Thursday, January 28, 2016


ಹಂದನಕೆರೆ ಜಿಲ್ಲಾ ಪಂಚಾಯಿತಿಯಲ್ಲಿ ಗೆಲುವು ಸಾಧಿಸುತ್ತೇನೆ : ರಾಮಚಂದ್ರಯ್ಯ
ಚಿಕ್ಕನಾಯಕನಹಳ್ಳಿ : ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಎದುರಾಳಿಗಳೇ ಯಾರೂ ಇಲ್ಲ, ಜನಬೆಂಬಲ ಪಡೆದು ನಾನೇ ವಿಜಯ ಪತಾಕೆ ಹಾರಿಸುತ್ತೇನೆ ಎಂದು ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜೆಡಿಎಸ್ ಅಭ್ಯಥರ್ಿ ರಾಮಚಂದ್ರಯ್ಯ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಹೆಂಡತಿ ಜಾನಮ್ಮ ತಾ.ಪಂ.ಸದಸ್ಯರಾಗಿ, ಜಿ.ಪಂ.ಉಪಾಧ್ಯಕ್ಷರಾದ ಸಂದರ್ಭದಲ್ಲಿ ಹಂದನಕೆರೆ ಕ್ಷೇತ್ರದಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರು, ಶಿಕ್ಷಣ, ಅಂಗನವಾಡಿ ಕಟ್ಟಡಗಳು, ಸುವರ್ಣಗ್ರಾಮಯೋಜನೆ, ಸ್ವಚ್ಛ ಗ್ರಾಮಯೋಜನೆ, ಕಾಂಕ್ರಿಟ್ ರಸ್ತೆ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಇನ್ನೂ ಹಂದನಕೆರೆ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಾಗಿದೆ ಆದ್ದರಿಂದ ನನಗೆ ಕ್ಷೇತ್ರದ ಮತದಾರರ ಬಗ್ಗೆ ವಿಶ್ವಾಸವಿದ್ದು ಚುನಾವಣೆಯಲ್ಲಿ ನನ್ನನ್ನೇ ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದ ಅವರು ಕ್ಷೇತ್ರದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬುರವರ ವರ್ಚಸ್ಸು ಹಾಗೂ  ಅವರ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದ್ದು ಈ ಬಾರಿಯೂ ಜೆಡಿಎಸ್ ಪಕ್ಷ ಗೆಲುವು ಸಾಧಿಸಲಿದೆ ಎಂದರು.
ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕ್ಷೇತ್ರಗಳ ಜೆ.ಡಿ.ಎಸ್. ಅಬ್ಯಾಥರ್ಿಗಳು ಒಟ್ಟಿಗೆ ನಾಮಪತ್ರ ಸಲ್ಲಿಸಿದರು,  ಮತಿಘಟ್ಟ.ತಾ.ಪಂ. ಕ್ಷೇತ್ರಕ್ಕೆ ಗಂಗಮ್ಮ, ಬರಗೂರು.ತಾ.ಪಂ. ಕ್ಷೇತ್ರಕ್ಕೆ ಚೇತನಗಂಗಾಧರ್, ಹಂದನಕೆರೆ.ತಾ.ಪಂ. ಕ್ಷೇತ್ರಕ್ಕೆ ಚಂದ್ರಕಲಾ, ದೊಡ್ಡೆಣ್ಣೆಗೆರೆ. ತಾ.ಪಂ. ಕ್ಷೇತ್ರಕ್ಕೆ ತಮ್ಮಯ್ಯ ಎಂಬುವವರು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಹಂದನಕೆರೆ ಕ್ಷೇತ್ರದಿಂದ ನೂರಾರು ಜೆಡಿಎಸ್ ಬೆಂಬಲಿಗರು ತಮ್ಮ ಮುಖಂಡರುಗಳೊಂದಿಗೆ ಆಗಮಿಸಿ, ಜೆಡಿಎಸ್ ಪಕ್ಷದ ಪರವಾಗಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಉಪಾಧ್ಯಕ್ಷೆ ಜಾನಮ್ಮ, ಮಾಜಿ ತಾ.ಪಂ.ಸದಸ್ಯೆ ಹೇಮಾವತಿ, ಜೆಡಿಎಸ್ ಮುಖಂಡ ಸಿ.ಎಸ್.ನಟರಾಜು, ಮತಿಘಟ್ಟ ಗ್ರಾಮ.ಪಂ.ಮಾಜಿ ಅಧ್ಯಕ್ಷ ಸಿದ್ದರಾಮಣ್ಣ , ದಾಸಿಹಳ್ಳಿ ಶಿವಣ್ಣ, ನಾಗರಾಜು ಸೇರಿಂತೆ ನೂರಾರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಇಬ್ಬರು ಅಭ್ಯಥರ್ಿಗಳು, ಆರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಆರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ,ಜ.28 : ತಾಲ್ಲೂಕಿನ ಎರಡು ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಇಬ್ಬರು ಅಭ್ಯಥರ್ಿಗಳು, ಆರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಆರು ಅಭ್ಯಥರ್ಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ನಿಂದ ಹಂದನಕೆರೆ ಕ್ಷೇತ್ರ ರಾಮಚಂದ್ರಯ್ಯ ಹಾಗೂ ಶೆಟ್ಟಿಕೆರೆ ಜಿ.ಪಂ.ಕ್ಷೇತ್ರಕ್ಕೆ ಪಕ್ಷೇತರ ಅಭ್ಯಥರ್ಿಯಾಗಿ ಲಿಂಗಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ತಾಲ್ಲೂಕಿನ ಹಂದನಕೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಾಲ್ಕು ಕ್ಷೇತ್ರಗಳಾದ ಮತಿಘಟ್ಟ.ತಾ.ಪಂ. ಕ್ಷೇತ್ರಕ್ಕೆ ಗಂಗಮ್ಮ, ಬರಗೂರು.ತಾ.ಪಂ. ಕ್ಷೇತ್ರಕ್ಕೆ ಚೇತನಗಂಗಾಧರ್, ಹಂದನಕೆರೆ.ತಾ.ಪಂ. ಕ್ಷೇತ್ರಕ್ಕೆ ಚಂದ್ರಕಲಾ, ದೊಡ್ಡೆಣ್ಣೆಗೆರೆ. ತಾ.ಪಂ. ಕ್ಷೇತ್ರಕ್ಕೆ ತಮ್ಮಯ್ಯ ಎಂಬುವವರು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದರು ಹಾಗೂ ಇಬ್ಬರು ಪಕ್ಷೇತ್ರ ಅಭ್ಯಥರ್ಿಗಳಾಗಿ ಕುಪ್ಪೂರು ತಾ.ಪಂ.ಕ್ಷೇತ್ರಕ್ಕೆ ಶಿವಶಂಕರಯ್ಯ ಹಾಗೂ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.