Friday, November 4, 2011
ಚಿಕ್ಕನಾಯಕನಹಳ್ಳಿ,ನ.04 : ಅನುಭವ ಹೊಂದಿದವರ ಹಿತನುಡಿಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಇತರರು ತಿಳಿದುಕೊಂಡರೆ ಲೋಕಜ್ಞಾನದ ಜೊತೆಗೆ ಸಮಾಜದಲ್ಲಿ ಹೇಗೆ ಬಾಳಬೇಕೆಂಬ ಅರಿವು ಮೂಡುತ್ತದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ದೇವಾಂಗ ಬೀದಿಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ನೂತನ ದೇವಾಲಯದ ಪ್ರಾರಂಭೋತ್ಸವದ ಧಾಮರ್ಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಧಾಮರ್ಿಕ ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಅನುಭವದ ಮಾತುಗಳು ವ್ಯಕ್ತವಾಗುವುದಲ್ಲದೆ ಮನಷ್ಯರು ಮನುಷ್ಯರಂತೆ ಜೀವಿಸಲು ಬೇಕಾದ ಅನೇಕ ಗುಣಗಳು ಇರುತ್ತವೆ ಎಂದ ಅವರು ಉಳ್ಳವರು ದೇವಸ್ಥಾನಗಳ ಜೀಣರ್ೋದ್ದಾರಕ್ಕೆ ಶ್ರಮಿಸಬೇಕು ಆಗಲೇ ಮುಂದಿನ ತಲೆಮಾರಿಗೆ ದೇವಸ್ಥಾನಗಳು, ಮಠಮಾನ್ಯಗಳು, ದಾಸೋಹ, ಶೈಕ್ಷಣಿಕ ಇನ್ನಿತರ ಉತ್ತಮ ಕೆಲಸಗಳನ್ನು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ  ಎಂದರು.
ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ  ಸಿ.ಟಿ.ವರದರಾಜು ಮಾತನಾಡಿ ನಮ್ಮ ತಾಲ್ಲೂಕು ಕಲಾರಂಗವಾಗಿ ಹೆಸರುವಾಸಿಯಾಗಿರುವುದು ದೇವಸ್ಥಾನಗಳ ನಿಮರ್ಾಣದಿಂದಲೇ, ಈ ದೇವಸ್ಥಾನಗಳಿಂದ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಉನ್ನತ ಭಾವನೆ ಎಲ್ಲರಲ್ಲಿ ಮೂಡಿ ಕಲಾ ಪ್ರಕಾರ ಮೈಗೂಡುತ್ತದೆ ಎಂದರು.
ಸಮಾರಂಭದಲ್ಲಿ ಹಂಪಿ ಹೇಮಕೂಟ ಗಾಯಿತ್ರಿ ಪೀಠಾಧ್ಯಕ್ಷ ದಯಾನಂದಪುರಿಸ್ವಾಮಿ, ದೇವಾಂಗ ಸೇವಾ ಸಮಾಜದ ಕೆ.ಜೆ.ವೆಂಕಟರಮಣಪ್ಪ, ಪುರಸಭಾ ಸದಸ್ಯ ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ , ಸಿ.ಟಿ.ರಂಗನಾಥ್, ಚಿಕ್ಕನಾರಾಯಣಸ್ವಾಮಿ, ಸಿ.ಟಿ.ಶ್ರೀನಿವಾಸ್, ಸಿ.ಎ.ಕುಮಾರಸ್ವಾಮಿ, ಹಾಗೂ ಹಲವರು ಗಣ್ಯರು ಉಪಸ್ಥಿತರಿದ್ದರು.

ಸಕರ್ಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಸಾಹಿತ್ಯ ಪ್ರಗತಿ ಹೊಂದುತ್ತಿದೆ
ಚಿಕ್ಕನಾಯಕನಹಳ್ಳಿ,ನ.04 : ಸಕರ್ಾರಿ ಶಾಲೆಗಳಲ್ಲಿ ಮಾತ್ರ ಕನ್ನಡದ ಭಾಷೆ, ಸಾಹಿತ್ಯ, ಕನ್ನಡ ಅಭಿಮಾನ ಪ್ರಗತಿ ಹೊಂದುತ್ತಿದೆ  ಎಂದು ಹೆಸರಾಂತ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಬಯಲು ಸಭಾಂಗಣಕ್ಕೆ ಮೇಲ್ಛಾವಣಿ ಕಾರ್ಯಕ್ರಮದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ಉಳಿಸಿ ಬೆಳೆಸುತ್ತಿರುವುದು ಕನ್ನಡ ಶಾಲೆಗಳು, ಕವಿಗಳು, ಸಾಹಿತಿಗಳು ಸಕರ್ಾರಿ ಶಾಲೆಗಳಲ್ಲಿ ಓದಿರುವುದೇ ಇದಕ್ಕೆ ಉದಾಹರಣೆಯಾಗಿದೆ ಎಂದ ಅವರು ಸಿನಿಮಾಗಳಲ್ಲಿ ವಿಕಾರ ಚಿತ್ರಗೀತೆಗಳು ಬರುತ್ತಿವೆ ಇದು ಬದಲಾಗಿ ಸಾಹಿತ್ಯ ಜಾನಪದ ಗೀತೆಗಳು ಮತ್ತೆ ಸೃಷ್ಠಿಯಾಗಬೇಕು ಆಗ ಈಗಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವು ಹೆಚ್ಚಾಗುತ್ತದೆ ಎಂದರು.
ಕುಪ್ಪೂರು ಗದ್ದಿಗೆ ಮಠದ ಪೀಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಕಾತರ್ಿಕ ಮಾಸದಲ್ಲಿ ಪೂತರ್ಿ ದೀಪಾವಳಿ ಆಚರಿಸುವ ಹಾಗೆ ಕನ್ನಡ ಭಾಷೆಗೆ ಇನ್ನಷ್ಟು ಮೆರುಗುಗೊಳಿಸಲು ರಾಜ್ಯೋತ್ಸವವನ್ನು ನವಂಬರ್ 1ರಂದು ಮಾತ್ರವಲ್ಲದೆ ನಿತ್ಯವೂ ಆಚರಿಸಬೇಕು  ಎಂದ ಅವರು ನಮ್ಮ ಸ್ವಾಭಿಮಾನ ಭಾಷೆ ಕನ್ನಡವಾಗಿರಬೇಕು, ಖಾಸಗಿ ಶಾಲೆಗಳಿಂದ ಕನ್ನಡತನಕ್ಕೆ ದಕ್ಕೆಯಾಗುವ ಸ್ಥಿತಿ ಸಂಭವಿಸಿದೆ ಇದು ಬದಲಾಗಬೇಕಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ, ಬಿಜೆಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ) ಉಪಸ್ಥಿತರಿದ್ದರು.