Wednesday, July 27, 2011
ವಿದ್ಯಾಥರ್ಿಗಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ : ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಜು.27 : ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದರೆ ಬೇರೆ ವಿದ್ಯಾಥರ್ಿಗಳು ನಾವು ಪ್ರತಿಭಾನ್ವಿತರಾಗಬೇಕೆಂಬ ಹುಮ್ಮಸ್ಸು, ಆತ್ಮವಿಶ್ವಾಸ ಅವರ ಮನಸ್ಸಿನಲ್ಲಿ ಚಿಗುರಿ ಶೈಕ್ಷಣಿಕವಾಗಿ ಮುಂದೆ ಬರುತ್ತಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶೈಕ್ಷಣಿಕ ಸಮಾವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ತಮ್ಮ ಮುಂದಿನ ಉತ್ತಮ ವಿದ್ಯಾಭ್ಯಾಸದ ಭವಿಷ್ಯವನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಶ್ರಮ ವಹಿಸಬೇಕಾಗಿದೆ ಎಂದ ಅವರು ತಾಲ್ಲೂಕಿನಲ್ಲಿ 150 ಶಾಲೆಗಳ ಕಾಂಪೌಂಡ್ ವ್ಯವಸ್ಥೆ ಸರಿಯಿಲ್ಲದಿದ್ದು ಕಾಂಪೌಂಡ್ ವ್ಯವಸ್ಥೆ ಶೀಘ್ರ ಸರಿಮಾಡಲಾಗುವುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಪೋಷಕರು ಹೆಣ್ಣು ಮಕ್ಕಳ ಓದಿಗೆ ಕಡಿವಾಣ ಹಾಕುವುದನ್ನು ತಪ್ಪಿಸಬೇಕು, ಹೆಣ್ಣು ಮಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಅಂಕಗಳಿಸುತ್ತಿದ್ದು ಹೆಣ್ಣು ಮಕ್ಕಳಿಗಾಗಿ ಸಕರ್ಾರ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತಿದೆ ಪೋಷಕರು ಸಕರ್ಾರ ನೀಡುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳದೆ ಮಕ್ಕಳ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ವಿದ್ಯಾಥರ್ಿಗಳ ಓದಿನಲ್ಲಿ ಸಹನೆ ಅಗತ್ಯವಾಗಿದ್ದು ಸಹನೆ, ಪ್ರೀತಿಯಿಂದಲೇ ಯಾವ ಸಾಧನೆಯನ್ನಾದರೂ ಮಾಡಬಹುದಾಗಿದ್ದು ತಮ್ಮ ಸಾಧನೆಗೆ ಶ್ರಮಿಸಿದ ಎಲ್ಲರನ್ನು ನೆನಪಿಸಿಕೊಳ್ಳುವುದು ಉತ್ತಮ ಕ್ರಿಯಾಶೀಲವಾಗಿದೆ ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.
ಸಮಾರಂಭದಲ್ಲಿ ತಾಲ್ಲೂಕಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆ.ಎಸ್.ಹರೀಶ್, ಎಂ.ಮೇಘನರವರನ್ನು ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಬೆಳ್ಳಿಪದಕದೊಂದಿಗೆ ಪುರಸ್ಕರಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಇ.ಓ ಎನ್.ಎಂ.ದಯಾನಂದ್, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹಾಲಿಂಗಯ್ಯ ನಿರೂಪಿಸಿದರೆ, ಗೋವಿಂದರಾಜು ವಂದಿಸಿದರು.
ಮಾನಸಿಕ ಬಲಕ್ಕೆ ಶಿಕ್ಷಣದ ಅಗತ್ಯ
ಚಿಕ್ಕನಾಯಕನಹಳ್ಳಿ,ಜು.27 : ಶಿಕ್ಷಣದಿಂದ ಬುದ್ದಿ ವಿಕಾಗೊಂಡು ಚಾರಿತ್ರ್ಯದ ಮೂಲಕ ಮಾನಸಿಕ ಬಲ ಹೆಚ್ಚಾಗಬೇಕು ಆಗ ಮಾತ್ರ ಶಿಕ್ಷಣದ ಅಧ್ಯಯನ ಸಾರ್ಥಕವಾಗುತ್ತದೆ ಎಂದು ತುಮಕೂರಿನ ಶ್ರೀ ವಿರೇಶಾನಂದ ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ನಾಲ್ಕನೇ ಶೈಕ್ಷಣಿಕ ಸಮಾವೇಶದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಶಿಕ್ಷಕರು ನೈತಿಕ ಜಾಗೃತಿಯಿಂದ, ಸನ್ನಡತೆಯಿಂದ ಸಮಾಜದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸಬೇಕು, ಶಿಕ್ಷಕರನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವರು ಕೇವಲ ಅಂಕ ತರಿಸುವ ಶಿಕ್ಷಕರಾಗದೆ ಸಮಾಜದಲ್ಲಿ ಒಳ್ಳೆಯ ಸತ್ಪ್ರಜೆಗಳನ್ನು ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದೆ, ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಯಬೇಕಾದರೆ ವಿದ್ಯಾಥರ್ಿಗಳು ಸಕರ್ಾರಿ ಶಾಲೆಗೆ ಬರುವಂತಾಗಬೇಕು ಸಕರ್ಾರಿ ಮೂಲಭೂತ ಸೌಲಭ್ಯವಿರುವ ಗ್ರಂಥಾಲಯ, ವಿಜ್ಞಾನೋಪಕರಣ ಬೋಧನೋಪಕರಣಗಳು ಮತ್ತು ಶಾಲಾ ಪರಿಸರ ಖಾಸಗಿ ಶಾಲೆಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮವಾಗಿದೆ ಜವಬ್ದಾರಿಯುತ ಯುವಕ ಪಡೆಯನ್ನು ರೂಪಿಸುವಲ್ಲಿ ಶಿಕ್ಷಣರಂಗದ ಪಾತ್ರ ಮಹತ್ವದಾದುದು ಎಂದು ವಿವರಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರು ಬೋಧನೆಯವಧಿಯಲ್ಲಿ ಹೊಸತನ ರೊಪಿಸಿ ಸಂಶೋಧಕರಾಗಬೇಕು, ಶಿಕ್ಷಣವನ್ನು ಅಥರ್ೈಸಿಕೊಂಡು ಬೋಧಿಸುವ ಶಿಕ್ಷಕ ಅತ್ಯುತ್ತಮ ಶಿಕ್ಷಕ, ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲರಾಗಬೇಕು ಮಕ್ಕಳಿಗೆ ವಿಮಷರ್ೆ,ವಿಶ್ಲೇಷಣೆ,ಪ್ರಶ್ನೆ ಮಾಡುವುದನ್ನು ಕಲಿಸಬೇಕು, ಅವರ ಬುದ್ದಿಯನ್ನು ಚುರುಕು ಮಾಡಿ ಸಾಮಥ್ರ್ಯದಲ್ಲಿ ಶಕ್ತಿಶಾಲಿಯನ್ನಾಗಿ ರೂಪಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಕರ್ಾರಿ ಪ್ರೌಢಶಾಲೆ ಜೆ.ಸಿ. ಪುರಕ್ಕೆ ನಾಲ್ಕ ಹೋಲಿಗೆ ಯಂತ್ರ ಕೊಡಿಗೆಯಾಗಿ ನೀಡಿಲಾಯಿತು.
ಸಮಾರಂಭದಲ್ಲಿ ತುಮಕೂರು ದಕ್ಷಿಣ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಬೋದಕರ ಸಂಘದ ಅಧ್ಯಕ್ಷರಾದ ಮಾದಪುರ ಶಿವಪ್ಪನವರು ಮತ್ತು ಚಿ.ನಾ.ಹಳ್ಳಿ ತಾಲ್ಲೋಕ್ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಸಂಘದ ಅಧ್ಯಕ್ಷರಾದ ಗೋವಿಂದರಾಜುರವರು ಮಾತನಾಡಿದರು
ಈ ಸಂದರ್ಭದಲ್ಲಿ ನಿವೃತ್ತ, ವಗರ್ಾಯುತ, ಹಾಗೂ ಮುಂಬಡ್ತಿ ಪಡೆದ ಕನ್ನಡ ಶಿಕ್ಷಕರನ್ನು, ಶೇ100 ರಷ್ಟು ಫಲಿತಾಂಶ ತಂದ ಶಿಕ್ಷಕರನ್ನು ಮತ್ತು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ನಿರ್ಮಲ ಸ್ವಾಗತಿಸಿ ಎಲ್. ರೇವಣ್ಣ ವಂದಿಸಿ ಹೆಚ್.ಆರ್..ರೇಖಾ ನಿರೂಪಿಸಿದರು.