Saturday, February 13, 2016


ತಾಲ್ಲೂಕಿನಲ್ಲಿ ಸಣ್ಣಪುಟ್ಟ ಗಲಾಟೆಗಳು, ಶಾಂತಿಯುತ ಮತದಾನ 
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಲವೆಡೆ ಬೆಳಗ್ಗೆ ಮಂದಗತಿಯಲ್ಲಿ ಮತದಾನ ನಡೆಯಿತು, 3ಗಂಟೆಯ ನಂತರ ಮತದಾನ ಚುರುಕುಗೊಂಡ 5ಗಂಟೆ ವೇಳೆಗೆ ಜನರು ಮತಕೇಂದ್ರಗಳತ್ತ ಧಾವಿಸಿದರು, ಕುಪ್ಪೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ 5ಗಂಟೆಯಾದರೂ 50ಕ್ಕೂ ಹೆಚ್ಚು ಜನರು ಸಾಲು ಕಂಡುಬಂದಿತು, ಮೂರನಾಲ್ಕು ಕಡೆ ಸಣ್ಣಪುಟ್ಟ ಗಲಾಟೆಗಳು ಬಿಟ್ಟು ಉಳಿದಡೆ ಶಾಂತಯುತ ಮತದಾನ ನಡೆದಿದೆ.
ಸಂಜೆ ಆರು ಗಂಟೆಯಾದರೂ ಇಪ್ಪತ್ತು ಕೇಂದ್ರಗಳಿಗೂ ಹೆಚ್ಚು ಕಡೆ ಮತದಾರರ ಸಂಖ್ಯೆ ಹೆಚ್ಚಿದ್ದರಿಂದ ಅವರಿಗೆ ಟೋಕನ್ ನೀಡಿದ್ದರು. ಆದ್ದರಿಂದ ಆರು ಮೂವತ್ತರವರೆಗೂ ನಿಧರ್ಿಷ್ಠವಾಗಿ ಶೇಕಡ ಮತದಾನ ನಿಖರವಾಗಿ ತಿಳಿಯಲಿಲ್ಲ, ಅಂದಾಜು ಶೇ.ಎಪ್ಪತ್ತರಿಂದ ಎಪ್ಪತೈದು ಆಗಬಹುದೆಂದು ಚುನಾವಣಾ ಶಾಖೆ ತಿಳಿಸಿದೆ. 
ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳು: ತಾಲ್ಲೂಕಿನ ಕಂದಿಕೆರೆಹೋಬಳಿಯ ಮತಗಟ್ಟೆ 3ರಲ್ಲಿ ನಕಲಿ ಮತದಾನ ನಡೆಯುತ್ತಿದೆ ಎಂದು ಜೆ.ಡಿ.ಎಸ್. ಮತ್ತು ಬಿ.ಜೆ.ಪಿ ಪಕ್ಷಗಳ ನಡುವೆ ಘರ್ಷಣೆಯಿಂದಾಗಿ ಮತದಾನ ಕೆಲ ಕಾಲ ಸ್ಥಗಿತಗೊಂಡ ಘಟನೆ ನಡೆಯಿತು. ಕೂಡಲೇ ವಿಷಯ ತಿಳಿದ ಚಿಕ್ಕನಾಯಕನಹಳ್ಳಿ ವೃತ್ತದ ಸಿ.ಪಿ.ಐ. ಎ.ಮಾರಪ್ಪ, ಮೀಸಲು ಪಡೆಯೊಂದಿಗೆ ಕಂದಿಕೆರೆ ಗ್ರಾಮದ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಗುಂಪುಗಳನ್ನು  ಚದುರಿಸಿ ಮತದಾನ ಕಾರ್ಯ ನಡೆಸುವಂತೆ ಮನವೊಲಿಸಿಲಾಯಿತು.
ಹುಳಿಯಾರಿನ ಕೆಂಕೆರೆ 42 ಮತಗಟ್ಟೆ ಕೇಂದ್ರದ ಬಳಿ ಹಾಗೂ ಆಲದಕಟ್ಟೆ ಮತಕೇಂದ್ರದ ಬಳಿ  ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದವರ ಮೇಲೆ ಶಾಂತಿ ಕಾಪಾಡಲು ಲಘು ಲಾಟಿ ಪ್ರಹಾರ ಮಾಡುವ ಮೂಲಕ ಪರಸ್ಥಿತಿಯನ್ನು ಹತೋಟಿಗೆ ತರಲಾಯಿತು. ಹುಳಿಯಾರಿನ ಮತಗಟ್ಟೆ 10ರಲ್ಲಿ ಬಲಗೈಯಿನ ಹೆಬ್ಬಟಿಗೆ ಶಾಹಿ ಹಾಕುವ ಬದಲು ತೊರು ಬೆರಳಿಗೆ ಹಾಕುತ್ತಿದ್ದನ್ನೂ ಕಂಡು ವಿಷಯ ಬಹಿರಂಗಗೊಂಡ ಕೂಡಲೇ ಅಧಿಕಾರಿಗಳು ಸೂಕ್ತ ಮಾರ್ಗದರ್ಶನದಿಂದ ಬಲಗೈ ಹೆಬ್ಬೆರಿಳಿಗೆ ಶಾಹಿ ಹಾಕಲು ಮುಂದಾದರು.  
ಬಿ.ಜೆ.ಪಿ.ಯ ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ ಕೆ.ಎಸ್. ಕಿರಣ್ಕುಮಾರ್ ಕಾಂಗ್ರೆಸ್ ಮಾಜಿ ಶಾಸಕ ಬಿ.ಲಕ್ಕಪ್ಪ ಮುಖಂಡರುಗಳಾದ ಸಾಸಲು ಸತೀಶ್,  ಸೀಮೆಎಣ್ಣೆಕೃಷ್ಣಯ್ಯ ತಾಲ್ಲೂಕಿನ ಅನೇಕ ಮತಕಟ್ಟೆಗಳಿಗೆ ಬಿರುಸಿನ ಭೇಟಿ ನೀಡಿದರೆ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಅಭ್ಯಥರ್ಿಗಳ ಕಾರ್ಯಕರ್ತರು ಜನರನ್ನು ಕರೆತರುವ ಮೂಲಕ ಮತ ಚಲಾವಣೆ ಮಾಡಿಸುತ್ತಿದ್ದರು.
ಆರಂಭದಲ್ಲಿ ಅಲ್ಲಲ್ಲಿ ಕೆಂಪುಪಟ್ಟಿ ಹೊಳಗೆ ಚುನಾವಣಾ ಪ್ರಚಾರ ಮಾಡುವ ಕಾರ್ಯಕರ್ತರೊಂದಿಗೆ ಸಣ್ಣಪುಟ್ಟ ಗೊಂದಲಗಳು ಸೃಷ್ಠಿಯಾದವು ಮತದಾನ ಕೇಂದ್ರಗಳಲ್ಲಿ ಜಿ.ಪಂ.ಮತಯಂತ್ರ ತಾ.ಪಂ.ಮತಯಂತ್ರಗಳ ಬಗ್ಗೆ ಅರಿವಿಲ್ಲದೆ. ಕೆಲವು ವ್ಯತ್ಯಯಗಳು ಸೃಷ್ಠಿಯಾಗಿದ್ದವು ಎಲ್ಲಾ ವಯಸ್ಸಿನ ಮತದಾರರ ಜೊತೆಗೆ ನೂತನವಾಗಿ ಮತದಾನದ ಹಕ್ಕು ಪಡೆದ ಮಾಜಿ ಶಾಸಕರ ಪುತ್ರಿ ಕುಟುಂಬದ ಜೊತೆಗೆ ಬಂದು ತನ್ನ ಹಕ್ಕು ಚಲಾಯಿಸಿ ಸಂಭ್ರಮಿಸಿದರು ಕೆಲವು ಕಡೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 12ಗಂಟೆ ಹೊತ್ತಿಗೆ ಶೇ. 30 ಮೀರಿತ್ತು, ಮದ್ಯಾಹ್ನ 3ಗಂಟೆ ಹೊತ್ತಿಗೆ ಶೇ.50ರಷ್ಟು ಮತದಾನ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. 
ಮತಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಡಾ||ಯತೀಶ್ವರಶಿವಾಚಾರ್ಯಸ್ವಾಮೀಜಿ ಮಾತನಾಡಿ ಮತದಾನ ಪವಿತ್ರವಾದದು ಜಿ.ಪಂ. ತಾ.ಪಂ ಗ್ರಾಮ ಪಂಚಾಯಿತಿ ಚುನಾವಣೆಗಳು ಮೂಲಕ ಜನಪ್ರತಿನಿಧಿಯ ಆಯ್ಕೆ ಗ್ರಾಮದ ಅಬಿವೃದ್ದಿಗೆ ಸಹಕಾರವಾದದ್ದು,   ಸೂಕ್ತ ವ್ಯಕ್ತಿಯ ಆಯ್ಕೆಯಾದರೆ ಗ್ರಾಮಾಭಿವೃದ್ದಿಗೆ ಪೂರಕವಾಗಿರುತ್ತದೆ. 
ಮಾಜಿ ಶಾಸಕ ಜೆ.ಸಿ ಮಾಧುಸ್ವಾಮಿ ಮಾತನಾಡಿ. ಮತ ಕೇಂದ್ರದ ವ್ಯಾಪ್ತಿಯಲ್ಲಿರುವುದರಿಂದ ರಾಜಕೀಯ ಮಾತನಾಡುವುದು ಅಪ್ರಸ್ತುತ ಎನ್ನುತ್ತಲ್ಲೆ,  ಈ ಚುನಾವಣೆಗಳಲ್ಲಿ ಬಿ.ಪಾರಂ ವಿಚಾರವಾಗಿ ಪಕ್ಷದಲ್ಲಿ ಚಚರ್ೆಗಳು ಆಗುವುದು ಸಾಮಾನ್ಯ ಆದರೆ ಅಭ್ಯಥರ್ಿ ಸೂಚಿಸಿದ ನಂತರ ಒಟ್ಟಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ,  ಈಗಾಗಿ ಪಕ್ಷದ ಚಿಹ್ನೆಯ ಮೇಲೆ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಆ ನಂಬಿಕೆಯ ಮೇಲೆ ನಮ್ಮ ಪಕ್ಷ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.
ಗೋಡೆಕೆರೆ ಮಠದ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶೀಕೇಂದ್ರಸ್ವಾಮೀಜಿ ಮಾತನಾಡಿ,  ಮತದಾನ ಚಲಾಯಿಸಿದ್ದು ಖುಷಿ ತಂದಿದೆ ಸಮಾಜ ಸೇವೆ ಮನೋಬಾವದ ಅಭ್ಯಥರ್ಿಯನ್ನು ಗೆಲ್ಲಿಸಿದರೆ ಮಾತ್ರ ದೇಶದ ಪ್ರಗತಿಗೆ ಆದ್ಯತೆ ಸಿಗುತ್ತದೆ, ಹಣಕ್ಕಾಗಿ ಚುನಾವಣೆಗಳು ನಡೆಯಬಾರದು ಪ್ರಮಾಣಿಕ ಅಭ್ಯಥರ್ಿಗಳಿಂದ ಮಾತ್ರ ಭ್ರಷ್ಠಾಚಾರ ನಿಮರ್ೂಲನೆ ಸಾಧ್ಯವಾಗುತ್ತದೆ ಎಂದರು.
 ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ ಹಾಗೂ 19 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
  ತಾಲ್ಲೂಕಿನಲ್ಲಿ ಒಟ್ಟು 40 ಸೂಕ್ಷ್ಮ ಹಾಗೂ 43 ಅತೀ ಸೂಕ್ಷ್ಮ ಮತಗಟೆಗಳಿದ್ದವು, 123 ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಒಟ್ಟು 205 ಮತಗಟ್ಟೆಗಳಿಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ಮತದಾನ ಬೆಳಗ್ಗೆ 7 ರಿಂದಲೇ ಆರಂಭವಾಯಿತು.
ತಾಲ್ಲೂಕಿನ 5 ಜಿಲ್ಲಾ ಪಂಚಾಯಿತಿ 19 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ  77373 ಮಹಿಳಾ ಮತದಾರರರು, 77955 ಪುರುಷ ಮತದಾರರನ್ನು ಹೊಂದಿದ್ದು ಒಟ್ಟು 155328 ಮತದಾರರು ಮತ ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ತಾಲೂಕಿನಲ್ಲಿ 205 ಮತಗಟ್ಟೆಗಳನು ತೆರೆಯಲಾಗಿತ್ತು.