Saturday, August 27, 2011ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟಬೇಕು ಚಿಕ್ಕನಾಯಕನಹಳ್ಳಿ,ಆ.26: ಶೈಕ್ಷಣಿಕ ಕ್ರಾಂತಿಯ ಮೂಲಕ ದೇಶವನ್ನು ಕಟ್ಟುವ ಹೊಣೆ ಹೊತ್ತಿರುವ ನಾವು, ಶಿಕ್ಷಣವನ್ನು ನೀಡುವ ಜೊತೆಗೆ ಮಕ್ಕಳ ಭವಿಷ್ಯದ ಬದುಕಿಗೆ ಅಗತ್ಯವಿರುವ ಉದ್ಯೋಗದ ಭದ್ರತೆಯನ್ನು ನೀಡುವುದು ಅವಶ್ಯವೆಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮೇಲನಹಳ್ಳಿ ಮೊರಾಜರ್ಿ ದೇಸಾಯಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ನಮ್ಮ ಇಲಾಖೆಯ ಮೊರಾಜರ್ಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.94 ರಷ್ಟು ಬಂದಿರುವುದು ಸಕರ್ಾರಿ ವಸತಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಿದೆ ಎಂದರಲ್ಲದೆ, ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿಮರ್ಿಸುವಲ್ಲಿ ಸಕರ್ಾರ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಈ ಶಾಲೆಗಳಿಗೆ ಅಗತ್ಯವಿರುವ ಒಳಾಂಗಣ ಕ್ರೀಡಾಂಗಣ ಹಾಗೂ ಸುಸಜ್ಜಿತ ಗ್ರಂಥಾಲಯವನ್ನು ಮಂಜೂರು ಮಾಡುವುದಾಗಿ ತಿಳಿಸಿದರು.ನಾವು ಓದುವ ಕಾಲದಲ್ಲಿ ಶಾಲೆಗಳಲ್ಲಿ ಇಷ್ಟೋಂದು ಸವಲತ್ತುಗಳಿರಲಿಲ್ಲ, ಶಾಲೆಗಳಲ್ಲಿ ಕುಳಿತುಕೊಳ್ಳಲು ಮಣಿಗಳಾಗಲಿ, ಶಿಕ್ಷಕರಿಗೆ ಖುಚರ್ಿಗಳಿಗೂ ತತ್ವಾರವಿತ್ತು. ಈಗ ಆಗಿಲ್ಲ ಸರ್ವಶಿಕ್ಷಣ ಯೋಜನೆಯಿಂದಾಗಿ ಎಲ್ಲಾ ಸಕರ್ಾರಿ ಶಾಲೆಗಳು ಉತ್ತಮವಾಗಿವೆ ಎಂದರಲ್ಲದೆ, ಸಕರ್ಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಇಷ್ಟೇಲ್ಲಾ ಸೌಲಭ್ಯ ನೀಡುತ್ತಿದೆ ಎಂದರು, ಅಬ್ದುಲ್ ಕಲಾಂರವರು ತಮ್ಮ ಶಿಕ್ಷಣ ಸಂದರ್ಭದಲ್ಲಿ ಮನೆಗಳಿಗೆ ಪತ್ರಿಕೆಯನ್ನು ಸರಬರಾಜು ಮಾಡುವ ಮೂಲಕ ಅದರಲ್ಲಿ ಬಂದ ಹಣದಲ್ಲಿ ತಮ್ಮ ಶಿಕ್ಷಣವನ್ನು ನಡೆಸುತ್ತಿದ್ದರು ಎಂದರಲ್ಲದೆ, ಇಂದಿನ ಮಕ್ಕಳು ಮುಂದಿನ ದಿನಗಳಲ್ಲಿ ಅಬ್ದುಲ್ ಕಲಾಂರಂತಹ ವ್ಯಕ್ತಿತ್ವ ಉಳ್ಳವರಾಗಬೇಕೆಂದರು,ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು, ಈ ಶಾಲೆಯ ವಾತಾವರಣ ಸುಂದರವಾಗಿದೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಪಟ್ಟಣದ ಹೊರವಲಯದಲ್ಲಿರುವುದು ಮತ್ತು ಕೆರೆ ಪಕ್ಕದಲ್ಲಿರುವುದರಿಂದ ಮಕ್ಕಳ ಭದ್ರತೆಗೂ ಹೆಚ್ಚು ಒತ್ತು ನೀಡಬೇಕೆಂದರು. ಚಿಕ್ಕನಾಯಕನಹಳ್ಳಿಗೆ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಪ್ರಾರಂಭಿಸಲು ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಇದಕ್ಕೆ ಸಚಿವರು ಅನುಮತಿ ನೀಡಬೇಕೆಂದರಲ್ಲದೆ, ಹಂದನಕೆರೆ, ಕಾತ್ರಿಕೆಹಾಳ್ ಮತ್ತು ಶೆಟ್ಟೀಕೆರೆಗಳಿಗೆ ವಿದ್ಯಾಥರ್ಿ ನಿಲಯವನ್ನು ಆರಂಭಿಸಲು ಸಚಿವರು ಒಪ್ಪಿಗೆ ನೀಡಬೇಕೆಂದರು.ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಎಚ್.ಬಿ.ಪಂಚಾಕ್ಷರಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಬರುವ ಹೆಚ್ಚಿನ ಸವಲತ್ತುಗಳನ್ನು ನೀಡಬೇಕೆಂದರು.ಕಾರ್ಯಕ್ರಮದಲ್ಲಿ ತಿಪಟೂರು ಶಾಸಕ ಬಿ.ಸಿ.ನಾಗೇಶ್, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯರುಗಳಾದ ಜಿ. ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ತಾ.ಪಂ. ಉಪಾಧ್ಯಕ್ಷೆ ಬಿಬಿ ಫಾತಿಮಾ, ತಾ.ಪಂ.ಸದಸ್ಯರುಗಳಾದ ಚೇತನ ಗಂಗಾಧರ್, ಎಚ್.ಆರ್.ಶಶಿಧರ್, ಎಂ.ಎಂ.ಜಗಧೀಶ್, ನಿರಂಜನಮೂತರ್ಿ, ಹೊನ್ನೆಬಾಗಿ ಅಧ್ಯಕ್ಷರಾದ ಕಲ್ಪನಾ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಶರತ್ಕುಮಾರ್, ಮಂಜುಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ.ಮುದ್ದುಕುಮಾರ್ ಸ್ವಾಗತಿಸಿದರೆ, ಶ್ಯಾಮ್ ಸುಂದರ್ ವಂದಿಸಿದರು.