Friday, September 9, 2011

ಶಾಲೆಗೊಂದು ವನ ಕಾರ್ಯಕ್ರಮದ ಅನುಷ್ಠಾನ ತೃಪ್ತಿದಾಯಕವಾಗಿಲ್ಲಚಿಕ್ಕನಾಯಕನಹಳ್ಳಿ,ಸೆ.09 : ಸಕರ್ಾರ ಜಾರಿಗೆ ತಂದಿರುವ ಶಾಲೆಗೊಂದು ವನ ಕಾರ್ಯಕ್ರಮ ಯಶಸ್ವಿಯಾಗದ ಬಗ್ಗೆ ಆಕ್ಷೇಪಿಸಿದ ಅವರು ಶಾಲೆಗಳಲ್ಲಿ ಸಣ್ಣದೊಂದು ಉದ್ಯಾನವನದಂತೆ ಸಸಿಗಳನ್ನು ನೆಟ್ಟು ಯಶಸ್ವಿಗೊಳಿಸಲು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಸೂಚಿಸಿದರು. ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾ.ಪಂ.ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಪಶು ಇಲಾಖೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಪ್ರತಿಬಾರಿ ಆಕ್ಷೇಪಣೆಗಳು ಕೇಳಿಬರುತ್ತಿದ್ದು ಇದರ ಬಗ್ಗೆ ಗಮನ ಹರಿಸಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಸಕರ್ಾರಿ ಕಾರ್ಯಕ್ರಮಗಳು, ಉದ್ಘಾಟನೆಗೊಳ್ಳುವ ಹಲವು ಸಮಾರಂಭಗಳನ್ನು ಏರ್ಪಡಿಸುವ ಮುನ್ನ ತಹಶೀಲ್ದಾರ್, ತಾ.ಪಂ.ಅಧ್ಯಕ್ಷರು, ಆ ಕ್ಷೇತ್ರಕ್ಕೆ ಸಂಭಂದಪಟ್ಟ ಜನಪ್ರತಿನಿಧಿಗಳಿಗೆ ಖಡ್ಡಾಯವಾಗಿ ತಿಳಿಸಿ ಆನಂತರ ಕಾರ್ಯಕ್ರಮ ಏರ್ಪಡಿಸಬೇಕೆಂದು ತಾಲ್ಲೂಕು ಇಲಾಖಾಧಿಕಾರಿಗಳಿಗೆ ಇ.ಓ.ಎನ್.ಎಂ.ದಯಾನಂದ್ ಸೂಚಿಸಿದರು.ತಾಲ್ಲೂಕಿನ ಇಲಾಖಾಧಿಕಾರಿಗಳು ತಮಗೆ ಬೇಕಾದಾಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳಿಗೆ, ತಮ್ಮ ಮೇಲಾಧಿಕಾರಿಗೆ ಕಾರ್ಯಕ್ರಮಗಳ ಬಗ್ಗೆ ತಿಳಿಸದೆ ಇಲಾಖಾ ಸಮಾರಂಭಗಳನ್ನು ಏರ್ಪಡಿಸಿ ಸಮಾರಂಭ ಕೆಲವು ದಿನಗಳಿವೆ ಎಂದಾಗ ತಿಳಿಸಲು ಬರುತ್ತಾರೆ ಎಂದು ಆರೋಪಿಸಿದ ಅವರು, ಈ ರೀತಿಯ ಕಾರ್ಯಗಳು ನಡೆಯಬೇಕಾದರೆ ಮುಂಚಿತವಾಗಿ ತಹಶೀಲ್ದಾರ್ರವರಿಂದ ಮೊದಲು ಅನುಮತಿ ಪಡೆದು ನಂತರ ಶಾಸಕರಿಂದ ಸಮಾರಂಭಕ್ಕೆ ದಿನಾಂಕ ನಿಗದಿಪಡಿಸಿ, ಸಮಾರಂಭ ನಡೆಯುವ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು ಆನಂತರ ಸಮಾರಂಭವನ್ನು ಏರ್ಪಡಿಸಿ ಶಿಷ್ಠಾಚಾರ ಪಾಲಿಸಬೇಕು ಎಂದು ತಿಳಿಸಿದರು.ತೋಟಗಾರಿಕೆಯ ವ್ಯಾಪ್ತಿಯಲ್ಲಿ ಕೆಂಪುಮೂತಿ ಹುಳುವಿನಿಂದ ತೆಂಗಿನ ಬೆಳೆಗೆ ಹಾನಿಯುಂಟಾಗುತ್ತಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹಳ್ಳಿಕೆರೆಪುರ, ಸೊಂಡೇನಹಳ್ಳಿ ಗ್ರಾಮಗಳಲ್ಲಿ 25ಎಕರೆಯಷ್ಟು ಬೆಳೆಯು ಹುಳುವಿನಿಂದ ನಾಶವಾಗಿದ್ದು ಇದರ ಬಗ್ಗೆ ಜನಜಾಗೃತಿಯನ್ನು ಹಮ್ಮಿಕೊಳ್ಳುವುದಾಗಿ ಹಾಗೂ ಕೆಂಪುಮೂತಿ ಹುಳುವಿನಿಂದ ಬೆಳೆಯಲ್ಲಿ ಏರುಪೇರು ಉಂಟಾದರೆ ಹೋಬಳಿ ಮಟ್ಟದಲ್ಲಿ ಸಹಾಯಕ ಅಧಿಕಾರಿ, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಅಧಿಕಾರಿಗಳಿಗೆ ತಿಳಿಸಿದರೆ ಇದರ ಬಗ್ಗೆ ಪರಿಶೀಲನೆ ನಡೆಸುವುದಾಗಿ ತೋಟಗಾರಿಕಾ ಇಲಾಖಾಧಿಕಾರಿ ತಿಳಿಸಿದರು.ಸಮಾರಂಭದಲ್ಲಿ ತಾ.ಪಂ.ಅದ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಗಂಗಾಧರ್ ಹಾಗೂ ತಾಲ್ಲೂಕು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.