Wednesday, May 5, 2010




ಗೋಡೆಕೆರೆ ರಂಭಾಪುರಿ ಮಠದವತಿಯಿಂದ ಜಿಲ್ಲಾ ಮಟ್ಟದ ಭಜನಾ ಮೇಳ
ಚಿಕ್ಕನಾಯಕನಹಳ್ಳಿ,ಮೇ.5: ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಇದೇ 10ರಂದು ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ.
ಶ್ರೀ ಬಸವೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ಈ ಮೇಳವನ್ನು ಏರ್ಪಡಿಸಿದ್ದು, ಸ್ಪಧರ್ೆಯಲ್ಲಿ ನಿಜಗುಣರ ತತ್ವಪದಗಳು, ಸರ್ಪಭೂಷಣ ಶಿವಯೋಗಿಗಳ ಪದಗಳು, ಶಂಕರಾನಂದರ ತತ್ವಪದಗಳು, ಹಾಗೂ ಕೈವಲ್ಯ ನವನೀತ ತತ್ವಪದಗಳಿಗೆ ಆದ್ಯತೆ ಕೊಡಲಾಗುವುದು ಎಂದ ಅವರು, ಸ್ಪಧರ್ೆಯಲ್ಲಿ ವಯೋಮಿತಿ ಅಡ್ಡಿಇಲ್ಲ, ಹೆಣ್ಣು, ಗಂಡು ಮತ್ತು ಎಳೆಯ ಮಕ್ಕಳಿಗೂ ಅವಕಾಶವಿದೆ, ಪ್ರತಿ ತಂಡಕ್ಕೆ ಕಾಲಮಿತಿಯನ್ನು ನೀಡಲಾಗುವುದು. ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದರು.
ಉದ್ಘಾಟನಾ ಸಮಾಂಭವು ಮೇ 10ರ ಬೆಳಿಗ್ಗೆ 10ಕ್ಕೆ ಕೆ.ಬಿ.ಕ್ರಾಸ್ನ ಬಳಿ ಇರುವ ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದಲ್ಲಿ ನಡೆಯುವ ಈ ಕಾರ್ಯಕ್ರಮದ ನೇತೃತ್ವವನ್ನು ಗೋಡೇಕರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶೀಕೇಂದ್ರ ಸ್ವಾಮಿ ವಹಿಸುವರು, ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮಿ, ಗೋಡೆಕೆರೆ ಚರ ಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ವಿರಕ್ತ ಮಠದ ಡಾ.ಶ್ರೀ. ಡಾ. ಅಭಿನವ ಮಲ್ಲಿಕಾರ್ಜನ ದೇಶಿಕೇಂದ್ರ ಸ್ವಾಮಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ ಇದೇ ದಿನ 4ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಹಿಸಲಿದ್ದಾರೆ, ಬಹುಮಾನ ವಿತರಣೆಯನ್ನು ಶ್ರೀಮದ್ ರಂಭಾಪುರಿ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಕೆ.ಜಿ.ವೆಂಕಟರಾಮಯ್ಯ, ಮುಖ್ಯ ಅತಿಥಿಗಳಾಗಿ ನೆಸ್ಟರ್ ಪ್ರಾಜೆಕ್ಟನ ಎಂ.ಡಿ, ಕೆ.ಜಿ.ಶಿವರುದ್ರಯ್ಯ ಭಾಗವಹಿಸುವರು.
ಹೆಚ್ಚಿನ ವಿವರಗಳಿಗೆ ಮಠದ ದೂರವಾಣಿ 9448709755 ಅಥವಾ 9900684694 ಇಲ್ಲಿ ಸಂಪಕರ್ಿಸಬಹುದು.


ಕಾಮರ್ಿಕರ ಬಗ್ಗೆ ದುಡಿದಾಕೆಗೆ ಗ್ರಾ.ಪಂ. ಸದಸ್ಯೆಯಾಗುವ ಆಸೆ
ಚಿಕ್ಕನಾಯಕನಹಳ್ಳಿ,ಮೇ.5: ತಾಲೂಕಿನ ಗೋಡೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೋಡೆಕೆರೆಯ ಬ್ಲಾಕ್ 1ರ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ನೇಪಾಳ, ಹೊಸದಿಲ್ಲಿ ಸೇರಿದಂತೆ ದೇಶ ವಿದೇಶಗಳಲ್ಲಿನ ಕಾಮರ್ಿಕರ ಸ್ಥಿತಿಗತಿಯ ಬಗ್ಗೆ ದುಡಿದ ಸ್ನಾತಕೋತ್ತರ ಪದವೀಧರೆ ಜಿ.ಎಸ್.ಕುಶಲ ಸ್ಪಧರ್ಿಸಿದ್ದಾರೆ.
ಸಮಾಜ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು 5 ವರ್ಷಗಳ ಕಾಲ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 'ಅಭಿವೃದ್ದಿ' ಎಂಬ ಸ್ವಯಂ ಸೇವಾ ಸಂಘಟನೆಯ ಮೂಲಕ ಮಹಿಳಾ ಸಂಘಗಳ ರಚನೆ ಹಾಗೂ ಏಡ್ಸ್ ಸೇರಿದಂತೆ ಆರೋಗ್ಯ ಜಾಗೃತಿ ಶಿಬಿರ, ಬಾಲ ಕಾಮರ್ಿಕ ಪದ್ದತಿಯ ಬಗ್ಗೆ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಶಿಬಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿರುವ ಇವರು, ಅಂತರಾಷ್ಟ್ರೀಯ ಮಟ್ಟದ 'ಯೂನಿಯನ್ ನೆಟ್ವಕರ್್ ಇಂಟರ್ ನ್ಯಾಷನಲ್ ಡೆವೆಲಪ್ ಮೆಂಟ್ ಆರ್ಗನೇಷನ್ ಸೆಂಟರ್' ಎಂಬ ಸಂಸ್ಥೆಯಲ್ಲಿ ಸಂಘಟಕಿಯಾಗಿ ಅನುಭವ ಪಡೆದಿದ್ದಾರೆ.
ಗೋಡೆಕೆರೆಯ ಶಿಕ್ಷಕ ಜಿ.ಸಿದ್ದರಾಮಯ್ಯನ ಪುತ್ರಿಯಾದ ಇವರು ಇದೇ ಗ್ರಾಮದ ವಕೀಲ ಜಿ.ಪಿ.ಮರಿಸ್ವಾಮಿಯವರನ್ನು ಕೈಹಿಡಿದಿದ್ದಾರೆ.

ವಕೀಲರ ಸಂಘದ ಅಧ್ಯಕ್ಷರಾಗಿ ಗೋಪಾಲಕೃಷ್ಣ
ಚಿಕ್ಕನಾಯಕನಹಳ್ಳಿ,ಮೇ.5: ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಗೋಪಾಲಕೃಷ್ಣ, ಕಾರ್ಯದಶರ್ಿಯಾಗಿ ಎಚ್.ಎಸ್.ಜ್ಞಾನಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯ್ಷರಾಗಿ ಎಂ.ಎಸ್.ಶಂಕರಲಿಂಗಪ್ಪ, ಸಹಕಾರ್ಯದಶರ್ಿಯಾಗಿ ದಿಲೀಪ್ ಖಜಾಂಚಿಯಾಗಿ ಎಸ್.ದಿಲೀಪ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.