Thursday, December 22, 2011


ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಡಿ.22: ಬಾಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿಗುರು ಕಾರ್ಯಕ್ರಮವನ್ನು ಇದೇ 23ರ ಮಧ್ಯಾಹ್ನ 3.30ಕ್ಕೆ ಏರ್ಪಡಿಸಲಾಗಿದೆ.
ತಾಲ್ಲೂಕಿನ ಸಾಸಲು ಗ್ರಾಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ರಂಗ ಕ್ರೀಡಾ ಮತ್ತು ಸಾಂಸ್ಕೃತಿಕ ಯುವ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಉದ್ಘಾಟನೆ ನೆರವೇರಿಸಲಿದ್ದು ಗ್ರಾ.ಪಂ.ಅಧ್ಯಕ್ಷೆ ಪಾರ್ವತಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯೋಪಾಧ್ಯಾಯ ಜಿ.ಸಂತೋಷ್, ತಾ.ಪಂ.ಸದಸ್ಯೆ ರಮೇಶ್ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ಗ್ರಾ.ಪಂ.ಸದಸ್ಯರಾದ  ರವಿಕುಮಾರ್, ದಿನೇಶ್, ಕುಮಾರಯ್ಯ, ಲಲಿತಮ್ಮ, ವಿಶೇಷ ಆಹ್ವಾನಿತರಾಗಿ ಆಕಾಶವಾಣಿ ಕಲಾವಿದ ಎಂ.ರಂಗಯ್ಯ ಉಪಸ್ಥಿತರಿರುವರು.

ಸ್ವರನೂಪುರ ಮಹಿಳಾ ಸಾಂಸ್ಕೃತಿಕ
ಚಿಕ್ಕನಾಯನಹಳ್ಳಿ,ಡಿ.22 : ಸ್ವರನೂಪುರ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಇದೇ 25ರ ಭಾನುವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
    ಕಾರ್ಯಕ್ರಮವನ್ನು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ವೀಣಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸುವರು. ಜಿಲ್ಲಾ 319ರ ಛೇರ್ಮನ್ ಅಮುತಾಸುರೇಶ್ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು ಅಂತರರಾಷ್ಟ್ರೀಯ ಇನ್ನರ್ವೀಲ್ ಸಂಸ್ಥೆ ಮಾಜಿ ಅಧ್ಯಕ್ಷ ಶೈಲಜಾಭಟ್, ಸಂಗೀತ ನಿದರ್ೇಶಕ ವಿ.ಮನೋಹರ್, ರಾಜ್ಯ ವಕೀಲರ ಸಂಘದ ಅಧ್ಯಕ್ಷ ರಮೇಶ್ಬಾಬು, ರೋಟರಿ ವಿದ್ಯಾಪೀಠ ಲೋಕನಾಥನಾಯ್ಡು, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.22 : ಮಲ್ಲಿಕಾಜರ್ುನಸ್ವಾಮಿ ಡಿ.ಇಡಿ ಕಾಲೇಜಿನ 2011-12ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 23ರ ಶುಕ್ರವಾರ ಏರ್ಪಡಿಸಲಾಗಿದೆ.
     ಶಿಬಿರವನ್ನು ತರಬೇನಹಳ್ಳಿಯಲ್ಲಿ ಮಧ್ಯಾಹ್ನ 2ಗಂಟೆಗೆ ಹಮ್ಮಿಕೊಂಡಿದ್ದು ಡಾ.ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿ, ಮೃತ್ಯಂಜಯದೇಶೀಕೇಂದ್ರಸ್ವಾಮಿ ದಿವ್ಯ ಸಾನಿದ್ಯದಲ್ಲಿ ನಡೆಯಲಿದ್ದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದು ಗ್ರಾ.ಪಂ.ಸದಸ್ಯೆ ಜಿ.ಎಸ್.ಕುಶಲ ಉದ್ಘಾಟನೆ ನೆರವೇರಿಸಲಿದ್ದಾರೆ.
   ಶ್ರೀ.ಮವಿ.ಸಂಸ್ಥೆಯ ಕಾರ್ಯದಶರ್ಿ ಎಂ.ಬಿ.ಶಿವಣ್ಣ, ಸಾಹಿತಿ ಎಂ.ವಿ.ನಾಗರಾಜ್ರಾವ್, ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ದಾಕ್ಷಾಯಿಣಿ ಅಶ್ವಥ್, ತಾ.ಪಂ.ಮಾಜಿ ಅಧ್ಯಕ್ಷ ಗಿರಿಜಮ್ಮ, ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ಗ್ರಾ.ಪಂ.ಸದಸ್ಯ ಪರಮಶಿವಯ್ಯ, ಕೃಷಿಕ ತರಬೇನಹಳ್ಳಿ ಷಡಕ್ಷರಿ, ಮುಖ್ಯೋಪಾಧ್ಯಾಯರಾದ ಶಾಂತಮ್ಮ ಉಪಸ್ಥಿತರಿರುವರು.