Monday, April 2, 2012




ಬರಪರಿಹಾರ ಕಾರ್ಯದಲ್ಲಿ  ಜನಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವ ಡಿ.ಸಿ.: ಶಾಸಕ ಸಿ.ಬಿ.ಎಸ್. ಆರೋಪ
ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ ಅಲ್ಲದೆ ತಾಲ್ಲೂಕು  ಬರಪೀಡಿತ ಪ್ರದೇಶವೆಂದು ಸಕರ್ಾರ ಘೋಷಿಸಿದೆ ಆದರೂ ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರೂ ತಾಲ್ಲೂಕಿನಲ್ಲಿ ಒಂದು ಬಾರಿಯಾದರೂ ಜನಪ್ರತಿನಿಧಿಗಳ ಸಭೆ ಕರೆದು ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚಚರ್ಿಸದೆ, ಜನಪ್ರತಿನಿದಿಗಳನ್ನು ಕಡೆಗಣಿಸಿ ಜಿಲ್ಲೆಯಲ್ಲಿ ಪ್ರೆಸಿಡೆಂಟ್ನಂತೆ ಮಾದರಿಯಲ್ಲಿ ಅವರ ಪಾಡಿಗೆ ಅವರು ವತರ್ಿಸುತ್ತಿದ್ದಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಬರಪರಿಹಾರ ಕಾರ್ಯ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸಕರ್ಾರ ಈ ಹಿಂದೆ ಕೂಲಿಗಾಗಿ ಕಾಳು ಯೋಜನೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಜನತೆಯ ಜೀವನ ಸುಧಾರಿಸಿತ್ತು,  ಅದೇ ರೀತಿ ಈಗ ನೀರಿನ ಬವಣೆ ನಿವಾರಿಸಲು ಹೆಚ್ಚಿನ ರೀತಿಯಲ್ಲಿ ಬೋರ್ವೆಲ್ಗಳನ್ನು ಕೊರೆಸಿ ನೀರಿನ ದಾಹ ತೀರಿಸುವ ಅಗತ್ಯವಿದೆ ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಿ ತಾಲ್ಲೂಕಿನ ಸಮಸ್ಯೆಗಳನ್ನು ಸಕರ್ಾರಕ್ಕೆ ಸಲ್ಲಿಸಬೇಕು, ಆದರೆ ಜಿಲ್ಲಾಧಿಕಾರಿಗಳು ಇಲ್ಲಿಯ ಸಮಸ್ಯೆ ಬಗ್ಗೆ ಒಂದು ಬಾರಿಯೂ  ಈ ಕಡೆ ಗಮನ ಹರಿಸುತ್ತಿಲ್ಲದಿರುವುದರಿಂದ ತಾಲೂಕಿನಲ್ಲಿ ಸಮಸ್ಯೆ ಹೆಚ್ಚುತ್ತಿದೆ, 
ಬರಪರಿಹಾರ ಸಮಿತಿಗೆ  ಶಾಸಕರುಗಳನ್ನು ಅಧ್ಯಕ್ಷರನ್ನಾಗಿ ಸಕರ್ಾರ ಮಾಡಿದೆ, ಆದರೆ ಜಿಲ್ಲಾಧಿಕಾರಿಗಳು ಶಾಸಕರನ್ನು ಹಾಗೂ ಜನಪ್ರತಿನಿಧಿಗಳನ್ನು ಲೆಕ್ಕಿಸದಿರುವುದು ಶೋಚನೀಯವಾಗಿದೆ ಎಂದ ಅವರು,  ಜಾನುವಾರುಗಳಿಗೆ ಮೇವಿನ ಸಮಸ್ಯೆ  ಹಾಗೂ ಜನರ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ, ಕೆಲವು ಕಡೆ ಬೋರ್ವೆಲ್ ಮತ್ತು ಪೈಪ್ಲೈನ್ ಇರುವ ಕಡೆ  ನೀರು ತಳಮಟ್ಟಕ್ಕೆ ಹೋಗುತ್ತಿದೆ,  ಇದರಿಂದ ಜನರು ಜೀವನೋಪಾಯಕ್ಕಾಗಿ ಕುಟುಂಬ ಸಮೇತ ಪಟ್ಟಣಗಳತ್ತ ಗುಳೇ ಹೋಗುತ್ತಿದ್ದಾರೆ.  ಸಕರ್ಾರ ಬರಪೀಡಿತ ಪ್ರದೇಶಗಳಿಗೆ ಅನುದಾನ ನೀಡುತ್ತಿರುವುದು ಸಾಲುತ್ತಿಲ್ಲ ಇದಕ್ಕಾಗಿ ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಆಗಮಿಸಿ ಸಮಸ್ಯೆಗಳನ್ನು ತಿಳಿಯಬೇಕು,  ಸಕರ್ಾರ ಬರಪೀಡಿತ ಪ್ರದೇಶಗಳ ಸಮಸ್ಯೆ ನಿವಾರಿಸಲು ಉತ್ತಮ ರೀತಿಯಲ್ಲಿ ಹಣ ಮಂಜೂರು ಮಾಡಬೇಕು ಎಂದು ತಿಳಿಸಿದರು. 



ಸಕಾಲ ದಿಂದ ಜನರಿಗೆ ಸಕರ್ಾರಿ ಸೇವೆಗಳು ಶೀಘ್ರ ಸಿಗುವಂತಾಗಲಿ
ಚಿಕ್ಕನಾಯಕನಹಳ್ಳಿ,ಏ.02 : ಸಕರ್ಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಯಾರ ಒತ್ತಡಕ್ಕೂ ಮಣಿಯದೇ, ಸಾರ್ವಜನಿಕರ ಸೇವೆಯನ್ನು ವಿಳಂಬಗೊಳಿಸದೆ ಶೀಘ್ರವಾಗಿ ಪರಿಹರಿಸಬೇಕು ಎಂಬ ಉದ್ದೇಶದಿಂದ ಸಕಾಲ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದ್ದು ಇದರಿಂದ ಸಾರ್ವಜನಿಕರ ಸೇವೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಕಾಲ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಸಕರ್ಾರದ ಕೆಲಸ ಪೂರ್ಣಗೊಳ್ಳಲು ದಿನವಿಡಿ ಕಾಯುವ ಸಾರ್ವಜನಿಕರು ಇನ್ನು ಮುಂದೆ ಶೀಘ್ರವಾಗಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು, ತಡವಾದರೆ ಅದರ ಬದಲಾಗಿ ಪರಿಹಾರ ಧನ ಪಡೆಯಬಹುದಾಗಿದೆ, ಅದಕ್ಕಾಗಿ ಸಾರ್ವಜನಿಕರು ತಮ್ಮ ಸಮಸ್ಯೆ ಬಗ್ಗೆ ಅಧಿಕಾರಿಗಳಲ್ಲಿ ಅಜರ್ಿ ನೀಡಿ, ಅಜರ್ಿ ನೀಡಿದಕ್ಕಾಗಿ ಸ್ವೀಕೃತಿ ಪತ್ರ ಪಡೆಯಬೇಕು, ಅಜರ್ಿ ನೀಡಿಯೂ ತಮ್ಮ ಕೆಲಸ ತಾವು ಪಡೆದ ಕಾಲವಕಾಶದೊಳಗೆ ಪೂರ್ಣಗೊಳ್ಳದಿದ್ದರೆ ಸ್ವೀಕೃತಿ ಪತ್ರ ನೀಡಿದ ಅಧಿಕಾರಿಯೂ ತಮ್ಮ ವೇತನದಲ್ಲಿ 20ರೂ ನಿಂದ 500ರೂ ವರೆಗೆ ಪರಿಹಾರ ನೀಡಲಿದ್ದಾರೆ ಎಂದು  ತಿಳಿಸಿದ ಅವರು  ಈ ಸಕಾಲ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡು ಈ ಯೋಜನೆಯ ಬಗ್ಗೆ ಗ್ರಾಮದ ಜನರಿಗೂ ತಿಳಿಸಬೇಕು, ಹಾಗೂ ಅಧಿಕಾರಿಗಳು ಸಕಾಲ ಯೋಜನೆಯನ್ನು ಮರೆಯದೆ ಸರಿಯಾದ ವೇಳೆಯಲ್ಲಿ ಸಾರ್ವಜನಿಕರ ಕಾರ್ಯ ಪೂರ್ಣಗೊಳಿಸಲು ತಿಳಿಸಿದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಸಕಾಲ ಯೋಜನೆಯಿಂದ ಅಧಿಕಾರಿಗಳ ಹಾಗೂ ಜನಸಾಮಾನ್ಯರ ಭಾಂದವ್ಯ ಬೆಳೆಯುತ್ತದೆ ಎಂದ ಅವರು ಈ ಯೋಜನೆಯಿಂದ ಸಾರ್ವಜನಿಕರು ಪ್ರತಿ ದಿನ ಕಛೇರಿಗಳನ್ನು ಅಲೆಯುವುದು ತಪ್ಪುತ್ತದೆ ಎಂಬ ಅಭಿಪ್ರಾಯವಿದೆ, ಅಲ್ಲದೆ ಅಧಿಕಾರಿಗಳು ಕಛೇರಿಯಲ್ಲಿ ಏನಾದರೂ ತೊಂದರೆ ಇದ್ದರೆ ಸಾರ್ವಜನಿಕರಲ್ಲಿ ನೇರವಾಗಿ ತಿಳಿಸಿ ನಿಮ್ಮ ಕೆಲಸ ಯಾವಗ ಪೂರ್ಣಗೊಳ್ಳುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿ, ಅವರನ್ನು ಕಛೇರಿಯಿಂದ ಕಛೇರಿಗೆ ಅಲೆಸಬೇಡಿ ಎಂದು ಸಲಹೆ ನೀಡಿದರು.
ಸಕಾಲದ ಸಂಪನ್ಮೂಲ ವ್ಯಕ್ತಿ ಹಾಗೂ, ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ತಮ್ಮ ಕೆಲಸವನ್ನು ನಿಗದಿತ ದಿನಾಂಕದೊಳಗೆ ಮಾಡಿಕೊಡದಿದ್ದರೆ ಪರಿಹಾರ ಹಣ ಕೊಡಬೇಕು, ಪರಿಹಾರ ಹಣ ನೀಡಿದ ನಂತರವೂ ಕೆಲಸವನ್ನು ಪೂರ್ಣಗೊಳಿಸುವುದು ಈ ಯೋಜನೆಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯ ಉದ್ಘಾಟನೆ ಗ್ರಾ.ಪಂ.ಕಛೇರಿಗಳಲ್ಲೂ ನಡೆಯಲಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕಾಲ ಯೋಜನೆಯಲ್ಲಿ ಅಧಿಕಾರಿಗಳು ಮಾತ್ರ ಕರ್ತವ್ಯಯತೆಯಿಂದ ಕೂಡಿರಬೇಕೆಂದಲ್ಲ ಜನಪ್ರತಿನಿಧಿಗಳು ಈ ಯೋಜನೆಯ ಉದ್ದೇಶ ತಿಳಿದುಕೊಂಡು ತಮ್ಮ ವ್ಯಾಪ್ತಿಗೆ ಬರುವ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು, ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳು ಯಾವಾಗ ತಮ್ಮ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸುತ್ತವೆಯೋ ಆ ಸಮಯದಲ್ಲಿ ಸಕರ್ಾರದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ,  ತಹಶೀಲ್ದಾರ್ ಉಮೇಶ್ಚಂದ್ರ,  ಪುರಸಭಾಧ್ಯಕ್ಷ ದೊರೆಮುದ್ದಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಸದಸ್ಯೆ ಚೇತನಗಂಗಾಧರ್, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ರೇಣುಕಗುರುಮೂತರ್ಿ,  ಇ.ಓ ಎನ್.ಎಂ.ದಯಾನಂದ್ ಸೇರಿದಂತೆ ಮುಂತಾದವರಿದ್ದರು.


ಮರಳು ಮಾಫಿಯಾಕ್ಕೆ ಬಲಿಯಾದ ಗ್ರಾಮ ಸಹಾಯಕ ವಿಜಯ್ ಕುಮಾರ್

ಚಿಕ್ಕನಾಯಕನಹಳ್ಳಿ,ಏ.02 : ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಮರಳು ಮಾಫಿಯಾಕ್ಕೆ ಗ್ರಾಮ ಸಹಾಯಕ ವಿಜಯ್ಕುಮಾರ್(48)ನನ್ನು ಅಮಾನುಷವಾಗಿ ಕೊಲೆ ಮಾಡಿದ್ದಾರೆ.       ವಿಜಯ್ಕುಮಾರ್ ಶೆಟ್ಟಿಕೆರೆಯ ಗ್ರಾಮಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದು ಶೆಟ್ಟಿಕೆರೆಯ ಕೆರೆಯಲ್ಲಿ ಮರಳು ತುಂಬಲು ಬಂದ ಜನರನ್ನು ತಡೆಯಲು ಹೋದಾಗ ಈ ಘಟನೆ ನಡೆದಿರಬಹುದೆನ್ನೆಲಾಗಿದೆ. ಮೃತ ವಿಜಯ ಕುಮಾರ್ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮಾರಕಸ್ತ್ರಾಗಳಿಂದ ಹೊಡೆದಿರುವ ಗುರುತುಗಳಿವೆ, ಜೊತೆಗೆ ಕುತ್ತಿಗೆಯ ಬಳಿ ಕಾಲಿನಿಂದ ತುಳಿದಿರುವ ಕುರುಹಗಳಿವೆ.
  ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು ಸೋಮವಾರ ಗ್ರಾಮಸ್ಥರಿಗೆ ತಿಳಿದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 
 ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು, ಎಸ್.ಪಿ.ಮೋಹನ್ ರೆಡ್ಡಿ, ಪ್ರಭಾರ ಡಿವೈಎಸ್ಪಿ ಶಿವರುದ್ರ ಸ್ವಾಮಿ,  ತಹಶೀಲ್ದಾರ್ ಉಮೇಶ್ಚಂದ್ರ, ಸಿ.ಪಿ.ಐ ಕೆ.ಪ್ರಭಾಕರ್ ಭೇಟಿ ನೀಡಿ ಪರಿಶೀಲಿಸಿದರು. ಚಿ.ನಾ.ಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾ: ತಾಲೂಕಿನ ಶೆಟ್ಟೀಕೆರೆ, ಕಾಡೇನಹಳ್ಳಿ, ಬರಗೂರು, ಹೊಸಕೆರೆ, ಬಳ್ಳೆಕಟ್ಟೆ ಸೇರಿದಂತೆ ಹಲವು ಕಡೆ ಮರಳು ಮಾಫಿಯಾ ನಡೆಯುತ್ತಿದೆ.  ಈ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ಇದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳದೆ, ಅಧೀನ ನೌಕರರನ್ನು ಬಿಟ್ಟು ಆಟನೋಡುವ ಅಧಿಕಾರಿಗಳ ಕಾಟಕ್ಕೆ ವಿಜಯಕುಮಾರ್ ಬಲಿಯಾಗಿದ್ದಾನೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪರಿಹಾರಕ್ಕೆ ಒತ್ತಾಯ:  ಮರಳು ಮಾಫಿಯಾಕ್ಕೆ ಬಲಿಯಾಗಿರುವ ಗ್ರಾಮ ಸಹಾಯಕ ನಾಯಕ ಜನಾಂಗದವನಾಗಿದ್ದು, ಹೆಂಡತಿ, ಎರಡು ಹೆಣ್ಣು, ಒಬ್ಬ ಗಂಡು ಮಗನ ತಂದೆ, ಅವನ ಸಾವಿನಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ,  ಆದ್ದರಿಂದ ಸಕರ್ಾರ ಶೀಘ್ರ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಹಾಗೂ ಅಹಿಂದ ತಾಲೂಕು ಅಧ್ಯಕ್ಷ ಸಿಂಗದಹಳ್ಳಿ ರಾಜ್ಕುಮಾರ್ ಒತ್ತಾಯಿಸಿದ್ದಾರೆ.

ಸುಪ್ರಿಂ ಸೆಲೂನ್ನಲ್ಲಿ ಮಟ್ ಮಂಗ್ಳವಾರದ ಕವಿಗೋಷ್ಠಿ
ಚಿಕ್ಕನಾಯಿಕನಹಳ್ಳಿ,ಏ.02: ಪಟ್ಟಣದ ಸುಪ್ರಿಂ ಸೆಲೂನ್ನಲ್ಲಿ ಸಾಹಿತ್ಯ ಎಂಬ ನೂತನ ಕಲ್ಪನೆಯೊಂದಿಗೆ ಸಾಹಿತ್ಯದ ಕೆಲಸವನ್ನು ತನ್ನ ಕಾಯಕದೊಂದಿಗೆ ನೆಡೆಸಿಕೊಡುತ್ತಿರುವ ಸುಪ್ರಿಂ ಸುಬ್ರಹ್ಮಣ್ಯ  ಅವರು, ಇದೇ ಏ.3ರಂದು ಸಂಜೆ 5.30ಕ್ಕೆ ತನ್ನ ಸೆಲೂನ್ನಲ್ಲಿ ಕವಿಗೋಷ್ಠಿ ಏರ್ಪಡಿಸಿದ್ದಾರೆ.
ಜಾಡು ವೇದಿಕೆಯೊಂದಿಗೆ ನಡೆಯುತ್ತಿರುವ ಈ ಕವಿಗೋಷ್ಠಿಯಲ್ಲಿ ಚಿಂತಕ ಕೆ.ದೊರೈರಾಜ್, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್, ಜಿ.ವಿ.ಆನಂದಮೂತರ್ಿ, ಬಿಳಿಗೆರೆ ಕೃಷ್ಣಮೂತರ್ಿ, ಅಬ್ದುಲ್ ಹಮೀದ್, ಎನ್.ನಾಗಪ್ಪ, ಎನ್.ಇಂದಿರಮ್ಮ, ಎಸ್.ಗಂಗಾಧರಯ್ಯ, ಉಗಮ ಶ್ರೀನಿವಾಸ್, ಸಿ.ಗುರುಮೂತರ್ಿ ಕೊಟಿಗೆಮನೆ,  ಅಣೆಕಟ್ಟೆ ವಿಶ್ವನಾಥ್, ದೇವರಹಳ್ಳಿ ಧನಂಜಯ, ರಾಧಕೃಷ್ಣ, ಸಿ.ಪಿ.ಗಿರೀಶ್, ಸಿ.ಎ.ಸೋಮಶೇಖರ್ ಸೇರಿದಂತೆ ಹಲವು ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. 
ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿ
ಚಿಕ್ಕನಾಯಕನಹಳ್ಳಿ,ಏ.02: ಡಾ.ಅಂಬೇಡ್ಕರ್ ಜನ್ಮದಿನಾಚರಣೆಯ ಅಂಗವಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ವಿಧವೆಯರಿಗೆ ಉಚಿತವಾಗಿ 10 ದಿನಗಳ  ಬ್ಯೂಟಿ ಪಾರ್ಲರ್ ತರಬೇತಿಯನ್ನು ನೀಡಲಾಗುವುದು ಎಂದು ಸುಪ್ರಿಂ ಬ್ಯೂಟಿಪಾರ್ಲರ್ ತರಬೇತಿ ಸಂಸ್ಥೆಯ ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ತಿಳಿಸಿದ್ದಾರೆ.
 ತರಬೇತಿಗೆ ಅಜರ್ಿ ಸಲ್ಲಿಸುವವರು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರಾಗಿರಬೇಕು, ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ತರಬೇತಿಯನ್ನು ನೀಡಲಾಗುವುದು, ತರಬೇತಿಯ ನಂತರ ಸಟರ್ಿಫಿಕೇಟ್ ನೀಡಲಾಗುವುದು. ಈ ತರಬೇತಿಗೆ ಆಯ್ದ 10 ಮಹಿಳೆಯರನ್ನು ಮಾತ್ರ ಆಯ್ಕೆಮಾಡಿಕೊಳ್ಳಲಾಗುವುದು. ಹೆಚ್ಚಿನ ವಿಷಯಗಳಿಗೆ ತರಬೇತಿ ಸಂಸ್ಥೆಯ ಅಧ್ಯಕ್ಷೆ ರತ್ನಮ್ಮ ರೇಣುಕಸ್ವಾಮಿ ಮೊ.9741752827 ಕಾರ್ಯದಶರ್ಿ ವನಜ ಸುಬ್ರಹ್ಮಣ್ಯ ಮೊ.9742316759 ಸಂಪಕರ್ಿಸಬಹುದು.