Friday, February 10, 2012

ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......
ಹೋಗುವೇನು ನಾ...
ಹೋಗುವೇನು ನಾ..
ನನ್ನ ಒಲ್ಮೆಯ ಗೂಡಿಗೆ

ಕುಪ್ಪಳಿಯಲ್ಲಿರುವ ಕವಿ ಮನೆಯ ವಿಹಂಗಮ ನೋಟ
ಮಲೆಯ ನಾಡಿಗೆ
ಮಳೆಯ ಬೀಡಿಗೆ
ಸಿರಿಯ ಚಲುವಿನ ರೂಢಿಗೆ
ಈ ಕವನದ ಸಾಲುಗಳು ಕು.ವೆಂ.ಪು ರವರು ತಮ್ಮ ಹುಟ್ಟೂರು ಕುಪ್ಪಳಿಯ ಬಗೆಗೆ ಹಾಗೂ ಅಲ್ಲಿಗೆ ಹೋಗುವಾಗ ತನ್ನ ಮನದಲ್ಲಾಗುವ ಲವಲವಿಕೆಗೆ ಒತ್ತಾಸೆಯಾಗಿ ಮೂಡಿಬಂದ ಭಾವನೆಗೆ ನೀಡಿರುವ ಅಕ್ಷರ ರೂಪ.
ಯುಗದ ಕವಿ, ಜಗದ ಕವಿ, ರಸ ಋಷಿ ಕುಪ್ಪಳಿಯ ಪುಟ್ಟಪ್ಪನಿಗೆ ತನ್ನ ಊರು, ಊರು ಎಂದರೆ ಅದು ಊರಲ್ಲ. ಪುಟ್ಟಪ್ಪ ತಾನು ಬಾಲ್ಯಕಳೆದ, ತನ್ನ ಪ್ರಕೃತಿಯ ಧ್ಯಾನಕ್ಕೆ ಒಲಿದ ಸ್ಥಳ. ದೊಡ್ಡ ಹಜಾರದ ಎರಡು ಮಹಡಿಗಳ ಕೆಂಪು ಹೆಂಚು ಮತ್ತು ಬಿಲ್ಲೆಯ ಹಾರನ್ನು ಹೊದ್ದಿರುವ ಒಂಟಿ ಮನೆ.
ಮನೆಯ ಹಿಂಭಾಗದಿಂದ ಹಿಡಿದು ಮುಂದಣ ವಾತಾವರಣವೆಲ್ಲಾ ಮಾಲೆ ಮಾಲೆಯಾಗಿ ಕಾಣುವ ಗಿರಿ ಪಂಕ್ತಿಗಳು, 'ಕವಿ ಮನೆ'ಯ ರಕ್ಷಣೆಯ ಜವಬ್ದಾರಿ ಹೊತ್ತಿರುವ ನೈಸಗರ್ಿಕ ಕೋಟೆ.
ಕವಿಮನೆಯ ಮುಂಬಾಗದ ಲಾನ್, ಹಸಿರು ಮುಚ್ಚಕೆಯ ದೊಡ್ಡ ಬಯಲು. ಬಯಲನ್ನು ಹಾದು,  ಕವಿ ಮನೆಯ ಒಳಗೆ ಪ್ರವೇಶ ಪಡೆದಾಕ್ಷಣ ಕಣ್ಣಿಗೆ ಬೀಳುವುದು ಕು.ವೆಂ.ಪು, ಹೇಮಾವತಿಯವರೊಂದಿಗೆ ಬಾಳ ಜೀವನಕ್ಕೆ ಅಡಿ ಇಟ್ಟ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿರುವ ಮದುವೆ ಮಂಟಪ. ಮಂಟಪದ ಪಕ್ಕದಲ್ಲಿ ಕಟ್ಟು-ಗ್ಲಾಸ್ಗೆ ಬಿಗಿದಪ್ಪಿರುವ ಇವರ ಮದುವೆಯ ಕರೆಯೋಲೆ.
ಈ ಮನೆಯ ಪ್ರತಿಯೊಂದು ವಸ್ತುಗಳ ಮೇಲೆ ಹದ್ದಿನ ನೋಟದಲ್ಲಿ ಕಣ್ಣಾಡಿಸುತ್ತೇನೆಂದರೂ ಕನಿಷ್ಟ ಒಂದು ದಿನವಾದರೂ ಬೇಕು. ಕವಿ ಮನೆಯಲ್ಲಿ ಕು.ವೆಂ.ಪು ಬಳಸುತ್ತಿದ್ದ ವಸ್ತುಗಳಿಂದ ಮೊದಲ್ಗೊಂಡು ಅವರ ಸಂಸಾರದ ಅಪರೂಪದ ಪೊಟೋಗಳು,  ಮರದ ವಸ್ತುಗಳು, ಅವರು ಬಳಸುತ್ತಿದ್ದ  ವಿಶೇಷ ವಸ್ತುಗಳಾದ ರೇಡಿಯೋ, ಪೆನ್ನುಗಳು, ಪ್ರಥಮ ಮುದ್ರಣಗೊಂಡ ಕೃತಿಗಳು, ಅವರನ್ನು ಹರಿಸಿ ಬಂದ ಪ್ರಶಸ್ತಿಗಳು(ಜ್ಞಾನಪೀಠ ಒಂದನ್ನು ಬಿಟ್ಟು), ಪದಕಗಳು, ಎಂಟು ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್ಗಳು, ಕೊನೆಗೆ ಅವರ ತಲೆ ಕೂದಲೂ ಸೇರಿದಂತೆ ಬಹುತೇಕ ಅಮೂಲ್ಯ ವಸ್ತುಗಳು ಅಲ್ಲಿ ನೋಡಸಿಗುತ್ತದೆ. ಕವಿ ಮನೆಯಿಂದ ಹೊರ ಬಂದು ಎಡಕ್ಕೆ ತಿರುಗಿದರೆ ಅಲ್ಲಿ ಕಾಣುವುದು 'ಕವಿಶೈಲ'ಕ್ಕೆ ಹೋಗುವ ಕಾಲು ದಾರಿ. ಕವಿಮನೆಯಿಂದ ಕವಿಶೈಲಕ್ಕೆ ಒಂದು ಕಿ.ಮೀ.ಯಷ್ಟು ದೂರ ನಡೆದರೆ ಅಲ್ಲಿ ನಮಗೆ ಮೊದಲು ಸಿಗುವುದು ಬೃಹದಾಕಾರವಾದ ಕಲ್ಲುಗಳನ್ನು ವಾಸ್ತುಶಿಲ್ಪಿ ಕೆ.ಟಿ.ಶಿಪಪ್ರಸಾದ್ರವರ ಕಲಾಶೈಲಿಯಲ್ಲಿ ನಿಮರ್ಿಸಿರುವ ಎಂಟು ಹೆಬ್ಬಾಗಿಲುಗಳು, ಅದನ್ನು ಹಾದು ಮುನ್ನಡೆದರೆ ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವುದು,  ಪ್ರಕೃತಿಯ ಕವಿ, ಪರಿಸರದ ಆರಾಧಕ, ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪ ನವರ ಸಮಾಧಿ. ಎಲ್ಲೂ ಕವಿಯ ಪ್ರಕೃತಿ ಪ್ರೇಮದ ಆಶಯಕ್ಕೆ ಭಂಗ ಬಾರದಂತೆ ಬಂಡೆಕಲ್ಲುಗಳನ್ನು ಸೀಳಿ ನಿಮರ್ಿಸಿರುವ ಸಮಾಧಿ. ಈ ಸಮಾಧಿ ಸಹಜವಾಗಿ ಪ್ರಕೃತಿಯೇ ರಚಿಸಿ ಕೊಂಡ ವಿಶಾಲ 'ಜಗತಿ'ಯಂತಿದೆ. ಸಮಾಧಿಯ ಅನತಿ ದೂರದ ಮೂಲೆಯೊಂದರಲ್ಲಿ ಕುವೆಂಪು ರವರ ಜನನ ಮತ್ತು ಮರಣದ ದಿನಾಂಕಗಳನ್ನು ಗಮನಿಸಿದವರಿಗೆ ಮಾತ್ರ ಮೊದಲ ನೋಟಕ್ಕೆ ಇದು ಕುವೆಂಪು ಸಮಾಧಿ ಎಂಬುದು ಅರಿವಿಗೆ ಬರುತ್ತದೆ.
ಕವಿ ಸಮಾಧಿಯಿಂದ ಮಾರು ದೂರಕ್ಕೆ  ಕುವೆಂಪು ಧ್ಯಾನ ಸ್ಥಿತಿಗೆಂದು ಬಂದು ಕುಳಿತುಕೊಳ್ಳುತ್ತಿದ್ದ ಬಂಡೆಗಲ್ಲು ಸಿಗುತ್ತದೆ. ಇಲ್ಲಿಗೆ ಕುವೆಂಪು ರವರ ಪ್ರಿಯ ಗುರುಗಳಾದ ಟಿ.ಎಸ್.ವೆಂಕಣಯ್ಯ ಹಾಗೂ ಬಿ.ಎಂ.ಶ್ರೀಕಂಠಯ್ಯ ನವರು ಕವಿ ಶೈಲಕ್ಕೆ ಬಂದ ಸವಿ ನೆನಪಿಗಾಗಿ ಅವರ ಚಿಕ್ಕ ರುಜುಗಳು ದಿನಾಂಕ ಸಮೇತವಿದೆ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರ 'ಪೂಚಂತೇ' ಸಹಿಯನ್ನು ನೋಡುವಿರಿ. ಇಲ್ಲಿಗೆ ಟಾರು ರಸ್ತೆಯೂ ಇದೆ. ವಾಹನಗಳಲ್ಲೂ ಹೋಗ ಬಹುದು. ಈ ತಾಣಕ್ಕೆ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುತ್ತಾರೆ.
ಕವಿಮನೆ, ಕವಿಶೈಲವಲ್ಲದೆ ಕು.ವೆಂ.ಪು ರವರನ್ನು ಕಾಡಿದ ಪ್ರಕೃತಿಯ ತಾಣಗಳೆಂದರೆ ಅಶೋಕ ವನ ಹಾಗೂ ಅರೆ ಕಲ್ಲು, ಇದು ಕುಪ್ಪಳಿಯಿಂದ ಒಂದುವರೆ ಕಿ.ಮೀ. ದೂರವಿರುವ ಸ್ಥಳ ಕು.ವೆಂ.ಪು, ಬೇಸರ ಕಳೆಯಲು ಈ ಜಾಗಕ್ಕೆ ಬರುತ್ತಿದ್ದರಂತೆ.
ನವಿಲು ಗುಡ್ಡ ಮತ್ತು ಸಿಬ್ಬಲು ಗುಡ್ಡ ಈ ಪ್ರದೇಶಗಳು ಪ್ರಕೃತಿಯ ಆರಾಧಕ, ಕುವೆಂಪು ರವರ ಕಾವ್ಯ ಕಟ್ಟುವ ಕೈಂಕರ್ಯಕ್ಕೆ ಉತ್ಸಾಹ ನೀಡುತ್ತಿದ್ದ ಜಾಗಗಳು, ಬಾನಂಗಳದಲ್ಲಿನ ಬೆಳ್ಳಕ್ಕಿಯ ಹಾರಾಟ ಕವಿಗೆ ದೇವರು ರುಜು ಮಾಡಿದಂತೆ ಭಾಸವಾದ ಸ್ಥಳ, ಸಿಬ್ಬಲು ಗುಡ್ಡ.
ರಾಜ್ಯ ಸಕರ್ಾರ ಕುಪ್ಪಳಿಯ ಸುತ್ತಲಿನ 3500 ಎಕರೆ ಅರಣ್ಯವನ್ನು ರಾಷ್ಟ್ರಕವಿ ಕುವೆಂಪು ಜೈವಿಕ ಧಾಮವನ್ನಾಗಿಸಿದೆ. ಹಂಪಿಯ ಕನ್ನಡ ವಿಶ್ವ ವಿದ್ಯಾಲಯ 2002-03ರಲ್ಲಿ ಕುವೆಂಪು ಕನ್ನಡ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಿ ಇಲ್ಲಿ ಕವಿಯ ವ್ಯಕ್ತಿ ವಿಚಾರ ಹಾಗೂ ಕೃತಿಗಳ ಅಧ್ಯಯನ ಮಾಡಲು ಅನುಕೂಲ ಮಾಡಿಕೊಟ್ಟಿದೆ.
2004ರಲ್ಲಿ ರಾಜ್ಯ ಸಕರ್ಾರ  ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶಾಲ ಭವನ ನಿಮರ್ಾಣ ಮಾಡಿದೆ. ಇಲ್ಲಿ ನಾಟಕ ಪ್ರದರ್ಶನ ಹಾಗೂ ಸಾಹಿತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 'ಹೇಮಾಂಗಣ'ವೆಂಬ ವೇದಿಕೆಯನ್ನು ನಿಮರ್ಿಸಿದೆ. ಹೊರಗಿನಿಂದ ಬರುವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಕಾಟೇಜ್ಗಳು ಹಾಗೂ ಡಾಮರ್ೆಂಟ್ರಿಗಳೂ ಇವೆ.
ಹೇಮಾಂಗಣದ ಎಡಭಾಗಕ್ಕೆ 'ಕಲಾ ನಿಕೇತನ'ವಿದೆ, ಇಲ್ಲಿ ಪೂರ್ಣಚಂದ್ರ ತೇಜಸ್ವಿ ತೆಗೆದ ಹಕ್ಕಿ ಪಕ್ಷಿಗಳ ಛಾಯಚಿತ್ರ ನೈಜತೆಗೆ ಮಂಕುಬರೆಸುವಂತಿದೆ. ಇಲ್ಲಿ ಕುವೆಂಪು ರಚಿಸಿದ ನಾಟಕಗಳಾದ 'ಬೆರಳ್ಗೆ ಕೊರಳ್', ಯಮನ ಸೋಲು ಸೇರಿದಂತೆ ಇತರ ನಾಟಕಗಳ ಭಾವ ಚಿತ್ರಗಳಿಗೆ ಕಲಾವಿದ ಸಿ.ಲಕ್ಷ್ಮಣ ರವರ ನೈಪುಣ್ಯತೆಯ ಟಚ್ ಸಿಕ್ಕಿದೆ.
ಹೇಮಾಂಗಣದಿಂದ ಒಂದುವರೆ ಕಿ.ಮೀ. ದೂರದ ಗಡಿಕಲ್ಲಿನ ಕಡೆಗೆ ತೆರಳಿದರೆ ಅಲ್ಲಿ ಹಂಪಿ ವಿ.ವಿ.ನೂತನವಾಗಿ ನಿಮರ್ಿಸಿರುವ 'ದೇಸಿ' ಕೇಂದ್ರವಿದೆ. ನಮ್ಮ ಜಾನಪದರ ಕಲಾವಂತಿಕೆಯ ಪ್ರದರ್ಶನ ಇಲ್ಲಿ ಅನಾವರಣಗೊಂಡಿದೆ.
ಇಲ್ಲಿರುವುದು ಇವಿಷ್ಟೇ ಅಲ್ಲ, ಪೂಚಂತೇ ಅವರ ಸ್ಮಾರಕವಿದೆ, ಹೆಗ್ಗಡತಿ, ನಾಯಿಗುತ್ತಿಯ ಲೋಹದ ಪ್ರತಿಮೆ ಇದೆ, ಇವುಗಳ ಜೊತೆಗೆ  ಹತ್ತಾರು ರೀತಿಯ ಕಾಡು ಪ್ರಾಣಿಗಳಿವೆ, ನೂರಾರು ಜಾತಿಯ ಚಿಟ್ಟೆಗಳಿವೆ. ಸಾವಿರಾರು ಪಂಗಡದ ಪಕ್ಷಿಗಳಿವೆ ಲಕ್ಷಾಂತರ ಸಸ್ಯ, ಗಿಡ, ಮರಗಳ ನೋಟ, ಖಗ ಮೃಗಗಳ ಕೂಗು, ಕಾನನ ಮಧ್ಯದಲ್ಲಿರುವ ನಿರವ ಮೌನ,  ಇವನ್ನೆಲ್ಲಾ ಅನುಭವಿಸಿ ತಣಿಯಬೇಕೇ ಹೊರತು, ಇವನ್ನೇಲ್ಲಾ ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ದೃಷ್ಠಿಹೀನರು ಆನೆಯನ್ನು ವಣರ್ಿಸಿದಂತಾಗುತ್ತದೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಗೆ ಬಸ್ ಸಂಚಾರ ಸುಗಮ. ತೀರ್ಥಹಳ್ಳಿಯಿಂದ ಕೊಪ್ಪ ಕಡೆ ಹೋಗುವ ಬಸ್ ಹತ್ತಿದರೆ ಕೊಪ್ಪ ಇನ್ನೂ 8 ಕಿ.ಮೀ.ಇರುವಾಗಲೇ ಸಿಗುವ ಗಡಿಕಲ್ಲಿನಲ್ಲಿ ಇಳಿದು ಕೊಂಡರೆ ಆಟೋ ಸಿಗುತ್ತದೆ. ಕವಿಮನೆ ಗೇಟ್ ಬಳಿ ಇಳಿದು ಕೊಂಡರೆ ಒಂದು ಕಿ.ಮೀ ನಡೆಯುತ್ತಾ ಸಾಗಿದರೆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿಕೊಂಡು ಹೊರಟರೆ ದಾರಿ ಸಾಗಿದ್ದೇ ತಿಳಿಯುವುದಿಲ್ಲ. ಆಗುಂಬೆ ಹಾಗೂ ಶೃಂಗೇರಿ ಇಲ್ಲಿಗೆ ಹತ್ತಿರ.
ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.ಕುಪ್ಪಳಿಗೆ ಒಮ್ಮೆ ಹೋಗಿ ಬನ್ನಿ.......

ಕುಪ್ಪಳಿಗೆ ಹೋಗಲು ಸಮಯಾಭಾವವಿರುವ ಪ್ರಕೃತಿ ರಸಿಕರೆಗೆ ಹಾಗೂ ಕವಿ ಅಭಿಮಾನಿಗಳಿಗೆ ಈ ಕೊರತೆ ತುಂಬಲು ಕುಪ್ಪಳಿಯಲ್ಲಿರುವ ಕುವೆಂಪು ಪ್ರತಿಷ್ಠಾನ ಕಿರು ಚಿತ್ರವನ್ನು ನಿಮರ್ಿಸಿದೆ, ಈ ಕಿರುಚಿತ್ರದ ಡಿ.ವಿ.ಡಿಯನ್ನಾದರೂ ನೋಡಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಳ್ಳಬಹುದು.

 ಸಿ.ಗುರುಮೂತರ್ಿ ಕೊಟಿಗೆಮನೆ
ಲೇಖಕ, ಹವ್ಯಾಸಿ ಪತ್ರಕರ್ತ
ಚಿಕ್ಕನಾಯಕನಹಳ್ಳಿ. 9448659573