Monday, February 7, 2011

ಅಧಿಕಗೊಂಡಿರುವ ಸರಣಿ ಕಳ್ಳತನ, ಆತಂಕದಲ್ಲಿ ಜನತೆ: ರಾತ್ರಿ ಪಹರೆಯಲ್ಲಿ ಯುವಕರು.
ಚಿಕ್ಕನಾಯಕನಹಳ್ಳಿ.ಫೆ.07: ತಾಲೂಕಿನ ಕುಪ್ಪೂರು ಸೇರಿದಂತೆ ಹಲವು ಭಾಗಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಪೋಲೀಸ್ನ ಪೇದೆಯೊಬ್ಬರ ಮನೆಯ ಬೀಗ ಹೊಡೆದಿರುವುದರಿಂದ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಭಾರಿ ಪ್ರಮಾಣದಲ್ಲಿ ಆದ ಕಳ್ಳತನವಿನ್ನು ಜನರ ಮನದಲ್ಲಿ ಹಸಿರಾಗಿರುವಾಗಲೇ, ಅದೇ ಕುಪ್ಪೂರಿನಲ್ಲಿ ಒಂದೇ ರಾತ್ರಿ 10 ಕಡೆ ಬೀಗ ಮುರಿದಿದ್ದಾರೆ, ಇದರಲ್ಲಿ ಒಂದು ದೇವಸ್ಥಾನವೂ ಸೇರಿದೆ. ಮಲ್ಲಿಗೆರೆಯಲ್ಲಿ ಮೂರು ಮನೆ ಬೀಗ ಹೊಡೆದಿದ್ದಾರೆ ಇದರಲ್ಲಿ ಒಂದು ಪೋಲೀಸ್ನವರ ಮನೆಯೂ ಸೇರಿದೆ, ಮತಿಘಟ್ಟದಲ್ಲಿ 2 ಮನೆ, ಅಣೆಕಟ್ಟೆಯಲ್ಲಿ ಒಂದು ಅಂಗಡಿ, ಚಿನಾಹಳ್ಳಿ ಪಟ್ಟಣದಲ್ಲಿ ಮೂರು ಅಂಗಡಿ, ಹಂದನಕೆರೆಯಲ್ಲಿ ಹಗಲಿನ ಸಮಯದಲ್ಲೇ ಕಳವು ಮಾಡಿರುವ ಪ್ರಕರಣಗಳು ನಡೆದಿವೆ.
ಕುಪ್ಪೂರಿನ ಜನ ಕಳ್ಳರ ಭಯಕ್ಕೆ ರೋಸಿ, ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ಪ್ರತಿ ರಾತ್ರಿ ಐದಾರು ಜನರ ಗುಂಪು ಪ್ರತಿದಿನ ರಾತ್ರಿ ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ರಾತ್ರಿ ಐದಾರು ಜನರ ಗುಂಪು ಪೋಲಿಸನವರೊಂದಿಗೆ ಪಹರೆ ಮಾಡುತ್ತಿದ್ದಾರೆ.
ಮೊನ್ನೆ ರಾತ್ರಿ ಅಣೆಕಟ್ಟೆ, ಕುಪ್ಪೂರು, ಮತಿಘಟ್ಟ ಮಲ್ಲಿಗೆರೆ ಈ ನಾಲ್ಕು ಊರುಗಳಲ್ಲಿ ಒಂದೇ ರಾತ್ರಿ ಬೀಗ ಮುರಿದಿರುವುದು ಹಲವು ಅನುಮಾನಗಳಿಗೆ ಗ್ರಾಸವಾಗಿದೆ. ಅಣೆಕಟ್ಟೆಯಲ್ಲಿ ಅಂಗಡಿಯೊಂದರ ಬೀಗ ಮುರಿದು ಕೈಗೆ ಸಿಕ್ಕಿದ್ದು ತೆಗೆದುಕೊಂಡು ಹೋಗಿದ್ದಾರೆ. ಕುಪ್ಪೂರಿನಲ್ಲಿ ಬ್ರಹ್ಮದೇವರ ದೇವಸ್ಥಾನದ ಬೀಗ ಮುರಿದಿದ್ದು ಎರಡು ಹೊಸ ಸೈಕಲ್ಗಳನ್ನು ಕದಿದ್ದಾರಲ್ಲದೆ, ಅಲ್ಲಿದ್ದ ಟೈರು, ಟ್ಯೂಬ್, ಆಯಿಲ್ ಸೇರಿದಂತೆ 25 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕದಿದ್ದಾರೆ. ರಾಮು ಟೈಲರ್ ಅಂಗಡಿಗೆ ನುಗ್ಗಿರುವ ಕಳ್ಳರು ಬಟ್ಟೆ ಬರೆಗಳನ್ನು ಹೊತ್ತು ಹೊಯ್ದಿದ್ದಾರೆ. ಇದಲ್ಲದೆ ಕುಪ್ಪೂರಿನ ಗೋವಿಂದಪ್ಪ ಬಿನ್ ನಾರಾಯಣಪ್ಪ, ಪೋಸ್ಟಮನ್ ಮರುಳಯ್ಯ, ಸಿದ್ದಮರಿ, ನರಸಿಂಹಯ್ಯ, ಲಕ್ಕಮ್ಮ, ರಾಮಣ್ಣ ಎಂಬುವರ ಮನೆಗಳ ಬೀಗ ಮುರಿದಿದ್ದಾರೆ.
ಮಲ್ಲಿಗೆರೆ ಮೂಲ ನಿವಾಸಿ ಮತ್ತಿಘಟ್ಟ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿರುವ ರವಿ ಎಂಬುವರ ಮನೆಯ ಬೀಗವನ್ನು ಹೊಡೆದಿದ್ದಾರೆ, ಅದೇ ಗ್ರಾಮದ ಸಿದ್ದರಾಮಣ್ಣ ಎಂಬುವರ ಮನೆಯ ಬೀಗವನ್ನು ಮುರಿದಿದ್ದಾರೆ.
ಒಟ್ಟಿನಲ್ಲಿ ಈ ಕಳ್ಳರ ಗುಂಪು ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿರುವ ಮನೆಗಳನ್ನು ಹುಡುಕಿಕೊಂಡು ಅಂತಹ ಮನೆಗಳ ಬೀಗವನ್ನೇ ಹೊಡಿದಿದ್ದಾರೆ.
ಈ ಮೇಲಿನ ವಿಷಯಗಳು ಒಂದೇ ರಾತ್ರಿ ಬೀಗ ಮುರಿದ ಪ್ರಕರಣಗಳಾದರೆ, ಈ ಭಾಗದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಮೊದಲು ಆರಂಭಗೊಂಡಿದ್ದು ದೇವಸ್ಥಾನಗಳ ಬೀಗ ಮುರಿಯುವ ಹಾಗೂ ದೇವರ ಆಭರಣಗಳನ್ನು ಕದ್ದು ಹೊಯ್ಯುವ ಪ್ರಕರಣಗಳು, ಆರಂಭದಲ್ಲಿ ಸೋರಲಮಾವಿನಲ್ಲಿ ಗ್ರಾಮದೇವರ ದೇವಸ್ಥಾನದ ಬೀಗಹೊಡೆದು ಅಲ್ಲಿದ್ದ ಸಣ್ಣಪುಟ್ಟ ವಸ್ತಗಳನ್ನು ಕದ್ದಿರುವುದು, ನಂತರ ಹೊಸಕೆರೆಯಲ್ಲಿನ ತೋಟದಲ್ಲಿನ ದೇವಸ್ಥಾನ, ತದನಂತರ ಕುಪ್ಪೂರು ಬಳಿಯ ತೋಟದಲ್ಲಿರುವ ಆಂಜನೇಯ ದೇವಸ್ಥಾನ, ಇದಾದನಂತರ ತಮ್ಮಡಿಹಳ್ಳಿಯಲ್ಲಿ, ನಂತರದಲ್ಲಿ ಬಹುದೊಡ್ಡ ಮಟ್ಟದ ಕಳ್ಳತನವೆಂದರೆ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಮಠದಲ್ಲಿ ಲಕ್ಷಗಟ್ಟಲೆ ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಹೊಯ್ದಿರುವುದು. ತಾಲೂಕಿನ ಇತಿಹಾಸದಲ್ಲೇ ಮಠ ಒಂದಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಬೆಳ್ಳಿ ಆಭರಣಗಳನ್ನು ಕದ್ದಿರುವುದು ಇದೇ ಪ್ರಥಮ.
ಇವಿಷ್ಟು ತಾಲೂಕಿನ ಗ್ರಾಮಾಂತರ ಮಟ್ಟದಲ್ಲಾದರೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ ಒಂದೇ ದಿನ ಮೂರು ಅಂಗಡಿಗಳಿಗೆ ನುಗ್ಗಿ ಅಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹಾಗೂ ನಗದನ್ನು ಹೊತ್ತು ಹೊಯ್ದಿರುವ ಘಟನೆಯೂ ನಡೆದಿದೆ. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಗುರು ಬಾರ್ ರೆಸ್ಟೋರೆಂಟ್ಗೆ ನುಗ್ಗಿ ಅಲ್ಲಿದ್ದ ಮಧ್ಯವನ್ನು ಕದ್ದು ಅದೇ ರಸ್ತೆಯಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿ ಬಳಿಯ ಪ್ರಕಾಶ್ ಎಂಬುವರ ಅಂಗಡಿಗೆ ನುಗ್ಗಿ ಅಲ್ಲೇ ಮಧ್ಯೆವನ್ನು ಕುಡಿದು, ಸಿಕ್ಕ ಕುರುಕಲು ತಿಂಡಿಯನ್ನು ತಿಂದ್ದು ಬಾಟಲಿ ಮತ್ತಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಅದೇ ದಿನ ಆ ರಸ್ತೆಯ ಹಿಂಭಾಗದ ಬೀದಿಯಲ್ಲಿ ಸೋಮಶೇಖರ್ ಎಂಬುವರಿಗೆ ಸೇರಿದ ಅಂಗಡಿಯಲ್ಲೂ ನಗದು ಮತ್ತು ದಿನ ಬಳಕೆಯ ವಸ್ತುಗಳನ್ನು ಕದಿದ್ದಾರೆ.
ಪಟ್ಟಣದ ಯುನಿವರ್ಸಲ್ ಕಂಪ್ಯೂಟರ್ ಕೇಂದ್ರದಲ್ಲಿ 6 ಸಿ.ಪಿ.ಯು, ಯು.ಪಿ.ಎಸ್ ಸೇರಿದಂತೆ ಕಂಪ್ಯೂಟರ್ಗಳ ಬಿಡಿ ಭಾಗಗಳನ್ನು ಕದಿದ್ದಾರೆ
ಪಟ್ಟಣದ ಹೊರ ವಲಯದ ಮಸಾಲ್ತಿಗುಡ್ಲುವಿನಲ್ಲಿ ಶಿವಣ್ಣ ಎಂಬವರಿಗೆ ಸೇರಿದ ತೆಂಗಿನ ಕಾಯಿ ಗೋಡೌನ್ನಿನ ಬೀಗ ಹೊಡೆದಿದ್ದಾರೆ.
ಈ ಎಲ್ಲಾ ಪ್ರಕರಣಗಳಿಂದ ಜನ ಆತಂಕದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕುಪ್ಪೂರು ಮಠದ ಕಳ್ಳತನ ಮಾಡಿರುವವರು ಹೈಟೆಕ್ ಕಳ್ಳರು, ಈಗ ಬೀಗ ಮುರಿದಿರುವವರು ಸಣ್ಣ ಪುಟ್ಟ ಕಳ್ಳರು, ಈ ಇಬ್ಬರನ್ನು ಹಿಡಿಯಲು ತಂತ್ರ ರೂಪಿಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದೇವೆ. ನಮ್ಮಲ್ಲೂ ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತರಾಗುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ.
ಆದರೆ ಜನತೆ ಪೊಲೀಸಿನವರ ಸಬೂಬು ಕೇಳುವ ಸ್ಥಿತಿಯಲಿಲ್ಲ, ನಮಗೆ ರಾತ್ರಿ ಹೊತ್ತು ನಿದ್ದೆ ಬಾರದೆ ಸದಾ ಎಚ್ಚರದಲ್ಲಿರುವಂತಾಗಿದೆ. ಪೊಲೀಸ್ ಅಧಿಕಾರಿಗಳು ಹೇಗಾದರೂ ಸರಿಯೇ ಆ ಕಳ್ಳರನ್ನು ಹಿಡಿದು ನಮಗೆ ಕಣ್ಣು ತುಂಬಾ ನಿದ್ದೆ ಮಾಡುವಂತಹ ವಾತಾವರಣ ನಿಮರ್ಿಸುವಂತಾಗಬೇಕು ಎನ್ನುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಏನೆನ್ನುತ್ತಾರೆ.
ಆರೋಗ್ಯಕ್ಕಾಗಿ ಸತ್ಸಂಗ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಫೆ.07: ಆರೋಗ್ಯಕ್ಕಾಗಿ ಸತ್ಸಂಗ ಎಂಬ ಉಪನ್ಯಾಸವನ್ನು (ಇಂದು) ಪೆ.8ರಿಂದ ಪ್ರತಿ ಮಂಗಳವಾರ ಸಂಜೆ 6ರಿಂದ 7ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಉಪನ್ಯಾಸವನ್ನು ಪಟ್ಟಣದ ಬ್ರಹ್ಮ ವಿದ್ಯಾ ಸಮಾಜದಲ್ಲಿ ಏರ್ಪಡಿಸಲಾಗಿದ್ದು ಆರೋಗ್ಯಸಕ್ತರಿಗೆ ಯೋಗವಿಜ್ಷಾನ ,ಧ್ಯಾನಗಳ ಬಗ್ಗೆ ಶಿಬಿರದಲ್ಲಿ ಹೆಚ್ಚಿನ ವಿವರ ನೀಡಲಿದ್ದು ಪ್ರವೇಶ ಉಚಿತವಾಗಿರುವುದರಿಂದ ಎಲ್ಲಾ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.