Saturday, November 8, 2014


ದಾಸ ಸಾಹಿತ್ಯದಲ್ಲಿ 'ಕನಕ'ರದ್ದು ತಳ ಸಮುದಾಯಗಳ ಒಂಟಿಧ್ವನಿಯಾದರೂ ಗಟ್ಟಿ ಧ್ವನಿ: ಸಂಶೋಧಕ ಗಂಗಾಧರ ಕೊಡ್ಲಿಯವರ
ಚಿಕ್ಕನಾಯಕನಹಳ್ಳಿನ. : ಕನಕದಾಸರು ತಳಸಮುದಾಯದ ಒಂಟಿ ಧ್ವನಿಯಾಗಿ ಹೋರಾಟ ಮಾಡಿದರು, ಆಗಿನ ಕಾಲದಲ್ಲಿ ಮೇಲ್ವರ್ಗದವರು ನೀಡಿದ ಕಿರುಕುಳಗಳಿಗೆ ತಮ್ಮ ಕೀರ್ತನೆ, ಮುಂಡಗಿ, ಒಡಪುಗಳ ಮೂಲಕ ಉತ್ತರ ನೀಡುತ್ತಾ ಅವರ ವಿದ್ಯತ್ತಿಗೆ ಸೆಡ್ಡು ಹೊಡೆದರು, ಅವರು ವಿಶ್ವ ಮಾನವಾರಗಬೇಕೆ ಹೊರತು, ಜಾತಿಗೆ ಸೀಮಿತವಾಗಬಾರದು ಎಂದು ಸಂಶೋಧಕ ಗಂಗಾಧರ ಕೊಡ್ಲಿಯವರು ಅಭಿಪ್ರಾಯಪಟ್ಟರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ತಾಲ್ಲೂಕು ಆಡಳಿತ, ಕನಕ ಯುವಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನಕ ದಾಸರು ಕನರ್ಾಟಕದಲ್ಲಷ್ಟೇ ಅಲ್ಲದೆ ಆಂಧ್ರ, ತಮಿಳುನಾಡು, ರಾಜಾಸ್ಥಾನಗಳಲ್ಲೂ ಸಂಚರಿಸಿ ತಮ್ಮ ಸಾಮಾಜಿಕ ಚಿಂತೆನಗಳನ್ನು ಸಾರಿದ್ದಾರೆ ಎಂದರು. ತಮಿಳುನಾಡಿನಲ್ಲಿ ಕನಕರ 175 ಕೀರ್ತನೆಗಳು ದೊರೆತಿದೆ ಎಂದರಲ್ಲದೆ, ಪದ ಪುಂಜಗಳಿಂದ ಕಾವ್ಯವನ್ನಾಗಿಸದೆ, ಸಮಾಜ ಮುಖಿಯಾದ ಜನಪದರ ಅನುಭವಗಳನ್ನು ಕಟ್ಟಿಕೊಡುವ ಕಾವ್ಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಸಮಾಜಿಕ ಚಿಂತನೆಗೆ ಆಧ್ಯಾತ್ಮಿಕ ನೆಲೆಯನ್ನು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಕೀತರ್ಿ ಕನಕದಾಸರಿಗೆ ಸಲ್ಲುತ್ತದೆ ಎಂದರು. 
ಕನಕದಾಸರು ರಾಮಧಾನ್ಯ ಚರಿತೆ, ನಳಚರಿತ್ರೆ, ಹರಿದಾಸ ಚರಿತೆ ರಚಿಸಿ ಪ್ರಸಿದ್ದಿ ಪಡೆದಿದ್ದಾರೆ. ಕನಕದಾಸರು ಸಂತನಾಗಿ ಕವಿಯೋಗಿ ಸಮಾಜಮುಖಿ ಚಿಂತನೆಗಳನ್ನು ಇಟ್ಟುಕೊಂಡ ಅವರು,  ಹುಟ್ಟು 1495-1593ರ ಕಾಲದಲ್ಲಿದ್ದವರು ಎಂದು ಇತಿಹಾಸದ ದಾಖಲೆಗಳಲ್ಲಿವೆ ವ್ಯಾಸರಾಯರ ಮಠದಲ್ಲಿ ದಾಸದೀಕ್ಷೆ ಪಡೆದರು  ಉಡುಪಿಯಲ್ಲಿದ್ದ ವ್ಯಾಸಕೂಟ ಹಾಗೂ ದಾಸಕೂಟವೆಂಬ ಪಂಗಡದಲ್ಲಿ ದಾಸಕೂಟವನ್ನು ಇವರು ಸೇರಿಕೊಂಡರು  ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿ ವಿನಾಶಕ್ಕೆ ಯುವಕರು ಮುಂದಾಗಬೇಕು, ಅಂತಜರ್ಾತಿ ವಿವಾಹಗಳಿದ ಇದು ಸಾಧ್ಯ. ಎಂದರಲ್ಲದೆ, ಸಾರ್ವಜನಿಕ ಜೀವನದಲ್ಲಿರುವವರು ಮೇಲ್ಪಂಕ್ತಿ ಹಾಕಬೇಕು, ನಮ್ಮ ಮನೆಯಲ್ಲಿ ನನಗೆ ಇಂದಿಗೂ ಊಟ ಕೊಡುವವನು ಪರಿಶಿಷ್ಟ ಜಾತಿಗೆ ಸೇರಿದವರು, ಅವನಂತೆ ಇಲ್ಲಿನ ಹೆಂಗಸರಿಗೂ ರೊಟ್ಟಿ ಮಾಡಲು ಬರುವುದಿಲ್ಲ, ನನ್ನ ಆಪ್ತ ಸಹಾಯಕರೆಲ್ಲಾ ತಳ ಸಮುದಾಯಕ್ಕೆ ಸೇರಿದವರೆ ಎಂದು ತಮ್ಮದೇ ಬದುಕನ್ನು ಉದಾಹರಣೆಯಾಗಿ ನೀಡಿದ ಶಾಸಕರು, ಮುಂದಿನ ತಲೆ ಮಾರಿಗೆ ಜಾತಿ ವ್ಯವಸ್ಥೆಯ ತೀವ್ರತೆ ಕಡಿಮೆಯಾಗುತ್ತದೆ ಎಂದು ಭವಿಷ್ಯ ನುಡಿದರು.
ಜಾತಿ ಹಾಗೂ ಹಣದಿಂದ ಯಾರನ್ನೂ ಆಳಲು ಸಾಧ್ಯವಿಲ್ಲ ದಾಸಶ್ರೇಷ್ಠ ಕನಕದಾಸರ ನಡೆನುಡಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದರ ಜೊತೆಯಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ, ಕನಕದಾಸರನ್ನು ಜಾತಿಗೆ ಸೀಮಿತ ಮಾಡದೇ ಎಲ್ಲರಿಗೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕಾಗಿದೆ, ಸಕರ್ಾರ ಎಲ್ಲಾ ಜಾತಿಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ತಳಸಮುದಾಯದಲ್ಲಿ ಹುಟ್ಟಿದ ಕೀರ್ತನಕಾರ ಸಂತ ಕನಕದಾಸರು ಜಾತೀಯ ಬೇರುಗಳನ್ನು ಕಿತ್ತೊಗೆಯಲು ಶ್ರಮಿಸಿದರು ಎಂದರು.
ಪುರಸಭೆಯಿಂದ ಹೋರಾಟ ಕನಕದಾಸರ ಮೆರವಣಿಗೆ ಪಟ್ಟಣದ ನೆಹರು ವೃತ್ತ ಬಿ.ಹೆಚ್.ರಸ್ತೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ  ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಚಿಟ್ಟಿಮೇಳ, ಪಾಳೇಗಾರರ ವೇಷ, ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಭಕ್ತಕನಕದಸರ ವೇಷ ಜನರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿರು. ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿ, ಎನ್.ಜಿ.ಮಂಜುಳಗವಿರಂಗಯ್ಯ,, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಸದಸ್ಯರಾದ ರೇಣುಕಾಗುರುಮೂತರ್ಿ, ಮಹಮದ್ಖಲಂದರ್, ರಂಗಸ್ವಾಮಿ, ಸಿ.ಎಸ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಉಪನ್ಯಾಸಕ ಹೆಚ್.ಕೆ.ರಾಮಣ್ಣ, ಸಾಹಿತಿ ವೇಣುಗೋಪಾಲ್, ವಾದ್ಯಗಾರ ಸಿದ್ದಲಿಂಗಯ್ಯ, ಆರೋಗ್ಯ ಕ್ಷೇತ್ರದ ರಾಧಮ್ಮ, ಸಬ್ಬೇನಹಳ್ಳಿ ಜ್ಯೋತಿಷಿ ಲಕ್ಷ್ಮಣಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಗೋಪಾಲನಹಳ್ಳಿ ರಘು ಮುಂತಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ್ ನಿರೂಪಿಸಿದರು. ಶಿಕ್ಷಕ ರಾಜ್ಕುಮಾರ್ ಪ್ರಾಥರ್ಿಸಿದರು. 



ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ 
ಚಿಕ್ಕನಾಯಕನಹಳ್ಳಿ, : ತೋಟಗಾರಿಕಾ ಇಲಾಖಾ ವತಿಯಿಂದ ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು ಈ ಯೋಜನೆಯಡಿ ಪ್ರತಿ ಹೆಕ್ಟೇರಿಗೆ 20ಸಾವಿರ ರೂಪಾಯಿಗಳ ಸಹಾಯಧನ ನೀಡುವ ಅವಕಾಶವಿದ್ದು ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ ತಿಳಿಸಿದ್ದಾರೆ.
ತೆಂಗಿನ ತೋಟಗಳು 10 ವರ್ಷಕ್ಕೆ ಮೇಲ್ಪಟ್ಟ ಕನಿಷ್ಟ 10 ತೆಂಗಿನ ಮರಗಳು ಒಣಗಿರುವ ರೈತರಿಗೆ ತೆಂಗಿನ ಮರಗಳನ್ನು ತೆರವುಗೊಳಿಸಿ ಹೊಸ ಹೈಬ್ರಿಡ್ ಹಾಗೂ ಎಳೆನೀರು ಸ್ಥಳೀಯ ತಳಿಗಳ ತೆಂಗಿನ ಗಿಡಗಳನ್ನು ಮರುನಾಟಿ ಮಾಡಬೇಕು ಹಾಲಿ ಇರುವ ತೆಂಗಿನ ಮರಗಳಿಗೆ ತೇವಾಂಶ ಕಾಪಾಡಲು ಗಿಡಗಳು ಸುತ್ತಾ ಪಾತಿ ಮಾಡುವುದು, ಪಾತಿಗಳ ಸುತ್ತ ತೆಂಗಿನ ಮಟ್ಟೆ ಅಥವಾ ಕೃಷಿ ತ್ಯಾಜ್ಯಗಳನ್ನು ಹಾಕಿ ತೆಂಗಿನ ಗರಿಗಳನ್ನು ಹೊಂದಿಸುವುದು ಮತ್ತು ತೆಂಗಿನ ಮರಗಳ ಸಾಲುಗಳ ನಡುವೆ ಕಾಲುವೆಗಳನ್ನು ತೆಗೆದು ಮಟ್ಟೆಯನ್ನು ತುಂಬಿ ತೇವಾಂಶ ರಕ್ಷಣೆ ಮಾಡುವುದು. ಹಾಗೂ ತೆಂಗಿನ ತೋಟಗಳಲ್ಲಿ ಆಯಾ ವಾತಾವರಣಕ್ಕೆ ಸೂಕ್ತವಾಗಿರುವ  ಮಿಶ್ರತಳಿ ತೋಟಗಾರಿಕಾ ಬೆಳೆಗಳನ್ನು ಹಾಕುವುದಲ್ಲದೆ, ತೆಂಗಿನ ಮರಗಳಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಮತ್ತು ರಾಸಾಯನಿಕ ಗೊಬ್ಬರ ಹಾಕುವುದು, ರೈತರು ಮೊದಲು ಸ್ವಂತ ಖಚರ್ಿನಲ್ಲಿ ಈ  ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಸಿದ್ದರಿರಬೇಕು ನಂತರ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಕಛೇರಿಗೆ ಸಲ್ಲಿಸಿ, ಇಲಾಖಾ ಅಧಿಕಾರಿಗಳಿಂದ ತಾಂತ್ರಿಕ ಸಲಹೆ ಪಡೆಯಬೇಕು, ನಂತರ ಸ್ಥಳ ಪರಿಶೀಲಿಸಿ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಯ ಮುಖಾಂತರ ವಿತರಿಸಲಾಗುವುದು ಆದ್ದರಿಂದ ತಾಲ್ಲೂಕಿನ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪಕರ್ಿಸಲು ಕೋರಿದ್ದಾರೆ.