Friday, April 4, 2014


ಅಧಿಕಾರಿಗಳ ನಿರ್ಲಕ್ಷ್ಯ: ಹಸಿವು, ನೀರಡಿಕೆಯಿಂದ ಪ್ರಾಣ ಬಿಟ್ಟ ಚಿರತೆ.
ಚಿಕ್ಕನಾಯಕನಹಳ್ಳಿ,ಏ.04  : ಅರಣ್ಯ ಇಲಾಖಾ ಅಧಿಕಾರಿಗಳ ನಿರ್ಲಕ್ಷತನದಿಂದ 4ವರ್ಷದ ಚಿರತೆ ಆಹಾರ ಮತ್ತು ಕುಡಿಯಲು ನೀರಿಲ್ಲದೆ ಒತ್ತಡದಿಂದ ಹೃದಯಾಘಾತವಾಗಿ  ಸಾವನಪ್ಪಿದೆ.  
ಬುಧವಾರ ರಾತ್ರಿ ಹೊನ್ನೆಬಾಗಿ ಗೊಲ್ಲರಹಳ್ಳಿ ಬಳಿ ತೋಟಕ್ಕೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ಬಂದಿದ್ದ ಚಿರತೆ ತೋಟದಲ್ಲಿ ಹಂದಿ ಹಿಡಿಯಲು ಹಾಕಿದ್ದ ತಂತಿ ಉರುಳಿಗೆ ಸಿಲುಕಿ, ಉರುಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡಿ ಹಸಿವು ಬಾಯಾರಿಕೆಯಿಂದ ಚಿರತೆ ಸಾವನ್ನಪ್ಪಿದೆ.
ಮರಣೋತ್ತರ ಪರೀಕ್ಷೆಯ ನಂತರ ಈ ವಿಷಯವನ್ನು  ವೈದ್ಯರು ದೃಢೀಕರಣ ಪಡಿಸಿದ್ದಾರೆ. ಶವಪರೀಕ್ಷೆಯ ನಂತರ ಚಿರತೆಯನ್ನು ಅರಣ್ಯ ಇಲಾಖೆ ಕಛೇರಿಯ ಹಿಂಭಾಗದಲ್ಲಿ ದಹನ ಮಾಡಲಾಯಿತು. 
ರೈತ ಪಳನಿಸ್ವಾಮಿಯ ಜಮೀನನಲ್ಲಿ ಉರುಳಿಗೆ ಸಿಲುಕಿಕೊಂಡ ಚಿರತೆ ಸಾವನ್ನಪ್ಪಿದ ಹಿನ್ನಲೆಯಲ್ಲಿ ರೈತನ ಮೇಲೆ ಅಧಿಕಾರಿಗಳು ಕೇಸು ದಾಖಲಿಸಲು ವ್ಯವಸ್ಥಿತ ಸಂಚು ನಡೆಸಲಾಗುತ್ತಿದೆ ಎಂಬ ಮಾಹಿತಿ ಗ್ರಾಮಸ್ಥರಲ್ಲಿ ವ್ಯಕ್ತವಾಗುತ್ತಿದೆ.. 
ಗುರುವಾರ ಬೆಳಿಗ್ಗೆ  ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರೂ, ಅವರು ಶೀಘ್ರ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಉರುಳಿನಿಂದ ಬಿಡಿಸಿ ಶುಶ್ರೂಷೆ ಮಾಡದೆ ಚಿರತೆಯ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾಗಿದೆ. 
 ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜನರನ್ನು ನಿಯಂತ್ರಿಸಿದ್ದರು ಆದರೆ ಗುರುವಾರ ರಾತ್ರಿ 7.30ರ ಸುಮಾರಿನಲ್ಲಿ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ. 
ಚಿ.ನಾ.ಹಳ್ಳಿ ವಲಯ ಅರಣ್ಯ ಅಧಿಕಾರಿ ಮಾರುತಿ ಮಾತನಾಡಿ,  ಚಿರತೆಯನ್ನು ಬೋನಿಗೆ ಹಾಕಲು ಬೆಂಗಳೂರಿನ ಬೆನ್ನೇರುಘಟ್ಟದ ವನ್ಯ ಪ್ರಾಣಿ ತಜ್ಞರಿಗೆ ದೂರವಣಿ ಮುಖಾಂತರ ಮಾಹಿತಿ ನೀಡಲಾಗಿತ್ತು ಆದರೆ ಅವರು ಸ್ಥಳಕ್ಕೆ ಆಗಮಿಸುವುದರೊಳಗೆ ಚಿರತೆ ಹೃದಯಾಘಾತದಿಂದ ಸಾವನ್ನಪ್ಪಿದೆ, ಬನ್ನೇರುಘಟ್ಟದ ಚೇತನ್, ತುಮಕೂರಿನಿಂದ ಎಸಿಎಫ್ ಅಮರ್ನಾಥ್, ತಿಪಟೂರಿನ ಇ,ಎಫ್ ನಾಗೇಂದ್ರರಾವ್ ಹಾಗೂ ಸಿಬ್ಬಂದಿ ಆಗಮಿಸಿದರೂ ಏನೂ ಪ್ರಯೋಜನವಾಗಲಿಲ್ಲ. 
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಗುಡ್ಡಗಾಡು ಪ್ರದೇಶದ ಜನರು ಪ್ರಾಣಿಗಳನ್ನು ಬೇಟೆಯಾಡಲು ತಂತಿ ಮುಖಾಂತರ ಉರುಳನ್ನು ಹಾಕಿ ಮೊಲ, ನವಿಲು, ಹಂದಿಗಳಂತಹ ಪ್ರಾಣಿಗಳನ್ನು ಹಿಡಿಯಲು ಹಾಕುವ ಉರುಳಿಗೆ ಚಿರತೆ, ಹುಲಿ ಹಾಗೂ ಇತರೆ ಪ್ರಾಣಿಗಳು ಸಿಲುಕಿ ಕಾಡು ಪ್ರಾಣಿಗಳು ನಾಶವಾಗುತ್ತಿದೆ, ಇದರ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಮಾಹಿತಿ ಕೊಡುವ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕೆಂದರು.


 ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ
ಚಿಕ್ಕನಾಯಕನಹಳ್ಳಿ,ಏ.04 : ವಿಶ್ವಕರ್ಮ ಜನಾಂಗದ ಅಭಿವೃದ್ದಿಗಾಗಿ ಬೆಂಗಳೂರಿನಲ್ಲಿ ಎರಡು ಎಕರೆ ಜಮೀನನ್ನು ತೆಗೆದುಕೊಂಡಿದ್ದು ಇದರಲ್ಲಿ ವಿಶ್ವಕರ್ಮ ಜನಾಂಗದ ಮಕ್ಕಳಿಗೆ ವಿದ್ಯಾಥರ್ಿನಿಲಯ ಸ್ಥಾಪಿಸಿ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿಶ್ವಕರ್ಮ ರಾಜ್ಯಾಧ್ಯಕ್ಷ ಬಿ.ಉಮೇಶ್ ತಿಳಿಸಿದರು.
ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ವಿಶ್ವಕರ್ಮ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಾಧ್ಯಕ್ಷನಾಗಿ 4ವರ್ಷದ ಅವಧಿಯಲ್ಲಿ ಜನಾಂಗದ ಅಭಿವೃದ್ದಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗಿದೆ ರಾಜ್ಯಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ನನ್ನನ್ನು ಬೆಳೆಸಿದ ಜನಾಂಗದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ತುಮಕೂರು ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿ ಎ.ಕೃಷ್ಣಪ್ಪರವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ಸಣ್ಣ ಪುಟ್ಟ ಜನಾಂಗಗಳು ರಾಜಕೀಯ ಪ್ರಾತಿನಿಧ್ಯ ಪಡೆದು ಮುಂದೆ ಬರುವಂತೆ ಸಲಹೆ ನೀಡಿದ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ವಿಶ್ವಕರ್ಮ ಜನಾಂಗದ ಅಭಿವೃದ್ದಿಗೆ ಹೆಚ್ಚಿನದಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಜನಾಂಗದ ಗೋಪಾಲಾಚಾರ್, ದೇವರಾಜು, ಸಿ.ಯತಿರಾಜು ಉಪಸ್ಥಿತರಿದ್ದರು