Tuesday, July 5, 2016


ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.05 : ಗ್ರಾಮ ಭಾರತದಲ್ಲಿ ಜಾತಿ ಜಾಡ್ಯ ಇನ್ನೂ ಜೀವಂತವಾಗಿದೆ. ಹಿರಿಯರು ಮಕ್ಕಳಲ್ಲಿ ಮಕ್ಕಳಲ್ಲಿ ಜಾತಿ ತಾರತಮ್ಯದ ಭಾವನೆಗಳು ಬೆಳೆಯುಲು ಕಾರಣರಾಗುತ್ತಿದ್ದಾರೆ ಎಂದು ಪ್ರೊ.ಬಿ.ಕೃಷ್ಣಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ದೊರೈರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಮಂಗಳವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 78ನೇ ಜನ್ಮದಿನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಜೊತೆಯಲ್ಲಿ ಯುವಕರು, ಶಿಕ್ಷಕರು, ಪ್ರಜ್ಞಾವಂತರು ಒಟ್ಟಾಗಿ ಜಾತಿ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಿಸಿದರು ಎಂದರು.
ದಲಿತ ಸಂಘರ್ಷ ಸಮಿತಿ ಒಂದು ಜಾತಿಗೆ ಸೀಮಿತವಾದುದಲ್ಲ. ಬಡವರ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲು ಇರುವ ವೇದಿಕೆ ಎಂದರು.
ವಿದ್ಯಾಥರ್ಿಗಳು ಪಠ್ಯ ಪುಸ್ತಕದ ಜೊತೆ ವಿಜ್ಞಾನ, ಸಾಹಿತ್ಯ, ಓದಿಕೊಂಡು ಜಾತೀಯತೆ ಹಾಗೂ ಅಸ್ಪೃಶ್ಯತೆ ವಿರುದ್ದ ಹೋರಾಡಲು ಮುಂದಾಗಬೇಕು.ಮಾನವೀಯ ಸಮಾಜ ಕಟ್ಟುವ ಕೆಲಸ ವಿದ್ಯಾಥರ್ಿಗಳಿಂದ ಆಗಬೇಕು ಎಂದರು.
ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ನವರು ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದವರಲ್ಲೊಬ್ಬರು ಅವರ ಆಶಾಭಾವನೆಯನ್ನು ವಿದ್ಯಾಥರ್ಿಗಳು ಪ್ರೊ.ಬಿ.ಕೃಷ್ಣಪ್ಪ ಕೆಚ್ಚು ಹಾಗೂ ಸೂಕ್ಷ್ಮ ಪ್ರಜೆಯನ್ನು ಮೈಗೂಡಿಸಿಕೊಳ್ಳುವುದು ಅವಶ್ಯಕ ಎಂದರು.
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪನವರ ಸಂಘಟನಾ ಚಾತುರ್ಯ ಬಡವರ, ದೌರ್ಜನ್ಯಕ್ಕೊಳಗಾದವರ ಪರವಾಗಿ ಕೆಲಸ ಮಾಡಲು ಹಲವರಿಗೆ ಸ್ಪೂತರ್ಿಯಾಯಿತು. ದಲಿತ ಸಂಘರ್ಷ ಸಮಿತಿಗೆ ಕೃಷ್ಣಪ್ಪನವರ ನಂತರ ಸರಿಯಾದ ನಾಯಕತ್ವ ಇಲ್ಲವಾಗಿದೆ ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ,ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರು, ಅಂಬೇಡ್ಕರ್ರವರು ತಂದಂತಹ ಕಾಯಿದೆಗಳನ್ನು ಸಕರ್ಾರ ಯತಾವತ್ತಾಗಿ ಜಾರಿಗೆ ತರಲು ಶ್ರಮಿಸಿದರು.ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟ ಜಗಜೀವನ್ರಾಂ ಅವರಿಗೆ ಸ್ಪೂತರ್ಿಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನೋತ್ಸವದ ಅಂಗವಾಗಿ 78 ಬಡ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ  ವಿತರಿಸಲಾಯಿತು. ಕಂಟಲಗೆರೆ ಗುರುಪ್ರಸಾದ್ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ, ಅಂಬೇಡ್ಕರ್ ಪ್ರೌಢಶಾಲೆಯ ಕಾರ್ಯದಶರ್ಿ ಗೋ.ನಿ.ವಸಂತ್ಕುಮಾರ್, ದಸಂಸ ಸಂಚಾಲಕ ಸಿ.ಎಸ್.ಲಿಂಗದೇವರು, ಆರ್.ಗೋವಿಂದಯ್ಯ, ಬೇವಿನಹಳ್ಳಿ ಚನ್ನಬಸವಯ್ಯ, ಬಿ.ಇ.ಓ ಕೃಷ್ಣಮೂತರ್ಿ, ತಾ.ಪಂ.ಇ.ಓ ಕೃಷ್ಣಮೂತರ್ಿ, ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


 ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವ
ಚಿಕ್ಕನಾಯಕನಹಳ್ಳಿ,ಜು.05  : ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪಿರುವ ಘಟನೆ ತಾಲ್ಲೂಕಿನ  ಶೆಟ್ಟಿಕೆರೆ ಹೋಬಳಿ ಚುಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
 ಮಧುಸೂದನ್ (49) ಮೃತ ದುದರ್ೈವಿ. ಮಂಗಳವಾರ ಬೆಳಗ್ಗೆ 7.45ರ ಸಮಯದಲ್ಲಿ ಕೆ.ಎ35 ಟಿ 5833 ಟ್ರ್ಯಾಕ್ಟರ್ನ ಮುಂಭಾಗದ ಚಕ್ರ ಪಂಚರ್ ಆಗಿದ್ದ ಪರಿಣಾಮ ಪಂಚರ್ ಹಾಕಿಸಲು ಚಿಕ್ಕನಾಯಕನಹಳ್ಳಿಗೆ ತರುವಾಗ ವಾಹನದ ಮುಂಭಾಗದ ಚಕ್ರ ನಿಯಂತ್ರಣಕ್ಕೆ ಇರಲಿ ಎಂದು ಘಟ್ಟ ಕಟ್ಟಿಕೊಂಡು ಬರುವಾಗ ಟ್ರ್ಯಾಕ್ಟರ್ನ ಇಂಜನ್ ಇರುವ ಮುಂಬದಿಯ ಚಕ್ರದ ಅಕ್ಸಲ್  ತುಂಡಾಗಿದೆ. ಈ ಸಂದರ್ಭದಲ್ಲಿ ಕೆರೆಯ ಏರಿಯ ಮೇಲೆ ಬರುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣವಿಲ್ಲದೆ ಆಯತಪ್ಪಿ ಕೆರೆಯ ಕೋಡಿ ಭಾಗದ ಅಂಗಳಕ್ಕೆ ಮುಗುಚಿ ಮದುಸೂದನ್ ಮೇಲೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿ.ನಾ.ಹಳ್ಳಿ ಠಾಣೆಯ ಪಿ.ಎಸ್.ಐ ವಿಜಯ್ ಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯಚಿಕ್ಕನಾಯಕನಹಳ್ಳಿ,ಜು.05 : ತಾಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳೂ ಹದಗೆಟ್ಟಿದ್ದು ಸ್ವಲ್ಪ ಮಳೆಬಿದ್ದರೂ ಸಂಚಾರ ಅಸಾಧ್ಯ ಎನ್ನುವಂತಾಗಿದೆ.
    1000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಕಛೇರಿ, ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿ ಹಾಗೂ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಕಾರ್ಯನಿರ್ವಹಿಸುತ್ತಿವೆ . ಮುಖ್ಯ ರಸ್ತೆಯಿಂದ 7 ಕಿಮೀ ದೂರದಲ್ಲಿ ಇರುವ ಗ್ರಾಮದಲ್ಲಿ ಇಷ್ಟೆಲ್ಲಾ ಸವಲತ್ತುಗಳು ಇದ್ದರೂ ಸಂಪರ್ಕ ರಸ್ತೆ ಸರಿಯಿಲ್ಲದೆ ಗ್ರಾಮಸ್ಥರು, ವಿದ್ಯಾಥರ್ಿಗಳು ಪರದಾಡುವಂತಾಗಿದೆ.   ಊರಿಗೆ ಸಂಪರ್ಕ ಕಲ್ಪಿಸಲು ಎರಡು ರಸ್ತೆಗಳು ಇದ್ದೂ ಇರಡೂ ರಸ್ತೆಗಳೂ ಡಾಂಬರ್ ಕಂಡಿಲ್ಲ. ಮಣ್ಣಿನ ರಸ್ತೆಗಳ ತುಂಬ ಗುಂಡಿಗಳು ಇದ್ದು ಸ್ವಲ್ಪ ಮಳೆ ಬಂದರೂ ಕೆಸರುಗದ್ದೆಯಂತಾಗುತ್ತವೆ. ಸಂತೆ ಹಾಗೂ ಪರ ಊರುಗಳಿಗೆ ಹೋಗುವ ಜನ ಅವಳಗೆರೆವರೆಗೆ ಹದಗೆಟ್ಟ ರಸ್ತೆಯಲ್ಲಿ ಸಾಗಿ ಮುಖ್ಯ ರಸ್ತೆಗೆ ತಲುಪಬೇಕು ಅಥವಾ ಪಾಪನಕೋಣದ ವರೆಗೆ ಸಾಗಿ ಭೈಲಪ್ಪನಮಠ-ಶಿಶುವಾಳ ರಸ್ತೆಗೆ ಬಂದು ವಾಹನಗಳನ್ನು ಇಡಿಯಬೇಕು, ಎರಡೂ ರಸ್ತೆಗಳು ಹದಗೆಟ್ಟಿರುವುದರಿಂದ ಸಂಚಾರ ದುಸ್ತರವಾಗಿದೆ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಾರೆ.
  ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಕೋಟ್ಯಾಂತರ ರೂಪಾಯಿಯನ್ನು ರಸ್ತೆಗಳ ಅಭೀವೃದ್ಧಿಗೆ ವ್ಯಯ ಮಾಡುತ್ತಿವೆ. ಆದರೂ ಈ ಹದಗೆಟ್ಟ ರಸ್ತೆಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.