ತಾಲ್ಲೂಕಿನ ಬಿಜೆಪಿ ಪಾಳಯದಲ್ಲಿ ಮುಸುಕಿನ ಗುದ್ದಾಟ

ಶೆಟ್ಟೀಕೆರೆ ಕ್ಷೇತ್ರದಲ್ಲಿ ಕೆ.ಎಸ್.ಕಿರಣ್ಕುಮಾರ್ ರವರ ಬೆಂಬಲಿಗ ಎ.ಬಿ.ರಮೇಶ್ಕುಮಾರ್ ಬಿಜೆಪಿ ಪಕ್ಷದ ಅಧಿಕೃತ ಅಭ್ಯಥರ್ಿ ಎಂದು ಘೋಷಿಸಿದರೆ, ಹುಳಿಯಾರು ಜಿ.ಪಂ.ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ ಬೆಂಬಲಿಗ ಎಚ್.ಜಯಣ್ಣ ನವರು ಅಧಿಕೃತ ಅಬ್ಯಾಥರ್ಿ ಎಂದು ಘೋಷಿಸಿದೆ.
ತಾಲ್ಲೂಕು ಕಛೇರಿಯಲ್ಲಿ ನಡೆದ ನಾಮಪತ್ರ ಪರಿಶಿಲನೆ ವೇಳೆ ಶೆಟ್ಟಿಕೆರೆ ಜಿ.ಪಂ.ಕ್ಷೇತ್ರಕ್ಕೆ ಎ.ಬಿ.ರಮೇಶ್ಕುಮಾರ್, ಹಾಗೂ ಗಿರೀಶ್ ಇಬ್ಬರು ಬಿಜೆಪಿ ಪಕ್ಷದಿಂದ ಸ್ಪಧರ್ಿಸುವುದಾಗಿ ನಾಮಪತ್ರದಲ್ಲಿ ನಮೂದು ಮಾಡಿದ್ದು, ಪಕ್ಷದ ಬಿ ಫಾರಂ ರಮೇಶ್ ಕೈಸೇರಿದ್ದರಿಂದ ಗಿರೀಶ್ ಪಕ್ಷೇತರ ಅಭ್ಯಥರ್ಿಯಾಗಲಿರುವರೊ ಅಥವಾ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಬೆಂಬಲಿತ ಅಭ್ಯಥರ್ಿಯಾಗಿ ಚುನಾವಣೆಯನ್ನು ಎದುರಿಸುತ್ತಾರೊ ತಿಳಿಯುತ್ತಿಲ್ಲ, ಕೊನೆಗಳಿಗೆಯಲ್ಲಿ ಪಕ್ಷದ ಸಿದ್ದಾಂತಗಳಿಗೆ ಮಣಿದು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆಯುತ್ತಾರೊ ಕಾದು ನೋಡಬೇಕಿದೆ.
ಇದೇ ರೀತಿ ಹುಳಿಯಾರು ಜಿ.ಪಂ.ಕ್ಷೇತ್ರದಲ್ಲೂ ಮುಂದುವರೆದಿದ್ದು ಹನುಮಂತಯ್ಯ ಬಿಜೆಪಿ ಪಕ್ಷದ ಬಿ ಫಾರಂ ಪಡೆಯುವಲ್ಲಿ ವಿಫಲರಾದರು, ಜೆ.ಸಿ. ಮಾಧುಸ್ವಾಮಿ ಬೆಂಬಲಿತ ಬಿಜೆಪಿ ಅಭ್ಯಥರ್ಿ ಜಯಣ್ಣನಿಗೆ ಬಿಜೆಪಿ ಪಕ್ಷದ ಬಿ ಫಾರಂ ದೊರೆತ ಕಾರಣ ಹನುಮಂತಯ್ಯ ಪಕ್ಷೇತರ ಅಭ್ಯಥರ್ಿ ಎಂದು ಘೋಷಿಸಲಾಯಿತು, ಇಲ್ಲೂ ಸಹ ಕೆ.ಎಸ್.ಕಿರಣ್ಕುಮಾರ್ ಬೆಂಬಲಿತ ಅಬ್ಯಾಥರ್ಿಯಾಗಿ ಹನುಮಂತಯ್ಯ ಕಣದಲ್ಲಿ ಉಳಿಯುತ್ತಾರೊ ಅಥವಾ ಕೊನೆಗಳಿಗೆಯಲ್ಲಿ ಪಕ್ಷದ ಸಿದ್ದಾಂತಗಳಿಗೆ ಮಣಿದು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆಯುತ್ತಾರೊ ಕಾದು ನೋಡಬೇಕಿದೆ.
ತಾಲ್ಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ ಒಟ್ಟು 39 ಜನ ನಾಮಪತ್ರ ಸಲ್ಲಿಸಿದಂತಾಗಿದ್ದು ತಾಲ್ಲೂಕು ಪಂಚಾಯಿತಿಗೆ 107 ಜನ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಫೆ.4ಕೊನೆಯ ದಿನಾಂಕವಾಗಿದ್ದು ಈ ಅವಧಿಯೊಳಗೆ ಯಾರು ನಾಮಪತ್ರ ಹಿಂಪಡೆಯುತ್ತಾರೆ ಎಂಬುದು ಕುತುಹಲಕಾರಿಯಾಗಿದೆ.
ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ವಿದ್ಯುತ್ ಶಾಕ್ ಹೊಡೆದು ಮೃತಮಟ್ಟ ವ್ಯಕ್ತಿಯನ್ನು ನೋಡಲು ಹೋದ ಬೆಸ್ಕಾಂ ಎ.ಇ.ಇ. ರಾಜಶೇಖರ್ರವರಿಗೆ, ಸ್ಥಳೀಯರು ಮುತ್ತಿಗೆ ಹಾಕಿ ಈ ಬಗ್ಗೆ ನಾವು ಹಲವು ಸಲ ಮನವಿ ಮಾಡಿದ್ದರೂ ನಿರ್ಲಕ್ಷ ವಹಿಸಿದ್ದ ಪರಿಣಾಮ ಸಿದ್ದಲಿಂಗಮೂತರ್ಿ ಸಾವಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂಜನಿಯರ್ವರನ್ನು ತರಾಟೆಗೆ ತೆಗೆದುಕೊಂಡರು.
ಜನಪ್ರತಿನಿಧಿಗಳು ಗ್ರಾಮದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಚುನಾವಣೆ ಸಮಯದಲ್ಲಿ ಮಾತ್ರ ಆಗಮಿಸಿ ಭರವಸೆ ನೀಡುತ್ತಾರೆ ಎಂದರಲ್ಲದೆ, ಮುಂಚೆಯೇ ಹಳ್ಳಿಯಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆ ಪರಿಹರಿಸಿದ್ದರೆ ಸಾವುನೋವು ಉಂಟಾಗುತ್ತಿರಲಿಲ್ಲ ಹಾಗೂ ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ವ್ಯಕ್ತಿಗೆ 10ಲಕ್ಷ ರೂ. ಪರಿಹಾರ ನೀಡಿ ಎಂದರು.
ಗೋಡೆಕೆರೆ ಗ್ರಾಮದ ಎಂ.ಸಿದ್ದರಾಮಯ್ಯ ಮಾತನಾಡಿ, 25ವರ್ಷದ ಹಿಂದೆ ಆರಂಭವಾದ ಟ್ರಾನ್ಸ್ಫಾರಂನ ಮೂಲಕ ಹೋಗಿರುವ ವೈರ್ನಿಂದ ವಿದ್ಯುತ್ ಶಾಕ್ ತಗಲಿ ಘಟನೆ ಸಂಭವಿಸಿದೆ, ಈ ಟ್ರಾನ್ಸ್ಫಾರಂನಲ್ಲಿನ ವಸ್ತುಗಳನ್ನು ಬದಲಾಯಿಸಿ ಹೊಸ ವಸ್ತುಗಳನ್ನು ಅಳವಡಿಸಲು ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು ಆದರೆ ಅಧಿಕಾರಿಗಳ ನಿರಾಸಕ್ತಿಯೋ, ಹಣ ಹೊಡೆಯುವ ಆಸೆಯೋ ಯಾವುದೇ ರೀತಿಯ ಕಾಮಗಾರಿಯೂ ನಡೆಯಲಿಲ್ಲ, ಟ್ರಾನ್ಸ್ಫಾರಂನಲ್ಲಿದ್ದ ಹಳೆಯ ಪ್ರೈಮರಿ ವೈರ್ ಕೆಳಗೆ ಬಿದ್ದುದ್ದರಿಂದ ಹಾಗೂ ಬೆಸ್ಕಾಂ ಇಲಾಖೆಯವರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ ವ್ಯಕ್ತಿ ಸಾವು ಉಂಟಾಗಿದೆ ಈಗಲಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗೋಡೆಕೆರೆಯಲ್ಲಿ ಆಗಾಗ್ಗೆ ಉಂಟಾಗುತ್ತಿರವ ವಿದ್ಯುತ್ ಸಮಸ್ಯೆ ಪರಿಹರಿಸಿ ಎಂದರು.
ಸ್ಥಳಕ್ಕೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ, ಎಇಇ ರಾಜಶೇಖರ್, ಮುಖಂಡರುಗಳಾದ ಸಿ.ಬಸವರಾಜು, ಎಂ.ಎಂ.ಜಗದೀಶ್, ಎ.ಬಿ.ರಮೇಶ್ಕುಮಾರ್, ಹೆಚ್.ಬಿ.ಪಂಚಾಕ್ಷರಿ ಬಿ.ಎನ್.ಶಿವಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ, ಹಾಗೂ ನೂರಾರು ಜನರು ಸೇರಿದ್ದರು.
ವಿಕಲಚೇತನರಿಗೆ ತ್ರಿಚಕ್ರ ವಾಹನ : ಸಿಬಿಎಸ್
ಚಿಕ್ಕನಾಯಕನಹಳ್ಳಿ,ಫೆ.02: ಕಾಲಿನ ನ್ಯೂನ್ಯತೆ ಹೊಂದಿರುವ ಓಡಾಡಲು ತೊಂದರೆ ಅನುಭವಿಸುತ್ತಿರುವ ವಿಕಲಚೇತನರಿಗೆ ಶಾಸಕರ ನಿಧಿಯಿಂದ ತ್ರಿಚಕ್ರ ವಾಹನ ಕೊಡಿಸುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.

ವಿಕಲಚೇತನರು ಸಕರ್ಾರದಿಂದ ಬರುವಂತಹ ಸೌಲಭ್ಯಗಳನ್ನು ಉಪಯೋಗ ಪಡಿಸಿಕೊಳ್ಳಿ, ವಿಕಲಚೇತನರ ಸಮಸ್ಯೆಯ ಸ್ಪಂದನೆಗೆ ನಾವಿದ್ದೇವೆ, ಈಗಾಗಲೇ ಸಕರ್ಾರ ಪೋಲಿಯೋ ಮುಕ್ತ ರಾಷ್ಟ್ರ ಮಾಡಲು ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸುತ್ತಿದೆ ಈ ಕಾರ್ಯಕ್ರಮವನ್ನು ಎಲ್ಲಾ ಮಕ್ಕಳಿಗೂ ತಲುಪಿಸುವುದು ಎಲ್ಲರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪ್ರೇಮದೇವರಾಜು ಮಾತನಾಡಿ, ವಿಕಲಚೇತನರು ಅಂಗವಿಕಲರು ಎಂದು ಬೇಸರದಲ್ಲಿರದೆ ಸದಾ ಚೇತನವಾಗಿರಿ, ಪುರಸಭೆ ವತಿಯಿಂದ ಶೇ.3%ರ ಅನುದಾನದಲ್ಲಿ ವಿಕಲಚೇತನರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ವಿಕಲಚೇತನ ಮಕ್ಕಳು ತಮ್ಮಲ್ಲಿರುವ ಸಮಸ್ಯೆಯನ್ನು ನೆನಪಿಸಿಕೊಂಡು ಕೊರಗಬೇಡಿ, ವಿಕಲಚೇತನ ಮಕ್ಕಳಲ್ಲಿಯೇ ಹೆಚ್ಚಿನ ಪ್ರತಿಭೆಯಿರುತ್ತದೆ ಆ ಪ್ರತಿಭೆ ಹೊರತರಬೇಕು, ಅಂಗವಿಕಲರ ಮಕ್ಕಳಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಪೋಷಕ ಹಾಗೂ ಶಿಕ್ಷಕರದ್ದಾಗಿರಬೇಕು ಎಂದರಲ್ಲದೆ ಅಪೌಷ್ಠಿಕತೆಯಿಂದ ಮಕ್ಕಳು ಅಂಗವಿಕಲತೆಗೆ ತುತ್ತಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ಗಮನ ಹರಿಸಿ ಎಂದರು.
ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಮಾತನಾಡಿ, ಪುರಸಭೆ ವತಿಯಿಂದ ಈಗಾಗಲೇ ಪಟ್ಟಣದಲ್ಲಿರುವ ವಿಕಲಚೇತನರಿಗೆ ಸೌಲಭ್ಯ ನೀಡಲಾಗುತ್ತಿದ್ದು ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದ ಅವರು ವಿಕಲಚೇತನರಿಗೆ ನೀಡುತ್ತಿರುವ ಮಾಶಾಸನವನ್ನು 3ಸಾವಿರ ರೂಗೆ ಸಕರ್ಾರ ಹೆಚ್ಚಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಬಿ.ಇಂದಿರಾ, ಪುಷ್ಪ.ಟಿ.ರಾಮಯ್ಯ, ಎಂ.ಕೆ.ರವಿಚಂದ್ರ, ಧರಣಿ.ಬಿ.ಲಕ್ಕಪ್ಪ, ಸಿ.ಎಂ.ರಾಜಶೇಖರ್, ರೇಣುಕಮ್ಮ, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಮಹಮದ್ಖಲಂದರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಎಸಿಡಿಪಿಓ ಪರಮೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.