Tuesday, October 19, 2010
ಚಿಕ್ಕನಾಯಕನಹಳ್ಳಿ,ಅ.19: ಉಚಿತ ನರ ಮತ್ತು ಮನೋರೋಗ ಚಿಕಿತ್ಸಾ ತಪಾಸಣಾ ಶಿಬಿರವನ್ನು ಇದೇ24ರ ಭಾನುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಶಿಬಿರವನ್ನು ರೋಟರಿ ಕ್ಲಬ್ ಮತ್ತು ಇನ್ನರ್ವೀಲ್ ಕ್ಲಬ್ ಹಾಗೂ ಸ್ನೇಹ ಮನೋವಿಕಾಸ ಕೇಂದ್ರ ಮತ್ತು ಸಾರ್ವಜನಿಕ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಶಿಬಿರದ ಉದ್ಘಾಟನೆ ನೆರವೇರಿಸಲಿದ್ದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವಾನ್ವಿತರಾಗಿ ಮನೋವೈದ್ಯ ಡಾ.ಲೋಕೇಶ್ಬಾಬು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ವೈದ್ಯಾಧಿಕಾರಿಗಲಾದ್ ಶಿವಕುಮಾರ್, ಪ್ರೇಮ, ಮೈನ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎ.ನಭಿ, ಇನ್ನರ್ವೀಲ್ ಅಧ್ಯಕ್ಚೆ ನಾಗರತ್ನರಾವ್, ಡಾ.ಸಿ.ಎಂ.ಸುರೇಶ್, ಪ್ರಶಾಂತಕುಮಾರಶೆಟ್ಟಿ, ಶ್ರೀನಿವಾಸ್, ಪದ್ಮಾಕ್ಷಿ, ಚೇತನ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ಸೃಜನ ವತಿಯಿಂದ ಸ್ತ್ರೀ ಶಕ್ತಿ ಮಹಿಳಾ ಸಸ್ವಹಾಯ ಸಂಘಗಳಿಗೆ ಮಹಿಳಾ ಸಬಲೀಕರಣ ಅಧ್ಯಯನ ಶಿಬಿರವನ್ನು ಇದೇ 23ರ ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕರಾದ ಎನ್.ಇಂದಿರಮ್ಮ ತಿಳಿಸಿದ್ದಾರೆ.ಶಿಬಿರವನ್ನು ಗೋಡೇಕೆರೆ ಭೂಕ್ಷೇತ್ರದಲ್ಲಿ ಏರ್ಪಡಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಕುಶಲ ವಹಿಸಲಿದ್ದು ಹುಳಿಯಾರು ಎಸ್.ಐ ಪಾರ್ವತಮ್ಮ ಎಸ್.ಯಾದವ್ ಉದ್ಘಾಟನೆ ನೆರವೇರಿಸಲಿದ್ದು ಸೃಜನ ಗ್ರಂಥಾಲಯದ ಉದ್ಘಾಟನೆಯನ್ನು ರಂಗಕಮರ್ಿ ವಾಣಿಸತೀಶ್ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಭಸವಯ್ಯ, ಬಾಲ ವಿಕಾಸ ಯೋಜನಾಧಿಕಾರಿ ಅನೀಸ್ಖೈಸರ್ ಉಪಸ್ಥಿತರಿರುವರು. ಮತ್ತು 23ರಂದು ಮಧ್ಯಾಹ್ನ 12-30ಕ್ಕೆ ಮಹಿಳಾ ಹೋರಾಟದ ಚರಿತ್ರೆಯ ಮಜಲುಗಳು, ಸಸ್ವಹಾಯ ಸಂಘಗಳ ಪರಿಕಲ್ಪನೆ, ವಿಕಾಸ ಮತ್ತು ಆಶಯಗಳು, ಸ್ವಸಾಹಯ ಸಂಘಗಳ ಸಂಘದ ವಾರದ ಸಭೆಯ ಕಾರ್ಯ ವಿಧಾನ ಮತ್ತು 24ರಂದು ಸಸ್ವಹಾಯ ಸಂಘಗಳ ಮೂಲಕ ಸಬಲೀಕರಣದ ಸಾಧ್ಯತೆಗಳು, ಸೃಜನ ಕನಸು-ಮುಂದಿನ ಹೆಜ್ಜೆಗಳು, ಮಹಿಳಾ ಸಸ್ವಹಾಯ ಸಂಘಗಳ ಒಕ್ಕೂಟ(ಆಂದ್ರಪ್ರದೇಶದ ಅನುಭವ)ಎಂಬ ವಿಷಯಗಳನ್ನು ಕಾರ್ಯಗಾರದಲ್ಲಿ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೃಜನಸಂಘದ ಅಧ್ಯಕ್ಷರಾದ ಎಲ್.ಜಯಮ್ಮ ಅಧ್ಯಕ್ಷತೆ ವಹಿಸಲಿದ್ದು ಜಿ.ಪಂ.ಯೋಜನಾ ನಿದರ್ೇಶಕ ಕೆ.ಬಿ.ಆಚಿಜನಪ್ಪ ಸಮಾರೋಪ ಭಾಷಣ ಮಾಡಲಿದ್ದು , ಮುಖ್ಯ ಅತಿಥಿಗಳಾಗಿ ಹುಳಿಯಾರು ಸೃಜನ ಅಧ್ಯಕ್ಷೆ ರಮಾದೇವಿ, ಉಪಾಧ್ಯಕ್ಷೆ ವೀಣಾಶಂಕರ್ ಉಪಸ್ಥಿತರಿರುವರು.
ಚಿಕ್ಕನಾಯಕನಹಳ್ಳಿ,ಅ.19: ತಾಲೂಕು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ೆ 2010-11ನೇ ಸಾಲಿನ ನೂತನ ಕಾರ್ಯಕಾರಿಣಿಯನ್ನು ಜಿಲ್ಲಾ ಸಂಚಾಲಕ್ ಶ್ರೀನಿವಾಸ್ ಘೋಷಸಿದ್ದಾರೆ.ತಾಲೂಕು ಪ್ರಮುಖ್ಆಗಿ ಚೇತನ್ಪ್ರಸಾದ್, ನಗರಕಾರ್ಯದಶರ್ಿಯಾಗಿ ಮನೋಹರ್ ಅಣೇಕಟ್ಟೆ, ಸಹ ಕಾರ್ಯದಶರ್ಿಯಾಗಿ ದಿಲೀಪ್, ವಿದ್ಯಾಥರ್ಿನಿ ಪ್ರಮುಖ್ ಸುಷ್ಮಾ, ಸಹ ವಿದ್ಯಾಥರ್ಿನಿ ಪ್ರಮುಖ್ ಸುಪ್ರಿಯ, ಅಧ್ಯಯನ ವೃತ್ತ ಪ್ರಮುಖ್ ರೂಪೇಶ್, ಖಜಾಂಚಿ ಗುರು, ಕಾಲೇಜು ಪ್ರಮುಖ್ ಶರತ್, ಆನಂದ್, ರವಿ, ಭಾನು, ದರ್ಶನ್, ನವೀನ್ ಸಿದ್ದೇಗೌಡ, ಚರಣ್, ಕೇಂದ್ರ ಪ್ರಮುಖ್ ಮಹೇಶ್, ಮತ್ತು ಕಾರ್ಯಕಾರಿಣಿ ಸದಸ್ಯರಾಗಿ ಮಧು, ರವಿ, ಗುರುರಾಜ್, ಸುಧಾಕರ್ ಮೂತರ್ಿ, ಗಿರೀಶ್, ನಂದೀಶ್, ಶಶಿಕಮಾರ್ ಆಯ್ಕೆಯಾಗಿದ್ದಾರೆ.