Tuesday, August 31, 2010


ಕಲಿತವನು ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದ
ಚಿಕ್ಕನಾಯಕನಹಳ್ಳಿ,ಆ.31: ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಅನಾವರಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಎಸ್.ಎಂ.ಎಸ್. ಡಿ.ಇಡಿ. ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿಯ ಸಕರ್ಾರಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಿತವನು ಹಾಗೂ ನುರಿತವನು ಕೂಡಿ ಮಾಡಿದ ಕೆಲಸ ಫಲಪ್ರದವಾಗುತ್ತದೆ ಎಂದ ಅವರು, ಕುಟುಂಬದಲ್ಲೂ ಅಷ್ಟೇ ದುಡಿಯುವ ಯುವಕರು ಅನುಭವಿ ಪೋಷಕರ ಮಾರ್ಗದರ್ಶನದಲ್ಲೂ ನಡೆಯುವ ಕುಟುಂಬಗಳು ಏಳ್ಗೆ ಹೊಂದುತ್ತದೆ ಎಂದರು.
ಇಂದಿನ ಯುವಕರು ಗಡಿಯಾರದ ಮುಳ್ಳಿನ ಹಿಂದೆ ಓಡುವುದನ್ನು ಕಲಿತಾದ ಮೇಲೆ ಒತ್ತಡದ ಬದುಕಿಗೆ ಒಳಗಾಗಿದ್ದು ಮದುವೆ ಮುಂಜಿಯಂತಹ ಬಾಂಧವ್ಯ ಬೆಸೆಯುವ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸದೆ ಮುಖ ತೋರಿಸಿ ಹೋಗುವ ಪರಿಪಾಟಲಿಗೆ ಒಳಗಾಗಿದ್ದಾರೆ ಎಂದ ಅವರು ಬಂಧುಬಾಂದವ ಸಂಬಂಧಗಳನ್ನು ವೃದ್ದಿಸಿಕೊಳ್ಳುವುದನ್ನು ಈಗಿನಿಂದಲೇ ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಜಾನಪದ ಕಲಾ ಪ್ರಕಾರಗಳಿಂದ ಸೋಬಾನೆ ಪದ, ಲಾವಣಿಗಳು ಹಾಗೂ ಒಡಪುಗಳ ವೃದ್ದರ ಬಾಯಿಂದ ಮಾಯವಾಗುವ ಮುನ್ನ ಅವುಗಳು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರೆದಿಡುವ ಅಥವಾ ಧ್ವನಿ ಮುದ್ರಿಸಿಕೊಳ್ಳುವ ಕಾರ್ಯ ನಡೆಯಬೇಕೆಂದರು.
ಹಂದನಕೆರೆ ಐತಿಹಾಸಿಕ ಸ್ಮಾರಕದ 12 ಸೋಪನಾದ ಬಾವಿಗೆ ದೊಡ್ಡ ಇತಿಹಾಸವಿದ್ದು, ಈ ಇತಿಹಾಸ ಇಂದಿಗೂ ಹಿರಿಯರು ಹೇಳುವ ಲಾವಣಿಯಲ್ಲಿ ಅಡಕವಾಗಿದೆ ಎಂದ ಅವರು, 15ನೇ ಶತಮಾನದಲ್ಲಿದ್ದ ನಾಗತಿ ಚನ್ನವ್ವ ಮಕ್ಕಳ ಫಲ ಪಡೆಯಲು ಮಾಡಿಕೊಂಡ ಹರಕೆಯಂತೆ ಈ 12 ಸೋಪನಾದ ಬಾವಿಯನ್ನು ತೋಡಿಸಿರುವುದು ಐತಿಹಾಸಿಕ ಘಟನೆ ಇಂದಿಗೂ ಈ ಬಾವಿ ಚೆನ್ನವ್ವನ ವೃತ್ತಾಂತವನ್ನು ಹೇಳುವ ಸ್ಮಾರಕವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಗೆರೆ ಗ್ರಾ.ಪಂ. ಅಧ್ಯಕ್ಷೆ ವಿಮಲಮ್ಮ ವಹಸಿದ್ದು, ಉಪಾಧ್ಯಕ್ಷ ಚಂದ್ರನಾಯ್ಕ, ಸದಸ್ಯರಾದ ರಾಜಶೇಖರ್, ನಾಗಭೂಷಣ್, ಇ.ಸಿ.ಓ ತಿಮ್ಮಬೋವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶಿವಕುಮಾರ್, ಎಸ್.ಡಿ.ಎಂ.ಸಿ ಬಸವಲಿಂಗಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 8ರಿಂದ 14 ವರ್ಷದ ವಿದ್ಯಾಥರ್ಿಗಳು ಕಾವ್ಯವಾಚನ ಮಾಡಿದರು. ಶಾಲೆಯ ಎಚ್.ಎಂ. ಮಂಜುಳಮ್ಮ, ಸ್ವಾಗತಿಸಿದರೆ, ಶಿಕ್ಷಕ ಎ.ಸೋಮಶೇಖರಯ್ಯ ನಿರೂಪಿಸಿದರು.
ದುರಾಲೋಚನೆಯಿಂದ ದೂರವಿದ್ದು ಮುಂದಾಲೋಚನೆಗೆ ಒತ್ತು ನೀಡಿ
ಚಿಕ್ಕನಾಯಕನಹಳ್ಳಿ,ಆ.31: ಶಿಸ್ತುಬದ್ದತೆಯಿಂದ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಿ ಕಾಲೇಜಿಗೆ ಉತ್ತಮ ಫಲಿತಾಂಶ ತರುವ ಮೂಲಕ ಕಾಲೇಜಿನ ಕೀತರ್ಿಯನ್ನು ಬೆಳಗಿಸಬೇಕು ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ನಡೆದ ಸ್ನೇಹಸಂಗಮ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಥರ್ಿಗಳು ದುರಭ್ಯಾಸ ಬಿಟ್ಟು ಉತ್ತಮ ನಡವಳಿಕೆಯಿಂದ ಕಾಲೇಜಿಗೆ ಆಗಮಿಸಿ ಗುರುವಿನ ಮಾತನ್ನು ಅಲ್ಲಗಳೆಯದೇ ಅವರ ಮಾತನ್ನು ಶಿರಸಾವಹಿಸಿ ಪಾಲಿಸಿ ಉತ್ತಮ ಫಲಿತಾಂಶ ತರಬೇಕು ಎಂದರಲ್ಲದೆ, ತಮ್ಮ ನಡವಳಿಕೆಯಿಂದ ಎಲ್ಲರ ವಿಶ್ವಾಸಗಳಿಸಬೇಕು ಎಂದ ರು. ಮುಂದೆ ಗುರಿ ಇದ್ದು ಹಿಂದೆ ಗುರು ಇದ್ದರೆ ಎಂತಹ ಕ್ಲಿಷ್ಟಕರವಾದ ಸಂಗತಿಯನ್ನು ಬಗೆಹರಿಸಿ ಯಶಸ್ಸನ್ನು ಸಾಧಿಸಬಹುದು ಎಂದರು.
ಉಪನ್ಯಾಸಕ ಶಿವಲಿಂಗಮೂತರ್ಿ ಮಾತನಾಡಿ ಹಿರಿಯ ವಿದ್ಯಾಥರ್ಿಗಳ ಉತ್ತಮ ನಡವಳಿಕೆಯನ್ನು ಕಿರಿಯ ವಿದ್ಯಾಥರ್ಿಗಳು ಪಾಲಿಸಿ ಎಲ್ಲರ ಮನಸ್ಸನ್ನು ಗೆಲ್ಲಬೇಕು ಮತ್ತು ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳಿಗೆ ಯಾವುದೇ ಅಹಿತಕರ ಘಟನೆ ನಡೆಸಿ ಮನಸ್ಸನ್ನು ನೋಯಿಸದೆ ಸ್ನೇಹ ಸಹಬಾಳ್ವೆಯಿಂದ ಬಾಳಲು ತಿಳಿಸಿದರಲ್ಲದೆ ಪ್ರಾರಂಭದಲ್ಲಿ ಪ್ರತಿ ವಿಷಯವೂ ಕಷ್ಟ ಆದರೆ ಅನುಭವದ ನಂತರ ಎಲ್ಲ ವಿಷಯವೂ ಸುಲಭವೆಂದು ತಿಳಿಸಿದರು.
ಉಪನ್ಯಾಸಕಿ ರಂಜಿತ ಮಾತನಾಡಿ ಕಿರಿಯ ವಿದ್ಯಾಥರ್ಿಗಳು ತಮ್ಮ ಹಿಂದಿನ ಜೀವನದ ಅಹಿತಕರ ಘಟನೆ, ಕೆಟ್ಟ ನಡತೆ ಮತ್ತು ಬೇಜವಬ್ದಾರಿತನದಂತಹ ದೂರಾಲೋಚನೆಗಳನ್ನು ಮರೆತು ಉತ್ತಮ ನಡತೆಯಿಂದ ಹೊಸ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ಉತ್ತಮ ಪಲಿತಾಂಶ ತರಲು ವಿದ್ಯಾಥರ್ಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಚಂದ್ರಶೇಖರ್, ಸುರೇಶ್, ಪ್ರಸನ್ನಕುಮಾರ್, ಮಹೇಶ್, ದರ್ಶನ, ವೇದಮೂತರ್ಿ, ಲಕ್ಷೀಶ, ಶಶಿಧರ್, ನಾಗಭೂಷಣ್, ಚಿರಂಜೀವಿ, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಗಳಾದ ಲಕ್ಷ್ಮೀ ಸ್ವಾಗತಿಸಿದರೆ, ಗೌಸ್ಪಾಷ ನಿರೂಪಿಸಿ, ರಂಗಸ್ವಾಮಿ ವಂದಿಸಿದರು.