Monday, July 8, 2013

ಡಿ.ಸಿ.ಸಾಹೇಬರೇ ನಮ್ಮ ಗೋಳು ಕೇಳುವಿರಾ..............(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.08 : ಆಧಾರ್ ಕಾಡರ್್ಗೆ ನೊಂದಾಯಿಸಿಕೊಳ್ಳಲು ಪರಿತಪಿಸುತ್ತಿರುವ ಜನರ ಗೋಳು ಕೇಳುವವರೇ ಇಲ್ಲವಾಗಿದೆ. ತಾಲ್ಲೂಕಿನ ಐವತ್ತು ಸಾವಿರಕ್ಕೂ ಅಧಿಕ ಜನರು ಇನ್ನೂ ಆಧಾರ್ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಅವರೆಲ್ಲಾ ಈಗ ನಾ ಮುಂದು ತಾ ಮುಂದು ಎಂದು ಮುಗೀಬೀಳುತ್ತಿದ್ದಾರೆ.
ಇರುವ ಎರಡು ಕಂಪ್ಯೂಟರ್ ತಾಲ್ಲೂಕಿನ 5ಹೋಬಳಿಯ 50ಸಾವಿರ ಜನರ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಆದರೆ ಒಬ್ಬರು ತಮ್ಮ ಹೆಸರು ನೊಂದಾಯಿಸಿಕೊಂಡು ಪೋಟೋ ತೆಗೆಸಿಕೊಂಡು ಫಿಂಗರ್ ಪ್ರಿಂಟ್ ಪಡೆಯಲು ಕನಿಷ್ಟ ಇಪ್ಪತ್ತು ನಿಮಿಷ ತೆಗೆದುಕೊಳ್ಳುತ್ತದೆ. ಆದ್ದರಿಂದ ಆಧಾರ್ ಯೋಜನೆಯ ಕಂಪನಿಯವರು ಒಂದು ದಿನಕ್ಕೆ 70 ಜನರಿಗೆ ಮಾತ್ರ ಟೋಕನ್ ಕೊಡುವುದರಿಂದ ಹಳ್ಳಿ ಭಾಗದ ಜನ ರಾತ್ರಿಯಲ್ಲಾ ಕಛೇರಿ ಬಾಗಿಲ ಕಾಯುತ್ತಾ ಅಲ್ಲೆ ಊ.ಮ.ಹೇ (ಊಟ, ಮಲಗುವುದು, ಹೇ....) ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. 
ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಮೀನುಗಾರಿಕೆ ಇಲಾಖೆ ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಮಕ್ಕಳು ಮರಿಯಾದಿಯಾಗಿ ಮನೆಯಲ್ಲಿರುವ ಮುದುಕರು ತದಕರೆಲ್ಲಾ ಬೆಳಗಿನ ಜಾವ 3ಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈಗಾಗಿ ತಾಲ್ಲೂಕಿನ ಎಲ್ಲಾ ಜನರು ಏನೇ ಬರಲಿ ಆಧಾರ್ ಇರಲಿ ಎಂಬ ಘೋಷಣೆಗೆ ಕಟ್ಟು ಬಿದ್ದು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹೊರಗಡೆ ಕೆಲಸಕ್ಕಾಗಿ ವಲಸೆ ಹೋಗಿರುವವರೆಲ್ಲಾ ಇಲ್ಲಿಗೆ ಬಂದು ಆಧಾರ್ ಕಾಡರ್್ ಪಡೆಯುತ್ತಿರುವುದರಿಂದ ಇರುವ ಎರಡು ಕಂಪ್ಯೂಟರ್ಗೆ ಒತ್ತಡ ಹೆಚ್ಚಾಗಿದೆ.
ಆಧಾರ್ ಕಾಡರ್್ ಏಕೆ ಬೇಕು? : ಸಿ.ಎಂ.ಸಿದ್ರಾಮಯ್ಯನವರು ಒಂದು ರೂ.ಗೆ ಒಂದು ಕೆ.ಜಿ.ಅಕ್ಕಿ ಘೋಷಿಸಿದ್ದೇ ತಡ ರೇಷನ್ ಕಾಡರ್್ ಬೇಡಿಕೆ ಜಾಸ್ತಿಯಾಯಿತು. ರೇಷನ್ ಕಾಡರ್್ ಬೇಕು ಎಂದರೆ ಆಧಾರ್ ಕಾಡರ್್ ಇರಲೇ ಬೇಕು. ಇನ್ನು ಅಡುಗೆ ಅನಿಲದ ಸಬ್ಸಿಡಿ ಬೇಕು ಎಂದರೂ ಆಧಾರ್ ಕಾಡರ್್ ಲಿಂಕ್ ಮಾಡಿಸಬೇಕು, ನೌಕರರು ಸೇರಿದಂತೆ ಬ್ಯಾಂಕಿನಲ್ಲಿ ವ್ಯವಹರಿಸುವವರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿಸಬೇಕು ಈಗಾಗಿ ಏಕಾಏಕಿ ಆಧಾರ್ಗೆ ಬೇಡಿಕೆ ಹೆಚ್ಚಿದೆ.
ಆಧಾರ್ ಕಾಡರ್್ಗಾಗಿ ಹುಳಿಯಾರು, ಹಂದನಕೆರೆ, ಕಂದಿಕೆರೆ ಜನರು ಅತೀ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಹುಳಿಯಾರು ಹೋಬಳಿಯ ದಸೂಡಿ, ದಬ್ಬಗುಂಟೆ ಪಂಚಾಯಿತಿಗಳ ಜನರು ಹಂದನಕೆರೆಯ ದೊಡ್ಡಎಣ್ಣೆಗೆರೆ, ಚಿಕ್ಕೆಣ್ಣೆಗೆರೆ ಭಾಗದ ಜನರು ಚಿ.ನಾ.ಹಳ್ಳಿಗೆ ಬರಬೇಕೆಂದರೆ 50ರಿಂದ 60 ಕಿ.ಮೀ ದೂರದಿಂದ ಬರಬೇಕು, ಅವರು ಒಂದು ದಿವಸ ಇಲ್ಲಿಗೆ ಬಂದು ಹೋಗಲಿಕ್ಕೆ ಒಬ್ಬರಿಗೆ ಒಂದು ನೂರು ರೂಗಳಾದದರೂ ಬೇಕು, ಇನ್ನು ಮನೆ ಮಂದಿಯಲ್ಲಾ ಬಂದರೆ ಅವರಿಗೆ ತಿಂಡಿ ಊಟದ ಪಾಡೇನು, ಕನಿಷ್ಟವೆಂದರೂ ಆಧಾರ್ ಕಾಡರ್್ ಮಾಡಿಸಲೆಂದೇ ಏಳು ನೂರರಿಂದ ಸಾವಿರ ರೂಗಳ ಖಚರ್ು ತಗಲುತ್ತದೆ ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಹಣಕಾಸಿನ ತೊಂದರೆ ಒಂದಡೆಯಾದರೆ ಈ ಕೆಲಸಕ್ಕೆ ಚಿ.ನಾ.ಹಳ್ಳಿಗೆ ಬಂದು ಹೋಗುವುದರಿಂದ ಕೆಲಸಕ್ಕೆ ಹೋಗಲಾಗದಿರುವುದರಿಂದ ಕೂಲಿ ಹಣವೂ ಇಲ್ಲದೆ ಪರದಾಡುತ್ತಿದ್ದೇವೆ, ಕನಿಷ್ಟ ಈ ಹೆಸರು ನೊಂದಾಯಿಸುವ ಪೋಟೋ ತೆಗೆಸುವ ವ್ಯವಸ್ಥೆಯನ್ನು ಹೋಬಳಿ ಕೇಂದ್ರಗಳಲ್ಲಾದರೂ ಮಾಡಿದರೆ ಅಷ್ಟರ ಮಟ್ಟಿಗೆ ಡಿ.ಸಿ. ಸಾಹೇಬ್ರು ಬಡವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ದಸೂಡಿ ಗ್ರಾಮದ ಮುತ್ಯಾನಾಯ್ಕ. 


ನಾನು ಚಿಕ್ಕಮಂಗಳೂರಿನ ಕಾಫಿ ಎಸ್ಟೇಟ್ನಲ್ಲಿದ್ದೇನೆ,   ಆಧಾರ್ ಕಾಡರ್್ ಮಾಡಿಸಲು ಕಳೆದ ಮೂರು ದಿನಗಳಿಂದ ಪರದಾಡುತ್ತಿದ್ದೇನೆ ಇನ್ನೂ ಆಗಿಲ್ಲ ಮೂರು ದಿನಗಳ ಸಂಬಳವೂ ಇಲ್ಲ, ಕಾಡರ್್ ನೊಂದಾಣಿನೂ ಆಗಿಲ್ಲ ಅಜ್ಜಿ ತಾತನನ್ನು ಕರೆದುಕೊಂಡು ಚಿ.ನಾ.ಹಳ್ಳಿಗೆ ಬರುವುದು ಬಹಳ ತ್ರಾಸದಾಯಕವಾಗಿದೆ.
-ಸಂಗಮೇಶ್, ಚಿಕ್ಕೇಣ್ಣೆಗೆರೆ 

ದಸೂಡಿಯಿಂದ ಚಿ.ನಾ.ಹಳ್ಳಿಗೆ ನಾವು ಐದು ಜನರು ಬಂದು ಆಧಾರ್ ಕಾಡರ್್ ಮಾಡಿಸಲು ನಮ್ಮ ಕುಟುಂಬಕ್ಕೆ ಕನಿಷ್ಟವೆಂದರೂ ಏಳು ನೂರು ಖಚರ್ಾಗುತ್ತಿದೆ, ಜೊತೆಗೆ ಕೂಲಿ ಕೆಲಸಕ್ಕೋಗುವ ನನಗೆ ತುಂಬಾ ಲುಕ್ಸಾನಾಗುತ್ತಿದೆ, ದೂರದೂರುಗಳಲ್ಲಿ ಒಂದೊಂದು ಕೇಂದ್ರಗಳನ್ನು ಒಂದು ತಿಂಗಳ ಮಟ್ಟಿಗಾದರೂ ತೆರೆದರೆ ಏಷ್ಟೋ ಜನರಿಗೆ ಅನುಕೂಲವಾಗುತ್ತೆ.
-ಮಾರಯ್ಯ ದಸೂಡಿ  


ಸರಗಳ್ಳರನ್ನು ಸೆರೆ ಹಿಡಿದಿರುವ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಜೂ.8: ಎರಡು ಪ್ರಕರಣಗಳಲ್ಲಿ ಮಹಿಳೆಯರ ಚಿನ್ನದ ಸರವವನ್ನು ಅಪಹರಿಸಿದ್ದ ಐದು ಮಂದಿ ಸರಗಳ್ಳರನ್ನು ಬಂಧಿಸಿ 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ  ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಮಾಚರ್್ 15ರಂದು ತಾಲ್ಲೂಕಿನ ಶೆಟ್ಟಿಕೆರೆಯ ಎಸ್.ವಿ. ಪ್ರೇಮ ಎಂಬುವರು  ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ದುಷ್ಕಮರ್ಿಗಳು ಅವರ ಕತ್ತಿನಲ್ಲಿದ್ದ ಚಿನ್ನದಸರವನ್ನು ಕಿತ್ತು ಪರಾರಿಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನಗರದ ಸಮೀಪದ ತರಬೇನಹಳ್ಳಿಯ ತುಳಸಮ್ಮ ಎಂಬುವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದ ಚೋರರ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ  ತಾಲ್ಲೂಕಿನ  ಶೆಟ್ಟಿಕೆರೆ ಗ್ರಾಮದ  ಆಚಾರರ ಬೀದಿಯ ವಿಷ್ಣುಕುಮಾರ್, ತೋಟದ ಮನೆ ಶೆಟ್ಟಿಕೆರೆಯ ನಟರಾಜು, ನೆಲಮಂಗಲ ತಾಲ್ಲೂಕಿನ ಬಸವನಹಳ್ಳಿಯ ವಾಲ್ಮೀಕಿನಗರವಾಸಿ ನಟರಾಜು ಮತ್ತು ಸಿ.ಕೃಷ್ಣಪ್ಪ ಹಾಗೂ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಸೋಮಲಾಪುರ ವಾಸಿ ಸಂತೋಷ್  ಅವರಿಂದ 67 ಚಿನ್ನದ ಗುಂಡುಗಳು, 6 ಚೈನು ಪೀಸುಗಳು, 8 ಗ್ರಾಂ ತೂಕದ ಎರಡು  ಚಿನ್ನದ ತಾಳಿ, ಚಿನ್ನದ ಎರಡು ಎಳೆ ಮಾಂಗಲ್ಯಸರದ ಅರ್ಧಭಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರಕರಣಗಳಿಗೆ  ಬಳಸಿದ್ದ ಎರಡು ದ್ವಿಚಕ್ರವಾಹವನ್ನು ಜಪ್ತಿ ಮಾಡಲಾಗಿದೆ. ಈ ತಂಡವನ್ನು ಬಂಧಿಸುವಲ್ಲಿ ಸಿಪಿಐ ಕೆ. ಪ್ರಭಾಕರ್, ಪಿಎಸ್ಐ ಬಿ.ಟಿ. ಗೋವಿಂದ್, ಸಿಬ್ಬಂದಿಗಳಾದ ಚಿಕ್ಕಲಕ್ಕೇಗೌಡ್ರು, ವೆಂಕಟೇಶ್, ರಬ್ಬಾನಿ, ದಯಾನಂದ್ ಹಾಗೂ ತಿಪ್ಪೇಸ್ವಾಮಿ ಯಶಸ್ವಿಯಾಗಿದ್ದಾರೆ.