Thursday, February 28, 2013

ಚಿ.ನಾ.ಹಳ್ಳಿ ಕ್ಷೇತ್ರದ ಮುಂದಿನ ಎಂ.ಎಲ್.ಎ.ಚುನಾವಣೆಯ ಅಬ್ಯಾಥರ್ಿಕೆ.ಎಸ್.ಕಿರಣ್ಕುಮಾರ್. ಬಿ.ಜೆ.ಪಿ.ರಾಜ್ಯಾಧ್ಯಕ್ಷ
                      
ಚಿಕ್ಕನಾಯಕನಹಳ್ಳಿ,ಜ.28 : ಮುಂದಿನ ವಿಧಾನಸಭಾ ಚುನಾವಣೆಗೆ ಭಾಜಪ ಪಕ್ಷದಿಂದ ಕೆ.ಎಸ್.ಕಿರಣ್ಕುಮಾರ್ ಸ್ಪಧರ್ಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಘೋಷಿಸಿದರು.
    ಪಟ್ಟಣದ ಪುರಸಭಾ ವಾಡರ್್ಗಳಿಗೆ ರೋಡ್ ಶೋ ಮೂಲಕ ಭೇಟಿ ನೀಡಿ ನಂತರ ಮಾತನಾಡಿದ ಅವರು ಕಳೆದ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಜಪ ಪಕ್ಷವು ರಾಜ್ಯದ 4970 ಕ್ಷೇತ್ರದಲ್ಲಿ 1400 ಸ್ಥಾನಗಳನ್ನು ಪಡೆದಿತ್ತು, ಈ ಬಾರಿ 2800ಕ್ಕೂ ಹೆಚ್ಚು ಸ್ಥಾನಗಳನ್ನು ಪಕ್ಷ ಪಡೆಯುವ ವಿಶ್ವಾಸವಿದೆ ಎಂದರು.
    ಕಳೆದ 60 ವರ್ಷದಿಂದ ರಾಜ್ಯದಲ್ಲಿ ಆಗದಿರುವ ಅಭಿವೃದ್ದಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಗಿದೆ, ಈ ಕಾರಣದಿಂದಲೇ ರಾಜ್ಯದ ಜನ ಮುಂದೆಯೂ ಬಿಜೆಪಿ ಸಕರ್ಾರವನ್ನು ಅಧಿಕಾರಕ್ಕೆ ತಂದರೆ ನಮ್ಮ ಎಲ್ಲಾ ಯೋಜನೆಗಳೂ ಪೂರ್ಣಗೊಳಲಿದೆ ಎಂದರದಲ್ಲ,  ದೇಶದ ಅಭಿವೃದ್ದಿಯೂ ಬಿಜೆಪಿ ಮುಖಾಂತರವೇ ಆಗಲಿದೆ ಎಂದರು.
    ರಾಜ್ಯದಲ್ಲಿ ಭಾಜಪ ಸಕರ್ಾರ ಆರಂಭಿಸಿರುವ ಕಾಮಗಾರಿಗಳನ್ನು ಪಕ್ಷ ಮತ್ತೆ ಅಧಿಕಾರ ಹಿಡಿದು ಕಾಮಗಾರಿಗಳನ್ನು ಪೂರ್ಣಗೊಳಿಸಲಿದೆ ಎಂದರು.
    ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ತಾಲ್ಲೂಕಿಗೆ ಹರಿಯಲಿರುವ ಹೇಮಾವತಿ ನೀರಿನ ಕಾಮಗಾರಿ ಕೇವಲ ಇನ್ನು ಒಂದು ವಾರದಲ್ಲಿ ಆರಂಭಗೊಳ್ಳಲಿದೆ, ಚಿಕ್ಕನಾಯಕನಹಳ್ಳಿ ಕೆರೆಗೂ ಸ್ವಾಭಾವಿಕವಾಗಿ ನೀರು ಹರಿಯಲಿದೆ ಎಂದರಲ್ಲದೆ ಪುರಸಭಾ ಚುನಾವಣೆಯಲ್ಲಿ ಭಾಜಪ ಅಭ್ಯಾಥರ್ಿಗಳನ್ನು ಚುನಾಯಿಸಬೇಕೆಂದು  ಮನವಿ ಮಾಡಿದರು.
    ಇದಕ್ಕೂ ಮುನ್ನ ಭಾಜಪ ಪಕ್ಷದ ಕಛೇರಿಯಿಂದ ಪಟ್ಟಣದ ಪುರಸಭಾ ವಾಡರ್್ಗಳಿಗೆ ಕಾರ್ಯಕರ್ತರೊಂದಿಗೆ ವಾಹನದಲ್ಲಿ ಭೇಟಿ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಭಾಜಪ ಅಧ್ಯಕ್ಷ ಶಿವಪ್ರಸಾದ್, ತಾ.ಭಾಜಪ ಅಧ್ಯಕ್ಷ ಮಿಲ್ರ್ಟಿಶಿವಣ್ಣ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಶ್ರೀನಿವಾಸಮೂತರ್ಿ, ಬರಗೂರು ಬಸವರಾಜು, ಅಭಾವಿಪ ತಾ.ಪ್ರಮುಖ್ ಚೇತನ್ಪ್ರಸಾದ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯ
ಚಿಕ್ಕನಾಯಕನಹಳ್ಳಿ,ಫೆ.28:  ಕಾನೂನು ಸಾಕ್ಷರತ ರಥ ಮತ್ತು ಜನತಾ ನ್ಯಾಯಾಲಯದ ಸಂಚಾರವನ್ನು ಮಾಚರ್್ 1ರಿಂದ 3ರವರೆಗೆ ತಾಲ್ಲೂಕಿನಾದ್ಯಂತ ಏರ್ಪಡಿಸಲಾಗಿದೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿಯವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು 1ರ ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾದೀಶ ಕೆ.ಎಂ.ರಾಜಶೇಖರ್ ಉದ್ಘಾಟನೆ ನೆರವೇರಿಸಲಿದ್ದಾರೆ.
    ಪ್ರಧಾನ ಸಿವಿಲ್ ಜಡ್ಜ್ ಕೆ.ನಿರ್ಮಲ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಅಧಿಕ ಸಿವಿಲ್ ಜಡ್ಜ್ ಎನ್.ವೀಣಾ, ತಹಶೀಲ್ದಾರ್ ಕೆ.ಟಿ.ಕೃಷ್ಣಸ್ವಾಮಿ, ಸಹಾಯಕ ಸಕರ್ಾರಿ ಅಭಿಯೋಜಕ ಆರ್.ರವಿಚಂದ್ರ, ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆ.ನಿರಂಜನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಬಿ.ಇ.ಓ ಎಸ್.ಸಿ.ನಾಗೇಶ್, ವೃತ್ತ ನಿರೀಕ್ಷಕ ಕೆ.ಪ್ರಭಾಕರ್ ಉಪಸ್ಥಿತರಿರುವರು.
    ಮಾಚರ್್ 1ರ ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ವಿ.ಶಿವಾನಂದ್ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಿಷಯ ಪ್ರಸ್ತಾಪಿಸಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ.     ಮಧ್ಯಾಹ್ನ 1.30ಕ್ಕೆ ಮುದ್ದೇನಹಳ್ಳಿ ಗ್ರಾ.ಪಂ.ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಪಂಚಾಯತ್ ರಾಜ್ ಕಾಯ್ದೆ ಬಗ್ಗೆ ಮಾತನಾಡಲಿದ್ದು ಸಂಪನ್ಮೂಲ ವ್ಯಕ್ತಿ ಎಸ್.ಜಿ.ಗೋಪಾಲಕೃಷ್ಣ ಸಕಾಲ ಅಧಿನಿಯಮದ ಬಗ್ಗೆ ತಿಳಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷೆ ಸಿ.ಕಮಲಮ್ಮಜಯಣ್ಣ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಹೆಚ್.ಕೆ.ನಿರಂಜನ್, ಜಿ.ಎಸ್.ಚನ್ನಬಸಪ್ಪ, ಎಂ.ಮಹಾಲಿಂಗಯ್ಯ ಉಪಸ್ಥಿತರಿರುವರು. ಸಂಜೆ 4ಕ್ಕೆ ಚಿ.ನಾ.ಹಳ್ಳಿ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿ ಎಂ.ಎನ್.ಶೇಖರ್ ಬಾಲ ಕಾಮರ್ಿಕ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಸಂಪನ್ಮೂಲ ವ್ಯಕ್ತಿ ವೈ.ಜಿ.ಲೋಕೇಶ್ವರ್ ಮೋಟಾರ್ ವಾಹನ ಕಾಯ್ದೆ ಹಾಗೂ ವಾಹನ ಪರವಾನಗಿ ಬಗ್ಗೆ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ವಕೀಲರಾದ ಕೆ.ಎಸ್.ಚಂದ್ರಶೇಖರ್, ಕೆ.ಸಿ.ಬಸವರಾಜು ಉಪಸ್ಥಿತರಿರುವರು.
    ಮಾಚರ್್ 2ರ ಶನಿವಾರ ತೀರ್ಥಪುರ ಗ್ರಾ.ಪಂ.ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಎರಡನೇ ದಿನದ ಕಾರ್ಯಕ್ರಮ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷೆ ಪದ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರುಗಳಾದ ಹೆಚ್.ಟಿ.ಹನುಮಂತಯ್ಯ ಕೌಟುಂಬಿಕೆ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಕೆ.ಎಸ್.ಚಂದ್ರಶೇಖರ್ ಮಧ್ಯಸ್ಥಿಕೆ ಕೇಂದ್ರದ ಮಹತ್ವ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರಾದ ಎಂ.ವಿ.ಶಿವಾನಂದ, ಮಾರುಮರ್ಧನ್ ಉಪಸ್ಥಿತರಿರುವರು. ಮಧ್ಯಾಹ್ನ 1.30ಕ್ಕೆ ಬರಶಿಡ್ಲೆಹಳ್ಳಿ ಶಾಲಾ ಆವರಣದಲ್ಲಿ ವಕೀಲರುಗಳಾದ ಮೋಹನ್ಕುಮಾರ್ ಜನನ ಮತ್ತು ಮರಣ ನೊಂದಣಿ ಕಾಯ್ದೆ, ಎ.ಎಂ.ಮಂಜುನಾಥ್ ಉಯಿಲ್(ವಿಲ್) ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಲಿದ್ದಾರೆ. ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4.30ಕ್ಕೆ ತಾಲ್ಲೂಕು ಕಛೇರಿ ಆವರಣದಲ್ಲಿ ಜಮೀನು ಮಂಜುರಾತಿ ಹಾಗೂ ನೊಂದಣಿ ಕಾಯ್ದೆ ಬಗ್ಗೆ ವಕೀಲ ಹೆಚ್.ಎಸ್.ಜ್ಞಾನಮೂತರ್ಿ ಹಾಗೂ ವಕೀಲ ಹೆಚ್.ಎ.ಹಬೀಬುಲ್ಲಾ ಸಕಾಲ ಅಧಿನಿಯಮದ ಬಗ್ಗೆ ಮಾತನಾಡಲಿದ್ದಾರೆ. 
    ಮಾಚರ್್ 3ರಂದು ಬೆಳಗುಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಇರುವ ಸವಲತ್ತು, ಆಸ್ತಿ ಹಕ್ಕು ಬಗ್ಗೆ ಹಾಗೂ ಮಧ್ಯಾಹ್ನ 2ಕ್ಕೆ ಹುಳಿಯಾರಿನ ಅಭೇಡ್ಕರ್ ಭವನದಲ್ಲಿ ಮಹಿಳೆ ಮತ್ತು ಕಾನೂನು, ಹಿಂದೂ ವಿವಾಹ ಕಾಯ್ದೆ  ಬಗ್ಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.