Thursday, June 30, 2011

ಏಕದಶಿ ಜಾತ್ರೆಯ ಪ್ರಯುಕ್ತ ರಥೋತ್ಸವ ಹಾಗೂ ರಾಜ್ಯ ಮಟ್ಟದ ವಿವಿಧ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.30 : ಹಳೆಯೂರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಜುಲೈ 11 ರಿಂದ 13ರವರೆಗೆ ಏರ್ಪಡಿಸಿದ್ದು ಈ ಸಂಬಂಧ ವಿವಿಧ ಉತ್ಸವ ಹಾಗೂ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 11ರಂದು ಸೋಮವಾರ ಬೆಳ್ಳಿ ಪಲ್ಲಕ್ಕಿಉತ್ಸವ, 12ರ ಮಂಗಳವಾರದಂದು ಬ್ರಹ್ಮರಥೋತ್ಸವ ಏರ್ಪಡಿಸಲಾಗಿದೆ, ರಥೋತ್ಸವದ ನಂತರ ದಿವ್ಯಜ್ಯೋತಿ ಕಲಾ ಸಂಘದವರಿಂದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ಏರ್ಪಡಿಸಿದೆ. ಜುಲೈ 13ರ ಬುಧವಾರದಂದು ರಥೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಸಲಾಗಿದೆ.ಇದೇ ದಿನ ಮಧ್ಯಾಹ್ನ 3 ಗಂಟೆಗೆ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ಸಭಾಂಗಣದಲ್ಲಿ ದಿವ್ಯ ಜ್ಯೋತಿ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ನವ ದಂಪತಿಗಳ' ಸ್ಪಧರ್ೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಅಂದು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಏರ್ಪಡಿಸಲಾಗಿದೆ.
13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.30 : 13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಯನ್ನು ಜುಲೈ12ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಶ್ರೀ ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಎನ್.ಬಸವಯ್ಯನವರ ಸವಿನೆನಪಿಗಾಗಿ ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಸಿಡ್ಲೇಹಳ್ಳಿ ಸಂಸ್ಥಾನದ ಕರಿಬಸವದೇಶೀಕೇಂದ್ರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಬೆಂಗಳೂರಿನ ಉಪ್ಪಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ವರ್, ಪೋದಾರ್ ಕಂಪನಿ ಶಂಕರ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್ ಉಪಸ್ಥಿತರಿರುವರು.ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆ ವಿವರ : ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯು ಸೀನಿಯರ್ ಗ್ರೂಪ್, ಜೂನಿಯರ್ ಗ್ರೂಪ್, ಸೀನಿಯರ್ ಸಿಂಗಲ್, ಜೂನಿಯರ್ ಸಿಂಗಲ್ ವಿಭಾಗವಿದ್ದು ಗ್ರೂಪ್ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಿದ್ದು, ಸೀನಿಯರ್ ಗ್ರೂಪ್ ಪ್ರವೇಶ ದರ 200, ಜೂನಿಯರ್ ಗ್ರೂಪ್ 100, ಸೀನಿಯರ್ ಸಿಂಗಲ್ 100, ಸೀನಿಯರ್ ಸಿಂಗಲ್ 100 ಪ್ರವೇಶ ದರಗಳಿದ್ದು ತೀಪರ್ುಗಾರರ ಮತ್ತು ವ್ಯವಸ್ಥಾಪಕರ ತೀಮರ್ಾನವೇ ಅಂತಿಮ ತೀಮರ್ಾನವಾಗಿದೆ, ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ-9980163152, 9742796001, ಸಂಪಕರ್ಿಸಬಹುದಾಗಿದೆ.
ಆಧಾರ್ 7ರವರೆಗೆ, ಮತದಾರ ನೊಂದಾಣಿ 31 ರವರೆಗೆ ಅವಧಿ ವಿಸ್ತರಣೆ: ತಹಶೀಲ್ದಾರ್ ಟಿ.ಸಿ.ಕೆ.ಚಿಕ್ಕನಾಯಕನಹಳ್ಳಿ,ಜೂ.30: ವಿಶಿಷ್ಟ ಗುರುತಿನ ಚೀಟಿ ಆಧಾರ್'' ಯೋಜನೆಯಲ್ಲಿ ಭಾವಚಿತ್ರ ತೆಗೆಯುವ ಕಾರ್ಯವನ್ನು ಜುಲೈ 7ರವರೆಗೆ ವಿಸ್ತರಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ. ತಾಲೂಕಿನಲ್ಲಿ ಎರಡು ಲಕ್ಷದ ಹನ್ನೆರಡು ಸಾವಿರದ ಮೂರುನೂರ ಐವತ್ತು ಜನರಿದ್ದು, ಇದರಲ್ಲಿ ಎರಡು ಲಕ್ಷದ ಒಂದು ಸಾವಿರದ ಒಂದು ನೂರ ಐವತ್ತು ಜನರು ಈಗಾಗಲೇ ಆಧಾರ್ ಯೋಜನೆಗೆ ಒಳಪಟ್ಟಿದ್ದಾರೆ. ಇನ್ನು ಹತ್ತು ಸಾವಿರ ಜನ ಮಾತ್ರ ಆಧಾರ ಸಂಖ್ಯೆಯನ್ನು ಹೊಂದಬೇಕಾಗಿದೆ. ಈ ಹತ್ತು ಸಾವಿರ ಜನರಿಗಾಗಿ ಭಾವ ಚಿತ್ರ ತೆಗೆಯುವ ಕಾರ್ಯವನ್ನು ಜುಲೈ ಏಳರವರೆಗೆ ವಿಸ್ತರಿಸಿದ್ದು, ತಕ್ಷಣವೇ ಉಳಿದಿರುವ ಸಾರ್ವಜನಿಕರು ಈ ವ್ಯಾಪ್ತಿಗೆ ಒಳಪಡಬೇಕು ಎಂದಿದ್ದಾರೆ. ಆಧಾರ್ ಯೋಜನೆಗೆ ಒಳಪಡದೆ ಇರುವ ಜನರಿಗೆ ಸಕರ್ಾರದ ಸವಲತ್ತುಗಳಾದ ಪಡಿತರ ವಿತರಣೆ, ಸೀಮೆಣ್ಣೆ ವಿತರಣೆ, ಪಿಂಚಣಿ, ನೌಕರರಿಗೆ ಸಂಬಳ ಸೇರಿದಂತೆ ಎಲ್ಲಾ ರೀತಿಯ ಸಕರ್ಾರಿ ಸೌಲಭ್ಯಗಳನ್ನು ತಡೆಹಿಡಯಲಾಗುವುದು ಎಂದರು.ಜುಲೈ 30 ಮತಪರಿಷ್ಕರಣೆಗೆ ಗಡವು: ಹದಿನೆಂಟು ವರ್ಷ ತುಂಬಿರುವ ಎಲ್ಲಾ ಯುವ ಜನತೆ ತಮ್ಮ ಮೂಲಭೂತ ಹಕ್ಕಾದ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಜುಲೈ 31 ಅಂತಿಮ ದಿನವಾಗಿದೆ ಎಂದು ಚುನಾವಣಾ ಆಯೋಗ ನಿದರ್ೇಶನ ನೀಡಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ. 1.1.11ಕ್ಕೆ 18 ವರ್ಷ ತುಂಬಿರುವ ಎಲ್ಲಾ ಯುವಕ, ಯುವತಿಯರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ನೊಂದಾಯಿಸಲು ಅವಕಾಶವಿದ್ದು, ಹೊಸದಾಗಿ ನೊಂದಾಯಿಸಿಗೊಳ್ಳಲಿಚ್ಚಿಸುವರು ನಮೂನೆ 6ನ್ನು ಭತರ್ಿಮಾಡುವುದು, ಹೆಸರು, ಸ್ಥಳ, ಲಿಂಗ ಸೇರಿದಂತೆ ಇನ್ನಿತರ ತಿದ್ದುಪಡಿ ಮಾಡಲಿಚ್ಚಿಸುವರು ನಮೂನೆ 8ನ್ನು ಭತರ್ಿ ಮಾಡಿ ತಮ್ಮ ವ್ಯಾಪ್ತಿಯ ಬಿ.ಎಲ್.ಓ.ಗಳಿಗೆ ಕೊಡಬೇಕೆಂದು ಕೋರಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಒಂದು ಲಕ್ಷ ಐವತ್ತೈದು ಸಾವಿರ ಮತದಾರರ ಪೈಕಿ 93 ಸಾವಿರ ಮತದಾರರು ತಮ್ಮ ಮೊಬೈಲ್ ಯಾ ದೂರವಾಣಿ ಸಂಖ್ಯೆಯನ್ನು ನೊಂದಾಯಿಸಿಕೊಂಡಿದ್ದು ಉಳಿದವರು ಇನ್ನೂ ನೊಂದಾಯಿಸಿಕೊಳ್ಳಬೇಕಾಗಿದೆ ಆದ್ದರಿಂದ ಮೊಬೈಲ್ ಅಥವಾ ದೂರವಾಣಿ ಸಂಖ್ಯೆಗಳನ್ನು ನೊಂದಾಯಿಸುವುದು ಹಾಗೂ ಭಾವಚಿತ್ರ ಕೊಡುವುದು ಖಡ್ಡಾಯವಾಗಿರುವುದರಿಂದ ಸಂಬಂಧಿಸಿದವರು ತಮ್ಮ ವ್ಯಾಪ್ತಿಯ ಬಿ.ಎಲ್.ಓಗಳನ್ನು ಭೇಟಿ ಮಾಡಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಛೇರಿಯ ಚುನಾವಣೆಯ ಶಾಖೆಯ ದೂರವಾಣಿ ಸಂಖ್ಯೆ 08133 267242 ಇಲ್ಲಿ ಸಂಪಕರ್ಿಸಲು ಕೋರಲಾಗಿದೆ.ಹಂದನಕೆರೆ ಜನಸ್ಪಂದನ ಸಭೆ ಮುಂದೂಡಿಕೆ: ಹಂದನಕೆರೆಯಲ್ಲಿ ಜುಲೈ 2ರಂದು ನಡೆಯಬೇಕಾಗಿದ್ದ ಜನಸ್ಪಂದನ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ, ಮುಂದೂಡಿರುವ ಸಭೆಯನ್ನು ಜುಲೈ ತಿಂಗಳ ಮೂರನೇ ಶನಿವಾರದಂದು ನಡೆಸಲಾಗುವುದು ಎಂದು ತಾಲೂಕು ಕಛೇರಿಯ ಮೂಲ ತಿಳಿಸಿದೆ.
ವಿಶ್ವ ಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ ಮತ್ತು ಟ್ರಸ್ಟ್ ಉದ್ಘಾಟನೆಚಿಕ್ಕನಾಯಕನಹಳ್ಳಿ,ಜೂ.30 : ವಿಶ್ವ ಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ, ಟ್ರಸ್ಟ್ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜುಲೈ 2ರ ಶನಿವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ ಕಾಲೇಜು, ಶ್ರೀ ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು, ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.ತಹಶೀಲ್ದಾರ್ ಟಿ.ಸಿ.ಕಾಂತರಾಜು ಸಸಿನೆಡು-ಮರ ಸಂರಕ್ಷಿಸು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಶ್ರೀ ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ನ ಉದ್ಘಾಟನೆಯನ್ನು ತುಮಕೂರು ಜಿ.ಪಂ.ನ ಯೋಜನಾ ನಿದರ್ೇಶಕ ಕೆ.ಬಿ.ಆಂಜನಪ್ಪ ಉದ್ಘಾಟಿಸಲಿದ್ದಾರೆ. ಲೇಖಕ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಎಂ.ವಿ.ನಾಗರಾಜ್ರಾವ್ ಬರೆದಿರುವ ಗಾಂಧೀಜಿ 100 ಆದರ್ಶಗಳು ಪುಸ್ತಕವನ್ನು ಬಿಡುಗಡೆ ಮಾಡಲಿದ್ದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್ ಬಿ.ಸಿ.ಎಂ. ಹೆಣ್ಣುಮಕ್ಕಳ ವಸತಿ ನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳ ವಿತರಣೆ ಮಾಡಲಿದ್ದಾರೆ, ಬಿ.ಇ.ಓ ಸಾ.ಚಿ.ನಾಗೇಶ್ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಿದ್ದು, ಶ್ರೀ.ಕ.ಗ್ರಾ.ಶಿ.ಚಾ.ಟ್ರಸ್ಟ್ ಮ್ಯಾನೇಂಜಿಂಗ್ ಟ್ರಸ್ಟಿ ಬಿ.ಎನ್.ಗಾಯಿತ್ರಿದೇವಿ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ಪಿ.ಯು.ಸಿ, ಡಿ.ಇಡಿ, ಪರೀಕ್ಷೆಗಳಲ್ಲಿ ಕ್ನನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ 70 ವಿದ್ಯಾಥರ್ಿ, ವಿದ್ಯಾಥರ್ಿನಿಯರಿಗೆ ಅಭಿನಂದನ ಪತ್ರ ವಿತರಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರಿಯ ಸಾಹಿತಿ ಆರ್.ಬಸವರಾಜ್, ಶೃಂಗಾರ ಪ್ರಕಾಶನ ನಾಗರತ್ನರಾವ್, ವಲಯ ಅರಣ್ಯಾಧಿಕಾರಿ ನಂಜುಂಡಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ಪಿ.ಎಚ್.ಮಾರುತಿ, ನಿ.ಕೃಷಿ ಸಹಾಯಕ ನಿದರ್ೇಶಕ ಸಿ.ಹೆಚ್.ನಾಗರಾಜ್, ಶಿಕ್ಷಕ ಕುಮಾರಸ್ವಾಮಿ ಉಪಸ್ಥಿತರಿರುವರು ಎಂದು ಡಿ.ಇಡಿ.ಕಾಲೇಜ್ನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಕಸಾಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

Wednesday, June 29, 2011

ಕುಪ್ಪೂರು ಕೆರೆಯಿಂದ 15ಸಾವಿರ ಲೋಡ್ ಮಣ್ಣು ಹೊರಕ್ಕೆಚಿಕ್ಕನಾಯಕನಹಳ್ಳಿ,ಜೂ.29 : ಕುಪ್ಪೂರು ಕೆರೆಯ ಊಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದ್ದು, ಈ ಕೆರೆಯಿಂದ ಸುಮಾರು 15ಸಾವಿರ ಲೋಡ್ ಊಳೆತ್ತಲಾಗುತ್ತಿದೆ. ಇಷ್ಟು ಪ್ರಮಾಣದಲ್ಲಿ ಮಣ್ಣು ಹೊರ ತೆಗೆದರು ಕೆರೆಯ ಒಂದು ಮೂಲೆಯಲ್ಲಿ ಅಲ್ಪ ಪ್ರಮಾಣದಷ್ಟು ತೆಗೆದಂತಾಗಿದೆ ಅಷ್ಟೇ.ತಾಲ್ಲೂಕಿನ ಕುಪ್ಪೂರು ಕೆರೆ 63 ಎಕರೆಯಷ್ಟು ವಿಶಾಲವಾಗಿದ್ದು ಈ ಕೆರೆಯಲ್ಲಿ ಮಣ್ಣು ತುಂಬಿಕೊಂಡು ತಟ್ಟೆಯಂತಾಗಿತ್ತು. ಈ ಕೆರೆಯಲ್ಲಿ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯವಿಲ್ಲದೆ, ಬಹುಬೇಗ ತುಂಬುತ್ತಿತ್ತು, ಅಷ್ಟೇ ಬೇಗ ಖಾಲಿಯಾಗುತ್ತಿತ್ತು. ಈ ಕೆರೆಯಿಂದ ಸುತ್ತ ಮುತ್ತಲಿನ ಅಚ್ಚುಕಟ್ಟುದಾರರಿಗೆ ಯಾವುದೇ ಉಪಯೋಗವಾಗುತ್ತಿರಲಿಲ್ಲ. ಇದನ್ನರಿತ ಕುಪ್ಪೂರಿನ ಯುವಕರು ಶ್ರೀ ಮರುಳ ಸಿದ್ದೇಶ್ವರಸ್ವಾಮಿ ಕೆರೆ ಅಭಿವೃದ್ದಿ ಸಂಘವನ್ನು ಕಟ್ಟಿಕೊಂಡು ಕೆರೆಯ ಅಭಿವೃದ್ದಿಗೆ ಮುಂದಾಗಿದ್ದು ಮೊದಲ ಹಂತವಾಗಿ ಈ ಕೆರೆಯಿಂದ 15 ಸಾವಿರ ಲೋಡ್ ಮಣ್ಣನ್ನು ಕೆರೆಯಿಂದ ತೆಗೆಯುವ ಕಾರ್ಯ 15 ದಿನಗಳಿಂದ ಭರದಿಂದ ನಡೆಯುತ್ತಿದೆ. ಈ ಮಣ್ಣನ್ನು ನೂರಾರು ರೈತರು ತಮ್ಮ ಹೊಲ, ಗದ್ದೆ, ತೋಟಗಳಿಗೆ ಹೊಡೆದುಕೊಳ್ಳುತ್ತಿದ್ದು ಹುಳಿಯಾರು, ಹಂದನಕೆರೆ, ಅರಳೀಕೆರೆ ಭಾಗಗಳಿಗೂ ಈ ಮಣ್ಣು ಹೋಗುತ್ತಿದೆ, ಕೆರೆಯಿಂದ ಸುಮಾರು 30 ಕಿ.ಮೀ ಯಷ್ಟು ದೂರದೂರುಗಳಿಂದ ಲಾರಿಗಳನ್ನು ತಂದು ಮಣ್ಣನ್ನು ತೆಗೆಯುತ್ತಿದ್ದಾರೆ., ನೂರಾರು ಟ್ರಾಕ್ಟರ್ಗಳು ಹತ್ತಾರು ಲಾರಿಗಳು ಪ್ರತಿದಿನ ಮಣ್ಣು ಹೊಡೆಯುತ್ತಿದೆ ಈ ಕಾರ್ಯದಲ್ಲಿ ಹಿಟಾಚಿಗಳು ದೈತು ಶಕ್ತಿಯಂತೆ ಕಾರ್ಯನಿರ್ವಹಿಸುತ್ತಿವೆ. ಈ ಕಾರ್ಯಕ್ಕೆ ಸಕರ್ಾರ ಈಗಾಗಲೇ 15ಲಕ್ಷ ರೂಗಳನ್ನು ಮಂಜೂರು ಮಾಡಿದೆ, ಎಂದು ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಆನಂದಕುಮಾರ್ ತಿಳಿಸಿದ್ದಾರೆ. ಈ ಕೆರೆಯಲ್ಲಿ 30ಸಾವಿರ ಕ್ಯೂಬಕ್ ಮೀಟರ್ ಮಣ್ಣು ತೆಗೆಯಲಾಗುವುದು, ಇಷ್ಟು ಮಣ್ಣು ತೆಗೆದರು ಕೆರೆಯಲ್ಲಿ ಇನ್ನೂ ಒಂದು ಲಕ್ಷ ಕ್ಯೂಬಕ್ ಮೀಟರ್ನಷ್ಟು ಹಾಗೆಯೇ ಉಳಿಯುತ್ತದೆ ಎನ್ನುವ ಅವರು ಈ ಕೆರಯಲ್ಲಿ ನಾವಂದುಕೊಂಡಷ್ಟು ಮಣ್ಣು ಹೊರತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದರೆ ಈ ಕೆರೆಯೊಂದು ಸುಂದರ ತಾಣವಾಗುತ್ತದೆ, ಜೊತೆಗೆ ಕೆರೆಯ ಮುಂಭಾಗದಲ್ಲಿ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠವಿದೆ ಹಿಂಭಾಗದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದವಿದೆ, ಈ ಎರಡು ಸ್ಥಳಗಳು ಪುಣ್ಯ ಕ್ಷೇತ್ರವಾಗಿರುವುದರಿಂದ ನಾಡಿನ ಮೂಲೆ ಮೂಲೆಗಳಿಂದ ಬರುವ ಜನರಿಗೂ ಇದೊಂದು ನಿಸರ್ಗಧಾಮವಾಗುತ್ತದೆ. ಜೊತೆಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ(ದೋಣಿವಿಹಾರ) ಮಾಡಿದರೆ ಪ್ರೇಕ್ಷಣಿಯ ಸ್ಥಳವಾಗಿ, ಈ ಭಾಗವನ್ನು ಪ್ರವಾಸಿ ತಾಣವಾಗಿಸುವ ಎಲ್ಲಾ ಸವಲತ್ತುಗಳ್ನು ಪಡೆದಿದ್ದು ಸಕರ್ಾರ ಈ ಕೆರೆ ಅಭಿವೃದ್ದಿಗೆ ಇನ್ನೂ ಕನಿಷ್ಠ 20ಲಕ್ಷ ರೂಗಳಷ್ಟು ಅನುದಾನ ಬಿಡುಗಡೆ ಮಾಡಬೇಕೆಂದು ಈ ಭಾಗದ ಸಾರ್ವಜನಿಕರು ಸಕರ್ಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕು ಕಸಾಪ ವತಿಯಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜೂ.28: ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿನ 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿ/ನಿಯರನ್ನು ಸನ್ಮಾನಿಸಲಾಗುವುದು ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ. ಜುಲೈ 2ರಶನಿವಾರ ಬೆಳಗ್ಗೆ 10ಕ್ಕೆ ಪಟ್ಟಣದ ಶ್ರೀ ಮಲ್ಲಿಕಾಜರ್ುನ ಶಿಕ್ಷಕರ ತರಬೇತಿ ಕಾಲೇಜ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರತಿ ಶಾಲೆಯ ಒಂದು ವಿದ್ಯಾಥರ್ಿಯನ್ನು ಸನ್ಮಾನಿಸಲಿದ್ದು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬರ ಹೆಸರನ್ನು ದೃಢೀಕರಣದೊಂದಿಗೆ ತಾ.ಕಸಾಪ ಅಧ್ಯಕ್ಷರಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9980585894, 9480785031 ಈ ದೂರವಾಣಿಗೆ ಸಂಪಕರ್ಿಸಲು ಕೋರಿದೆ.

ಹಳೆಯೂರು ಆಂಜನೇಯಸ್ವಾಮಿಯವರ ರಥೋತ್ಸವಚಿಕ್ಕನಾಯಕನಹಳ್ಳಿ,ಜೂ.29 : ಹಳೆಯೂರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಜುಲೈ 11 ರಿಂದ 13ರವರೆಗೆ ಏರ್ಪಡಿಸಿದ್ದು, ವಿವಿಧ ಉತ್ಸವ, ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 11ರಂದು ಸೋಮವಾರ ಬೆಳ್ಳಿ ಪಲ್ಲಕ್ಕಿಉತ್ಸವ, 12ರ ಮಂಗಳವಾರದಂದು ಬ್ರಹ್ಮರಥೋತ್ಸವ ಮತ್ತು ದಿವ್ಯಜ್ಯೋತಿ ಕಲಾ ಸಂಘದವರಿಂದ ನವ ದಂಪತಿಗಳು ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ, ಹಾಗೂ 13 ರ ಬುಧವಾರದಂದು ರಥೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಸಲಾಗಿದೆ.13ರಂದು ಮಧ್ಯಾಹ್ನ 3 ಗಂಟೆಗೆ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ಸಭಾಂಗದಲ್ಲಿ ದಿವ್ಯ ಜ್ಯೋತಿ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವ ದಂಪತಿಗಳ ಸ್ಪಧರ್ೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಅಂದು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಏರ್ಪಡಿಸಲಾಗಿದೆ.
13ನೇ ವರ್ಷದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.29 : 13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಯನ್ನು ಜುಲೈ12ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಶ್ರೀ ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಸಿ.ಎನ್.ಬಸವಯ್ಯನವರ ಸವಿನೆನಪಿಗಾಗಿ ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಸಿಡ್ಲೇಹಳ್ಳಿ ಸಂಸ್ಥಾನದ ಕರಿಬಸವದೇಶೀಕೇಂದ್ರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಉಪ್ಪಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ವರ್, ಪೋದಾರ್ ಕಂಪನಿ ಶಂಕರ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್ ಉಪಸ್ಥಿತರಿರುವರು.ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆ ವಿವರ : ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯು ಸೀನಿಯರ್ ಗ್ರೂಪ್, ಜೂನಿಯರ್ ಗ್ರೂಪ್, ಸೀನಿಯರ್ ಸಿಂಗಲ್, ಜೂನಿಯರ್ ಸಿಂಗಲ್ ವಿಭಾಗವಿದ್ದು ಗ್ರೂಪ್ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಿದ್ದು, ಸೀನಿಯರ್ ಗ್ರೂಪ್ ಪ್ರವೇಶ ದರ 200, ಜೂನಿಯರ್ ಗ್ರೂಪ್ 100, ಸೀನಿಯರ್ ಸಿಂಗಲ್ 100, ಸೀನಿಯರ್ ಸಿಂಗಲ್ 100 ಪ್ರವೇಶ ದರಗಳಿದ್ದು ತೀಪರ್ುಗಾರರ ಮತ್ತು ವ್ಯವಸ್ಥಾಪಕರ ತೀಮರ್ಾನವೇ ಅಂತಿಮ ತೀಮರ್ಾನವಾಗಿದೆ, ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ-9980163152, 9742796001, ಸಂಪಕರ್ಿಸಬಹುದಾಗಿದೆ.

Sunday, June 26, 2011ಶಿಕ್ಷಣದ ಜೊತೆಗೆ ಕ್ರೀಡೆ ಕಡೆ ಮಕ್ಕಳು ಗಮನ ಹರಿಸಲಿಚಿಕ್ಕನಾಯಕನಹಳ್ಳಿ,ಜೂ.26 ; ಚಿಕ್ಕನಾಯಕನಹಳ್ಳಿ,ಜೂ.26 ; ವಿದ್ಯಾಥರ್ಿಗಳು ವಿದ್ಯಾಭ್ಯಾದ ಜೊತೆ ಕ್ರೀಡಾ ಚಟುವಟಿಕೆಗಳಿಗೂ ಹೆಚ್ಚು ಗಮನ ಹರಿಸುವಂತೆ ಶಿಕ್ಷಕ ಸದಾನಂದ ದೊಂಗ್ರೇ ಹೇಳಿದರು.ಪಟ್ಟಣದ ದೇಶೀಯ ವಿದ್ಯಾಪೀಠದ ಬಾಲಕಿಯರ ಪ್ರೌಡಶಾಲೆಯಲ್ಲಿ ನಡೆದ ಸೋದರಿ ಬಳಗ ಕ್ರೀಡಾ ಸಂಘ, ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳು ಶಿಕ್ಷಣ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ, ಮಾನಸಿಕವಾಗಿ ಸದೃಡವಾಗುವ ಜೊತೆಗೆ ಮನಸ್ಸು ಉಲ್ಲಾಸವಾಗುವುದು ಎಂದರು.ಕಾರ್ಯಕ್ರಮದಲ್ಲಿ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಶಿಸ್ತು ಸಮಿತಿ ಅಧ್ಯಕ್ಷ ಜಿ.ತಿಮ್ಮಯ್ಯ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿ.ಆರ್.ನಾಗಲಿಂಗಯ್ಯ, ದೈಹಿಕ ಶಿಕ್ಷಕ ನರಸಿಂಹಮೂತರ್ಿ, ರಾಮಸ್ವಾಮಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಈರಣ್ಣ ಸ್ವಾಗತಿಸಿ ನಿರೂಪಿಸಿದರು, ನಾಗೇಂದ್ರಪ್ಪ ವಂದಿಸಿದರು. ಶಿಕ್ಷಕ ಸದಾನಂದ ದೊಂಗ್ರೇ ಹೇಳಿದರು.ಪಟ್ಟಣದ ದೇಶೀಯ ವಿದ್ಯಾಪೀಠದ ಬಾಲಕಿಯರ ಪ್ರೌಡಶಾಲೆಯಲ್ಲಿ ನಡೆದ ಸೋದರಿ ಬಳಗ ಕ್ರೀಡಾ ಸಂಘ, ವಿಜ್ಞಾನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳು ಶಿಕ್ಷಣ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಖವಾಗಿ, ಮಾನಸಿಕವಾಗಿ ಸದೃಡವಾಗುವ ಜೊತೆಗೆ ಮನಸ್ಸು ಉಲ್ಲಾಸವಾಗುವುದು ಎಂದರು.ಕಾರ್ಯಕ್ರಮದಲ್ಲಿ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜ್ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಶಿಸ್ತು ಸಮಿತಿ ಅಧ್ಯಕ್ಷ ಜಿ.ತಿಮ್ಮಯ್ಯ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಿ.ಆರ್.ನಾಗಲಿಂಗಯ್ಯ, ದೈಹಿಕ ಶಿಕ್ಷಕ ನರಸಿಂಹಮೂತರ್ಿ, ರಾಮಸ್ವಾಮಿ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಈರಣ್ಣ ಸ್ವಾಗತಿಸಿ ನಿರೂಪಿಸಿದರು, ನಾಗೇಂದ್ರಪ್ಪ ವಂದಿಸಿದರು.

Saturday, June 25, 2011


ಹೋರಾಟಕ್ಕೆ ಸಂದ ಫಲ : ಜ.ಎಸ್.ಬಸವರಾಜು ಚಿಕ್ಕನಾಯಕನಹಳ್ಳಿ,1983ರಿಂದಲೂ ಕುಡಿಯುವ ನೀರಾವರಿಗಾಗಿ ಹೋರಾಟ ಮಾಡಿದ ಪರಿಣಾಮವಾಗಿ ಈಗ 102 ರೂ ಕೋಟಿಯನ್ನು ಸಕರ್ಾರ ಬಿಡುಗಡೆ ಮಾಡಿ ತಾಲ್ಲೂಕಿನ ಜನತೆಯ ನೀರಿನ ದಾಹ ನೀಗಿಸಿರುವುದು ಸಂತೋಷಕರ ವಿಷಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಬಿಜೆಪಿ ಕಾಯರ್ಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಹಿಂದಿನ ಸಕರ್ಾರವು ತಾಲ್ಲೂಕಿನ ಕುಡಿಯುವ ನೀರಿನ ಬವಣೆ ನೀಗಿಸುವ ಪ್ರಯತ್ನದಲ್ಲಿ ನಮ್ಮ ಸಕರ್ಾರ ಬರುವವರೆಗೂ ಸ್ಪಂದಿಸಿರಲಿಲ್ಲ ಈಗ ಜನರ ಸಮಸ್ಯೆಗೆ ಸ್ಪಂದಿಸಿರುವ ಮೂಲಕ ನಮ್ಮ ಪಕ್ಷ ಜನಪರ ಕಾಳಜಿ ಮೆರೆದಿದೆ ಎಂದರು. 102 ಕೋಟಿ ರೂಗಳ ಈ ಯೋಜನೆಯಲ್ಲಿ 3 ಕೆರೆಗಳಿಗೆ ಏತ ನೀರಾವರಿ ಮೂಲಕ ಹಾಗೂ 24 ಕೆರೆಗಳಿಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಯಲಿದೆ. ಈ ಸಾಲಿನ ಆಯವ್ಯಯದಲ್ಲಿ 35 ಕೋಟಿರೂ ತೆಗೆದಿರಿಸಲಾಗಿದೆ ಎಂದ ಅವರು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ರವರ ಬೆಂಬಲದಿಂದಲೂ, ಹಲವಾರು ಜನಪ್ರತಿನಿಧಿಗಳ ಹೋರಾಟದ ಫಲವಾಗಿ ತಾಲ್ಲೂಕಿನ ಬಹುತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾದಂತಾಗಿದೆ ಈ ಯೋಜನೆಯಲ್ಲಿ ಶೆಟ್ಟಿಕೆರೆ ಕೆರೆಗೆ 71 ಎಂ.ಸಿ.ಎಫ್.ಟಿ ಪೆಮ್ಮಲದೇವರಹಳ್ಳಿ ಕೆರೆ 28 ಎಂ.ಸಿ.ಎಫ್.ಟಿ, ದಾಸಿಹಳ್ಳಿ ಕೆರೆ 6.5, ಚುಂಗನಹಳ್ಳಿ 11.5, ಕೊಡಲಾಗರಕೆರೆ 5.5, ಮಾರಸಂದ್ರ 1.9, ನವಿಲೆಕೆರೆ 6.5, ಅಣೆಕಟ್ಟೆಕೆರೆ 30, ದಬ್ಬೆಘಟ್ಟಕೆರೆ 2.3, ಚಿಕ್ಕನಾಯಕಹಳ್ಳಿಕೆರೆ 45, ಕಂದಿಕೆರೆ 100, ಕುಪ್ಪೂರು 18.2, ತಮ್ಮಡಿಹಳ್ಳಿಕೆರೆ 1.2, ತಿಮ್ಲಾಪುರಕೆರೆ 105, ಹುಳಿಯಾರು 99.5, ನಡುವನಹಳ್ಳಿ 9.78, ಜೆ.ಸಿ.ಪುರ 18.2, ಕಿಬ್ಬನಹಳ್ಳಿ ಮತ್ತು ಬಿಳಿಗೆರೆಗೆ 52. ಪಟ್ಟದೇವರಕೆರೆ 20 ರಷ್ಟು ನೀರನ್ನು ಹಾಯಿಸಲಾಗುವುದು ಎಂದರು. ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ ಮಾತನಾಡಿ ಈ ಹಿಂದೆ ತಾಲ್ಲೂಕಿಗೆ ಭೇಟಿ ನೀಡಿ ಈ ಭಾಗದ ಜನರಿಗೆ ಮಾತು ಕೊಟ್ಟಂತೆ ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಜನರ ನಂಬಿಕೆಗೆ ಪಾತ್ರರಾಗಿದ್ದಾರೆ, ಇವರಿಗೆ ಸಹಕರಿಸಿದ ಸಚಿವರಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ತಾಲ್ಲೂಕಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸಿದರು. ಗೋಷ್ಠಿಯಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ತಾಲ್ಲೂಕು ಬಿಜೆಪಿ ಕಾರ್ಯದಶರ್ಿ ಸುರೇಶ್ಹಳೇಮನೆ, ಬಸವರಾಜು, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ ಮುಖಂಡರಾದ ಶ್ರೀನಿವಾಸಮೂತರ್ಿ, ಮೈಸೂರಪ್ಪ, ಗಂಗಾಧರಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
ಕೆರೆಗಳಿಗೆ ನೀರು ಹಾಯಿಸಲು ರೈತರ ಸಹಕಾರ ಮುಖ್ಯಚಿಕ್ಕನಾಯಕನಹಳ್ಳಿ,; ತಾಲ್ಲೂಕಿನ 27 ಕೆರೆಗಳ ನೀರು ತುಂಬಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಮಂಜೂರಾತಿ ನೀಡಿದ್ದು, ಈ ಯೋಜನೆಯ ಶೀಘ್ರ ಕಾರ್ಯಗತಕ್ಕೆ ರೈತರ ಸಹಕಾರ ಮುಖ್ಯ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಯೋಜನೆ ಅನುಷ್ಠಾನ ಹಂತದಲ್ಲಿ ಕೆರೆಗಳಿಗೆ ಹರಿಯುವ ನೀರು ಕೆಲವು ಜಮೀನುಗಳ ಮೂಲಕ ಹರಿಯಲಿದೆ. ಇದಕ್ಕಾಗಿ ತಕರಾರು ಮಾಡದೆ ರೈತರು ತಮ್ಮ ಜಮೀನುಗಳನ್ನು ಬಿಟ್ಟು ಕೊಟ್ಟರೆ ಜಮೀನಿಗೆ ಸಕರ್ಾರ ತಕ್ಕ ಬೆಲೆ ನೀಡಿ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಿ ನೀರನ್ನು ಹರಿಸಲಿದೆ. ಆಯಾ ಭಾಗದ ರೈತರು ನಾಗರೀಕ ಸಮಿತಿ ರಚಿಸಿಕೊಂಡು ಜಮೀನುಗಳನ್ನು ಬಿಟ್ಟುಕೊಡುವಲ್ಲಿ ಈ ಯೋಜನೆಗೆ ಸಹಕರಿಸಬೇಕೆಂದು ವಿನಂತಿಸಿಕೊಂಡರು.ನೇತ್ರಾವತಿಯ ನದಿ ತಿರುವ ಯೋಜನೆಗೆ ತಾಂತ್ರಿಕ ಅನುಮತಿ ದೊರಕಿದ್ದು, ಯೋಜನೆಯ ಅನುಮೋದನೆಗೆ ಸಂಸತ್ನಲ್ಲಿ ಅಂಗೀಕಾರಕ್ಕಾಗಿ ಕಳಿಸಲಾಗಿದ್ದು, ಸುಮಾರು 13500 ಕೆರೆಗಳ ನೀರನ್ನು ಹರಿಸಲಾಗುವುದು.ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ತಾಲ್ಲೂಕು ನೀರಾವರಿ ಹೋರಾಟ ಸಮಿತಿಯ 35ವರ್ಷ ಹೋರಾಟವು ಈಗ ಫಲಿಸಿದ್ದು ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಸಂಸದರಿಗೆ ಅಭಿನಂದಿಸುತ್ತೇವೆ ಎಂದರು.ಗೋಷ್ಠಿಯಲ್ಲಿ ಕುಂದರಹಳ್ಳಿ ರಮೇಶ್, ಬಿ.ಎನ್.ಶಿವಪ್ರಕಾಶ್, ನಾರಾಯಣಗೌಡ, ಮಿಲ್ಟ್ರಿ ಶಿವಣ್ಣ, ಮುಂತಾದವರು ಉಪಸ್ಥಿತರಿದ್ದರು.

Thursday, June 23, 2011


ತಾಲ್ಲೂಕಿಗೆ ಹೇಮಾವತಿ ನೀರು ಚಿಕ್ಕನಾಯಕನಹಳ್ಳಿ,ಜೂ.23 : ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ಕಳೆದ ನಾಲ್ಕು ವರ್ಷಗಳ ಸತತ ಹೋರಾಟದ ಫಲವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತಾಲ್ಲೂಕಿನ ಪೆಮ್ಮಲದೇವರ ಕೆರೆ, ಶೆಟ್ಟಿಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಕುಡಿಯುವ ಯೋಜನೆಗೆ ಸಕರ್ಾರ ಅನುಮೋದನೆ ನೀಡಿ 102 ಕೋಟಿರೂಗಳ ಬಿಡುಗಡೆ ಮಾಡಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಗುರುವಾರ ಹುಳಿಯಾರು ಮೂಲಕ ಶೆಟ್ಟಿಕೆರೆಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿ ಪಟ್ಟಣದ ನೆಹರು ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ಸಂಭ್ರಮ ವ್ಯಕ್ತಪಡಿಸಿದುರು.
ನಂತರ ಮಾತನಾಡಿ ಎರಡು ತಿಂಗಳಲ್ಲಿ ಟೆಂಡರ್ ಕರೆದು ನವರಂಬರ್ ಡಿಸಂಬರ್ನಲ್ಲಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಬಸವರಾಜು ಬೊಮ್ಮಾಯಿಯವರನ್ನು ಕೆರೆದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಮತ್ತು ಗೋಡೆಕೆರೆ ಹಾಗೂ ಜೆ.ಸಿ.ಪುರ ಭಾಗಕ್ಕೂ ಕುಡಿಯುವ ನೀರು ಹರಿಸಲು ಮಂಜೂರಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಹೆಚ್.ಬಿ.ಪಂಚಾಕ್ಷರಯ್ಯ, ತು.ಹಾ.ಒಕ್ಕೂಟದ ಅಧ್ಯಕ್ಷ ಹಳೇಮನೆ ಶಿವನಂಜಪ್ಪ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ, ರಮೇಶ್,ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಪಟ್ಟಣ ಆಶ್ರಯ ಸಮಿತಿ ಗಂಗಾಧರಯ್ಯ, ಪುರಸಭಾ ನಾಮಿನಿ ಸದಸ್ಯರಾದ ಈಶ್ವರಭಾಗವತ್, ಲಕ್ಷ್ಮಯ್ಯ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು


ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಸಲಕರಣೆಗಳನ್ನು ಸಂಘ ಸಂಸ್ಥೆಗಳು ನೀಡಲಿ ; ಕ್ಯಾಪ್ಟನ್ ಸೋಮಶೇಖರ್
ಚಿಕ್ಕನಾಯಕನಹಳ್ಳಿ,ಜೂ.23 : ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಸಲಕರಣೆಗಳನ್ನು ಸಂಘ ಸಂಸ್ಥೆಗಳು ಒದಗಿಸುವ ಮೂಲಕ ಮಕ್ಕಳಿಗೆ ಶಿಕ್ಷಣಾಸಕ್ತಿಯನ್ನು ಹೆಚ್ಚಿಸಿ ಅವರ ಮಂದಿನ ಭವಿಷ್ಯವನ್ನು ಬೆಳಗುವಂತಹ ದಾರಿಯಲ್ಲಿ ಕರೆದೊಯ್ಯಬೇಕು ಎಂದು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಲಕ್ಷ್ಮೀದೇವಾಲಯ ಆವಣರಣದಲ್ಲಿ ಕುರುಬರ ಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಶಾಲೆಯ ಬಡವಿದ್ಯಾಥರ್ಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು ಬಡತನ ರೇಖೆಯಲ್ಲಿರುವ ಮಕ್ಕಳೇ ಹೆಚ್ಚಾಗಿ ಸಕರ್ಾರಿ ಶಾಲೆಗೆ ಸೇರುವವರಿದ್ದು , ಅದರಲ್ಲೂ ಪುಸ್ತಕ ಲೇಖನ ಸಾಮಗ್ರಿ ಕೊಳ್ಳಲು ಆಗದಂತಹ ಕುಟುಂಬಗಳಿಗೆ ನಮ್ಮ ಸಂಘ ನೆರವಾಗಲಿದೆ ಅಂತಹ ವಿದ್ಯಾಥರ್ಿಗಳ ಬಗ್ಗೆ ಆ ಶಾಲೆಯ ಶಿಕ್ಷಕರು ಹೆಸರುಗಳನ್ನು ಸೂಚಿಸಿದರೆ ಬಡ ವಿದ್ಯಾಥರ್ಿಗಳಿಗೆೆ ಸಂಘದ ವತಿಯಿಂದ ಸೌಲಭ್ಯ ನೀಡುವ ಆಶಯ ವ್ಯಕ್ತಪಡಿಸಿ, ದೇಶ ಕಾಯುವಂತಹ ಸೇನೆಯಲ್ಲಿ ವಿದ್ಯಾಥರ್ಿಗಳು ಹೆಚ್ಚು ಆಸಕ್ತಿ ತೋರಿಸಬೇಕು ಎಂದ ಅವರು ನಾವು ಓದಿದ ಶಾಲೆಯಲ್ಲಿನ ವಿದ್ಯಾಥರ್ಿಗಳು ಮುಂದೆ ಉನ್ನತ ಹುದ್ದೆಗಳನ್ನು ಹೊಂದುವಂತಹ ಮಕ್ಕಳು ತಯಾರು ಆಗಲಿ ಎಂಬ ಉದ್ದೇಶದಿಂದ ಹಿರಿಯ ವಿದ್ಯಾಥರ್ಿಗಳ ಸಂಘ ಉದಯವಾಗಿರುವುದು, ಈ ಮೂಲಕ ಉತ್ತಮ ಸಮಾಜ ನಿಮರ್ಾಣಸಾದ್ಯ ಎಂಬ ಉದ್ದೆಶವನ್ನು ಸಂಘ ಹೊಂದಿದೆ ಎಂದರು.
ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಜಿ.ರಂಗಯ್ಯ ಮಾತನಾಡಿ ಶಿಕ್ಷಣ ಕಲಿಕೆಯಿಂದ ಮೇಲೆ ಬಂದ ವಿದ್ಯಾಥರ್ಿಗಳು ಉನ್ನತ ಸ್ಥಾನವನ್ನೇರಿದರೂ, ತಾವು ಓದಿದ ಶಾಲೆಯ ಮಕ್ಕಳಿಗೆ ಸೇವೆ ಮಾಡುವುದರ ಮೂಲಕ ಶಿಕ್ಷಣ ಕಲಿಯುವ ಮಕ್ಕಳಿಗೆ ಮಾದರಿಯಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸುಧಾಕರ್ ಮಾತನಾಡಿ ಶಾಲಾ ಆವರಣ ಸ್ವಚ್ಛತೆಯಿಂದ ಕೂಡಿದ್ದು ಶಾಲಾ ಸಿಬ್ಬಂದಿಗಳಲ್ಲಿ ಹೊಂದಾಣಿಕೆಯಿದ್ದರೆ ಮಾತ್ರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದರು.
ಇ.ಸಿ.ಓ. ಅಧಿಕಾರಿ ಮರುಳಾನಾಯ್ಕ ಮಾತನಾಡಿ ಮಕ್ಕಳಿಗೆ ನಿರಂತರ ಬರವಣಿಗೆಯ ಅಭ್ಯಾಸವು ರೂಢಿಯಾದರೆ ಶಿಕ್ಷಣ ನಿರಗ್ರ್ರಳವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾಥರ್ಿಗಳ ಸಂಘದ ಕಾರ್ಯದಶರ್ಿ ಕೆ.ಜಿ.ರಾಜೀವಲೋಚನ, ಶಂಕರಪ್ಪ, ಮಿಲ್ಟ್ರಿ ಶಿವಣ್ಣ, ದುರ್ಗಯ್ಯ, ಮುಖ್ಯ ಶಿಕ್ಷಕಿ ಶಾಂತಮ್ಮ ಉಪಸ್ಥಿತರಿದ್ದರು.
ಲಾವಣ್ಯ ಸಂಗಡಿಗರು ಪ್ರಾಥರ್ಿಸಿದರು. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರೆ ಶಾಂತದುರ್ಗಯ್ಯ ವಂದಿಸಿದರು.

ಕನ್ನಡ ಕಾರ್ಯಗಾರ ಮುಂದೂಡಿಕೆ
ಚಿಕ್ಕನಾಯಕನಹಳ್ಳಿ,ಜೂ.23 ; ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಏರ್ಪಡಿಸಿದ್ದ ಕನ್ನಡ ಕಾರ್ಯಗಾರವನ್ನು ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯವಿರುವುದರಿಂದ ಕಾರ್ಯಗಾರವನ್ನು ಮುಂದೂಡಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯರ್ಾಲಯ ಹಾಗೂ ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಜೂನ್ 27ರ ಸೋಮವಾರ ಹುಳಿಯಾರಿನ ಟಿ.ಎಸ್.ಆರ್.ಎಸ್ ಪ್ರೌಡಶಾಲೆಯಲ್ಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು, ಆದರೆ ಜೂನ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ಜೂನ್ 27ರಿಂದ ಆರಂಭಗೊಳ್ಳುವುದರ ಹಿನ್ನೆಲೆಯಲ್ಲಿ ಕಾರ್ಯಗಾರವನ್ನು ಮುಂದೂಡಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

Wednesday, June 22, 2011ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಒತ್ತಾಯ:ಚಿಕ್ಕನಾಯಕನಹಳ್ಳಿ,ಜೂ.22 : ಪ್ರಾಮಾಣಿಕವಾಗಿ ಸಮಾಜದ ಸೇವೆಯನ್ನು ನೆರವೇರಿಸುತ್ತಿದ್ದ ಪತ್ರಕರ್ತ ಜ್ಯೋತಿರ್ಮಯಿ ಡೇ ಯವರ ಹತ್ಯೆಯು ಹೇಯ ಕೃತ್ಯವಾಗಿದ್ದು, ಡೇಯವರ ಹತ್ಯೆಯ ಹಿಂದಿರುವ ಪಾತಕಿಗಳ ತನಿಖೆಯು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲದಿರುವುದರಿಂದ ತನಿಖೆಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ತಾಲ್ಲೂಕು ಪತ್ರಕರ್ತರ ಸಂಘ ಒತ್ತಾಯಿಸಿತು.ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಪತ್ರಕರ್ತರ ಘಟಕದ ವತಿಯಿಂದ ಮುಂಬೈನ ಮಿಡ್ ಡೇ ಪತ್ರಿಕೆಯ ತನಿಖಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಖ್ಯಾತ ಹಿರಿಯ ಪತ್ರಕರ್ತರಾದ ಜ್ಯೋತಿರ್ಮಯಿ ಡೇ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಮಾಜದಲ್ಲಿನ ನ್ಯೂನ್ಯತೆ, ಅನ್ಯಾಯ ಅಕ್ರಮ ಹಾಗೂ ಭ್ರಷ್ಠತೆಗಳ ಬಗ್ಗೆ ನಿರ್ಭಯವಾಗಿ ವರದಿ ಮಾಡುವಂತ ಪ್ರಾಮಾಣಿಕ ಪತ್ರಕರ್ತರಿಗೆ ಈ ದೇಶದಲ್ಲಿ ರಕ್ಷಣೆ ಇಲ್ಲದೇ ಹೋಗಿರುವುದು ಪ್ರಜಾತಂತ್ರದ ಅಣಕವಾಗಿದೆ, ಮುಂಬೈನ ಪಾತಕ ಜಗತ್ತಿನ ಕರಾಳತೆಯನ್ನು ಎರಡು ದಶಕಗಳಿಂದಲೂ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಡೇ ರವರ ಜೀವಕ್ಕೆ ಅಪಾಯದ ಮುನ್ಸೂಚನೆ ಇದ್ದರೂ ಅಲ್ಲಿನ ಸಕರ್ಾರ ರಕ್ಷಣೆ ನೀಡುವಲ್ಲಿ ವಿಪಲವಾಗಿದೆ. ಜನಪ್ರತಿನಿಧಿ ಸಕರ್ಾರಗಳು ಇಂದು ಕೆಲವೊಂದು ಮಾಫಿಯಗಳ ಕಪಿಮುಷ್ಠಿಯ ನಿಯಂತ್ರದಲ್ಲಿರುವದರಿಂದ ಡೇ ಹತ್ಯೆ ತನಿಖೆ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ನಡೆದಿಲ್ಲ, ಭವಿಷ್ಯದಲ್ಲಿ ಪ್ರಾಮಾಣಿಕ ಪತ್ರಕರ್ತರು ಈ ದೇಶದಲ್ಲಿ ನಿಭರ್ೀತಿಯಿಂದ ಕಾರ್ಯ ನಿರ್ವಹಿಸಲು ಇಂತಹ ಘಟನೆಗಳು ದೃತಿಗೆಡೆಸಲಿವೆ, ಡೇ ಹತ್ಯೆ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸುವ ಮೂಲಕ ಈ ಕೃತ್ಯದಲ್ಲಿ ಭಾಗಿಯಾಗಿರುವ ರಾಷ್ಟ್ರೀಯ, ಅಂತರರಾಷ್ಟ್ರೀಯ ಪಾತಕಿಗಳನ್ನು ಮತ್ತು ಇವರೊಂದಿಗೆ ಶಾಮೀಲಾಗಿರುವ ಈ ದೇಶದ ದುಷ್ಠ ಶಕ್ತಿಗಳನ್ನು ಬಂಧಿಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಸಕರ್ಾರಕ್ಕೆ ಈ ಮನವಿ ಮೂಲಕ ಒತ್ತಾಯಿಸುತ್ತೇವೆ ಎಂದ ಅವರು ಪ್ರಾಣಾಪಯವಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ, ಒದಗಿಸಬೇಕು ಎಂದರು.ಜನಪರ ವೇದಿಕೆ ಸಂಘಟನೆಯ ಸಂಚಾಲಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಅಂಗವಾಗಿರುವುದು ಪತ್ರಿಕಾ ರಂಗ, ಆ ಪತ್ರಿಕಾರಂಗದ ಮೂಲಕ ಸಮಾಜದ ಸೇವೆ ಸಲ್ಲಿಸುತ್ತಿದ್ದ ಡೇಯವರನ್ನು ಹಾಡುಹಗಲೇ ಬರ್ಬರ ಹತ್ಯೆ ಮಾಡಿರುವುದು ಸಂವಿಧಾನಕ್ಕೆ ತಂದಿರುವ ಕಪ್ಪುಚುಕ್ಕೆಯಾಗಿದ್ದು ಡೇಯವರ ಹತ್ಯೆಯು ಸಿ.ಬಿ.ಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು ಜನಪರ ವೇದಿಕೆ ಜನಪರ ಸಂಘಟನೆಗಳಿಗೆ ಒತ್ತು ನೀಡುತ್ತದೆ ಎಂದರು.ತಾ.ಪತ್ರಕರ್ತ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ, ಪತ್ರಕರ್ತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕಾಗಿರುವುದು ಸಕರ್ಾರಗಳ ಜವಬ್ದಾರಿ ಎಂದರು. ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ ಪತ್ರಿಕಾರಂಗದವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೇಖನ ಪ್ರಕಟಿಸಿದಾಗ ಅವರ ಪ್ರಾಣ ತೆಗೆಯುತ್ತಾರೆ ಎಂದ ಅವರು ಡೇಯವರ ಹತ್ಯೆ ಮಾಡಿರುವವರನ್ನು ಶೀಘ್ರ ಬಂಧಿಸಬೇಕು ಇಲ್ಲವಾದರೆ ಈ ಪ್ರತಿಭಟನೆಯು ಮುಂದೆ ಬೇರೆ ಹಾದಿ ತುಳಿಯುತ್ತದೆ ಎಂದರು.ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪ್ರಸ್ತುತ ಮನವಿಯನ್ನು ಜಿಲ್ಲಾಧಿಕಾರಿಗರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದಶರ್ಿ ಚಿದಾನಂದ್, ಸಹ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಸಂಘದ ಜಿಲ್ಲಾ ಸದಸ್ಯರಾದ ರಂಗೇನಹಳ್ಳಿ ಮಹೇಶ್, ಸಿದ್ದರಾಮಣ್ಣ ಅಣೆಕಟ್ಟೆ, ಗೋವಿಂದರಾಜು, ಶಿವಣ್ಣ, ಕೋದಂಡರಾಮಯ್ಯ, ಕಿರಣ್ಕುಮಾರ್, ರವಿಕುಮಾರ್, ರಮೇಶ್, ಚೇತನ್ಪ್ರಸಾದ್ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮುಂತಾದವರು ಉಪಸ್ಥಿತರಿದ್ದರು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿ ನಿಲಯದ ಪ್ರವೇಶಕ್ಕೆ ಅಜರ್ಿ ಆಹ್ವಾನಚಿಕ್ಕನಾಯಕನಹಳ್ಳಿ,ಜೂ.22 : 2011-12ನೇ ಸಾಲಿಗೆ ತಾಲ್ಲೂಕಿನ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯಕ್ಕೆ ಪ್ರವೇಶಕ್ಕಾಗಿ ಅಜರ್ಿಯನ್ನು ಆಹ್ವಾನಿಸಲಾಗಿದೆ. ವಿದ್ಯಾಥರ್ಿ ನಿಲಯಕ್ಕೆ ಪ್ರವೇಶ ಪಡೆಯ ಬಯಸುವ ವಿದ್ಯಾಥರ್ಿಗಳು ಸಕರ್ಾರಿ ಅಂಗೀಕೃತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋಸರ್ುಗಳಾದ ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಎಂಬಿಬಿಎಸ್, ಡಿಪ್ಲಮೋ, ವೃತ್ತಿಶಿಕ್ಷಣ ಕೋರ್ಸಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಪ್ರವೇಶ ನೀಡಲಾಗುವುದು, ವಿದ್ಯಾಥರ್ಿನಿಲಯಗಳು ಇರುವ ಸ್ಥಳಗಳ ಕಾಲೇಜುಗಳಿಂದ 5ಕಿ.ಮೀ.ಗಿಂತ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಸ್ಥಳೀಯ ವಿದ್ಯಾಥರ್ಿಗಳು ಪ್ರವೇಶಕ್ಕೆ ಅನರ್ಹರಾಗಿದ್ದು ವಸತಿ ನಿಲಯಕ್ಕೆ ಪ್ರವೇಶ ಪಡೆಯಲು ವರ್ಗ 2ಎ. 2ಬಿ.3ಎ. ಮತ್ತು 3ಬಿ. ವರ್ಗಗಳ ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳ ಕುಟುಂಬದ ವಾಷರ್ಿಕ ವರಮಾನ ಮಿತಿ ರೂ 15.000/- ಹಾಗೂ ಪ್ರವರ್ಗ1, ಎಸ್ಸಿ, ಮತ್ತು ಎಸ್,ಟಿ, ವಿದ್ಯಾಥರ್ಿಗಳಿಗೆ ರೂ.50,920/-ಗಳನ್ನು ನಿಗಧಿಪಡಿಸಲಾಗಿದೆ. ವಿದ್ಯಾಥರ್ಿಯು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದ್ದು ವಿದ್ಯಾಥರ್ಿನಿಲಯಕ್ಕೆ ಪ್ರವೇಶ ಬಯಸುವ ನವೀಕರಣ ಹಾಗೂ ಹೊಸವಿದ್ಯಾಥರ್ಿಗಳು ಅಜರ್ಿಯನ್ನು ಈ ಕಾಯರ್ಾಲಯದಿಂದ ಅಥವಾ ಸಂಬಂಧಿಸಿದ ವಿದ್ಯಾಥರ್ಿನಿಲಯದ ನಿಲಯಪಾಲಕರಿಂದ ಪಡೆದು ಜುಲೈ 19ರ ಸಂಜೆ 5.00 ಗಂಟೆಯೊಳಗಾಗಿ ಈ ಕಾಯರ್ಾಲಕ್ಕೆ ಅಥವಾ ಸಂಬಂಧಿಸಿದ ನಿಲಯ ಪಾಲಕರಿಗೆ ಸಲ್ಲಿಸತಕ್ಕದ್ದು.

Tuesday, June 21, 2011


ತಾಲ್ಲೂಕಿನ ಅಭಿವೃದ್ದಿಗಾಗಿ ವಿದೇಶಿ ಪ್ರವಾಸ : ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಜೂ.21: ದೇಶ ಸುತ್ತು ಇಲ್ಲ ಕೋಶ ಓದು ಎಂಬ ಗಾದೆಯಂತೆ ದೇಶಗಳ ಪ್ರವಾಸ ಮಾಡಿ ಅಲ್ಲಿನ ಜನತೆಯ ಶಿಕ್ಷಣ, ಆಥರ್ಿಕತೆಯಂತೆ ರಾಜ್ಯದ ಜನತೆಗೂ ತಿಳಿಸಲು ವಿದೇಶಿ ಪ್ರವಾಸ ಕೈಗೊಂಡು ಉತ್ತಮ ತರಬೇತಿ ಪಡೆದು ತಾಲ್ಲೂಕಿನ ಅಭಿವೃದ್ದಿಯತ್ತ ಮುನ್ನುಗ್ಗುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಶಾಸಕರ ವಿದೇಶಿ ಪ್ರವಾಸ ಸುಗಮವಾಗಿ ಹಿಂತಿರುಗಲಿ ಎಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ರಾಜ್ಯದ ಅಭಿವೃದ್ದಿಯ ಹಿತದೃಷ್ಠಿಯಿಂದ ವಿದೇಶ ಪ್ರವಾಸ ಕೈಗೊಂಡಿದ್ದೇವೆ, ರಾಜ್ಯದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ 20 ಜನರ ಸಮಿತಿ ಸದಸ್ಯರು ಈ ಪ್ರವಾಸ ಕೈಗೊಂಡಿದ್ದು, ಹಿಂದುಳಿದ ಜನರ ಅಭಿವೃದ್ದಿಗಾಗಿ ಪ್ರವಾಸದಲ್ಲಿ ಹಲವು ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲಿದ್ದು ಹಣಕಾಸು ಯೋಜನೆಯಂತಹ ಉತ್ತಮ ಯೋಜನೆಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಲು, ಮತ್ತು ರಾಜ್ಯದಲ್ಲಿರುವ ಹಲವಾರು ಯೋಜನೆಗಳು ವಿಫಲವಾಗುತ್ತಿರುವುದರಿಂದ ಅಲ್ಲಿನ, ತರಬೇತಿ ಪಡೆದು ಮಾಪರ್ಾಡು ಮಾಡುವಂತಹ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಈಗಿನ ವಿದ್ಯಾಥರ್ಿಗಳು ಇದರ ಬಗ್ಗೆ ಚಚರ್ಿಸಲಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಶಾಸಕರ ಪ್ರವಾಸ 13ದಿನಗಳ ಪ್ರವಾಸವಾಗಿದ್ದು 5 ದಿನ ದೇಶದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಪಂಜಾಬ್, ದೆಹಲಿ, ರಾಜಸ್ಥಾನ ಉಳಿದ 7 ದಿವಸ ದಕ್ಷಿಣಾ ಆಪ್ರಿಕ ದೇಶದ ಪ್ರವಾಸವಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಜಿ.ತಿಮ್ಮಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಶುಭಾಷಯ ಕೋರಿದರು.
ಸಮಾರಂಭದಲ್ಲಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ದೊರೆಮುದ್ದಯ್ಯ, ತಾ.ಪಂ.ಸದಸ್ಯೆ ಚೇತನಗಂಗಾಧರ್, ರವಿ, ಕೃಷ್ಣೆಗೌಡ ಉಪಸ್ಥಿತರಿದ್ದರು.

ವಿದ್ಯಾಥರ್ಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜೂ.21: 2011-12ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಸಕರ್ಾರಿ ಕಾಲೇಜು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಬಾಲಕರ ವಿದ್ಯಾಥರ್ಿ ನಿಲಯದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಅರ್ಹ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ವಿದ್ಯಾಥರ್ಿಗಳು ತಹಶೀಲ್ದಾರ್ರವರಿಂದ ಪಡೆದ ಪ್ರಸಕ್ತ ಸಾಲಿನ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮತ್ತು ಹಿಂದಿನ ತರಗತಿಯಲ್ಲಿ ಉತ್ತೀರ್ಣವಾದ ಅಂಕಪಟ್ಟಿ ಹಾಗೂ ಇತ್ತೀಚಿನ ಪಾಸ್ ಪೋಟರ್್ ಸೈಜ್ 3ಭಾವಚಿತ್ರಗಳನ್ನು ಲಗತ್ತಿಸಿ ಸಲ್ಲಿಸುವುದು, ವಾಷರ್ಿಕ ಆದಾಯ ಮಿತಿ 1ಲಕ್ಷ ರೂ ಮೀರಿರುವರು ಹಾಗೂ ವಿದ್ಯಾಭ್ಯಾಸ ಕುಂಠಿತವಾಗಿರುವವರು ಅರ್ಹರಿರುವುದಿಲ್ಲ ಎಂದು ತಿಳಿಸಿರುವ ಅವರು ಭಾರತ ಸಕರ್ಾರದ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವ ಪ.ಜಾತಿ ಮತ್ತು ಪ.ವರ್ಗದವರು ಮಾತ್ರ ಅಜರ್ಿ ಸಲ್ಲಿಸಬೇಕು, ಪ್ರವೇಶ ಪಡೆದ ವಿದ್ಯಾಥರ್ಿಗಳಿಗೆ ಊಟ, ತಿಂಡಿ, ವ್ಯವಸ್ಥೆಯನ್ನು ವಿದ್ಯಾಥರ್ಿ ನಿಲಯಕ್ಕೆ ದಾಖಲಾದ ವಿದ್ಯಾಥರ್ಿಗಳಿಗೆ ಮಂಜೂರು ಮಾಡಲಾದ ವಿದ್ಯಾಥರ್ಿ ವೇತನ ಮತ್ತು ಹೆಚ್ಚುವರಿ ಊಟ ಮತ್ತು ವಸತಿ ವೆಚ್ಚದಲ್ಲಿ ಭರಿಸಲಾಗುವುದು, ವಿದ್ಯಾಥರ್ಿ ನಿಲಯಕ್ಕೆ ಆಯ್ಕೆಯಾದ ವಿದ್ಯಾಥರ್ಿಗಳಿಗೆ ನಿಲಯದ ನಿಬಂಧನೆಗಳಿಗೆ ಒಳಪಡುವುದಾಗಿ ಮುಚ್ಚಳಿಕೆ ಪತ್ರವನ್ನು ದಾಖಲಾತಿ ಸಮಯದಲ್ಲಿ ನೀಡುವುದು, ಆಯ್ಕೆಯಾದ ವಿದ್ಯಾಥರ್ಿಗಳು ರೂ.100/-ಗಳ ಎಚ್ಚರಿಕೆ ಹಣ ಪಾವತಿಸಬೇಕು, ವ್ಯಾಸಾಂಗ ಮುಗಿದ ನಂತರ ಸದರಿ ಹಣವನ್ನು ವಾಪಸ್ ಮಾಡಲಾಗುವುದಿಲ್ಲ.
ನಿಗದಿತ ಅಜರ್ಿ ನಮೂನೆಗಳನ್ನು ಸಂಬಂಧಿಸಿದ ವಿದ್ಯಾಥರ್ಿನಿಲಯದಲ್ಲಿ ಅಥವಾ ಚಿ.ನಾ.ಹಳ್ಳಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳ ಕಛೇರಿರವರಿಂದ ಉಚಿತವಾಗಿ ಪಡೆದು ಜೂನ್ 30ರೊಳಗೆ ಸಲ್ಲಿಸುವುದು, ತಡವಾಗಿ ಬಂದ ಅಥವಾ ಅಪೂರ್ಣವಾದ ಅಜರ್ಿಗಳನ್ನು ಪರಿಗಣಿಸಲಾಗುವುದಿಲ್ಲ, ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿಗಳ ಕಛೇರಿಯನ್ನು ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದ್ದಾರೆ.


Monday, June 20, 2011ಪುರಾತನ ದೇವಾಲಯಗಳ ಜೀಣರ್ೋದ್ದಾರಕ್ಕೆ, ಜಮೀನು ರಕ್ಷಣೆಗೆ ಕರವೇ ಒತ್ತಾಯಚಿಕ್ಕನಾಯಕಹಳ್ಳಿ,ಜೂ.20: ತಾಲ್ಲೂಕು ವ್ಯಾಪ್ತಿಯಲ್ಲಿರುವ ಮುಜುರಾಯಿ ಇಲಾಖೆಗೆ ಒಳಪಡುವ ಎಲ್ಲಾ ಪುರಾತನ ದೇವಾಲಯಗಳ ದುರಸ್ತಿಕಾರ್ಯ ಮಾಡಿಸುವುದು ಹಾಗೂ ದೇವಾಲಯಕ್ಕೆ ಸಂಬಂಧಿಸಿದಂತೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರವುಗೊಳಿಸಬೇಕೆಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಮನವಿ ಅಪರ್ಿಸಿದರು.ದೇವಾಲಯಕ್ಕೆ ಸಂಬಂಧಿಸಿದ ಜಮೀನು ಅಕ್ರಮವಾಗಿದ್ದರೆ ಸವರ್ೆ ಮಾಡಿಸಿ ದೇವಾಲಯದ ಮುಂದೆ ಜಮೀನಿನ ವಿವರದ ಫಲಕವನ್ನು ಹಾಕಿ ಮುಂದಾಗುವ ಅಕ್ರಮವನ್ನು ತಡೆಯಬೇಕೆಂದು ಹಾಗೂ ದೇವಾಲಯಗಳ ಜೀಣರ್ೋದ್ದಾರ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.

ಚಿತ್ರಕಲಾಸ್ಪಧರ್ೆಯಲ್ಲಿನವಿಜೇತರುಚಿಕ್ಕನಾಯಕನಹಳ್ಳಿ,

ಜೂ.20: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ 1ರಿಂದ 10ನೇ ತರಗತಿ ವರೆಗಿನ ಶಾಲೆಯ ವಿದ್ಯಾಥರ್ಿಗಳಿಗೆ ನಡೆದಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ 160ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.ಸ್ಪೂತರ್ಿ ಸಾಂಸ್ಕೃತಿಕ ಸಂಘ, ವಾಸವಿ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪಧರ್ೆಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ, ರೋಟರಿ ಶಾಲೆಯ ನೀತು ಚೌದರಿ, ದಿವ್ಯಪ್ರಭ ಶಾಲೆಯ ಎಂ.ಪ್ರಕೃತಿ, ರೋಟರಿ ಶಾಲೆಯ ಇಫರ್ಾನ್, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದಿವ್ಯಪ್ರಭ ಶಾಲೆಯ ಚಿ.ನಾ.ತಶ್ವೀನ್ ಸಿಂಹಾ, ರೋಟರಿ ಶಾಲೆಯ ಸಿ.ಎಸ್.ಭಾರತಿ, ಸಿ.ಲಾವಣ್ಯ, ಪ್ರೌಡಶಾಲಾ ವಿಭಾಗದಲ್ಲಿ ಬಳ್ಳೆಕಟ್ಟೆ ವಿದ್ಯಾವಾರಿದಿ ಶಾಲೆಯ ಪ್ರಜ್ವಲ್ ಪಿ.ಶೆಟ್ಟಿ, ರೋಟರಿ ಶಾಲೆಯ ವಿನಯ್ಕುಮಾರ್, ಎಸ್.ದೀಪಕ್ ಸ್ಪಧರ್ೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.

Saturday, June 18, 2011ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ಶಾಲೆಗೆ: ಪೋಷಕರಿಲ್ಲಿ ಮನವಿ.
ಚಿಕ್ಕನಾಯಕನಹಳ್ಳಿ,ಜೂ.18: ಕನಿಷ್ಠ 3 ತಿಂಗಳಿಗೊಮ್ಮೆ ಪೋಷಕರ ಸಭೆ ಕರೆದು ಪ್ರತಿ ಮಕ್ಕಳ ಪ್ರಗತಿ ಹಾಗೂ ಶಾಲಾ ಕಾಮಗಾರಿಗಳ ಬಗ್ಗೆ ಪರಿಶೀಲಿಸುವುದು ಪ್ರತಿ ಪೋಷಕರ ಕರ್ತವ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಬಿ.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ದೇಶೀಯಾ ವಿದ್ಯಾಪೀಠ ಬಾಲಕರ ಪ್ರೌಡಶಾಲಾ ಆವರಣದಲ್ಲಿ ನಡೆದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಶಾಲೆಯ ಎಲ್ಲ ರೀತಿಯ ಭೌತಿಕ ಅವಶ್ಯಕತೆಗಳನ್ನು ಪೂರೈಸಿ ಊರಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಯಾವ ಮಗುವೂ ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು ಎಂದರಲ್ಲದೆ ಶಾಲೆಯ ಮುಖ್ಯ ಶಿಕ್ಷಕರ ರಜೆ ಮಂಜೂರು ಮಾಡುವುದು ಎಸ್.ಡಿ.ಎಂ.ಸಿ ಅಧ್ಯಕ್ಷರುಗಳ ಜವಬ್ದಾರಿಯಾಗಿದೆ ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಶಿಕ್ಷಕರ ಜೊತೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಸಹಕಾರದಿಂದ ಕಾರ್ಯನಿರ್ವಹಿಸಿದರೆ ಶಾಲೆಯು ಶೈಕ್ಷಣಿಕವಾಗಿ ಅಭಿವೃದ್ದಿಯಾಗುತ್ತದೆ ಎಂದರು.
ಸಮನ್ವಯಾಧಿಕಾರಿ ಜಗದೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಹೆಣ್ಣು ಮಕ್ಕಳಿಗೆ ಎಸ್ಕಾಟರ್್ ಸೇವೆಯನ್ನು ನೀಡುವುದು, ನಲಿ-ಕಲಿ ಎಂಬ ಕಲಿಕಾ ವಿಧಾನವನ್ನು ಶಿಕ್ಷಕರ ಜೊತೆಗೂಡಿ ಯಶಸ್ವಿಗೊಳಿಸುವುದು, ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ, ಮಕ್ಕಳಿಗೆ ಅಗಗತ್ಯವಿರುವ ಪರಿಕರಗಳು ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಶಾಲೆಯ ಎಲ್ಲಾ ದಾಖಲೆಗಳ ಮೇಲ್ವಿಚಾರಣೆ ಹಾಗೂ ಪರಿಶೀಲನೆ ಮಾಡುವುದು, ಶಾಲೆಯಲ್ಲಿ ದೊರೆಯುವ ಎಲ್ಲಾ ಪ್ರೋತ್ಸಾಹದಾಯಕ ವಿತರಣೆಗಳನ್ನು ಖಚಿತಪಡಿಸಿಕೊಂಡು ಅದರ ಮೇಲ್ವಿಚಾರಣೆ ಮಾಡುವುದು ಎಸ್.ಡಿ.ಎಂ.ಸಿ.ಯ ಜವಬ್ದಾರಿಯಾಗಿರುತ್ತದೆ ಎಂದ ಅವರು, ಶಾಲೆಗೆ ಅವಶ್ಯವೆನಿಸುವ ಚರಸ್ವತ್ತುಗಳನ್ನು ಖರೀದಿ ಮಾಡುವುದು, ಅವರು ಶಾಲೆಯ ಅಭಿವೃದ್ದಿಗಾಗಿ ನಿಧಿಗಳನ್ನು ಪಡೆಯಲು ಮನವಿಗಳನ್ನು ನೀಡುವುದು ಅಲ್ಲದೆ, ನಗದು ರೂಪದಲ್ಲಿ ಯಾವುದೇ ದೇಣಿಗೆಗಳು ಚರ ಅಥವಾ ಸ್ಥಿರ ರೂಪದಲ್ಲಿ ಸ್ವೀಕರಿಸಿ ಅದನ್ನು ಶಾಲೆಯ ಅಭಿವೃದ್ದಿಗಾಗಿ ಶ್ರಮಿಸುವುದು, ವಿದ್ಯಾಥರ್ಿ, ಶಿಕ್ಷಕರು, ಪೋಷಕರು ಹಾಗೂ ಇತರೇ ಶಾಲಾ ಸಿಬ್ಬಂದಿಗಳ ಕುಂದುಕೊರತೆ ಹಾಗೂ ದೂರುಗಳನ್ನು ಬಗೆಹರಿಸುವಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಮುಂದಾಗಬೇಕು ಎಂದರು.
ಡಿ.ವಿ.ಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಕಾರ್ಯ ನಿರ್ವಹಿಸುವಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಶಾಲಾ ಅಭಿವೃದ್ದಿ ಕಡೆ ಗಮನ ಹರಿಸಬೇಕು ಎಂದ ಅವರು, ಪಟ್ಟಣದ ರೇವಣಮಠ ಶಾಲೆಯ ನೂತನ ಕಟ್ಟಡಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮುಂಜಾನೆ 6ಕ್ಕೆ ನೀರನ್ನು ಹಾಯಿಸುತ್ತಿರುತ್ತಾರೆ, ಅಧ್ಯಕ್ಷರ ಕರ್ತವ್ಯ ನಿರ್ವಹಣೆಯಲ್ಲಿ ಅವರು ಮಾದರಿಯಾಗಿದ್ದಾರೆ ಎಂದರಲ್ಲದೆ, ಶಾಲಾ ಕಾರ್ಯಕ್ಕೆ ಅಧ್ಯಕ್ಷರು ಮತ್ತು ಸದಸ್ಯರುಗಳು ಮುಂದಾಗಬೇಕು ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಶಿಕ್ಷಕರ ಕರ್ತವ್ಯದ ಬಗ್ಗೆ ಪರಿಶೀಲಿಸಬೇಕು ಶಿಕ್ಷಕರಿಗೆ ಶಾಲಾ ಕೆಲಸಗಳ ಬಗ್ಗೆ ತರಬೇತಿ ನೀಡಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಮುಖ್ಯ ಪಾತ್ರ ವಹಿಸಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಾಬಾಯಿ, ತಾ.ಪಂ. ಉಪಾಧ್ಯಕ್ಷೆ ಬೀಬೀಪಾತೀಮ, ಸದಸ್ಯರಾದ ಲತಾ, ಚೇತನಗಂಗಾಧರ್, ಶಾಲಾ ಮುಖ್ಯೋಪಾಧ್ಯಾಯ ಎಂ.ಎಲ್.ಮಲ್ಲಿಕಾಜರ್ುನಯ್ಯ, ನಿವೃತ್ತ ಶಿಕ್ಷಕ ಜಿ.ತಿಮ್ಮಯ್ಯ ಉಪಸ್ಥಿತರಿದ್ದರು.

Friday, June 17, 2011

ಸಮಸ್ಯೆಗಳ ಸರಮಾಲೆ ಹೊತ್ತುವುದನ್ನು ಬಿಟ್ಟು ಪಕ್ಷದ ಒಗ್ಗಟ್ಟಿಗೆ ಮುಂದಾಗಿರಿ : ಕೆ.ಎಸ್.ಕಿರಣ್ಕುಮಾರ್ ಚಿಕ್ಕನಾಯಕನಹಳ್ಳಿ,ಜೂ.17: ಪಕ್ಷದ ಸಂಘಟನೆಯಲ್ಲಿರುವ ಸಮಸ್ಯೆಗಳನ್ನು ದೊಡ್ಡದಾಗಿ ಮಾಡದೆ, ಸಂಘಟಿತರು ಒಗ್ಗಟ್ಟಾಗಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಗೊಂಡ ತಾಲ್ಲೂಕು ಬಿ.ಜೆ.ಪಿ ಕಾಯರ್ಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘಟನೆಯ ಮೇಲ್ವಿಚಾರಣೆ ವಹಿಸಿಕೊಂಡ ಸಂಘಟಿತರು ಪಕ್ಷದ ಬೆಳವಣಿಗೆಗೆ ಮುಂದಾಗಬೇಕೇ ಹೊರತು ಸಮಸ್ಯೆಗಳ ಸರಮಾಲೆಯನ್ನು ಹೊತ್ತಿಕೊಳ್ಳಬಾರದು ಎಂದ ಅವರು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನು ಶಾಶ್ವತವಾಗಿ ಪರಿಹರಿಸುತ್ತೇನೆ, ಶೆಟ್ಟಿಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ನೀರು ಹರಿಸಲು ಶೀಘ್ರವಾಗಿ ಶಂಕುಸ್ಥಾಪನೆ ನೆರವೇರುತ್ತದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಕಾರ್ಯದಶರ್ಿ ಶಂಕರಪ್ಪ ಮಾತನಾಡಿ ಪಕ್ಷದ ಅಧ್ಯಕ್ಷರು, ಕಾರ್ಯದಶರ್ಿ, ಪ್ರಧಾನ ಕಾರ್ಯದಶರ್ಿ ಇನ್ನಿತರ ಪಕ್ಷದ ಹುದ್ದೆಗಳನ್ನು ವಹಿಸಿಕೊಂಡಿರುವ ಹಲವರು ಪಕ್ಷದ ಏಳಿಗೆಗೆ ಶ್ರಮಿಸಬೇಕೆ ಹೊರತು ಇನ್ನಿತರ ಕಾರ್ಯಗಳಿಗಲ್ಲ ಪಕ್ಷದ ಬಗ್ಗೆ ಬೇಜಾವಬ್ದರಿತನ ತೋರಿ ಸಂಘಟನೆಯಿಂದ ದೂರ ಉಳಿದರೆ ಅಂತಹವರನ್ನು ಪಕ್ಷದ ಹುದ್ದೆಯಿಂದ ಕೈ ಬಿಡಲಾಗುತ್ತದೆ ಎಂದು ತಿಳಿಸಿದ ಅವರು ನಾಮ ನಿದರ್ೇಶಿತ ಸದಸ್ಯರುಗಳು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು ಎಂದರು. ಜಿಲ್ಲ ಪಂಚಾಯತ್ ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ ಸಕರ್ಾರದಿಂದ ಬಿಡುಗಡೆಯಾಗಿರುವ ಯೋಜನೆಗಳು ಜನರಿಗೆ ತಿಳಿದಿಲ್ಲ, ಜನತೆಗೆ ಅನುಕೂಲವಾಗಲು ಈ ಕಾಯರ್ಾಲವನ್ನು ಬಿ.ಹೆಚ್.ರಸ್ತೆಯಲ್ಲಿ ಮಾಡಲಾಗಿದೆ ಎಂದರು. ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ) ಮಾತನಾಡಿ ಪಕ್ಷ ಸಂಘಟನೆಗೆ ಅಧ್ಯಕ್ಷರ ಜೊತೆ ಸಂಘಟನೆಯ ಎಲ್ಲಾ ಪಧಾಧಿಕಾರಿಗಳು ಸಹಾಯ ಮಾಡಬೇಕು ಆಗ ಮಾತ್ರ ಸಂಘಟನೆಗೆ ಬಲಬರುವುದು, ಹಲವರು ಹೇಳುವ ಊಹಾಪೋಹಗಳ ಮಾತುಗಳನ್ನು ಬಿಟ್ಟು, ಎಲ್ಲಾ ಮತಧರ್ಮದವರು ಒಗ್ಗಟ್ಟಾಗಿ ಸಹಕರಿಸಬೇಕು ಎಂದರು. ಕವಿತಾ ಕಿರಣ್ಕುಮಾರ್ ಮಾತನಾಡಿ ಸಂಘಟನೆ ಹಿಂದುಳಿದಿದ್ದು ಪ್ರತಿ ಹೋಬಳಿ, ಪಂಚಾಯಿತಿಗಳನ್ನು ಪಕ್ಷದ ಕಾಯರ್ಾಲಯವನ್ನು ತೆರೆದು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಸದಸ್ಯರಾದ ಬಸವರಾಜು, ಜಗದೀಶ್, ನವೀನ್, ಮಾಜಿ ಜಿ.ಪಂ.ಸದಸ್ಯ ಬೊಮ್ಮಣ್ಣ ಉಪಸ್ಥಿತರಿದ್ದರು.

Thursday, June 16, 2011ಪ್ಲಾಸ್ಟಿಕ್ ವಸ್ತುಗಳ ಬಳಕೆ, ಪರಿಸರ ನಾಶದ ಮೊಳಕೆ : ಟಿ.ಸಿ.ಕಾಂತಾರಾಜು
ಚಿಕ್ಕನಾಯಕನಹಳ್ಳಿ,ಜೂ.16: ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಸೂಚಿಸಿದೆ, ಆದರೂ ಮದುವೆ ಇನ್ನಿತರ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಸ್ವಚ್ಚತೆಯು ಮಲಿನಕಾರಿಯಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಸಭಾಂಗಣದಲ್ಲಿ ತಾಲ್ಲೂಕು ಪುರಸಭೆ, ಅರಣ್ಯ ಇಲಾಖೆ, ಸೃಜನಾ ಸಂಘ, ತಾಲ್ಲೂಕು ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ-2011 ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಸರದ ಬಗ್ಗೆ ಮಕ್ಕಳು ಹೆಚ್ಚು ಆಸಕ್ತಿಯಿಂದ ಮುನ್ನುಗ್ಗಿದರೆ ಅವರ ತಂದೆ-ತಾಯಿಗಳಿಗೆ ಪರಿಸರ ರಕ್ಷಿಸುವ ಕಾರ್ಯಕ್ಕೆ ಮಕ್ಕಳೇ ಶಿಕ್ಷಕರಾಗುತ್ತಾರೆ, ಪರಿಸರದ ಸ್ವಚ್ಚತಾಂದೋಲನಕ್ಕೆ ಮಕ್ಕಳ ಜೊತೆ ಪೋಷಕರು ಭಾಗವಹಿಸಿ ಪರಿಸರವನ್ನು ಉಳಿಸಿ ದೇಶವನ್ನು ರಕ್ಷಿಸಬೇಕು ಎಂದ ಅವರು ಸಾರ್ವಜನಿಕರು ಘನತ್ಯಾಜ್ಯ ವಸ್ತುಗಳನ್ನು ಒಂದು ಕಡೆ ಜಾಗವನ್ನು ಗುರುತಿಸಿ ಕಸದ ವಿಲೇವಾರಿಯನ್ನು ಒಟ್ಟುಗೂಡಿಸಿ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಬೇಕೆಂದು ಕರೆ ನೀಡಿದ ಅವರು ತಮ್ಮ ತಮ್ಮ ಮನೆಯಂಗಳದಲ್ಲಿ ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆಗೆ ತಾವೂ ತೊಡಗಬೇಕೆಂದು ಸೂಚಿಸಿದರು.
ಜಿಲ್ಲಾ ಪರಿಸರ ಅಭಿವೃದ್ದಿ ಅಧಿಕಾರಿ ಮಧುಸೂಧನ್ ಸಾರ್ವಜನಿಕರ ಸಹಕಾರವಿದ್ದರೆ ಮಾತ್ರ ಪಟ್ಟಣ ಪರಿಸರವನ್ನು ಸ್ವಚ್ಚವಾಗಿಡಲು ಸಾಧ್ಯ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣ ಮಾತನಾಡಿ ಜನತೆಯ ರಕ್ಷಣೆಗಾಗಿ ಇರುವ ಪ್ರಕೃತಿಯ ಸಂಪಪತ್ತನ್ನು ಮಿತವಾಗಿ ಬಳಸಿಕೊಳ್ಳಬೇಕು, ನಮ್ಮಲ್ಲಿರುವ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಶಾಲೆಯ ವಿದ್ಯಾಥರ್ಿಗಳಿಂದ ಪರಿಸರ ಜಾಗೃತಿಯ ಫಲಕದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ(ಮೈನ್ಸ್), ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರಾಜಣ್ಣ, ವರದರಾಜು, ಕೃಷ್ಣಮೂತರ್ಿ, ಕವಿತಾಚನ್ನಬಸವಯ್ಯ, ರೇಣುಕ ಗುರುಮೂತರ್ಿ, ರುಕ್ಮಿಣಮ್ಮ, ಶಿವಣ್ಣ(ಮಿಲ್ಟ್ರಿ), ರವಿಕುಮಾರ್, ಸೃಜನ ಸಂಘಟನೆಯ ಜಯಮ್ಮ, ಇಂದಿರಮ್ಮ, ಅರಣ್ಯಾಧಿಕಾರಿ ನಂಜುಂಡಪ್ಪ ಮುಂತಾದವರು ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಒಂದು ದಿನದ ಸಂವಾದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.16: ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ಇದೇ 18ರ ಶನಿವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ದೇಶೀಯ ವಿದ್ಯಾಪೀಠ ಬಾಲಕರ ಶಾಲಾ ಆವರಣದಲ್ಲಿ ಸರ್ವ ಶಿಕ್ಷಣದ ಅಭಿಯಾನದ ವತಿಯಿಂದ ಮಾಧ್ಯಮ ಮತ್ತು ದಾಖಲೀಕರಣದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.

Tuesday, June 14, 2011ಪುರಸಭೆಯ ನಿರ್ಲಕ್ಷದಿಂದ ಕೆಸರು ಗದ್ದೆಯಾದ ಬಸ್ ನಿಲ್ದಾಣಚಿಕ್ಕನಾಯಕನಹಳ್ಳಿ,ಜು.14: ಪಟ್ಟಣದ ಪುರಸಭಾ ಬಸ್ ನಿಲ್ದಾಣ, ಮಳೆ ಬಂದರೆ ಪೈರು ನಾಟಿ ಮಾಡಬಹುದಾದಷ್ಟು ಹದಗೊಂಡಿರುತ್ತದೆ ಇದರಿಂದ ಸಾರ್ವಜನಕರಿಗೆ ನಾವು ನಿಂತಿರುವುದು ಬಸ್ ನಿಲ್ದಾಣದಲ್ಲೋ, ಗದ್ದೆಯ ಬದಿಯಲ್ಲೊ ಎಂಬಷ್ಟು ಗೊಂದಲ ಉಂಟಾಗುತ್ತಿದೆ ಇಲ್ಲಿಯ ಪರಿಸ್ಥಿತಿ. ಈ ನಿಲ್ದಾಣ ಡಾಂಬರೀಕರಣಗೊಂಡು ಎರಡು-ಮೂರು ಮಳೆಗಾಲವನ್ನೂ ಕಂಡಿಲ್ಲ, ಅಷ್ಟರಲ್ಲಾಗಲೇ ಗುಂಡಿ ಗೊಟರು ಬಿದ್ದು ನಿಲ್ದಾಣ ಗಬ್ಬೆದ್ದು ಹೋಗಿದೆ. ಪುರಸಭೆಯವರು ಈ ಬಸ್ ನಿಲ್ದಾಣದ ನಿರ್ವಹಣೆಗೆ ಖಾಸಗಿ ಬಸ್ಗಳ ಮಾಲೀಕರಿಂದ ಬಸ್ ಒಂದಕ್ಕೆ ದಿನಕ್ಕೆ ಹತ್ತುರೂ ನಂತೆ ಕರ ವಸೂಲಿ ಮಾಡುತ್ತಿದ್ದಾರೆ. ಆದರೆ ಇದರ ನಿರ್ವಹಣೆಯನ್ನು ಮಾತ್ರ ಕಡೆಗಣಿಸಿರುವ ಪುರಸಭೆಯವರು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಪ್ರಯಾಣಿಕರು ಶುಭ ಸಮಾರಂಭವೂ ಸೇರಿದಂತೆ ತಮ್ಮ ಹಲವು ಕಾರ್ಯಗಳಿಗಾಗಿ ಜನ ಶುಭ್ರಬಟ್ಟೆ ತೊಟ್ಟು ಸಂಸಾರದೊಂದಿಗೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಲು ಸಿದ್ದಗೊಂಡ ಸಂದರ್ಭದಲ್ಲಿ ಬಸ್ ಒಂದು ಪಕ್ಕದಲ್ಲಿ ಹಾದು ಹೋದರೆ, ಗುಂಡಿಗೊಟರುಗಳಲ್ಲಿದ್ದ ಮಳೆ ನೀರು ಬಸ್ ಚಲಿಸುವ ರಭಸಕ್ಕೆ ಬಟ್ಟೆ ಮೇಲೆ ಸಿಡಿದು ಅಸಹ್ಯ ಮೂಡಿಸುವ ಜೊತೆಗೆ ಜನರ ನಂಬಿಕೆಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ. ಪ್ರಯಾಣದ ನಂಬಿಕೆಗಳಿಗೆ ಬೆಲೆ ಕೊಡುವ ಜನರು, ತಮ್ಮ ಬಟ್ಟೆ ಕೊಳಕ್ಕಾಗಿದ್ದಕ್ಕೆ ಬೇಸರದಿಂದ ತಮ್ಮ ಕೆಲಸ ಆಗುವುದಿಲ್ಲವೆಂದು ಮನೆಗೆ ವಾಪಸ್ ಆದ ಅದೆಷ್ಟೋ ಉದಾಹರಣೆಗಳಿವೆ. ಮಳೆ ಬಂದು ಎರಡು ಮೂರು ದಿನಗಳು ಕಳೆದರೂ ಈ ಕಿರುಕುಳ ಜನರಿಗೆ ತಪ್ಪುವುದಿಲ್ಲ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ರಸ್ತೆಯೂ ಇದಕ್ಕಿಂತ ಹೊರತಾಗಿಲ್ಲ. ಇತ್ತೀಚೆಗಷ್ಟೇ ಬಸ್ ನಿಲ್ದಾಣದಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ಬಲವಂತವಾಗಿ ತೆರವುಗೊಳಿಸಿ, ಅವರಿಗೆ ಯಾವುದೇ ಪರಿಹಾರ ಮಾರ್ಗವನ್ನು ತೋರಿಸದ ಪರಿಣಾಮ, ಹೂ ಹಣ್ಣು ಸೇರಿದಂತೆ ವಿವಿಧ ಸಣ್ಣ ಪುಟ್ಟ ಅಂಗಡಿಯವರು ಬಸ್ ಸ್ಟಾಂಡ್ನಲ್ಲಿರುವ ಪ್ರಯಾಣಿಕರು ಕೂರುವ ಸ್ಥಳಗಳಲ್ಲಿ ಅಂಗಡಿ ಇಟ್ಟು ಕೊಂಡು ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಇಲ್ಲಿ ಶೌಚಾಲಯದ ಕಾಮಗಾರಿಯೂ ನಡೆಯುತ್ತಿರುವುದರಿಂದ ಇಟ್ಟಿಗೆ, ಮರಳು ಮತ್ತಿತರ ವಸ್ತುಗಳನ್ನು ಹಾಕಿಕೊಂಡಿದ್ದು ಬಸ್ ನಿಲ್ದಾಣವನ್ನು ಮತ್ತಷ್ಟು ಕಿರಿದಾಗಿಸಿದೆ, ಈ ಕಾಮಗಾರಿಯನ್ನೂ ಶೀಘ್ರ ಮುಗಿಸಬೇಕಿದೆ. ಬಸ್ ನಿಲ್ದಾಣದ ಒಂದು ಬದಿ ಸೀಮೆಂಟ್ ರಸ್ತೆ ಮಾಡಲು 20 ಲಕ್ಷರೂ ವೆಚ್ಚದಲ್ಲಿ ನಿಮರ್ಿಸಲು ಟೆಂಡರ್ ಕರೆದು ಒಂದು ವರ್ಷವಾದರೂ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ಥಾಪವಾಗಿ, ಚಚರ್ೆಗಳು ನಡೆದರು ಕಾಮಗಾರಿ ಆರಂಭಗೊಳ್ಳದಿರುವುದು ಇಲ್ಲಿನ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

Saturday, June 11, 2011

ಉಚಿತ ಸಾಮೂಹಿಕ ವಿವಾಹಚಿಕ್ಕನಾಯಕನಹಳ್ಳಿ,

ಜೂ.11: ಶ್ರೀ ದುಗರ್ಾ ಗ್ರಾಮೀಣ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯ ಉದ್ಘಾಟನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಇದೇ 26ರ ಭಾನುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕಿನ ನರುವಗಲ್ ಮಜುರೆ, ಹುಲಿಕಲ್ ಬೆಟ್ಟದ ಶ್ರೀ ದುಗರ್ಾಂಬದೇವಿ ಪುಣ್ಯ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು ಚಿತ್ರದುರ್ಗ ಬೋವಿಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ, ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ರಮಾಮಣಿ,ಎಸ್.ಜಯಪ್ರಕಾಶ್, ಟ್ಯಾಕ್ಸ್ ಪ್ರೊ.ವ್ಯವಸ್ಥಾಪಕ ನಿದರ್ೇಶಕ ರಾಜೇಶ್ಶೆಟ್ಟಿ, ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಚಿಕ್ಕಣ್ಣಸ್ವಾಮಿಕ್ಷೇತ್ರದ ಪ್ರಧಾನ ಅರ್ಚಕ ಪಾಪಣ್ಣ ವಿವಾಹ ಕಾರ್ಯಕ್ರಮದ ನಿರೂಪಣೆ ನೆರವೇರಿಸಲಿದ್ದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಹಿ.ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಹೃದ್ರೋಗ ತಜ್ಞ ಡಾ.ಪರಮೇಶ್ವರಪ್ಪ, ನ್ಯಾಯಾವಾದಿ ಚಂದ್ರಪ್ಪ, ಹಿರಿಯ ಉಪನ್ಯಾಸಕ ಬಿ.ಬಿ.ಬಸವರಾಜು, ಜ.ಸಿ.ಟ್ರಸ್ಟ್ ಕಾರ್ಯಧ್ಯಕ್ಷ ರವಿ.ಹೆಚ್.ಮಾಕಳಿ, ರಾ.ಬೋವಿ ಮಹಾಸಭಾ ಅಧ್ಯಕ್ಷ ಮುನಿರಾಜ್, ಉಪಾಧ್ಯಕ್ಷ ಟಿ.ಹೆಚ್.ಚಂದ್ರು, ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಉಪಸ್ಥಿತರಿರುವರು.
ಅಂತರ ಹೈಸ್ಕೂಲ್ ಮತ್ತು ಪಿ.ಯು.ವಿದ್ಯಾಥರ್ಿಗಳಿಗೆ ಚಚರ್ಾಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.07: ಶ್ರೀ ಪರಶು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಅಂತರ ಹೈಸ್ಕೂಲ್, ಅಂತರ ಪಿ.ಯು.ಕಾಲೇಜು ವಿದ್ಯಾಥರ್ಿಗಳಿಗೆ ಚಚರ್ಾ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು ಪರಶು ಪ್ರತಿಷ್ಠಾನದ ಟ್ರಸ್ಟ್ ಪ್ರಧಾನ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.9ನೇ ತರಗತಿ ವಿದ್ಯಾಥರ್ಿಗಳಿಗೆ ಜುಲೈ 3ರಂದು ಬೆಳಗ್ಗೆ 10.30ಕ್ಕೆ ದೂರದರ್ಶನ ವೀಕ್ಷಣೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಮಾರಕವೇ ? ನಮ್ಮ ದೇಶ ಪ್ರಗತಿ ಪಥದಲ್ಲಿದೆಯೇ? ಮಿಲಿಟರಿಗೆ ಸೇರಲು ನಮ್ಮ ಯುವಕರು ಹಿಂಜರಿಯುತ್ತಾರೆಯೇ ? ವಿಷಯಗಳ ಬಗ್ಗೆ 10ನೇ ತರಗತಿಯ ವಿದ್ಯಾಥರ್ಿಗಳಿಗೆ ಜುಲೈ 9ರ ಮಧ್ಯಾಹ್ನ 2.30ಕೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೋಷಕರೇ ಕಾರಣ, ರಾಮಾಯಣ, ಮಹಾಭಾರತದ ಆದರ್ಶ ಪುರುಷರ ಅನುಕರಣೆ ಮಾರಕವೇ ಪೂರಕವೇ, ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಬೇಕೆ ವಿಷಯಗಳ ಬಗ್ಗೆ , ಪ್ರಥಮ ಪಿಯುಸಿ ವಿದ್ಯಾಥರ್ಿಗಳಿಗೆ ಜುಲೈ 10ರ ಬೆಳಗ್ಗೆ 10ಕ್ಕೆ ಸಕರ್ಾರಿ ನೌಕರಿಯ ಕ್ಷೀಷೆ-ಆರೋಗ್ಯಕರ ಸಮಾಜಕ್ಕೆ ಹಾನಿಕಾರಕ ಪರಿಣಾಮ ಬೀರುವುದೆ ?, ಕಂಪ್ಯೂಟರ್ ಶಿಕ್ಷಣ ಪ್ರಗತಿಗೆ ಅತ್ಯವಶ್ಯಕ, ಮಿಲಿಟರಿ ಸೇವೆಗೆ ಸೇರದಿರುವ ಬಗ್ಗೆ ಇಂದಿನ ಯುವಜನತೆಗೆ ಜ್ಞಾನದ ಕೊರತೆಯೇ ಕಾರಣ ? ವಿಷಯಗಳ ಬಗ್ಗೆ, ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗೆ ಜುಲೈ 10ರ ಮಧ್ಯಾಹ್ನ 2.30ಕ್ಕೆ ಗ್ರಾಮೀಣ ಜನತೆಯ ನಗರ ವಲಸೆ, ಸಮಾಜ ಮತ್ತು ದೇಶದ ಪ್ರಗತಿಗೆ ಪೂರಕವೇ ಮಾರಕವೇ, ಇಂಗ್ಲೀಷ್ ಭಾಷೆಯ ವ್ಯಾಮೋಹ ನಮ್ಮ ಸಂಸ್ಕೃತಿಯ ವಿನಾಶಕ್ಕೆ ಹಾದಿಯೇ, ಭಾರತ ದೇಶ ಸಮಸ್ಯೆಗಳ ಸುಳಿಯಲ್ಲಿದೆಯೇ ? ವಿಷಯಗಳ ಬಗ್ಗೆ ಚಚರ್ೆ ನಡೆಯಲಿದೆ ವಿದ್ಯಾಥರ್ಿಗಳು ಜೂನ್ 25ರೊಳಗಾಗಿ ಪರಶು ಪ್ರತಿಷ್ಠಾನದ ಪ್ರಧಾನ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ರವರಲ್ಲಿ ಸಂಪಕರ್ಿಸುವಂತೆ ಕೋರಿದ್ದಾರೆ.ಸೂಚನೆ : ಒಂದು ಶಾಲೆಯಿಂದ 9ನೇ ತರಗತಿಯ ಇಬ್ಬರು ವಿದ್ಯಾಥಿಗಳು ವಿಷಯದ ಪರವಾಗಿ ಒಬ್ಬರು ಮತ್ತು ವಿಷಯದ ವಿರೋಧವಾಗಿ ಇನ್ನೊಬ್ಬರು ಭಾಗವಹಿಸಬೇಕು. ಅದೇ ರೀತಿ 10ನೇ ತರಗತಿ, ಪ್ರಥಮ ಪಿಯುಸಿ ಮತ್ತು ದ್ವಿತಿಯ ಪಿಯುಸಿ ವಿದ್ಯಾಥರ್ಿಗಳಿಗೆ ಅನ್ವಯಿಸುತ್ತದೆ. ವಿಷಯದ ಪರವಾಗಿ ಮತ್ತು ವಿರೋಧವಾಗಿ ಪ್ರತಿಯೊಬ್ಬ ಸ್ಪಧರ್ಿಗೆ ತಲಾ ಮೂರು ನಿಮಿಷಗಳ ಕಾಲಾವಕಾಶವಿರುತ್ತದೆ, ಸ್ಪಧರ್ೆ ಪ್ರಾರಂಭವಾಗುವ ಒಂದು ಗಂಟೆ ಮೊದಲು ಶಾಲೆಯ/ಕಾಲೇಜಿನ ತಂಡಕ್ಕೆ ಮೂರು ವಿಷಯಗಳ ಪೈಕಿ ಒಂದು ವಿಷಯವನ್ನು ನೀಡಲಾಗುವುದು, ಅದೇ ವಿಷಯದ ಪರ ಮತ್ತು ವಿರೋಧವಾಗಿ ಸ್ಪಧರ್ಾಳುಗಳ ವಿಷಯ ಮಂಡನೆ ಮಾಡಬೇಕಿರುತ್ತದೆ. ತೀಪರ್ುಗಾರರ ತೀಮರ್ಾನವನ್ನು ಸ್ಪಧರ್ೆ ಮುಗಿದ ಅರ್ಧ ಗಂಟೆಯಲ್ಲಿ ಪ್ರಕಟಿಸಲಾಗುವುದು.

Thursday, June 9, 2011

ಪಂಚಭೂತಗಳಲ್ಲಿ ಲೀನವಾದ ಪ್ರೊ..ಲಿಂಗದೇವರು ಹಳೆಮನೆಚಿಕ್ಕನಾಯಕನಹಳ್ಳಿ,ಜೂ.9: ಸಾಹಿತ್ಯ ಮತ್ತು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠ ಸಾಧನೆಮಾಡಿದ್ದ ರಂಗಾಯಣದ ನಿದರ್ೇಶಕ ಪ್ರೊ.ಲಿಂಗದೇವರು ಹಳೆಮನೆಯವರು ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನ ಹೊಂದಿದ್ದು, ಅವರ ಹುಟ್ಟೂರಾದ ಹಾಲುಗೊಣದಲ್ಲಿ ಅವರ ಅಂತ್ಯಸಂಸ್ಕಾರವನ್ನು ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆಸಲಾಯಿತು. ಮೈಸೂರಿನಿಂದ ಹಾಲುಗೊಣಕ್ಕೆ ಗುರುವಾರ ರಾತ್ರಿ ಕರೆತರಲಾಯಿತು, ಗ್ರಾಮದ ಅಂಗನವಾಡಿ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬೆಳಗ್ಗೆ 7ಕ್ಕೆ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಜೊತೆಯಲ್ಲಿ ಚಿ.ನಾ.ಹಳ್ಳಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ಅಂತಿಮ ದರ್ಶನ ಪಡೆದರು. ಮೈಸೂರಿನ ರಂಗಾಯಣದ ವಿದ್ಯಾಥರ್ಿಗಳ ಭಜನೆಯ ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಮೃತ ದೇಹವನ್ನು ಶವಸಂಸ್ಕಾರದ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಲಿಂಗದೇವರು ಅವರ ಮನೆಯ ಹಿಂಭಾಗದಲ್ಲಿ ನಡೆದ ಹೊಲದಲ್ಲಿ ನಡೆದ ಅಂತ್ಯ ಸಂಸ್ಕಾರದಲ್ಲಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೆಮನೆ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಂಪಾದಕ ಎಸ್.ನಾಗಣ್ಣ, ಸಿ.ಎಚ್.ಮರಿದೇವರು, ಎಂ.ಬಸವಯ್ಯ, ಹಂಪಿ ವಿ.ವಿ.ಯ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್, ಚಲನಚಿತ್ರ ನಿದರ್ೇಶಕ ಬ್ಯಾಲಕೆರೆ ಲಿಂಗದೇವರು, ಗಾಯಕ ಜನ್ನಿ, ತಾ.ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಆರ್.ಬಸವರಾಜು, ಬಿಳಗೆರೆ ಕೃಷ್ಣಮೂತರ್ಿ,ಎನ್.ಇಂದಿರಮ್ಮ, ರಾಮಕೃಷ್ಣಪ್ಪ ತಹಶೀಲ್ದಾರ್ ಟಿ.ಸಿ.ಕಾಂತರಾಜ್, ಸಿ.ಪಿ.ಐ.ರವಿ ಪ್ರಸಾದ್, ಪತ್ರಕರ್ತ ಉಜಜ್ಜಿ ರಾಜಣ್ಣ, ಮಲ್ಲಿಕಾರ್ಜನ ಮೇಟಿ, ಪ್ರೊ.ರಮೇಶ್, ಪ್ರೊ.ಎಚ್.ಎಂ.ಉಮೇಶ್, ಶೋಕ ಸಾಗರದಲ್ಲಿ ಅಭಿಮಾನಿಗಳು: ಮೈಸೂರಿನ ರಂಗಾಯಣದ ಕಲಾವಿದರು, ಸಾಹಿತ್ಯಾಸಕ್ತರು, ರಂಗಶಿಕ್ಷಣಕ್ಕೆಂದು ತರಬೇತಿಗೆ ಬಂದಿದ್ದ ಯುವಕರು, ಲಿಂಗದೇವರು ಅವರ ತಾಯಿ ಬೋರಮ್ಮ, ಪತ್ನಿ ಡಿ.ನಂದಾ, ಮಕ್ಕಳಾದ ಭೂಮಿಕಾ, ನಿಹಾರಿಕ, ತಮ್ಮಂದಿರಾದ ಚಿದಾನಂದ ಮೂತರ್ಿ, ನಟರಾಜ್, ಕುಟುಂಬದವರಾದ ಸುರೇಶ್ ಹಳೆಮನೆ, ನವೀನ ಹಳೆಮನೆ ಸೇರಿದಂತೆ ಹಲವರು ಶೋಕ ಸಾಗರದಲ್ಲಿ ಮುಳುಗಿದ್ದರು. ಸಕರ್ಾರಿ ಪ್ರೌಡಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ70ಸಾವಿರ :ಮೋಹನ್ಕುಮಾರ್ಚಿಕ್ಕನಾಯಕನಹಳ್ಳಿ,ಜೂ.09: ಸಕರ್ಾರಿ ಪ್ರೌಢಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಈ ವರ್ಷ ಪ್ರತಿ ಶಾಲೆಗೆ 70ಸಾವಿರವನ್ನು ಶೀಘ್ರವೇ ನೀಡಲಾಗುವುದು ಎಂದು ಡಿ.ಡಿ.ಪಿ.ಐ ಮೋಹನ್ಕುಮಾರ್ ತಿಳಿಸಿದರು. ಪಟ್ಟಣದ ಬಿ.ಆರ್.ಸಿ. ಕಛೇರಿ ಸಭಾಂಗಣದಲ್ಲಿ ನಡೆದ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಕೊಠಡಿ, ಶೌಚಾಲಯ ಇನ್ನಿತರ ಸೌಕರ್ಯಗಳ ಕೊರತೆಯನ್ನು ಹಂತ-ಹಂತವಾಗಿ ನಿವಾರಿಸುವಲ್ಲಿ ಪ್ರಯತ್ನಿಸುತ್ತೇವೆ. ಶಾಲೆಗಳಿಗೆ ಮಕ್ಕಳ ಜ್ಞಾನವೃದ್ದಿಗಾಗಿ ಗ್ರಂಥಾಲಯಕ್ಕಾಗಿ ಕಳೆದ ವರ್ಷ 10ಸಾವಿರ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲು ಶಿಕ್ಷಕರು ಗ್ರಾಮಗಳಲ್ಲಿ ಪೋಷಕರ ಸಭೆ ಕರೆದು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬೇಕು, ಪ್ರತಿ 3ಕಿ.ಮೀಗೆ ಪ್ರೌಢಶಾಲೆ, 1ಕಿ.ಮೀಗೆ ಪ್ರಾಥಮಿಕ ಶಾಲೆಗಳಿದ್ದು , ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜ ಬೆಳವಣಿಗೆ ಕಾಣುವುದು ಶಿಕ್ಷಕರ ಗಮನಾರ್ಹವಾದ ಕಾರ್ಯವೃತ್ತಿಯಿಂದ, ಸಮಾಜ ತಿದ್ದುವುದು ಹೊಣೆಗಾರಿಕೆ ಶಿಕ್ಷಕರದ್ದು, ಶಿಕ್ಷಕರು ಪ್ರತಿ ಹಂತದಲ್ಲೂ ಪ್ರಾಮಾಣಿಕವಾಗಿ ಶ್ರಮಿಸಿ ಗಾಂಧೀಜಿ ಕಂಡಂತಹ ಕನಸು ಈಡೇರಿಸುವಂತೆ ಪ್ರಯತ್ನಿಸಬೇಕು, ಗ್ರಾಮಗಳ ಮಾಪರ್ಾಡಿನಲ್ಲಿ ಶಿಕ್ಷಕರ ಮಹತ್ವ ಹೆಚ್ಚಾಗಿದೆ ಎಂದ ಅವರು, ಕಡಿಮೆ ಅಂಕ ಪಡೆದ ಶಾಲೆಗಳು ಪ್ರಾರಂಭದಿಂದಲೇ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಸಕ್ತಿ ನೀಡಿ ಮಕ್ಕಳಲ್ಲಿ ಕೊನೆಗಳಿಗೆಯಲ್ಲಿ ಒತ್ತಡ ಹೇರುವುದನ್ನು ತಪ್ಪಿಸಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಈ ತಾಲ್ಲೂಕಿನಲ್ಲಿ 48 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ ರೂಪಗೊಂಡಿದ್ದು, ಇನ್ನೂ 50 ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆಯನ್ನು ಶೀಘ್ರವಾಗಿ ನಿಮರ್ಿಸಲಾಗುವುದೆಂದರು. ತಾ.ಪಂ.ಉಪಾಧ್ಯಕ್ಷೆ ಬಿಬಿ ಫಾತೀಮ ಮಾತನಾಡಿ ಶಿಕ್ಷಕರು ಮಕ್ಕಳಲ್ಲಿ ಮುಂದಿನ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ ಉತ್ತಮ ಅಂಕಗಳಿಸಲು ದಾರಿ ತೋರಬೇಕು ಎಂದರು.ಸಮಾರಂಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.

Wednesday, June 8, 2011


ನೇಪಥ್ಯಕ್ಕೆ ಸರಿದ ರಂಗಾಯಣದ ಲಿಂಗದೇವರುಚಿಕ್ಕನಾಯಕನಹಳ್ಳಿ,ಜು.08: ಭಾಷಾ ವಿಜ್ಞಾನಿ, ಅಂಕಣಕಾರ, ನಾಟಕಕಾರ, ಅಂತರರಾಷ್ಟ್ರೀಯ ಚಿಂತಕ, ಮೈಸೂರಿನ ರಂಗಾಯಣದ ನಿದರ್ೇಶಕ ಹಾಗೂ ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪ್ರೊ.ಲಿಂಗದೇವರು ಹಳೆಮನೆ(62) ಅವರ ನಿಧನಕ್ಕೆ ತಾಲೂಕಿನ ಜನತೆಯ ಪರವಾಗಿ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ದಾಂಜಲಿ ಅಪರ್ಿಸಿದರು. ತಾಲೂಕು ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕಿನ ಸಾಂಸ್ಕೃತಿಕ ಚೇತನವಾಗಿದ್ದ ಪ್ರೊ.ಲಿಂಗದೇವರು ಅವರು, ತಾವು ಹುಟ್ಟಿದ ನಾಡಿನ ಕೀತರ್ಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತರು ಎಂದು ಬಣ್ಣಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ಮಾತನಾಡಿ, ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪನ ತಲೆ ಮಾರಿನ ನಂತರದಲ್ಲಿ ರಂಗಭೂಮಿಯಲ್ಲಿ ಹೆಚ್ಚು ಕೆಲಸ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಾಟಕ ಕಾರ ಪ್ರೊ.ಲಿಂಗದೇವರು ಹಳೆಮನೆಯನ್ನು ರಂಗಾಯಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರ ಪಡೆಯಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದರು. ಶಿವಮೊಗ್ಗ ಮತ್ತು ಧಾರವಾಡದಲ್ಲಿ ರಂಗಾಯಣದ ಶಾಖೆಯನ್ನು ತೆರೆಯಲು ಸಕರ್ಾರದಿಂದ ಅನುಮೋದನೆ ಪಡೆದಿದ್ದರು ಎಂದರು. ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್ ನುಡಿ ನಮನ ಸಲ್ಲಿಸಿದರು. ಜಿ.ಪಂ.ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ, ಪುರಸಭಾ ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ವರದರಾಜು, ಕೃಷ್ಣಮೂತರ್ಿ, ಸೇರಿದಂತೆ ಹಲವು ಸಂಸ್ಥೆಗಳ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಕಣ್ಣಯ್ಯ ನಿರೂಪಿಸಿದರು.
ಪರಿಚಯ: ಪ್ರೊ.ಲಿಂಗದೇವರು ಅವರು, 06.3.1949ರಲ್ಲಿ ಹಾಲುಗೋಣದಲ್ಲಿ ಜನ್ಮವೆತ್ತ ಶ್ರೀಯುತರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ತಾಯಿ ಬೋರಮ್ಮನವರ ತವರೂರಾದ ಪಂಕಜನಹಳ್ಳಿಯಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಬಿಳಿಗಿರೆಯಲ್ಲಿ ಪೂರೈಸಿದರು, ಪಿ.ಯು.ಸಿ ಹಾಗೂ ಬಿ.ಎ. ಪದವಿಯನ್ನು ತಿಪಟೂರಿನಲ್ಲಿ ವ್ಯಾಸಂಗ ಮಾಡಿದರು. 1973ರಲ್ಲಿ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ(ಎಂ.ಎ)ಯನ್ನು ತಮಿಳು ನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಪೂರೈಸಿದ ನಂತರ ಅದೇ ವರ್ಷ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೆ ಭಾಷಾ ವಿಜ್ಞಾನಿಯಾಗಿ ಸೇರಿದರು. ಈ ಸಂಸ್ಥೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ, 2009ರ ಮಾಚರ್ಿನಲ್ಲಿ ನಿವೃತ್ತಿ ಹೊಂದಿದ್ದರು. 1986ರಲ್ಲಿ ಮೈಸೂರ ವಿ.ವಿ.ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪದವಿಯನ್ನು ಪ್ರಥಮ ರ್ಯಾಂಕ್ನೊಂದಿಗೆ ನಾಲ್ಕು ಚಿನ್ನದ ಪದಕಗಳನ್ನು ಪಡೆದರು. ವಯಸ್ಕರ ಶಿಕ್ಷಣದ ರಾಜ್ಯ ಸಂಪನ್ಮೂಲ ಕೇಂದ್ರದ ನಿದರ್ೇಶಕರಾಗಿದ್ದರಲ್ಲದೆ, ರಾಷ್ಟ್ರೀಯ ಸಾಕ್ಷರತಾ ಮಿಷನಿನ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಮಲೇಶಿಯಾ, ಜರ್ಮನಿ, ಶ್ರೀಲಂಕ ದೇಶಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಡಾ.ಹಾ.ಮಾ.ನಾಯಕ ಅಂಕಣ ಪ್ರಶಸ್ತಿ, ಧಾರವಾಡದ ಶಿಕ್ಷಣ ಸಿರಿ ಪ್ರಶಸ್ತಿ, ಕೆ.ವಿ.ಸುಬ್ಬಣ್ಣ ನಾಟಕ ಪ್ರಶಸ್ತಿ, ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಡ್ಯದ ಜವರಪ್ಪಗೌಡ ಸಮಾಜಮುಖಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಭಾಷಾ ವಿಜ್ಞಾನಕ್ಕೆ ಸಂಬಂಧಿಸಿದಂತೆ 6 ಕೃತಿಗಳು, 14 ನಾಟಕಗಳು, ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ 20ಕ್ಕೂ ಹೆಚ್ಚು ಕೃತಿಗಳನ್ನು ಇವರು ಹೊರೆತಂದಿದ್ದರು. ರಂಗಭೂಮಿಗೆ ಸಂಬಂಧಿಸಿದಂತೆ ಮೈಸೂರು ಸಮುದಾಯ ಘಟಕದ ಸ್ಥಾಪಕ ಅಧ್ಯಕ್ಷರಾಗಿದ್ದರಲ್ಲದೆ, ರಂಗಾಯಣದ ಭಾರತೀಯ ರಂಗಶಿಕ್ಷಣದ ಗೌರವ ಪ್ರಾಂಶುಪಾಲರಾಗಿ ನಾಲ್ಕು ವರ್ಷ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ರಂಗಾಯಣದ ನಿದರ್ೇಶಕರಾಗಿದ್ದ ಇವರು, ಚಿಕ್ಕನಾಯಕನಹಳ್ಳಿ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಈ ಸಮ್ಮೇಳನ ಇದೇ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಬೇಕಾಗಿತ್ತು.ಶ್ರದ್ದಾಂಜಲಿ: ಶಾಸಕ ಸಿ.ಬಿ.ಸುರೇಶ್ ಬಾಬು, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ, ತಾಲೂಕು ವಕೀಲರ ಸಂಘ ಶ್ರದ್ದಾಂಜಲಿ ಅಪರ್ಿಸಿತು.
ತಾಲ್ಲೂಕಿನ ಸಾಹಿತ್ಯದ ಮಾಣಿಕ್ಯ ಲಿಂಗದೇವರು ಹಳೆಮನೆ : ಎಂ.ವಿ.ಎನ್ಚಿಕ್ಕನಾಯಕನಹಳ್ಳಿ,ಜೂ.08: ಸಾಹಿತಿಯಾಗಿ, ರಂಗಾಯಣದ ನಿದೇಶಕರಾಗ್ಲಿ, ಪತ್ರಕರ್ತರಾಗಿ ತಾಲ್ಲೂಕಿನ ಕೀತರ್ಿಯನ್ನು ಬೆಳಗಿಸಿದ್ದ ಲಿಂಗದೇವರು ಹಳೆಮನೆರವರ ಮರಣದಿಂದ ತಾಲ್ಲೂಕಿಗೆ ತುಂಬಲಾರದ ನಷ್ಠವುಂಟಾಗಿದೆ ಎಂದು ಸಾಹಿತಿ ಹಾಗೂ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಹೇಳಿದರು.ಪಟ್ಟಣದ ನೆಹರು ಸರ್ಕಲ್ನಲ್ಲಿ ಲಿಂಗದೇವರು ಹಳೆಮನೆರವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅಪರ್ಿಸಿ ಮಾತನಾಡಿದ ಅವರು ತಾಲ್ಲೂಕಿನ ತೀ.ನಂ.ಶ್ರೀಕಂಠಯ್ಯರವರು, ಸಾ.ಶಿ.ಮರುಳಯ್ಯರವರ ಸಾಲಿಗೆ ಸೇರುವ ಇವರು ಸಾಹಿತ್ಯಾಸಕ್ತಿ, ರಂಗಾಯಣವನ್ನು ಬೆಳಸಿದ ಕೀತರ್ಿ ಸಲ್ಲುತ್ತದೆ ಎಂದರು.ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಲಿಂಗದೇವರು ಹಳೆಮನೆರವರ ಮರಣದಿಂದಾಗಿ ನಮಗೆಲ್ಲರಿಗೂ ಆಘಾತ ಉಂಟಾಗಿದೆ, ಪಟ್ಟಣದಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನಕ್ಕೆ ಹಳೆಮನೆರವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲಾಗಿದ್ದು ಆದರೆ ಅವರ ಮರಣದಿಂದಾಗಿ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಹಳೆಮನೆರವರು ಕಳೆದೆರಡು ವಾರಗಳೀಂದೀಚೆ ನಡೆದಿದ್ದ ರಾಜ್ಯಮಟ್ಟದ ನಾಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು, ಇನ್ನೆರಡು ದಿನಗಳಲ್ಲಿ ನಡೆಯಬೇಕಿದ್ದ ಸಮ್ಮೇಳನಕ್ಕೆ ಭಾಗವಹಿಸಲು ಸಿದ್ದರಿದ್ದ ಅವರು ಮೈಸೂರಿನಲ್ಲಿದ್ದರೂ ತಾಲ್ಲೂಕಿನ ಬಗ್ಗೆ ಅಬಿಮಾನವನ್ನು ಹೊಂದಿದ್ದರು ಎಂದರು.ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಡಾ.ಸುರೇಶ್, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ, ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ, ಕೃಷ್ಣೆಗೌಡ ಉಪಸ್ಥಿತರಿದ್ದರು.
ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಚಿಕ್ಕನಾಯಕನಹಳ್ಳಿ,ಜೂ.08:


ತಾಲ್ಲೂಕಿನ ಎಲ್ಲಾ ಸಕರ್ಾರಿ ಅನುದಾನಿತ, ಅನುದಾನ ರಹಿತ ಪ್ರೌಡಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಇದೇ 9ರ ಗುರುವಾರದಂದು ಮಧ್ಯಾಹ್ನ 3ಕ್ಕೆ ಬಿ.ಆರ್.ಸಿ.ಸಭಾಂಗಣದಲ್ಲಿ ಕರೆಯಲಾಗಿದೆ.ಅನ್ಯರನ್ನು ನಿಯೋಜಿಸದೆ ಎಸ್.ಎಸ್.ಎಲ್.ಸಿ ಫಲಿತಾಂಶದ ಪೂರ್ಣ ಮಾಹಿತಿಯೊಂದಿಗೆ ಮುಖ್ಯ ಶಿಕ್ಷಕರು ಖಡ್ಡಾಯವಾಗಿ ಭಾಗವಹಿಸಲು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, June 7, 2011ಧಾಮರ್ಿಕ, ಆಧ್ಮ್ಯಾತಿಕತೆಯಲ್ಲಿ ಪ್ರಾಮಾಣಿಕತೆ ಇದ್ದರೆ ವಿಶ್ವಶಾಂತಿ :ರಂಭಾಪುರಿ ಶ್ರೀ ಚಿಕ್ಕನಾಯಕನಹಳ್ಳಿ,ಜೂ.07 : ಧಾಮರ್ಿಕ ಆಧ್ಮ್ಯಾತಿಕತೆಯು ಪ್ರಾಮಾಣಿಕವಾಗಿದ್ದರೆ ಧರ್ಮದ ನಿಲುವಿನಲ್ಲಿ ವಹಿಸುವ ಕಾರ್ಯಗಳಿಗೆ ಜಯ ದೊರಕಿ ವಿಶ್ವವು ಶಾಂತಿಯುತವಾಗಿರುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯಸ್ವಾಮಿ ಹೇಳಿದರು.ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಜಾಗೃತಿ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು ಸತ್ಯಪಾಲನೆ ಮತ್ತು ಅಹಿಂಸಾ ಪಾಲನೆಯಿಂದ ಅಸಾಧ್ಯವಾದುದನ್ನು ಸಾದಿಸಿ ಜಯ ಪಡೆಯಬಹುದು, ಸತ್ಯಪಾಲನೆಯನ್ನು ಬಿಟ್ಟು ಸಮಾಜದ ದಿಕ್ಕುಗಳನ್ನು ಬೇರೆ ರೀತಿಯಲ್ಲಿ ಬದಲಾಯಿಸುತ್ತಿರುವ ಸಮಾಜ ಕಂಟಕರು ಧರ್ಮಗಳ ಆದರ್ಶವನ್ನು ಬೀದಿಗೆ ಹಾಕುತ್ತಿದ್ದಾರೆ, ಸಜ್ಜನರರ ಪ್ರಾಮಾಣಿಕತೆ, ಸತ್ಯ, ಅಹಿಂಸೆಯ ದಾರಿಯನ್ನು ಪಾಲಿಸುವವರು ಇಂದು ಸಮಾಜದಲ್ಲಿ ಮುಂದೆ ಬರುತ್ತಿಲ್ಲ ಎಂದ ಅವರು ನಾಗರೀಕರು, ಹಿರಿಯರು ಕಟ್ಟಿ ಹೋಗಿರುವ ನುಡಿಮುತ್ತುಗಳನ್ನು ಪಾಲಿಸಿ ಆ ತತ್ವಗಳ ಮಾರ್ಗದರ್ಶನಕ್ಕೆ ಬಾಳಬೇಕು ಎಂದರು.ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾದು ಹೋಗುವ ರಾಜ್ಯದ ಹೆದ್ದಾರಿಯ ಅಭಿವೃದ್ದಿಗೆ 234ಕೋಟಿ ರೂ ಸಕರ್ಾರದಿಂದ ಬಿಡುಗಡೆ ಮತ್ತು ಸಾಸಲು ಗ್ರಾಮದಲ್ಲಿರುವ ಬನಶಂಕರಿ ದೇವಾಲಯದ ನಿಮರ್ಾಣಕ್ಕೆ 5ಲಕ್ಷರೂಗಳನ್ನು ನೀಡಲಾಗುವುದು ಎಂದ ಅವರು ಗುಡಿಸಲು ವಾಸಿಗಳಿಗೆ ನಿವೇಶನ ನೀಡಿ, ಸೂರುಕಟ್ಟುವ ಕಾರ್ಯವನ್ನು ಪಕ್ಷಾತೀತವಾಗಿ ನಿರ್ವಹಿಸುವುದಾಗಿ ಸಂಕಲ್ಪ ತೊಟ್ಟಿರುವುದಾಗಿ ತಿಳಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಕಳೆದ 3ದಶಕಗಳಿಂದಲೂ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಹೋರಾಟ ನಡೆಸುತ್ತಿದ್ದು, ಗಡಬನಕೆರೆ ಮೂಲಕ ಬೋರನಕಣಿವೆಗೆ, ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಮೂಲಕ ಹುಳಿಯಾರು, ದಬ್ಬೇಘಟ್ಟದಿಂದ ಮೇಲನಹಳ್ಳಿ ಕೆರೆಗೆ ನೀರು ಹರಿಸಲು 106ಕೋಟಿ ರೂ. ಅನುದಾನಕ್ಕೆ ಸಂಪುಟ ಸಚಿವ ಸಭೆಯಲ್ಲಿ ಅನುಮತಿ ದೊರೆಯಬೇಕಿದೆ, ಶುದ್ದ ಕುಡಿಯುವ ನೀರನ್ನು ಜನರಿಗೆ ಒದಗಿಸಲು ರಾಜ್ಯ ಸಕರ್ಾರ ಪ್ರಯತ್ನ ನಡೆಸಿದ್ದು ಈ ಕಾರ್ಯಕ್ಕಾಗಿ 850ಕೋಟಿ ರೂ. ಮಂಜೂರಾಗಿದೆ ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಗುರುವಿನ ಮೂಲಕ ದೇವರನ್ನು ಕಾಣಬೇಕು, ಅವರ ಮಾರ್ಗದರ್ಶನದಂತೆ ಸಮಾಜವನ್ನು ತಿದ್ದಬೇಕು ಎಂದ ಅವರು ಎಲ್ಲಾ ಜಾತಿಯ ಜನಾಂಗದವರು ಒಗ್ಗಟ್ಟಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು. ಷಡಕ್ಷರಮಠದ ರುದ್ರಮುನಿಸ್ವಾಮೀಜಿ ಮಾತನಾಡಿ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ತಿದ್ದಲು ಲೀನಗೊಳ್ಳದ ಮನಸ್ಸುಗಳು ಮುಖ್ಯವಾಹಿನಿಗೆ ಬರಬೇಕು ಎಂದರು. ಸಮಾರಂಭದಲ್ಲಿ ಡಾ.ಯತೀಶ್ವರಶಿವಚಾರ್ಯಸ್ವಾಮಿ, ಡಾ. ಅಭಿನವಮಲ್ಲಿಕಾಜರ್ುನಸ್ವಾಮಿ, ಮಲ್ಲಿಕಾಜರ್ುನಸ್ವಾಮಿ, ರೇವಣಸಿದ್ದೇಶ್ವರ ಶಿವಚಾರ್ಯಸ್ವಾಮಿ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಹಾ.ಒ.ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಬಿ.ಎನ್.ಶಿವಪ್ರಕಾಶ್, ಬಿ.ಎಸ್.ನಟರಾಜು ಉಪಸ್ಥಿತರಿದ್ದರು.

Monday, June 6, 2011

ಬಾಬಾ ರಾಮ್ದೇವ್ರವರ ಬಂಧನ ಖಂಡಿಸಿ ಪ್ರತಿಭಟನೆ ಚಿಕ್ಕನಾಯಕನಹಳ್ಳಿ,

ಜೂ.06: ಕೋಟ್ಯಾಂತರ ರೂಗಳನ್ನು ಸ್ವಿಸ್ಬ್ಯಾಂಕ್ನಲ್ಲಿಟ್ಟು ಸಕರ್ಾರಕ್ಕೆ ತೆರಿಗೆ ಕಟ್ಟದೆ ದೇಶದ ಸಂಪತ್ತನ್ನು ಲೂಟಿ ಹೊಡಯುತ್ತಿರುವವರ ಭ್ರಷ್ಠರ ವಿರುದ್ದ ಬಾಬಾ ರಾಮ್ದೇವ್ರವರು ಶಾಂತಿಯುತವಾಗಿ ಹೋರಾಟ ಮಾಡಿದರೆ ಸಕರ್ಾರ ಗೂಂಡಾ ಸಕರ್ಾರವಾಗಿ ತಿರುಗಿ ಗುರೂಜಿರವರನ್ನು ರಾತ್ರೋರಾತ್ರಿ ಬಂಧಿಸಿರುವುದು ಖಂಡನೀಯ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಎಸ್.ಬಿ.ಎಂ. ಬ್ಯಾಂಕ್ ಬಳಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ವತಿಯಿಂದ ಬಾಬಾ ರಾಮ್ದೇವರ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡಸಿದ ಸಂದರ್ಭದಲ್ಲಿ ಮಠಾಧೀಶರು, ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಮಾತನಾಡಿದ ಅವರು ಪ್ರತಿಭಟನೆ ನಡೆಯುತ್ತಿರುವುದು ಯಾವುದೇ ವ್ಯಕ್ತಿ ಅಥವಾ ರಾಜಕಾರಣಿಗಳ ವಿರುದ್ದವಲ್ಲ, ದೇಶದ ಸಂಪತ್ತನ್ನು, ದೇಶದಲ್ಲಿರುವ ಕೆಟ್ಟ ವ್ಯವಸ್ಥೆಯ ವಿರುದ್ದವಷ್ಟೇ ಎಂದ ಅವರು, ಸ್ವಿಸ್ ಬ್ಯಾಂಕ್ನಲ್ಲಿರುವ ಹಣವನ್ನು ತರಲು ಸಕರ್ಾರಕ್ಕೆ ಯಾವುದೇ ಕಾನೂನುಗಳಿಲ್ಲವಾದರೂ ಈ ರೀತಿಯ ವ್ಯವಸ್ಥೆಗೆ ಬೆಂಬಲಿಸುವುದಾದರೂ ಏಕೆ ಎಂದು ಪ್ರಶ್ನಿಸಿದರು. ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ರಾಮ್ದೇವ್ ಗುರೂಜಿರವರ ಪ್ರತಿಭಟನೆಯು ನಮ್ಮ ಮುಂದಿನ ಯುವಪೀಳಿಗೆಯ ಭವಿಷ್ಯಕ್ಕಾಗಿದೆ, ಭ್ರಷ್ಠಾಚಾರದ ಮೂಲಕ ನಮ್ಮ ದೇಶದ ಸಂಪತ್ತನ್ನು ಕಾಣದೆ ಪರದೇಶದಲ್ಲಿ ಕಾಪಾಡುತ್ತಿವವರ ವಿರುದ್ದ ಬಾಬಾರವರು ಪ್ರತಿಭಟಿಸುತ್ತಿರುವುದು ಸಮಂಜಸವಾಗಿದೆ, ಆದರೆ ಪ್ರಾಮಾಣಿಕವಾಗಿ ಪ್ರತಿಭಟನೆಯ ಪರವಾಗಿ ಹೋರಾಡುತ್ತಿರುವ ಬಾಬಾರವರನ್ನು ಬಂಧಿಸಿರುವುದು ಅಪರಾಧವಾಗಿದೆ ಎಂದರು. ಗೋಡೆಕೆರೆ ಸಿದ್ದರಾಮದೇಶೀಕೇಂದ್ರಸ್ವಾಮಿ ಮಾತನಾಡಿ ಸಂಧಾನದ ಮೂಲಕವಾದರೂ ಅಥವಾ ಮಾಧ್ಯಮದ ಮೂಲಕವಾದರೂ ಪ್ರತಿಭಟನೆಯ ಬಗ್ಗೆ ಸಕರ್ಾರ ಮಾತನಾಡಬಹುದಿತ್ತು ಆದರೆ ಬಾಬಾರವರನ್ನು ಬಂಧಿಸಿರುವುದು ಖಂಡನೀಯ ಎಂದರು. ಮಾದೀಹಳ್ಳಿಯ ಮಲ್ಲಿಕಾಜರ್ುನಸ್ವಾಮಿ ಮಾತನಾಡಿ ಭ್ರಷ್ಠಾಚಾರದ ವಿರುದ್ದ ನಮ್ಮ ನಿಮ್ಮೆಲ್ಲರ ಪಾಲು ಮುಖ್ಯವಾಗಿದೆ ಎಂದರು. ಅಭಾವಿಪ ತಾಲ್ಲೂಕ್ ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಭ್ರಷ್ಠಾಚಾರವನ್ನು ಕಿತ್ತೊಗೆಯಲು ಯೋಗಗುರು ಬಾಬಾರಾಮ್ದೇವ್ರವರು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿ ಅವರನ್ನು ಅಮಾನುಷವಾಗಿ ನಡೆಸಿಕೊಂಡಿರುವದು ಮತ್ತು ಅವರ ಬೆಂಬಲಿಗರ ಮೇಲೆ ಲಾಠಿ ಚಾಜರ್್ ಮಾಡಿರುವುದ ಅಕ್ಷಮ್ಯ ಅಪಾರಾದ ಎಂದರು. ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಜಾತಿ ವಿನಾಶವಾಗದಿದ್ದರೆ ಭ್ರಷ್ಠಾಚಾರ ವಿನಾಶವಾಗುವುದಿಲ್ಲ ಈ ಭ್ರಷ್ಠಾಚಾರದ ವಿರುದ್ದ ಹೋರಾಡುತ್ತಿರುವ ಬಾಬಾರಾಮ್ದೇವ್ ಮತ್ತು ಹಜಾರೆಅಣ್ಣರವರಂತೆ ಅನೇಕರು ಮುಂದೆ ಬರಬೇಕು ಎಂದ ಅವರು ಭ್ರಷ್ಠಾಚಾರದಿಂದ ಸ್ವಿಸ್ಬ್ಯಾಂಕ್ಗಳಲ್ಲಿ 500ಲಕ್ಷ ಕೋಟಿ ತೊಡಗಿಸಿರುವ ಹಣವನ್ನು ದೇಶಕ್ಕೆ ತಂದು ದೇಶದ ಪ್ರತಿಯೊಬ್ಬರಿಗೊ 1ಕೋಟಿಯಂತೆ ನೀಡದರೂ ಹೆಚ್ಚಾಗಿ ಉಳಿಯುತ್ತದೆ ಎಂದರುಪ್ರತಿಭಟನೆಯಲ್ಲಿ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಅಭಾವಿಪ ಕಾಯಕರ್ತರಾದ ರವಿಕುಮಾರ್, ಮನು, ವಿಜಯ್, ರವಿ, ನಂದನ್ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Saturday, June 4, 2011


ಬಾಬಾ ರಾಮ್ದೇವ್ರವರಿಗೆ ಬೆಂಬಲ

ಚಿಕ್ಕನಾಯಕನಹಳ್ಳಿ,ಜೂ.04 : ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪು ಹಣವನ್ನು ಸ್ವದೇಶಕ್ಕೆ ಹಿಂದಿರುಗಿ ಪಡೆಯುವುದು, ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಠಾಚಾರವನ್ನು ತಡೆಯುವುದು ವಿದೇಶಿ ಕಾನೂನು ಪದ್ದತಿ ರದ್ದು ಮಾಡುವುದು, ತಪ್ಪಿತಸ್ಥರನ್ನು ಗಲ್ಲಿಗೇರಿಸುವುದು, 500, 1000 ಮುಖ ಬೆಲೆಯ ನೋಟು ಹಿಂದೆ ಪಡೆಯಲು ಒತ್ತಾಯಿಸುತ್ತಿರುವ ಯೋಗ ಗುರು ರಾಮದೇವರ ನಿಲುವು ಸ್ವಾಗತಾರ್ಹ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀನಿವಾಸಮೂತರ್ಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹಳಷ್ಟು ವರ್ಷಗಳಿಂದ ಭ್ರಷ್ಠರಾಜಕಾರಣಿಗಳು ಕೋಟಿಗಟ್ಟಲೆ ಹಣ ಲೂಟಿ ಮಾಡಿ ವಿದೇಶಿ ಬ್ಯಾಂಕ್ನಲ್ಲಿಟ್ಟಿರುವುದು ಅಕ್ಷಮ್ಯ ಅಪರಾಧ, ಅಂತಹ ಹಣವನ್ನು ಹಿಂದಿರುಗಿ ಪಡೆಯುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ, ಇದೀಗ ಬಾಬ ರಾಮದೇವರವರು, ಅಣ್ಣಾ ಹಜಾರೆರವರು ಈ ನಿಟ್ಟಿನಲ್ಲಿ ಹೋರಾಟ ಕೈಗೊಂಡು ಜನಜಾಗೃತಿ ಮೂಡಿಸುತ್ತಿದ್ದಾರೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಇವರು ಕೈಗೊಂಡಿರುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಕೋರಿದ್ದಾರೆ.
ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಚಿಕ್ಕನಾಯಕನಹಳ್ಳಿ,ಜೂ.04: ತಾಲ್ಲೂಕಿನ ಕಂದಿಕೆರೆ ಹೋಬಳಿಯಲ್ಲಿ ಕೃಷಿ, ಐನುಗಾರಿಕೆ, ಜೇನುಸಾಕಾಣೀಕೆ, ಮೀನುಗಾರಿಕೆ, ತೋಟಗಾರಿಕೆಗಳ ಚಟುವಟಿಕೆಗಳಿಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆಮಾಡಲಾಯಿತು. ಪರಿಷಿಷ್ಠ ಜಾತಿಯ 46 ಮಹಿಳಾ ಫಲಾನುಭವಿಗಳು, 92 ಮಂದಿ ಪುರಷ ಫಲಾನುಭವಿಗಳು, ಸಾಮಾನ್ಯವರ್ಗದ 68 ಮಹಿಳೆಯರು, 137 ಮಂದಿ ಸಾಮಾನ್ಯ ರೈತ ಫಲಾನುಭವಿಗಳು ಆಯ್ಕೆಗೊಂಡು ಶೇಖಡಾ 10ರ ಅನುಪಾತದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಲೋಹಿತಾಬಾಯಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾ.ಪಂ.ಸದಸ್ಯೆ ಲತಾ, ಕೆ.ಎಸ್.ಸುಮಿತ್ರಾ, ಉಮಾದೇವಿ, ಇ,ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಆಂಜನಪ್ಪ, ಆನಂದಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

ಕಾನ್ವೆಂಟ್ ಶಾಲೆಗಳ ವ್ಯಾಮೋಹ ; ಸಕರ್ಾರಿ ಶಾಲೆಗಳು ಮುಚ್ಚುವ ಸಂಭವಗಳಿಂದ ಚಿಕ್ಕನಾಯಕನಹಳ್ಳಿ,ಜೂ.03: ಪೋಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ಗಳಿಗೆ ಕಳಿಸುವುದರಿಂದ ಸಕರ್ಾರಿ ಶಾಲೆಗಳನ್ನು ಮುಚ್ಚುವಂತಾಗಿದೆ ಎಂದ ಬಿ.ಇ.ಓ ಸಾ.ಚಿ.ನಾಗೇಶ್ ಕರೆ ನೀಡಿದರು. ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಇಲಾಖೆರವರ ಸಂಯುಕ್ತಾಶ್ರಯದಲ್ಲಿ ನಡೆದ ಮಾಧ್ಯಮ ಮತ್ತು ದಾಖಲೀಕರಣ ಬುಡಕಟ್ಟು ಪ್ರದೇಶದ ಪೋಷಕರ ಜಾಗೃತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗ, ಬೋವಿ ಕಾಲೋನಿಗಳ ತಾಂಡಗಳ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು ಸಕರ್ಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ, ಮಕ್ಕಳಿಗೆ ಉಚಿತ ಊಟ, ಸಮವಸ್ತ್ರ, ಸೈಕಲ್, ವಿದ್ಯಾಥರ್ಿವೇತನ ನೀಡುತ್ತಾ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ ಎಂದರು. ಎ.ಸಿ.ಡಿ.ಪಿ.ಓ ಪರ್ವತಯ್ಯ ಮಾತನಾಡಿ ತಾಲ್ಲೂಕಿನಲ್ಲಿ 1015ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿವೆ, ಮಹಿಳೆಯರು ಜಾಗೃತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು ಸ್ತ್ರೀ ಶಕ್ತಿ ಸಂಘಗಳು ಬರೀ ಉಳಿತಾಯ ಮಾಡಿದರೆ ಸಾಲದು ಸಸ್ವಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನು ಸ್ತ್ರೀ ಶಕ್ತಿ ಭವನದಲ್ಲಿ ಮಾರಾಟ ಮಾಡಿ ಆಥರ್ಿಕವಾಗಿ ಸದೃಡವಾಗಿ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಲತಾ, ಡಿ.ವಿ.ಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಖಜಾಂಚಿ ತಿಮ್ಮಯ್ಯ, ಮುಖ್ಯೋಪಾಧ್ಯಾಯ ಮಲ್ಲಿಕಾಜರ್ುನಯ್ಯ ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಚಿಕ್ಕನಾಯಕನಹಳ್ಳಿ,ಜೂ.01: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಸನ್ಮಾನ ಸಮಾರಂಭವನ್ನು ಇದೇ ಜೂನ್ 10ರಂದು ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ಕುಪ್ಪೂರಿನ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ಬಾಬು ಸಮ್ಮೇಳನಾಧ್ಯಕ್ಷರಿಗೆ ಗೌರವಾರ್ಪಣೆ ಮಾಡಲಿದ್ದಾರೆ, ನಾಲ್ಕನೆಯ ಕಸಪಾ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದು ಕನರ್ಾಟಕ ಜಾನಪದ ಪರಿಷತ್ ಡಾ.ಚಕ್ಕೆರೆ ಶಿವಶಂಕರ್ ಸಮಾರೋಪ ಭಾಷಣ ಮಾಡಲಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಾಲ್ಲೂಕಿನ ಗಣ್ಯರಾದ ಸಿ.ಎಸ್.ನಾರಾಯಣರಾವ್, ಸಿ.ಕೆ.ಪರುಶುರಾಮಯ್ಯ, ಪ್ರಭಾಕರ್, ಎಂ.ಬಸವಯ್ಯ, ಸಿ.ಎಂ.ಹೊಸೂರಪ್ಪ, ಡಾ.ಕೆ.ಆರ್.ಕಮಲೇಶ್, ಡಾ.ಸಿ.ಎಂ.ಸುರೇಶ್, ಸಿ.ಟಿ.ಮುದ್ದುಕುಮಾರ್, ಬಿ.ಎಸ್.ಲಿಂಗದೇವರು, ರಂಗಸ್ವಾಮಿ, ಸುಶೀಲಮ್ಮ, ಎಂ.ಮಹಾಲಿಂಗಯ್ಯ, ಎಂ.ಚಂದ್ರಶೇಖರ್ರವರಿಗೆ ಸನ್ಮಾನಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕರದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ತಾ.ಪಂ.ಉಪಾಧ್ಯಕ್ಷೆ ಬಿಬಿಫಾತೀಮ, ಜಿ.ಹಾ.ಒಕ್ಕೂಟ ಶಿವನಂಜಪ್ಪ ಹಳೇಮನೆ, ಮೈನ್ಸ್ ಅಸೋಸಿಯೇಶನ್ ಎಸ್.ಎ.ನಭಿ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಮಾ.ಅ.ಪಿ.ಎಲ್.ಡಿ.ಬ್ಯಾಂಕ್ ಸಿ.ಎಲ್.ಜಯದೇವ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್, ಪತ್ರಕರ್ತ ಎಚ್.ಎನ್.ಮಲ್ಲೇಶ್, ಕಿರುತರೆಯ ನಟಿ ಹೇಮಾಶ್ರೀ ಉಪಸ್ಥಿತರಿರುವರು.

Friday, June 3, 2011

ಸದಸ್ಯರ ಗಮನಕ್ಕೆ ತಾರದೆ ಸಭೆ : ಮುಂದೂಡಲು ಪಟ್ಟು
ಚಿಕ್ಕನಾಯಕನಹಳ್ಳಿ,ಜೂ.3: ಗ್ರಾಮ ಪಂಚಾಯಿತಿ ಪಿಡಿಓಗಳು ಮತ್ತು ಕಾರ್ಯದಶರ್ಿಗಳು ಸದಸ್ಯರ ಗಮನಕ್ಕೆ ತಾರದೆ ಗ್ರಾಮ ಸಭೆಗಳನ್ನು ನಡೆಸುತ್ತಿದ್ದಾರೆ, ಇದರ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಪಿ.ಡಿ.ಓ ಹಾಗೂ ಕಾರ್ಯದಶರ್ಿಗಳನ್ನು ಈ ಸಭೆಗೆ ಕರೆಸುವವರೆಗೆ ಸಭೆಯನ್ನು ಮುಂದೂಡಿ ಎಂದು ತಾ.ಪಂ. ಸದಸ್ಯ ಶಶಿಧರ್ ಪಟ್ಟು ಹಿಡಿದರು.ವಿರೋಧ ಪಕ್ಷದ ಸದಸ್ಯರ ಹಠ ಅಧಿಕಗೊಂಡ ಹಂತದಲ್ಲಿ ಅಧ್ಯಕ್ಷ ಜಿ.ಆರ್.ಸೀತರಾಮಯ್ಯ, ಸಭೆಯನ್ನು ನಡೆಸಿಯೇ ತೀರುತ್ತೇಗೆ, ಬೇಕಾದರೆ ಸಭೆಯಿಂದ ನೀವು ಹೊರಹೋಗಬಹುದು ಎಂದರು, ಇದರಿಂದ ಕುಪಿತರಾದ ತಾ.ಪಂ.ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ತೀವ್ರವಾಗಿ ಪ್ರತಿಭಟಿಸಿ, ನಾವು ಹೊರಗೆ ಹೋಗಲು ಬಂದಿಲ್ಲ ನಮ್ಮನ್ನು ಜನ ಅಭಿವೃದ್ದಿ ಕಾರ್ಯ ಮಾಡಲು ಚುನಾಯಿಸಿ ಕಳುಹಿಸಿದ್ದಾರೆ, ಅಧ್ಯಕ್ಷರಿಗೆ ಸಭೆಯಿಂದ ಹೊರಗೆ ಹೋಗಿ ಎನ್ನುವ ಅಧಿಕಾರವಿಲ್ಲ ಎಂದು ಪ್ರತಿಭಟನೆ ಮಾಡಿದರು. ಈ ಮಾತನ್ನು ವಾಪಸ್ ತೆಗೆದುಕೊಳ್ಳಿರಿ ಎಂದು ಒತ್ತಾಯಿಸಿದರು. ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆದು ನಂತರ ಕಾರ್ಯನಿರ್ವಹಣಾಧಿಕಾರಿಗಳು, ಪಿಡಿಓ ಮತ್ತು ಕಾರ್ಯದಶರ್ಿಗಳನ್ನು ಸಭೆಗೆ ಮಧ್ಯಾಹ್ನದ ಸಭೆಗೆ ಕರೆಸುವುದಾಗಿ ಆಶ್ವಾಸನೆ ನೀಡಿದ ನಂತರ ಸಭೆ ಮುಂದುವರಿಯಿತು.ನಂತರ ಇಲಾಖಾವಾರು ಕ್ರಿಯಾ ಯೋಜನಾ ವರದಿಯನ್ನು ತಾಲ್ಲೂಕು ಅಧಿಕಾರಿಗಳು ಸಭೆ ಮಂಡಿಸಿದರು.ಪಿಡಿಓಗಳು ಹಾಗೂ ಕಾರ್ಯದಶರ್ಿಗಳು ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಗೌರವಿಸುವುದಿಲ,್ಲ ಗ್ರಾಮ ಸಭೆಗಳಿಗೆ ಆಹ್ವಾನಿಸುವುದಿಲ,್ಲ ಅಭಿವೃದ್ದಿ ಕಾರ್ಯಗಳ ವಿವರವನ್ನು ಗಮನಕ್ಕೆ ತರದೇ ತಿರಸ್ಕಾರ ಮಾಡುತ್ತಾರೆ, ಕಳೆದ 5ತಿಂಗಳಿನಿಂದ ಪಿಡಿಓಗಳ ಸಭೆಯನ್ನೆ ಕರೆದಿಲ್ಲ, ಮೊದಲು ಸಭೆ ಕರೆಯುವಂತೆ ಒತ್ತಾಯಿಸಿದರು. ಯಾವ ಸಮಯದಲ್ಲೇ ಕಾರ್ಯನಿರ್ವಹಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಲು ಪ್ರಯತ್ನಿಸಿದರೂ, ನಾನು ಮೀಟಿಂಗ್ನಲ್ಲಿ ಇದ್ದೇನೆ ಎಂದು ಉತ್ತರಿಸುತ್ತಾರೆ, ಮೀಟಿಂಗ್ ಮುಗಿದ ನಂತರ ಸೌಜನ್ಯಕ್ಕಾದರೂ ಪೋನ್ ಮಾಡವುದಿಲ್ಲ್ಲ, ಉದ್ಯೋಗ ಖಾತ್ರಿ ಯೋಜನಾ ಕಾಮಗಾರಿಗಳ ಸ್ಥಳ ತನಿಖೆಗೆ ಹೋಗುವಾಗ ತಾ.ಪಂ.ಸದಸ್ಯರ ಗಮನಕ್ಕೆ ತರದೆ ನಿರ್ಲಕ್ಷ್ಯಸುತ್ತಾರೆ ಎಂದು ಅಪಾದಿಸಿದರು. ದೊಡ್ಡೆಣ್ಣೆಗೆರೆ ಗ್ರಾ.ಪಂ. ಪಿಡಿಓ ರಜಾ ಹಾಕದೇ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಮಾಡಿಕೊಂಡು ಯಾವುದೇ ಮಾಹಿತಿ ನೀಡದೆ ಗ್ರಾ.ಪಂ. ಕಛೇರಿಯಲ್ಲಿದ್ದ ನಡಾವಳಿ ಪುಸ್ತಕ, ಚೆಕ್ ಪುಸ್ತಕ ಸೇರಿದಂತೆ ಇತರೆ ದಾಖಲಾತಿಗಳನ್ನು ತೆಗೆದುಕೊಂಡು ಕಾಣೆಯಾಗಿದ್ದಾರೆ, ಈ ಬಗ್ಗೆ ಏನು ಕ್ರಮಕೈಗೊಂಡಿದ್ದೀರೆಂದು ಸದಸ್ಯೆ ಹೇಮಾವತಿ ಇ.ಓ.ರವರನ್ನು ಪ್ರಶ್ನಿಸಿದರು.ಈ ಸಂದರ್ಭದಲ್ಲಿ ಉತ್ತರಿಸಿದ ತಾ.ಪಂ.ಕಾರ್ಯನಿರ್ವಹಾಣಾಧಿಕಾರಿ ದಯಾನಂದ್, ಗ್ರಾಮ ಪಂಚಾಯಿತಿಯ ಕಾರ್ಯಗಳಿಗೆ ಅಡ್ಡಿಯಾಗದಂತೆ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮ ಮಾಡಿ ಕಛೇರಿಯ ಬೀಗ ತೆರೆಸಿ ಬೇರೆ ಕಾರ್ಯದಶರ್ಿಯನ್ನು ನಿಯೋಜನೆಗೊಳಿಸಲಾಯಿತು ಎಂದರು.ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಕರ್ಾರದ ಕ್ರಿಯಾ ಯೋಜನೆಯನ್ನು ರೈತರಿಗೆ ಅಗತ್ಯವಾದ ಇಂಗುಗುಂಡಿ, ಉದಿಬದ, ಜಲಸಂಗ್ರಹಣೆ ಕಾಮಗಾರಿಗಳನ್ನು ಕೈಗೊಳ್ಳ್ಲದೇ ಕಾರ್ಯದಶರ್ಿಗಳು ಹಾಗೂ ಪಿ.ಡಿ.ಓಗಳು ಮನಬಂದಂತೆ ಕಾಮಗಾರಿಗಳನ್ನು ಮಾಡಲು ಹೊರಟಿರುವುದು ಅಕ್ರಮ ಹಾಗೂ ನಿಯಮ ಬಾಹಿರ ಎಂದು ಸದಸ್ಯ ನಿರಂಜನಮೂತರ್ಿ ಹಾಗೂ ಶಶಿಧರ ಆಕ್ಷೇಪಿಸಿದರು.ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಹಿಂದೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಕ್ರಿಯಾ ಯೋಜನೆ ತಯಾರಿಸಿದ್ದೇವೆ ಎಂದು ಕಾರ್ಯದಶರ್ಿ ಪಿಡಿಓಗಳು ತಿಳಿಸಿದ್ದಾರೆ ಎಂದಾಗ, ಸದಸ್ಯ ನಿರಂಜನಮೂತರ್ಿ ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ ಆದ್ದರಿಂದ ಸ್ಪಿಲ್ಓವರ್ ಕಾಮಗಾರಿಗಳನ್ನು ತೆಗೆದುಕೊಳ್ಳಬಾರದು ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಬೀಬಿಫಾತಿಮಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಚೇತನ ಗಂಗಾಧರ್, ತಾ.ಪಂ.ಸದಸ್ಯರುಗಳಾದ ಎಂ.ಎಂ.ಜಗಧೀಶ್, ಕೆ.ಎಂ.ನವೀನ್, ಲತಾ ವಿಶ್ವನಾಥ್, ಜಯಣ್ಣ, ಸುಮಿತ್ರಮ್ಮ, ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಾಹಿತ್ಯ ಸಮ್ಮೇಳನದಲ್ಲಿ ಹಲವು ಗೋಷ್ಠಿ ಮತ್ತು ಉಪನ್ಯಾಸಗಳುಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸ-ಗೋಷ್ಠಿಯನ್ನು ಜೂನ್ 10ರಂದು ಮಧ್ಯಾಹ್ನ 1ನೇ ಗೋಷ್ಥಿ 12.45ಕ್ಕೆ ಮತ್ತು 2ನೇ ಗೋಷ್ಠಿ 2.45ಕ್ಕೆ , 3ನೇ ಗೋಷ್ಠಿ 5ಕ್ಕೆ ಏರ್ಪಡಿಸಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.1ನೇ ಗೋಷ್ಠಿಯು ತಾಲ್ಲೂಕಿನ ಮರೆಯಲಾರದ ಮಹಾನುಭಾವರು ವಿಷಯದಡಿ ಆಚಾರ್ಯ ತೀ.ನಂ.ಶ್ರೀರವರ ಬಗ್ಗೆ ತಾಲ್ಲೂಕಿನ ಮೊದಲನೇ ಕಸಾಪ ಸಮ್ಮೇಳನಾಧ್ಯಕ್ಷರಾದ ಡಾ.ತೀ.ನಂ.ಶಂಕರನಾರಾಯಣ, ಹರಿದಾಸ ಸಾಹಿತ್ಯದ ಅಗ್ರಗಣ್ಯ ಚಿ.ನಾ.ಹಳ್ಳಿಯ ವೆಂಕಟದಾಸರು ಬಗ್ಗೆ ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕಲಾ ತಪಸ್ವಿ ಬಿ.ಕೆ.ಈಶ್ವರಪ್ಪನವರ ಬಗ್ಗೆ ತಾ.ಎರಡನೇ ಕಸಾಪ ಸಮ್ಮಳನಾಧ್ಯಕ್ಷರಾದ ಆರ್.ಬಸರವಾಜು ಮಾತನಾಡಲಿದ್ದು ವಿಶೇಷ ಆಹ್ವಾನಿತರಾಗಿ ಕನ್ನಡ ಸಂಘದ ಅದ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ದಲಿತ ಮುಖಂಡ ಚನ್ನಬಸವಯ್ಯ ಭೇವಿನಹಳ್ಳಿ ಉಪಸ್ಥಿತರಿರುವರು, ಗೋಷ್ಠಿಯಲ್ಲಿ ಎ.ಸೋಮಶೇಖರ್ ಸ್ವಾಗತಿಸಲಿದ್ದು ಸಿ.ಎಚ್.ಗಂಗಾಧರ್ ವಂದಿಸಲಿದ್ದು ಸಿ.ಡಿ.ಚಂದ್ರಶೇಖರ್ ನಿರೂಪಿಸಲಿದ್ದಾರೆ.2ನೇ ಗೋಷ್ಠಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ದರ್ಶನ ವಿಷಯದಡಿ ಕೃಷಿ ತಜ್ಞ ಜಿ.ಶಿವನಂಜಪ್ಪ ಬಾಳೆಕಾಯಿ, ಪ್ರಾಚಾರ್ಯ ಕೆ.ಸಿ.ಬಸಪ್ಪ ಪ್ರಚಲಿತ ಪೇಟೆ ವ್ಯವಸ್ಥೆಯಲ್ಲಿ ಚಿ.ನಾ.ಹಳ್ಳಿ ತಾಲ್ಲೂಕನ್ನು ಸಜ್ಜುಗೊಳಿಸುವ ಮಾರ್ಗಗಳು, ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣ ತಾಲ್ಲೂಕಿನ ಜೀವವೈವಿಧ್ಯಗಳು, ವರದಕ್ಷಿಣೆ ವಿರೋಧಿ ವೇದಿಕೆಯ ಸಾ.ಚಿ.ರಾಜ್ಕುಮಾರ್ ತಾಲ್ಲೂಕಿನ ಮಹಿಳಾ ಪ್ರತಿನಿಧೀಕರಣದ ಬಗ್ಗೆ ಮಾತನಾಡಲಿದ್ದು ಪ್ರಾಚಾರ್ಯ ಎ.ಎನ್.ವಿಶ್ವೇಶ್ವರಯ್ಯ, ಎಂ.ಬಿ.ಶಿವಕುಮಾರ್, ಜಿ.ಸ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು ಉಪಸ್ಥಿತರಿರುವರು.3ನೇ ಗೋಷ್ಠಿಯು ಕವಿ ಮಿಲನ ಗೋಷ್ಠಿಯ ಬಗ್ಗೆ ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿರವರು ಅಧ್ಯಕ್ಷತೆ ವಹಿಸಲಿದ್ದು ಪ್ರಸೂತಿ ತಜ್ಞ ಡಾ.ರಮೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಕ.ಸಾಪ ಮಾಜಿ ಅಧ್ಯಕ್ಷ ಟಿ.ಎಲ್.ರಂಗನಾಥಶೆಟ್ಟಿರವರು ಬರೆದಿರುವ ಕಾವ್ಯಶ್ರೀ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ.ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಮು.ಸಂಘದ ಅದ್ಯಕ್ಷ ಕೃಷ್ಣಯ್ಯ, ರಾ.ಸ.ನೌ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ತಾ.ಶಿ.ಸಂಘದ ಅಧ್ಯಕ್ಷ ಎಚ್.ಎಂ.ಸುರೇಶ್, ತಾ.ಶಿ.ಶಿಸಂಘದ ಬಿ.ಎಲ್.ಬಸವರಾಜು ಉಪಸ್ಥಿತರಿರುವರು. ನರೇಂದ್ರಬಾಬು ಸ್ವಾಗತಿಸಲಿದ್ದು ಸಿ.ಎಸ್.ರೇಣುಕಮೂತರ್ಿ ವಂದಿಸಲಿದ್ದು ಶಶಿಭೂಷಣ್, ಕೆ.ಎನ್.ರಂಗನಾಥ್ ನಿರೂಪಿಸಲಿದ್ದಾರೆ.

ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜೂನ್ 10ರ ಶುಕ್ರವಾರ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ.ಅಂದು ಬೆಳಗ್ಗೆ 8.15ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಉದ್ಘಾಟನೆಯನ್ನು ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಚಂದ್ರಪ್ಪ ನೆರವೇರಿಸಲಿದ್ದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ಬಿ.ಪಂಚಾಕ್ಷರಿ, ಎನ್.ಜಿ.ಮಂಜುಳ, ಜಿ.ಲೋಹಿತಾಬಾಯಿ, ನಿಂಗಮ್ಮ, ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.ಸಮ್ಮೇಳನಾದ್ಯಕ್ಷರ ಮೆರವಣಿಗೆ ನಂತರ ಬೆಳಗ್ಗೆ 10.45ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕ.ಸಾ.ಪ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯಕ್ರಮದ ಪ್ರಸ್ತಾವನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕಾರ್ಯಕ್ರಮದ ಸ್ವಾಗತ ಕೋರಲಿದ್ದಾರೆ. ತಾ.ಕಸಾಪ ಅಧ್ಯಕ್ಷ ಎಂ.ವಿ. ನಾಗರಾಜರಾವ್ ನಿಕಟ ಪೂರ್ವ ಮಾತಗಳನ್ನಾಡಲಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅಭಿನವ ಭಕ್ತಶಿರೋಮಣಿ ಸಿ.ಬಿ. ಮಲ್ಲಪರವರ -ಸಿ.ಡಿ. ಬಿಡುಗಡೆ ಮತ್ತು ಹಿರಿಯ ಸಾಹಿತಿ ಡಾ.ಅಬ್ದುಲ್ಹಮೀದ್ ಪುಸ್ತಕ ಮಳಿಗೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ ರಂಗಾಯಣದ ನಿದರ್ೇಶಕ ಹಾಗೂ ಸಮ್ಮೇಳನಾಧ್ಯಕ್ಷ ಲಿಂಗದೇವರು ಹಳೆಮನೆರವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಸಮಾರಂಭದಲ್ಲಿ ಕವಿ,ಲೇಖಕ ಡಾಸಾ.ಶಿ.ಮರುಳಯ್ಯ ಹಾಗೂ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಚಂದ್ರಪ್ಪ ಸನ್ಮಾನಿತರಾಗುವ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಾಗರತ್ನ ರಾವ್, ಸೃಜನಾ ಅಧ್ಯಕ್ಷೆ ಜಯಮ್ಮ, ಅಕ್ಕಮಹಾದೇವಿ ಮಹಿಳಾ ಸಮಾಜ ಅಧ್ಯಕ್ಷೆ ಭಾರತಿ ನಟರಾಜ್, ವಾಸವಿ ಮಹಿಳಾ ಸಮಾಜದ ಅಧ್ಯಕ್ಷೆ ಸರಸ್ವತಮ್ಮ, ಬನಶಂಕರಿ ಮಹಿಳಾ ಸಮಾಜ ಅಧ್ಯಕ್ಷೆ ಪದ್ಮ ವರದರಾಜು, ಕನಕ ಮಹಿಳಾ ಸಮಾಜ ಅಧ್ಯಕ್ಷೆ ಸುಲೋಚನಮ್ಮ, ಯೋಗಿನಾರಾಯಣ ಬಲಿಜ ಮಹಿಳಾ ಸಮಾಜ ಅಧ್ಯಕ್ಷೆ ಜಯಮ್ಮವೇದಮೂತರ್ಿ, ಅಂಗವಿಕಲರ ಸೇವೆಗಾಗಿ ನಾಗರಾಜು, ಸೋಬಾನೆ ಪದಗಳಿಗಾಗಿ ಲಕ್ಕಮ್ಮ, ಸ್ವತಂತ್ರ ಹೋರಾಟಗಾರರಾದ ಜೋಡಿಕಲ್ಲೇನಹಳ್ಳಿ ಶಿವಪ್ಪ ಬಿ.ಪಿ.ಚನ್ನಪ್ಪ, ಕಲಾವಿದರಾದ ಜಿ.ಎಲ್.ಮಹೇಶ್, ಬಿ.ಮರುಳಪ್ಪ, ಶ್ರಮಜೀವಿ ಅನ್ಸರ್ಪಾಷ, ಹರಿಕಥೆ ಕೆ.ಎನ್.ಶಂಕರಲಿಂಗಯ್ಯ, ಗೃಹ ಕೈಗಾರಿಕೆ ಬಿ.ಎಲ್.ಪಂಕಜ ಚಂದ್ರಶೇಖರ್, ಕೋಲಾಟ ರಂಗಪ್ಪರವರಿಗೆ ಸನ್ಮಾನಿಸಲಿದ್ದಾರೆ.ಸಮಾರಂಭದಲ್ಲಿ ಸಾಹಿತಿ ಆರ್.ಬಸವರಾಜುರವರ ಈಸೂರಿನ ಚಿರಂಜೀವಿಗಳು, ತುಮಕೂರು ಜಿಲ್ಲೆಯ ರಂಗಕಲಾವಿದರು ಮತ್ತು ಎಂ.ವಿ.ನಾಗರಾಜ್ರವರ 100 ಕಥೆ ನೂರಾರು ನೀತಿ, ಗಾಂಧೀಜಿ 100 ಆದರ್ಶಗಳು ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ.ವಿಶೇಷ ಆಹ್ವಾನಿತರಾಗಿ ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಐ ರವಿಪ್ರಸಾದ್, ಮುಖ್ಯಾಧಿಕಾರಿ ಹೊನ್ನಪ್ಪ, ಕೈಗಾರಿಕೋದ್ಯಮಿ ಎನ್.ಎಂ.ಧೃವಕುಮಾರ್, ಜಿ.ಕಾ.ನಿ.ಪ.ಸಂಘದ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾ.ಕಾ.ನಿ.ಪ.ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಉಪಸ್ಥಿತರಿರುವರು.ಚಿಕ್ಕನಾಯಕನಹಳ್ಳಿ,ಜೂ.03: ತಾಲ್ಲೂಕಿನ ಕಂದಿಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಇದೇ 6ರಂದು ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.ಪ್ರತಿ ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ ನಡೆಸಲು ಸಕರ್ಾರಿ ಆದೇಶವಿದ್ದು ಅಂದು ಬೆಳಗ್ಗೆ 11ಗಂಟೆಗೆ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ,ಜೂ.03: ಬುಡಕಟ್ಟು ಪ್ರದೇಶದ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳಿಗೆ ಜಾಗೃತಿ ಶಿಬಿರ ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೇಳಗಳನ್ನು ಸರ್ವ ಶಿಕ್ಷಣದ ಅಭಿಯಾನ, ತಾ.ವಿಭಾಗದದ ಮಾಧ್ಯಕ್ಷ ಮತ್ತು ದಾಖಲೀಕರಣದ ವತಿಯಿಂದ ಇದೇ ಜೂನ್ 3ರಿಂದ 10ರವರೆಗೆ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದ್ದಾರೆ.ಜೂನ್ 3ರಂದು ಪಟ್ಟಣದ ಡಿ.ವಿ.ಪಿ ಬಾಲಕರ ಪ್ರೌಡಶಾಲೆಯಲ್ಲಿ ಚಿ.ನಾ.ಹಳ್ಳಿ ನಗರ, ಬರಗೂರು, ತೀರ್ಥಪುರ ಒಳಪಡುವ ಕ್ಲಸ್ಟರ್ಗಳಿಗೆ, 4ರಂದು ಕಂದಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಕಂದಿಕೆರೆ ಕ್ಲಸ್ಟರ್ಗೆ, ಜೂನ್ 5ರಂದು ಹುಳಿಯಾರು ಹೋಬಳಿಯ ಯುಗಚಿಹಳ್ಳಿ ಸ.ಹಿ.ಪ್ರಾ.ಶಾಲೆಯಲ್ಲಿ ಹುಳಿಯಾರು, ಗಾಣದಾಳು, ಹೊಯ್ಸಳಕಟ್ಟೆ ಕ್ಲಸ್ಟರ್ಗೆ, ಹಂದನಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಹಂದನಕೆರೆ, ಮತಿಘಟ್ಟ, ಯಳನಡು ಕ್ಲಸ್ಟರ್ಗಳಿಗೆ, ಶೆಟ್ಟಿಕೆರೆ ಹೋಬಳಿಯ ಎ.ಪಿ.ಎಂ.ಸಿಯಲ್ಲಿ ಜೆ.ಸಿ.ಪುರ ಕ್ಲಸ್ಟ್ರ್ಗೆ ಮೇಳಗಳನ್ನು ನಡೆಸಲು ತೀಮರ್ಾನಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Wednesday, June 1, 2011

ಆಧಾರ್ ಕಾಡರ್್ ಇಲ್ಲದಿದ್ದರೆ ಭವಿಷ್ಯದಲ್ಲಿ ಆಧಾರವಿಲ್ಲ
ಚಿಕ್ಕನಾಯಕನಹಳ್ಳಿ,ಮೇ.01: ಆಧಾರ್ ಕಾಡರ್್ ಹೊಂದಿಲ್ಲದವರಿಗೆ ಭವಿಷ್ಯದಲ್ಲಿ ಸಕರ್ಾರಿ ಸವಲತ್ತುಗಳು ಸಿಗಲಾರವು ಆದ್ದರಿಂದ ಎಲ್ಲರೂ ಆಧಾರ್ ಕಾಡರ್್ ಪಡೆಯುವುದು ಕಡ್ಡಾಯ , ತಾಲ್ಲೂಕಿನಲ್ಲಿ ಈಗಾಗಲೇ ಶೇ.79ರಷ್ಟು ಜನರು ಕಾಡರ್್ ಹೊಂದಿದ್ದು ಉಳಿದವರು ಕೂಡಲೇ ಕಾಡರ್್ ಹೊಂದುವುದು ಅತ್ಯಗತ್ಯ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ಎರಡುಲಕ್ಷದ ಹನ್ನೆರಡು ಸಾವಿರದ ಅರವತ್ತಮೂರು ಜನರಿದ್ದು ಇದರಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟು ಜನರು ಈಗಾಗಲೇ ಈ ಯೋಜನೆಗೆ ಒಳಪಟ್ಟಿದ್ದಾರೆ ಎಂದರು. ಪ್ರತಿ ದಿವಸ ಸರಾಸರಿ ಒಂದು ಸಾವರದಷ್ಟು ಜನರು ತಮ್ಮ ಗುರುತಿನ ಸಂಖ್ಯೆಯನ್ನು ಪಡೆಯುತ್ತಿದ್ದಾರೆ ಎಂದರು.
ತಾಲ್ಲೂಕಿನಲ್ಲಿ 324 ಹಳ್ಳಿಗಳಿದ್ದು ಗ್ರಾ.ಪಂ.ಕೇಂದ್ರಗಳಲ್ಲಿ ಹಾಗೂ ಪ್ರಮುಖ ಗ್ರಾಮಗಳಲ್ಲಿ ಪೋಟೋ ತೆಗೆಯುವ ಕೇಂದ್ರವನ್ನು ತೆರೆಯಲಾಗಿದೆ ಈ ಕಾರ್ಯಕ್ಕೆ ಆರಂಭದಲ್ಲಿ 23 ಲ್ಯಾಪ್ಟ್ಯಾಪ್ಗಳನ್ನು ಬಳಸಲಾಗುತ್ತಿದ್ದು ಈಗ 25ಲ್ಯಾಪ್ಟ್ಯಾಪ್ಗಳನ್ನು ಉಪಯೋಗಿಸಲಾಗುತ್ತದೆ ಎಂದರು. ಜೂನ್ 15ರೊಳಗೆ ಎಲ್ಲರೂ ಈ ಯೋಜನೆಗೆ ಒಳಪಡಬೇಕೆಂದರು.
ಕೇಂದ್ರ ಸಕರ್ಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ವಿಶಿಷ್ಠ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರು ನೊಂದಣಿ ಮಾಡಿಸಿಕೊಳ್ಳದಿದ್ದದರೆ ಸಕರ್ಾರಿ ಸವಲತ್ತುಗಳಿಗೆ ಅನರ್ಹರಾಗುತ್ತಾರೆ ಎಂದರಲ್ಲದೆ ಆಧಾರ್ ಯೋಜನೆಯಡಿ ನೊಂದಾಣಿ ಮಾಡಿಸದ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಪದಾರ್ಥಗಳನ್ನು ವಿತರಿಸದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದರು.
ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಕರ್ಾರಿ ನೌಕರರು ಆಧಾರ್ ಯೋಜನೆಯಡಿ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯ, ಗುರುತಿನ ಸಂಖ್ಯೆ ಪಡೆಯದ ಸಕರ್ಾರಿ ನೌಕರರಿಗೆ ವೇತನ ಪಾವತಿಸದಂತೆ ಆಯಾ ಇಲಾಖೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರಲ್ಲದೆ ಪೋಲಿಸ್ ಸೇರಿದಂತೆ ಶಾಲಾ ಕಾಲೇಜುಗಳ ಮುಖ್ಯಸ್ಥರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಸೂಚನೆ ನೀಡಲಾಗಿದೆ.