Saturday, June 12, 2010

ಕಡಿಮೆ ಕೂಲಿ ಎಂದು ಎಳೆಯರನ್ನು ಸೇರಿಸಿಕೊಂಡರೆ ಆಪತ್ತು ನಿಶ್ಚಿತ

ಚಿಕ್ಕನಾಯಕನಹಳ್ಳಿ,ಜೂ.12: ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಅಸಮರ್ಥರಾಗುತ್ತಾ ತಪ್ಪು ದಾರಿ ಹಿಡಿಯುತ್ತಾರೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎ.ಜಿ.ಶಿಲ್ಪಾ ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆಯ ಆವರಣದಲ್ಲಿ ನಡೆದ ಬಾಲ ಕಾಮರ್ಿಕ ನಿಷೇಧ ದಿನಾಚರಣೆಯ ಅರಿವು ಶಿಬಿರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಖರ್ಾನೆ ಹೋಟೆಲ್ಗಳಲ್ಲಿ ಮಕ್ಕಳು ದುಡಿಯುತ್ತಿರುವ ವಿಷಯ ಹೆಚ್ಚಾಗಿ ಶಾಲಾ ಮಕ್ಕಳಿಗೆ ತಿಳಿದಿರುತ್ತದೆ ಆ ವಿಷಯವನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿಸಬೇಕು ಎಂದರಲ್ಲದೆ, ಬಾಲ ಕಾಮರ್ಿಕರಾಗಿ ದುಡಿಯುತ್ತಿರುವ ಮಕ್ಕಳಿಗೆ ವಿದ್ಯಾಯಭ್ಯಾಸದ ಬಗ್ಗೆ ಹುರಿದುಂಬಿಸಿ ಅವರೂ ಸಹ ಶಿಕ್ಷಣ ಪಡೆಯಲು ಸಹಕರಿಸಬೇಕು ಎಂದರು.
ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಮಾತನಾಡಿ ಶಿಕ್ಷಣ ಇಲಾಖೆಗೆ ಸದಾ ಕಾನೂನು ಸೇವಾ ಸಮಿತಿ ಸ್ಪಂದಿಸುತ್ತ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಮಕ್ಕಳಿಗೆ ಕಾನೂನಿನ ಬಗ್ಗೆ ಜಾಗೃತಿ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು, ಪೋಷಕರು ಮಕ್ಕಳ ಆಶೋತ್ತರಗಳಿಗೆ ಸ್ಪಂದಿಸಿ 18ವರ್ಷದ ವರೆವಿಗೂ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಿ ದೇಶದ ಒಳಿತಿನ ಭದ್ರ ಬುನಾದಿಗೆ ಮುಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಬಾಲ ಕಾಮರ್ಿಕರ ಮನೆಯ ಆಥರ್ಿಕ ಪರಿಸ್ಥಿತಿಯನ್ನು ಕಾಖರ್ಾನೆಯ ಮಾಲೀಕರು ಗಮನಿಸಿ ಅಂತವರ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಇಂತಹ ಮಾಲೀಕರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದ ಅವರು, ತೊಂದರೆ ಎದುರಿಸುತ್ತಿರುವ ಮಕ್ಕಳಿಗೆ ವಿದ್ಯಾಬ್ಯಾಸದ ಸಹಾಯ ನೀಡುವ ಮೂಲಕ ಬಾಲ ಕಾಮರ್ಿಕ ಪದ್ದತಿಯನ್ನು ತೊಡೆದು ಹಾಕಬೇಕು ಎಂದರು.
ವಕೀಲ ಎನ್.ಎನ್.ಶ್ರೀಧರ್ ಮಾತನಾಡಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಮಕ್ಕಳ ಮತ್ತು ದೇಶದ ಭವಿಷ್ಯ ಹಾಳಾಗುತ್ತದೆ, ಕಡಿಮೆ ಸಂಭಾವನೆಯನ್ನು ನೀಡಬಹುದು ಮತ್ತು ಹೆಚ್ಚು ಕೆಲಸವನ್ನು ಬಾಲ ಕಾಮರ್ಿಕರಿಂದ ತೆಗೆದುಕೊಳ್ಳ ಬಹುದೆಂಬ ಕಾರಣದಿಂದ ಮಕ್ಕಳನ್ನು ಮಾಲೀಕರು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ ಈ ಹವ್ಯಾಸ ನಿಲ್ಲಬೇಕು ಅವರನ್ನು ಶಾಲೆಗೆ ಕರೆತರಬೇಕೆಂದು ಹೇಳಿದರು.
ಸಮಾರಂಭದಲ್ಲಿ ವಕೀಲರ ಸಂಘದ ಕಾರ್ಯದಶರ್ಿ ಹೆಚ್.ಎಸ್.ಜ್ಞಾನಮೂತರ್ಿ, ಶಾಲೆಯ ಮುಖ್ಯೋಪಾಧ್ಯಾಯ ಸಿದ್ದರಾಮಯ್ಯ, ಎ.ಸಿ.ಡಿ.ಪಿ.ಓ ಪರ್ವತಯ್ಯ ವಕೀಲರಾದ ಎಂ.ಮಹಾಲಿಂಗಯ್ಯ, ಲೋಕೇಶ್, ನಾಗರಾಜು, ಕೆ.ಸಿ.ವಿಶ್ವನಾಥ್, ದಿಲೀಪ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಟಿ.ಗಾಯಿತ್ರಿ ಸ್ವಾಗತಿಸಿದರೆ ಎಂ.ಸತೀಶ್ ನಿರೂಪಿಸಿ ವಂದಿಸಿದರು.

ಗಣಿಗಾರಿಕೆಗೆ ಅರಣ್ಯ ಪ್ರದೇಶ ಒತ್ತುವರಿ: ದೂರು

ಚಿಕ್ಕನಾಯಕನಹಳ್ಳಿ,ಜೂ.11: ಅರಣ್ಯ ಇಲಾಖೆಗೆ ಸೇರಿದ ಪ್ರದೇಶವನ್ನು ಹೊರತು ಪಡಿಸುವವರೆಗೂ ಗೊಲ್ಲರಹಳ್ಳಿ ಗ್ರಾಮದ ಖಾಸಗಿಯೊಬ್ಬರಿಗೆ ಸೇರಿದ ಗಣಿ ಪ್ರದೇಶವನ್ನು ಅಳತೆ ಮಾಡಬಾರದೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಭಾಗದಲ್ಲಿರುವ ವಿವಿಧ ವ್ಯಕ್ತಿಗಳಿಗೆ ಸೇರಿದ ಗಣಿ ಪ್ರದೇಶವನ್ನು ಕಂದಾಯ ಇಲಾಖೆ, ಭೂ ವಿಜ್ಞಾನ ಇಲಾಖೆ ಮತ್ತು ಅರಣ್ಯ ಇಲಾಖೆಗಳು ಸೇರಿ ಒಂದೇ ಬಾರಿ ಜಂಟಿ ಸವರ್ೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಸವರ್ೆ.ನಂ.12ರಲ್ಲಿ ಪ್ರವೀಣ್ ರಾಮಮೂತರ್ಿಗೆ ಗಣಿಗಾರಿಕೆ ಪ್ರಾರಂಭಿಸಲು ಮಂಜೂರಾತಿ ದೊರೆತಿದ್ದು ಜೂನ್ 9ರಂದು ಅವರ ಗಣಿ ಪ್ರದೇಶವನ್ನು ಅಳತೆ ಮಾಡಲು ಸವರ್ೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದು ಈ ಸವರ್ೆ ನಂಬರ್ನ ಭೂಮಿ ಅರಣ್ಯ ಇಲಾಖೆಗೆ ಸೇರಿದೆ, ಅಲ್ಲದೆ ಇದಕ್ಕೆ ಹೊಂದಿಕೊಂಡಂತೆ ಇರುವ ಹೊಬಳೆಗೆಟ್ಟೆ, ಯರೇಕಟ್ಟೆ, ಹಾಗೂ ಹೊಸಳ್ಳಿ ಸವರ್ೆ ನಂಬರುಗಳ ಕೆಲವು ಪ್ರದೇಶವು ಅರಣ್ಯಕ್ಕೆ ಸೇರಿದ ಜಮೀನಾಗಿದೆ ಈ ಗ್ರಾಮಗಳ ಗಡಿ ಪ್ರದೇಶವನ್ನು ಗುರುತಿಸುವುದು ಹಾಗೂ ಅರಣ್ಯ ಪ್ರದೇಶವನ್ನು ಅಳತೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರೆಯುವುದೆಂದು ತಿಳಿಸಿದ್ದಾರೆ.
ಗಣಿ ಪ್ರದೇಶದ ರೈತರಿಗೆ ಬೆಳೆ ಪರಿಹಾರ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.11: ತಾಲೂಕಿನ ಗಣಿಗಾರಿಕೆಯಿಂದ ಬೆಳೆ ಹಾನಿಯಾದ ಗ್ರಾಮಗಳ ಹಿಡುವಳಿಗಾರರಿಗೆ ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮವನ್ನು ಇದೇ 14ರ ಸೋಮವಾರ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ
ಕಾರ್ಯಕ್ರಮವನ್ನು ಡಾ. ಅಂಭೇಡ್ಕರ್ ಭವನದಲ್ಲಿ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಂಡಿದ್ದು ಬುಳ್ಳೇನಹಳ್ಳಿ, ಹೊನ್ನೆಬಾಗಿ ಮತ್ತು ಜೋಗಿಹಳ್ಳಿ ಗ್ರಾಮದ ಹಿಡುವಳಿದಾರು ಮತ್ತು ವಿದ್ಯಾಥರ್ಿಗಳು ಚೆಕ್ ಸ್ವೀಕರಿಸಲು ಸಭೆಗೆ ಆಗಮಿಸುವಂತೆ ತಹಸೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.