆರೆ ಸತೀಶ್ ಈ ಮೂರು ಜನ ಲಿಂಗಾಯಿತರಾದರೆ,  ಜೆ.ಡಿ.ಎಸ್.ನ ಸಿ.ಬಿ.ಸುರೇಶ್ ಬಾಬು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್, ಪಕ್ಷೇತರ ಅಭ್ಯಥರ್ಿ ಮಂಜುಳಾ ನಾಗರಾಜ್ ಇವರು  ಕುರುಬ ಸಮಾಜಕ್ಕೆ ಸೇರಿದವರಾಗಿದ್ದಾರೆ, ಕಾಂಗ್ರೆಸ್ನ ಸತೀಶ್ ಸಾಸಲು, ಜೆ.ಡಿ.ಯು.ನ ಜಿ.ಪ್ರಕಾಶ್ ಇಬ್ಬರೂ ಗೊಲ್ಲ ಸಮಾಜದವರು, ಬಿ.ಎಸ್.ಆರ್ ಪಕ್ಷದ ಕೆ.ಎಲ್.ದೇವರಾಜು ನಾಯಕ ಸಮಾಜದವರಾದರೆ, ವೆಲ್ಫೇರ್ ಪಾಟರ್ಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯಕ್ ಮತ್ತು ಪಕ್ಷೇತರ ರಾಮಚಂದ್ರಯ್ಯ ಬರಗೂರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ, ತಾಲೂಕಿನ ಐದು ಹೋಬಳಿಗಳ ಜೊತೆಗೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸೇರಿಸಿಕೊಂಡು ಆರು ಹೋಬಳಿಗಳಿರುವ ದೊಡ್ಡ ಕ್ಷೇತ್ರವಾಗಿದೆ. ಒಂದು ಲಕ್ಷದ ತೊಂಭತ್ತೆಂಟು ಸಾವಿರ ಮತದಾರರನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಲಿಂಗಾಯಿತರು 45 ಸಾವಿರ, ಕುರುಬರು 38 ಸಾವಿರ, ಒಕ್ಕಲಿಗರು 18 ಸಾವಿರ, ಗೊಲ್ಲರು 16ಸಾವಿರ, ಮುಸ್ಲಿಂ ಮತ್ತು ಅಲ್ಪಸಂಖ್ಯಾತರು 15ಸಾವಿರ, ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿ 40 ಸಾವಿರ, ಮಡಿವಾಳರು 4ಸಾವಿರ, ಬಲಿಜ 6ಸಾವಿರ, ಉಪ್ಪಾರರು 10ಸಾವಿರ ಮತ್ತು ಇತರೆ ಜಾತಿಯವರು 6 ಸಾವಿರ ಹೀಗೆ ಹಂಚಿ ಹೋಗಿದ್ದು ಸ್ಫಧರ್ೆಯಲ್ಲಿ ಮುಂಚೂಣಿಯಲ್ಲಿರುವ ಉರಿಯಾಳುಗಳು  ನಿಣರ್ಾಯಕ ಮತಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಂ ಮತ್ತು ಇತರೆ ಸಣ್ಣ ಪುಟ್ಟ ಜಾತಿಗಳ ಮೇಲೆ  ಕಣ್ಣಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ಜಾತಿ ರಾಜಕಾರಣದ ಜತೆಗೆ ಚೆಲ್ಲುವ ಕೋಟಿಗಳ ಲೆಕ್ಕದ ಹಣವೂ ನಿಣರ್ಾಯಕವಾಗಲಿದೆ.
ಜೆ.ಸಿ.ಎಂ. ಓಟಕ್ಕೆ ಕೆ.ಎಸ್.ಕೆ. ಅಡ್ಡಗಾಲೇ. . . ?
ಜೆ.ಸಿ.ಮಾಧುಸ್ವಾಮಿಯವರ ಜೊತೆ ಲಿಂಗಾಯಿತ ಲೀಡರ್ಗಳಿದ್ದಾರೆ, ಯಡಿಯೂರಪ್ಪನವರ ಪ್ರಭಾವವನ್ನು ಬಳಸಿಕೊಳ್ಳುತ್ತಿದ್ದಾರೆ ಜೊತೆಗೆ ಅವರದೇ ಆದ 25 ಸಾವಿರ ಮತಗಳಿವೆ ಇವುಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಜೆ.ಸಿ.ಎಂ.ರವರ ನಿಷ್ಠೂರ ವರ್ತನೆ, ಅಧಿಕಾರಯುತವಾದ ಮಾತುಗಳು, ಯಾರಿಗೂ ಕೇರ್ ಮಾಡದ ನಡವಳಿಕೆಗಳಿಂದ ಹಲವರು ಬೇಸತ್ತಿದ್ದಾರೆ. ಇವುಗಳನ್ನೆಲ್ಲಾ ತನ್ನ ಪರವಾಗಿಸಿಕೊಂಡಿರುವ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಜೊತೆಗೆ  ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಹುಳಿಯಾರು ಮತ್ತು ಬುಕ್ಕಾಪಟ್ಟಣಕ್ಕೆ ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಈಗಲೂ ಸ್ಮರಿಸುವ ಆ ಭಾಗದ ಹಲವರು ಇವರ ಜೊತೆಯಲ್ಲಿದ್ದಾರೆ. ಹೇಮಾವತಿ ನೀರನ್ನು ತಾಲೂಕಿನ 27 ಕೆರೆಗಳಿಗೆ ಮಂಜೂರಾತಿ ಮಾಡಿಸುವಲ್ಲಿ ಶ್ರಮವಹಿಸಿರುವ ಕಿರಣ್ಕುಮಾರ್ ತಮ್ಮ ಶ್ರಮಕ್ಕೆ ಕೂಲಿ ಕೇಳುತ್ತಿದ್ದಾರೆ.
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗಿನ ಆಶೀವರ್ಾದ ಯಾರಿಗೆ. . .?  
ದಕ್ಕಲಿಗರಿಂದ ಹಿಡಿದು ಒಕ್ಕಲಿಗರವರೆಗೆ ಎಲ್ಲರ ಹೆಗಲ ಮೇಲೆ ಕೈ ಹಾಕಿ ಭಾವನಾತ್ಮಕವಾಗಿ ಮಾತನಾಡಿಸುವ ಸಿ.ಬಿ.ಸುರೇಶ್ ಬಾಬು ಸೌಮ್ಯ ಸ್ವಭಾವ, ಬಡವರಾದಿಯಾಗಿ ಅಧಿಕಾರಿಗಳವರೆಗೆ  ಎಲ್ಲರನ್ನೂ ಅಣ್ಣ, ಅಕ್ಕ, ಎಂದು ಮಾತನಾಡಿಸುತ್ತಾ ಯುವಕರ ಕಣ್ಮಣಿಯಾಗಿರುವ ಸಿ.ಬಿ.ಎಸ್. ಆಡಳಿತ ನಡೆಸುವಲ್ಲಿ ಬಿಗಿ ನಿಲುವುಗಳಿಲ್ಲವೆಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದ್ದಾರೆ, ಇವರ ಓಟದ ಓಘಕ್ಕೆ ಕಾಂಗ್ರೆಸ್ನ ಸತೀಶ್ ಅಡ್ಡಗಾಲು ಹಾಕುತ್ತಾರಾ ಎಂಬುದೇ ಈಗಿನ ಪ್ರಶ್ನೆ.
ಒಂದು ಹಂತದಲ್ಲಿ ಇಲ್ಲಿನ ಕಾಂಗ್ರೆಸ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಅದಕ್ಕೆ ಸ್ವಲ್ಪ ಚೇತರಿಕೆ ಕೊಟ್ಟವರು ಸತೀಶ್ ಸಾಸಲು, ಗೆಲ್ಲುವಷ್ಟು ತಾಕತ್ತು ಇಲ್ಲದಿದ್ದರೂ ತೊಡರುಗಾಲು ಕೊಡುವಷ್ಟು ಇಕ್ಕಮತ್ತು ಇದೆ. 
ಇವೆಲ್ಲಾ ಸದ್ಯದ ಲೆಕ್ಕಾಚಾರಗಳಷ್ಟೇ, ಇನ್ನೂ  ಮುಂದೈತೆ ಮಾರಿಹಬ್ಬ ಅಷ್ಟು ಹೊತ್ತಿಗೆ ಏನೇನು ಬದಲಾಗುತ್ತೋ ಕಾದುನೋಡಣ. . . . . ! 


ತಾಲೂಕಿನ 27 ಕೆರೆಗಳಿಗೆ ಹೇಮೆ ಹರಿಯುವ ಕಾಮಗಾರಿ ಬರದಿಂದ ಸಾಗುತ್ತಿದೆ.

ಚಿಕ್ಕನಾಯಕನಹಳ್ಳಿ,ಏ.26 : ತಾಲ್ಲೂಕಿನ 27 ಕೆರೆಗೆ ನೀರುಣಿಸಲಿರುವ ಹೇಮಾವತಿ ನೀರಿನ ಯೋಜನೆಯ ಕಾಮಗಾರಿಯು ಬಿಳಿಗೆರೆಯಲ್ಲಿ ಆರಂಭವಾಗಿ ಒಂದು ಕಿ.ಮೀ.ಉದ್ದದವರೆಗೆ ಕಾಮಗಾರಿಯ ಕೆಲಸ ನಡೆದಿದ್ದು  ಬಿರುಸಿನಿಂದ ಕಾಮಗಾರಿ ಮುಂದುವರೆಯುತ್ತಿದೆ.
ತಾಲ್ಲೂಕಿಗೆ ಬಿಡುಗಡೆಯಾಗಿರುವ 102ಕೋಟಿ ರೂಗಳ  ಅನುದಾನದ ಕಾಮಗಾರಿಯು ತಿಪಟೂರು ತಾಲ್ಲೂಕಿನ ಬಿಳಿಗೆರೆಯಿಂದ ಆರಂಭವಾಗಿದ್ದು ಕಾಮಗಾರಿಯು ತಾಲ್ಲೂಕಿನ ಕಡೆ ಮುಖ ಮಾಡಿದೆ. ಕಾಮಗಾರಿಯಲ್ಲಿ  ಇಟಾಚಿಗಳು ಸೇರಿದಂತೆ ಕೆಲಸಗಾರರು ಬಿರುಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.
ಈಗ ನಡೆದಿರುವ ಕಾಮಗಾರಿಯಲ್ಲಿ 24 ಅಡಿವರೆಗೆ ಭೂಮಿ ಅಗೆದಿದ್ದು, ಇನ್ನೂ  2ಮೀಟರ್ ಆಳ ಇದೆ. ಕೊರೆದಿರುವ ನೆಲಕ್ಕೆ ಸಿಮೆಂಟ್ ಕಾಂಕ್ರೆಟ್ ಹಾಗೂ ಎರಡು ಕಡೆ ಭಾಗಕ್ಕೆ ಸ್ಟೋನ್ ಸ್ಟಿಚಿಂಗ್ ಹಾಕಲಾಗುವುದು. 
ಬಿಳಿಗೆರೆಯಲ್ಲಿರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಮುಂದಿನ ಖಾಸಗಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಬೇಕಿದೆ, ಖಾಸಗಿ ಜಮೀನುಗಳ ನಂತರ ಮುಂದೆ ಇರುವ ಸಕರ್ಾರಿ ಜಮೀನಿನಲ್ಲಿ ಕಾಮಗಾರಿ ಆರಂಭವಾಗಿ ಕೆಲಸ ಮುಂದುವರೆಯಲಿದೆ, ನೀರು ಹರಿಯುವ ಅನುಸಾರವಾಗಿ ಆಳ ತೆಗೆಯಲಾಗುವುದು ಹಾಗೂ ಕಾಮಗಾರಿಯು ಹದಿನೆಂಟು ತಿಂಗಳ ಟೆಂಡರ್ಗೆ ನಿಗದಿಯಾದ್ದು ಅಷ್ಟರೊಳಗೆ ಪೂರ್ಣಗೊಳಿಸಲಾಗುವುದೆಂದು ಸಂಬಂಧಪಟ್ಟ ಗುತ್ತಿಗೆದಾರರು ತಿಳಿಸಿದ್ದಾರೆ.
ಕೆಲ ರಾಜಕೀಯ ಮುಖಂಡರು ಕೆಲಸವನ್ನು ಸ್ಥಗಿತಗೊಳಿಸಲು ಗಲಾಟೆ ಮಾಡಿದ್ದರಿಂದ ಎ.ಸಿಯವರಿಂದ ಪಮರ್ಿಷನ್ ಪಡೆದು ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ. ತಾಲೂಕ್ ಪ್ರಮುಖ್ ಚೇತನ್ಪ್ರಸಾದ್, ಮಾಜಿ ನಾಮಿನಿ ಪುರಸಭಾ ಸದಸ್ಯ ಲಕ್ಷ್ಮಯ್ಯ ಮುಂತಾದವರಿದ್ದರು.

aPÀÌ£ÁAiÀÄPÀ£ÀºÀ½îAiÀÄ°è eÉrJ¸ï C¨sÀåyð ¹.©.¸ÀÄgÉñï¨Á§ÄgÀªÀgÀ ZÀÄ£ÁªÀuÁ ¥ÀæZÁgÀPÉÌ  gÁ¶ÖçÃAiÀÄ CzsÀåPÀë ºÉZï.r.zÉêÉÃUËqÀ DUÀ«Ä¹zÀÝ ¸ÀAzÀ¨sÀðzÀ°è £ÀUÀgÀ PÁAUÉæ¸ï PÁAiÀÄðzÀ²ð PÉ.f.PÀȵÉÚUËqÀ ¥ÀPÀëPÉÌ ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è eÉrJ¸ï C¨sÀåyð ¹.©.¸ÀÄgÉñï¨Á§Ä, ¥ÀÄgÀ¸À¨sÁ ¸ÀzÀ¸Àå ¹.r.ZÀAzÀæ±ÉÃRgï G¥À¹ÜvÀjzÀÝgÀÄ

aPÀÌ£ÁAiÀÄPÀ£ÀºÀ½î «zsÁ£À ¸À¨sÁ PÉëÃvÀæzÀ gÁªÀÄ°AUÁ¥ÀÄgÀ UÁæ.¥ÀA.¸ÀzÀ¸Àå ©.PÉ.UÀÄgÀÄgÁeï, ªÀiÁf ¸ÀzÀ¸Àå ©.PÉ.ªÀÄAdÄ£Áxï, J¯ÉQÖçPÀ¯ï PÀAmÁæPÀÖgï dAiÀÄtÚ ªÀÄvÀÄÛ zÀ°vÀ ªÀÄÄRAqÀ ZÀAzÀæ¥Àà EªÀgÀÄUÀ¼ÀÄ PÁAUÉæ¸ï¤AzÀ eÉ.r.J¸ï.UÉ ¹.©.¸ÀÄgÉñï¨Á§Ä ¸ÀªÀÄÄäRzÀ°è ¸ÉÃ¥ÀðqÉUÉÆAqÀgÀÄ. F ¸ÀAzÀ¨sÀðzÀ°è PÉ.J¯ï.ªÀĺÀzÉêÀ¥Àà, dAiÀÄ¥ÀæPÁ±ï, vÁ.¥ÀA.¸ÀzÀ¸Àå ºÉÆ£ÉßñÀ¥Àà G¥À¹ÜvÀjzÀÝgÀÄ.


Friday, April 19, 2013


ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ
ಚಿಕ್ಕನಾಯಕನಹಳ್ಳಿ,ಏ.19 : ಬಿ.ಎಸ್.ಪಿ ಪಕ್ಷ ದುಡ್ಡ ಹಂಚುವುದಿಲ್ಲ, ಎಣ್ಣೆಯನ್ನು ಹಂಚುವುದಿಲ್ಲ, ಪಕ್ಷದಲ್ಲಿ ಖುಷಿಯಿಂದ ಸೇವೆ ಮಾಡುವ ಮನೋಭಾವ ಇರುವವರೆಗೆ ಸ್ವಾಗತಿಸುತ್ತೇವೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಬಿಎಸ್ಪಿ ಕಛೇರಿಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ತಾ.ಬಿಜೆಪಿ ಅಧ್ಯಕ್ಷ ಸಿ.ಎಸ್.ರಾಜಣ್ಣ, ಮಾಜಿ ಗ್ರಾ.ಪಂ.ಸದಸ್ಯ ರೋಜೆಗೌಡ್ರು, ಮಾಜಿ ಪಿಎಲ್ಡಿ ಬ್ಯಾಂಕ್ ನಿದರ್ೇಶಕ ರೇವಣ್ಣರವರನ್ನು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಪತ್ರಿಕಾಗೋಷ್ಠಿಯನ್ನು ಕುರಿತು ಮಾತನಾಡಿದರು. 
ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ ಬಳಿಕ ಬಿಎಸ್ಪಿ ಪಕ್ಷದಲ್ಲಿ ರಾಜ್ಯ ಮಟ್ಟದ ಹುದ್ದೆ ದೊರಕಿದ್ದು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರೊಂದಿಗೆ ಚಚರ್ಿಸಿರುವುದಾಗಿ ತಿಳಿಸಿದರಲ್ಲದೆ ನಮಗೆ ಜನಸೇವೆ ಮಾಡುವ ಮನೋಭಾವ ಇದೆ ಅದಕ್ಕಾಗಿ ರಾಜಕೀಯಕ್ಕೆ ಇಳಿದಿದ್ದೇವೆ ಎಂದರು.
ಪ್ರಚಾರಕ್ಕೆಂದು ಹಳ್ಳಿಗಳಿಗೆ ತೆರಳಿದಾಗ ಅಲ್ಲಿನ ಸಾರ್ವಜನಿಕರೇ ನಮಗೆ ಸ್ವಾಗತ ಕೋರಿ ನಿಮ್ಮ ವ್ಯಕ್ತಿತ್ವ, ಕಾರ್ಯಶೈಲಿಯನ್ನು ಗುರುತಿಸಿ ನಿಮಗೆ ಮತ ಹಾಕಿ ಗೆಲುವು ದೊರಕಿಸುತ್ತೇವೆ ಎಂದಿದ್ದಾರೆ, ವಿಧಾನಸಭೆ ಚುನಾವಣೆ ನಂತರ ಮುಂದೆ ಬರುವ ಲೋಕಸಭಾ ಚುನಾವಣೆಗೂ ಪಕ್ಷದಿಂದ ಸ್ಪಧರ್ಿಸುವುದಾಗಿ ತಿಳಿಸಿದರು.
ತಾವು ಪ್ರಚಾರ ಕೈಗೊಂಡಾಗ ಜನಗಳಿಂದ ಬಂದ ಮಾತುಗಳನ್ನು ಕೇಳಿ ಮಾಜಿ ಶಾಸಕರುಗಳು ತಾಲ್ಲೂಕಿನಲ್ಲಿ ಯಾವ ಅಭಿವೃದ್ದಿಯನ್ನು ಮಾಡದೇ ಇರುವುದರಿಂದ ಒಬ್ಬ ಭಿನ್ನವಾದ ಕಾರ್ಯವೈಖರಿ ಹೊಂದಿರುವ ವ್ಯಕ್ತಿ ತಾಲ್ಲೂಕಿಗೆ ಅಗತ್ಯ ಅದಕ್ಕಾಗಿ ನಿಮಗೆ ಬೆಂಬಲಿಸುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಜಿಲ್ಲಾ ಕಾರ್ಯದಶರ್ಿ ಸತೀಶ್ಕಂಟಲಗೆರೆ, ತಾಲ್ಲೂಕು ಅಧ್ಯಕ್ಷ ನಾರಾಯಣರಾಜು ಉಪಸ್ಥಿತರಿದ್ದರು.
ಏಳು ದಿನಗಳ ಕಾಲ ರಾಮ ಸಪ್ತಾಹ ಮಹೋತ್ಸ
ಚಿಕ್ಕನಾಯಕನಹಳ್ಳಿ,ಏ.19 : ಶ್ರೀರಾಮನವಮಿ ಪ್ರಯುಕ್ತ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಶ್ರೀ ರಾಮ ಸಪ್ತಾಹ ಮಹೋತ್ಸವವನ್ನು ಏಳು ದಿನಗಳ ಕಾಲ ವಿಜೃಂಭಣೆಯಾಗಿ ನೆರವೇರಲಿದೆ.
 ನವಗ್ರಹ ಸ್ಥಾಪನೆ, ಹೋಮ, ಮಂಗಳಾರತಿ ಅಖಂಡ ಶ್ರೀ ರಾಮ ಭಜನೆಯನ್ನು ಏರ್ಪಡಿಸಿದ್ದು ಪ್ರತಿದಿನ ರಾತ್ರಿ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಚುನಾವಣೆ ಸಂಬಂಧ ಆಕ್ಷೇಪಣೆಗಳಿಗೆ ಸಂಪಕರ್ಿಸಿ
ಚಿಕ್ಕನಾಯಕನಹಳ್ಳಿ,ಏ.19 : ವಿಧಾನಸಭಾ ಚುನಾವಣೆ ಸಂಬಂಧ ಏನಾದರೂ ಆಕ್ಷೇಪಣೆಗಳು/ಸಲಹೆಗಳು ಇದ್ದಲ್ಲಿ ಚುನಾವಣಾ ವೀಕ್ಷಕ ಚಂದ್ರಕಾಂತ್ ಕಾಡೆರವರನ್ನು ಸಂಪಕರ್ಿಸಲಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ 5ಗಂಟೆಯವರೆಗೆ ಚುನಾವಣಾ ವೀಕ್ಷಕರನ್ನು ಸಂದಶರ್ಿಸಬಹುದಾಗಿದೆ, ವೀಕ್ಷಕರನ್ನು ಸಂಪಕರ್ಿಸಲು 8277310941 ಮೊಬೈಲ್ ನಂಬರ್ನ್ನು ನೀಡಿದ್ದಾರೆ.
aPÀÌ£ÁAiÀÄPÀ£ÀºÀ½îAiÀÄ ¥ÀÄgÀ¸À¨sÁ PÁAiÀiÁð®AiÀÄzÀ ªÀÄÄSÁå¢üPÁj ºÁUÀÆ ªÀÄvÀUÀmÉÖ C¢üPÁjUÀ¼ÀÄ ªÀÄvÀzÁ£ÀzÀ ºÀQÌ£À §UÉÎ ¸ÁªÀðd¤PÀgÀ°è CjªÀÅ ªÀÄÆr¸À®Ä ¥ÀlÖtzÀ°è eÁxÁ £ÀqɹzÀgÀÄ. 

aPÀÌ£ÁAiÀÄPÀ£ÀºÀ½î ¸À«ÄÃ¥ÀzÀ ªÀĸÁ°ÛUÀÄqÀÄè UÁæªÀÄzÀ°è ²æà gÁªÀÄ£ÀªÀ«Ä ºÀ§âzÀ ¥ÀæAiÀÄÄPÀÛ UÁæªÀĸÀÜgÀÄ ²æÃgÁªÀĤUÉ «±ÉõÀ ¥ÀÆeÉ ¸À°è¹zÀgÀÄ. ¥Á£ÀPÀ, ¥À®ºÁgÀªÀ£ÀÄß ¨sÀPÁÛ¢üUÀ½UÉ ºÀAZÀ¯Á¬ÄvÀÄ.
                                      

Thursday, April 18, 2013


ಸಮಾಜ ದಿನೇ ದಿನೇ ಸಾಂಸ್ಕೃತಿಕವಾಗಿ ಬಡವಾಗುತ್ತಿದೆ: ನಟರಾಜ್ ಹೊನ್ನವಳ್ಳಿ

aPÀÌ£ÁAiÀÄPÀ£ÀºÀ½îAiÀÄ°è gÉÆÃlj ¨Á®¨sÀªÀ£ÀzÀ°è £ÀqÉzÀ AiÀÄÄUÁ¢ ¸ÀA¨sÀæªÀiÁZÀgÀuÉUÁV £ÀqÉzÀ PÀ«UÉÆö×AiÀÄ°è JA.«.£ÁUÀgÁeïgÀªÀgÀ PÀ£ÀßqÀ ¸Á»vÀå ªÀÄvÀÄÛ ¸ÀA¸ÀÌøw PÉÆñÀ ªÀ£ÀÄß «zÁåªÁZÀ¸Ààw PÀ«vÁPÀȵÀÚ ©qÀÄUÀqÉ ªÀiÁrzÀgÀÄ. gÉÆÃlj CzsÀåPÀë JA.«.£ÁUÀgÁeïgÁªï, gÀAUÀPÀ«Äð £ÀlgÁeïºÉÆ£ÀߪÀ½î, PÀ« ¹.JZï.ªÀÄjzÉêÀgÀÄ, ¦.L.ºÉÊUËæAqïì E£ïì¥ÉPÀÖgï gÀ«Ã±ï, ZÀ®£ÀavÀæ ¤zÉÃð±ÀPÀ °AUÀzÉêÀgÀÄ qÁ.¹.JA.¸ÀÄgÉñï PÀ¸Á¥À CzsÀåPÀë gÀ«PÀĪÀiÁgï  ªÀÄwÛvÀgÀgÀÄ G¥À¹ÜvÀjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ°è gÉÆÃlj ¨Á®¨sÀªÀ£ÀzÀ°è £ÀqÉzÀ AiÀÄÄUÁ¢ ¸ÀA¨sÀæªÀiÁZÀgÀuÉUÁV £ÀqÉzÀ PÀ«UÉÆÃ¶× PÁAiÀÄðPÀæªÀÄzÀ°è ¯ÉÃRPÀ ¹.UÀÄgÀĪÀÄÆwð PÉÆnUɪÀÄ£É ªÀiÁvÀ£ÁrzÀgÀÄ. F ¸ÀAzÀ¨sÀðzÀ° gÉÆÃlj CzsÀåPÀë JA.«.£ÁUÀgÁeïgÁªï, gÀAUÀPÀ«Äð £ÀlgÁeïºÉÆ£ÀߪÀ½î, PÀ« ¹.JZï.ªÀÄjzÉêÀgÀÄ, «zÁåªÁZÀ¸Ààw PÀ«vÁPÀȵÀÚ ¦.L.ºÉÊUËæAqïì E£ïì¥ÉPÀÖgï gÀ«Ã±ï, ZÀ®£ÀavÀæ ¤zÉÃð±ÀPÀ °AUÀzÉêÀgÀÄ,  qÁ.¹.JA.¸ÀÄgÉñï PÀ¸Á¥À CzsÀåPÀë gÀ«PÀĪÀiÁgï  ªÀÄwÛvÀgÀgÀÄ G¥À¹ÜvÀjzÀÝgÀÄ.
ಚಿಕ್ಕನಾಯಕನಹಳ್ಳಿ,ಏ.18 : ಸಮಾಜ ದಿನೇ ದಿನೇ ಸಾಂಸ್ಕೃತಿಕವಾಗಿ ಬಡವಾಗುತ್ತಿದೆ, ಮಾತಿನಲ್ಲಿ ಸಂಸ್ಕೃತಿಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಮಾತುಗಳನ್ನಾಡುತ್ತಾರೆಯೇ  ಹೊರತು ಪಾಲನೆಗೆ ತರುತ್ತಿಲ್ಲ ಎಂದು ಕವಿ-ರಂಗಕಮರ್ಿ ನಟರಾಜ್ ಹೊನ್ನವಳ್ಳಿ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ರೋಟರಿ ಕ್ಲಬ್ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಯುಗಾದಿ ಸಂಭ್ರಮ, ಕವಿಗೋಷ್ಠಿ, ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಅವರು, ಇತಿಹಾಸದ ಸಂಸ್ಕೃತಿ ಅಪಾಯದ ಅಂಚಿನಲ್ಲಿದೆ, ಇತಿಹಾಸವನ್ನು ಮರು ಓದಿಗೆ ಒಳಪಡಿಸಬೇಕು ಎಂದರಲ್ಲದೆ ಉಳುಮೆ ಮಾಡುವ ರೈತ ತಪ್ಪಸ್ಸು ಮಾಡುವ ಯೋಗಿಯಂತೆಯೇ ಶ್ರೇಷ್ಠ, ಅದಕ್ಕಾಗಿಯೇ ನೇಗಿಲಯೋಗಿಯೆಂದು ಕುವೆಂಪುರವರು ತಮ್ಮ ಕಾವ್ಯದಲ್ಲಿ ಬಣ್ಣಿಸಿದ್ದು, ಕಾವ್ಯಕ್ಕೆ  ಹೆಚ್ಚಿನ ಶಕ್ತಿ ಅಡಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಸಿ.ಆರ್.ರವೀಶ್ ಮಾತನಾಡಿ ಸಾಧನೆ ಮಾಡಲು  ಉತ್ತಮವಾದ ಹುದ್ದೆಯೇ ಬೇಕಿಲ್ಲ, ಸಾಧಿಸುವ ಛಲ, ಗೆಲ್ಲುವ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದರಲ್ಲದೆ  ಯಾವುದೇ ಉತ್ತಮ ಕೆಲಸ ಮಾಡಲು ಅಧಿಕಾರ ಬೇಕೆಂದು ಕಾಯುವುದಕ್ಕಿಂತ ಇರುವ ಸಾಮಥ್ರ್ಯದಲ್ಲೇ ಸಾಧನೆ ಮಾಡಲು ಹೊರಟರೆ  ಯಶಸ್ಸು ದೊರಕಲಿದೆ, ಅದಕ್ಕಾಗಿ ಶ್ರಮಿಸಬೇಕು ಎಂದರು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗಲೇ ಮಾತ್ರ ಸಮಾಜ ಸೇವಕರಾಗಲು ಸಾಧ್ಯ ಎಂದರಲ್ಲದೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕೃತಿಯ ಬಗ್ಗೆ ವಿವರಿಸಿದರು.
ವಿದ್ಯಾವಾಚಸ್ಪತಿ ಕವಿತಾಕೃಷ್ಣ ಮಾತನಾಡಿ ಎಂ.ವಿ.ನಾಗರಾಜ್ರವರು ಬರೆದಿರುವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಕೋಶ ಕನ್ನಡ ಸಾಹಿತ್ಯದ ಅರ್ಥಕೋಶದ ಜೊತೆಗೆ ಕನ್ನಡ ಭಾಷೆಯ ಎಲ್ಲಾ ಮಾಹಿತಿಗಳ ಕೋಶದಲ್ಲಿವೆ ಈ ಪುಸ್ತಕವನ್ನು ಓದಿ ಹಲವು ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದರು.
ಕವಿ-ಲೇಖಕ ಸಿ.ಎಚ್.ಮರಿದೇವರು ಮಾತನಾಡಿ ಮನುಷ್ಯ ಒಳ್ಳೆಯ ಚಿಂತನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕಾಗಿದೆ ಎಂದರು.  
ಸಮಾರಂಭದಲ್ಲಿ ಮುಖ್ಯಮಂತ್ರಿಗಳ 2012ರ ಪೋಲಿಸ್ ಚಿನ್ನದ ಪದಕ ಪುರಸ್ಕೃತ, ಸಿ.ಆರ್.ರವೀಶ್ ಮತ್ತು ಪ್ರೊ.ಸಿ.ಎಚ್.ಮರಿದೇವರು ರವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ರವರು ಬರೆದಿರುವ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾ.ಕಸಾಪ ಅಧ್ಯಕ್ಷ ರವಿಕುಮಾರ್, ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್ ಮಾತನಾಡಿದರು.
ನಡೆದ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಕವಿತೆಯನ್ನು ವಾಚಿಸಿದರು. ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸ್ವಾಗತಿಸಿದರೆ ಸಿ.ಬಿ.ಪರಮೇಶ್ ನಿರೂಪಿಸಿದರು. ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಕವಿಗಳನ್ನು ಪರಿಚಯಿಸಿದರೆ, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ವಂದಿಸಿದರು.
ವಿಧಾನಸಭೆ ಚುನಾವಣೆಗೆ 15 ಅಭ್ಯಥರ್ಿಗಳಿಂದ 21 ನಾಮಪತ್ರಗಳು ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ಏ.18 : ಚಿಕ್ಕನಾಯಕನಹಳ್ಳಿ ವಿಧಾನಸಭೆ ಚುನಾವಣೆಗೆ 15 ಅಭ್ಯಥರ್ಿಗಳಿಂದ 21 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಸಿದವರ ವಿವರ : ಜೆಡಿಎಸ್-ಸಿ.ಬಿ.ಸುರೇಶ್ಬಾಬು 2ನಾಮಪತ್ರ, ಕೆಜೆಪಿ-ಜೆ.ಸಿ.ಮಾಧುಸ್ವಾಮಿ3ನಾಮಪತ್ರ, ಬಿಜೆಪಿ-ಕೆ.ಎಸ್.ಕಿರಣ್ಕುಮಾರ್1, ಕಾಂಗ್ರೆಸ್-ಎಸ್.ಎನ್.ಸತೀಶ್1, ಬಿಜೆಪಿ-ಕವಿತಾಕಿರಣ್ಕುಮಾರ್1, ಜೆಡಿಯು-ಪ್ರಕಾಶ್ಯಾದವ್3, ಬಿಎಸ್ಪಿ-ಕ್ಯಾಪ್ಟನ್ಸೋಮಶೇಖರ್1, ಬಂಡಾಯಬಿಜೆಪಿ-  ಎನ್.ಶಿವಕುಮಾರ್2, ರೈತಸಂಘ-ಸತೀಶ್ಕೆಂಕೆರೆ1, ರೈತಸಂಘ-ಚಂದ್ರಕಲಾ1, ಪಕ್ಷೇತರ-ರಾಮಚಂದ್ರಯ್ಯ1, ಪಕ್ಷೇತರ-ಆರ್.ಕುಮಾರ್1, ಬಿಎಸ್ಆರ್ಕಾಂಗ್ರೆಸ್-ದೇವರಾಜುಕೆ.ಎಲ್1, ವೆಲ್ಪೇರ್ಪಾಟರ್ಿಆಫ್ಇಂಡಿಯಾ ಹನುಮಂತರಾಮನಾಯ್ಕ1, ಪಕ್ಷೇತರ ಮಂಜುಳನಾಗರಾಜು1 ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ಸಲ್ಲಿಸಿದ್ದಾರೆ.  
ಪಟ್ಟಣದಲ್ಲಿ ಸಿಐಎಸ್ಎಪ್ ಪಡೆ ಪಥಸಂಚಲನ
aPÀÌ£ÁAiÀÄPÀ£ÀºÀ½îAiÀÄ°è ¥ÉÆð¸ï ºÁUÀÆ ¹.L.J¸ï.J¥sï 608PÁåA¥ï vÀAqÀ ZÀÄ£ÁªÀuÉ ¸ÀªÀÄAiÀÄzÀ°è ªÀÄÄ£ÉßZÀjPÉ PÀæªÀĪÁV ¹.¦.L PÉ.¥Àæ¨sÁPÀgï £ÉÃvÀÈvÀézÀ°è £ÀUÀgÀ ¥ÀæzÀQëuÉ ªÀiÁqÀ¯Á¬ÄvÀÄ.
ಚಿಕ್ಕನಾಯಕನಹಳ್ಳಿ,ಏ.18 :  ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಗಲಭೆ ಆಗದಂತೆ ನೋಡಿಕೊಳ್ಳಲು 84 ಜನ ಕೇಂದ್ರಿಯ ಕೈಗಾರಿಕಾ ಮೀಸಲು ಭದ್ರತಾ ಪಡೆ ಗುರುವಾರ ಪಟ್ಟಣದಲ್ಲಿ ಸಹಾಯಕ ಕಮಾಂಡ್ ಅಜಯ್ ಸಿಂಗ್  ನೇತ್ವತದಲ್ಲಿ ಪಥಸಂಚಲನ ನಡೆಸಿದರು. 
ಪಟ್ಟಣದ ಪ್ರವಾಸಿ ಮಂದಿರಯಿಂದ ಹೋರಾಟ ಕೇಂದ್ರಿಯ ಭದ್ರತಾ ಪಡೆ ದ ಸೈನಿಕರು ಬಿ.ಹೆಚ್. ರಸ್ತೆ, ಅಂಭೇಡ್ಕರ್ ನಗರ, ಹೊಸಬೀದಿ, ಮಹಾಲಕ್ಷ್ಮಿ ಬಡಾವಣೆ, ವಿದ್ಯಾನಗರ, ಜೋಗಿಹಳ್ಳಿಯಲ್ಲಿ ಪಥ ಸಂಚಲನ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ಅಪರಾಧ ತಡೆಗಟ್ಟುವ ಹಿನ್ನೆಲೆಯಲ್ಲಿ ಪಥಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ಕೆ.ಪ್ರಭಾಕರ್, ಪಿ.ಎಸ್.ಐ ಗೋವಿಂದ್ ಹಾಗೂ ಸಿಬ್ಬಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

aPÀÌ£ÁAiÀÄPÀ£ÀºÀ½îAiÀÄ »AzÀĽzÀ ªÀUÀðUÀ¼À ªÉÄnæPï £ÀAvÀgÀzÀ «zÁåyð¤AiÀÄgÀ ªÀ¸Àw¤®AiÀÄzÀ°è 2£Éà ºÀAvÀzÀ ¸ÀªÀðgÀÆ ªÀÄvÀzÁ£À ¥ÀæQæAiÉÄAiÀÄ°è ¥Á¯ÉÆμÀÄîªÀAvÉ CjªÀÅ ªÀÄÆr¸ÀĪÀ PÁAiÀÄðPÀæªÀÄ £ÀqɬÄvÀÄ. «¸ÀÛgÀuÁ¢üPÁj ªÀ£ÀªÀiÁ® ¨sÀƪÀÄÌgï ªÀÄvÀzÁ£ÀzÀ ¥À«vÀævÉ ºÁUÀÆ dªÀ¨ÁÝj PÀÄjvÀÄ «zÁåyð¤AiÀÄjUÉ CjªÀÅ ªÀÄÆr¹zÀgÀÄ. ªÉÄðéZÁgÀPÀgÁzÀ eÉÆåÃw n, dUÀ£ÁßxÀ, ±À²zsÀgï, ²ªÀªÀÄÆwð G¥À¹ÜvÀjzÀÝgÀÄ.
aPÀÌ£ÁAiÀÄPÀ£ÀºÀ½îAiÀÄ°è £ÀqÉzÀ ©eɦ ¸À¨sÉAiÀÄ°è ¥ÀlÖtzÀ eÉ.r.J¸ï ºÁUÀÆ PÉ.eÉ.¦¬ÄAzÀ ºÀ®ªÀgÀÄ ©eɦ ¥ÀæzsÁ£À PÁAiÀÄðzÀ²ð PÀ«vÀQgÀuïPÀĪÀiÁgï gÀªÀgÀ £ÉÃvÀÈvÀézÀ°è ©.eÉ.¦ ¥ÀPÀë ¸ÉÃjPÉÆAqÀgÀÄ. F ¸ÀAzÀ¨sÀðzÀ°è f.¥ÀA ¸ÀzsÀ¸Àå ¥ÀAZÁPÀëj, vÁ.¥ÀA CzsÀåPÀë dUÀ¢Ã±ï, vÁ ©.eÉ.¦ CzsÀåPÀë «Ä°Öç ²ªÀtÚ. ºÁUÀÆ ©.eÉ.¦ PÁAiÀÄðPÀvÀðgÀÄ G¥À¹ÜvÀjzÀÝgÀÄ.

Wednesday, April 17, 2013


ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಎಸ್.ಎನ್.ಸತೀಶ್ ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಏ.17 : ಈಗ ಕಣದಲ್ಲಿ ಮುಂಚೂಣಿಯಲ್ಲಿರುವವರು ಅಧಿಕಾರ ಉಂಡವರೆ ಅವರಿಗೆ ಗೆಲ್ಲುವ ತನಕ ಜನ ಬೇಕಷ್ಟೇ ನಂತರ ಜನರತ್ತ ತಿರಿಗಿಯೂ ನೋಡುವುದಿಲ್ಲ ಇದನ್ನರಿತು ಕ್ಷೇತ್ರದ ಜನತೆ ನನಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಸಾಸಲು ಸತೀಶ್ ಹೇಳಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಾವು ಈಗಾಗಲೇ ಹಲವು ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದು ಅಲ್ಲಿನ ಜನತೆ ಹೊಸ ಅಭ್ಯಥರ್ಿ ಯುವಕನಿಗೆ ಸ್ಪಂದಿಸುತ್ತೇವೆ, ಚುನಾವಣೆಗೆ ಸ್ಪಧರ್ಿಸಿ ಬೆಂಬಲಿಸುವೆವು ಎಂಬ ಮಾತುಗಳನ್ನು ತಿಳಿಸುತ್ತಿದ್ದಾರೆ, ಹಲವು ನಾಯಕರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜನರ ಬಳಿಯೇ ಆಗಮಿಸುವುದಿಲ್ಲ ಸಿಕ್ಕ ಅವಕಾಶವನ್ನು ಬಳಸದೆ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ ಎಂದರು.
ರಾಜ್ಯದಲ್ಲಿ ಈ  ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಕರ್ಾರವೆ ಅಧಿಕಾರಕ್ಕೆ ಬರಲಿದ್ದು ತಾಲ್ಲೂಕಿನಲ್ಲಿಯೂ ಕಾಂಗ್ರೆಸ್ ಪಕ್ಷವೇ ಜಯಗಳಿಸಿದರೆ ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸುವುದರ ಜೊತೆಗೆ ತಾಲ್ಲೂಕನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಚಿಂತನೆ ಇದೆ ಎಂದರಲ್ಲದೆ ಇಷ್ಟು ವರ್ಷಗಳ ಚುನಾವಣೆಯಲ್ಲಿ ಯುವ ಅಭ್ಯಥರ್ಿಯನ್ನು ಕಡೆಗಣಿಸುತ್ತಿದ್ದ ಜನತೆ ಈ ಬಾರಿ ಯುವಕನಾದ ನನಗೆ ಪ್ರಥಮ ಆಧ್ಯತೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಬಸವರಾಜು ಮಾತನಾಡಿ ಕಳೆದ ಎಂ.ಪಿ ಚುನಾವಣೆಯಲ್ಲಿ 25ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ, ವಿಧಾನಸಭಾ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚಿನ ಮತಗಳಿಸಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ.ಲಕ್ಕಪ್ಪ, ಗೋವಿಂದರಾಜು, ಕೆ.ಜಿ.ಕೃಷ್ಣೇಗೌಡ, ರೆಹಮುತುಲ್ಲಾ, ನೆರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರಿದ್ದರು.

ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ನಾಮಪತ್ರ ಸಲ್ಲಿಕೆ
                             
ಚಿಕ್ಕನಾಯಕನಹಳ್ಳಿ,ಏ.17 : ಇಪ್ಪತ್ತು ವರ್ಷದ ಹಿಂದೆ ಪುರಸಭಾ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ ನನ್ನ ಸೇವೆಯನ್ನು ಮತ್ತೆ ತಾಲ್ಲೂಕಿನಾದ್ಯಂತ ಮುಂದುವರೆಸಲು ಎಂ.ಎಲ್.ಎ ಚುನಾವಣೆಗೆ ಸ್ಪಧರ್ಿಸಿದ್ದು ನನ್ನ ಸೇವೆಯನ್ನು ಜನರಿಗೆ ಎಂದೂ ಕಟ್ಟಿಬದ್ದರಾಗಿ ನಿರ್ವಹಿಸುತ್ತೇನೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬಹುಜನಾ ಸಮಾಜ ಪಾಟರ್ಿ ಪಕ್ಷದ ಸಿದ್ದಂತವಾದ ಶೋಷಣೆ ವಿರುದ್ದ ಹೋರಾಟ ತತ್ವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪಧರ್ಿಸಿದ್ದು, ವಾರದ ಏಳು ದಿನವೂ ಸಾರ್ವಜನಿಕರಿಗೆ ನಮ್ಮ ಪಕ್ಷದ ಸೇವೆಯನ್ನು ಮುಂದುವರೆಯುತ್ತಿರುತ್ತದೆ ಎಂದರಲ್ಲದೆ ಪಕ್ಷದ ರಾಜ್ಯ ಮತ್ತು ಜಿಲ್ಲಾ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಿದ್ದಾರೆ ಅಲ್ಲದೆ ಶೋಷಣೆ ವಿರುದ್ದ ನಮ್ಮ ಹೋರಾಟ ಅವಿರತವಾಗಿ ಇರುತ್ತದೆ ಎಂದರು.

Tuesday, April 16, 2013


ಬಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ.

ಚಿಕ್ಕನಾಯಕನಹಳ್ಳಿ,ಏ.16 : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಕಾಂಗ್ರೆಸ್ ಮುಖಂಡರು ಕೈಕೈ ಮಿಲಾಯಿಸುವ ಹಂತ ತಲುಪಿ ಸಿ.ಬಸವರಾಜು ರವರು ಸೀಮೆಣ್ಣೆ ಕೃಷ್ಣಯ್ಯನವರ ಮೇಲೆ ಹಲ್ಲೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು  ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ಘಟನೆ ನಡೆಯಿತು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸೀಮೆಣ್ಣೆ ಕೃಷ್ಣಯ್ಯನವರನ್ನು ನೇಮಿಸಿರುವ ವಿಷಯ ಪ್ರಸ್ತಾಪವಾಗಿ ಸಭೆಯಲ್ಲಿದ್ದ ಮುಖಂಡರಲ್ಲೇ ಗೊಂದಲವೇರ್ಪಟ್ಟಿತ್ತು. ಗೊಂದಲಕ್ಕೆ ಇನ್ನಷ್ಟು ಇಂಬುಕೊಡುವಂತೆ ಸಿ.ಬಸವರಾಜುರವರ ಬೆಂಬಲಿಗರು ಏರಿದ ಧ್ವನಿಯಲ್ಲಿ ಅಲ್ಲಿದ್ದ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯುತ್ತಿರಲಿಲ್ಲ. ಗಲಾಟೆ ಗದ್ದಲ ಅತಿಯಾಗಿ ಯಾರ ಮಾತನ್ನು ಯಾರೂ ಕೇಳುವಂತಿರಲಿಲ್ಲ.
ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ವಿಧಾನ ಸಭೆಯ ಅಧಿಕೃತ ಅಭ್ಯಥರ್ಿ ಎಸ್.ಎನ್.ಸತೀಶ್ ಸಾಸಲು ಮಧ್ಯ ಪ್ರವೇಶಿಸಿ  ಸೀಮೆಣ್ಣೆ ಕೃಷ್ಣಯ್ಯನವರ ನೇಮಕಾತಿ ವಿಷಯವಾಗಿ ಗೊಂದಲವಾಗಿರುವುದರಿಂದ ಈ ವಿಷಯವನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪಕ್ಷದ ವರಿಷ್ಠರಿಗೆ ತಿಳಿಸುವುದಾಗಿ ಹೇಳಿದರಲ್ಲದೆ,  ಈ ಬಗ್ಗೆ ಸೂಕ್ತ ಆದೇಶ ಬರುವವರೆಗೆ ಸಿ.ಬಸವರಾಜು ರವರೇ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಈ ವಿಷಯವಾಗಿ ಗೊಂದಲ ಬೇಡ ಪಕ್ಷದ ವರಿಷ್ಠರ ಆದೇಶ ಪಾಲಿಸೋಣ ಎಂದು ಹೇಳುತ್ತಿದ್ದ ಸಮಯದಲ್ಲೇ ಮಧ್ಯೆ ಪ್ರವೇಶಿಸಿದ ಸೀಮೆಣ್ಣೆ ಕೃಷ್ಣಯ್ಯ, ವರಿಷ್ಠರು ನನ್ನನ್ನು ಬಿ.ಸಿ.ಸಿ. ಅಧ್ಯಕ್ಷನಾಗಿ ನೇಮಿಸಿರುವುದರಿಂದ ನಾನೇ ಮುಂದುವರೆಯುತ್ತೇನೆ ಎಂದಾಕ್ಷಣ ಹಿಂದೆ ನಿಂತಿದ್ದ ಸಿ.ಬಸವರಾಜು ಸೀಮೆಣ್ಣೆ ಕೃಷ್ಣಯ್ಯ ನವರನ್ನು ತಳ್ಳಿದರು. 
ಈ ಘಟನೆಯಿಂದ ವಿಚಲಿತರಾದ ಸೀಮೆಣ್ಣೆ ಕೃಷ್ಣಯ್ಯ ನವರು ತಮ್ಮನ್ನು ತಳ್ಳಿದವರು ಯಾರೆಂಬುದನ್ನು ನೋಡುವುದರೊಳಗಾಗಿ ಬಸವರಾಜು ಬೆಂಬಲಿಗರು ಕೈ ಮೇಲೆತ್ತಿದ್ದರು. ಪರಿಸ್ಥಿತಿಯನ್ನು ಅರಿತ ಸೀಮ್ಮೆಣ್ಣೆ ಕೃಷ್ಣಯ್ಯ ಕೆಲವರ ದೌರ್ಜನ್ಯಕ್ಕೆ ಧಿಕ್ಕಾರವಿರಲಿ ಎಂದು ಘೋಷಣೆ ಕೂಗುತ್ತಾ ಹೊರಟು ಹೋದರು.
ಕೊರಳಪಟ್ಟಿ ಹಿಡಿದು ಎಳೆದಾಡಿ ಹೊಡೆದರು: ಪರಿಸ್ಥಿತಿ ತಿಳಿಯಾಯಿತು ಎಂಬುವಷ್ಟರಲ್ಲಿ ಮನೆಗೆ ತೆರಳಿದ್ದ ಸೀಮೆಣ್ಣೆಕೃಷ್ಣಯ್ಯ ಪುನಃ ಗಲಾಟೆ ನಡೆಯುತ್ತಿದ್ದ ಜಾಗಕ್ಕೆ ಬಂದು ಕೆ.ಪಿ.ಸಿ.ಸಿ. ಕಛೇರಿಯಿಂದ ತನ್ನನ್ನು ನೇಮಕ ಮಾಡಿರುವ ಒಕ್ಕಣೆ ಇರುವ ಆದೇಶ ಪ್ರತಿಯನ್ನು ತಂದು ಸ್ಥಳದಲ್ಲಿದ್ದ ಮಾಧ್ಯಮದವರಿಗೂ ಸೇರಿದಂತೆ ಎಲ್ಲರಿಗೂ ಹಂಚುತ್ತಿದ್ದರು ಇದರಿಂದ ಕುಪಿತಗೊಂಡ ಸಿ.ಬಸವರಾಜು ಬಂದು ಬಂದವರೆ, ನನ್ನ ಬಗ್ಗೆ ವರಿಷ್ಠರಿಗೆ ಇಲ್ಲಸಲ್ಲದ ಚಾಡಿ ಚುಚ್ಚಿರುವುದಲ್ಲದೆ, ನನ್ನ ಮೇಲೆ ಪಿತೂರಿ ಮಾಡುತ್ತೀಯ ಎಂದು ಸೀಮೆಣ್ಣೆ ಕೃಷ್ಣಯ್ಯ ನವರ ಕೊರಳ ಪಟ್ಟಿ ಹಿಡಿದು ಎಳೆದಾಡಿದರಲ್ಲದೆ, ಸಿ.ಬಸವರಾಜು ರವರ ಕೈ ಸೀಮೆಣ್ಣೆ ಕೃಷ್ಣಯ್ಯನವರ ಕೆನ್ನೆಗೆ ತಾಕೀತು ಇಬ್ಬರೂ ಕ್ಷಣಕಾಲ ಸೆಣೆಸಾಡಿದರು, ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದರು. ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ.ಪ್ರಭಾಕರ್ ರವರಿಗೆ  ಸೀಮೆಣ್ಣೆ ಕೃಷ್ಣಯ್ಯ ನನ್ನ ಮೇಲೆ ಹಲ್ಲೆಯಾಗಿದೆ ಈ ಬಗ್ಗೆ ದೂರು ಕೊಡುವುದಾಗಿ ತಿಳಿಸಿದರು.
( ಈ ವರದಿಗೆ ಪೊಟೊ ಇದೆ)

ತಾಲೂಕಿನ ಹೋರಾಟಗಳಿಗೆ ಸದಾ ಸ್ಪಂದಿಸುತ್ತೇನೆ ರೈತ ಸಂಘದ ಅಭ್ಯಥರ್ಿ ಸತೀಶ್ ಕೆಂಕೆರೆ

ಚಿಕ್ಕನಾಯಕನಹಳ್ಳಿ,ಏ.16: ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ, ಸೋತರೂ ರೈತರ ಪರವಾಗಿನ ಹೋರಾಟ ಮುಂದುವರಿಯುತ್ತಲೇ ಇರುತ್ತದೆ ಎಂದು ರೈತ ಸಂಘದ ಅಧಿಕೃತ ಅಭ್ಯಥರ್ಿ ಸತೀಶ್ಕೆಂಕೆರೆ ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಮ್ಮ ಬೆಂಬಲಿಗರ ಜೊತೆ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
 ರೈತರ ಪರವಾಗಿ ಮಾಡಿದ ಹೋರಾಟದಿಂದಲೇ ತಾಲ್ಲೂಕಿನ ಜನತೆಗೆ ಪರಿಚಿತನಾಗಿದ್ದೇನೆ, ಆದ್ದರಿಂದ ಈ ಬಾರಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರಲ್ಲದೆ ಓಟು ಕೊಡಿ ನೋಟು ಕೊಡಿ ಎಂಬ ಸಂದೇಶವನ್ನಿಟ್ಟುಕೊಂಡು ರೈತ ಸಂಘ ಚುನಾವಣೆಯಲ್ಲಿ ಸ್ಪದರ್ಿಸುತ್ತಿದೆ ಎಂದರು.
ತಾಲ್ಲೂಕಿನಲ್ಲಿ ನೀರಾವರಿ ಹೋರಾಟದ ಬಗ್ಗೆ ಹಾಗೂ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಹೋರಾಟ ಮಾಡುವವರೇ ಇಲ್ಲದಂತಾಗಿದ್ದ ಸಂದರ್ಭದಲ್ಲಿ ನಮ್ಮ ಸಂಘ ರೈತರ ಪರವಾಗಿ ಧ್ವನಿ ಎತ್ತಿ ತಾಲ್ಲೂಕಿಗೆ ನೀರು ತರುವಲ್ಲಿ ಶ್ರಮಿಸಿದೆ ಎಂದರು. ರೈತ ಸಂಘದ ಅಭ್ಯಥರ್ಿಗಳು ವಿಧಾನಸಭೆಗೆ ಆಯ್ಕೆಯಾದರೆ ಹುಳಿಯಾರು ಹೋಬಳಿಯನ್ನು ತಾಲ್ಲೂಕನ್ನಾಗಿ ಪರಿವತರ್ಿಸಲು ಹಾಗೂ ಕೊಬ್ಬರಿಗೆ ವೈಜಾನಿಕ ಬೆಲೆ ತರಲು ಸದನದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ 1ಲಕ್ಷ ರೂ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ ಆದರೆ ರೈತ ಸಂಘ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ರಾಜ್ಯ ರೈತ ಸಂಘ ತೀಮರ್ಾನಿಸಿದೆ ಎಂದರಲ್ಲದೆ ರಾಜ್ಯದ ಹಲವು ಪಕ್ಷಗಳು ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ ಆದರೆ ನಮ್ಮ ಸಂಘ ಯಾವುದೇ ಪ್ರಣಾಳಿಕೆ ಬಿಡಗಡೆ ಮಾಡದೆ ಕೆಲಸ ಮಾಡಿ ತೋರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅಣೆಕಟ್ಟೆ ವಿಶ್ವನಾಥ್, ಬೆನ್ನಾಯ್ಕನಹಳ್ಳಿ ದೇವರಾಜು, ಮಲ್ಲೇಶ್ ಕೆಂಕೆರೆ. ತಿಮ್ಲಾಪುರ ಶಂಕರಪ್ಪ , ಗಂಗಾಧರಪ್ಪ ದಬ್ಬೇಘಟ್ಟ, ಷಣ್ಮುಖ ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿಯಲ್ಲಿ ಕವಿಗೋಷ್ಠಿ

ಚಿಕ್ಕನಾಯಕನಹಳ್ಳಿ,ಏ.16: ಪಟ್ಟಣದ ಯಗಾದಿ ಸಂಭ್ರಮದ ಪ್ರಯುಕ್ತ ಯುಗಾದಿ ಸಂಭ್ರಮಾಚರಣೆಗಾಗಿ ರೋಟರಿ ಬಾಲಭವನದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಗೋಷ್ಠಿಯನ್ನು ಕವಿ-ರಂಗಕಮರ್ಿ ನಟರಾಜ್ ಹೊನ್ನವಳ್ಳಿ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಸ್ಥಳೀಯ ಕವಿಗಳಾದ ಶಬ್ಬೀರ್, ಗುರುಪ್ರಸಾದ್ ಕಂಟಲಗೆರೆ, ನವೀನ್ ಹಳೇಮನೆ, ಬಿ.ಪಿ.ನಾಗರಾಜ್, ಮೇ.ನಾ.ತರಂಗಿಣಿ, ಶ್ರೀಧರ್ ದೇವರಹಳ್ಳಿ, ಧನಂಜಯ ದೇವರಹಳ್ಳಿ, ಎಸ್.ಬಿ.ಕುಮಾರ್, ಸಿ.ರವಿಕುಮಾರ್, ವಿಜಯಹಾಲುಗೊಣ, ಪುಷ್ಪ ಶಿವಣ್ಣ, ಟಿ.ಎಲ್.ರಂಗನಾಥ ಶೆಟ್ಟಿ, ಸಿ.ಪಿ.ರಾಧಾಮಣಿ, ಸುರೇಶ್ ಎಚ್, ಡಿ.ಎಲ್.ರಮೇಶ್ ಭಾಗವಹಿಸಲಿದ್ದು, ಸಿ.ಗುರುಮೂತರ್ಿ ಕೊಟಿಗೆಮನೆ ಕವಿಗಳನ್ನು ಪರಿಚಯಿಸಲಿದ್ದಾರೆ. 

Monday, April 15, 2013


ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ಚಚರ್ಿಸಲು ಸಿದ್ದ: ಸಿ.ಬಿ.ಎಸ್.ಸವಾಲ್

ಚಿಕ್ಕನಾಯಕನಹಳ್ಳಿ,ಏ.15 : ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ  ಏನೇನು ಅಭಿವೃದ್ದಿಯಾಗಿದೆ ಎನ್ನುವ ಬಗ್ಗೆ ದಾಖಲೆ ಸಮೇತ  ಪ್ರದಶರ್ಿಸುತ್ತೇನೆ ಈ ಬಗ್ಗೆ ಚಚರ್ಿಸಲು ಯಾವುದೇ  ವೇದಿಕೆಗೆ ಕರೆದರೂ ಬರುತ್ತೇನೆ ಎಂದು  ಜೆಡಿಎಸ್ ಅಭ್ಯಥರ್ಿ ಸಿ.ಬಿ.ಸುರೇಶ್ಬಾಬು ಸವಾಲು ಹಾಕಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ ರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಓಟಿಗಾಗಿ ಗಂಡ ಹೆಂಡತಿಯನ್ನು ಬೇರೆ ಮಾಡುವ ರಾಜಕಾರಣಿ, ಸೋತ ನಂತರ ತಮ್ಮ ತೋಟ ಮತ್ತು ಮನೆ ಬಿಟ್ಟು ಆಚೆ ಬರದೆ ಚುನಾವಣೆ ಆರು ತಿಂಗಳು ಇದೆ ಎನ್ನುವಾಗ ಜನರ ಬಳಿ ಬರುತ್ತಾರೆ  ಎಂದು ಆರೋಪಿಸಿದರಲ್ಲದೆ, ಹುಲಿವೇಷ ಹಾಕಿದಾದ ಹುಲಿ ಯಂತೆ ಕಾಣಿಸುತ್ತಾರೇನೊ ಹೊರತು ಅವರು. ಕಾಡಿನಿಂದ ಆಚೆ ಬರದ ಅವರನ್ನು ಮತ್ತೆ ಜನರೆ ಕಾಡಿಗೆ ಕಳಿಸುತ್ತಾರೆ ಎಂದರು.
ಅವರು  ಶಾಸಕರಾಗಿದ್ದ ಸಮಯದಲ್ಲಿ ಸದನದಲ್ಲಿ ನೈಸ್, ಕಾರಿಡಾರ್ ಬಗ್ಗೆ ಮಾತನಾಡಿದರೆ ಹೊರತು ತಾಲ್ಲೂಕಿನ ಬಡ ಜನತೆಯ ಪರವಾದ ವಿಷಯದ ಬಗ್ಗೆ ಚಚರ್ಿಸಲೇ ಇಲ್ಲ, ತಾಲ್ಲೂಕಿನ ರೈತರಿಗೆ  ಹೆಚ್ಚಿಗೆ ಅನುಕೂಲವಾಗುವ  ಕೊಬ್ಬರಿ ಬೆಲೆಯ ಬಗ್ಗೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಚಚರ್ಿಸದೆ ನಿಷ್ಕ್ರೀಯರಾಗಿ ಈಗ ನೀರು ತರುವಲ್ಲಿ ನಮ್ಮ ಪಾತ್ರವೂ  ಇದೆ ಎಂದು ಹೇಳುತ್ತಾರೆ ಎಂದರು.
ತಮ್ಮ ವಿರುದ್ದ ಅಪಪ್ರಚಾರ ಮಾಡುತ್ತಾ ಮೊದಲಿನಂತೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ, ಅವರು ಶಾಸಕರಾಗಿದ್ದ ಸಮಯದಲ್ಲಿ ಯಾವ ಅಭಿವೃದ್ದಿ ಕೆಲಸ ಮಾಡದೆ  ಚುನಾವಣೆ ಸಮಯದಲ್ಲಿ ಜನಗಳ ಮುಂದೆ ತಮ್ಮ ವಿರುದ್ದ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು, 
ಎಲ್ಲಾ ಬಡವರ್ಗದ ಜನತೆ ನನ್ನ ಬೆಂಬಲಕ್ಕೆ ನಿಂತಿದೆ ಕೆಜೆಪಿ ಮತ್ತು ಬಿಜೆಪಿ ಇಬ್ಬರೂ ಜೋಬುಗಳ್ಳರು ಅನುಕಂಪದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದರೂ ಆಡಳಿತ ಸುಧಾರಣೆ ಅವರಿಂದಾಗದು ಅದಕ್ಕಾಗಿ ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ನಮ್ಮ ತಂದೆಯವರು ಶಾಸಕರಾಗಿದ್ದಾಗ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಹೋರಾಟ ಮಾಡಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀರಾವರಿ ಸಮಸ್ಯೆ ಬಗೆ ಹರಿಯುತ್ತದೆ ಎನ್ನುವ ಉದ್ದೇಶದಿಂದ ಕೆಸಿಪಿಯಿಂದ ಜೆಡಿಎಸ್ ಪಕ್ಷ ಸೇರಿದ್ದು, ಅಲ್ಲದೆ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ನಾನೂ ಸದನದಲ್ಲಿ ಚಚರ್ಿಸಿದ್ದೇನೆ ಎಂದರು.
ಈಗಿನ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ 20ಸಾವಿರ ಹೆಣ್ಣುಮಕ್ಕಳಿಗೆ ತಾಲ್ಲೂಕಿನಲ್ಲಿಯೇ ಕೆಲಸ ಸಿಗುವಂತೆ ಗಾಮರ್ೆಂಟ್ಸ್ನ್ನು ಆರಂಭಿಸಲಾಗುವುದು, ಎಂದಿನಂತೆ ತಾಲ್ಲೂಕಿನ ಅಭಿವೃದ್ದಿಯನ್ನು ಕೊಂಡೊಯ್ಯುವತ್ತ ಗಮನ ಹರಿಸಲಿದ್ದು ಕೋಮು ಸೌಹಾರ್ಧತೆ ಕಾಪಾಡುತ್ತೇನೆ ಎಂದರಲ್ಲದೆ ಹಿಂದಿನ ಬಾರಿ ಶಾಸಕನಾಗಿದ್ದ ಸಮಯದಲ್ಲಿ ತಾಲ್ಲೂಕಿಗೆ ಅಗ್ನಿಶಾಮಕ ಠಾಣೆಗೆ ಹಣ ಮಂಜೂರಾಗಿತ್ತು ಆದರೆ ನಂತರ ಬಂದ ಶಾಸಕರು ಯೋಜನೆಗೆ ಜಾಗವನ್ನೇ ನೀಡಲಿಲ್ಲ ಮತ್ತೊಮ್ಮೆ ನಾನು ಶಾಸಕನಾಗಿ ಆಯ್ಕೆಯಾದಾಗಲೇ ಠಾಣೆ ಆರಂಭಗೊಂಡಿದ್ದು ಎಂದು ಸಮಥರ್ಿಸಿಕೊಂಡರು.
ರಾಜ್ಯದ ಸಮಸ್ಯೆ ಬಗೆಹರಿಸುವತ್ತ ನನ್ನ ಚಿಂತನೆ ಇತ್ತು: ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ,ಏ.15 : ನಮ್ಮ ಕ್ಷೇತ್ರದ ಸಮಸ್ಯೆ ಮಾತ್ರ ಬಗೆ ಹರಿಸಲು ಮುಂದಾದರೆ ರಾಜ್ಯ ಸಮಸ್ಯೆ ಬಗೆಹರಿಸುವವರು ಯಾರು, ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕದ ಸಮಸ್ಯೆಯನ್ನು ಬಗೆಹರಿಸಲು, ಶಾಸಕರು ತಮ್ಮ ಕ್ಷೇತ್ರದ ಜೊತೆಗೆ ರಾಜ್ಯ ಸಮಸ್ಯೆಯ ಬಗೆಹರಿಸಲು ಮುಂದಾಗಬೇಕು ಅದಕ್ಕಾಗಿಯೇ ನಾನು ನೈಸ್, ಇಸ್ಕಾನ್ ನಂತಹ ರಾಜ್ಯ ಸಮಸ್ಯೆ ಬಗ್ಗೆ ಹೋರಾಟ ಮಾಡಿದೆ ಎಂದು ಕೆಜೆಪಿ ಅಭ್ಯಥರ್ಿ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ನಾಮಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕ ವಿಧಾನಸಭೆಗೆ ಅದಕ್ಕಾಗಿ ಕನರ್ಾಟಕದ ಪ್ರತಿಯೊಂದು ಸಮಸ್ಯೆಯನ್ನು ಚಚರ್ಿಸಿ ಆ ಸಮಸ್ಯೆಯನ್ನು ಪರಿಹರಿಸದಿದ್ದರೆ ಶಾಸನ ಸಭೆಗೆ ಗೌರವವಿರುವುದಿಲ್ಲ. ರಾಜ್ಯದಲ್ಲಿ ನೈಸ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಉಳಿದಿತ್ತು ಎಂದರಲ್ಲದೆ ನನ್ನ ಶಾಸಕತನದ ಅವಧಿಯಲ್ಲಿ ತಾಲ್ಲೂಕಿನ ಸಮಸ್ಯೆ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ತಿಳಿಸಿ ಸಮಸ್ಯೆ ಬಗೆ ಹರಿಸುತ್ತಿದ್ದೆ, ನಮಗೆ ಶಕ್ತಿ ಇದೆ ಅದಕ್ಕಾಗಿಯೇ ಅಧಿಕಾರಿಗಳಿಗೆ ಜನರ ಸಮಸ್ಯೆ ಬಗ್ಗೆ ಸ್ಥಳದಲ್ಲಿಯೇ ಬಗೆಹರಿಸುತ್ತಿದೆ ಎಂದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ  ಜಾತಿ ಸಂಘರ್ಷಕ್ಕೆ ಹೇಡೆ ಮಾಡಿಕೊಡದೆ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೇನೆ, ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿ ಶಾಹಿ ಆಡಳಿತವಿತ್ತು  ಎಂದರಲ್ಲದೆ ಸದನದಲ್ಲಿ ಗಣಿ ವಿಚಾರದ ಬಗ್ಗೆ ಚಚರ್ಿಸುತ್ತಿದ್ದೆ ಆದರೆ ಆ ಸಮಯದಲ್ಲಿ ಗಣಿ ಸಮಸ್ಯೆ ಇಷ್ಟು ದೊಡ್ಡದಾಗಿ ಇಲ್ಲದಿದ್ದರಿಂದ ಪ್ರಚಾರವಿರಲಿಲ್ಲ ಎಂದು ತಿಳಿಸಿದರು.

ಬಿ.ಎಸ್.ಪಿ.ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ಕ್ಯಾಪ್ಟನ್ ಸೋಮಶೇಖರ್ ನೇಮಕ


ಚಿಕ್ಕನಾಯಕನಹಳ್ಳಿ,ಏ.15: ಬಿ.ಎಸ್.ಪಿ. ಪಕ್ಷದ ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ನೇಮಕ ಮಾಡಿದ್ದು, ಬುಧವಾರ ಮಧ್ಯಾಹ್ನ ವಿಧಾನ ಸಭಾ ಚುನಾವಣೆಗೆ ಈ ಕ್ಷೇತ್ರದಿಂದ ನಾನು ನಾಮಪತ್ರ ಸಲ್ಲಿಸುತ್ತಿರುವುದಾಗಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಪಿ.ಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪನವರು ಹಾಗೂ ದ್ವಾರಕನಾಥ್ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯ ಮಟ್ಟದ ಸ್ಥಾನಮಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಸಂಘಟನೆ ಮಾಡಿದ್ದೆ ಆದರೆ ಜಾತಿವಾರು ಪ್ರಾತಿನಿಧ್ಯದ ವಿಷಯ ಬಂದಾಗ ನನಗೆ ಹಿನ್ನಡೆಯಾಯಿತು ಎಂದರಲ್ಲದೆ, ಕಾಂಗ್ರೆಸ್ನಲ್ಲಿ ಪಕ್ಷದ ಬೆಳವಣಿಗೆಗಿಂತ ಜಾತಿಗಳ ತೃಪ್ತಿ ಪಡಿಸುವ ಅನಿವಾರ್ಯತೆ ಇದೆ ಎಂದರು.
ಸುದ್ದಿ:1


ಕಾಂಗ್ರೆಸ್ಗೆ ಕ್ಯಾಪ್ಟನ್ ಸೋಮಶೇಖರ್ ರಾಜೀನಾಮೆ


ಚಿಕ್ಕನಾಯಕನಹಳ್ಳಿ,ಏ.14: ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಸೋಮಶೇಖರ್ ಕ್ಷೇತ್ರದ ಸಂಘಟನಾ ಉಸ್ತುವಾರಿ ಹಾಗೂ ವೀಕ್ಷಕ ಸ್ಥಾನಕ್ಕೆ ಸೇರಿದಂತೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾ ಅಧ್ಯಕ್ಷ ಷಫಿ ಅಹಮದ್ ರವರಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಾಗಾರಿ ಆರಂಭ: ಕೆ.ಎಸ್.ಕಿರಣ್ಕುಮಾರ್.

  • ಬಿ.ಜೆ.ಪಿ ಸಕರ್ಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಮೂನ್ನೂರು ಕೋಟಿ ರೂ ಅನುದಾನ:
  • ಸುಳ್ಳು, ಅಪಪ್ರಚಾರದಲ್ಲೇ ಕಾಲ ಕಳೆಯುವ ಮಾಜಿ ಶಾಸಕರು.
  • ಮೂರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುವ ಶಾಸಕರು  

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕಿನ  27ಕೆರೆಗಳ ಕುಡಿಯುವ ನೀರಿನ 102ಕೋಟಿರೂಗಳ ಕಾಮಗಾರಿ ಆರಂಭಗೊಂಡಿದೆ ಇದರಿಂದಾಗಿ ತಾಲೂಕಿನ ಬಹು ದಿನಗಳ ಬಯಕೆ ಈಡೇರಿದಂತಾಗಿದೆ, ಬಿ.ಜೆ.ಪಿ. ಸಕರ್ಾರ ಕ್ಷೇತ್ರದ ಅಭಿವೃದ್ದಿಗಾಗಿ ಮೂರು ನೂರು ಕೋಟಿ ರೂಗಳಷ್ಟು ಅನುಧಾನ ನೀಡಿದೆ ಎಂದು ಬಿ.ಜೆ.ಪಿ.ಅಭ್ಯಥರ್ಿ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿಯ ಆಚರಣೆ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ಬುಕ್ಕಾಪಟ್ಟಣ, ಸಿಂಗದಹಳ್ಳಿ ಕೆರೆಗಳಿಗೂ ನೀರು ತರುವುದಾಗಿ ಭರವಸೆ ನೀಡಿದ ಅವರು, ಈ ಯೋಜನೆಯ ಬಗ್ಗೆ ಮೊದಲು ಕ್ರಮ ಕೈಗೊಂಡವರು, 2005ರಲ್ಲಿ ಕೆ.ಎಸ್.ಈಶ್ವರಪ್ಪನವರು, ಅವರು ಹೇಮಾವತಿ ನಾಲೆಯಿಂದ ಗುರುತ್ವಾಕರ್ಷಣ ಬಲದಲ್ಲಿ ನೀರು ಬರುತ್ತದೆಯೋ ಹೇಗೆಂಬ ಸವರ್ೆ ಕಾರ್ಯಕ್ಕೆ ಮೂರು ಲಕ್ಷ ರೂಗಳನ್ನು ಮಂಜೂರು ಮಾಡಿದ್ದರಿಂದಾಗಿ ಈ ಕಾರ್ಯ ಅರಂಭಗೊಂಡಿತು ಎಂದ ಅವರು, ಇಲ್ಲಿಗೆ ನೀರು ತರಲು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರೂ ತಮ್ಮ ಅವಧಿಯಲ್ಲಿ ಅಗತ್ಯವಾದ ಸಹಕಾರವನ್ನು ನೀಡಿದ್ದಾರೆ ಎಂದರು.
ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೆತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು,  ಮೊರಾಜರ್ಿ ಶಾಲೆ, ಅಗ್ನಿಶಾಮಕ ಠಾಣೆ, ಬುಕ್ಕಾಪಟ್ಟಣ ಹಾಗೂ ಚಿ.ನಾ.ಹಳ್ಳಿಯ ಸಕರ್ಾರಿ  ಡಿಗ್ರಿ ಕಾಲೇಜುಗಳ ಕಟ್ಟಡಗಳಿಗೆ ಹಣ ಮಂಜೂರು ಮಾಡಿದ್ದು, 10 ಪ್ರೌಢಶಾಲೆಗಳಿಗೆ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಈ ಎಲ್ಲಾ ಕಾರ್ಯಗಳು ಬಿ.ಜೆ.ಪಿ. ಸಕರ್ಾರ ಈ ಕ್ಷೇತ್ರದ ಅಭಿವೃದ್ದಿಗಾಗಿ ಮಾಡಿದ ಸಹಕಾರ ಎಂದರು. 
ಮಾಜಿ ಶಾಸಕರು ಅಪಪ್ರಚಾರದ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಈ ಕ್ಷೇತ್ರದಲ್ಲಿನ ಮಾಜಿ ಶಾಸಕರೊಬ್ಬರು ಜೆ.ಎಚ್.ಪಟೇಲ್ ರವರು ಸಿ.ಎಂ.ಆಗಿದ್ದಾಗ ಅವರು, ತುಂಬಾ ಹತ್ತಿರದವರಾಗಿದ್ದರು ಆಗ ಅವರಿಗೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಎಳ್ಳಷ್ಟೂ ಕಾಳಜಿ ತೋರಲಿಲ್ಲ, ಅವರು ಬಹಳ ಹಿಂದೆಯೇ ಇಂತಹ ಕೆಲಸವನ್ನು ಮಾಡಬಹುದಾಗಿತ್ತು ಆದರೆ ಅವರಿಗೆ ಆಗ ಇಚ್ಚಾಶಕ್ತಿ ಇರಲಿಲ್ಲವೇನೊ,  ಅವರಿಗೇನದ್ದರೂ ಕಣ್ಣಿಗೆ ಕಾಣುವುದು, ನೈಸ್, ಏಟ್ರಿಯಾ ಹೋಟೆಲ್, ಇಸ್ಕಾನ್ ನಂತಹ ಥೈಲಿ ತಂದು ಕೊಡುವವರ ಬಗ್ಗೆ ಮಾತನಾಡುತ್ತಾರೋ ಹೊರತು, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಿಂಚಿತ್ತೂ ಯೋಚಿಸಲೂ ಇಲ್ಲ,  ವಿಶೇಷ ಅನುಧಾನಗಳನ್ನು ತರಲಿಲ್ಲವೆಂದರು. 
ಬಹಳ ಹಿಂದೆಯೇ ಹೇಮಾವತಿ ನೀರು ತರುವ ಪ್ರಯತ್ನ ಮಾಡಿದ್ದೆ ಅದಕ್ಕಾಗಿ ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗಲೇ ವಾಟರ್ ಅಲೋಕೇಶನ್ ಮಾಡಿಸಿಕೊಂಡಿದ್ದೆ ಎಂದು ಹೇಳುವ ಮಾಜಿ ಶಾಸಕರು, ಅದರ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದಶರ್ಿಸಲಿ ಎಂದು ಸವಾಲ್ ಹಾಕಿದರು.
ಓಟು ಬ್ಯಾಂಕಿಗಾಗಿ ಯಡಿಯೂರಪ್ಪನವರ ಹಿಂದೆ ಹೋಗಿದ್ದಾರೆ ಹೊರತು, ಯಡಿಯೂರಪ್ಪನವರ ಮೇಲಿನ ನಿಜವಾದ ಕಾಳಜಿ ಇದ್ದಿದ್ದರೆ, ಅಂದು ಜೆ.ಡಿ.ಎಸ್.ನವರು ಯಡಿಯೂರಪ್ಪನವರಿಗೆ ಮೋಸ ಮಾಡಿದಾಗ, ಮಾಜಿ ಶಾಸಕರು ಯಡಿಯೂರಪ್ಪನವರನ್ನು ಕುರಿತು ಇನ್ನೂ ಏನು ಮುಖ ನೋಡುತ್ತಿದ್ದೀರಿ, ರಾಜೀನಾಮೆ ಬಿಸಾಕಿ ಎಂದು ಹೇಳಿದರೇ ಹೊರತು, ಸಹಾನೂಭೂತಿಗಾದರೂ ಯಡಿಯೂರಪ್ಪನವರ ಬೆಂಬಲಕ್ಕೆ ಮಾಜಿ ಶಾಸಕರು ನಿಲ್ಲಲಿಲ್ಲ, ಅಂದು ಒಂದು ಪಕ್ಷದ ಲೀಡರ್ ಆಗಿ ಅವರ ಬೆಂಬಲಕ್ಕೆ ನಿಲ್ಲುವ ಅವಕಾಶವಿದ್ದರೂ ಮುಖ ತಿರುಗಿಸಿಕೊಂಡ ಮಾಜಿ ಶಾಸಕರು, ಇಂದು ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ಛೇಡಿಸಿದರು. 
ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುವ ಶಾಸಕ: ಇನ್ನೂ ಈಗಿನ ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಿ.ಎಂ. ಆಗಿದ್ದಾಗ ಅವರಿಗೆ ತುಂಬಾ ಆಪ್ತರಾಗಿದ್ದವರು ಎಂದು ಹೇಳಿಕೊಳ್ಳುವ ಅವರು, ಕ್ಷೇತ್ರದ ಅಭಿವೃದ್ದಿಯನ್ನು ಮಾಡುವ ಕಿಂಚಿತ್ತೂ ದೂರದೃಷ್ಠಿ ಅವರಿಗಿಲ್ಲ, ಮೋಜು ಮೋಸ್ತಿಯಲ್ಲೇ ತಮ್ಮ ಶಾಸಕನ ಅಧಿಕಾರವನ್ನು ಪೂರೈಸಿದರು, ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ ಅವರು ಕ್ರಮವಾಗಿ ಕೆ.ಡಿ.ಪಿ ಸಭೆ ನಡೆಸುತ್ತಿರಲಿಲ್ಲ, ಆಶ್ರಯ ನಿವೇಶನ ಹಂಚಲಿಲ್ಲ, ಬಗರ್ಹುಕ್ಕುಂ ಸಾಗುವಣಿ ಚೀಟಿ ನಿಡಲಿಲ್ಲ, ಬರದ ಸಂದರ್ಭದಲ್ಲಿ ರೈತರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಅವರ ಅವಧಿಯಲ್ಲಿ ಇಡೀ ಆಡಳಿತ ಸಂಪೂರ್ಣವಾಗಿ ವಿಫಲವಾಗಿತ್ತು ಎಂದರು.
  ಈ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿದರೆ ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಡಿಪ್ಲಮೊ ಕಾಲೇಜ್ ಮಂಜೂರು ಮಾಡುವುದು, ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ತಾಲೂಕಿನ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯರನ್ನು ನೇಮಿಸುವುದು, ಇಲ್ಲೊಂದು ಸಿದ್ದ ಉಡುಪುಗಳ ಫ್ಯಾಕ್ಟರಿ ಮತ್ತು ಸ್ಪಾಂಜಸ್ ಕಬ್ಬಿಣದ ಅದಿರಿನ ಕಾಖರ್ಾನೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯೊಂದು ರೂಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಮಿಲಿಟರಿ ಶಿವಣ್ಣ, ಹಿಂದುಳಿದ ವರ್ಗಗಳ ಘಟಕದ ಮಂಡಲ ಅಧ್ಯಕ್ಷ ಶ್ರೀನಿವಾಸಮೂತರ್ಿ, ದಲಿತ ಮುಖಂಡ ಸತೀಶ್ ಸೇರಿದಂತೆ ಹಲವರಿದ್ದರು.
( ಈ ವರದಿಗೆ ಪೊಟೊ ಇದೆ)
ಸುದ್ದಿ:2
ಫೈನಾನ್ಸ್ನವರ ಕಿರುಕುಳದಿಂದ ನೇಣಿಗೆ ಶರಣಾದ ರೈತ
ಚಿಕ್ಕನಾಯಕನಹಳ್ಳಿ,ಏ.14: ಖಾಸಗಿ ಫೈನಾನ್ಸ್ನವರ ಕಿರುಕುಳ ತಾಳಲಾರದೆ ರೈತನೊಬ್ಬನು ನೇಣಿಗೆ ಶರಣು ಹೋಗಿರುವ ಘಟನೆ ತೀರ್ಥಪುರದಲ್ಲಿ ನಡೆದಿದೆ.
ತಾಲೂಕಿನ ತೀರ್ಥಪುರದ ಹರೀಶ್(35) ಬಿನ್ ಸಣ್ಣರಂಗಯ್ಯ  ಮ್ಯಾಗಮಾ ಫೈನಾನ್ಸ್ನಿಂದ ಸಾಲ ತೆಗೆದು ಟ್ಯ್ರಾಕ್ಟರ್ನ್ನ ಕೊಂಡಿದ್ದರು, ಈ ಸಾಲದ ಪೈಕಿ ಶೇ.60ರಷ್ಟು ಹಣವನ್ನು ಹರೀಶ್ ತೀರಿಸಿದ್ದನು, ಉಳಿದ ಹಣವನ್ನು ಕಟ್ಟವಂತೆ  ಫೈನಾನ್ಸ್ನವರು ಪದೇ ಪದೇ ಕಿರುಕುಳ ನೀಡುತ್ತಿದ್ದರು, ಇವರ ಒತ್ತಡ ಹೆಚ್ಚಾಗಿ, ಗ್ರಾಮದವರ ಮುಂದೆಲ್ಲಾ ಸಾಲ ಕಟ್ಟುವಂತೆ ಒತ್ತಡತಂದು ಅಪಮಾನಿಸಿದರು ಎಂಬ ಕಾರಣಕ್ಕಾಗಿ ಹರೀಶ್ ನೇಣಿಗೆ ಶರಣಾಗಿದ್ದಾನೆ.
ಸುದ್ದಿ:3
ಯುಗಾದಿ ಸಂಭ್ರಮದ ಪ್ರಯುಕ್ತ ಪುಸ್ತಕ ಬಿಡುಗಡೆ. ಕವಿಗೋಷ್ಠಿ
ಚಿಕ್ಕನಾಯಕನಹಳ್ಳಿ,ಏ.14 : ರೋಟರಿ ಜನಕ ಪಾಲ್ ಪಿ.ಹ್ಯಾರಿಸ್ರ 146ನೇ ಜನ್ಮ ವಷರ್ೋತ್ಸವ ಮತ್ತು ಯುಗಾದಿ ಸಂಭ್ರಮಮವನ್ನು ಇದೇ 17ರ ಬುಧವಾರ ಸಂಜೆ 6.15ಕ್ಕೆ ಏರ್ಪಡಿಸಲಾಗಿದೆ.
ರೋಟರಿ ಕ್ಲಬ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರೋಟರಿ ಬಾಲಭವನದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್ ತಾ.ಕಸಾಪ ಅಧ್ಯಕ್ಷ ರವಿಕುಮಾರ್ ಯುಗಾದಿ ಶುಭಾಷಯ ಕೋರಲಿದ್ದು ರಂಗಕಮರ್ಿ ನಟರಾಜ್ಹೊನ್ನವಳ್ಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಿಲ್ಲಾ 3190ರ ಸಹಾಯಕ ಗವರ್ನರ್ ಬಿಳಿಗೆರೆ ಶಿವಕುಮಾರ್ ಪಾಲ್ ಪಿ.ಹ್ಯಾರಿಸ್ಗೆ ನಮನ ಕಾರ್ಯಕ್ರಮ ನೆರವೇರಿಸಲಿದ್ದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೊ.ಎಂ.ವಿ.ನಾಗರಾಜ್ರಾವ್ರವರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ 2012ರ ಪೋಲಿಸ್ ಚಿನ್ನದ ಪದಕ ಪುರಸ್ಕೃತ ಪಿ.ಐ.ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಸಿ.ಆರ್.ರವೀಶ್ವರಿಗೆ ಹಾಗೂ ಕವಿ ಪ್ರೊ.ಸಿ.ಎಚ್.ಮರಿದೇವರುರವರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು.
ಸುದ್ದಿ:3
ಚುನಾವಣಾ ನೀತಿ ಸಂಹಿತೆ ಕಟ್ಟು ನಿಟ್ಟಾದ ಜಾರಿಗೆ ಸಹಕರಿಸುವಂತೆ ಆರ್.ಓ. ಮನವಿ

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕು ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 258 ಮತಗಟ್ಟೆಯಿವೆ, ಅದರಲ್ಲಿ 38 ಅತಿ ಸೂಕ್ಷ್ಮ, 44 ಸೂಕ್ಷ್ಮ ಮತಗಟ್ಟೆ, 176 ಸಾಮಾನ್ಯ ಮತಗಟ್ಟೆಗಳಿವೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದರು.
ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜನವರಿ 16ಕ್ಕೆ 1,92,008 ಮತದಾರರಿದ್ದು ಅದರಲ್ಲಿ 97121 ಪುರುಷ ಮತದಾರರು, 94887 ಮಹಿಳಾ ಮತದಾರರಿರುವರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ತಾಲ್ಲೂಕಿನ 5 ಹೋಬಳಿಗಳು ಹಾಗೂ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದು ಕ್ಷೇತ್ರದಲ್ಲಿ 3 ಜನ ಪ್ಲೆಯಿಂಗ್ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದೆ ಹಾಗೂ 12 ರಿಂದ 13 ಮತಗಟ್ಟೆಗಳಿಗೆ ಒಬ್ಬರಂತೆ 22 ಜನ ಸೆಕ್ಟರಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ಗೇಟ್, ಹುಳಿಯಾರು ಪ್ರವಾಸಿ ಮಂದಿರದ ಎದುರು, ದೊಡ್ಡ ಎಣ್ಣೆಗೆರೆ ವೃತ್ತ, ಬುಕ್ಕಾಪಟ್ಟಣ ಹೋಬಳಿಯ ಬೆಂಚೆ ಗೇಟ್ ಬಳಿಯ ಒಟ್ಟು 4 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದರಲ್ಲದೆ ಈ ಚೆಕ್ಪೋಸ್ಟ್ಗಳಲ್ಲಿ ರೆವಿನ್ಯೂ, ಪೋಲಿಸ್, ಅಬಕಾರಿ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬೆಂಚೆ ಗೇಟ್ ಚೆಕ್ ಪೋಸ್ಟ್ ಹೊರತುಪಡಿಸಿ ಉಳಿದ ಮೂರು ಚೆಕ್ ಪೋಸ್ಟ್ಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ತಾಲ್ಲೂಕು ಕಛೇರಿಯಲ್ಲಿ ಸಹಾಯವಾಣಿ ತೆರೆದಿದ್ದು ಸಹಾಯವಾಣಿ ನಂಬರ್ 08133-267242 ನಂ.ಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
( ಈ ವರದಿಗೆ ಪೊಟೊ ಇದೆ) 
ಸುದ್ದಿ:4
ಆರೋಗ್ಯ ಆಸ್ಪತ್ರೆಯಲಿಲ್ಲ ಆಹಾರದಲ್ಲಿದೆ: ಡಾ.ಖಾದರ್

ಚಿಕ್ಕನಾಯಕನಹಳ್ಳಿ,ಏ.14: ನಮ್ಮ ಆಹಾರ ಸರಳವಾದರೆ ಆರೋಗ್ಯ ತಂತಾನೆ ವೃದ್ಧಿಸುತ್ತದೆ,  ಆರೋಗ್ಯ ಆಸ್ಪತ್ರೆಯಲ್ಲಿದೆ ಎಂಬ ಭ್ರಮೆಯನ್ನು ಬಿಟ್ಟು ಸಿರಿಧಾನ್ಯಗಳನ್ನು ಊಟದಲ್ಲಿ ಯತೇಚ್ಚವಾಗಿ ಬಳಸಿ ರೋಗಮುಕ್ತರಾಗಿ ಎಂದು ಡಾ.ಖಾದರ್ ಅಭಿಪ್ರಾಯ ಪಟ್ಟರು. 
   ತಾಲ್ಲೂಕಿನ ಪ್ರಗತಿಪರ ರೈತ ಅಣೆಕಟ್ಟೆ ವಿಶ್ವನಾಥ್ ತೋಟದಲ್ಲಿ ಭಾನುವಾರ ಬಳಗ ಆಯೋಜಿಸಿದ್ದ `ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ' ಎಂಬ ವಿಷಯದಬಗ್ಗೆ ಏರ್ಪಡಿಸಿದ್ದ ಒಂದುದಿನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಮಕ್ಕಳೇ ಕ್ಷಮಿಸಿ ನಾವು ನಿಮಗೆ ಆರೋಗ್ಯಕರ ಆಹಾರ ನೀಡುತ್ತಿಲ್ಲ,ಆಹಾರ ಬೆಳೆಯುವ,ಸೇವಿಸುವ ಜ್ಞಾನವನ್ನ ನೀಡುತ್ತಿಲ್ಲ.ಕುಜಗ್ರಹದಲ್ಲಿ ಬದುಕುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವ ನಮ್ಮ ವಿಜ್ಞಾನಿಗಳು ಭೂಮಿಯಮೇಲೆ ಆರೋಗ್ಯವಾಗಿ ಬದುಕುವುದು ಹೇಗೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಆದ್ದರಿಂದ ಜ್ಞಾನಿಗಳು,ವಿಜ್ಞಾನಿಗಳು ಮತ್ತು ದೊಡ್ಡವರೆನಿಸಿಕೊಂಡ ನಾವು  ಮಕ್ಕಳ ಕ್ಷಮೆ ಕೇಳಬೇಕು ಎಂದರು
  ಯತೇಚ್ಚವಾಗಿ ನಾರಿನ ಅಂಶವುಳ್ಳ  ಸಿರಿಧಾನ್ಯಗಳಲ್ಲಿ ಮದುಮೇಹ, ರಕ್ತಹೀನತೆಯಂತಹ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.ಸಾವಯವ ಪದ್ದತಿಯಲ್ಲಿ ಹಾರ್ಕ, ಸಾಮೆ,ನವಣೆ,ರಾಗಿ ಸೊಪ್ಪು ತರಕಾರಿಗಳನ್ನು ಬೆಳೆಸಿ ಬಳಸುವ ಏಕೈಕ ಮಾರ್ಗವೇ ಆರೋಗ್ಯ ಭಾರತ ನಿಮರ್ಾಣಕ್ಕೆ ನಾಂದಿಯಾಗುತ್ತದೆ ಆಗ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
   ಸಿರಿಧಾನ್ಯಗಳನ್ನು ತೃಣಧಾನ್ಯ ಕಿರುಧಾನ್ಯ ಎಂದು ಹೆಸರಿಸುವಲ್ಲೇ ಕೃಷಿಯ ವೈವಿದ್ಯತೆಯನ್ನು ಕೊಂದು ಕೇವಲ 40ವರ್ಷಗಳಲ್ಲಿ ಬಂದಂತಹ ಅಕ್ಕಿ ಸೋಯಾಬೀನ್ಸ್ ಮತ್ತು ಗೋಧಿ ರೀತಿಯ ಏಕರೂಪದ ಬೆಳೆಗಳನ್ನ ಸ್ಥಾಪಿಸುತ್ತ ಫಿಜಾ,್ಜ ಬರ್ಗರ್,ಬಿಸ್ಕೆಟ್,ಕೇಕ್,ನೂಡಲ್ಸ್ಗಳನ್ನು ಜಾಹಿರಾತುಗಳ ಮೂಲಕ ನಮ್ಮ ಅಡಿಗೆಕೋಣೆಗೆ ನುಗ್ಗಿಸಿ ಕೃಷಿ,ಆಹಾರ ಪದ್ಧತಿ ಇದರೂಟ್ಟಿಗಿನ ಜೀವನಕ್ರಮ ಎಲ್ಲವನ್ನೂ ಇಲ್ಲವಾಗಿಸುವ ಹುನ್ನಾರ ಎಂದರಲ್ಲದೆ ಈರೀತಯ ಆಹಾರ ಕ್ರಮದಿಂದ ಐದುವರ್ಷದ ಕಂದಮ್ಮಗಳನ್ನು ಡಯಾಬಿಟಿಸ್ ಮತ್ತು ಬೀಪಿಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಬಲಿಕೊಡಲಾಗುತ್ತಿದೆ ಎಂದರು.
   ಪಾಲೀಷ್ ಅಕ್ಕಿ ಗೋಧಿ ಓಟ್ಸ್ಗಳ ಮೈದಾ,ಡಾಲ್ಡಾದಿಂದ ತಯಾರಿಸುವ ಬೇಕರಿ ತಿನಿಸುಗಳು ಸಕ್ಕರೆ ಅಂಶವನ್ನು ಕೇವಲ 40ನಿಮಿಷಗಳಲ್ಲಿ ರಕ್ತಕ್ಕೆ ಸೇರಿಸಿ ಬೀಟಾ ಸೆಲ್ಗಳನ್ನು ಕೊಲ್ಲುತ್ತದೆ.ಇದರಿಂದಾಗಿ ಶೇ.60 ಮಕ್ಕಳಲ್ಲಿ ಅಟೆಂಕ್ಷನ್ ಡಿಫಿಷಿಯನ್ಸಿ ಸಿಂಡ್ರೋಮ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಹಾಗು ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಮುಂದಿನ 20ವರ್ಷಗಳಲ್ಲಿ 700ಮಿಲಿಯನ್ ಮದುಮೇಹ ರೋಗಿಗಳು ಕಂಡುಬರುತ್ತಾರೆ ಆಹಾರವನ್ನು ಹೇಗೆ ಬೆಳೆಯಬೇಕು ಮತ್ತು ಹೇಗೆ ತಿನ್ನಬೇಕು ಎನ್ನುವ ಪಾರಂಪರಿಕ ಜ್ಞಾನವನ್ನು ಮರೆಸಿದ್ದರಿಂದ ಇಂತಹ ದುಸ್ತಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
  ಮೊಸರಿಲ್ಲದ ಊಟ ಊಟವೇ ಅಲ್ಲ ಎನ್ನುವ ಅಜ್ಜಿಯ ಮಾತು ದೊಡ್ಡ ಆಹಾರಜ್ಞಾನವನ್ನ ಅನಾವರಣ ಗೊಳಿಸುತ್ತದೆ ಬಾಳೆ ದಿಂಡಿನರಸ ಅಲಸಿನ ಎಲೆ ರಸ ಹುಣುಸೆ ಚಿಗುರು ಹೀಗೆ ಸುತ್ತಮುತ್ತಲಿನ ಎಲ್ಲಾ ಸೊಪ್ಪು ಸೆದೆಗಳು ಯಾವ ಐಟೆಕ್ ಆಸ್ಪತ್ರೆ ಮೆಡಿಸಿನ್ಗಳು ಕೊಡಲಗದ ಆರೋಗ್ಯವನ್ನು ಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.
   ಕಾರ್ಯಕ್ರಮದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಸಿ.ಯತಿರಾಜ್, ರಾಮಕೃಷ್ಣಪ್ಪ, ಗ್ರೀನ್ ಫಾಮರ್್ ಇನೋವೆಟರ್ಸ್ ಫೌಂಡೇಷನ್ನ ಚಂದ್ರಶೇಖರ್ ಬಾಳೆ, ರವೀಂದ್ರ ದೇಸಾಯಿ, ಕೃಷ್ಣಮೂತರ್ಿ ಬಿಳಿಗೆರೆ,ಗೋಪಾಲನಹಳ್ಳಿ ರಘು.ಭೈರಪ್ಪ ಮುಂತದವರಿದ್ದರು. ಕುಮಾರಿ ಸುಕೃತಿ,ರಾಜೇಶ್ವರಿ ಮತ್ತು ದಶರ್ಿನಿ ಹಾಡಿದ ಪರಂಪರೆಯ ಹಾಡುಗಳು ಆಕರ್ಷಣೀಯವಾಗಿದ್ದವು.
(ಈ ವರದಿಗೆ ಪೊಟೊ ಇದೆ)
ಸುದ್ದಿ:5

  

Thursday, April 11, 2013


 ಪಿ.ಐ. ಸಿ.ಆರ್.ರವೀಶ್ ರವರಿಗೆ ಸಿ.ಎಂ.ಚಿನ್ನದ ಪದಕ
                           
ಚಿಕ್ಕನಾಯಕನಹಳ್ಳಿ,ಏ.10: ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ.ಆರ್.ರವೀಶ್ ರವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ, ಇವರು ಚಿಕ್ಕನಾಯಕನಹಳ್ಳಿಯವರಾಗಿದ್ದು, ಇವರ ಸಾಧನೆಗೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
    ಪಟ್ಟಣದ ಅಡಿಕೆ ವ್ಯಾಪಾರಿ ರೇವಣ್ಣನವರ ಮಗನಾದ ಸಿ.ಆರ್.ರವೀಶ್ ರವರು ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ 1994ರಲ್ಲಿ ನೇಮಕಗೊಂಡರು, ತಮ್ಮ ವೃತ್ತಿ ಜೀವನವನ್ನು ಕರಾವಳಿ ಭಾಗದಲ್ಲಿ ಆರಂಭಿಸಿದರು, ಪುತ್ತೂರು, ವಿಟ್ಲ, ಬೆಳ್ತಂಗಡಿ, ಮಂಗಳೂರು ನಗರಗಳಲ್ಲಿ ಸೇವೆಸಲ್ಲಿಸಿದ್ದು, 2002ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ ಮಂಗಳೂರು, ಅರಸೀಕೆರೆ, ಪುತ್ತೂರು, ಕೆಂಗೇರಿಗಳಲ್ಲಿ ಸೇವೆಸಲ್ಲಿಸಿದ್ದು, ಕೆಲ ಕಾಲ ಸಿ.ಐ.ಡಿ. ಯಲ್ಲೂ ಸೇವೆ ಸಲ್ಲಿಸಿದರು, ಇವರ ಜೀವಮಾನದ ಸೇವೆಯನ್ನು ಪರಗಣಿಸಿ ಇಲಾಖೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇವರ ಸೇವೆಗೆ ಸಂದ ಬಳುವಳಿಯಾಗಿದೆ. ಡಿ.ವಿ.ಜಿ.ಯವರ ಕಗ್ಗದ ಬಗ್ಗೆ ಉಪನ್ಯಾಸ ನೀಡುವುದು ಸೇರಿದಂತೆ   ಸಾಹಿತ್ಯ, ಸಂಗೀತ ಹಾಗೂ ಲಲಿತ ಕಲೆಗಳನ್ನು ಹವ್ಯಾಸವಾಗಿಸಿಕೊಂಡಿರುವ ಇವರನ್ನು ಪಟ್ಟಣದ ರೋಟರಿ ಕ್ಲಬ್, ಕ.ಸಾ.ಪ. ಸವಿತಾ ಸಮಾಜ, ಅಕ್ಕಮಹಾದೇವಿ ಮಹಿಳಾ ಸಂಘ, ತಾ.ವೀರಶೈವ ಕ್ಷೇಮಾಭಿವೃದ್ದಿ ಸಂಘ, ತಾ.ಪ್ರಗತಿಪರರ ಮತ್ತು ಸಾಂಸ್ಕೃತಿ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನು ಅಭಿನಂದಿಸಿವೆ.


ಸಾವಿರಾರು ಬೆಂಗಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಭಾಜಪ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ,ಏ.10 : ಬಿಜೆಪಿ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬುಧವಾರ ತಾಲ್ಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ಇ.ಪ್ರಸನ್ನರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
    ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ತಮ್ಮ ಪತ್ನಿ ಕವಿತಾಕಿರಣ್ಕುಮಾರ್ರೊಂದಿಗೆ  ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ತಾ.ಪಂ.ಸದಸ್ಯರುಗಳಾದ ಸೀತಾರಾಮಯ್ಯ, ನವೀನ್ಕೆಂಕೆರೆ ಹಾಗೂ ಇತರ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಕಿರಣ್ ಕುಮಾರ್ ರವರು, ನಮ್ಮೊಂದಿಗೆ ನಾಮಪತ್ರ ಸಲ್ಲಿಸಲು ಬಂದಿರುವ ಜನತೆಯನ್ನು ನೋಡಿದರೆ ತಿಳಿಯುತ್ತದೆ ಈ ಬಾರಿ ನನಗೆ ಗೆಲುವು ನಿಶ್ಚಿತ ಎನ್ನುವುದು ಎಂದರಲ್ಲದೆ, ಯುಗಾದಿ ಹಬ್ಬದ ಹಿಂದಿನ ಒಳ್ಳೆಯ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸಿದ್ದು, ಒಂದು ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಇನ್ನು 2-3ದಿನದೊಳಗೆ ಭಾಜಪ ಪಕ್ಷದ ಭಿ ಪಾರಂನ್ನು ವರಿಷ್ಠರು ನೀಡಲಿದ್ದಾರೆ ಎಂದರು.
    ನಮ್ಮ ಭಾಜಪ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾರೊಬ್ಬರು ಆಕಾಂಕ್ಷಿಯಾಗಿಯೂ ಇಲ್ಲ, ಬಂಡಾಯವೂ ಎದ್ದಿಲ್ಲ ಎಂದು ತಿಳಿಸಿದರಲ್ಲದೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ  ಹೇಮಾವತಿ ತರಲು ಶ್ರಮವಹಿಸಿ ಯಶಸ್ವಿಯಾಗಿದ್ದೇನೆ, ಮುಂದೆ ಬುಕ್ಕಾಪಟ್ಟಣ ಹೋಬಳಿಯ 80ಹಳ್ಳಿಗಳಿಗೆ ಹೇಮಾವತಿ ನೀರನ್ನು ಒದಗಿಸುವುದು ಮತ್ತು ಹೊಸ ಕೆರೆಗಳ ನಿಮರ್ಾಣಕ್ಕೆ ಒತ್ತು ನೀಡುವುದು, ತಾಲ್ಲೂಕಿಗೆ ಸಕರ್ಾರಿ ಡಿಪ್ಲೊಮೋ ಕಾಲೇಜ್ ತರುವುದು ಹಾಗೂ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಬಿಜೆಪಿ ಸಕರ್ಾರ ತಂದಿರುವ ಸಕಾಲ ಯೋಜನೆಯನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವುದು ನನ್ನ ಆಧ್ಯತೆ ಎಂದರು.
ಮಾಜಿ ಶಾಸಕರೊಬ್ಬರು ಈ ಭಾಗಕ್ಕೆ ಹೇಮಾವತಿ ತರಲು ಯಾರಾದರೂ ಯಶಸ್ವಿಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದರು, ಆದರೆ ಜಟ್ಟಿ ನೆಲಕ್ಕಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ನಡಯನ್ನು ಸಮಥರ್ಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ ಜೆಡಿಎಸ್ ತಮಗೆ ಪ್ರತಿಸ್ಪಧರ್ಿ ಎಂದರು.
   

Monday, April 8, 2013
ವಿದ್ಯೆ ಕಲಿತ ದೊಡ್ಡವನಲ್ಲ, ವಿದ್ವತ್ ಪಡೆದವನೇ ದೊಡ್ಡವ
                      
ಚಿಕ್ಕನಾಯಕನಹಳ್ಳಿ,ಏ.08 : ಪುರಂದರದಾಸರು, ಕನಕದಾಸರು ದಾಸರುಗಳಲ್ಲಿ ಶ್ರೇಷ್ಠ ದಾಸರಾದರೆ ಸಂತರಲ್ಲಿ ಶಿಶುನಾಳ ಷರೀಫರು ಶ್ರೇಷ್ಠರು ಎಂದು ಸಂತಶಿಶುನಾಳ ಷರೀಫ ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಹೇಳಿದರು.
    ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಷರೀಪರು ಜನಪದ ಸಾಹಿತ್ಯ, ತತ್ವಪದಗಳಲ್ಲದೆ ಲಾವಣಿ, ದೊಡ್ಡಾಟ, ಮಹಾಭಾರತ, ರಾಮಾಯಣ, ದೇವಿಪುರಾಣಗಳಂತಹ ನಾಟಕಗಳನ್ನು ಬರೆದು ಜನರ ಮನದಲ್ಲಿ ಅಳಿಸಲಾಗದಂತೆ ನೆಲೆಯೂರಿದ್ದಾರೆ, ಷರೀಫರು ಹುಟ್ಟಿದ್ದು ಹಜರತ್ ತತ್ವದಲ್ಲಿ, ಬೆಳೆದದ್ದು ಹರಿತ್ವದಲ್ಲಿ, ಕೊನೆಗೆ ಶಿವಯೋಗಿತ್ವದಲ್ಲಿ ಎಂದರು.
ಸಂತ ಶಿಶುನಾಳ ಷರೀಪ ಶಿವಯೋಗಿಯೆಂದರೆ, ಲೌಕಿಕವನ್ನು ಬಿಟ್ಟವನೇ ಸಂತನಾಗಿದ್ದು, ತಾಯಿ ಕರುಳು ಶಿಶುನಾಳ, ಷರೀಪ ಸದ್ಗುಣವಂತ ಹಾಗೂ ಶಿವಯೋಗಿಯೆಂದರೆ ಸನ್ಯಾಸಿಯಾಗಿರುವವನು ಎಂದರ್ಥ ಹಾಗೂ  ಶಿವಯೋಗಿಗಳಲ್ಲಿ ಸನ್ಯಾಸಿಶಿವ(ಅಘೋರಿಗಳು), ಸಂಸಾರಿಶಿವ, ಪರಶಿವವೆಂಬಂತೆ ಇದ್ದಾರೆ ಎಂದರು.
 ವಿದ್ಯೆ ಕಲಿತವನು ದೊಡ್ಡವನಲ್ಲ, ವಿದ್ವತ್ ಕಲಿತವನು ಶ್ರೇಷ್ಠ, ವೇದವನ್ನು ತಿಳಿದವರಿಗಿಂತ ಗಾದೆ ಮಾತನ್ನು ಅರಿತವನೇ ಶ್ರೇಷ್ಠ ಎಂದರಲ್ಲದೆ ಶಿಶುನಾಳರು ಬರೆದಿರುವ ಗೀತೆಗಳು, ತತ್ವಗಳನ್ನು ಯುವಕರಿಗೆ ಅವಶ್ಯಕವಿದೆ, ಇಂದಿನ ಯುವಕರು ಟಿ.ವಿ, ಮೊಬೈಲ್, ಇಂಟರ್ನೆಟ್ನ ಜೀವನದಲ್ಲಿ ಮುಳುಗುತ್ತಿದ್ದಾರೆ, ಭಾರತವನ್ನು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ನೋಡಿದರೆ ಮಾತ್ರ ಸ್ವಾಮಿ ವಿವೇಕಾನಂದರಂತಹ ಮಹಾಪುರಷರು ನಮಗೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವಿದ್ಯಾಥರ್ಿಗಳ ಪ್ರಗತಿಗೆ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ, ಅವರನ್ನು ಉತ್ತಮ ಪ್ರಜ್ಞಾವಂತರನ್ನಾಗಿ ಹಾಗೂ ನಾಯಕರನ್ನಾಗಿ ಪರಿವತರ್ಿಸಲು ಶಿಕ್ಷಣದಿಂದಲೇ ಸಾಧ್ಯ ಎಂದ ಅವರು ವಿದ್ಯಾಥರ್ಿಗಳು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ನವೋದಯ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ಯುವಕರು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿ ಮತದಾನದ ಹಕ್ಕನ್ನು ಪಡೆಯಿರಿ, ಮತ ಚಲಾಯಿಸುವಾಗ ಪ್ರಜ್ಞಾವಂತಿಕೆಯಿಂದ ಚಲಾಯಿಸಿರಿ ಎಂದು ತಿಳಿಸಿದರು.
    ಸಮಾರಂಭದಲ್ಲಿ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ಪಧರ್ೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿರು.
ಸಮಾರಂಭದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಉಪಸ್ಥಿತರಿದ್ದರು.
 ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿ ಲಾವಣ್ಯ ಪ್ರಾಥರ್ಿಸಿದರೆ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಸ್ವಾಗತಿಸಿದರು. ವಿದ್ಯಾಥರ್ಿನಿ ಮೋಕ್ಷ ನಿರೂಪಿಸಿ, ಉಪನ್ಯಾಸಕ ಚನ್ನಬಸಪ್ಪ ವಂದಿಸಿದರು.
    ಕಳಪೆ ವಿದ್ಯುತ್ ಕಂಬ: ಓಡಾಡಲು ಜನರಿಗೆ ಭೀತಿ

ಚಿಕ್ಕನಾಯಕನಹಳ್ಳಿ,ಏ.08 : ಕೆಪಿಟಿಸಿಎಲ್ ಇಲಾಖಾ ವತಿಯಿಂದ ನೂತನ ಕೋಡುಗಲ್ಲು ರಸ್ತೆಯಲ್ಲಿ ಹಾಕಿರುವ ವಿದ್ಯುತ್ ಕಂಬ ಕಳಪೆಯಿಂದ ಕೂಡಿದ್ದು ಕಂಬ ಅರ್ಧಕ್ಕೆ ಮುರಿದಿವರು ಗುತ್ತಿಗೆದಾರ ಕಂಬವನ್ನು ಹಾಕಿದ್ದಾರೆ ಎಂದು ಆ ಭಾಗದ ಜನರು ಆಪಾದಸಿದ್ದಾರೆ.
    ಕಂಬ ಅರ್ಧಕ್ಕೆ ಮುರಿದ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಬಿರುಗಾಳಿ, ಬೀಸಿದರೆ ವಿದ್ಯುತ್ ಕಂಬ ಮುರಿದು ಬಿದ್ದು ರಸ್ತೆಯಲ್ಲಿ ಓಡಾಡುವ ಜನ ನೂರಾರು ದನಕರುಗಳು ಜಮೀನುಗಳಿಗೆ ಈ ರಸ್ತೆಯಲ್ಲೇ ಹೋಗುತ್ತಿರುವುದರಿಂದ ಆಕಸ್ಮಿಕ ಕಂಬ ಮುರಿದು ಬಿದ್ದರೆ ಪ್ರಾಣಹಾನಿ ಉಂಟಾಗುವ ಸಂಭವವಿರುವುದರಿಂದ ಕೂಡಲೇ ವಿದ್ಯುತ್ ಕಂಬ ತೆಗೆದು ಬೇರೆ ಕಂಬ ನೆಡುವಂತೆ ಈ ರಸ್ತೆಯಲ್ಲಿ ವಿಹಾರಕ್ಕೆ ತೆರಳುವ ಜನತೆ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
       ವಿದ್ಯುತ್ ಸಮಸ್ಯೆ ರೈತ ಸಂಘದವರಿಂದ ಅಧಿಕಾರಿಗಳಿಗೆ ಘೇರಾವ್
                   
ಚಿಕ್ಕನಾಯಕನಹಳ್ಳಿ:ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗಳು ವಿದ್ಯುತ್ ಪೂರೈಸದೆ ರೈತರಿಗೆ ದ್ರೋಹವೆಸಗುತ್ತಿವೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಎರಡು ವಿದ್ಯತ್ ಪ್ರಸರಣ ಉಪಸ್ಥಾವರಗಳ ಮೇಲೆ ಸೋಮವಾರ ಅಧಿಕಾರಿಗಳಿಗೆ ಘೆರಾವ್ ಹಾಕಿದರು.
  ತಾಲ್ಲೂಕಿನ ಶೆಟ್ಟಿಕೆರೆ ಮತ್ತು ತಿಮ್ಮನಹಳ್ಳಿ ಉಪಸ್ಥಾವರಗಳಮೇಲೆ ಪ್ರತ್ಯೇಕವಾಗಿ ದಾಳಿಮಾಡಿದ ನೂರಾರು ಕಾರ್ಯಕರ್ತರು ಸ್ಥಾವರಗಳ ಕಾರ್ಯವನ್ನು ಬಲವಂತವಾಗಿ ಸ್ಥಗಿತಗೊಳಿಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
.ನೇತೃತ್ವ ವಹಿಸಿದ್ದ ಕೆಂಕೆರೆ ಸತೀಶ್ ಮಾತನಾಡಿ ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಬೆಳೆಗಳೆಲ್ಲಾ ಬಾಡುತ್ತಿವೆ ಮತ್ತು ದನಕರುಗಳಿಗೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಬೋರನೀರನ್ನಾದರೂ ಕುಡಿಸೋಣವೆಂದರೆ ವಿದ್ಯುತ್ ಸಮಸ್ಯೆಯಿಂದ ಅವು ಬಾಯಾರಿ ಬಳಲುವ ಪರಿಸ್ಥಿತಿ ಬಂದಿದೆ ಎಂದರಲ್ಲದೆ, ವಿದ್ಯುತ್ ನಿರ್ವಹಣೆಯ ವ್ಯತ್ಯಯದಿಂದ ತಿಮ್ಮನಹಳ್ಳಿ ಒಂದೇ ದಿನ ಇಪ್ಪತ್ತೈದು ಬೋರ್ವೆಲ್ಗಳ ಮೋಟರ್ಗಳು ಹಾಗೂ ಹತ್ತು ಟಿ.ವಿ.ಗಳು ಸುಟ್ಟು ಹೋಗಿದೆ ಎಂದರು.   
   ಶೆಟ್ಟಿಕೆರೆ ಉಪಸ್ಥಾವರದ ಮೇಲೆ ಭಾನುವಾರವೇ ದಾಳಿಯನ್ನು ಆಯೋಜಿಸಿದ್ದ ರೈತಸಂಘ ಉಸ್ತುವಾರಿ ಎಂಜಿನಿಯರ್ ಪ್ರಸಾದ್ ಮೇಲಾಧಿಕಾರಿಗಳು ರಜೆಯಲ್ಲಿರುವಕಾರಣ ಸ್ಥಳಕ್ಕೆ ಬೇಟಿ ನೀಡಲಾಗುತ್ತಿಲ್ಲ ಆದಕಾರಣ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗುಕ್ಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರಿಂದ ಚಳವಳಿಯನ್ನು  ಸೋಮವಾರಕ್ಕೆ ಮುಂದೂಡಿದ ರೈತರು ಬೆಳಗ್ಗೆ 9ಗಂಟೆಗೆ ಸ್ಥಳದಲ್ಲಿ ಜಮಾಯಿಸಿದರು.
    11ಗಂಟೆಯಾದರೂ ಮೇಲಾಧಿಕಾರಿಗಳು ಬರದಿದ್ದಾಗ ರೈತರು ಕೆಪಿಟಿಸಿಎಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು. ನಂತರ ಸ್ಥಳಕ್ಕಾಗಮಿಸಿದ ಎಇಇ ರಾಜಶೇಖರ ಮೂತರ್ಿಗೆ ಘೆರಾವ್ ಹಾಕಿದರು.
 ಎ.ಇ.ಇ. ರಾಜಶೇಖರ ಮೂತರ್ಿ ಮಾತನಾಡಿ ಚಿಕ್ಕನಾಯಕನಹಳ್ಳ,ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳಿಗೆ ದಿನಕ್ಕೆ 130 ಮೆಘಾ ವ್ಯಾಟ್ ವಿದ್ಯತ್ ಅವಷ್ಯಕವಿದ್ದು ಕೇವಲ 30 ಮೆಘಾ ವ್ಯಾಟ್ ಸರಬರಾಜಾಗುತ್ತಿದ್ದು ನಿಯಮಿತವಾಗಿ ಬೆಳಗ್ಗೆ 2ಗಂಟೆ ಮತ್ತು ರಾತ್ರಿ 3ಗಂಟೆ ವಿದ್ಯುತ್ ಪೂರೈಸಲು ಸಧ್ಯವಿಲ್ಲ ಎಂದರು.ರೈತರು ಪಟ್ಟು ಸಡಿಲಿಸದಿದ್ದಾಗ ಜಿಲ್ಲಾ ಹಂತದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ರೈತರ ಬೇಡಿಕೆಗೆ ಸಮ್ಮತಿಸಿದರು. ನಂತರ ಮದ್ಯಾಹ್ನ 1ಗಂಟೆ ಸುಮಾರಿಗೆ ತಿಮ್ಮನಹಳ್ಳಿ ಉಪಸ್ಥಾವರದ ಮೇಲೆ ಮುತ್ತಿಗೆಹಾಕಿ ತಾಲ್ಲೂಕಿನಾಧ್ಯಂತ ಏಕರೂಪದ ನಿಯಮ ಪಾಲಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ಎಇಇ ರಾಜಶೇಖರಮೂತರ್ಿ ಸಮ್ಮತಿಸಿದ ನಂತರ ಪ್ರತಿಭಟನಾಕಾರರು ಚದುರಿದರು
    ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ನಾಗರಾಜ್, ಬೋರಣ್ಣ, ನರಸಿಂಹಮೂತರ್ಿ, ಚಂದ್ರಪ್ಪ, ಮಲ್ಲೇಶ್, ಮಲ್ಲಿಕಾರ್ಜನ್, ರವಿ, ಅಶೋಕ್, ತೋಂಟಾರಾಧ್ಯ, ಶಾಂತಪ್ಪ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Saturday, April 6, 2013

ಶಾಸಕರು ಕ್ಷೇತ್ರವನ್ನು  ಅಭಿವೃದ್ದಿ ಪಡಿಸುವಲ್ಲಿ, ಆಡಳಿತ 
               ನಡೆಸುವಲ್ಲಿ  ವಿಫಲ: ಜೆ.ಸಿ.ಎಂ.
                    
ಚಿಕ್ಕನಾಯಕನಹಳ್ಳಿ,ಏ.06 : ಈಗಿನ ಶಾಸಕರ ಆಡಳಿತದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಯಾವುದಾದರೂ ಒಂದು ಆಸ್ಪತ್ರೆಯಾಗಲಿ, ಶಾಲಾ ಕಾಲೇಜಾಗಲಿ ಅಥವಾ ಸಕರ್ಾರಿ ಕಛೇರಿ ಕಟ್ಟಡ ಆಗಿಲ್ಲ ಆದರೆ ಯಾವ ಉದ್ದೇಶಕ್ಕಾಗಿ ಶಾಸಕ ಸ್ಥಾನದಲ್ಲಿ ಇರುವರೋ ತಿಳಿಯದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಆರೋಪಿಸಿದ್ದಾರೆ.
    ತಾಲ್ಲೂಕಿನ ಜೆ.ಸಿ.ಪುರದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಶಾಸಕರ ಅನುದಾನ ಎಲ್ಲಾ ಶಾಸಕರಿಗೂ ಬರುತ್ತದೆ, ಆದರೆ ಹೆಚ್ಚುವರಿಯಾಗಿ ಯಾವ ಅನುದಾನ ತರಲು ಸಾಧ್ಯವಾಗಿಲ್ಲ, ತಾಲ್ಲೂಕಿನ ನೀರಿನ ಸಮಸ್ಯೆ ನೀಗಿಸಲು ದುಡ್ಡಿನ ಕೊರತೆ ಇಲ್ಲ, ಆದರೆ ಕೆಲಸ ಮಾಡುವವರೇ ಇಲ್ಲಿ ದಿಕ್ಕಿಲ್ಲದಂತಾಗಿದ್ದಾರೆ ಎಂದು ಆರೋಪಿಸಿದರು.
    ನನ್ನ ಶಾಸಕ ಅವಧಿಯಲ್ಲಿ ಬರಗಾಲ ಬಂದರೆ ಒಂದೇ ಸಮನೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ತಿಳಿಸುತ್ತಿದ್ದೆ ಆದರೆ ತಾ.ಪಂ, ಗ್ರಾ.ಪಂ ಸಭೆ ನಡೆಸದೆ ಶಾಸನ ಸಭೆಯ ಬಗ್ಗೆ ಕೇಳುವವರೆ ಇಲ್ಲದಂತಾಗಿ ಜನಪರ ಚಚರ್ೆಗಳೆ ನಡೆಯುತ್ತಿಲ್ಲವಾಗಿದೆ ಎಂದರಲ್ಲದೆ ನಮ್ಮ ಮೇಲೆ ಇಲ್ಲಸಲ್ಲದ ಆರೋಪ, ಪಿತೂರಿ ನಡೆಯುತ್ತಿದೆ ಆದರೂ ನಮ್ಮ ಕಾರ್ಯಕರ್ತರು ನಮ್ಮ ನಡುವೆ  ಯಾವ ವ್ಯತ್ಯಾಸವೂ ಉಂಟಾಗಿಲ್ಲ ಎಂದರು.
    ಚುನಾವಣೆ ಸಮಯದಲ್ಲಿ ಕಾರ್ಯಕರ್ತರು ಒಬ್ಬಬ್ಬರನ್ನು ಓಲೈಸುವ ಬದಲು ಗುಂಪುಗುಂಪುಗಳನ್ನೇ ಏಳಿಸಬೇಕು ಆದರೂ ಜೆಸಿಪುರ ನನ್ನ ಸ್ವಕ್ಷೇತ್ರದಲ್ಲಿ ಸಭೆ ನಡೆಸುವ ಅವಶ್ಯಕತೆ ಇರಲಿಲ್ಲ ಆದರೂ ಪಿತೂರಿ ನಡೆಸುವವರಿಗೆ ಈ ಸಭೆ ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದರು.
    ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜನಪ್ರತಿನಿಧಿ ಹಾಗೂ ಜನನಾಯಕ ಇಬ್ಬರಿಗೂ ವ್ಯತ್ಯಾಸವಿದೆ ಅದರಲ್ಲಿ ಜೆಸಿಮಾಧುಸ್ವಾಮಿ ಜನನಾಯಕರ ಸ್ಥಾನದಲ್ಲಿ ನಿಲ್ಲುವರು, ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು, ಅವರ ವಿರುದ್ದವಾಗಿ ಬರುವ ಅಪಪ್ರಚಾರವನ್ನು ಬದಿಗಿಟ್ಟು ಗೆಲ್ಲಿಸಬೇಕು ಎಂದ ಅವರು ತಾಲ್ಲೂಕಿನಲ್ಲಿ ಕೆಜೆಪಿಗೆ ಪ್ರತಿಸ್ಪಧರ್ಿ ಜೆಡಿಎಸ್ ಎಂದರು.
    ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಜೆ.ಸಿ.ಮಾಧುಸ್ವಾಮಿರವರು ನಿಷ್ಠೂರ ವ್ಯಕ್ತಿಯಾದರೂ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸುವ ವ್ಯಕ್ತಿ ಜನತೆ ಅವರನ್ನು ಬಿಟ್ಟು ಹಣ ಮತ್ತು ಹೆಂಡಕ್ಕೆ ಮಾರುಹೋಗಿ ತಾಲ್ಲೂಕಿನ ಏಳಿಗೆ ಕುಗ್ಗಿಸಬೇಡಿ ಎಂದರು.
    ಬಿ.ಎನ್.ಶಿವಪ್ರಕಾಶ್ ಮಾತನಾಡಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಜೆಸಿಎಂರವರು, ಬೆಂಗಳೂರಿನ ಐಷಾರಾಮಿ ಜೀವನ ಮಾಡುವ ಶಾಸಕರಿಗಿಂತ ಹಳ್ಳಿಗಳಲ್ಲಿ ಸಂಚರಿಸುವ ಶಾಸಕರ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಶಿವರಾಜ್ಅಗಸರಹಳ್ಳಿ,  ಶಶಿಧರ್, ಶಂಕರಣ್ಣ, ಎಸ್.ಆರ್.ಸ್ವಾಮಿನಾಥ್, ಕೆ.ಆರ್.ಚನ್ನಬಸವಪ್ಪ, ಕೆ.ಎಮ್.ರಾಜಶೇಖರ್ ಮುಂತಾದವರಿದ್ದರು.

ಪಟ್ಟಣದ ಹಲವರು ಕೆ.ಜೆ.ಪಿ.ಯಿಂದ ಬಿ.ಜೆ.ಪಿ.ಗೆ ಸೇರ್ಪಡೆ

ಚಿಕ್ಕನಾಯಕನಹಳ್ಳಿ,ಏ.06 : ಪಟ್ಟಣದ ಕೆ.ಜಿ.ಪಿ ಪಕ್ಷದ ಮುಖಂಡರು ಕೆ.ಎಸ್.ಕಿರಣ್ಕುಮಾರ್ ಸಮ್ಮುಖದಲ್ಲಿ ಬಿ.ಜೆ.ಪಿಗೆ ಸೇರಿಕೊಂಡರು.
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕಿರಣ್ ಕುಮಾರ್ ಚಿಕ್ಕನಾಯಕನಹಳ್ಳಿಯನ್ನು ಹಳ್ಳಿಯಾಗೇ ಉಳಿಸಿದ್ದಾರೆ , ತಾಲ್ಲೂಕಿನ ಕೆರೆಗಳಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೇವೆ. ಹಿಂದೂ ಮುಸ್ಲಿಂ ಎಂಬ ಭಾವನೆ ಎಲ್ಲಾರನ್ನು ಪ್ರೀತಿಯಿಂದ ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ, ಈ ಬಾರಿ ನನ್ನನು ಗೆಲ್ಲಿಸಿದ್ದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಮಾದರಿ ತಾಲ್ಲೂಕಾಗಿ ಮಾಡುವುದರಲ್ಲಿ ಅನುಮಾನ ಬೇಡ, ನಮ್ಮ ಕ್ಷೇತ್ರದ ಜನತೆ ಹಾಗೂ ನಮ್ಮ ಕಾರ್ಯಕರ್ತರ ಬೆಂಬಲಕ್ಕೆ ನಾನು ಸದಾ ಇರುತ್ತೆನೆ ಎಂದರಲ್ಲದೆ ಮಹೇಶ್ , ಸಾದಶಿವಯ್ಯ, ಮಂಜುನಾಥ್, ಗಾರೆಬಸವರಾಜು, ಈಶ್ವರಯ್ಯ, ರುದ್ರೇಶ್, ಹೊನ್ನಪ್ಪ, ಗೋಪಿ, ಹಾಗೂ ಹಲವರು ಬಿ.ಜೆ.ಪಿ ಸೇರಿಕೊಂಡರು. ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ತಾಲ್ಲೂಕು ಅಧ್ಯಕ್ಷ ಮಿಲ್ಟ್ರೀ ಶಿವಣ್ಣ , ಈಶ್ವರ್ ಭಾಗವತ್ , ಚೇತನ್ ಪ್ರಸಾದ್, ಗಂಗಾಧರ್ ಉಪಸ್ಥಿತರಿದರು,
ಎಂ.ವಿ.ನಾಗರಾಜರಾವ್ ರವರಿಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ.
ಚಿಕ್ಕನಾಯಕನಹಳ್ಳಿ,ಏ.05: ಸಾಹಿತಿ ಎಂ.ವಿ.ನಾಗರಾಜ ರಾವ್ ಅವರಿಗೆ ಶಿವಮೊಗ್ಗದ ಕನರ್ಾಟಕ ಸಂಘವು,  ಅವರ ಮಕ್ಕಳ ಸಾಹಿತ್ಯ ಸೇವೆಗಾಗಿ 2012ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆ ಮಾಡಿದೆ.
    ಕಳೆದ ಎಂಟು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕಲೆ, ಸಾಹಿತ್ಯ, ಸಂಸ್ಕೃತಿ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಕನರ್ಾಟಕ ಸಂಘ ಪ್ರತಿ ವರ್ಷ ನಾಡಿನ ನಾಲ್ವರು ಹಿರಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.  ಸಂಘವು ಕೊಡಮಾಡುವ ಈ ಪ್ರಶಸ್ತಿಗೆ  ಡಾ.ಚಂದ್ರಶೇಖರ ಕಂಬಾರವರು ಭಾಜನರಾಗಿದ್ದರು.
    ಎಂ.ವಿ.ನಾಗರಾಜ್ ರವರು ಮಕ್ಕಳಿಗಾಗಿ 25ಕ್ಕೂ ಹೆಚ್ಚ ಪುಸ್ತಕಗಳನ್ನು ಬರೆದಿದ್ದು, ಮಕ್ಕಳ ನಾಟಕಗಳು, ಮಹಾನ್ ವ್ಯಕ್ತಿಗಳ ಪರಿಚಯಾತ್ಮಕ ಪುಸ್ತಕಗಳು, ಜಾನಪದ ಕಥೆಗಳು,  ವಿದ್ಯಾಥರ್ಿಗಳಿಗೆ ಜ್ಞಾನಕೋಶ, ವ್ಯಾಕರಣ, ಸೇರಿದಂತೆ ಕೃತಿ ಶ್ರೇಣಿಯನ್ನು ನೀಡಿದ್ದಾರೆ.
    1985ರಿಂದಲೂ ಸಾಹಿತ್ಯ ಸೇವೆಯನ್ನು ಮಾಡಿಕೊಂಡು ಬಂದಿರುವ ಎಂ.ವಿ.ಎನ್.ರವರು ಕಾಲೇಜ್ನ ಪ್ರಾಂಶುಪಾಲ ವೃತ್ತಿಯಿಂದ  ನಿವೃತ್ತರಾದ ನಂತರ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತೊಡಗಿಸಿಕೊಂಡಿದ್ದಾರೆ.
    ರಾಜಕೀಯದ ಅನುಭವ ಕಡಿಮೆ ಇದೆ: ಬಿ.ಎಸ್.ಆರ್.ಅಭಥರ್ಿ ದೇವರಾಜು
ಚಿಕ್ಕನಾಯಕನಹಳ್ಳಿ,ಏ.05 : ತಾಲ್ಲೂಕಿನ ತಾಲ್ಲೂಕಿನ ಕುಪ್ಪೂರು ಗ್ರಾಮದವನಾದ ನನಗೆ ಸ್ಥಳೀಯನಾಗಿರುವುದರಿಂದ ಬಿಎಸ್ಆರ್ ಪಕ್ಷದ ಅಭ್ಯಥರ್ಿಯನ್ನಾಗಿ ಪಕ್ಷದ ರಾಜ್ಯಧ್ಯಾಕ್ಷರಾದ ಶ್ರೀರಾಮುಲುರವರು ಘೋಷಿಸಿದ್ದಾರೆ.  ಎಂದು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಕೆ.ಎಲ್.ದೇವರಾಜು ತಿಳಿಸಿದರು.
     ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯದ ಅನುಭವ ನನಗೆ ಕಡಿಮೆ ಇದೆ  ಎಂದರಲ್ಲದೆ, ಈಗಾಗಲೇ ತಾಲ್ಲೂಕಿನ ಹಲವು ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಎಂದರು.
    ತಾಲ್ಲೂಕಿನಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಅಧ್ಯಕ್ಷರಾದ ಶ್ರಿರಾಮುಲು, ಸೋಮಶೇಖರರೆಡ್ಡಿ, ಜೆ.ಶಾಂತ ಇನ್ನಿತರ ಮುಖಂಡರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

aPÀÌ£ÁAiÀÄPÀ£ÀºÀ½îAiÀÄ PÉeɦ ¥ÀPÀëzÀ ªÀ¸ÀAvïPÀĪÀiÁgï, ªÀÄ°èPÁdÄð£ÀAiÀÄå, gÁªÀÄtÚ, ²ªÀtÚ ¸ÉÃjzÀAvÉ ºÀ®ªÀgÀÄ ¹.©.¸ÀÄgÉñï¨Á§Ä £ÉÃvÀÈvÀézÀ°è eÉrJ¸ï ¥ÀPÀë ¸ÉÃjzÀgÀÄ.
  ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ
ಚಿಕ್ಕನಾಯಕನಹಳ್ಳಿ,ಏ.05 : ನವೋದಯ ಪ್ರಥಮ ದಜರ್ೆ ಕಾಲೇಜಿನ 2012-13ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಇದೇ 8ರ ಸೋಮವಾರ ಏರ್ಪಡಿಸಲಾಗಿದೆ.
    ಸಮಾರಂಭವನ್ನು ಕಾಲೇಜು ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಸಂತಶಿಶುನಾಳ ಶರೀಫ, ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.