Saturday, October 29, 2011






ಮಾದಿಗರು, ದಕ್ಕಲಿಗರು ಸಹೋದರರು,  ನಮ್ಮಲ್ಲಿ ವಿಷಬೀಜ ಬಿತ್ತುತ್ತಿರುವವರ ವಿರುದ್ದ ಹೋರಾಡಿ
ಚಿಕ್ಕನಾಯಕನಹಳ್ಳಿ,ಅ.29 : ದಕ್ಕಲಿಗ ಸಮುದಾಯವನ್ನು  ಹೀಯಾಳಿಸುವುದು, ನಿಂದಿಸುವುದನ್ನು ಮಾದಿಗ ಜನಾಂಗ ಎಂದಿಗೂ ಮಾಡುವುದಿಲ್ಲ ಅವರು ನಮ್ಮ ಅಣ್ಣತಮ್ಮಂದಿರಂತೆ ಇದ್ದು ದಕ್ಕಲಿಗ ಹಾಗೂ ಮಾದಿಗರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರವಣಿಗೆಯು ಕಿಡಿಗೇಡಿಗಳು ನಮ್ಮ ಸಮಾಜಗಳ  ನಡುವೆ ವಿರಸ ತರುವ ಕೆಲಸಮಾಡುತ್ತಿದ್ದಾರೆ  ಇದನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಪದಾಧಿಕಾರಿ ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ರಾಜ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಕ್ಕಲಿಗ ಸಮುದಾಯವು ಮಾದಿಗ ಜನಾಂಗದ 30 ಬುಡಕಟ್ಟಿಗಳ ಪಟ್ಟಿಯಲ್ಲಿ   ದಕ್ಕಲಿಗ ಸಮುದಾಯವೂ ಸೇರಿದೆ, ದಕ್ಕಲಿಗರು ನಮ್ಮ ಅಣ್ಣತಮ್ಮಂದಿರಿದ್ದಂತೆ ಅವರ ವಾಸ, ಜೀವನಶೈಲಿ ಬಗ್ಗೆ ಎಲ್ಲಿಯೂ ಅಪಸ್ವರ ತೆಗೆದಿಲ್ಲ, ಅವರು ನಮ್ಮ ಕಾಲೋನಿಗಳಿಗೆ ಪ್ರವೇಶಿಸಲು ಸ್ವಾಗತವಿದೆ ಆದರೂ ಈ ಬಗ್ಗೆ ಪತ್ರಿಕೆಯಲ್ಲಿ ಅಲ್ಪ ತಿಳುವಳಿಕೆಯ ಲೇಖಕರೊಬ್ಬರು ಮಾದಿಗರಿಂದ ದಕ್ಕಲಿಗರ ವಿರುದ್ದ ಧೋರಣೆ ಇದೆ ಎಂಬ ಬರವಣಿಗೆಯು ಖಂಡನೀಯವಾಗಿದೆ ಎಂದರು.
    ಗೋಷ್ಠಿಯಲ್ಲಿ ತಾ.ಮಾದಿಗ ಸಂಘದ ಅಧ್ಯಕ್ಷ ಸಾದರಹಳ್ಳಿ ಜಯಣ್ಣ, ರಾಜ್ಯ ಡಾ.ಅಂಭೇಡ್ಕರ್ ಯುವಸೇನೆ ಅಧ್ಯಕ್ಷ ಚೌಳಕಟ್ಟೆ ನಾಗರಾಜು, ಸಿ.ಎನ್.ಹನುಮಯ್ಯ , ಕಂದಿಕೆರೆ ಕೃಷ್ಣಮೂತರ್ಿ ಉಪಸ್ಥಿತರಿದ್ದರು.

ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಅ.29 : ಬಡತನದಿಂದ ಬೇಸತ್ತು ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ, ಈ ರೀತಿಯ ಘಟನೆ ನಡೆದ ಸ್ಥಳಗಳಲ್ಲಿ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗೆ ತಿಳಿಸಿದರೆ ಶಿಶುಗಳ ಪಾಲನೆ ಹಾಗೊ ಪೋಷಣೆಯನ್ನು ಇಲಾಖೆ ನೋಡಿಕೊಳ್ಳುತ್ತದೆ ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ತಿಳಿಸಿದರು.
    ಪಟ್ಟಣದ ಸಿ.ಡಿ.ಪಿ.ಓ ಕಛೇರಿಯಲ್ಲಿ ನವಜಾತ ಶಿಶುಗಳ ಪಾಲನೆ, ಪೋಷಣೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಬಡತನದಲ್ಲಿ ನೊಂದು ಜೀವನ ಸಾಗಿಸಲಾಗದ ಸ್ಥಿತಿಯಲ್ಲಿ ಅಥವಾ ಅನೈತಿಕ ಸಂಬಂಧಗಳನ್ನು ಮರೆಮಾಚಲು ಕೆಲವರು ಹೆರಿಗೆಯಾದ ತಕ್ಷಣ ತಮ್ಮ ಮಕ್ಕಳನ್ನು ತೊಟ್ಟಿಗಳಿಗೆ ಬಿಸಾಡುತ್ತಿದ್ದಾರೆ ಇದರಿಂದ ಶಿಶುಗಳು ಪ್ರಾಣಿಗಳಿಗೆ ಆಹಾರವಾಗುತ್ತದೆ ಇಲ್ಲವಾದರೆ ಕಿಡಿಗೇಡಿಗಳಿಗೆ ದೊರಕಿ ಮಗುಗಳಿಂದ ಬಿಕ್ಷಾಟನೆ, ಅವರ ಅಂಗಗಳನ್ನು ಮಾರುವುದು ಇತ್ಯಾದಿ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾರೆ ಎಂದ ಅವರು,  ದೇಶದಲ್ಲಿ 1000 ಗಂಡಸರಿಗೆ ಕೇವಲ 973 ಮಹಿಳೆಯರಿದ್ದು  ಇದಕ್ಕೆ ಕಾರಣ ಮಹಿಳೆಯರ ಬಗ್ಗೆ ಇರುವ ಅಸಡ್ಡೆ ಇದನ್ನು ತೊರೆಯಬೇಕು ಎಂದು ಸಲಹೆ ನೀಡಿದರು.
    ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಕೆಲವು ಪೋಷಕರು ಮಕ್ಕಳು ತಮಗೆ ಸಂಬಂಧವಿಲ್ಲವೆಂದು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಇದರಿಂದ ಮಕ್ಕಳು ಹಲವು ಕೆಟ್ಟಚಟಗಳನ್ನು ಕಲಿತು ದೇಶಕ್ಕೆ ಅಪಾಯಕಾರಿಗಳಾಗುತ್ತಿದ್ದಾರೆ ಎಂದ ಅವರು,  ಮಹಿಳೆಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ನೌಕರಿ ಕೊಡಿಸಿಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ದೊಡ್ಡ ನಗರಗಳಲ್ಲಿ  ವೇಶ್ಯಾವಾಟಿಕೆಗಳಲ್ಲಿ ತೊಡಗಿಸುತ್ತಿರುವುದು ಹೆಚ್ಚಾಗಿದೆ,  ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
    ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿಪುಟ್ಟಯ್ಯ, ಸ್ತ್ರೀ ಶಕ್ತಿ ಸಂಘದ ಅಂಬಿಕ, ಯೋಜನಾಧಿಕಾರಿ ಪರ್ವತಯ್ಯ, ಪರಮೇಶ್ವರಯ್ಯ, ಪುಟ್ಟಸ್ವಾಮಿ, ಶಶಿಕಲಾ, ನಾಗರತ್ನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ಪರ್ವತಯ್ಯ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ನೇರರಸ್ತೆ ಕಾಮಗಾರಿ ನಿಲ್ಲಿಸಿ, ಖಾಸಗಿ ಕಂಪನಿಯವರ ಪ್ರಸ್ತಾವನೆಯನ್ನು ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಅ.28 : ತಾಲ್ಲೂಕಿನ ಶೆಟ್ಟಿಕೆರೆ ಗೇಟ್ನಿಂದ ಹಾಸನ ಜಿಲ್ಲೆ ಚಿಂದೇನಹಳ್ಳಿ ಗಡಿಯವರೆಗೆ ರಸ್ತೆ ನಿಮರ್ಾಣ ಮಾಡಲು ಈಗಿರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸ ರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶ ನೀಡಿದ್ದರೂ ಖಾಸಗಿ ಕಂಪನಿಯವರು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ನೇರ ರಸ್ತೆ ನಿಮರ್ಾಣ ಮಾಡಲು ಸವರ್ೆ ಕಾರ್ಯವನ್ನು ನಿರ್ವಹಿಸುತ್ತಾ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರ ಬಗ್ಗೆ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಟ್ಟೆರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಮನವಿ ಅಪರ್ಿಸಿತು.
ಹಾಲಿ ಇರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶಿಸಿದ್ದರೂ ಭೂ ಸ್ವಾಧೀನ ಮಾಡಿಕೊಂಡಿಲ್ಲದ ರೈತರ ಜಮೀನನ್ನು ರೈತರಲ್ಲಿ ಅನುಮತಿ ಪಡೆಯದೇ ನೇರ ರಸ್ತೆ ಸಂಪರ್ಕ ಮಾಡಿ ಹಣ ಲಪಟಾಯಿಸುವ ಹುನ್ನಾರ ಹಾಕಿ, ರೈತರ ಜಮೀನುಗಳಲ್ಲಿ ಅಳತೆ ಮಾಡಿ ಗಡಿಗುರುತಗಳ ಬಗ್ಗೆ ಸವರ್ೆ ಕಾರ್ಯ ನಡೆಸಿದ್ದಾರೆ. ಇದರಿಂದ  ರೈತರ ನೆಮ್ಮದಿ ಹಾಳಳಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಅವರು ಇಲ್ಲಿರುವ ಜಮೀನುಗಳಲ್ಲಿ ತೆಂಗು, ಅಡಕೆ, ಮಾವು ಹಾಗೂ ಇತರೆ ಬೆಲೆ ಬಾಳುವ ಮರಗಳಿಂದ ಆದಾಯವಿದ್ದು ತಮ್ಮ ಕುಟುಂಬದ ಸಂಪೂರ್ಣ ನಿರ್ವಹಣೆ ಈ ಜಮೀನುಗಳಿಂದ ನಡೆಯುತ್ತಿದೆಯಾದ್ದರಿಂದ ಖಾಸಗಿ ಕಂಪನಿಯವರು ಲಾಭ ಸಂಪಾದನೆಯ ದುರುದ್ದೇಶದಿಂದ ರೈತರ ಜಮೀನನ್ನು ರಸ್ತೆ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸ್ಥಳ ತನಿಖೆ ಮಾಡಿ ಅವರ ಪ್ರಸ್ತಾವನೆಯನ್ನು ಕೈ ಬಿಟ್ಟು ಸಕರ್ಾರದ ಆದೇಶಾನುಸಾರ ಹಾಲಿ ಇರುವ ರಸ್ತೆಯನ್ನೇ ಅಗಲೀಕರಣ ಮಾಡಿಕೊಂಡು ಕಾಮಗಾರಿ ಮಾಡಲು ಆದೇಶ ನೀಡಿ ರೈತರ ಜಮೀನನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲಿ ರೈತರುಗಳಾದ ಬಿ.ಎಸ್.ಯೋಗಾನಂದ್, ರಾಮೇಗೌಡರು, ಜಯಶಂಕರ್,  ರೈತ ಸಂಘದ ಸತೀಶ್ ಕೆಂಕೆರೆ, ಗಂಗಾಧರ್,  ಜಗದೀಶ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ತೋಂಟಾದಾರ್ಯ, ತೇಜಸ್ವಿ.ಎಸ್.ಸಿ, ಮಲ್ಲೇಶಪ್ಪ, ಮರುಳಯ್ಯ, ಸತೀಶ್ ಕೆ.ಆರ್, ಶಿವಲಿಂಗಯ್ಯ, ಬಿ.ಎಸ್.ರವೀಶಯ್ಯ, ಲೋಕೇಶ್, ನಟರಾಜ್ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಅ.28 :
ತಾಲ್ಲೂಕು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ಮಂಗಳವಾರ 1ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಂದಿಕೆರೆಯ ಶ್ರೀ ಶನೇಶ್ವರ ನಾಟಕ ವಸ್ತ್ರಾಭರಣ ಮಂಡಳಿ ಮಾಲೀಕ ದಿವಂಗತ ಮಹದೇವಪ್ಪ(ಮರಣೋತ್ತರ), ಹುಳಿಯಾರಿನ ಹಾಮರ್ೋನಿಯಂ ಕಲಾವಿದರಾದ ಗೌರಮ್ಮಶಿವಕುಮಾರ್ರವರಿಗೆ ಸನ್ಮಾನಿಸಲಾಗುವುದು.

ಚಿಕ್ಕನಾಯಕನಹಳ್ಳಿ,ಅ.28 : ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸ್ಟೆಪ್ ಅಪ್ ಘಟಕದಡಿಯಲ್ಲಿ 2011-12ನೇ ಸಾಲಿಗೆ ಪುರಸಭಾ ವ್ಯಾಪ್ತಿಯ ಬಿ.ಪಿ.ಎಲ್ ಕುಟುಂಬದ ಫಲಾನುಭವಿಗಳಿಗೆ ಮೆಕಾನಿಕಲ್ ತರಬೇತಿ, ಕಂಪ್ಯೂಟರ್ ಶಿಕ್ಷಣದಲ್ಲಿ ಬಿ.ಪಿ.ಓ ಮತ್ತು ಸ್ಟೋಕನ್ ಇಂಗ್ಲೀಷ್ ಕೋಸರ್್ 6ತಿಂಗಳ ತರಬೇತಿ ನೀಡಲಾಗುವುದು ಎಂದು ಪುರಸಭಾ ಕಾಯರ್ಾಲಯ ತಿಳಿಸಿದೆ.
ಟೈಲರಿಂಗ್ ತರಬೇತಿಯು ಒಂದು ತಿಂಗಳ ಅವದಿಯಾಗಿದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರತಿ ತಿಂಗಳು 500 ರೂ ಸ್ಟ್ರೈಫಂಡ್ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯ ನಂತರ ಬೆಂಗಳೂರು, ಹುಳಿಯಾರು, ತಿಪಟೂರು, ತುಮಕೂರು, ಚಿಕ್ಕನಾಯಕನಹಳ್ಳಿಯಲ್ಲಿ ತರಬೇತಿ ನೀಡಿದ ಸಂಸ್ಥೆಯವರು ಉದ್ಗೋಗವಕಾಶ ಒದಗಿಸಿಕೊಡುವುದರಿಂದ ಉದ್ಯೋಗಾಕಾಂಕ್ಷಿಗಳು ಮಾತ್ರ 02.11.2011 ರೊಳಗಾಗಿ ಕಛೇರಿಯಿಂದ ಅಜರ್ಿ ಪಡೆದು ಸಲ್ಲಿಸುವುದು, ತಡವಾಗಿ ಬಂದ ಅಜರ್ಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.