Saturday, July 6, 2013

cm


ಕಂಬಳಿ ಉತ್ಪಾದನೆಯ  ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿ ಸಿ.ಎಂ.ಬಳಿಗೆ  ನಿಯೋಗ
ಚಿಕ್ಕನಾಯಕನಹಳ್ಳಿ,ಜು.06 : ಉಣ್ಣೆ ಕಂಬಳಿ ನೇಕಾರರ ಹಾಗೂ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ಮಂಜೂರು ಮಾಡಿಸಿ ಕಂಬಳಿ ನೇಯ್ಗೆಯನ್ನು ನಂಬಿಕೊಂಡು ಜೀವಿಸುತ್ತಿರುವ ಕಂಬಳಿ ನೇಕಾರರ ಜೀವನಕ್ಕೆ ಹಾಗೂ ಸಂಘದ ಬಲವರ್ಧನೆಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಇಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ನಿಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿಯು ತಾಲ್ಲೂಕಿನಾದ್ಯಂತ 3ಸಾವಿರ ಜನ ಕಂಬಳಿ ನೇಕಾರ ಸದಸ್ಯರನ್ನು ಹೊಂದಿರುವ ಸಹಕಾರ ಸಂಘ, ಈ ನೇಕಾರರೆಲ್ಲಾ ಕುಲಕಸುಬಾಗಿ ಉಣ್ಣೆ ಕಂಬಳಿಗಳ ನೇಕಾರಿಕೆಯನ್ನು ನಡೆಸಿಕೊಂಡು ಕಸುಬಾಗಿಸಿಕೊಂಡು, ಬದುಕನ್ನು ಕಟ್ಟಿಕೊಂಡಿದ್ದಾರೆ.
 ನೇಕಾರರನ್ನು ಆಥರ್ಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಸಂಘವು ಉಣ್ಣೆ ಖರೀದಿಸಿ, ನೇಕಾರರಿಗೆ ವಿತರಿಸುವುದು, ನೇಕಾರರಿಂದ ಕಂಬಳಿಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ಸಂಘವು ಸಹ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಂಬಳಿಗಳಿಗೆ ಬೇಡಿಕೆ ಇಲ್ಲದೆ ಹಾಗೂ ಸರಿಯಾದ ಬೆಲೆ ಸಿಗದ ಕಾರಣ ಮತ್ತು ಕಚ್ಚಾ ಮಾಲುಗಳ ಬೆಲೆ ದುಬಾರಿಯಗಿರುವುದರಿಂದ ಕಂಬಳಿ ನೇಕಾರರ ಜೀವನ ಅತಂತ್ರ ಸ್ಥಿತಿಯಿಂದ ಕೂಡಿದ್ದು ಜೀವನ ನಿರ್ವಹಣೆಗಾಗಿ ನೇಕಾರರು ಉದ್ಯೋಗವನ್ನು ಅವಲಂಬಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿಮರ್ಾಣವಾಗಿದೆ.
 ಈ ಭಾಗದಲ್ಲಿ ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಜೀವನ ನಿರ್ವಹಣೆಗೆ ಇತರೆ ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು ಅವರಿಗೆ ಸಂಘದಿಂದ ಉದ್ಯೋಗವಕಾಶ ಕಲ್ಪಿಸಲು ಸಂಘದಲ್ಲಿ ಸುಸ್ಥಿರವಾಗಿರುವ ವಕರ್್ಶೆಡ್ಗಳು ಹಾಗೂ ಹೊಸ ತಂತ್ರಜ್ಞಾನದ ಮಗ್ಗಗಳ ಕೊರತೆ ಮತ್ತು ಯಂತ್ರೋಪಕರಣಗಳ ಕೊರತೆ ಇರುವುದರಿಂದ ಸಂಘವು ಸ್ವಂತಕ್ಕೆ ಜಮೀನನ್ನು ಹೊಂದಿದ್ದು ಆ ಜಾಗದಲ್ಲಿ ಕಂಬಳಿ ನೇಕಾರರಿಗೆ ಕಾರ್ಯಗಾರವನ್ನು ನಿಮರ್ಾಣ ಮಾಡಲು ಹಾಗೂ ಅತ್ಯಾಧುನಿಕ ಮಗ್ಗಗಳನ್ನು ಅಳವಡಿಸಲು ಮತ್ತು ಕಂಬಳಿಗಳನ್ನು ನುಳುಪುಗೊಳಿಸುವಂತಹ  ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಕರ್ಾರದಿಂದ ಯೋಜನೆಯನ್ನು ರೂಪಿಸಿ  ಬಜೆಟ್ನಲ್ಲಿ ಅದನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿರುವ ಅವರು, ಈ ಯೋಜನೆಗೆ ಅಂದಾಜು ಮೂರು ಕೋಟಿ ಹಣಬೇಕಾಗಿದ್ದು, ಈ ಹಣವನ್ನು ಮಂಜೂರು ಮಾಡಿಸಿ ಕೊಟ್ಟರೆ ಕಂಬಳಿ ನೇಕಾರರ ಹಾಗೂ ಸಂಘದ ಬಲವರ್ಧನೆಗೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.
ನಿಯೋಗದಲ್ಲಿ ರಾಜ್ಯ ಉಣ್ಣೆ ನೇಕಾರರ ಮಹಾಮಂಡಲದ ನಿದರ್ೇಶಕ ಸಿ.ಡಿ.ಚಂದ್ರಶೇಖರ್, ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷರಾದ ಗಂಗಾಧರಯ್ಯ, ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಗೋವಿಂದಯ್ಯ, ವಿಜಯಕುಮಾರ್, ಭಾರತಮ್ಮ, ಪತ್ರಕರ್ತ ಸಿ.ಬಿ.ಲೋಕೇಶ್, ಕಾರ್ಯದಶರ್ಿ ಕೋದಂಡಯ್ಯ ಇದ್ದರು.

ನಮ್ಮ ಜೀವನದ ಶಿಲ್ಪಿಗಳು ನಾವೇ, ಅದನ್ನರಿತು ಶಿಕ್ಷಣ ಪಡೆಯುವಂತೆ ವಿದ್ಯಾಥರ್ಿಗಳಿಗೆ ಶಾಸಕರಿಂದ ಕಿವಿ ಮಾತು
ಚಿಕ್ಕನಾಯಕನಹಳ್ಳಿ,ಜು.06 : ನಮ್ಮ ಜೀವನದ ಶಿಲ್ಪಗಳು ನಾವೇ, ಅದನ್ನರಿತು ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಪಡೆದರೆ, ಜೀವನದ ಒಂದು ಭಾಗವನ್ನು ಗೆದ್ದಂತೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ 2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರ್ಯಾಂಕ್ ಬಂದ ವಿದ್ಯಾಥರ್ಿಗಳಂತೆ ಕಡಿಮೆ ಅಂಕಗಳನ್ನು ಪಡೆದಂತಹ ವಿದ್ಯಾಥರ್ಿಗಳು ಹೆಚ್ಚಿನ ಶ್ರಮ ವಹಿಸಿದರೆ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು ಎಂದುರು. 
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ನಾವು ಹೆಚ್ಚು ಅಂಕ ಪಡೆದಿದ್ದೇವೆ ಎಂಬ ಗರ್ವದಿಂದ ವತರ್ಿಸದೆ ಗುರು ಹಿರಿಯರು, ಸ್ನೇಹಿತರಲ್ಲಿ ವಿನಯವಂತಿಕೆಯಿಂದ ವತರ್ಿಸಿ, ಮುಂದೆ ಎದುರಾಗುವ ಇನ್ನಿತರ ಪರೀಕ್ಷೆಗಳಲ್ಲಿಯೂ ಉತ್ತಮ ಅಂಕ ಪಡೆಯಿರಿ ಎಂದು ತಿಳಿಸಿದರು.
 ನಮ್ಮ ತಾಲ್ಲೂಕು ಶೈಕ್ಷಣಿವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ, ಶಾಸಕರು ಶಿಕ್ಷಣದ ಬಗ್ಗೆ ಹೊಂದಿರುವ ಆಸಕ್ತಿಯಿಂದ  ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದಲ್ಲದೆ, ಪ್ರತಿ ಶಾಲೆಯ ಶಿಕ್ಷಕರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ವಿದ್ಯಾಥರ್ಿಗಳು ಹೇಗೆ ಕಲಿಯುತ್ತಿದ್ದಾರೆಂಬ ಬಗ್ಗೆ ಸದಾ ನನ್ನೋಂದಿಗೆ ಚಚರ್ಿಸುತ್ತಿರುತ್ತಾರೆ ಎಂದರು.
 2013ನೇ ಸಾಲಿನಲ್ಲಿ ತಾಲ್ಲೂಕಿನ ಶೈಕ್ಷಣಿಕ ಗುರಿ ಶೇ.85ರಷ್ಟು ಗುರಿ ಇಟ್ಟುಕೊಂಡಿದ್ದೆವು, ಆದರೆ ಶೇ.5ರಷ್ಟು ಕಡಿಮೆಯಾಗಿದೆ ಆದರೂ ನಿರಾಸೆ ಇಲ್ಲ, ಇದು ಋಜು ಮಾರ್ಗದಲ್ಲಿ ಬಂದಿರುವ ಫಲಿತಾಂಶ,  ಶಿಕ್ಷಕರು ವಿದ್ಯಾಥರ್ಿಗಳಿಗೆ ಗುಣಮಟ್ಟ ಶಿಕ್ಷಣ ನೀಡಿದ್ದಾರೆ, ಯಾವುದೇ ರೀತಿಯ ಅವ್ಯವಹಾರಕ್ಕೆ ಒಳಗಾಗದೆ ವಿದ್ಯಾಥರ್ಿಗಳು ಉತ್ತಮ ಫಲಿತಾಂಶ ತಂದಿದ್ದಾರೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.45ರಷ್ಟು ಅಂಕ ಪಡೆದ ವಿದ್ಯಾಥರ್ಿ ಛಲದಿಂದ ಓದಿ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದಿರುವ ಹಾಗೆಯೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದ ವಿದ್ಯಾಥರ್ಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಘಟನೆಯು ನಮಗೆ ಮುಂದಿದೆ,  ವಿದ್ಯಾಥರ್ಿಗಳು ಹೆಚ್ಚಿನ ಸಮಯವನ್ನು ಓದಿನ ಕಡೆಗೆ ಹರಿಸಬೇಕು ಹಾಗೂ ಪೋಷಕರು ಮಕ್ಕಳನ್ನು ಈಗಿನಿಂದಲೇ ಸ್ಮಧರ್ಾತ್ಮಕ ನವೋದಯ ಪರೀಕ್ಷೆಗಳಲ್ಲಿ ಸ್ಪಧರ್ಿಸಲು ಪ್ರೋತ್ಸಾಹಿಸಿದರೆ ಮುಂದೆ ಅವರು ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆಗಳಲ್ಲಿ ಸ್ಪಧರ್ಿಸಿದಾಗ ಭಯವಿಲ್ಲದೆ ಅನುಭವದಿಂದ ಉತ್ತರಿಸಲು ಸಹಕಾರಿಯಾಗುತ್ತದೆ ಎಂದರು.
ತಿಪಟೂರು ಕಾಲೇಜು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ಮಾತನಾಡಿ, ಗುರುವಿಗೆ ತನ್ನ ಶಿಷ್ಯ ತನಗಿಂತ ಮೇಲೇರಿದಾಗಲೇ ತೃಪ್ತಿಯಾಗುವುದು, ಅಂತಹ ತೃಪ್ತಿಯನ್ನು ವಿದ್ಯಾಥರ್ಿಗಳು ಶಿಕ್ಷಕರಿಗೆ ನೀಡಬೇಕು, ಇಲ್ಲಿ ನೆರೆದಿರುವ ಎಲ್ಲಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ನೋಡುತ್ತಿದ್ದೇನೆ, ಪ್ರತಿಭೆ ಅನ್ನುವುದು ಮಾಣಿಕ್ಯವಿದ್ದಂತೆ ಎಲ್ಲರಲ್ಲೂ ಪ್ರತಿಭೆಯಿರುತ್ತದೆ ಆದರೆ ಅದು ಹೊರಗೆ ಬರಲು ಸ್ವಲ್ಪ ಸಮಯವಾಗುತ್ತದೆ. ಐನ್ಸ್ಟೀನ್, ನ್ಯೂಟನ್, ಅಬ್ದುಲ್ಕಲಾಂರಂತಹ ಮಹಾ ಪ್ರತಿಭೆಗಳು ಬೆಳಕಿಗೆ ಬಂದದ್ದೂ ಅದೇ ರೀತಿ ಎಂದರಲ್ಲದೆ ಬಡವರಲ್ಲಿ ಹೆಚ್ಚಿನ ಪ್ರತಿಭೆಗಳು ಇರುತ್ತವೆ, ಆದರೆ ಆ ಪ್ರತಿಭೆಗಳು ಆಥರ್ಿಕ ಕಾರಣದಿಂದ ಹೊರಗೆ ಬರಲು ಸೊರಗುತ್ತಿವೆ ಎಂದರಲ್ಲದೆ ವಿಜ್ಞಾನ ಕಲೆ, ಪರಂಪರೆ ಮತ್ತು ವರ್ತಮಾನಗಳೆಲ್ಲವೂ ಒಟ್ಟಿಗೆ ಸೇರಿದಾಗ ಸಾಧನೆಯೂ, ಸಮಾಜವು ಮುನ್ನೆಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. 
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ದಿ.ಎನ್.ಬಸವಯ್ಯನವರ ಸ್ಮರಣಾರ್ಥ ಬೆಳ್ಳಿ ಪದಕಗಳನ್ನು ಕೊಡಗೆಯಾಗಿ ನೀಡಲಾಯಿತು. 
ಸಮಾರಂಭದಲ್ಲಿ ಕ.ಕೋ.ಆ.ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, , ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ದೈ.ಶಿ. ಪರಿವೀಕ್ಷಕ ಎನ್.ನರಸಿಂಹಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ನಾಗರಾಜು, ಕಾರ್ಯದಶರ್ಿ ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ

ಚಿಕ್ಕನಾಯಕನಹಳ್ಳಿ,ಜು.06 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಪುರಸಭೆ ವ್ಯಾಪ್ತಿಯ ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಕೇಂದ್ರ ವ್ಯಾಪ್ತಿಯ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ಅಜರ್ಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇದೇ 27ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪುವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪಕರ್ಿಸಬಹುದಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.