Saturday, May 28, 2011
ರೈತರ ಬೆಲೆಯುಳ್ಳ ಜಮೀನುಗಳು ಗೃಹ ನಿಮರ್ಾಣ ಮಂಡಳಿಯ ಬಾಯಿಗೆ ?
ಸಂಕಷ್ಟದಲ್ಲಿರುವ ರೈತರು
ತಕರಾರು ಅಜರ್ಿ ಸಲ್ಲಿಸಿರುವ ಹೋರಾಟಗಾರರು
ಕವಲು ದಾರಿಯಲ್ಲಿರುವ ಸಣ್ಣ ಪುಟ್ಟ ಜಮೀನಿನವರು

(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ನಾಲ್ಕು ಜನ ವಿಚಾರವಂತ ರೈತರು ಎಲ್ಲೇ ಕುಳಿತು ಕುಶೋಲಪರಿ ಶುರು ಮಾಡಿದರು ಎಂದರೆ ಕೊನೆಯಲ್ಲಿ ಮಾತು ಮುಗಿಯುವುದು ಸಕರ್ಾರ ತಾಲೂಕಿನಲ್ಲಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಡಿಸಿರುವ ಆದೇಶದ ಬಗ್ಗೆ ಚಚರ್ೆಯ ನಂತರವೇ.
ಪಟ್ಟಣದ ಹುಳಿಯಾರು ಗೇಟ್ ಬಳಿ ರಾಜ್ಯ ಗೃಹ ನಿಮರ್ಾಣ ಮಂಡಳಿಯವರು 80 ಎಕರೆ 10 ಗುಂಟೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿರುವುದು ಒಂದೆಡೆಯಾದರೆ, ಸಾಲ್ಕಟ್ಟೆಯ ಬಳಿ ಕೈಗಾರಿಕೆಯ ಉದ್ದೇಶದಿಂದ ಕೆ.ಎ.ಐ.ಡಿ.ಬಿ. ಯವರು ಮೂರು ಸಾವಿರ ಎಕರೆ ಪ್ರದೇಶವನ್ನು ವಶ ಪಡಿಸಿಕೊಳ್ಳಲು ಹೊರಟಿರುವ ವಿಷಯ ಮತ್ತೂ ಚಚರ್ೆಗೆ ಗ್ರಾಸವಾಗಿದೆ. ಕೆ.ಎ.ಐ.ಡಿ.ಬಿ.ನವರು ಜಮೀನಿಗೆ ಕನಿಷ್ಟ 20 ಲಕ್ಷ ರೂಗಳನ್ನಾದರೂ ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈ ಎರಡರ ಪೈಕಿ ಪಟ್ಟಣದ ಹುಳಿಯಾರು ಗೇಟ್ ಬಳಿ ಗೃಹ ನಿಮರ್ಾಣ ಮಂಡಳಿ, ಬ್ಯಾಲಕೆರೆ ಹಾಗೂ ದಾಸಿಹಳ್ಳಿ ಸವರ್ೆ ನಂಬರ್ಗಳಲ್ಲಿ ಒಟ್ಟು 80 ಎಕರೆ 10 ಗುಂಟೆ ಜಮೀನನ್ನು ಭೂ ಸ್ವಾಧೀನ ಕಾಯ್ದೆ ಕಲಂ 4(1)ರ ಅಡಿಯಲ್ಲಿ, ದಿನಾಂಕ 7.1.2011ರಂದು ಅಧಿಸೂಚನೆ ಹೊರಡಿಸಿದ್ದು, ಈ ಅಧಿಸೂಚನೆ ಈಗಾಗಲೇ ಕನರ್ಾಟಕ ರಾಜ್ಯ ಪತ್ರದಲ್ಲಿ ಭಿತ್ತರಗೊಂಡಿದೆ ಅಲ್ಲದೆ, ಸಾರ್ವಜನಿಕರ ಮಾಹಿತಿಗಾಗಿ ಪುರಸಭೆಯ ನೋಟಿಸ್ ಬೋಡರ್್ನಲ್ಲೂ ಪ್ರಚುರ ಪಡಿಸಲಾಗಿದೆ.
ಪುರಸಭೆಯ ನೋಟಿಸ್ ಬೋಡರ್್ಗೆ ಈ ವಿಷಯ ಬರುವವರೆಗೆ ಯಾವುದೇ ರೈತರಿಗೆ ಈ ಬಗ್ಗೆ ಸಣ್ಣ ಸುಳಿವೂ ದೊರೆತಿರಲಿಲ್ಲ, ಈ ಮುಂಚೆ ಹುಳಿಯಾರ್ ಗೇಟ್ ಬಳಿ ಜಮೀನಿರುವ ಹಲವರಿಗೆ ಕೆಲವು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಧಿಕ ಹಣದ ರುಚಿ ತೋರಿಸಿ ಜಮೀನನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಆ ಭಾಗದ ಕೆಲವು ಸಣ್ಣ ಪುಟ್ಟ ರೈತರು ತಮ್ಮ ಸಂಕಷ್ಟಕೆಂದು ಜಮೀನು ಮಾರಲು ಪ್ರಯತ್ನಿಸುತ್ತಿದ್ದರು, ಇಂತಹ ಸಮಯಕ್ಕೆ ಸರಿಯಾಗಿ ಗೃಹ ನಿಮರ್ಾಣ ಮಂಡಳಿ ಭೂ ಸ್ವಾಧೀನ ಪಡಿಸಿಕೊಳ್ಳುವ ಅಧಿಸೂಚನೆಯನ್ನು ಹೊರಡಿಸಿ ರೈತರಲ್ಲಿ ಗೊಂದಲ ಮೂಡಿಸಿರುವುದು ಒಂದೆಡೆಯಾದರೆ, ಇರುವ ಚೂರು ಪಾರು ಜಮೀನು ಕಳೆದುಕೊಂಡು ಮುಂದಿನ ಮಕ್ಕಳಿಗೆ ಜಮೀನಿಲ್ಲದೆ 'ಬರಿಗೈ' ಮಾಡಿ ಹೋಗುತ್ತೆವೇನಪ್ಪ ಎಂಬ ಚಿಂತೆಯಲ್ಲಿದ್ದವವರು ಕೆಲವರು. ಜುಮೀನಿದ್ದರೆ ಕೊನೆ ಪಕ್ಷ ರಾಗಿ ಕಾಳನ್ನಾದರೂ ಬೆಳೆದು ತಿನ್ನುತ್ತಾರೆ, ಜಮೀನು ಮಾರಿದರೆ ಅವರು ಕೊಡುವ ಅಷ್ಟೋ ಇಷ್ಟೋ ದುಡ್ಡು ತಮ್ಮ ಸಂಕಷ್ಟಗಳನ್ನು ತೀರಿಸಿಕೊಂಡು ಮುಂದಿನ ಜೀವನಕ್ಕೆ ಪರದಾಡುವ ಸ್ಥಿತಿ ನಿಮರ್ಾಣವಾಗುತ್ತದೆಯೇ ಎಂಬ ಚಿಂತಿಯಲ್ಲಿ ದಿನ ದೂಡುವಂತಾಗಿರುವುದು ಮತ್ತೊದೆಡೆಯ ಚಿತ್ರಣ.
ಆಥರ್ಿಕವಾಗಿ ಸಬಲರಾಗಿರುವವರು, ಹೆಚ್ಚು ಜಮೀನು ಉಳ್ಳವರು ಮಾತ್ರ ಏನಾದರೂ ಸರಿಯೇ ನಮ್ಮ ಜಮೀನನ್ನು ಉಳಿಸಿಕೊಂಡೇ ತೀರುತ್ತೇವೆಂದು ಈಗಾಗಲೇ ಎರಡು ಭಾರಿ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿ ಹೋಗಿ ಬಂದು ಹೋರಾಟದ ಹಾದಿಗೆ ಸಜ್ಜುಗೊಳ್ಳುತ್ತಿದ್ದಾರೆ.
ತಕರಾರು ಅಜರ್ಿ: ಬ್ಯಾಲಕೆರೆ ಹಾಗೂ ದಾಸಿಹಳ್ಳಿಯ ಸವರ್ೆ ನಂಬರಿನಲ್ಲಿ ಜಮೀನುಳ್ಳ ಸುಮಾರು 37 ಜನರು ಗೃಹ ನಿಮರ್ಾಣ ಮಂಡಳಿಗೆ ಈಗಾಗಲೇ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಗೃಹ ನಿಮರ್ಾಣ ಮಂಡಳಿ ಈ ಸಂಬಂಧ ಹೊರಡಿಸಿರುವ ಸವರ್ೆ ನಂಬರ್ಗಳಲ್ಲಿ ಫಲವತ್ತಾದ ತೆಂಗಿನ ತೋಟಗಳಿವೆ, ಹಣ್ಣು ಬಿಡುವ ತೋಟಗಾರಿಕೆ ಗಿಡಗಳಿವೆ, ತಮ್ಮ ಪೂವರ್ಿಕರ ಸಮಾಧಿಗಳಿವೆ ಇವ್ಯಾವನ್ನು ನೋಡದ ಮಂಡಳಿ, ಬೆಂಗಳೂರಿನಲ್ಲಿ ಕುಳಿತು ಭೂ ಮಾಪನ ಇಲಾಖೆಯಲ್ಲಿನ ನಕ್ಷೆ ಹಿಡಿದುಕೊಂಡು ಒಟ್ಟಾರೆ ಇಂತಿಷ್ಟು ಜಾಗ ಎಂಬಂತೆ ಗುತರ್ಿಸಿ ಅಧಿಸೂಚನೆ ಹೊರಡಿಸಿದೆ, ಈಗ ಈ ಭಾಗದ ರೈತರು ಮೇಲಿನ ಅಂಶಗಳ ಆಧಾರದ ಮೇಲೆ ತಕರಾರು ಅಜರ್ಿ ಹಾಕಿಕೊಂಡಿದ್ದಾರೆ.
ಇನ್ನೂ ಕೆಲವರು ಅಜರ್ಿ ಹಾಕುವ ಹಂತದಲ್ಲಿದ್ದಾರೆ. ಒಟ್ಟಾರೆ ಅಜರ್ಿ ಹಾಕುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇನ್ನೂ ಕೆಲವರು 5(1) ಘೋಷಣೆ, 6(1) ಘೋಷಣೆ ಯಾಗವ ವರೆಗೆ ಕಾದು ನೋಡುವ ತಂತ್ರವನ್ನು ಬಳಸುತ್ತಿದ್ದಾರೆ.
ಆಸೆಗೆ ಬಿದ್ದಿರುವ ಕೆಲವರು ; ಉಳುಮೆ ಮಾಡದಿರುವ ಕೆಲವು ರೈತರು ಹೋಗಲಿ ಬಿಡು, ಗೃಹ ನಿಮರ್ಾಣ ಮಂಡಳಿಯವರು ಒಂದು ಎಕರೆ ಜಮೀನಿನಲ್ಲಿ 60 * 40 ಸೈಟ್ಗಳನ್ನು ಕನಿಷ್ಟವೆಂದರೂ 15 ನಿವೇಶನಗಳನ್ನು ನಿಮರ್ಿಸಿ, ರಸ್ತೆ, ಚರಂಡಿ, ನೀರಿ, ಬೆಳಕಿನ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸುವ ಜೊತೆಗೆ ಭೂ ಪರಿವರ್ತನೆಯನ್ನು ಅವರೇ ಮಾಡಿಸಿಕೊಡುತ್ತಾರೆ, 15ರ ಪೈಕಿ ನಮಗೆ 5 ಸೈಟ್ ಕೊಡುತ್ತಾರೆ ಆಗ ನಮ್ಮ ಸೈಟಿಗೆ ಚಿನ್ನದಂತಹ ಬೆಲೆ ಬರುತ್ತದೆ ನಾವ್ಯಾಕೆ ಕಷ್ಟು ಪಡಬೇಕು ಎಂಬ ಧೋರಣೆಯ ಜನರು ಇಲ್ಲದಿಲ್ಲ. ಈಗಾಗಿ ಹೋರಾಟ ತೀವ್ರ ಸ್ವರೂಪ ಪಡೆಯುವಲ್ಲಿ ಇನ್ನೂ ನಿಧಾನ ಗತಿಯನ್ನು ಪಡೆಯುತ್ತಿದೆ.
ಈಗಾಗಲೇ ರೈತ ಸಂಘದ ನೇತೃತ್ವದಲ್ಲಿ ಹಲವರು ತಹಶೀಲ್ದಾರ್ ಕಛೇರಿಗೆ ತೆರಳಿ ತಮ್ಮ ವಿರೋಧದ ಹೇಳಿಕೆಯ ಜೊತೆಗೆ ತಮಗೆ ನ್ಯಾಯ ಒದಗಿಸುವ ಸಂಬಂಧ ಸಕರ್ಾರಕ್ಕೆ ಮನವಿಕೊಟ್ಟು ಬಂದಿದ್ದಾರೆ. ಈ ಬಗ್ಗೆ ಪಟ್ಟಣದ ಮಾವುರದಮ್ಮ ದೇವಸ್ಥಾನದ ಬಳಿ ಸಭೆಗಳು ನಡೆದಿವೆ. ಅಲ್ಲಿಯ ತೀಮರ್ಾನದಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಸಿ.ಎಸ್.ಕೋದಂಡರಾಮಯ್ಯ, ದಯಾನಂದ್, ಸಂತೋಷ ಬೆಂಗಳೂರಿನ ಗೃಹ ನಿಮರ್ಾಣ ಮಂಡಳಿಯ ಕಛೇರಿಗೆ ಹೋಗಿ ಬಂದಿದ್ದಾರೆ. ಹೋರಾಟಗಾರರು ಇನ್ನೂ ಮಾಹಿತಿ ಕಲೆ ಹಾಕುವ ಹಂತದಲ್ಲಿದ್ದಾರೆ ನಿಜವಾದ ಹೋರಾಟವಿನ್ನು ಪ್ರಖರ ರೀತಿಯಲ್ಲಿ ಆರಂಭವಾಗಿಲ್ಲ.
ಹೋರಾಟಗಾರರು ತುಸು ಚಿಂತನೆಯಲ್ಲಿದ್ದಾರೆ, ಶಾಸಕರನ್ನು ಕಂಡು ಅವರು ನೀಡುವ ಮಾರ್ಗದರ್ಶನಲ್ಲಿ ನಡೆಯಬೇಕೆಂದು ಕೆಲವರ ಯೋಚನೆಯಾದರೆ, ಇನ್ನೂ ಕೆಲವರು ನಾವು ಮುಂದೆ ನುಗ್ಗಿ ಹೋರಾಟದ ಆದಿ ಹಿಡಿಯುವುದು, ನಮ್ಮಲ್ಲಿಯೇ ಕೆಲವರು ಯಾವುದೋ ಪ್ರಲೋಭನೆಗೆ ಬಿದ್ದು ಗೃಹ ನಿಮರ್ಾಣ ಮಂಡಳಿಗೆ ಭೂ ಸ್ವಾಧೀನಕ್ಕೆ ಒಪ್ಪಿಗೆ ಪತ್ರ ಕೊಡುವುದು ಆಗ ಇಲ್ಲದ ರಾದ್ದಾಂತಗಳಾಗುವುದರ ಜೊತೆಗೆ, ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯಗಳು ಹೇಳುತ್ತವೆ ಎಂಬ ಕಾರಣಕ್ಕೆ ಕೆಲವರು ಹಿಂದೇಟು ಆಕುತ್ತಿದ್ದರೆ. ಮುಂದಿನ ನಡೆ ಎತ್ತ ಕಡೆ ಇರಬೇಕೆಂಬುದರ ಬಗ್ಗೆ ಚಚರಿಸಲು ಸೋಮವಾರ ಬೆಳಗ್ಗೆ 10ಕ್ಕೆ ಮತ್ತೇ ಮಾವುರದಮ್ಮನ ದೇವಾಲಯದ ಬಳಿ ಸಭೆ ಸೇರುತ್ತಿದ್ದಾರೆ, ಸಭೆಗೆ ಎಲ್ಲಾ ರೈತ ಪರ ಹೋರಾಟಗಾರರಿಗೆ ಸ್ವಾಗತವಿದೆ.