Monday, December 14, 2015

ಅಪರಾಧ ತಡೆಗೆ ಸಾರ್ವಜನಿಕರೂ ಸಹಕರಿಸಬೇಕು :     ಡಿವೈಎಸ್ಪಿ ಕೆ.ಪಿ.ರವಿಕುಮಾರ್



ಚಿಕ್ಕನಾಯಕನಹಳ್ಳಿ : ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಮೈಗುಡಿಸಿಕೊಂಡು ಅಪರಾಧ ತಡೆಯುವಲ್ಲಿ ಸಾರ್ವಜನಿಕರು ಹಾಗೂ ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಸಿದರೆ ಮಾತ್ರ ಉತ್ತಮ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಪಟೂರು ಉಪವಿಭಾಗದ ಡಿವೈಎಸ್.ಪಿ ಕೆ.ಪಿ ರವಿಕುಮಾರ್ ಹೇಳಿದರು. 
ಪಟ್ಟಣದಲ್ಲಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ನಡೆದ ಪೋಲೀಸ್ ಇಲಾಖೆ ವತಿಯಿಂದ ಅಪರಾಧ ತಡೆ ಮಾಸಚರಣೆ ಅಂಗವಾಗಿ ವಿದ್ಯಾಥರ್ಿಗಳಿಗೆ ಅಪರಾಧ ತಡೆಗಟ್ಟಲು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಲೀಸ್ ಇಲಾಖೆ ಒಂದು ಶಿಸ್ತು ಬದ್ದವಾಗಿರುತ್ತದೆ, ವಿದ್ಯಾಥರ್ಿ ಜೀವನದಲ್ಲಿ ಮಕ್ಕಳು ಶಿಸ್ತು ಮೈಗೂಡಿಸಿಕೊಂಡು ಉನ್ನತ ಹುದ್ದೆಗಳಾದ ಐ.ಎ.ಎಸ್. ಐ.ಪಿ.ಎಸ್ಗಳಂತ ಹುದ್ದೆಗಳಿಗೆ ಆರಿಸಿಕೊಂಡು ಉತ್ತಮ ಅಧಿಕಾರಗಳಾಗಿ ಸೇವೆ ಮಾಡಿ ಎಂದರಲ್ಲದೆ ಪೋಲಿಸ್ ಇಲಾಖೆಯಲ್ಲಿ ಮುಂದಿನ ಎರಡು ವರ್ಷದಲ್ಲಿ ರಾಜ್ಯದಲ್ಲಿ 8 ಸಾವಿರ ಪೋಲೀಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅವಕಾಶವಿದ್ದು ವಿದ್ಯಾಥರ್ಿಗಳು ಹೆಚ್ಚಿನದಾಗಿ ಸೇರಿಕೊಳ್ಳುವಂತೆ ಕರೆ ನೀಡಿದರು.
ವಿದ್ಯಾಥರ್ಿಗಳು ಜೀವನದಲ್ಲಿ ಗುರಿಯನ್ನಟ್ಟುಕೊಂಡು ಸಾಧನೆ ಮಾಡುವ ಆತ್ಮಸ್ಥೆರ್ಯ ಬೆಳಸಿಕೊಳ್ಳಬೇಕು ಅದಕ್ಕಾಗಿ ಶಿಸ್ತು ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ, ಅಪರಾಧ ನಡೆಯುವುದನ್ನು ಪೋಲಿಸ್ ಇಲಾಖೆಯಿಂದ ಮಾತ್ರ ಸಾದ್ಯವಿಲ್ಲ, ಸಾರ್ವಜನಿಕರು, ಸಮಾಜದಲ್ಲಿ ಸಾಮಾನ್ಯ ಜ್ಞಾನ ಹೊಂದಿರುವವರು, ವಿದ್ಯಾಥರ್ಿಗಳು ಪೋಲಿಸರೊಂದಿಗೆ ಸಹಕರಿಬೇಕು, ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಪೋಲಿಸರಿಗೆ ಮಾಹತಿ ನೀಡುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು ಎಂದರು.
ವೃತ್ತ ನೀರಿಕ್ಷಣಾಧಿಕಾರಿ ಎ.ಮಾರಪ್ಪ ಮಾತನಾಡಿ, ಅಪರಾಧ ತಡೆಯುವ ಕೆಲಸ ಪೋಲೀಸರಿಗೆ ಮಾತ್ರ ಸೀಮಿತವಲ್ಲ ಸಾರ್ವಜನಿಕರಾದ ನಿಮ್ಮಗಳ ಜವಬ್ದಾರಿಯೂ ಹೌದು,  ನಿಮ್ಮಗಳ ಮನೆಯ ಸುತ್ತಮುತ್ತ ಅಪರಿಚಿತರು ಅನುಮಾನಸ್ಪದವಾಗಿ ಓಡಾಡುವುದು, ಪರಿಚಯಸ್ಥರಂತೆ ಮನೆಗೆ ಬರುವುದು. ಮುಂಜಾನೆ ಮನೆ ಬಾಗಿಲಿನಲ್ಲಿ ರಂಗೋಲೆ ಹಾಗೂ ನೀರು ಹಾಕುವಾಗ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಮೇಲೆ ನೀಗ ವಹಿಸುವುದು ಸಾರ್ವಜನಿಕರ ಜವಬ್ದಾರಿಯಾಗಿದೆ, ಕಾಖರ್ಾನೆ ಹಾಗೂ ಗಾಮರ್ೇಂಟ್ಸ್ ಇತರೆ ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುವಂತಹ ಅಪರಿಚಿತ ವ್ಯಕ್ತಿಗಳೊಂದಿಗೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವುದು ಇವೆಲ್ಲವೂ ಅಪರಾಧಗಳು ಇಂತಹ ಕಾರ್ಯಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನೀಗಾ ವಹಿಸಿ ಸುತ್ತ ಮುತ್ತ ಹಾಗೂ ನೆರೆ ಹೊರೆ ಜನರಿಗೆ ತಿಳಿಸುವುದಾಗಲಿ ಅಥವಾ ಹತ್ತಿರದ ಪೋಲೀಸರಿಗೆಗಾಗಲಿ ತಿಳಿಸುವುದರಿಂದ ಮಾತ್ರ ಅಪರಾಧಗಳನ್ನು ತಡೆಯಲು ಸಾದ್ಯವಾಗುತ್ತದೆ ಇಂತಹ ಕೆಲಸಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು ಎಂದರು.
ಪಿಎಸ್.ಐ ಮಹಾಲಕ್ಷ್ಮಮ್ಮ ಮಾತನಾಡಿ ಪೋಲಿಸರೊಂದಿಗೆ ಸಾರ್ವಜನಿಕರು ಪೋಲಿಸರ ಬಗ್ಗೆ ಹೊಂದಿರುವ ಆತಂಕ ಹಾಗೂ ಭಯವನ್ನು  ದೂರ ಮಾಡುವ ಉದ್ದೇಶದಿಂದ ಅಪರಾಧ ತಡೆ ಮಾಸಚಾರಣೆ ಹಮ್ಮಿಕೊಂಡಿರುವುದು ಇದರ ಸದುದ್ದೇಶವನ್ನು ಸಾರ್ವಜನಿಕರು ಹೊಂದಬೇಕು ಎಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಹುಳಿಯಾರು ಪೋಲಸ್ ಠಾಣೆ ಪಿ.ಎಸ್.ಐ ಪ್ರವೀಣ್ಕುಮಾರ್, ಶಿಕ್ಷಕರುಗಳಾದ ವೇಣುಗೊಪಾಲ್, ಗುರುಸ್ವಾಮಿ, ರಂಗಸ್ವಾಮಿ, ಕೋದಂಡರಾಮು. ಶಿವಾನಂದ್ ಮತ್ತಿತ್ತರರು ಉಪಸ್ಥಿತರಿದ್ದರು.