Saturday, February 12, 2011
ಬೀದಿಗೆ ಬಿದ್ದ ವ್ಯಾಪಾರಿಗಳ ನೆರವಿಗೆ ಪುರಸಭೆ ಬರುತ್ತದೆಯೇ...?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಫೆ.11: ಆಡಳಿತ ಸಭೆಗೆ ದೂರದೃಷ್ಠಿ ಇಲ್ಲದೆ ಇದ್ದರೆ ಯಾರು ಬೇಕಾದರೂ ಬೀದಿಗೆ ಬೀಳಬಹುದು, ಎಂಬುದಕ್ಕೆ ಸ್ಪಷ್ಠ ನಿದರ್ಶನ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ವ್ಯಾಪಾರಿಗಳ ಇಂದಿನ ಸ್ಥಿತಿ.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಸುಂದರವಾಗಿ ಕಾಣಬೇಕು, ನಾಗರೀಕ ಸೌಲಭ್ಯಗಳು ಪ್ರಯಾಣಿಕರಿಗೆ ಕಣ್ಣೋಟದಷ್ಠು ದೂರದಲ್ಲಿರಬೇಕು. ಪಟ್ಟಣಕ್ಕೆ ಹೊಸಬರು ಬಂದಾಗ ಬಸ್ಟಾಂಡ್ ಮೊದಲ ನೋಟಕ್ಕೆ ಆಕಷರ್ಿಸಬೇಕು ಸರಿ, ಎಲ್ಲವೂ ಸರಿ, ಅಟ್ ದ ಸೇಮ್ ಟೈಮ್ ಬಸ್ಟಾಂಡ್ ವ್ಯಾಪಾರಿಗಳ ಬದುಕು ಬೀದಿಗೆ ಬೀಳಬಾರದಲ್ಲವೆ?.
ಕಳೆದ 45ವರ್ಷಗಳಿಂದ ವ್ಯಾಪಾರ ವಹಿವಾಟನ್ನು ನಡೆಸುತ್ತಾ ತಮ್ಮ ಬಾಳಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದ ಜನರ ಅನ್ನಕ್ಕೆ ಮಣ್ಣಾಕಬಾರದಲ್ಲವೇ?. ಈಗ ಆಗಿರುವುದು ಇದೇ ಸ್ಥಿತಿ, ಬಸ್ಟ್ಯಾಂಡ್ನಲ್ಲಿ ಶೌಚಾಲಯ ನಿಮರ್ಿಸಬೇಕೆಂದು ಅಲ್ಲಿದ್ದ 27 ವಿವಿಧ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಕಾನೂನು ಪ್ರಕಾರ ಪುರಸಭೆಯ ದಿಟ್ಟ ಕ್ರಮ ಓ.ಕೆ, ಆದರೆ ಅದರಾಚೆಗೆ ಮಾನವೀಯತೆ ಎಂಬುದೊಂದು ಇರುತ್ತದೆ. ಅದು ಕಾನೂನು ಕಟ್ಟಲೆಗಳಾಚೆಗೆ ಇರುವ ಮನುಷ್ಯ ಪ್ರೀತಿಯ ಬಾಂಧವ್ಯ, ಅದನ್ನೇ ಮರೆತರೆ , ಈ ವಿಶ್ವಾಸ, ನಂಬಿಕೆ. ಕಷ್ಠಕಾರ್ಪಣ್ಯಗಳ ಸಂಕೋಲೆ ಅದನ್ನು ಪರಿಹರಿಸುವ ಪುರಪಿತೃಗಳು, ಜನಪ್ರತಿನಿಧಿಗಳ ಸಂಬಂಧ, ಇವೆಲ್ಲವೂ ಈ ವ್ಯಾಪಾರಿಗಳ ಪಾಲಿಗೆ ಇಲ್ಲವಾಗಿದೆ.
ಕಾರಣ ಇಷ್ಠೆ, ಇಲ್ಲಿ ಶೌಚಾಲಯ ನಿಮರ್ಿಸಬೇಕು, ಉದ್ಯಾನವನ್ನು ಮಾಡಬೇಕು ಎಂಬ ಯೋಜನೆ, ಹಲವು ವರ್ಷಗಳಿಂದ ಪುರಸಭೆಯ ಪುರಪಿತೃಗಳ ಮುಂದೆ ಇದ್ದ ಪ್ರಾಜೆಕ್ಟ್. ಈ ಪ್ರಾಜೆಕ್ಟ್ಗೆ ಆಡಳಿತ ಮಂಜೂರಾತಿಗೆ ಕಳುಹಿಸುವಾಗಲೇ ಈ ವ್ಯಾಪಾರಿಗಳ ಬಗ್ಗೆ ಪುರಸಭೆ ಕನಿಷ್ಠ ಹತ್ತು ನಿಮಿಷ ಯೋಚಿಸಿದ್ದರೂ ಈ ರೀತಿಯ ಸ್ಥಿತಿಯಲ್ಲಿ ವ್ಯಾಪಾರಿಗಳು ಇರಬೇಕಾಗಿರಲಿಲ್ಲ.
ಈ ವ್ಯಾಪಾರಿಗಳ ವಹಿವಾಟಿಗೆ ಬೇರೊಂದು ಸ್ಥಳವನ್ನು ಕಲ್ಪಿಸಿ ಅಲ್ಲಿಗೆ ವ್ಯಾಪಾರಿಗಳನ್ನು ಶಿಪ್ಟ್ ಮಾಡಿಸಿದ್ದರೆ, ಅವರು ಅಲ್ಲಿಗೆ ತಮ್ಮ ಸಾಮಾನು ಸರಂಜಾಮಗಳನ್ನು ಎತ್ತಿಕೊಂಡು ಎಂದಿನಂತೆ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ತುತ್ತಿನ ಚೀಲಕ್ಕೆ ಮಾರ್ಗ ಮಾಡಿಕೊಳ್ಳುತ್ತಿದ್ದ್ದರೆ. ಆದರೆ ಈಗ ಆ ಜನ ಪುರಸಭೆಯ ಆಡಳಿತಕ್ಕೆ ಹಿಡಿ ಶಾಪವಾಕುತ್ತಿದ್ದಾರೆ. ಅದರಲ್ಲಿ 45ವರ್ಷಗಳಿಂದ ಈ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವ ವೆಂಕಟಪ್ಪ, ನನ್ನ 70ವರ್ಷಗಳ ಇತಿಹಾಸದಲ್ಲಿ ಈ ರೀತಿ ಕರುಣೆ ಇಲ್ಲದ ಆಡಳಿತವನ್ನು ನೋಡಿಲ್ಲ ಎನ್ನುವ ಅವರು, ಹಿಂದೆ ಮೂರು ಬಾರಿ ಇಲ್ಲಿನ ಅಂಗಡಿಗಳಿಗೆ ಬೆಂಕಿ ಬಿದ್ದಾಗಲೂ ಇಷ್ಟು ನೋವಾಗಿರಲಿಲ್ಲ. ಇರಲಿ ಬಿಡು ನಮ್ಮ ಅಂಗಡಿಗಳಿಗಷ್ಟೇ ಬೆಂಕಿ ಬಿದ್ದಿರುವುದು. ಎರಡು ದಿನಗಳಲ್ಲಿ ಮತ್ತೇ ಅದೇ ಜಾಗದಲ್ಲಿ ನಮ್ಮ ಬದುಕು ಕಟ್ಟಿ ಕೊಳ್ಳುತ್ತೇವೆಂಬ ವಿಶ್ವಾಸವಿತ್ತು. ಆದರೆ ಈಗ ನಾವು ಕುಳಿತುಕೊಳ್ಳಲು ಜಾಗವೇ ಇಲ್ಲದಾಗ, ನಾವು ನಿಂತ ಜಾಗವೇ ಬೆಂಕಿ ಹತ್ತಿ ಹುರಿಯುವಾಗ ನಿಲ್ಲವುದಾದರೂ ಎಲ್ಲಿ ? ಎಂಬ ಚಿಂತೆಯಿಂದ ಕಳೆದು ಎರಡು ದಿನಗಳಿಂದ ಹೊಟ್ಟೆಗೆ ಊಟ ಸೇರಿಲ್ಲವೆಂದು ಕಣ್ಣಂಚಿನಲ್ಲಿ ನೀರು ಸುರಿಸುತ್ತಾರೆ.
ಈ ಶೌಚಾಲಯವನ್ನು ಇಲ್ಲಿಯೇ ಕಟ್ಟಲಿ, ಆದರೆ ನಮಗೂ ಒಂದೈದಡಿ ಜಾಗ ತೋರಿಸಿ, ಅಲ್ಲಿ ನಾವು ನಮ್ಮ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆಂದರೆ ಅದೆಲ್ಲಾ ನಮಗೆ ಗೊತ್ತಿಲ್ಲ, ನಾವು ಈ ಮಾಚರ್ಿ ಒಳಗೆ ಶೌಚಾಲಯ ನಿಮರ್ಿಸದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಮೊದಲು ನಾವು ಶೌಚಾಲಯದ ಬಿಲ್ ಮಾಡಿಯಾದ ಮೇಲೆ ನಿಮಗೆ ಜಾಗ ತೋರಿಸುವುದರ ಬಗ್ಗೆ ಆಲೋಚಿಸುತ್ತೇವೆಂದು ಪುರಸಭೆಯ ಅಧಿಕಾರಿಗಳು ಕರುಣೆ ಇಲ್ಲದಂತೆ ಮಾತನಾಡಿ ಇಲ್ಲಿದ್ದ ಮರ ಮಂಡಿಯನ್ನೇಲ್ಲಾ ಜೆ.ಸಿ.ಬಿಯಲ್ಲಿ ತಳ್ಳಿ ಬಿಟ್ರು ಎಂದು ವೆಂಕಟಪ್ಪ ಆ ಚಿತ್ರಣವನ್ನು ನೊಂದ ಧ್ವನಿಯಲ್ಲಿ ಚಿತ್ರಿಸುತ್ತಾರೆ.
ಈ ಜಾಗವನ್ನು ತೆರವುಗೊಳಿಸಲು ಇಡೀ ತಾಲೂಕು ಆಡಳಿತವೇ ಮುಂದೆ ನಿಂತು ಕಾಯರ್ಾಚರಣೆ ನಡೆಸುತ್ತಿದ್ದರಿಂದ ನಾವೇನು ಮಾಡಲಾಗದೇ ಮೂಕ ಪ್ರೇಕ್ಷಕರಂತೆ ನಿಂತಿದ್ದೆವು ಎನ್ನುತ್ತಾರೆ ವ್ಯಾಪಾರಿ ಲೋಕೇಶ್.
ನಮ್ಮದು ಈಗಲೂ ಒಂದೇ ಮನವಿ, ನಾವಿರುವುದು 27ಜನ ವ್ಯಾಪಾರಿಗಳು, ನಮಗೆ ತಲಾ ಐದಡಿಯಷ್ಟು ಜಾಗವನ್ನು ಕಲ್ಪಿಸಿಕೊಟ್ಟರೆ ಈ ಪುರಸಭೆಗೆ ಋಣಿಯಾಗಿರುತ್ತೇವೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಸ್ಟಾಂಡ್ನ ಜಾಗದಲ್ಲಿ ಮನೆ ಕಟ್ಟಿ ಕೊಂಡವರಿಗೆ ಅನುಸರಿಸಿದರಲ್ಲಾ, ಆ ನಿಯಮವನ್ನೇ ನಮಗೂ ಅನ್ವಯಿಸಿದರೆ ನಾವು ಪುರಸಭೆಗೆ ಹಣವನ್ನು ಕಟ್ಟಲು ಸಿದ್ದರಿದ್ದೇವೆ ಎನ್ನುತ್ತಾರೆ. ಈ ವ್ಯಾಪಾರಿಗಳು ಆದರೆ ಪುರಸಭೆಯ ಆಡಳಿತವರ್ಗ ಈ ಬಡ ವ್ಯಾಪಾರಿಗಳ ಕೂಗು ಕೇಳಿಸಿಕೊಳ್ಳುತ್ತಿದೆಯೇ..?ಕುರುಬರಶ್ರೇಣಿ ಶಾಲೆಯಲ್ಲಿ ಓದಿ,ಎಸ್.ಎಸ್ಎಲ್.ಸಿ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.11: ಕುರುಬರಶ್ರೇಣಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು 200-10ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರವನ್ನು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದೆ.
ಕುರುಬರಶ್ರೇಣಿ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಓದಿದ್ದರೆ ಆ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಇದೇ 13ರ ಭಾನುವಾರ ಬೆಳಗ್ಗೆ 10.30ಕ್ಕೆ ನೀಡಲಿದ್ದು, ಅರ್ಹ ವಿದ್ಯಾಥರ್ಿಗಳು ಸಂಘದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದಶರ್ಿಗಳಲ್ಲಿ ಮಾಚರ್್ 1ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.11: ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯದ ಪ್ರಾರಂಭೊತ್ಸವ ಹಾಗೂ ನೂತನ ಶಿಲಾಮೂತರ್ಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶಿಖರ ಕಳಸ ಸ್ಥಾಪನೆ ಮತ್ತು ಧಾಮರ್ಿಕ ಸಮಾರಂಭವನ್ನು ಇದೇ 16 ಮತ್ತು 17ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿಯಲ್ಲಿ ಏರ್ಪಡಿಸಿದ್ದು ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಗುರು ಪರದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿ, ಇಮ್ಮಡಿ ಕರಿಬಸವದೇಶೀಕೇಂದ್ರಸ್ವಾಮಿ, ಮೃಂತ್ಯುಂಜಯದೇಶೀಕೇಂದ್ರ ಸ್ವಾಮಿ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಆಶೀರ್ವಚನ ನೀಡಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ದೇವಾಲಯ ನಿಮರ್ಾಣ ಸಮಿತಿ ಅಧ್ಯಕ್ಷ ಅಗಸರಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತು.ಹಾ.ಒ.ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಮಾಜಿ.ಜಿ.ಪಂ.ಸದಸ್ಯ ಸುಶೀಲಸುರೇಂದ್ರಯ್ಯ, ಗ್ರಾ.ಪಂ.ಅಧ್ಯಕ್ಷ ಪಾರ್ವತಮ್ಮ, ಗ್ರಾ.ಪಂ.ಸದಸ್ಯರಾದ ಎ.ಎಸ್.ಮಲ್ಲಿಕಾಜರ್ುನಯ್ಯ, ಶಶಿಧರ್, ಉಪಸ್ಥಿತರಿರುವರು.


ರೈತರು ಮತ್ತು ಸಂಘಗಳಿಗೆ ತಿಳುವಳಿಗೆ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.11: ಸ್ವಸಹಾಯ ಸಂಘಗಳಿಗೆ, ರೈತರ ಇತರ ಚಟುವಟಿಕೆಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಗೋಡೆಕೆರೆ ಗ್ರಾಮದಲ್ಲಿ ಶಿಬಿರವನ್ನು ಇದೇ 14ರ ಸೋಮವಾರ ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರಗೆ ನಡೆಯುವ ಶಿಬಿರದಲ್ಲಿ ಭಾರತೀಯ ರಿಸವರ್್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಶ್ಯಾಮಲಾ ಗೋಪಿನಾಥ್, ಎಸ್.ಬಿ.ಎಂನ ವ್ಯವಸ್ಥಾಪಕ ನಿದರ್ೇಶಕ ಪಿ.ವಿಜಯ್ಭಾಸ್ಕರ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಎಲ್.ಟಿ.ಅಂಬುಜಾಕ್ಷಿ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಫೆ.12: ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾಷರ್ಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 14ರ ಸೋಮವಾರ ಸಂಜೆ 6-30ಕ್ಕೆ ನಡೆಯಲಿದೆ.
ಸಮಾರಂಭವನ್ನು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಗದ್ದಿಗೆ ಮಠದ ಪೀಠಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಗಾಟನೆ ನೆರವೇರಿಸಲಿದ್ದು ತಮ್ಮಡಿಹಳ್ಳಿಯ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನವೋದಯ ವಿದ್ಯಾಸಂಸ್ಥೆ ನಿದರ್ೇಶಕ ಮಹದೇವಣ್ಣ, ಖಜಾಂಚಿ ಎಸ್.ಜಿ.ಸಿದ್ದಲಿಂಗಪ್ಪ, ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಈಶ್ವರಮೂತರ್ಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ವರದಿಗಾರರಾದ ಕೆ.ಜಿ.ರಾಜೀವ್, ಸಿದ್ದರಾಮಣ್ಣ ಅಣೇಕಟ್ಟೆ, ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿರುವರು.
ಶಿಕ್ಷಕರಿಗೆ ಬಡ್ತಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾ.ಪ್ರಾ.ಶಾ.ಶಿ.ಸಂಘದಿಂದ ಅಬಿನಂದನೆ
ಚಿಕ್ಕನಾಯಕನಹಳ್ಳಿ,ಫೆ.12: ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಣೆಗೊಂಡ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರುಗಳಿಗೆ ಹೆಚ್ಚುವರಿ ಬಡ್ತಿ ಮಂಜೂರು ಮಾಡಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜಾಧ್ಯಕ್ಷ ಬಸವರಾಜ್ ಗುರಿಕಾರ್, ಪ್ರಧಾನ ಕಾರ್ಯದಶರ್ಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಆರ್.ಪರಶಿವಮೂತರ್ಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಗೋಪಾಲಕೃಷ್ಣರವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.