Tuesday, February 26, 2013

         ದೇವಾಲಯದ   ಅಭಿವೃದ್ದಿಗಾಗಿ ಮತದಾನದ ಹಕ್ಕನ್ನೇ ಕಳೆದುಕೊಂಡ ಜನ
                   ಮಾಮೂಲಿನಂತೆ ಹಣದ ತೈಲಿ, ಗುಂಡು ತುಂಡಗಳ ಅಬ್ಬರ
                                                                  (ಚಿಗುರು ಕೊಟಿಗೆಮನೆ)
    •     5ಲಕ್ಷ ರೂ ಕೊಟ್ಟು ಅವಿರೋಧವಾಗಿ ಆಯ್ಕೆಯಾದ  ಸದಸ್ಯ
    •     ಟಿಕೆಟ್ಗಾಗಿ 2 ಲಕ್ಷ ರೂ ದೇವಾಲಯಕ್ಕೆ ಕೊಟ್ಟರು
    •     ಅಬ್ಯಾಥರ್ಿಗಳಿಗಾಗಿ ಕೊನೆ ಕ್ಷಣದಲ್ಲಿ ಪರದಾಡಿದ ರಾಷ್ಟ್ರೀಯ ಪಕ್ಷಗಳು
    •     ಜೆ.ಡಿ.ಎಸ್.ಗೆ ಬಂಡಾಯದ ಬಿಸಿ ತಟ್ಟುತ್ತದೆಯೇ........!?
ಚಿಕ್ಕನಾಯಕನಹಳ್ಳಿ,ಫೆ.24: ಇಲ್ಲಿನ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಣದ ತೈಲಿ, ಬಾಡೂಟದ ಗಮ್ಮತ್ತು ಗುಂಡಿನ ಕರಾಮತ್ತು ಯಥೇಚ್ಚವಾಗಿದ್ದು, ಯುವಕರುಗಳಂತೂ ಬಿಡುವಿಲ್ಲದೆ ಪಾಟರ್ಿಗಳಲ್ಲಿ ಮುಳುಗೇಳುತ್ತಿದ್ದಾರೆ. ಚುನಾವಣೆ ಎಂದ ಮೇಲೆ ಇವೆಲ್ಲಾ ಮಾಮೂಲಿ, ಇಷ್ಟೂ ಇಲ್ಲದೆ ಮೇಲೆ ಅದೆಂತಹ ಚುನಾವಣೆ ಎಂಬಾತ್ತಾಗಿದೆ.! ಆದರೆ ವಿಷಯ ಅದಲ್ಲಾ....... ಇಲ್ಲಿನ ವಾಡರ್್ ಒಂದರಲ್ಲಿ ಅಬ್ಯಾಥರ್ಿಯೊಬ್ಬರಿಂದ 5 ಲಕ್ಷ ರೂ ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಇನ್ನೊಂದು ವಾಡರ್್ನಲ್ಲಿ ನಿಧರ್ಿಷ್ಟ ಪಕ್ಷ ಒಂದರಲ್ಲಿ ಟಿಕೆಟ್ ಪಡೆಯಲು ಗ್ರಾಮದವರಿಗೆ 2 ಲಕ್ಷ ರೂಗಳನ್ನು ದೇಣಿಗೆಯಾಗಿ ಕೊಟ್ಟಿರುವ ಪ್ರಸಂಗವೂ ಕೇಳಿ ಬರುತ್ತಿದೆ.   
ದೇವಾಲಯದ ಅಭಿವೃದ್ದಿಗೆ ದುಡ್ಡು ಪಡೆಯುವ ವಾಡರ್ಿನ ಮತದಾರರು:  ಇಲ್ಲೊಂದು ವಾಡರ್ಿನಲ್ಲಿ ಚುನಾವಣೆಯ ಸಹವಾಸವೇ ಬೇಡ, ನಮಗೆ ಸ್ಪಧರ್ಿಸಲು ಅವಕಾಶವಿಲ್ಲವೆಂದ ಮೇಲೆ, ಯಾರು ಗೆದ್ದು ನಮಗೇನಾಗಬೇಕು ಎಂಬ ಮನೋಧೋರಣೆ ತೆಳೆದಿದ್ದಾರೆ, ಹಾಗಂತ ಅವರು ತೀಮರ್ಾನಿಸಲು ಕಾರಣವೂ ಇಲ್ಲದಿಲ್ಲ, ಅಲ್ಲಿರುವ ಬಹುತೇಕರು ಒಂದು ವರ್ಗಕ್ಕೆ ಸೇರಿದವರು.  ಆದರೆ ಆ ವಾಡರ್ಿಗೆ  ಸಕರ್ಾರ ಮೀಸಲಿಟ್ಟಿರುವ ವರ್ಗವೇ ಬೇರೆ, ಮೀಸಲಾತಿಯಿಂದಾಗಿ  ನಮಗೆ ಚುನಾವಣೆಗೆ ಸ್ಪಧರ್ಿಸುವ ಹಕ್ಕಿಲ್ಲವೆಂದ ಮೇಲೆ, ನಮಗೆ ಮತದಾನದ ಹಕ್ಕೂ ಬೇಡವೆಂಬ ತೀಮರ್ಾನಕ್ಕೆ ಬಂದಿರುವ ಜನ   ಹೇಗಿದ್ದರೂ ನಮ್ಮದು ಹಳ್ಳಿ ಜೀವನ, ನಮಗೆ ಇದೇ ಬೇಕು, ಅದೇ ಬೇಕು ಎಂದು ಕೇಳಿದರೆ ಗೆದ್ದವರ್ಯಾರು ನಮಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಿಲ್ಲ, ಆದ್ದರಿಂದ  ಏನಿದೆಯೋ ಅದಕ್ಕೆ ಹೊಂದಿಕೊಂಡು ಹೋಗುವ ಬಾಳು ನಮ್ಮದು, ಅಂತಹ ಸಂಪತ್ತಿಗೆ ನಾವ್ಯಾಕೆ ಚುನಾವಣೆ ಅಂತ ಕಿತ್ತಾಡಿಕೊಳ್ಳಬೇಕು ಎಂದು ತೀಮರ್ಾನಿಸಿರುವ 7ನೇ ವಾಡರ್ಿನ ಜನ ಚುನಾವಣೆಯ ಸಂದರ್ಭದಲ್ಲಾದರೂ  ಗ್ರಾಮದಲ್ಲಿರುವ ದೇವಾಲಯಗಳ ಅಭಿವೃದ್ದಿ ಪಡಿಸೋಣ ಎಂದು ತೀಮರ್ಾನಿಸಿ, ಕಳೆದ ಬಾರಿಯಿಂದ ಅಲ್ಲಿ ಚುನಾವಣೆ ನಡೆಯದ ರೀತಿ ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಕಳೆದ ಬಾರಿ ಎರಡು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡಿದ್ದರೆ, ಈ ಬಾರಿ ಏಳು ಲಕ್ಷ ರೂಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡುತ್ತಿದ್ದಾರೆ. ಈ ಹಣವನ್ನೆಲ್ಲಾ ಆ ವಾಡರ್್ನಲ್ಲಿರುವ ದೇವಾಲಯಗಳಾದ ಬಸವೇಶ್ವರ, ಮೈಲಾರಲಿಂಗೇಶ್ವರ, ಅರವೇಲಕಮ್ಮ  ದೇವಾಲಯಗಳ ಅಭಿವೃದ್ದಿಗೆ ಬಳಸುತ್ತಿದ್ದಾರೆ. ದೇವಾಲಯದ ಅಭಿವೃದ್ದಿಯೇನೋ ಆಗುತ್ತದೆ...... ಆದರೆ ಪ್ರಜಾಪ್ರಭುತ್ವದ ಗತಿ.!?
ಟಿಕೆಟ್ಗಾಗಿ ಎರಡು ಲಕ್ಷ ರೂ ಕೊಟ್ಟ ಪ್ರಸಂಗ: ಇಲ್ಲಿನ ಪುರಸಭೆಯ ಕೆಲವು ವಾಡರ್್ಗಳ ಮಟ್ಟಿಗೆ ಜೆ.ಡಿ.ಎಸ್. ಬೇರೆ ಪಕ್ಷಗಳಿಗೆ ಹೊಲಿಸಿಕೊಂಡರೆ ಸ್ಟ್ರಾಂಗ್. ಹೀಗಾಗಿ ಜೆ.ಡಿ.ಎಸ್. ಪಕ್ಷದಿಂದ ಟಿಕೆಟ್ ಪಡೆಯುವುದೆಂದರೆ ಒಂದು ರೀತಿ ಅರ್ಧ ಚುನಾವಣೆ ಗೆದ್ದುಕೊಂಡಂತೆ ಹಾಗಾಗಿ ವಾಡರ್್ 2ರಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು, ಈ ತಲೆ ಬಿಸಿ ಕಡಿಮೆ ಮಾಡಿಕೊಳ್ಳಲು ಸ್ಥಳೀಯ ಜೆ.ಡಿ.ಎಸ್ ವರಿಷ್ಟ ಸಿ.ಬಿ.ಸುರೇಶ್ ಬಾಬು ಕೆಲವು ತಂತ್ರಗಾರಿಕೆ ಕಲಿತಿದ್ದಾರೆ. ಕೆಲವು ನಿಧರ್ಿಷ್ಟ ವಾಡರ್್ಗಳಿಗೆ ಟಿಕೆಟ್ ಕೇಳಿದರೆ ಅಲ್ಲಿಯ ಗುಂಪುಗಳನ್ನು ಒಪ್ಪಿಸಿಕೊಂಡು ಅವರನ್ನು ಜೊತೆಯಲ್ಲಿ ಕರೆತರ ಬೇಕು ಆಗ ಮಾತ್ರ ಜೆ.ಡಿ.ಎಸ್. ವರಿಷ್ಟರ ಕೃಪಕಟಾಕ್ಷ ಅವರ ಮೇಲೆ ಬೀಳುತ್ತದೆ, ಅಲ್ಲಿಯವರೆಗೆ ಯಾರು ಎಷ್ಟೇ ಆಪ್ತರಿದ್ದರೂ ಸರಿಯೇ ನಯವಾಗಿ ಸಾಗಾಕುತ್ತಾರೆ. ಅಂತಹ ಸನ್ನಿವೇಶವೇ ವಾಡರ್್ 2ರಲ್ಲೂ ನಿಮರ್ಾಣವಾಯಿತು, ವರಿಷ್ಟರ ಇಷ್ಟಕಷ್ಟಗಳನ್ನು ಹತ್ತಿರದಿಂದ ಬಲ್ಲವರೊಬ್ಬರು ಸೀದಾ ಜೋಗಿಹಳ್ಳಿಗೆ ಹೋಗಿ ಅಲ್ಲಿಯ ಜೆ.ಡಿ.ಎಸ್. ಪಕ್ಷದ ಪ್ರಮುಖರನ್ನೆಲ್ಲಾ ಒಂದೆಡೆ ಸೇರಿಸಿ ಟಿಕೆಟ್ಗಾಗಿ ಹರಾಜು ಕೂಗಿದರು ಆ ಹರಾಜು 2 ಲಕ್ಷ ರೂಗಳಿಗೆ ನಿಂತಿತು. ಆ ಹಣವನ್ನು ಸಂಗ್ರಹಿಸಿಕೊಂಡು ಅಲ್ಲಿಯ ದೇವಾಲಯಕ್ಕೆ ಕೊಟ್ಟರು ಎಂಬುದು ಬಲವಾಗಿ ಕೇಳಿ ಬರುತ್ತಿರುವ ಸುದ್ದಿ.
     ಸದ್ಯದ ಮಟ್ಟಿಗೆ ನಿಜವಾದ ಕಾಳಗವಿರುವುದು 17ನೇ ವಾಡರ್್ನಲ್ಲಿ ಪುನರ್ ಆಯ್ಕೆ ಬಯಸಿ ಕಾಂಗ್ರೆಸ್ನ ಸಿ.ಪಿ.ಮಹೇಶ್ ಇದ್ದರೆ, ಜೆ.ಡಿ.ಎಸ್ನಿಂದ ಸಿ.ಬಿ.ತಿಪ್ಪೇಸ್ವಾಮಿ, ಶಾಸಕ ಸಿ.ಬಿ.ಸುರೇಶ್ ಬಾಬು ರವರು ತಮ್ಮ ಸಹೋದರ ತಿಪ್ಪೇಸ್ವಾಮಿಯವರನ್ನು ಕಣದಲ್ಲಿರಿಸಿದ್ದಾರೆ, ಕಾಂಗ್ರೆಸ್ ಮುಖಂಡ ಕ್ಯಾಪ್ಟನ್ ಸೋಮಶೇಖರ್ರವರ ಸಹೋದರ ಸಿ.ಪಿ.ಮಹೇಶ್, ಸಹೋದರರ ಸಲುವಾಗಿ ಮುಖಂಡರಿಗೆ ಇದು ಪ್ರತಿಷ್ಟೆಯ ಕಣ. ಬಿ.ಜೆ.ಪಿ.ಯಿಂದ ಸಿ.ಎಂ.ಗಂಗಾಧರ್ ಅಜರ್ಿ ಸಲ್ಲಿಸಿದ್ದಾರೆ.
    ಇನ್ನು ವಾಡರ್್ ಒಂದರಲ್ಲಿ ಎಂಟು ಜನ ಅಬ್ಯಾಥರ್ಿಗಳು ಸ್ಪಧರ್ಿಸಿದ್ದು ಅಂತಿಮವಾಗಿ ಕಣದಲ್ಲಿ ಎಷ್ಟು ಮಂದಿ ಇರುತ್ತರೆಂಬುದನ್ನು ಕಾದು ನೋಡಬೇಕಿದೆ, ವಾಡರ್್ 3ರಲ್ಲಿ ಇಬ್ಬರು ಸ್ಪಧರ್ಿಗಳಿದ್ದು ಇಬ್ಬರ ಸೆಣಸಾಟ ನಿಗಧಿಯಾಗಿರುವುದರಿಂದ ಇಲ್ಲಿ ಪಟ್ಟು ಪ್ರತಿ ಪಟ್ಟುಗಳು ಹೇಗಿರುತ್ತವೆ ನೋಡಬೇಕು,
    ಚಿಕ್ಕನಾಯಕನಹಳ್ಳಿ ಪುರಸಭಾ ವ್ಯಾಪ್ತಿಗೆ ಮೂರು ಹಳ್ಳಿಗಳು ಸೇರಿಕೊಳ್ಳುತ್ತವೆ, ಜೋಗಿಹಳ್ಳಿ, ಕುರುಬರಹಳ್ಳಿ, ದಬ್ಬೆಘಟ್ಟ ಈ ಮೂರರಲ್ಲಿ ದಬ್ಬೆಘಟ್ಟ ವಾಡರ್್4, ಇದೊಂದೇ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ಇಲ್ಲದೆ, ದೂರ ಉಳಿದಿರುವುದು ಇಲ್ಲಿ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ.
    5ನೇ ವಾಡರ್್ಗೆ ಹಣದ ತೈಲಿಯನ್ನೇ ಹಿಡಿದು ಹೊರಟಿರುವ ಧೂಳಿನ ಧಣಿ ಇದ್ದಾರೆ, ಪ್ರಗತಿಪರ ಹೋರಾಟದ ನಾಗಕುಮಾರ್ ಇದ್ದಾರೆ, ಎ.ಬಿ.ವಿ.ಪಿ.ಯ ತಾಲೂಕು ಪ್ರಮುಖ್ ಚೇತನ್ ಪ್ರಸಾದ್ ಬಿ.ಜೆ.ಪಿ.ಯಿಂದ ಕಣದಲ್ಲಿದ್ದಾರೆ.
    6ನೇ ವಾಡರ್್ ಮಾಜಿ ಎಂ.ಎಲ್.ಎ. ಲಕ್ಕಪ್ಪನವರ ಪತ್ನಿ ಧರಣಿ  ಪುನರ್ ಆಯ್ಕೆ ಬಯಸಿರುವವರು, ಬಿ.ಜೆ.ಪಿ.ಯ ರೇವಣ್ಣನವರ ಪತ್ನಿ ಮೀನಾಕ್ಷಮ್ಮ ಇದ್ದರೆ ಜೆ.ಡಿ.ಎಸ್.ನವರು ಇಲ್ಲಿ ಮುಸ್ಲಿಂ ಮಹಿಳೆಯ ಮೂಲಕ ಚುನಾವಣೆಗೆ ಹೊರಟಿದ್ದಾರೆ.
    ವಾಡರ್್ 8ರಲ್ಲಿ ಮೂರು ಜನರಿದ್ದು ಇಬ್ಬರು ಒಂದೇ ಕೋಮಿನವರು ಮತ್ತೊಬ್ಬರು ಮುಸ್ಲಿಂ, ವಾಡರ್್ 9 ಇಲ್ಲಿ ರೇಣುಕಮ್ಮ ಪುನರ್ ಆಯ್ಕೆ ಬಯಸಿದ್ದರೆ ಮಾಜಿ ಕೌನ್ಸಿಲರ್ಗಳಾದ ಬಸ್ ರಾಜಣ್ಣ, ಗಾರೆ ಬೀರಪ್ಪ ತಮ್ಮ ಮಡದಿಯನ್ನು ನಿಲ್ಲಿಸಿದ್ದಾರೆ, ಬೋವಿ ಸಮಾಜದ ಸರಸ್ವತಿ ಸತೀಶ್ ಇಲ್ಲಿ ಸ್ಪಧರ್ಿಸಿದ್ದಾರೆ. 10ನೇ ವಾಡರ್ಿನಲ್ಲಿ ಪುನರ್ ಆಯ್ಕೆ ಬಯಸಿ ಜೆ.ಡಿ.ಎಸ್.ನ ರಮೇಶ್ ಸ್ಪಧರ್ಿಸಿದ್ದರೆ, ಹಿರಿಯ ಬಿ.ಜೆ.ಪಿ.ಮುಖಂಡ ಶ್ರೀನಿವಾಸಮೂತರ್ಿ, ಕೆಜೆಪಿಯ ರೇಣುಕಮೂತರ್ಿ, ಕಾಂಗ್ರೆಸ್ನವರೂ ಇಲ್ಲೊಂದು ಅಬ್ಯಾಥರ್ಿಯನ್ನು ಹಾಕಿದ್ದಾರೆ. 11ನೇ ವಾಡರ್್ನಲ್ಲಿ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂತರ್ಿ ಆಯ್ಕೆ ಬಯಸಿದ್ದರೆ, ಕಳೆದ ಸಲ ಅಲ್ಪ ಮತಗಳಲ್ಲಿ ಸೋಲುಂಡ ಬಿ.ಜೆ.ಪಿ.ಯ ಈಶ್ವರಯ್ಯ, ಕಾಂಗ್ರೆಸ್ನ ಕುಮಾರಸ್ವಾಮಿ ಸ್ಪಧರ್ಿಸಿದ್ದಾರೆ.
    12ನೇ ವಾಡರ್್ನಲ್ಲಿ ಕೆ.ಜೆ.ಪಿ.ಯ ಬಾಬು ಸಾಹೇಬ್ ಎರಡನೇ ಬಾರಿಗೆ ಸದಸ್ಯನಾಗವು ಕನಸು ಕಂಡಿದ್ದರೆ, ಜೆ.ಡಿ.ಎಸ್ನಲ್ಲಿ ದೇವಾಂಗ ಸಮಾಜದ ಹಿರಿಯರಾದ  ತಿಮ್ಮಪ್ಪನವರನ್ನು ನಿಲ್ಲಿಸಿದ್ದಾರೆ, ಬಿ.ಜೆ.ಪಿ.ಯ ಧನಪಾಲ್, ಕಾಂಗ್ರೆಸ್ನ ಜಯಲಕ್ಷ್ಮಿ ತೊಡರಗಾಲು ಸ್ಕಿಂನವರು. 13ನೇ ವಾಡರ್್ನ ಜೆ.ಡಿ.ಎಸ್ನ ಹಳೇ ಹುಲಿ ಸಿ.ಎಂ.ರಂಗಸ್ವಾಮಿ ಕಣದಲ್ಲಿದ್ದಾರೆ, ಗೋಪಾಲಕೃಷ್ಣ, ಯಶೋಧಮ್ಮ ಏನು ಮಾಡುತ್ತಾರೊ ನೋಡಬೇಕು. 14ನೇ ವಾಡರ್್ನಿಂದ ಜೆ.ಡಿ.ಎಸ್ನಿಂದ ಎಚ್.ಬಿ.ಪ್ರಕಾಶ್ ಇದ್ದಾರೆ ಕಳೆದ ಬಾರಿ ಇಲ್ಲಿ ಸೋಲುಂಡವರು, ಬಿ.ಜೆ.ಪಿ.ಯ ಸಿ.ಕೆ.ಶಾಂತಕುಮಾರ್, ಕಾಂಗ್ರೆಸ್ನ ಕೃಷ್ಣೇಗೌಡ, ಕೆಜೆಪಿಯಿಂದ ಶಶಿಕುಮಾರ್  ಅಜರ್ಿ ಸಲ್ಲಿಸಿದ್ದಾರೆ. 15ನೇ ವಾಡರ್್ನಲ್ಲಿ ಕಾಂಗ್ರೆಸ್ನ ಸಿ.ಬಸವರಾಜು ಅಪ್ಪನ ಕಾಲದಿಂದ ಪುರಸಭೆ ಪ್ರವೇಶವನ್ನು ಮಿಸ್ ಮಾಡಿಕೊಂಡವರಲ್ಲ, ಜೆ.ಡಿ.ಎಸ್.ನ ಮಲ್ಲೇಶಯ್ಯ ಕೆ.ಜೆ.ಪಿ.ಯ ಮಹಮದ್ ಸುಹೇಲ್ ಇದ್ದಾರೆ.
    16ನೇ ವಾಡರ್್ ಮುಸ್ಲಿಂರೇ ಅಧಿಕವಾಗಿರುವ ಈ ವಾಡರ್್ನಲ್ಲಿ ಮೂರು ಪಾಟರ್ಿಯವರು  ಒಂದೇ ಧರ್ಮದವರನ್ನೇ ಕಣಕ್ಕಿಳಿಸಿದ್ದಾರೆ. 18ನೇ ವಾಡರ್್ ಇಲ್ಲಿನ ದೇವಿ ನಾಟಕ ಸಂಘದವರು ಪ್ರಬಲಬಹುತೇಕ ಜೆ.ಡಿ.ಎಸ್. ವಾಡರ್್ ಎಂದೇ ಗುರುತಿಸಿಕೊಂಡಿದೆ ಎಲ್ ಪ್ರೇಮ ಅಬ್ಯಾಥರ್ಿ ಆದ್ದರಿಂದ ಕಾಂಗ್ರೆಸ್ನ ಸಿ.ಎಲ್.ಶಾಂತಮ್ಮ ಯಾವ ತಂತ್ರ ಮಾಡುತ್ತಾರೆ ನೋಡಬೇಕು.19 ನೇ ವಾಡರ್್ನಿಂದ ಸಿ.ಟಿ.ದಯಾನಂದ್ ಜೆ.ಡಿ.ಎಸ್ ಅಬ್ಯಾಥರ್ಿ ಇವರು ಶಾಸಕ ಸಿ.ಬಿ.ಸುರೇಶ್ ಬಾಬು ರವರ ದಾಯಾದಿ, ಪಕ್ಷೇತರರಾಗಿ ಲೋಕೇಶ್ ಕಾಂಗ್ರೆಸ್ನಿಂದ ಕಳೆದ ಬಾರಿ ಸೋಲುಂಡ ಲಕ್ಷ್ಮಯ್ಯ ಅಬ್ಯಾಥರ್ಿ. 20ನೇ ವಾಡರ್್ ಇಲ್ಲಿ ಜೆ.ಡಿ.ಎಸ್.ನ ಸಿ.ಆರ್.ಗೀತ ಸ್ಟ್ರಾಂಗ್, ಬಿ.ಜೆ.ಪಿ.ಯ ಶಕುಂತಲಮ್ಮ ಅಜರ್ಿ ಹಾಕಿದ್ದಾರೆ. 21ನೇ ವಾಡರ್್ನಲ್ಲಿ ಜೆ.ಡಿ.ಎಸ್.ನ  ಪುಷ್ಪಾವತಿ, ಬಿ.ಜೆ.ಪಿ.ಯ ಹೇಮಾವತಿ ಸ್ಪಧರ್ಿಸಿದ್ದಾರೆ.22ನೇ ವಾಡರ್್ನಿಂದ ಜೆ.ಡಿ.ಎಸ್.ನ ರೇಣುಕಮ್ಮ ಸ್ಟ್ರಾಂಗ್, ಬಿ.ಜೆ.ಪಿ.ಯ ಮಾಲ ಏನು ಮಾಡುತ್ತಾರೆ ನೋಡಬೇಕು, 23ನೇ ವಾಡರ್್ನಲ್ಲಿ ಜೆ.ಡಿ.ಎಸ್ನಿಂದ ಅಶೋಕ, ಬಿ.ಜೆ.ಪಿ.ಯಿಂದ ಗಂಗಾಧರಯ್ಯ, ಕಾಂಗ್ರೆಸ್ನ ನಿವರ್ಾಣಸಿದ್ದಯ್ಯ, ಬಿ.ಎಸ್.ಆರ್ನಿಂದ ಲಿಂಗದೇವರು ಸ್ಪಧರ್ಿಸಿದ್ದಾರೆ ಇದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ.
 


ಗುಡ್ಡಕ್ಕೆ ಬೆಂಕಿ ಇಡಬೇಡಿ, ಜೀವ ಪ್ರಭೇದಗಳನ್ನು                 ಸುಡಬೇಡಿ: ಪರಿಸರ ಕಾರ್ಯಕರ್ತರು
                                   
ಚಿಕ್ಕನಾಯಕನಹಳ್ಳಿ,ಫೆ.24:ತಾಲ್ಲೂಕಿನ ಮದಲಿಂಗನ ಕಣಿವೆ ಮತ್ತು ತೀರ್ಥ ರಾಮಲಿಂಗೇಶ್ವರ ಅರಣ್ಯ ಪ್ರದೇಶಗಳು ನೈಸಗರ್ಿಕ ಕಾವಲುಗಾರರಂತಿದ್ದು ನಿರಂತರ ಗಣಿಗಾರಿಕೆ ಮತ್ತು ಬೇಸಿಗೆಯಲ್ಲಿ ಬೆಂಕಿ ಆಹುತಿಯಿಂದ ಜರ್ಜರಿತವಾಗಿವೆ.  ಅನಾಹುತವನ್ನು ಅರಿವು ಮಾಡಿಕೊಂಡು ಇದರ ವಿರುದ್ದ ಧ್ವನಿ ಎತ್ತಬೇಕು ಎಂದು ಡಿಸಿಸಿ ಬ್ಯಾಂಕ್ ನಿದೇಶಕ ಸಿಂಗದಹಳ್ಳಿ ರಾಜಕುಮಾರ್ ಹೇಳಿದರು.
  ಭಾನುವಾರ ಗುಡ್ಡಗಳನ್ನು ಬೆಂಕಿಯಿಂದ ಕಾಪಾಡಿ ಎಂಬ ಜನಜಾಗೃತಿ ಮೋಟಾರ್ ಸೈಕಲ್ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.   ಗುಡ್ಡದ ತಪ್ಪಲಿನ ಜನರು ತಮಗೆ ಗೊತ್ತಿಲ್ಲದೆ ಬೀಡಿಕಟ್ಟಲು ತೂಬರೆ ಎಲೆ ಚನ್ನಾಗಿ ಬರುತ್ತವೆ,ಭಾದೆ ಹುಲ್ಲು ಚಿಗುರುತ್ತದೆ ಎಂಬ ಮೂಡನಂಬಿಕೆಯಿಂದ ಗುಡ್ಡಗಳಿಗೆ ಬೆಂಕಿ ಹಾಕುತ್ತಿದ್ದು ನೂರಾರು ಬಗೆಯ ಪ್ರಾಣಿ ಪಕ್ಷಿಗಳು,ಸಾವಿರಾರು ಸಸ್ಯ ಪ್ರಭೇದಗಳು,ಲಕ್ಷಾಂತರ ಕೀಟ ವೈವಿಧ್ಯಗಳು ಮತ್ತು ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತಿದ್ದು ಕಾಡುಪ್ರಾಣಿಗಳು ಆಶ್ರಯ ಅರಸಿ ಹಳ್ಳಿಗಳಿಗೆ ನುಗ್ಗುತ್ತಿವೆ ಮತ್ತು ತೆಂಗಿನ ತೋಟಗಳಿಗೆ ನುಸಿಪೀಡೆಯಂತಹ ರೋಗಗಳು ತಗುಲಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.
 ಪ್ರಾಸ್ತಾವಿಕ ಮಾತುಗಳನ್ನಾಡಿದ ಸೃಜನಾ ಸಂಘಟನೆಯ ಎನ್. ಇಂದಿರಮ್ಮ ಅರಣ್ಯ ಇಲಾಖೆ,ಸಾರ್ವಜನಿಕ ಅರಣ್ಯ ಸಮಿತಿಗಳು ಕಣ್ಣುಮುಚ್ಚಿಕುಳಿತಿದ್ದು ರಾಷ್ಟೀಯ ಉಧ್ಯಾನಗಳು ಮತ್ತು ಅಭಯಾರಣ್ಯಗಳಿಗೆ ಬೆಂಕಿ ಬಿದ್ದಾಗ ಮಾತ್ರ ಕಣ್ಣು ಬಿಡುತ್ತವೆ ಆದ್ದರಿಂದ ಎಚ್ಚರದಿಂದಿದ್ದು ನಮ್ಮ ಪರಿಸರವನ್ನು ನಾವೇ ಕಾಪಾಡಿಕೊಳ್ಳಬೇಕು ಈ ಸದುದ್ದೇಶದಿಂದ ಗುಡ್ಡಗಲ ಹೆಬ್ಬಾಗಿಲಿನಂತಿರುವ ಹೊಸಹಳ್ಳಿಯಿಂದ ಜಾಥಾ ಪ್ರಾರಂಭವಾಗುತ್ತಿದೆ ಎಂದರು.
 ಪರಿಸರ ಗೀತೆಗಳನ್ನು ಹಾಡುತ್ತ,ಘೋಣೆಗಳನ್ನು ಕೂಗುತ್ತ,ಮದಲಿಂಗನ ಕಣಿವೆ ತಪ್ಪಲಲ್ಲಿ ಬರುವ ಹಳ್ಳಿಗಳಲ್ಲಿ ಪರಿಸರ ಜಾಗೃತಿ ಸಭೆಗಳನ್ನು ನಡೆಸುತ್ತ ಜಾಣೇಹಾರ್,ಕೆಂಪರಾಯನಹಟ್ಟಿ,ಅಜ್ಜೀಗುಡ್ಡೆ, ಕಾತ್ರಿಕೆಹಾಳ್ ಮೂಲಕ ಸಾಗಿದ ಜಾಥಾ ತೀರ್ಥರಾಮೇಶ್ವರ ವಜ್ರದಲ್ಲಿ ಸಭೇ ನಡೆಸಿತು.ಸಭೆಯಲ್ಲಿ ಅರಣ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಹಶಿಲ್ದಾರ್ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸುಲು ತೀಮರ್ಾನಿಸಲಾಯಿತು. ಮತ್ತು ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗು ಯುವಕರಿಗೆ ವಿಚಾರ ಸಂಕಿರಣ ಆಯೋಜಿಸುವ ತೀಮರ್ಾನ ಕೈಗೊಳ್ಳಲಾಯಿತು.
  ಕೆಂಪರಾಯನಹಟ್ಟಿಯ ಲಕ್ಮಣ ಅರಣ್ಯ ಇಲಾಖೆಯವರೇ ಗುಡ್ಡಕ್ಕೆ ಬೆಂಕಿ ಇಡುತ್ತಾರೆ ಎಂದು ದೂರಿದರು. ಈ ಸಂಬಂಧ ಪತ್ರಿಕೆ ಅರಣ್ಯ ಇಲಾಖೆಯನ್ನು ಸಂಪಕರ್ಿಸಿದಾಗ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಫೈರ್ ಲೈನ್ ಮಾಡುತ್ತೇವೆ. ಒಬ್ಬ ವನಪಾಲಕ ಇದ್ದು ಬೆಂಕಿ ಅನಾಹುತವನ್ನು ಮಾನೀಟರಿಂಗ್ ಮಾಡುವುದು ಕಷ್ಟವಾಗುತ್ತಿದೆ ಎಂದು ಎಎಫ್ಒ ಮಾರುತಿ ಸ್ವಷ್ಟೀಕರಣ ನೀಡಿದರು ನಂತರ ಯರೇಕಟ್ಟೆ,ತೀರ್ಥಪುರ,ದೊಡ್ಡರಾಂಪುರ,ದೊ.ಗೊಲ್ಲರಹಟ್ಟಿ,ಚಿಕ್ಕರಾಂಪುರ ಮಾರ್ಗವಾಗಿಸಾಗಿ ಸುಮಾರು 50 ಕಿ.ಮಿ.ಸಾಗಿ ಸಂಜೆ 8.30ಕ್ಕೆ ಚಿಕ್ಕರಾಂಪುರ ಗೊಲ್ಲರಹಟ್ಟಿಯಲ್ಲಿ ಸಮಾರೋಪಗೊಂಡಿತು.
     ಜಾಥಾದಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾ ಕೇಶವಮೂತರ್ಿ,ವಿಜ್ಷಾನ ಸಂಘದ ರಾಮಕೃಷ್ಣಪ್ಪ, ಸೃಜನಾ ಅಧ್ಯಕ್ಷೆ ಜಯ್ಯಮ್ಮ, ಎಂ.ಎಸ್.ರವಿಕುಮಾರ್,ಸಿ.ಬಿ.ರೇಣುಕಸ್ವಾಮಿ,ಜಯದೇವ ಮೂತರ್ಿ,ಕವಿಯತ್ರಿ ಪುಷ್ಪಾಶಿವಣ್ಣ, ರಾಧಾಕೃಷ್ಣ, ಕವಿತಾ ಚನ್ನಬಸಪ್ಪ,ರಾಮಕುಮಾರ್,ಈಶ್ವರಪ್ಪ,ದಿನಕರ್ ಲೇಖಕ ಅಣೇಕಟ್ಟೆ ವಿಶ್ವನಾಥ್ ಮುಂತಾದವರು ಹಾಗು ಶಾಲಾ ಕಾಲೇಜು ವಿದ್ಯಾಥರ್ಿಗಳು ಭಾಗವಹಿಸಿದ್ದರು.
ರಸಗೊಬ್ಬರ ಸಬ್ಸಿಡಿ ನೀಡಲು ಬ್ಯಾಂಕ್ ಖಾತೆಗೆ ಆಧಾರ್ ಕಾಡರ್್ ಸೇರಿಸಲು ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಫೆ.26 : 2013-14 ನೇ ಸಾಲಿನಿಂದ ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ರಸಗೊಬ್ಬರ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಆಧಾರ್ ಕಾಡರ್್ ಕೋರ್ ಬ್ಯಾಂಕಿಂಗ್ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು ರೈತ ಭಾಂದವರು ಆಧಾರ್ ಕಾಡರ್್ ನಮೂದಿಸಿ ಬ್ಯಾಂಕ್ ಖಾತೆ ತೆರೆಯುವುದು ಅವಶ್ಯಕವಾಗಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ರಸಗೊಬ್ಬರಗಳ ಪೂರ್ಣದರ ಪಾವತಿಸಿ ಹೊಂದಿದ ಹಾಗೂ ಟಜಿಟ  ನಲ್ಲಿ ನೊಂದಾಯಿತ ರಸಗೊಬ್ಬರ ಮಾರಾಟಗಾರರಿಂದ ಖರೀದಿಸಬಹುದಾಗಿದೆ. ಆದುದರಿಂದ ಖಾತೆ ಹೊಂದಿರುವವರು ಮಾತ್ರ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ, ಆದುದರಿಂದ ಕೋರ್ ಆಧಾರ್ ಲಿಂಕ್ ಖಾತೆಗಳನ್ನು ಆದಷ್ಟು ಬೇಗ ಮಾಡಿಸಿಕೊಳ್ಳಲು ರೈತ ಭಾಂದವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
   ತೋಟಕ್ಕೆ ಬೆಂಕಿ: ಅಡಿಕೆ, ತೆಂಗು, ಬಾಳೆ ಗಿಡಗಳು ಭಸ್ಮ
                                       
ಚಿಕ್ಕನಾಯಕನಹಳ್ಳಿ,ಫೆ.26: ಪಟ್ಟಣದ ಹೊರವಲಯದಲ್ಲಿರುವ ದಾಸಿಹಳ್ಳಿ ಗ್ರಾಮದ ತೋಟಕ್ಕೆ ಬೆಂಕಿ ತಗಲಿ ಸುಮಾರು ಮೂರು ಲಕ್ಷ ರೂಗಳಿಗೂ ಹೆಚ್ಚು ಬೆಲೆ ಬಾಳು ಮರ,ಗಿಡ ಮತ್ತು ಫಸಲುಗಳು ಬೆಂಕಿಗಾಹುತಿಯಾಗಿದೆ.
    ಪಟ್ಟಣದ ಗುಡಿದಾಸಿ ಮಂಜುನಾಥ್ ಎಂಬುವರಿಗೆ ಸೇರಿದ ತೋಟಕ್ಕೆ ಇದೇ 25ರಂದು ಆಕಸ್ಮಿಕವಾಗಿ ಬೆಂಕಿ ತಗಲಿದ್ದರಿಂದ ತೋಟದಲ್ಲಿದ್ದ ಐದು ನೂರು ಅಡಿಕೆ ಮರ, ನಾಲ್ಕು ನೂರು ಬಾಳೆ ಗಿಡ ಮತ್ತು ಐವತ್ತು ತೆಂಗಿನ ಮರಗಳು ಬೆಂಕಿ ಆಹುಯಾಗಿದೆ. ಜೊತೆಗೆ ಪಕ್ಕದ ತೋಟಕ್ಕೂ ಬೆಂಕಿ ತಗಲಿದ್ದು ಆ ತೋಟದಲ್ಲಿನ ಅಡಿಕೆ ಮರ, ಹಾಗೂ ಎಲೆ ಬಳ್ಳಿಗಳಿಗೂ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಸಕರ್ಾರಿ ಪ್ರೌಢಶಾಲಾ ಸ.ಶಿ.ಗಳ ಜೇಷ್ಠತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.26: ಸಕರ್ಾರಿ ಪ್ರೌಢಶಾಲೆ ಸಹ ಶಿಕ್ಷಕರ ಗ್ರೇಡ್-2ರ ಜೇಷ್ಠತಾ ಪಟ್ಟಿಯನ್ನು ಇಲಾಖೆಯ ವೆಬ್ ಸೈಟ್ನಲ್ಲಿ ಪ್ರಕಟಸಿಲಾಗಿದೆ, ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಮಾಚರ್ಿ 4ರೊಳಗೆ ಕಛೇರಿಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸುವಂತೆ ಬಿ.ಇ.ಓ.ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
    ಜೇಷ್ಠತಾ ಪಟ್ಟಿಯನ್ನು 01.01.2008 ರಿಂದ 31.02.2010 ರವರೆಗೆ ಅಂತಿಮಗೊಳಿಸಿದ್ದು ಪಟ್ಟಿಯಲ್ಲಿ ಬಿಟ್ಟುಹೋಗಿರುವ ಪ್ರಕರಣಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದ್ದು ಇಲಾಖೆಯ ವೆಬ್ ಸೈಟ್ ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ <ಣಣಠಿ://ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ>  ಪರಿಶೀಲಿಸಲು ಸಂಬಂಧಿಸಿದ ಶಿಕ್ಷಕರಿಗೆ ತಿಳಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.