Monday, December 26, 2011



ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ 
ಚಿಕ್ಕನಾಯಕನಹಳ್ಳಿ,ಡಿ.26 : ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ನೇತಾರ, ಕನರ್ಾಟಕ ಕಂಡ, ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಅಗಲಿಕೆ ಕನರ್ಾಟಕಕ್ಕೆ ತುಂಬಲಾರದ ನಷ್ಟ ಎಂದು ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ ಎಂದು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆಯಲ್ಲಿ ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅಪರ್ಿಸಿ ಸಭೆಯು ಮೌನಾಚರಣೆ ಆಚರಿಸಿದರು.
ಬಂಗಾರಪ್ಪನವರು ಬಡವರು, ರೈತರು, ಕೂಲಿ ಕಾಮರ್ಿಕರ ಬಗ್ಗೆ ಅಪಾರ ಕಾಳಜಿ ವಹಿಸಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಗ್ರಾಮೀಣ ಕೃಪಾಂಕ ಹಾಗೂ ವಿಶ್ವ ಆರಾಧನಾ ಮುಂತಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ಜನಪ್ರಿಯರಾದರು ಎಂದರು.
ತಾ.ಪಂ.ಸದಸ್ಯ ನಿರಂಜನ್ ಮಾತನಾಡಿ ಪ್ರಜಾ ಸೋಷಲಿಷ್ಟ್ ಪಾಟರ್ಿಯಿಂದ ತಮ್ಮ ಜೀವನವನ್ನು  ಆರಂಭಿಸಿದ ಬಂಗಾರಪ್ಪ ಏಳು ಬಾರಿ ಶಾಸಕರಾಗಿ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ವಿರೋದ ಪಕ್ಷದ ನಾಯಕರಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಕಟ್ಟ ಕಡೆಯ ಜನತೆಗೆ ಸಕರ್ಾರಿ ಸೌಲಭ್ಯ ತಲುಪಿಸಬೇಕು ಎಂಬ ಆಶಯ ಹೊಂದಿದ್ದ ವ್ಯಕ್ತಿ ಎಂದರು.
ನಡೆಯಬೇಕಿದ್ದ ತಾ.ಪಂ.ಸಾಮಾನ್ಯ ಸಭೆಯನ್ನು ಜನವರಿ 5ಕ್ಕೆ ಮುಂದೂಡಲಾಯಿತು.
ಈ ಸಂದರ್ಭದಲ್ಲಿ ಇ.ಓ. ಎನ್.ಎಂ.ದಯಾನಂದ್, ತಾ.ಪಂ.ಸದಸ್ಯರಾದ ಶಶಿಧರ, ಎಂ.ಎಂ.ಜಗದೀಶ್, ವಸಂತಕುಮಾರ್, ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಜಯಣ್ಣ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು
ಚಿಕ್ಕನಾಯಕನಹಳ್ಳಿ,ಡಿ.26 : ನಮ್ಮ ಗುಲಾಮಗಿರಿತನ ಹೋಗಬೇಕಾದರೆ  ಸಮಾಜದ ಜಾಡ್ಯಗಳನ್ನು ತೊಲಗಿಸುವಲ್ಲಿ  ಕಂಕಣಬದ್ದರಾಗಿ ನಿಂತು, ವಿದೇಶಿ ಸಂಸ್ಕೃತಿಗೆ ಸೆಡ್ಡು ಹೊಡೆದು ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಬೇಕು ಎಂದು ಖ್ಯಾತ ಸಂಗೀತ ನಿದರ್ೇಶಕ ವಿ.ಮನೋಹರ್ ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ನಡೆದ  ಸ್ವರನೂಪುರ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಹೆಣ್ಣಿನ ಶೋಷಣೆಯಾಗುತ್ತಿರುವುದು ಶೋಷಣೆಯ ಸಂಗತಿ, ಜಾಗತಿಕ ವಿದ್ಯಾಮಾನದಲ್ಲಿ ಹಲವು ಬದಲಾವಣೆ ಮೂಲಕ ಹೆಣ್ಣಿನ ಮೇಲೆ ದೌರ್ಜನ್ಯ ಮುಂದುವರೆಯುತ್ತಿದೆ ಎಂದು ಕಳವಳ ವ್ಯಕ್ತಪಡಿದಿರು. 
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವೈವಿದ್ಯಮಯ ಸಂಸ್ಕೃತಿ ನಮ್ಮ ಬದುಕಿನ ಪ್ರತೀಕ, ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದು ಹೊಣೆಗಾರಿಕೆ ನಮ್ಮದಲ್ಲವೆಂಬ ಭಾವನೆಯಿಂದ ಹೊರ ಬರಬೇಕಿದೆ ಎಂದರಲ್ಲದೆ, ದೇಶಕ್ಕಾಗಿ ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿಗಳನ್ನು ಉಳಿಸಿ ಬೆಳಸಬೇಕು. ಗ್ರಾಮಗಳಲ್ಲಿ ಅವರ ಪ್ರತಿಭೆಗಳು ಹೆಚ್ಚಿದೆ ಆದರೆ ಅದು ಹೊರಗೆ ಬರುತ್ತಿಲ್ಲ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ವೇದಿಕೆ ಮೇಲೆ ಬರುಲು ಮೊದಲು ಹಿಂಜರಿಯುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಧೈರ್ಯದಿಂದ ವೇದಿಕೆಗಳನ್ನು ಅಲಕಂರಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಎಂದರು.
ಅಂತರರಾಷ್ಟ್ರೀಯ ಇನ್ನರ್ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷೆ ಶೈಲಜಾಭಟ್ ಮಾತನಾಡಿ ಮಹಿಳೆಯರಿಗಾಗಿ ಹಲವಾರು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಇನ್ನರ್ವೀಲ್ ಕ್ಲಬ್ ಮುಂದಾಗಿದ್ದು, ಕ್ಲಬ್ನ  ಸ್ನೇಹ, ಪ್ರೀತಿ ವಿಶ್ವಾಸದಿಂದ ಮುಂದುವರಿಯಲಿ ಎಂದು ಆಶಿಸಿದರು.
ಸಮಾರಂಭದಲ್ಲಿ ಸೃಷ್ಠಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಜಿಲ್ಲಾ 319ರ ಛೇರ್ಮನ್ ಅಮುತಾಸುರೇಶ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ರಮೇಶ್ಬಾಬು, ರೋಟರಿ ವಿದ್ಯಾಪೀಠದ ಲೋಕನಾಥನಾಯ್ಡು ಮಾತನಾಡಿದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ವೀಣಾಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ತೇಜಾವತಿ ನರೇಂದ್ರಬಾಬು, ಭವಾನಿ ಜಯರಾಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಿಕಾಮೂತರ್ಿ ಪ್ರಾಥರ್ಿಸಿದರೆ, ಪುಷ್ಪವಾಸುದೇವ್ ನಿರೂಪಿಸಿದರು. ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ 
                            
ಚಿಕ್ಕನಾಯಕನಹಳ್ಳಿ,ಡಿ.26 : ತಾಲ್ಲೂಕು, ಜನಪದ ಕಲೆಗಳ ತವರೂರು ಇಲ್ಲಿನ ಜನಪದ  ಕಲಾವಿದರು ಇಲ್ಲಿನ ಜನಪದ ಕಲಾವಿದರು ನಮ್ಮ ನಾಡು ನುಡಿಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪುರಸಭಾಧ್ಯಕ್ಷ ದೊರೆಮುದ್ದಯ್ಯ ಹೇಳಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆದಿತ್ಯಾದಿ ನವಗ್ರಹ ಕೃಪಾ ಪೋಷಿತ ಯಕ್ಷಗಾನ ಬಯಲು ನಾಟಕ ಕಲಾ ಸಂಘದ  ವತಿಯಿಂದ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿ.ಬಿ.ಮಲ್ಲಪ್ಪ, ಪಂಚಲಿಂಗಯ್ಯ, ಈಶ್ವರಪ್ಪರಂತಹವರ ಕಲಾವಿದರ ಜನ್ಮ ತಾಳಿದ ನಾಡಿನಲ್ಲಿ ಕಲೆಯನ್ನು ಉಳಿಸಿ ಬೆಳೆಸುವ ಯತ್ನ ನಡೆಯುತ್ತಿರುವುದು ಸಂತೋಷಕರ ವಿಷಯ ಎಂದ ಅವರು ಎಂ.ರಂಗಯ್ಯ ಹಿರಿಯ ಜನಪದ ಕಲಾವಿದರು ಇವರು ಕಲಾಸಕ್ತರಿಗಾಗಿ ಅವರ ಸ್ಥಳಕ್ಕೆ ಹೋಗಿ ಕಲಾ ಪ್ರದರ್ಶನ ನೀಡುತ್ತಿರುವುದರಿಂದ ಅವರಿಗಾಗಿ ಪುರಸಭೆ ವತಿಯಿಂದ ಸಾರಿಗೆ ವೆಚ್ಚವನ್ನು ನೀಡುವ ಭರವಸೆ ನೀಡಿದರು.
ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ ಸಾಂಸ್ಕೃತಿಕ ಜನಪದ ಕಲೆಯನ್ನು ಹಿರಿಯರು ತೋರಿದ ಮಾರ್ಗದಲ್ಲೇ ಮುಂದುವರಿಯುತ್ತಾ ಜನಪದ ಸಂಸ್ಕೃತಿ ಉಳಿಸಲಿ ಎಂದರು.
ಸಮಾರಂಭದಲ್ಲಿ ಪೂಜಾಕುಣಿತ, ರಂಗಕುಣಿತ, ಪಟಕುಣಿತ, ಚಿಟ್ಟೆಮೇಳ, ಕೋಲಾಟ, ಜನಪದಲಾವಣಿ, ಭಜನೆ, ತತ್ವಪದ ಶಾಲಾಮಕ್ಕಳು ಹಾಗೂ ಕಲಾವಿದರಿಂದ ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ ಪುರಸಭಾ ಸದಸ್ಯ ಸಿ.ಟಿ.ವರದರಾಜು, ದೇವಾಂಗ ಸಂಘದ ಅಧ್ಯಕ್ಷ ಸಿ.ಎಸ್.ಕೋದಂಡರಾಮಯ್ಯ, ಜಯಕೃಷ್ಣ, ಸಿ.ಎ.ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ 




ಚಿಕ್ಕನಾಯಕನಹಳ್ಳಿ,ಡಿ.26 : ಕೇಂದ್ರ ಸಕರ್ಾರ ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ವಿದೇಶಿ ಬೃಹತ್ ಕಂಪನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿರುವುದು ಸ್ವದೇಶಿ ವ್ಯಾಪಾರ ಕ್ಷೇತ್ರದ ಮೇಲೆ ನಡೆಸುತ್ತಿರುವ ಒಂದು ಆಥರ್ಿಕ ಸಮರ ಎಂದು ರಾಜ್ಯ ಸ್ವದೇಶಿ ಜಾಗರಣಾ ಮಂಚ್ನ ಸಂಘಟನಾ ಕಾರ್ಯದಶರ್ಿ ಜಗದೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಸ್ವದೇಶಿ ಜಾಗರಣಮಂಚ್ನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಜನಭರಿತ ಹಾಗೂ ಗ್ರಾಮ ಪ್ರಧಾನ ಆಥರ್ಿಕ ವ್ಯವಸ್ಥೆ ಇರುವ ಭಾರತದಲ್ಲಿ ಇಂದಿಗೂ ಚಿಲ್ಲರೆ ವ್ಯಾಪಾರ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿದೆ, ದೇಶದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಚಿಲ್ಲರೆ ಅಂಗಡಿಗಳಿವೆ, ಸಕರ್ಾರದ ಯಾವುದೇ ನೆರವಿಲ್ಲದೆ 4ಕೋಟಿ ಕುಟುಂಬಗಳು ಈ ವೃತ್ತಿಯಿಂದ ಜೀವನ ನಡೆಸುತ್ತಿವೆ, ಕೇಂದ್ರ ಸಕರ್ಾರ ವಿದೇಶಿ ಕಂಪನಿಗಳ ಪ್ರವೇಶ ಅವಕಾಶ ನೀಡುತ್ತಿರುವುದರಿಂದ ವಾಲ್ಮಾಟರ್್ ಅಮೇರಿಕಾದ ಹೋಂಡಿಪೋ, ರ್ರೋಗರ್, ಪ್ರಾನ್ಸ್ನ ಕ್ಯಾಪೋರ್, ನೆದರ್ಲ್ಯಾಂಡ್ನ ರಾಯಲ್, ಆಯೋಲ್ಡ್ ಮುಂತಾದ ದೈತ್ಯ ವಿದೇಶಿ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ದಾಳಿ ಮಾಡಲು ತಯಾರಿ ನಡೆಸಿವೆ. ಈ ದೈತ್ಯ ಕಂಪನಿಗಳ ಪ್ರವೇಶದಿಂದ ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಠಿ ವಿದೇಶ ಬಂಡವಾಳದ ಹರಿವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯುತ್ತವೆ ಎಂದು ಸಕರ್ಾರಿ ಆಥರ್ಿಕ ತಜ್ಞರು ಕಾಪರ್ೋರೇಟ್ ವಲಯದವರು ಭ್ರಮೆಯಲ್ಲಿದ್ದಾರೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಾಪಾರಕ್ಕೆಂದೇ ಬರುವ ವಿದೇಶಿಯರು ದೇಶದ ಆಡಳಿತದ ಚುಕ್ಕಾಣಿ ಹಿಡಿಯಲು ಮುಂದಾಗುತ್ತಾರೆ, ಉದಾರಣೆಯಾಗಿ   ಬ್ರಿಟೀಷ್ ಆಡಳಿತ ನಡೆದುದ್ದನ್ನು ನೆನಪಿಸಿದರು ಹಾಗೂ  ಸ್ವದೇಶ ವಸ್ತುಗಳನ್ನು ಕೊಳ್ಳವಂತೆ ಕೋರಿದರು.
ಸಮಾರಂಭದಲ್ಲಿ ವರ್ತಕರ ಸಂಘದ ಕಾರ್ಯದಶರ್ಿ ಈಶ್ವರ್ಭಾಗವತ್, ಸ್ವದೇಶಿ ಮಂಚ್ನ ಮೇರುನಾಥ್, ಲಕ್ಷ್ಮಯ್ಯ, ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಶ್ರೀನಿವಾಸಮೂತರ್ಿ ಸ್ವಾಗತಿಸಿ, ಶಂಕರಯ್ಯ ವಂದಿಸಿದರು.