Monday, February 1, 2016


ಚಿ.ನಾ.ಹಳ್ಳಿ ಪಂಚಾಯ್ತಿ ಚುನಾವಣೆಗಳಿಗೆ ಅಭ್ಯಥರ್ಿಗಳಿಂದ ನಾಮಪತ್ರ ಸಲ್ಲಿಕೆ
3
ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿಯ ಐದು ಕ್ಷೇತ್ರಗಳಿಗೆ 41,  ತಾಲ್ಲೂಕು ಪಂಚಾಯಿತಿಯ 19 ಸ್ಥಾನಗಳಿಗೆ 106  ನಾಮಪತ್ರಗಳು ಸಲ್ಲಿಕೆಯಾಗಿವೆ, ನಾಮಪತ್ರ  ಸಲ್ಲಿಸಲು ಫೆ.1ರಂದು ಕೊನೆಯ ದಿನವಾದ್ದರಿಂದ ಚುನಾವಣಾ ಅಭ್ಯಥರ್ಿಗಳು ತಮ್ಮ ಬೆಂಬಲಿಗರೊಂದಿಗೆ ನಾಯಕರುಗಳ ಜೈಕಾರ ಕೂಗುತ್ತಾ ಮೆರವಣಿಗೆ ಮೂಲಕ ಸಂಚರಿಸಿ ನಾಮಪತ್ರ ಸಲ್ಲಿಸಿದರು.
ಕೊನೆಯ ದಿನವಾದ ಫೆ.1ರಂದು ಐದು ಜಿ.ಪಂ.ಕ್ಷೇತ್ರಗಳಿಗೆ 25 ನಾಮ ಪತ್ರ ಸಲ್ಲಿಕೆಯಾದವು, ಉಳಿದ 16 ನಾಮಪತ್ರಗಳನ್ನು  ಈ ಮೊದಲೇ ಸಲ್ಲಿಸಲಾಗಿತ್ತು, ತಾ.ಪಂ. 19 ಕ್ಷೇತ್ರಗಳಿಗೆ ಫೆ.1ರಂದು 60 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಫೆ.1ರಂದು ಐದು ಜಿ.ಪಂ.ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದವರು:
ಹುಳಿಯಾರು ಜಿ.ಪಂ. ಕ್ಷೇತ್ರಕ್ಕೆ: ಕಾಂಗ್ರೆಸ್ನಿಂದ ವೈ.ಸಿ.ಸಿದ್ದರಾಮಯ್ಯ, ಬಿ.ಜೆ.ಪಿ.ಯಿಂದ ಎಚ್.ಜಯಣ್ಣ, ಜೆ.ಡಿ.ಎಸ್.ನಿಂದ ಸಯದ್ ಏಜಾಜ್ ಪಾಷ ಸ್ಪಧರ್ಿಸಿದ್ದರೆ, ಬಿ.ಜೆ.ಪಿ. ಬಂಡಾಯ ಅಬ್ಯಾಥರ್ಿಯಾಗಿ ಎಚ್.ಹನುಮಂತಯ್ಯ, ಜೆ.ಡಿ.ಎಸ್.ಬಂಡಾಯ ಅಬ್ಯಾಥರ್ಿಯಾಗಿ ಎನ್.ಜಿ.ಶಿವಣ್ಣ, ಸಯದ್ ಜಹೀರಾಖಾನ್,  ಕಾಂಗ್ರೆಸ್ ಬಂಡಾಯ ಅಬ್ಯಾಥರ್ಿಯಾಗಿ ಎಚ್.ವಿ.ಶಾರದ, ಪಕ್ಷೇತರರಾಗಿ ಎಸ್.ಪುಟ್ಟರಾಜು, ಬಿ.ಎಸ್.ಧನಂಜಯ, ನಾಸಿರ್ಬೇಗ್ ಅಜರ್ಿ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಿಂದ ಬಿ.ಜೆ.ಪಿ.ಯಿಂದ ಎಸ್.ಟಿ.ಮಹಾಲಿಂಗಯ್ಯ(ಕಬ್ಬಡಿ), ಜೆ.ಡಿ.ಎಸ್.ನಿಂದ ಈರಯ್ಯ, ಪಕ್ಷೇತರರಾಗಿ ಲ.ಪು.ಕರಿಯಪ್ಪ. ಕೆ.ಮರಿಯಪ್ಪ, ಲಚ್ಚಾನಾಯ್ಕ, ರಾಮನಾಯ್ಕ.
ಕಂದಿಕೆರೆ ಜಿ.ಪಂ.ಕ್ಷೇತ್ರದಿಂದ:  ಕಾಂಗ್ರೆಸ್ ಪದ್ಮಮ್ಮ ಲಿಂಗರಾಜ್, ಜೆ.ಡಿ.ಎಸ್.ಸುನಿತಾ,  ಪಕ್ಷೇತರರಾಗಿ  ಡಿ.ಶೈಲಜಾ, ವೀಣಾ, ಸಿ.ರೇಣುಕಮ್ಮ
ಹಂದನಕೆರೆ ಜಿ.ಪಂ.ಕ್ಷೇತ್ರದಿಂದ: ಪಕ್ಷೇತರರಾಗಿ ದಬ್ಬೆಘಟ್ಟ ಬಸವರಾಜು, ಬಸವರಾಜು 
ಶೆಟ್ಟೀಕೆರೆ ಜಿ.ಪಂ.ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಎ.ಬಿ.ಶರತ್ಕುಮಾರ್, ಬಂಡಾಯವಾಗಿ ಸಿ.ಆರ್.ಗಿರೀಶ್, ಪಕ್ಷೇತರರಾಗಿ ಬಸವರಾಜು ಅಜರ್ಿ ಸಲ್ಲಿಸಿದ್ದಾರೆ.
19 ತಾ.ಪಂ. ಕ್ಷೇತ್ರಗಳಿಗೆ  ಫೆ.1ರಂದು ಅಜರ್ಿ ಸಲ್ಲಿಸಿದವರ ವಿವರ:
ಜೆ.ಸಿ.ಪುರ ಕ್ಷೇತ್ರ: ಬಿ.ಜೆ.ಪಿ.ಪ್ರೇಮಕುಮಾರಿ, ಶೆಟ್ಟೀಕೆರೆ ತಾ.ಪಂ.ಕ್ಷೇತ್ರ ವಿ.ಬಿ.ವೀಣಾ ಪಕ್ಷೇತರ, 
ಕುಪ್ಪೂರು ಕ್ಷೇತ್ರ:  ಬಿ.ಜೆ.ಪಿಯಿಂದ ಕೆ.ಎಸ್.ಅಶೋಕ್ಕುಮಾರ್, ಪಕ್ಷೇತರರಾಗಿ ಟಿ.ಆರ್.ಮಹೇಶ್, ಕರಿಬಸವಯ್ಯ, ಕುಮಾರಸ್ವಾಮಿ, 
ದಸೂಡಿ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಓಂಕಾರನಾಯ್ಕ್, ಬಿ.ಜೆ.ಪಿಯಿಂದ ಜಿ.ರಮೇಶ್, ಜೆ.ಡಿ.ಎಸ್.ನಿಂದ ಪ್ರಸನ್ನಕುಮಾರ್, ಪಕ್ಷೇತರರಾಗಿ ಎಂ.ಟಿ.ಸಣ್ಣಕರಿಯಪ್ಪ, ಚಂದ್ರನಾಯ್ಕ್, ಹುಳಿಯಾರು ಕ್ಷೇತ್ರದಿಂದ: ಜೆ.ಡಿ.ಎಸ್.ನಿಂದ ಎಚ್.ಎನ್.ಕುಮಾರ್ ಕಾಂಗ್ರೆಸ್ನಿಂದ ಎಚ್.ಎನ್.ಕಿರಣ್ಕುಮಾರ್, ಬಿ.ಜೆ.ಪಿಯಿಂದ ಎಚ್.ಚಂದ್ರಶೇಖರ್, 
ತೀರ್ಥಪುರ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಸಿಂಗದಹಳ್ಳಿ ರಾಜ್ಕುಮಾರ್, ಕಾಂಗ್ರೆಸ್ನಿಂದ ಕೆ.ಸಿ.ಪರಮೇಶ್, ಜೆ.ಡಿ.ಎಸ್.ಗೋವಿಂದರಾಜು, ಪಕ್ಷೇತರರಾಗಿ ಶಿಡ್ಲಯ್ಯ, ಬಿ.ಮೂತರ್ಿ. ಬಿ.ಎಸ್.ಪಿ.ಯಿಂದ ಬಸವರಾಜು, 
ಮಾಳಿಗೆಹಳ್ಳಿ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಎಸ್.ರಂಗಸ್ವಾಮಿ, ಜೆ.ಡಿ.ಎಸ್.ನಿಂದ ಟಿ.ಜಿ.ತಿಮ್ಮಯ್ಯ, ಪಕ್ಷೇತರರಾಗಿ ಶಿವಕುಮಾರಸ್ವಾಮಿ, ಕರಿಯಾನಾಯ್ಕ್, ಎಸ್.ಯೋಗೀಶ್. ಹೋಯ್ಸಳಕಟ್ಟೆ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಎಚ್.ಎನ್.ದೇವರಾಜು, ಎಚ್.ಆರ್.ರಂಗರಾಜು, ಆರ್.ಕುಮಾರಸ್ವಾಮಿ, ಬಿ.ಜೆ.ಪಿ.ಯಿಂದ ಬಿ.ಮಧು, ಜೆ.ಡಿ.ಎಸ್ನಿಂದ ಮಂಜುನಾಥ್, ಪಕ್ಷೇತರರಾಗಿ ಕರಿಯಪ್ಪ,
ಕೆಂಕೆರೆ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಭಾಗ್ಯಮ್ಮ, ಆರ್.ಕವಿತ, ಜೆ.ಡಿ.ಎಸ್.ನಿಂದ ಬಿ.ಬಿ.ಫಾತಿಮಾ, ಮುನೀರ್ಉನ್ನೀಸಾ, ತಿಮ್ಮನಹಳ್ಳಿ ಕ್ಷೇತ್ರ: ಜೆ.ಡಿ.ಎಸ್.ನಿಂದ ಲೋಲಾಕ್ಷಮ್ಮ, ಕಾಂಗ್ರೆಸ್ನಿಂದ ಕೆ.ಶಿವಮ್ಮ, ಬಿ.ಜೆ.ಪಿ.ಯಿಂದ ಇಂದಿರಾ ಕುಮಾರ್, ಪಕ್ಷೇತರ ಮೀನಾ ಶ್ರೀನಿವಾಸ್,
 ಕಂದಿಕೆರೆ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಆರ್.ಕೇಶವಮೂತರ್ಿ, ಜೆ.ಡಿ.ಎಸ್.ನಿಂದ ತೇಜಕುಮಾರ್ ಒಡೆಯರ್, ಪಕ್ಷೇತರರಾಗಿ ಆರ್.ಕೆ.ಬಾಳೇಗೌಡ, ಬಿ.ಕೆ.ಶ್ರೀಕಾಂತ್, ಬಿ.ಕೆ.ಜಯಣ್ಣ, ಬಸವರಾಜು. 
ಗಾಣಧಾಳ್ ಕ್ಷೇತ್ರದಿಂದ: ಬಿ.ಜೆ.ಪಿ.ಯಿಂದ ಲಕ್ಷ್ಮಿಬಾಯಿ, ಸಿದ್ದಗಂಗಾಬಾಯಿ,  ಜೆ.ಡಿ.ಎಸ್.ನಿಂದ ಕೆ.ವಿ.ರಾಧಮ್ಮ, ಪಕ್ಷೇತರರಾಗಿ ಲಲಿತಾಬಾಯಿ, ಕಮಲಾಬಾಯಿ, ಲಚ್ಚಾನಾಯ್ಕ್. 
ತಿಮ್ಲಾಪುರ ಕ್ಷೇತ್ರದಿಂದ: ಕಾಂಗ್ರೆಸ್ನಿಂದ ಗೌರಮ್ಮ, ಜೆ.ಡಿ.ಎಸ್ನಿಂದ ರೇಣುಕಮ್ಮ, ಕಲ್ಯಾಣಬಾಯಿ, ಬಿ.ಜೆ.ಪಿಯಿಂದ ಕಮಲಾಬಾಯಿ.
 ಯಳನಡು ಕ್ಷೇತ್ರದಿಂದ: ಜೆ.ಡಿ.ಎಸ್.ನಿಂದ ಯತೀಶ, ಬಿ.ಜೆ.ಪಿಯಿಂದ ವಿಶ್ವೇಶ್ವರಯ್ಯ, ಕಾಂಗ್ರೆಸ್ನಿಂದ ಕದರೇಗೌಡ ಯಾದವ್. ಇವರಿಷ್ಟು ಜನ ಫೆ.1ರಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಅಭ್ಯಥರ್ಿಗಳು ತಮ್ಮ ಬೆಂಬಲಗರನ್ನು ವಾಹನಗಳ ಮೂಲಕ ಕರೆದುಕೊಂಡು ನೆಹರು ಸರ್ಕಲ್ ಮೂಲಕ ತಾಲ್ಲೂಕು ಕಛೇರಿವರೆಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವದಕ್ಕೂ ಮೊದಲು ಅಭ್ಯಥರ್ಿಗಳು ತಮ್ಮ ಇಷ್ಟ ದೇವರುಗಳಿಗೆ ಪೂಜೆ ಸಲ್ಲಿಸಿ ಆಗಮಿಸಿದ್ದು ವಿಶೇಷವಾಗಿತ್ತು.

 

ಜಲಸಂಗ್ರಹಗಾರದ ಘಟಕಕ್ಕೆ ಶಾಸಕರಿಂದ ಶಂಕುಸ್ಥಾಪನೆ 
ಚಿಕ್ಕನಾಯಕನಹಳ್ಳಿ,ಫೆ.01 : ಪಟ್ಟಣದ ಮಾರುಕಟ್ಟೆ ಹಾಗೂ ಜೋಗಿಹಳ್ಳಿ ಬಳಿ ಪುರಸಭೆ ವತಿಯಿಂದ ನೂತನವಾಗಿ ನಿಮರ್ಿಸಲಾಗುವ ನೆಲಮಟ್ಟದ ಜಲಸಂಗ್ರಹಗಾರದ ಘಟಕಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಗುದ್ದಲಿ ಪೂಜೆ ನೆರವೇರಿದ ಘಟಕಗಳಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸರಬರಾಜಿಗೆ ಸಹಾಯವಾಗಲಿದೆ, ಮಾರುಕಟ್ಟೆ ಬಳಿ ನಿಮರ್ಾಣವಾಗುತ್ತಿರುವ ಘಟಕ 10.15ಲಕ್ಷ ಹಾಗೂ ಜೋಗಿಹಳ್ಳಿ ಆದಿ ಆಂಜನೇಯಸ್ವಾಮಿ ದೇವಾಲಯದ ಬಳಿ ನಿಮರ್ಾಣವಾಗುತ್ತಿರುವ ಘಟಕ 10.15ಲಕ್ಷ.ರೂ ವೆಚ್ವವಾಗಲಿದೆ ಎಂದರು.  
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ಬಿ.ಇಂದಿರಾ, ಸಿ.ಡಿ.ಚಂದ್ರಶೇಖರ್,  ಪುಷ್ಪ.ಟಿ.ರಾಮಯ್ಯ, ರೂಪ, ಎಂ.ಕೆ.ರವಿಚಂದ್ರ, ಸಿ.ಎಂ.ರಾಜಶೇಖರ್, ಧರಣಿ.ಬಿ.ಲಕ್ಕಪ್ಪ, ರೇಣುಕಮ್ಮ, ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಮಹಮದ್ಖಲಂದರ್, ಸಿ.ಟಿ.ದಯಾನಂದ್, ಎಂ.ಕೆ.ರವಿಚಂದ್ರ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.