Friday, March 22, 2013

ಸವಿತಾ ಸಮಾಜದವರು ರಾಜಕೀಯ ಪ್ರಾತಿನಿಧ್ಯಕ್ಕೆ ಮುಂದಾಗಬೇಕು: ರಾಜ್ಯಾಧ್ಯಕ್ಷ
                         
ಚಿಕ್ಕನಾಯಕನಹಳ್ಳಿ,ಮಾ.22 : ಸವಿತಾ ಸಮಾಜ ಸಾಮಾಜಿಕ, ಶೈಕ್ಷಣಿಕ, ಆಥರ್ಿಕವಾಗಿ ಬೆಳೆದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ದೊರೆಯಲು ಸಾಧ್ಯ ಎಂದು ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಸಂಪತ್ಕುಮಾರ್ ಹೇಳಿದರು.
    ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಸಮುದಾಯ ಭವನದ ಶಂಕುಸ್ಥಾಪನೆ ಸಂಘದ ವಾಷರ್ಿಕೋತ್ಸವ ಸಮಾರಂಭವನ್ನು ಡೋಲು ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸವಿತ ಸಮಾಜದ ಪದಾಧಿಕಾರಿಗಳು ರಾಜ್ಯಾದ್ಯಂತ ಸಂಚರಿಸಿ ಸಮಾಜವನ್ನು ಸಂಘಟಿಸುತ್ತಿದ್ದು,    ರಾಜ್ಯಾದ್ಯಾಂತ 30ಸಾವಿರ ಸದಸ್ಯರನ್ನು ಹೊಂದಿದ್ದು ಇನ್ನೂ ಹೆಚ್ಚು ಸದಸ್ಯರನ್ನು ಮಾಡುವ ಗುರಿ ಹೊಂದಿದೆ. ಸವಿತಾ ಸಮಾಜದ ವತಿಯಿಂದ ಬೆಂಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ್ದು 60ಕ್ಕೂ ಹೆಚ್ಚು ವಿದ್ಯಾಥರ್ಿಗಳಿಗೆ ವಸತಿ ನಿಲಯದಲ್ಲಿ ಊಟ ಮತ್ತು ಸ್ಥಳ ವ್ಯವಸ್ಥೆ ಮಾಡಲಾಗಿದೆ ಎಂದರು.
    ಸವಿತಾ ಸಮಾಜದ ವಿಭಾಗೀಯ ಕಾರ್ಯದಶರ್ಿ ವೇಣುಗೋಪಾಲ್ ಮಾತನಾಡಿ ಸಮಾಜದಲ್ಲಿ ಹಲವು ಅತೃಪ್ತ ಗುಂಪುಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಸಂಘದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ, ಇದರ ಬಗ್ಗೆ ಸಮಾಜ ಬಾಂಧವರು ಎಚ್ಚರ ವಹಿಸಿ, ಸಮಾಜ ನನಗೆ ಏನು ಮಾಡಿದೆ ಎನ್ನುವ ಬದಲು ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ಚಿಂತಿಸಬೇಕು, ಸಕರ್ಾರ ನೀಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆಥರ್ಿಕವಾಗಿ ಬೆಳೆಯುವಂತೆ ಸಲಹೆ ನೀಡಿದರು.
    ರಾಜ್ಯ ಸವಿತಾ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ ಮಾತನಾಡಿ ಸವಿತಾ ಸಮಾಜ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುವುದರಲ್ಲಿ ಮುಂಚೂಣಿಯಲ್ಲಿದೆ, ಸವಿತಾ ಸಮಾಜ ಪ್ರತಿಯೊಬ್ಬರನ್ನು ನಾಗರೀಕರನ್ನಾಗಿ ಮಾಡುತ್ತದೆ ಎಂದರು.
    ಸವಿತ ಸಮಾಜದ ಕಟ್ಟಡ ಸಮಿತಿ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಸವಿತಾ ಸಮಾಜ ಜಿಲ್ಲೆಯಲ್ಲಿ ಅಭಿವೃದ್ದಿ ಹೊಂದುವತ್ತ ಮುನ್ನಡೆದಿದ್ದು ಆ ಕಾರ್ಯ ನಮ್ಮೂರಿನಿಂದ ಮೊದಲ ಹೆಜ್ಜೆ ಇಡುತ್ತಿದೆ ಎಂದರು.
    ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸವಿತಾ ಸಮಾಜ ಮುಂದುವರಿಯಲು ಪ.ಜಾತಿ, ಪ.ಪಂಗಡಕ್ಕೆ ಸೇರಿಸಿದರೆ ಅಭಿವೃದ್ದಿಯಾಗುತ್ತದೆ, ಅಲ್ಲದೆ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಸಲಹೆ ನೀಡಿದ ಅವರು ಅದಕ್ಕಾಗಿ ಹಿಂದುಳಿದ ಜಾಗೃತಿ ವೇದಿಕೆ ಮುಂದಿರುತ್ತದೆ ಎಂದರು.
    ತುಮಕೂರು ಪ್ರಗತಿಪರ ಚಿಂತಕ ಜಿ.ಎಂ.ಶ್ರೀನಿವಾಸಯ್ಯ, ಹಿರಿಯೂರು ಪಿ.ಎಸೈ ಭಾಸ್ಕರ್ರವರನ್ನು ಸನ್ಮಾನಿಸಲಾಯಿತು.
    ಈ ಸಂದರ್ಭದಲ್ಲಿ ವೃತ್ತಿ ಬಾಂಧವರಿಗೆ ಬ್ಯೂಟಿಷಿಯನ್ ತರಬೇತಿಯನ್ನು ಬೆಂಗಳೂರಿನ ಶೇಖರ್, ನಾಗರಾಜ್, ಶಿವಕುಮಾರ್ರವರಿಂದ ನೂತನ ಶೈಲಿಯ ಹೇರ್ ಕಟಿಂಗ್, ಮಸಾಜ್, ಬ್ಲೀಚಿಂಗ್ ಮತ್ತು ಫ್ಲೇಷಿಯಲ್ ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸವಿತ ಸಮಾಜದ ಗೌರವಾಧ್ಯಕ್ಷ ನರಸಿಂಹಯ್ಯ, ಬೆಂಗಳೂರು ಸವಿತ ಸಮಾಜದ ಅಧ್ಯಕ್ಷ ಯು.ಕೃಷ್ಣಮೂತರ್ಿ, ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಜಿ.ನರಸಿಂಹಯ್ಯ, ಖಜಾಂಚಿ ಟಿ.ಎನ್.ನಾಗರಾಜು, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರುಗಳಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಅಶೋಕ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮತ್ತಿತರರು ಹಾಜರಿದ್ದರು.
    ಸಮಾರಂಭದಲ್ಲಿ ಸುಪ್ರೀಂ ಸುಬ್ರಹ್ಮಣ್ಯ ಸ್ವಾಗತಿಸಿದರೆ, ನಾರಾಯಣ್ ನಿರೂಪಿಸಿ, ವಂದಿಸಿದರು.
                                                          ಇಂದಿನಿಂದ ರೇಣುಕ ಜಯಂತಿ
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ರೇವಣಸಿದ್ದೇಶ್ವರ ಜಯಂತಿ ಮಹೋತ್ಸವವನ್ನು ಪಟ್ಟಣದ ರೇವಣಸಿದ್ದೇಶ್ವರಸ್ವಾಮಿ ಮಠದಲ್ಲಿ ಇದೇ 23ರಶನಿವಾರದಿಂದ 25ರ ಸೋಮವಾರದವರೆಗೆ  ಏರ್ಪಡಿಸಲಾಗಿದೆ.
    23ರಂದು ಸಂಜೆ 6ಕ್ಕೆ ಶ್ರೀರೇವಣಸಿದ್ದೇಶ್ವರ ಸಾಂಗತ್ಯ ಪುರಾಣ ಕಥೆ ಕಾರ್ಯಕ್ರಮ, 24ರಂದು ರಾತ್ರಿ 8.30ಕ್ಕೆ ಶ್ರೀ ಗುರುಶಾಂತ ವಿಜಯ ಅಥವಾ ಟಗರು ಪವಾಡ ಎಂಬ ನಾಟಕವನ್ನು ಶುಕ್ರವಾರದ ಬಾಗಿಲು ಬಳಿ ನಡೆಯಲಿದೆ. 25ರಂದು ಸಂಜೆ 6ಕ್ಕೆ ಗುರುರೇವಣಸಿದ್ದೇಶ್ವರಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಚಿಕ್ಕನಾಯಕನಹಳ್ಳಿ,ಮಾ.22 : ಶ್ರೀ ಗುರು ಪರಪ್ಪಸ್ವಾಮಿಯವರ 22ನೇ ವರ್ಷದ ವಾಷರ್ಿಕೋತ್ಸವ ಸಮಾರಂಭವನ್ನು ಇದೇ 26ರ ಮಂಗಳವಾರ ಏರ್ಪಡಿಸಲಾಗಿದೆ.
    22ರಂದು ರಾತ್ರಿ 8ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.    27ರ ಬುಧವಾರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.