Tuesday, July 19, 2011




ಪಟ್ಟಣದ ಕಸವಿಲೇವಾರಿ ಕಾರ್ಯಕ್ಕೆ ಸ್ತ್ರೀಶಕ್ತಿ ಸಂಘಗಳು ಆಸಕ್ತಿ
ಚಿಕ್ಕನಾಯಕನಹಳ್ಳಿ,ಜು.19: ಪಟ್ಟಣದ ಕಸ ವಿಲೇವಾರಿ ಮಾಡಲು ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ಅವಕಾಶ ಕಲ್ಪಿಸುಲಾಗುವುದು, ಈ ಸಂಬಂಧ ಈಗಾಗಲೇ ಕೆಲವು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿವೆ ಎಂದು ಪುರಸಭೆಯ ಪರಿಸರ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ 9ನೇ ವಾಡರ್ಿನಲ್ಲಿ ಪುರಸಭೆ ಹಾಗೂ ಸೃಜನಾ ಮಹಿಳಾ ಸಂಘಟನೆ ಸಂಯುಕ್ತವಾಗಿ ಏರ್ಪಡಿಸಿದ್ದ ಮಹಿಳೆಯರಿಗಾಗಿ ಪರಿಸರ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದ ಪ್ರತಿ ಮನೆಯಲ್ಲಿನ ಘನತ್ಯಾಜ್ಯ ವಿಲೇವಾರಿಯನ್ನು ಸುಲಭಗೊಳಿಸಲು ಕಸವನ್ನು, ಕರಗದ ಕಸ ಮತ್ತು ಕರಗುವ ಕಸ ಎಂದು ವಿಂಗಡಿಸುವಂತೆ ಮಹಿಳೆಯರಿಗೆ ತಿಳುವಳಿಕೆ ಮೂಡಿಸುವುದು ಇಂತಹ ಜಾಗೃತಿ ಸಭೆಯ ಉದ್ದೇಶ ಎಂದರು. ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ಹಾಗೂ ತಳ್ಳುವಗಾಡಿಯನ್ನು ಬಳಸಲಾಗುವುದು, ಬೀದಿ ಕಸವನ್ನು ಎತ್ತಿಹಾಕಲು ತಳ್ಳುವಗಾಡಿಯನ್ನು ಈಗಾಗಲೇ ಬಳಸಲಾಗುತ್ತಿದ್ದು, ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ವಾಹನವನ್ನು ಬಳಸಲಾಗುವುದು ಎಂದರು.
ಪುರಸಭಾ ಸದಸ್ಯೆ ಸಿ.ಎಂ.ರೇಣುಕ ಗುರುಮೂತರ್ಿ ಮಾತನಾಡಿ, ಕಸ ವಿಲೇವಾರಿ ಜವಬ್ದಾರಿಯನ್ನು ತೆಗೆದುಕೊಳ್ಳಲು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿರುವುದು ಸ್ತ್ರೀಯರು ಮನೆಯ ಸ್ವಚ್ಚತೆಗಷ್ಟೇ ಸೀಮಿತವಲ್ಲ, ಊರಿನ ಸ್ವಚ್ಚತೆಗೂ ಸೈ ಎನ್ನಿಸಿಕೊಳ್ಳುವ ಕಾಲ ದೂರವಿಲ್ಲವೆಂದರು.
ಪರಿಶಿಷ್ಟ ಜಾತಿಯವರಿಗೆ ಸಕರ್ಾರ ಅಡಿಗೆ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗಿದ್ದು ಎಲ್ಲಾ ಪರಿಶಿಷ್ಟರು ತಮ್ಮ ಹೆಸರುಗಳನ್ನು ನೊಂದಾಯಿಸಲು ಪುರಸಭೆಯಲ್ಲಿ ಸೂಕ್ತ ಮಾಹಿತಿ ಪಡೆಯುವಂತೆ ಮಹಿಳೆಯರಿಗೆ ತಿಳಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರುಗಳಾದ ಶುಭ ಬಸವರಾಜು, ಸೃಜನಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಮ್ಮ, ಕಾರ್ಯದಶರ್ಿ ಎನ್.ಇಂದಿರಮ್ಮ ಸೇರಿದಂತೆ ಸ್ಥಳೀಯ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
'ಅಲೆಮಾರಿ ಬುಡಕಟ್ಟು ಮಹಾಸಭಾ'ದ ಸಭೆ
ಚಿಕ್ಕನಾಯಕನಹಳ್ಳಿ,ಜು.19 : ತುಮಕೂರು ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಅಲೆಮಾರಿ ಬುಡಕಟ್ಟು ಮಹಾಸಭಾ ಅಡಿಯಲ್ಲಿ ಸಂಘಟನೆಗಳ್ಳಲು ಇದೇ 23ರ ಶನಿವಾರ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ.
ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳಿಗೆ ಇರುವ ಅಡ್ಡಿ ಆತಂಕಗಳನ್ನು ಹೋಗಲಾಡಿಸಲು ಸಂಘಟನೆ ಆದ್ಯತೆ ನೀಡಿದ್ದು, ರಾಜ್ಯಮಟ್ಟದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು ಈ ಸಂಘಟನೆ ಅಡಿಯಲ್ಲಿ ನಮ್ಮ ಜಿಲ್ಲೆಯ ಜನರು ನೊಂದಾಯಿಸಿಕೊಳ್ಳಲು ತೀಮರ್ಾನಿಸಲಾಗಿದೆ, ಜಿಲ್ಲೆಯಲ್ಲಿ ಎಲ್ಲಾ ಅಲೆಮಾರಿ ಸಮುದಾಯಗಳ ಪೂರ್ವಭಾವಿ ಸಭೆ ನಡೆಸುತ್ತಿದ್ದು ಸಮುದಾಯದ ಪ್ರತಿನಿಧಿಗಳು ಸಭೆಗೆ ಹಾಜರಾಗಲು ಕೋರಿದ್ದಾರೆ ಹೆಚ್ಚಿನ ವಿವರಗಳಿಗಾಗಿ ಶಾಂತರಾಜ್-8453474230, ರಾಜಪ್ಪ-9901084703 ನಂಬರ್ಗೆ ಸಂಪಕರ್ಿಸಲು ಕೋರಿದ್ದಾರೆ.
ವಿವಿಧ ವರ್ಗದ ಜನರಿಗೆ ಡಿ.ಸಿ.ಸಿ.ಬ್ಯಾಂಕ್ ಸಾಲದ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜು.19 : ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2010-11ನೇ ಸಾಲಿನ ಸರ್ವಸದಸ್ಯರ ವಾಷರ್ಿಕ ಮಹಾಸಭೆಯ ಸಮಾರಂಭವನ್ನು ಇದೇ 22ರ ಶುಕ್ರವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಜಯಚಾಮರಾಜಪುರದ ಸಹಕಾರ ಸಂಘದ ಕಟ್ಟಡದಲ್ಲಿ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿದ್ದು ಜಿಲ್ಲಾ ಸಹಕಾರ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಲ ವಿತರಣೆ ಮಾಡಲಿದ್ದು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.