Saturday, September 25, 2010


ತಂದೆಯ ಕತ್ತು ಕಡಿದ ಮಗ, ಶವವನ್ನು ಹೊಲದಲ್ಲಿ ಹೂತ್ತಿಟ್ಟ.
ಚಿಕ್ಕನಾಯಕನಹಳ್ಳಿ,ಸೆ.25: ತಂದೆ ಮತ್ತು ಮಗನ ನಡುವೆ ನಡೆದ ವಾಗ್ವಾದದಲ್ಲಿ ತಂದೆಯ ಕತ್ತು ಕಡಿದ ಮಗ, ತಂದೆಯ ದೇಹವನ್ನು ಹೂತ್ತಿಟ್ಟ ಎಂಟು ದಿನಗಳ ನಂತರ ತಾಯಿಗೆ ತಿಳಿಸಿರುವ ವಿಲಕ್ಷಣ ಘಟನೆ ತಾಲೂಕಿನ ಕಾಮಲಾ ಪುರದಲ್ಲಿ ನಡೆದಿದೆ.
ಹಂದನಕೆರೆ ಹೋಬಳಿಯ ಕಾಮಲಾ ಪುರದ ಶಂಕರಪ್ಪ(51) ಕೊಲೆಯಾದ ದುದರ್ೈವಿ, ಮಗ ವೀರಭದ್ರ(21) ಕೃತ್ಯವೆಸಿಗಿರುವ ಆರೋಪಿ.
ಕೊಲೆಗೆ ಕಾರಣ: ಶಂಕರಪ್ಪ ಕುಡಿದ ಅಮಲಿನಲ್ಲಿ ಮಗ ವೀರಭದ್ರ ಹಾಗೂ ಪತ್ನಿ ಲಕ್ಕಮ್ಮನೊಂದಿಗೆ ನಿತ್ಯವೂ ಜಗಳವಾಡುತ್ತಿದ್ದ, ಇದರಿಂದ ರೋಸಿ ಹೋದ ಮಗ, ತನ್ನ ತಾಯಿ ಲಕ್ಕಮ್ಮನನ್ನು ತನ್ನ ಅಕ್ಕನ ಊರಾದ ಹನುಮಂತಪರಕ್ಕೆ ಕಳುಹಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಶಂಕರಪ್ಪ ಹೊಲದ ಬಳಿ ಬಂದು ಮಗನೊಂದಿಗೆ ಜಗಳಕ್ಕಿಳಿದಿದ್ದಾನೆ, ಸೌದೆ ಕಡಿಯುತ್ತಿದ್ದ ವೀರಭದ್ರ ಸಿಟ್ಟಿನಿಂದ ಕೈಯಲ್ಲಿದ್ದ ಕುಡುಗೋಲಿನಿಂದ ಹೊಡೆದಿದ್ದಾನೆ, ಹೊಡೆತ ತಂದೆಯ ಕುತ್ತಿಗೆ ಬಿದ್ದ ಪರಿಣಾಮ ಶಂಕರಪ್ಪ ಸ್ಥಳದಲ್ಲೇ ಸಾವನ್ನಾಪಿದ್ದಾನೆ. ತನ್ನ ತಪ್ಪಿನ ಅರಿವಾದ ವೀರಭದ್ರ ತನ್ನ ಸ್ನೇಹಿತರೊಂದಿಗೆ ತಂದೆಯ ಶವವನ್ನೇ ಅಲ್ಲೇ ಇದ್ದ ಗುಂಡಿಯಲ್ಲಿ ಹೂತಿಟ್ಟು, ಅದರ ಮೇಲೆ ಎಳ್ಳಿನ ಕಡ್ಡಿಯ ರಾಶಿಯನ್ನು ಹಾಕಿದ್ದಾನೆ. ಈ ವಿಷಯವನ್ನು ಯಾರಿಗೂ ಹೇಳದೆ ಒಂದು ವಾರ ಸುಮ್ಮನಾಗಿದ್ದು, ತನ್ನ ತಾಯಿ ಮನೆಗೆ ಬಂದ ನಂತರವೂ ತಂದೆಯ ಸಾವಿನ ಸುಳಿವನ್ನು ನೀಡಲ್ಲ, ಒಂದೆರಡು ದಿನಗಳ ನಂತರ ಊರಿನ ಗ್ರಾಮಸ್ಥರು ಅನುಮಾನಗೊಂಡು ವೀರಭದ್ರನನ್ನು ವಿಚಾರಿಸಿದ್ದಾರೆ, ಅಂತಿಮವಾಗಿ ತನ್ನ ತಾಯಿಯ ಬಳಿ ಎಲ್ಲ ಸತ್ಯವನ್ನು ಹೇಳಿಕೊಂಡ ಹಿನ್ನೆಲೆಯಲ್ಲಿ ಲಕ್ಕಮ್ಮ ತನ್ನ ಮಗನೊಂದಿಗೆ ಹಂದನಕೆರೆ ಪೊಲೀಸ್ ಠಾಣೆಗೆ ಬಂದು ವಿಷಯವನ್ನು ತಿಳಿಸಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ಶವವನ್ನು ಹೊರಕ್ಕೆ ತೆಗೆಸಿ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಆರೋಪಿ ವೀರಭದ್ರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಎ.ಸಿ. ಪಾಟೀಲ್, ಎ.ಎಸ್.ಪಿ.ಡಾ.ಎನ್.ಬಿ.ಬೋರಲಿಂಗಯ್ಯ, ಪ್ರಭಾರ ತಹಶೀಲ್ದಾರ್ ವಿಜಯಕುಮಾರ್, ಸಿ.ಪಿ.ಐ, ಪಿ.ರವಿಪ್ರಸಾದ್ ಭೇಟಿ ನೀಡಿದ್ದರು.

ಚಿಕ್ಕನಾಯಕನಹಳ್ಳಿ,ಸೆ.25: ಹೃದಯದ ತೊಂದರೆ ಇರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಂಪನ್ಮೂಲ ಕೇಂದ್ರ ಸ್ಥಾಪನೆ, ಶಾಲೆಗಳಿಗೆ ಎರಡು ಸಾವಿರ ಕಂಪ್ಯೂಟರ್ ಕೊಡೆಗೆ ನೀಡುವ ಕಾರ್ಯಕ್ರಮವೂ ಸೇರಿದಂತೆ ದೊಡ್ಡ ದೊಡ್ಡ ಯೋಜನೆಗಳನ್ನು ಜಿಲ್ಲಾ ರೋಟರಿ ರೂಪಿಸಿದೆ ಎಂದು ರೋಟರಿ ಗೌರ್ನರ್ ಮಾನಂದಿ ಎನ್.ಸುರೇಶ್ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ರೋಟರಿ 3190 ಗೌರ್ನರ್ ಭೇಟಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮಕ್ಕಳಿಗೆ ಐ.ಸಿ.ಯು ಸೌಲಭ್ಯವನ್ನು ಕಲ್ಪಿಸುವ ದೃಷ್ಠಿಯಿಂದ ಒಂದು ಕೋಟಿ ರೂ ಅಂದಾಜಿನಲ್ಲಿ ಬೆಂಗಳೂರಿನಲ್ಲಿ ಐ.ಸಿ.ಯು.ಘಟಕವನ್ನು ನಿಮರ್ಿಸುತ್ತಿರುವುದಾಗಿ ತಿಳಿಸಿದರಲ್ಲದೆ, 80 ಸಾವಿರ ವಿದ್ಯಾಥರ್ಿಗಳಿಗೆ 4 ಲಕ್ಷ ನೋಟ್ ಬುಕ್ಗಳನ್ನು ವಿತರಿಸಿದ್ದೇವೆ ಎಂದರು.
ರೋಟರಿ ಸಂಸ್ಥೆ ಸಮಾಜ ಸೇವೆಗಾಗಿ ರೂಪುಗೊಂಡಿದ್ದು, ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾಗಬೇಕು ಎಂದರು.
ಸ್ಥಳೀಯ ಅಧ್ಯಕ್ಷ ಎನ್.ಶ್ರೀಕಂಠಯ್ಯ ಮಾತನಾಡಿ, ಈ ವರ್ಷ 101 ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಎಸ್.ಆರ್.ಎಸ್. ಸೊಸೈಟಿಯ ಬಳಿ ಬಸ್ ನಿಲ್ದಾಣವನ್ನು ನಿಮರ್ಿಸಲು ಮುಂದಾಗಿದ್ದೇವೆ, ಆ ಪ್ರದೇಶಕ್ಕೆ ಕಂಬಳಿ ನಗರವೆಂಬ ನಾಮಫಲಕವನ್ನು ಇಂದು ಅನಾವರಣ ಮಾಡಿದ್ದೇವೆ ಎಂದರಲ್ಲದೆ, ಅದೇರೀತಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭವನ್ನು ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.
ಸಮಾರಂಭದಲ್ಲಿ ಕಾರ್ಯದಶರ್ಿ ಸಿ.ಎನ್.ಅಶ್ವಥ್ನಾರಾಯಣ್ ತಮ್ಮ ಅವಧಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮುನ್ನೋಟ ನೀಡಿದರು.
ಸಮಾರಂಭದಲ್ಲಿ ಪೊಲೀಸ್ ಪೇದೆ ಸದರ್ಾರ್, ಅಂಗನವಾಡಿ ಶಿಕ್ಷಕಿ ಹೊನ್ನಶೆಟ್ಟಿ ಹಳ್ಳಿ ಪುಷ್ಪಾವತಮ್ಮ, ಅಡುಗೆ ಸಹಾಯಕ ಹನುಮಂತರಾಯಪ್ಪ ನವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಸಹೋದರಿಯರು ಪ್ರಾಥರ್ಿಸಿದರೆ, ಎನ್.ಎಂ.ಗಂಗಾಧರ್ ಸ್ವಾಗತಿಸಿದರು, ಎಂ.ಎಲ್.ಮಲ್ಲಿಕಾರ್ಜನಯ್ಯ ನಿರೂಪಿಸಿದರು, ಎಂ.ವಿ.ನಾಗರಾಜ್ ರಾವ್ ವಂದಿಸಿದರು.