Tuesday, March 18, 2014

ಪಕ್ಷದೊಳಗಿನ ಸಣ್ಣ ಪುಟ್ಟ ವಿಷಯಗಳಿಗೆಲ್ಲಾ ಮಾಧ್ಯಮದ ಮುಂದೆ ಹೋಗದಂತೆ ಮುಖಂಡರಿಗೆ ಸಲಹೆ

ಚಿಕ್ಕನಾಯಕನಹಳ್ಳಿ,ಮಾ.18 : ಬ್ಲಾಕ್ ಕಾಂಗ್ರೆಸ್ಸಿನಲ್ಲಿರುವ ಭಿನ್ನಮತವನ್ನು ಶಮನಗೊಳಿಸಲು ಮಂಗಳವಾರ ತಾಲ್ಲೂಕಿಗೆ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಮುಖಂಡರುಗಳ ಮನೆಗೆ ಭೇಟಿ ನೀಡಿದರು.
  ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ 26ರ ನಂತರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು, ನಮ್ಮಲ್ಲಿ ಏನೇ ಭಿನ್ನಮತವಿದ್ದರೂ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಮಾಧ್ಯಮಗಳಿಗೆ ಹೋಗಬಾರದು, ಇದರಿಂದ ಪಕ್ಷದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಆದ್ದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು. 
 ಮಾಜಿ ಶಾಸಕ ಬಿ.ಲಕ್ಕಪ್ಪ, ಸೀಮೆಎಣ್ಣೆ ಕೃಷ್ಣಯ್ಯ, ಹೆಚ್.ಬಿ.ಎಸ್.ನಾರಾಯಣಗೌಡರ ಹಾಗೂ ಪುರಸಭಾ ಸದಸ್ಯರಾದ ಸಿ.ಪಿ.ಮಹೇಶ್, ರೇಣುಕಾಗುರುಮುತರ್ಿ, ಹುಳಿಯಾರಿನ ಧನುಷ್ ರಂಗನಾಥ್ ಮನೆಗೆ ಭೇಟಿ ನೀಡಿ ಪಕ್ಷದ ಗೆಲುವಿಗೆ ಶ್ರಮಿಸಲು ಕೋರಿರುವುದಾಗಿ ತಿಳಿಸಿದರು.. 
ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯಥರ್ಿ ಎಸ್.ಪಿ.ಮುದ್ದಹನುಮೇಗೌಡ ಇದುವರೆಗೂ ತಾಲ್ಲೂಕಿನಲ್ಲಿ ಇದ್ದ ಭಿನ್ನಮತ ಶಮನವಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ವಿವಿಧ ಪಕ್ಷಗಳಿಂದ ಕಾರ್ಯಕರ್ತರು ಬರಲು ಉತ್ಸಾಹಕರಾಗಿದ್ದು ಶೀಘ್ರದಲ್ಲಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ತೀರ್ಥಪುರದ ವಾಸು, ರಾಮಕೃಷ್ಣಯ್ಯ, ಕೆ.ಜಿ.ಕೃಷ್ಣೆಗೌಡ, ಘನ್ನಿಸಾಬ್, ಕಿಬ್ಬನಹಳ್ಳಿ ಮಹಾಲಿಂಗಪ್ಪ, ಶಿವಣ್ಣ, ಚಿಕ್ಕಸ್ವಾಮಿ, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.