Friday, April 10, 2015




ರಾಷ್ಟ್ರಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ ಪ್ರಶಸ್ತಿಗಾಗಿ ಶ್ರದ್ದೆ, ತಾಳ್ಮೆ,, ಆಸಕ್ತಿಯ ಫಲವಿದೆ. : ನಟ ವಿಜಯ್
ಚಿಕ್ಕನಾಯಕನಹಳ್ಳಿ : ರಾಷ್ಟ್ರಮಟ್ಟದಲ್ಲಿ ಉತ್ತಮ ನಟನೆಂಬ ಪ್ರಶಸ್ತಿ ರಾತ್ರೋರಾತ್ರಿ ಬಂದದ್ದಲ್ಲ, ಆತ್ಮವಿಶ್ವಾಸ, ತಾಳ್ಮೆ, ಶ್ರದ್ದೆ, ಆಸಕ್ತಿಯ ಫಲ ಈ ಪ್ರಶಸ್ತಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ವಿಜಯ್ ಹೇಳಿದರು.
ಪಟ್ಟಣದ ನವೋದಯ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಅವನಲ್ಲ ಅವಳು ಚಿತ್ರ ಮಂಗಳಮುಖಿಯರ ಸಂಬಂಧದ ಚಿತ್ರವಾಗಿದ್ದು ಈ ಚಿತ್ರಕ್ಕಾಗಿ ಮಂಗಳಮುಖಿಯರು ಹೇಗೆ ವತರ್ಿಸುತ್ತಾರೆಂಬ ಬಗ್ಗೆ ಮಂಗಳಮುಖಿಯರಿರುವ ಜಾಗಕ್ಕೆ ಹೋಗಿ ಅವರ ಹಾವ, ಭಾವಗಳನ್ನು ಕಲಿತೆ ಎಂದರಲ್ಲದೆ, ಚಿತ್ರತಂಡದ ಸಂಪೂರ್ಣ ಸಹಕಾರದಿಂದಲೇ ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯಲು ಸಹಕಾರವಾಯಿತು ಎಂದರು. 
ನಾನು ಅವನಲ್ಲ ಅವಳು ಚಿತ್ರ ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಚಿತ್ರತಂಡದ ಪರಿಶ್ರಮ ಹೆಚ್ಚಿನದಾಗಿದೆ, ಆತ್ಮಚರಿತ್ರೆಯೊಂದನ್ನು ಸತತ ಆರು ವರ್ಷಗಳ ಕಾಲದಿಂದಲೂ ಸಿದ್ದಪಡಿಸಿಕೊಂಡಿದ್ದ ನಿದೇರ್ಶಕ ಲಿಂಗದೇವರು ಅವರು,  ಯಾರೊಬ್ಬರು ಮಾಡದೆ ಇದ್ದಾಗ ರಂಗಭೂಮಿ ಕಲಾವಿದನಾಗಿದ್ದ ನನ್ನನ್ನು ಆಯ್ಕೆ ಮಾಡಿ ಅವಕಾಶ ನೀಡಿದ ನಿಮರ್ಾಪಕರಾದ ರವಿಗರಣಿ ಹಾಗೂ ನಿದರ್ೇಶಕರಾದ ಬ್ಯಾಲದಕೆರೆ ಲಿಂಗದೇವರು ರವರು ಈ ಚಿತ್ರದಿಂದ ನನ್ನನ್ನು ಇಂದು ಇಡೀ ದೇಶವೇ ಗುರುತಿಸುವಂತೆ ಮಾಡಿದೆ ಎಂದರು. ನಾನು ಅವನಲ್ಲ ಅವಳು ಚಿತ್ರದ ಮಂಗಳಮುಖಿ ಪಾತ್ರವು ಸಾಧಾರಣವಾದ ಚಿತ್ರವಲ್ಲ, ಈ ಪಾತ್ರಕ್ಕಾಗಿ ನಿದರ್ೇಶಕರು ನೀಡಿದ ಸಲಹೆ, ಸೂಚನೆಗಳನ್ನು ಗಮನಿಸಿದ್ದಲ್ಲದೆ ಮಂಗಳಮುಖಿಯರ ಬಗ್ಗೆ ಅರಿತುಕೊಳ್ಳಲು ಮುಂದಾದೆ ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಿನಿಮಾ ಮಾಡುವುದು ಒಂದು ರೀತಿ ಕಷ್ಟವಾದರೆ, ಮಾಡಿದ ಕೆಲಸವನ್ನು ಜನರಿಗೆ ತೋರಿಸುವುದು ಮತ್ತೊಂದು ರೀತಿಯ ಕಷ್ಟ ಎಂದರಲ್ಲದೆ,  ಯು.ಎಫ್.ಓ ರವರು ಟಾಕೀಸ್ಗಳಲ್ಲಿ ಜೋಡಿಸಿರುವ ತಂತ್ರಜ್ಞಾನದಿಂದ ಇಂದು ಕಲಾತ್ಮಕ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದರು.
ನಾನು ಅವನಲ್ಲ ಅವಳು ಚಿತ್ರದ ಮೂಲಕ  ತುಮಕೂರು ಜಿಲ್ಲೆಗೆ ಎರಡು ರಾಷ್ಟ್ರಪ್ರಶಸ್ತಿ ಬಂದಿದೆ, ನಟ ವಿಜಯ್ ತಾಲ್ಲೂಕಿನ ಪಕ್ಕದ ಪಂಚನಹಳ್ಳಿ ಯವರು, ಹಾಗೂ ಚಿತ್ರದ ಮೇಕಪ್ ಮ್ಯಾನ್ ರಾಜು ತಾಲ್ಲೂಕಿನ ಸಮೀಪದ ಹತ್ಯಾಳುವಿನವರು ಎಂಬುದೇ ಜಿಲ್ಲೆಗೆ ಸಂತಸದ ವಿಷಯವಾಗಿದೆ, 2009ರಲ್ಲಿ ನಾನು ಅವನಲ್ಲ ಅವಳು ಚಿತ್ರವನ್ನು ತೆರೆಗೆ ತರಲು ಆಲೋಚಿಸಿದೆನು, ಆತ್ಮಚರಿತ್ರೆಯೊಂದರ ಕಥೆಯಾದ ಈ ಚಿತ್ರ ಮಂಗಳಮುಖಿಯರ ಬದುಕಾಗಿದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಕಡೆಗಳಲ್ಲಿ ಮಂಗಳಮುಖಿಯರನ್ನು ಹೇಗೆ ನೋಡುತ್ತಾರೆಂಬದು ಚಿತ್ರದ ಮುಖ್ಯ ವಸ್ತುವಾಗಿದೆ  ಎಂದರಲ್ಲದೆ ಈ ಚಿತ್ರವನ್ನು ಶೀಘ್ರದಲ್ಲೇ ಚಿ.ನಾ.ಹಳ್ಳಿಯಲ್ಲಿ ಬಿಡುಗಡೆ ಮಾಡಿಸಲಾಗುವುದು ಎಂದರು.
ಕೆಲವು ನಿದರ್ೇಶಕರು ಸ್ಕ್ರಿಪ್ಟ್ ಹಾಗೂ ತಯಾರಿಯೇ ಇಲ್ಲದೇ ಸಿನಿಮಾ ರಚನೆ ಮಾಡುತ್ತಾರೆ ನಂತರ ಸಿನಿಮಾ ಬಿಡುಗಡೆಯಾದಾಗ ಸಿನಿಮಾನೇ  ಓಡುತ್ತಿಲ್ಲ ಎಂದು ಹೇಳುತ್ತಾರೆ ಎಂದು ವಿಷಾಧಿಸಿದರು. 
ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೆಲಸಮಾಡುವುದು ಅವಮಾನವಲ್ಲ, ಮಾಡುವ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಸಿದ್ದಿ ದೊರೆಯುತ್ತದೆ ಅದಕ್ಕೆ ನಮ್ಮ ಮುಂದಿರುವ ಇವರೇ ಸಾಕ್ಷಿ ಎಂದರಲ್ಲದೆ,   ಕಾಲೇಜಿನಲ್ಲಿ ಸಿನಿಮಾ ಜಗತ್ತನ್ನು ಪರಿಚಯಿಸುವ ಅಗತ್ಯವಿರಲಿಲ್ಲ ಆದರೆ ತಮ್ಮ ಪ್ರತಿಭೆಯ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ಪ್ರತಿಭಾವಂತರನ್ನು ನಿಮಗೆ ಪರಿಚಯಿಸುವ ಉದ್ದೇಶದಿಂದ ಅವರ ಸಾಧನೆಯನ್ನು ನಿಮ್ಮ ಮುಂದೆ ತರಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು ಸಾಧನೆಗೆ ಗುರಿ ಮುಖ್ಯವೇ ಹೊರತು ಅಹಂಕಾರವಲ್ಲ ಎಂದ ಅವರು ವಿದ್ಯಾಥರ್ಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಿ, ಇಂಜನಿಯರಿಂಗ್, ಕ್ಷೇತ್ರಗಳಲ್ಲಿನ ಅಭ್ಯಥರ್ಿಗಳಿಗೆ ಈಗಾಗಲೇ ಕೆಲಸವೇ ಇಲ್ಲದಂತಾಗುತ್ತಿದೆ, ಮುಂದಿನ ದಿನಗಳಲ್ಲಿ ಬಿ.ಎ ವಿದ್ಯಾಥರ್ಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರಕಲಿದೆ ಆದ್ದರಿಂದ ವಿದ್ಯಾಥರ್ಿಗಳು ಬಿ.ಎ ಶಿಕ್ಷಣದ ಬಗ್ಗೆ ಅಸಡ್ಡೆ ತೋರಬೇಡಿ ಎಂದರು.
ಕಾರ್ಯಕ್ರಮಲ್ಲಿ ರಾಷ್ಟ್ರಪಶಸ್ತಿ ಪುರಸ್ಕೃತರಾದ ವಿಜಯ್, ರಾಜು ಹತ್ಯಾಳುರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ರೇಣುಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್,  ಪ್ರಾಂಶುಪಾಲ ಎಸ್.ಎಲ್.ಶಿವಕುಮಾರಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವೋದಯ ಕಾಲೇಜಿನ ಯುವಕ ಮಂಡಳಿ ವತಿಯಿಂದ ಭಾವಗೀತೆಗಳ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಚಿಕ್ಕನಾಯಕನಹಳ್ಳಿ ಪಟ್ಟಣದ ನವೋದಯ ಕಾಲೇಜಿಗೆ ಆಗಮಿಸಿದ್ದ ನಾನು ಅವನಲ್ಲ ಅವಳು ಚಿತ್ರದ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಾಯಕ ವಿಜಯ್, ನಿದರ್ೇಶಕ ಬಿ.ಎಸ್.ಲಿಂಗದೇವರು, ಮೇಕಪ್ಮ್ಯಾನ್ ರಾಜುಹತ್ಯಾಳ್ರನ್ನು ಚಿ.ನಾ.ಹಳ್ಳಿಯ ವಿವಿಧ ಸಂಘಟನೆಯವರು ಅಭಿನಂದಿಸಿದರು. ಎಂ.ಎಸ್.ರವಿಕುಮಾರ್, ಸುಪ್ರಿಂ.ಸುಬ್ರಹ್ಮಣ್ಯ, ಸಿದ್ದು.ಜಿ.ಕೆರೆ, ಸಿ.ಹೆಚ್.ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಜಾತಿ ಗಣತಿಗೆ ಸಾರ್ವಜನಿಕರು ಸಹಕರಿಸಿ
ಚಿಕ್ಕನಾಯಕನಹಳ್ಳಿ,ಏ.10 :- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ 23 ವಾಡರ್್ಗಳಲ್ಲಿ ರಾಜ್ಯ ಸಕರ್ಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಂಡಿರುವ ಜಾತಿಗಣತಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಏಪ್ರಿಲ್ 11 ರಿಂದ ಪ್ರಾರಂಭವಾಗಿ ಏಪ್ರಿಲ್ 30 ಕ್ಕೆ ಮುಕ್ತಾಯವಾಗಲಿದೆ. ಜಾತಿ ಗಣತಿದಾರರು ಮನೆ ಮನೆಗಳಿಗೆ ಬೇಟಿ ನೀಡಿದಾಗ ಅಧಾರ್ ಕಾಡರ್್, ಪಡಿತರಚೀಟಿ ಮತ್ತು ಮತದಾರರ ಗುರುತಿನ ಚೀಟಿ ನೀಡಿ ಗಣತಿದಾರರು ಕೇಳುವ ಮಾಹಿತಿಯನ್ನು ನೀಡಿ ಅವರೊಂದಿಗೆ ಸಹಕರಿಸಿ ಗಣತಿ ಕಾರ್ಯ ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಪುರಸಭಾ ಅಧ್ಯಕ್ಷೆ  ಕೆ. ರೇಣುಕಮ್ಮ, ಉಪಾಧ್ಯಕ್ಷೆ ಎಂ.ಡಿ.ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ ಶೆಟ್ಟಿ ಮನವಿ ಮಾಡಿದ್ದಾರೆ. 
   ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಮುಖ್ಯಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರನ್ನು ಸಂಪಕರ್ಿಸಲು ಕೋರಿದೆ. 

ಶಿಕ್ಷಕರ ಅಭಿವೃದ್ದಿಗೆ ಸಂಘ ಗಮನ ಹರಿಸುವುದು.

ಚಿಕ್ಕನಾಯಕನಹಳ್ಳಿ,ಏ.10 :- ತಾಲ್ಲೂಕು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್ ತಿಂಗಳಲ್ಲಿ ಗುರುಸ್ವಂದನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಪ್ರಾಥಾಮಿಕ ಪಾಠಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್. ಎನ್. ಪ್ರಕಾಶ್ ತಿಳಿಸಿದರು. 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪ್ರಾಥಮಿಕ ಪಾಠಶಾಲಾ ಶಿಕ್ಷಕರಿಗೆ ಸಂಘದವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿ ಹೋಬಳಿಗಳಲ್ಲಿ ಶಿಕ್ಷಕರಿಗೆ ಪೂಸ್ಕೊ ಕಾಯ್ದೆ ಕುರಿತು ವಿಚಾರ ಸಂಕೀರ್ಣ 720 ಶಿಕ್ಷಕರಿಗೆ ಗಳಿಕೆ ರಜೆ ನಗದೀಕರಣ, ಸ್ವಯಂ ಚಾಲಿತ ವೇತನ ಬಡ್ತಿ, ಕಾಲಮಿತಿ ವೇತನ ಬಡ್ತಿ ಸಕಾಲದಲ್ಲಿ ಮಾಡಿಸಲಾಗಿದೆ. ಹಲವು ವರ್ಷಗಳಿಂದ ಶಿಕ್ಷಕರಿಗೆ ಬಾಕಿ ಇದ್ದ ಭತ್ಯೆ ಬಿಲ್ಲು ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಪ್ರತಿ ತಿಂಗಳು 5 ನೇ ತಾರೀಖಿನ ಒಳಗಡೆ ವೇತನ, 14-15 ನೇ ಸಾಲಿನ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ನಲ್ಲಿ ನ್ಯಾಯ ಸಮ್ಮತವಾಗಿ ನಡೆಸಿಕೊಡುವ ಮೂಲಕ ಶಿಕ್ಷಕರ ಅಭಿವೃದ್ಧಿಗೆ ಸಂಘ ಗಮನ ಹರಿಸಿದೆ. ಎಂದು ತಿಳಿಸಿದರು. 
   ಪತ್ರಿಕಾ  ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಜೆ.ವೆಂಕಟೇಶ್ ಪ್ರದಾನ ಕಾರ್ಯದಶರ್ಿ ಹೆಚ್.ಸಿ.ಲೋಕೇಶ್, ಉಪಾಧ್ಯಕ್ಷ ಎಂ.ಎಸ್. ಈಶ್ವರಯ್ಯ, ಎ.ವಿನೋಧ, ಎಂ.ಈಶ್ವರಯ್ಯ, ಮಹದೇವಮ್ಮ ಚಂದ್ರಯ್ಯ, ಸಿ.ವೀಣಾ, ಮುಂತಾದವರು ಉಪಸ್ಥಿತರಿದ್ದರು. 


5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಆಹ್ವಾನ 
ಚಿಕ್ಕನಾಯಕನಹಳ್ಳಿ,ಏ.10 : 5ರಿಂದ 15 ವರ್ಷ ಒಳಪಟ್ಟ ಮಕ್ಕಳಿಗಾಗಿ ಇನ್ಸ್ಫೈರ್ ಕೆರಿಯರ್ ಅಕಾಡೆಮಿ ವತಿಯಿಂದ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಯೋಜಕ ಜಾಕಿರ್ ಹುಸೇನ್ ತಿಳಿಸಿದ್ದಾರೆ.
ಪಟ್ಟಣದ ದೇಶೀಯ ವಿದ್ಯಾಪೀಠ ಶಾಲಾ ಆವರಣದಲ್ಲಿ ಬೇಸಿಗೆ ಶಿಬಿರ ನಡೆಯಲಿದ್ದು ಬೇಸಿಗೆ ಶಿಬಿರದಲ್ಲಿ ನೃತ್ಯ, ಕರಾಟೆ, ಚಿತ್ರಕಲೆ, ಕರಕುಶಲ, ಮಣ್ಣಿನ ಶಿಲ್ಪಕಲೆ ಹಾಗೂ ಬುದ್ದಿಶಕ್ತಿಗೆ ಸಂಬಂಧಪಟ್ಟ ಆಟಗಳು ಹಾಗೂ ಇತರ ಸಾಮಾನ್ಯ ಜ್ಞಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ನೃತ್ಯ ನಿದರ್ೇಶಕ .ಆರ್.ವಿಶ್ವನಾಥ್ ತಿಳಿಸಿದ್ದಾರೆ. ಬೇಸಿಗೆ ಶಿಬಿರದ ಪ್ರವೇಶಕ್ಕೆ ಏಪ್ರಿಲ್ 15ರೊಳಗೆ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ.ನಂ. 9620692112, 85489910040 ನಂ.ಗೆ ಸಂಪಕರ್ಿಸಲು ಕೋರಿದ್ದಾರೆ.