Saturday, November 20, 2010


ಕನಕ ದಾಸರ ಜಯಂತ್ಯೋತ್ಸವದಂದು ವಿವಿಧ ರೀತಿಯ ಮೆರವಣಿಗೆ, ವೇಷಗಾರಿಕೆ
ಚಿಕ್ಕನಾಯಕನಹಳ್ಳಿ,ನ.20: ತಾಲೂಕು ಮಟ್ಟದ ಭಕ್ತ ಕನಕ ದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 24ರ ಬುಧವಾರ ಮಧ್ಯಾಹ್ನ 12-30ಕ್ಕೆ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಅಂದು ಬೆಳಗ್ಗೆ 9ಗಂಟೆಗೆ ನಡೆಯುವ ವೈಭವದ ಉತ್ಸವವು ನಡೆಯಲಿದ್ದು ಉತ್ಸವದ ಜೊತೆಗೆ ಮಹಿಳಾ ವೀರಗಾಸೆ ಕುಣಿತ, ಯುವಕರ ತಂಡದ ದೊಳ್ಳು ಕುಣಿತ, ಕೋಲಾಟ ಕುಣಿತ, ಗಾರುಡಿಗನ ಕುಣಿತ, ನಾಸಿಕ್ ಡೋಲು ವಾದ್ಯ, ಪಾಳೇಗಾರರ ವೇಷ, ಪಟ ಕುಣಿತ, ಕನಕದಾಸರ ವೇಷಗಾರಿಕೆ ಮತ್ತು ಸ್ಥಬ್ದ ಚಿತ್ರಗಳೊಂದಿಗೆ ವೇದಿಕೆಯವರೆವಿಗೂ ಉತ್ಸವ ಹಮ್ಮಿಕೊಳ್ಳಲಾಗಿದೆ.


ಮಾಧ್ಯಮದಂತೆ ಕೆಲಸ ನಿರ್ವಹಿಸುವ ಬ್ಯಾಂಕ್ ಶಾಖೆಗಳು
ಚಿಕ್ಕನಾಯಕನಹಳ್ಳಿ,ನ.20: ಬ್ಯಾಂಕ್ ಒಂದು ಮಾಧ್ಯಮವಿದ್ದಂತೆ ಕೆಲಸ ನಿರ್ವಹಿಸಿ ಎಲ್ಲರಿಗೂ ಸಮನಾಗಿ ಸೌಲಭ್ಯಗಳನ್ನು ನೀಡುವ ಒಂದು ಸಹಾಯ ಕೇಂದ್ರ ಎಂದು ಬ್ಯಾಂಕ್ ಇನ್ಸ್ಪೆಕ್ಟರ್ ಸತೀಶ್ ಹೇಳಿದರು.
ಪಟ್ಟಣದ ಕೆನರ ಬ್ಯಾಂಕ್ ಆವರಣದಲ್ಲಿ ನಡೆದ ಪೌಂಡರ್ಸ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೋಷಕರು ಉಳಿತಾಯ ಮಾಡುವುದರಲ್ಲದೇ ಮಕ್ಕಳಿಗೂ ಉಳಿತಾಯದ ಬಗ್ಗೆ ತಿಳಿಸಬೇಕು ಅದಕ್ಕಾಗಿ ಬ್ಯಾಂಕ್ಗಳ ಖಾತೆಗಳನ್ನು ತೆರೆಯಿಸಿ ಮಕ್ಕಳೇ ಹಣವನ್ನು ಸಂದಾಯಿಸಲು ತಿಳಿಸಬೇಕು ಎಂದ ಅವರು ಮಕ್ಕಳಿಗಾಗಿ ಶಿಕ್ಷಣ ಸಾಲವನ್ನು ಬ್ಯಾಂಕ್ ನೀಡಲಿದ್ದು ಅದನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು.
ಬ್ಯಾಂಕ್ ಇನ್ಸ್ಪೆಕ್ಟರ್ ಈರಣ್ಣನಾಯಕ ಮಾತನಾಡಿ ಮಕ್ಕಳ ಖಾತೆಗಳನ್ನು ಅವರ ಪಿ.ಯು.ಸಿ ವಿದ್ಯಾಭ್ಯಾಸ ಮುಗಿಯುವವರೆಗೂ ಅವರು ಪಡೆದಿರುವ ಲೋನ್ ಹಣದಲ್ಲಿ ಮಕ್ಕಳು ಹಣ ಬಿಡುಗಡೆ ಮಾಡಲು ಅರ್ಹರಲ್ಲ ಅದಕ್ಕಾಗಿ ಪಿಯುಸಿ ವಿದ್ಯಾಭ್ಯಾಸ ಮುಗಿಯಬೇಕು ಎಂದರು.
ಸಮಾರಂಭದಲ್ಲಿ ಮ್ಯಾನೇಜರ್ ನಾಗರಾಜ್ ಉಪಸ್ಥಿತರಿದ್ದರು

ಕಾಮ ಕ್ರೋದ ಗೆಲ್ಲುವ ಶಕ್ತಿ ಸಾಹಿತ್ಯಕ್ಕಿದೆ
ಚಿಕ್ಕನಾಯಕನಹಳ್ಳಿ,ನ.20: ಸಜ್ಜನರ ಸಂಘ ಮತ್ತು ಸಾಹಿತ್ಯದ ವ್ಯಾಸಾಂಗವು ಜೀವನದಲ್ಲಿ ಸಿಗುವ ಉತ್ತಮ ಮೌಲ್ಯ, ಈ ಎರಡೂ ಕಾಮ, ಕ್ರೋದ, ಮತ್ಸರಗಳನ್ನು ತೊರೆಯುವ ಒಂದು ಸಿಹಿ ಸಾಧನ ಎಂದು ಸಾಹಿತಿ ಆರ್.ಬಸವರಾಜು ಹೇಳಿದರು.
ಪಟ್ಟಣದ ತೀ.ನಂ.ಶ್ರೀ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಂಥಾಲಯಕ್ಕೆ ಬರುವ ಓದುಗರು ಕೇವಲ ಪತ್ರಿಕೆಗಳನ್ನು ಮಾತ್ರ ಓದದೆ ಸಾಹಿತ್ಯದ ಪುಸ್ತಕವನ್ನು ಓದಿ ಅದರಲ್ಲಿನ ಸಿಹಿಯನ್ನು ಅರಿತು ಜ್ಞಾನವೆಂಬ ಜ್ಯೋತಿ ಬೆಳಗಿಸಬೇಕು, ಅಲ್ಲದೆ ಜ್ಞಾನ ಮತ್ತು ವ್ಯಕ್ತಿಯ ಕ್ರಿಯೆಗಳು ಸಂಗಮವಾದಾಗ ವ್ಯಕ್ತಿತ್ವ ವಿಕಸನವಾಗಿ ಜೀವನದ ಮೌಲ್ಯ ಬೆಳಕಿಗೆ ಆಗಮಿಸಿ ಜ್ಞಾನವು ಶಾಶ್ವತವಾಗಿ ಉಳಿಯುತ್ತದೆ ಎಂದ ಅವರು ಸಾಹಿತ್ಯವನ್ನು ಬೆಳಸಿಕೊಂಡವರು ನೀತಿ ನಿಯಮದ ಜೊತೆಗೆ ತನ್ನದೇ ಆದ ಆದರ್ಶಗಳನ್ನು ಪಾಲಿಸುವಲ್ಲಿ ಮಗ್ನರಾಗಿ ಸಾಹಿತ್ಯದ ನವರಸ ಸಂಗಮವನ್ನು ಎಲ್ಲೆಡೆ ಹರಿಸಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ 30 ವರ್ಷಗಳ ಹಿಂದೆ ಸ್ಥಾಪಿತವಾದ ಗ್ರಂಥಾಲಯ ಇಂದು ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರಿಗೂ ಜ್ಞಾನವನ್ನು ನೀಡುತ್ತಿದೆ, ವಿಶ್ವೇಶ್ವರಯ್ಯನಂತಹ ಮಹಾನ್ ವ್ಯಕ್ತಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಜ್ಞಾನವಿದ್ದರೆ ನಾವೂ ಮಣ್ಣಾದ ಮೇಲೂ ಜ್ಞಾನ ಬಳಕೆಗೆ ಬರುತ್ತದೆ ಎಂದು ಸಾರಿದವರು ಅವರು ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮಾತನಾಡಿ ಗ್ರಂಥಾಲಯವು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕ ಇಲ್ಲಿ ಎಲ್ಲಾ ರೀತಿಯ ಪುಸ್ತಕ ಭಂಡಾರಗಳು ದೊರೆಯುವುದರಿಂದ ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಉಪಯೋಗವಾಗುವುದರಿಂದ ಗ್ರಂಥಾಲಯಕ್ಕೆ ಉತ್ತಮ ಪುಸ್ತಕಗಳು ಲಭ್ಯವಾಗಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕ ಜಿ.ರಂಗಯ್ಯ, ಗ್ರಂಥಾಲಯ ಸಹಾಯಕ ಬಸವರಾಜು ಉಪಸ್ಥಿತರಿದ್ದರು.