Tuesday, November 8, 2011


ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಸಿ.ಬಿ.ಐ ಗೆ ವಹಿಸಲು ಒತ್ತಾಯ
ಚಿಕ್ಕನಾಯಕನಹಳ್ಳಿ,ನ.08 : ಸುಪ್ರೀಂ ಕೋಟರ್್ ಸ್ವಯಂ ದೂರು ದಾಖಲಿಸಿಕೊಂಡು ತುಮಕೂರು ಜಿಲ್ಲೆಯಲ್ಲಿ ನಡೆದಿರುವಂತಹ ಅಕ್ರಮ ಗಣಿಗಾರಿಕೆಯನ್ನು ಸಿ.ಬಿ.ಐಗೆ ವಹಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ಇದೇ 19ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಕನರ್ಾಟಕ ದಲಿತ ಪರಿಸರ ಮತ್ತು ಮೀಸಲಾತಿ ರಕ್ಷಣಾ ಸಮಿತಿ ಧರಣಿ ನಡೆಸಲಿದೆ ಎಂದು ಸಮಿತಿ ಅಧ್ಯಕ್ಷ ನಾರಾಯಣ್ ತಿಳಿಸಿದ್ದಾರೆ. 
ಸಿ.ಇ.ಸಿ  ತಂಡ ಈವರೆವಿಗೆ ತನಿಖೆ ನಡೆಸಿದ್ದರೂ ವಿವಿಧ ಅರಣ್ಯ ಪ್ರದೇಶಗಳಲ್ಲಿ ನಡೆದಿರುವ ಗಣಿ ಅದಿರು ಲೂಟಿಯನ್ನು ಸಾಕಷ್ಟು ಪತ್ತೆ ಹಚ್ಚಿಲ್ಲ. ಕಂಪನಿಗಳ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದ ಅದಿರು ಲೂಟಿ ನಡೆದಿದೆ, ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಅದಿರನ್ನು ಲೂಟಿ ಮಾಡಿ ಅದರ ಮೇಲೆ ತ್ಯಾಜ್ಯ ವಸ್ತುಗಳನ್ನು ಹಾಗೂ ಹೊರ ಮಣ್ಣನ್ನು, ಹುಲ್ಲು ಹೆಪ್ಪುಗಳಿಂದ ಹೊದಿಕೆ ಮಾಡಿದೆ, ಸಿ.ಇ.ಸಿ ತಂಡಗಳು ಇದನ್ನು ವ್ಯಾಪಕವಾಗಿ ಪತ್ತೆ ಹಚ್ಚಿರುವುದಿಲ್ಲ, ಹಾಗೂ ಗಣಿ ಕಂಪನಿಗಳು, ಮಾಲೀಕರು, ಮ್ಯಾನೇಜರ್ಗಳಲ್ಲದೆ ಗಣಿ ಮಾಫಿಯಾದ ವ್ಯಕ್ತಿಗಳು, ಏಜೆಂಟರುಗಳು ವಿವಿಧ ಗುತ್ತಿಗೆದಾರರು, ದಲ್ಲಾಳಿಗಳು, ವಹವಾಟುದಾರರು, ಮೇಸ್ತ್ರಿಗಳು,  ಹಲವರು ನೇರವಾಗಿ ಗಣಿ ಮಾಫಿಯಾದಲ್ಲಿ ಭಾಗಿಯಾಗಿದ್ದು ಇಲ್ಲಿನ ಅಕ್ರಮ  ಗಣಿಗಾರಿಕೆಯನ್ನು ಸಿ.ಬಿ.ಐಗೆ ವಹಿಸಿದರೆ ಪರಿಣಾಮಕಾರಿಯಾಗಿ ತನಿಖೆಯಾಗುತ್ತದಲ್ಲದೆ ಅಕ್ರಮ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು ಸಕರ್ಾರದ ಬೊಕ್ಕಸಕ್ಕೆ ಸಷ್ಟವಾಗಿರುವ ಹಣ ಪೂರೈಕೆಯಾಗುತ್ತದೆಯಾದ್ದರಿಂದ ಜಿಲ್ಲೆಯ ಎಲ್ಲಾ ಗಣಿಗಾರಿಕೆ ಅಕ್ರಮಗಳ ತನಿಖೆಯನ್ನು ಸಿ.ಬಿ.ಐಗೆ ವಹಿಸಿ ಗಣಿ ಮಾಫಿಯಾದಲ್ಲಿ ಭಾಗಿಯಾದ ವ್ಯಕ್ತಿ ಹಾಗೂ ಸಕರ್ಾರದ ಇಲಾಖಾಧಿಕಾರಿಗಳನ್ನು ಶಿಕ್ಷೆಗೊಳಪಡಿಸಿಬೇಕೆಂಬುದರ ಬಗ್ಗೆ ಧರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಮಿತಿಯ ಪ್ರಧಾನ ಕಾರ್ಯದಶರ್ಿ ಕೆ.ಎನ್.ರಂಗಸ್ವಾಮಿ, ಕಾರ್ಯದಶರ್ಿ ಪಿ.ಕೃಷ್ಣಮೂತರ್ಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.