Thursday, May 27, 2010



ಶಾಲೆಯ ಆರಂಭದಂದು ಹಬ್ಬದ ವಾತಾವರಣವಿರಲಿ: ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಮೇ.26: ತಾಲೂಕಿನ ಶಾಲೆಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದು ಮುಖ್ಯಶಿಕ್ಷಕರು ಮೇ 24ರಿಂದಲೇ ಶಾಲೆಯಲ್ಲಿ ಹಾಜರಿದ್ದು ಮಾಗರ್ಾಧಿಕಾರಿಗಳಿಂದ ಸ್ವೀಕರಿಸಲು ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವಕ್ಕೆ ಮುಂಚಿತವಾಗಿ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆಗಳನ್ನು ಸುಣ್ಣ-ಬಣ್ಣ ಮಾಡಿಸಿ ಸುಸ್ಥಿತಿಯಲ್ಲಿಟ್ಟು ಮಕ್ಕಳ ಬಳಕೆಗೆ ಒದಗಿಸುವುದು, ಹಾಗೂ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಪೋಷಕರು, ಗ್ರಾಮಸ್ಥರ ಸಹಕಾರ ಪಡೆದು ಮೇ 31ರಂದು ಹಬ್ಬದ ವಾತಾವರಣದಲ್ಲಿ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ನಡೆಸಲು ಮುಖ್ಯಶಿಕ್ಷಕರು ಕ್ರಮವಹಿಸುವಂತೆ ತಿಳಿಸಿದ್ದಾರೆ.
ಜಕಣಾಚಾರ್ಯರಿಗೆ ಸಕರ್ಾರ ಸೂಕ್ತ ಸ್ಥಾನಮಾನ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಮೇ.26: ಬೇಲೂರಿನ ಕಲಾ ವೈಭವವನ್ನು ಕೆತ್ತಿ ಕನರ್ಾಟಕದ ಕೀತರ್ಿ ಗೌರವವನ್ನು ಹೆಚ್ಚಿಸಿದ ಜಕ್ಕಣ್ಣಾಚಾರ್ಯರಿಗೆ ಸಕರ್ಾರವು ವಿಶೇಷ ಸ್ಥಾನಮಾನ ನೀಡಿಲ್ಲ ಇದಕ್ಕಾಗಿ ಸಕರ್ಾರದ ಮುಂದೆ ಒತ್ತಡ ಹೇರುವುದಾಗಿ ಸುಜ್ಞಾನ ಪೀಠ ಮಹಾಸಂಸ್ಥಾನ ಮಠದ ಶಿವಸುಜ್ಞಾನಮೂತರ್ಿ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಯ್ಸಳರ ಕಾಲದ ಕಾಳಿಕಾಂಬ ದೇವಾಲಯದಲ್ಲಿನ ಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕುಂಭಾಭಿಷೇಕ ನಂತರ ನಡೆದ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮಾಜದವರು ಜಾತಿ, ಮತದ ಭಾವನೆ ಬಿಟ್ಟು ಎಲ್ಲಾ ಧಾಮರ್ಿಕ ಸಮಾರಂಭಗಳಲ್ಲಿ ಪಾಲ್ಗೊಂಳ್ಳಬೇಕು ಮತ್ತು ವಿಶ್ವಕರ್ಮ ಸಮಾಜದವರು ಈ ಸಮಾರಂಭದ ಮೂಲಕ ಎಲ್ಲಾ ಧಾಮರ್ಿಕ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾರಂಭದ ಐಕ್ಯತೆಯನ್ನು ಹೆಚ್ಚಿಸಿದ್ದಾರೆ ಎಂದರು.
ಕುಪ್ಪೂರು ಮಠದ ಡಾ.ಯತೀಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಎಲ್ಲಾ ಕೆಲಸಗಳನ್ನು ಸ್ವಾಮೀಜಿಗಳಿಂದ ಸಾಧ್ಯವಿಲ್ಲ ವಿಶ್ವಕರ್ಮ ಸಮಾಜದವರು ತಮ್ಮ ಸಾಮಥ್ರ್ಯ ಪ್ರದಶರ್ಿಸಲು ಕಲೆಯಿಂದ ಮತ್ತು ತಮ್ಮ ಬುದ್ದಿಶಕ್ತಿಯಿಂದ ತಮ್ಮ ಸಂಘಟನೆಯನ್ನು ಹೆಚ್ಚಿಸಬೇಕು ಎಂದ ಅವರು ಯಾವುದೇ ಧರ್ಮವನ್ನು ಜಾತಿಯಿಂದ ಪರಿಗಣಿಸದೆ ಅವರ ಪ್ರತಿಭೆಯಿಂದ ಗುರುತಿಸಬೇಕು ಎಂದರು.
ಸಮಾರಂಭದಲ್ಲಿ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮೀ, ಗುರುನಾಥಸ್ವಾಮೀ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಕರುಣಾಕರಸ್ವಾಮಿ, ಕೃಷ್ಣಯಾದವಾನಂದ ಸ್ವಾಮಿ, ಬಸವಮಾಚೀದೇವಸ್ವಾಮಿ, ಸದರ್ಾರ್ ಸೇವಾಲಾಲ್ ಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮದಾನಪ್ಪ, ಜಿಲ್ಲಾ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಚಲನಚಿತ್ರ ನಟ ಅರವಿಂದ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಹೆಚ್.ಪಿ.ನಾಗರಾಜು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿರ್ಣಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿಗಳನ್ನು ನಿರ್ಣಯಿಸಲು ಇದೇ 29ರ ಶನಿವಾರ ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀಲಕ್ಷ್ಮಿನರಸಿಂಹ(ಎಸ್.ಎಲ್.ಎನ್) ಚಿತ್ರಮಂದಿರದಲ್ಲಿ ಎಲ್ಲಾ ನೂತನ ಸದಸ್ಯರ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಸಭೆಗೆ ತಾಲೂಕಿನ ಗ್ರಾ.ಪಂಗಳಿಂದ ಒಟ್ಟು 484 ಚುನಾಯಿತ ಪ್ರತಿನಿಧಿಗಳು ಭಾಗವಹಿಸಲು ಅರ್ಹರಿದ್ದು, ಸಭೆಗೆ ಬರುವಾಗ ಸದಸ್ಯರು ತಮ್ಮ ಗುರುತಿನ ಕಾಡರ್್ ಕಡ್ಡಾಯವಾಗಿ ತರಲು ತಿಳಿಸಿರುವ ಅವರು, ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹಾಗೂ ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ ಭಾಗವಹಿಸಲಿದ್ದಾರೆ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಭಿವೃದ್ದಿಗೆ ಎರಡು ಲಕ್ಷ: ಡಾ.ಹುಲಿನಾಯ್ಕರ್
ಚಿಕ್ಕನಾಯಕನಹಳ್ಳಿ,ಮೇ.27: ಪಟ್ಟಣ ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯ ಅಭಿವೃದ್ದಿಗೆ ತಮ್ಮ ಅಭಿವೃದ್ದಿ ನಿಧಿಯಿಂದ ಎರಡು ಲಕ್ಷ ರೂಗಳ ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ಪಟ್ಟಣದ ಎಸ್.ಆರ್.ಎಸ್. ಕಂಬಳಿ ಸೊಸೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಬಾರಿಯ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಈ ಸೊಸೈಟಿಗೆ ವಿನಿಯೋಗಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು, ಈ ಸೊಸೈಟಿಯ ಅಭಿವೃದ್ದಿಗೆ ಸಕರ್ಾರದ ಹಂತದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕಾಲ ಕಾಲಕ್ಕೆ ತಿಳಿಸುವಂತೆ ಸೂಚಿಸಿದರಲ್ಲದೆ, ರಾಜ್ಯದಲ್ಲಿ ಕಂಬಳಿ ಸೊಸೈಟಿಗಳ ಅಭಿವೃದ್ದಿಗೆ ಸಕರ್ಾರ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಪರಿಷತ್ನಲ್ಲಿ ಪ್ರಶ್ನೆ ಮಾಡುವುದಾಗಿ ಹುಲಿನಾಯ್ಕರ್ ತಿಳಿಸಿದರು.
ಸೊಸೈಟಿಯಲ್ಲಿರುವ ವಿವಿಧ ರೀತಿಯ ಕಂಬಳಿಗಳನ್ನು ಹಾಗೂ ಮಗ್ಗಗಳನ್ನು ವೀಕ್ಷಿಸಿದ ಅವರು, ಇಂದಿನ ಸಮಾಜಕ್ಕೆ ಹೊಂದಿಕೆಯಾಗುವ ರೂಪದಲ್ಲಿ ನವೀನ ರೀತಿಯಲ್ಲಿ ಕಂಬಳಿ ಉತ್ಪಾದಿಸಲು ತಿಳಿಸಿದರಲ್ಲದೆ, ಉತ್ಪಾದನೆಯನ್ನು ತಾಂತ್ರಿಕತೆಗೊಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಕಂಬಳಿ ಸೊಸೈಟಿ ಕಾರ್ಯದಶರ್ಿಗೆ ಸೂಚಿಸಿದರು.
ಉಣ್ಣೆ ರವಾನೆಯ ಬಗ್ಗೆ ವಿವರ ಪಡೆದರಲ್ಲದೆ, ಉತ್ಪಾದನೆಗೊಂಡ ಕಂಬಳಿಗಳ ಬೆಲೆಯ ಬಗ್ಗೆ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಹಾಗೂ ನೇಕಾರರ ಆಥರ್ಿಕತೆಯ ಬಗ್ಗೆಯೂ ಸಂಪೂರ್ಣ ವಿವರ ಪಡೆದರು.
ಈ ಸಂದರ್ಭದಲ್ಲಿ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ಬೀರಲಿಂಗಯ್ಯ,ಸಿ.ಎಚ್.ಅಳವೀರಯ್ಯ, ಆರ್.ಜಿ.ಗಂಗಾಧರ್, ವಿಜಯಕುಮಾರ್, ಗೋವಿಂದಯ್ಯ, ಕಾರ್ಯದಶರ್ಿ ಸಿ.ಎಚ್.ಗಂಗಾಧರ್, ಪುರಸಭಾ ಸದಸ್ಯ ದೊರೆಮುದ್ದಯ್ಯ, ಸಿ.ಟಿ.ಗುರುಮೂತರ್ಿ, ಸಿ.ಎನ್.ಭಾನುಕಿರಣ್, ಡಾ.ರಘುಪತಿ, ಅಳವೀರಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಣೆ
ಚಿಕ್ಕನಾಯಕನಹಳ್ಳಿ,ಮೇ.27: ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಎಲ್ಲಾ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಿಸಲಾಗುವುದು ಎಂದು ಗೆಳೆಯರ ಬಳಗದ ಅಧ್ಯಕ್ಷ ಸಿ.ಎಚ್. ಹೊಸೂಪ್ಪ ಚೌಡಿಕೆ ತಿಳಿಸಿದ್ದಾರೆ.
ತಟ್ಟೆ ಲೋಟ ವಿತರಣಾ ಸಮಾರಂಭವನ್ನು ಜೂನ್ 7ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ವರ್ಷ ಒಂದುವರೆ ಸಾವಿರ ತಟ್ಟೆ ಲೋಟಗಳನ್ನು ವಿತರಿಸಲು ನಮ್ಮ ಗೆಳೆಯ ಬಳಗ ನಿರ್ಧರಿಸಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಓದಿ ಉತ್ತಮ ಜೀವನ ಮಾರ್ಗಗಳನ್ನು ಕಂಡುಕೊಂಡಿರುವ ನಾವುಗಳು, ಬೆಂಗಳೂರಿಗಷ್ಟೇ ಸೀಮಿತವಾಗದೆ, ನಮ್ಮ ಹುಟ್ಟೂರಿನ ಸಕರ್ಾರಿ ಶಾಲೆಗಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂಬ ಉದ್ದೇಶ ಹಾಗೂ ನಾವು ಓದಿದ ಶಾಲೆಯ ಋಣವನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವ ಹಂಬಲದಿಂದ ನಮ್ಮ ಬಳಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.
ಪಟ್ಟಣದ ಶಾಲೆಗಳ ಜೊತೆಗೆ ಮುದ್ದೇನಹಳ್ಳಿ, ತೀರ್ಥಪುರ ಹಾಗೂ ಜೆ.ಸಿ.ಪುರದಲ್ಲಿರುವ ಸಕರ್ಾರಿ ಎಚ್.ಪಿ.ಎಸ್ ಶಾಲೆಗಳಿಗೂ ತಟ್ಟೆ ಲೋಟ ವಿತರಿಸಲಾಗುವುದು ಎಂದು ಹೊಸರಪ್ಪ ತಿಳಿಸಿದ್ದಾರೆ.